Friday, July 10, 2026
Friday, July 10, 2026

ಸರ್ಕಾರಿ ಶಾಲೆಗೆ ಡಿಮ್ಯಾಂಡಪೋ ಡಿಮ್ಯಾಂಡ್

Date:

ಶಾಲೆಯಲ್ಲಿ ಮಕ್ಕಳ ಸಂಖ್ಯೆ ಭರ್ತಿಯಾಗಿದೆ. ದಾಖಲಾತಿ ಪ್ರಕ್ರಿಯೆಯನ್ನೇ ನಿಲ್ಲಿಸಿದ್ದಾರೆ. ಆದರೂ, ‘ಇದೇ ಶಾಲೆಗೆ ನಮ್ಮ ಮಕ್ಕಳು ಸೇರಬೇಕು’ ಎನ್ನುವುದು ಪಾಲಕರ ಒತ್ತಾಸೆ.

ಕಳೆದ ಮೂರು ವರ್ಷಗಳಿಂದ ಈ ಶಾಲೆಯಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ದೊರಕಿಸಲು ಪೋಷಕರು ಹರಸಾಹಸ ಪಡಬೇಕಿದೆ.
ಗುಣಮಟ್ಟದ ಶಿಕ್ಷಣ ಇನ್ನಿತರೆ ಸೌಲಭ್ಯಗಳ ಕಾರಣ ನಿರೀಕ್ಷೆ ಮೀರಿ ಮಕ್ಕಳು ದಾಖಲಾತಿ ಪಡೆಯುತ್ತಿದ್ದಾರೆ.
ಈ ಪರಿಯಾಗಿ ಬೇಡಿಕೆ ಸೃಷ್ಟಿಯಾಗಿರುವುದು ನಗರದ ಸರ್ಕಾರಿ ಶಾಲೆಗೆ. ನಗರದ ದುರ್ಗಿಗುಡಿಯ ಸರ್ಕಾರಿ ಮಾದರಿ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಈಗಾಗಲೇ ಮಕ್ಕಳು ಹೆಚ್ಚಾಗಿದ್ದಾರೆ. ಇನ್ನಷ್ಟು ಹೆಚ್ಚಾದರೆ ಬೋಧನೆ, ಮಕ್ಕಳ ಬಗ್ಗೆ ಕಾಳಜಿ ವಹಿಸುವುದು ಕಷ್ಟವಾಗಲಿದೆ. ಪ್ರಮುಖವಾಗಿ ಮಕ್ಕಳಿಗೆ ಆಸನದ ಕೊರತೆ ಎದುರಾಗಲಿದೆ ಎನ್ನುತ್ತಾರೆ ಇಲ್ಲಿನ ಶಿಕ್ಷಕರು. ಆದರೆ, ಪಾಲಕರು ತಮ್ಮ ಮಕ್ಕಳು ಇದೇ ಶಾಲೆಗೆ ಸೇರಿಸಲು ಒತ್ತಡ ಹೇರುತ್ತಿದ್ದಾರೆ.

ಶಾಲೆಯಲ್ಲಿ 900 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಅವಕಾಶವಿದೆ. ಈಗಾಗಲೇ ಈ ಶಾಲೆಯಲ್ಲಿ 1,200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇನ್ನೂ ದಾಖಲಾತಿಗೆ ಅರ್ಜಿಗಳು ಬರುತ್ತಲೇ ಇವೆ.

ಸರ್ಕಾರಿ ಶಾಲೆ ಎಂದು ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಇಲ್ಲಿನ ದುರ್ಗಿಗುಡಿ ಶಾಲೆ ಈಗ ಖಾಸಗಿ ಶಾಲೆಗೂ ಸಡ್ಡುಹೊಡೆದು ಸ್ಮಾರ್ಟ್ ಆಗಿದೆ. ‘ಸ್ಮಾರ್ಟ್ ಸಿಟಿ’ ಯೋಜನೆಯಡಿ ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಅತ್ಯಾಧುನಿಕ ಸ್ಮಾರ್ಟ್ ಕ್ಲಾಸ್‍ಗಳನ್ನು ಪ್ರಾರಂಭಿಸಲಾಗುತ್ತಿದೆ. ಅದರಂತೆ ಶಿವಮೊಗ್ಗ ಜಿಲ್ಲೆಯ ದುರ್ಗಿಗುಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಈಗಾಗಲೇ ಮಾದರಿಯಾಗಿ ಸ್ಮಾರ್ಟ್ ತರಗತಿಗಳನ್ನು ಪ್ರಾರಂಭಿಸಲಾಗಿದೆ.

ಸರ್ಕಾರದ ಪಠ್ಯಕ್ರಮವನ್ನು ಡಿಜಿಟಲೀಕರಣಗೊಳಿಸಿ ಶಾಲೆಗೆ ನೀಡಲಾಗಿದೆ. ಇವುಗಳ ಜತೆಗೆ ಯೂಟ್ಯೂಬ್ ಹಾಗೂ ಗೂಗಲ್ ಮೂಲಕ ಪಠ್ಯಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ವಿದ್ಯಾರ್ಥಿಗಳಿಗೆ ತೋರಿಸಲಾಗುತ್ತಿದೆ. ಅವುಗಳನ್ನು ಕೆ-ಯಾನ್ ಪ್ರೊಜೆಕ್ಟರ್ ಮೂಲಕ ಸ್ಮಾರ್ಟ್ ಬೋರ್ಡ್ ಮೇಲೆ ಪ್ರದರ್ಶಿಸಲಾಗುತ್ತಿದೆ. ಹೀಗೆ ಪ್ರದರ್ಶನಗೊಂಡ ಪಠ್ಯಗಳ ಕುರಿತು ಆವಶ್ಯಕತೆ ಇದ್ದಾಗ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿವರಿಸುತ್ತಿದ್ದಾರೆ.

ಸ್ಮಾರ್ಟ್ ಬೋರ್ಡ್ ಮೇಲೆ ಬರೆಯಲು, ಪಠ್ಯವನ್ನು ಮೇಲೆ ಕೆಳಗೆ ಚಲಿಸುವಂತೆ ಮಾಡಲು ಸ್ಟೈಲಸ್ ಎಂಬ ಪೆನ್ ಬಳಸಲಾಗುತ್ತದೆ. ಸ್ಟೈಲಸ್ ಸಹಾಯದಿಂದ ಕಪ್ಪು ಹಲಗೆಯ ಮೇಲೆ ಬರೆಯುವಂತೆ ಸ್ಮಾರ್ಟ್ ಬೋರ್ಡ್ ಮೇಲೆಯೂ ಬರೆದು ವಿವರಿಸಲಾಗುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Club of Shivamogga ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ

Rotary Club of Shivamogga ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ...

Friends Center Organization ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ಫ್ರೆಂಡ್ಸ್ ಸೆಂಟರ್ ಸಂಸ್ಥೆ ಪ್ರಸಿದ್ಧಿ ಪಡೆದಿದೆ- ಎಸ್.ಎನ್.ಚನ್ನಬಸಪ್ಪ

Friends Center Organization ಸಮಾಜಮುಖಿ, ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಿ ಹಲವಾರು ಕಾರ್ಯಕ್ರಗಳನ್ನು...

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....