ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು 3 ಸಾವನ್ನಪ್ಪಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನೀರಿನ ಮಾದರಿಯನ್ನು ಸಂಗ್ರಹಿಸಿ, ಲ್ಯಾಬ್ ಗೆ ಕಳುಹಿಸಲು ಸೂಚಿಸಲಾಗಿದೆ. ಅಧಿಕಾರಿಗಳ ಲೋಪ ದೋಷದ ಬಗ್ಗೆಯೂ ತನಿಖೆಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಮಿತ್ರ ರೊಂದಿಗೆ ಈ ವಿಷಯವಾಗಿ ಮಾತನಾಡಿದ ಅವರು, ರಾಯಚೂರು ಪ್ರಕರಣದ ಬಗ್ಗೆ ಸರ್ಕಾರ ಗಂಭೀರವಾಗಿ ಚರ್ಚಿಸಿದೆ. ಆ ಪ್ರಕರಣವನ್ನು ಗಂಭೀರವಾಗಿಯೂ ಪರಿಗಣಿಸಲಾಗಿದೆ. ಕಲುಷಿತ ನೀರು ಕುಡಿದು 3 ಸಾವನ್ನಪ್ಪಿದ್ದು ಹೇಗೆ ಎನ್ನುವ ಬಗ್ಗೆಯೂ ತನಿಖೆಯ ನಡೆಸಲಾಗುತ್ತದೆ. ಈಗಾಗಲೇ, ನೀರಿನ ಮಾದರಿ ಸಂಗ್ರಹಿಸಲು ಸೂಚಿಸಲಾಗಿದೆ. ಪರೀಕ್ಷೆಗೆ ಒಳಪಡಿಸಿ, ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ರಾಯಚೂರಿನಲ್ಲಿ ನಗರಸಭೆಯ ನೀರು ಕುಡಿದು 80ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದರು. ಅಲ್ಲದೇ 3 ತೀವ್ರವಾಗಿ ಅಸ್ಪಸ್ಥಗೊಂಡು ಚಿಕಿತ್ಸೆ ಪಡೆಯದೇ ಸಾವನ್ನಪ್ಪಿದ್ದರು. ಕಲುಷಿತ ನೀರು ಸೇವನೆಯಿಂದ ಕೆಲವರ ಕಿಡ್ನಿಗೂ ಹಾನಿ ಉಂಟಾಗಿತ್ತು.