ಉಕ್ರೇನ್ ಹಾಗೂ ರಷ್ಯಾ ಯುದ್ಧ ಆರಂಭಗೊಂಡು ಅನೇಕ ದಿನಗಳೇ ಕಳೆದಿವೆ. ಯುದ್ಧ ಕೈಗೊಂಡಿರುವ ರಷ್ಯಾ ಉಕ್ರೇನ್ನಲ್ಲಿ ಶತ್ರುಗಳ ಡ್ರೋನ್‌ಗಳನ್ನು ಸೆಡೆಬಡಿಯಲು ಬಲಿಷ್ಠ ಲೇಸರ್ ತಂತ್ರಜ್ಞಾನಗಳನ್ನು ಬಳಸುವುದಾಗಿ ತಿಳಿಸಿತ್ತು. ಆದ್ದರಿಂದ, ಪಾಶ್ಚಿಮಾತ್ಯ ಶಸ್ತ್ರಾಸ್ತ್ರಗಳನ್ನು ಎದುರಿಸಲು ಮಾಸ್ಕೋ ಕೆಲವು ರಹಸ್ಯ ಶಸ್ತ್ರಾಸ್ತ್ರಗಳನ್ನು ನಿಯೋಜಿಸುತ್ತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 2018 ರಲ್ಲಿ ಹೊಸ ಖಂಡಾಂತರ ಕ್ಷಿಪಣಿ, ನೀರೊಳಗಿನ ಪರಮಾಣು ಡ್ರೋನ್‌ಗಳು, ಸೂಪರ್‌ಸಾನಿಕ್ ಶಸ್ತ್ರಾಸ್ತ್ರ ಮತ್ತು ಹೊಸ ಲೇಸರ್ ಶಸ್ತ್ರಾಸ್ತ್ರ ಸೇರಿದಂತೆ ಹೊಸ ಹೊಸ ಶಸ್ತ್ರಾಸ್ತ್ರಗಳ ಶ್ರೇಣಿಯನ್ನು ಇತ್ತೀಚಿಗೆ ಅನಾವರಣಗೊಳಿಸಿದ್ದಾರೆ.
ಉಕ್ರೇನಿಯನ್ ಮಾನವರಹಿತ ವೈಮಾನಿಕ ವಾಹನಗಳಿಗಿಂತ ರಷ್ಯಾದ ಟ್ಯಾಂಕ್‌ಗಳು ಹೆಚ್ಚು ಪರಿಣಾಮ ಬೀರಿವೆ. ಉಕ್ರೇನ್‌ನ ಸ್ವದೇಶಿ ಶಸ್ತ್ರಸಜ್ಜಿತ ಯುಎವಿಗಳು ಮತ್ತು ಸ್ವಿಚ್‌ಬ್ಲೇಡ್‌ನಂತಹ ಕಾಮಿಕೇಜ್-ಶೈಲಿಯ ಡ್ರೋನ್‌ಗಳು ರಷ್ಯಾದ ಬೆಂಗಾವಲು ಹಾಗೂ ಸಲಕರಣೆಗಳ ಮೇಲೆ ಹಲವಾರು ದಾಳಿಗಳನ್ನು ನಡೆಸಿವೆ.