Monday, October 7, 2024
Monday, October 7, 2024

ಚಿತ್ತವಿಕಲತೆ ಕಾಯಿಲೆ ಪ್ರಾರಂಭಿಕ ಹಂತದಲ್ಲೇ ಪತ್ತೆಮಾಡಿ- ಡಾ.ಮುರಳೀಧರ್ ಪಿ. ಡಿ.

Date:

ಪ್ರತಿವರ್ಷ ಮೇ 24 ರಂದು ವಿಶ್ವ ಸ್ಕಿಜೋಫ್ರೀನಿಯಾ (ಚಿತ್ತ ವಿಕಲತೆ) ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವರ್ಷ ಭರವಸೆಯನ್ನು ಬೆಸೆಯೋಣ ಎಂಬ ಘೋಷವಾಕ್ಯದೊಂದಿಗೆ ಸಮುದಾಯದಲ್ಲಿ ಮತ್ತು ಶಾಲಾ / ಕಾಲೇಜಿನ ವಿದ್ಯಾರ್ಥಿಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವತಿಯಿಂದ ದಾವಣಗೆರೆ ಜಿಲ್ಲೆಯಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ.

ಸ್ಕಿಜೋಫ್ರೇನಿಯಾವೊಂದು ತೀವ್ರತರವಾದ ಮಾನಸಿಕ ಖಾಯಿಲೆಯಾಗಿದೆ.
ಸ್ಕಿಜೋಫ್ರೇನಿಯಾ ಎಂದರೆ ಮನಸ್ಸಿನ ಕ್ರಿಯೆಗಳಲ್ಲಿ ಏರು ಪೇರು ಮಾತು ನಡತೆಯಲ್ಲಿ ವಿಚಿತ್ರ ಅಸಹಜ ರೂಪಗಳಾಗಿವೆ ಎಂದು ಹೇಳಬಹುದು.

ವಿಶ್ವ ಆರೋಗ್ಯ ಸಂಸ್ಥೆ ಸಮೀಕ್ಷೆ ಪ್ರಕಾರ ವಿಶ್ವಾದಾದ್ಯಂತ ಈ ಖಾಯಿಲೆಯೂ 24 ಮಿಲಿಯನ್ ಜನರನ್ನು ಬಾದಿಸುತ್ತಿದೆ. ಈ ಖಾಯಿಲೆಯೂ ಪ್ರತಿ 300 ಜನರಲ್ಲಿ ಒಬ್ಬರಿಗೆ ಬರಬಹುದಾಗಿದೆ. ಹಾಗೂ ಸಾಮಾನ್ಯವಾಗಿ 15 ರಿಂದ 30 ವರ್ಷದ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುತ್ತದೆ. ಈ ಖಾಯಿಲೆಯು ಸ್ತ್ರೀ ಮತ್ತು ಪುರುಷರಲ್ಲಿ ಸಮಾನವಾಗಿ ಕಾಣಿಸಿಕೊಳ್ಳುತ್ತದೆ.
ಸ್ಕೀಜೊಫ್ರೇನಿಯಾ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು ಅರ್ಥವಿಲ್ಲದ ಮತ್ತು ಅಸಂಭದ್ದ ಮಾತುಗಳು, ಸೂಕ್ತವಲ್ಲದ ಭಾವನೆಗಳನ್ನು ವ್ಯಕ್ತಪಡಿಸುವುದು, ಕಾರಣವಿಲ್ಲದೆ ಅಳುವುದು, ನಗುವುದು ಮತ್ತು ಕೋಪ ಮಾಡಿಕೊಳ್ಳುವುದು, ಭಾವನೆಗಳೇ ಇಲ್ಲದ ಹಾಗೆ ಇರುವುದು, ತನ್ನ ಲೋಕದಲ್ಲಿ ಒಂಟಿಯಾಗಿರುವುದು, ಇಲ್ಲದ ವಾಸನೆ, ಇದೆ ಎನ್ನುವುದು, ಸ್ಪರ್ಶಾನುಭವ ಸ್ವಚ್ಚತೆಯ ಬಗ್ಗೆ ನಿರ್ಲಕ್ಷ್ಯ ರೋಗಿಗೆ ಹಸಿವು ಮತ್ತು ಬಾಯಾರಿಕೆ ಬಗ್ಗೆ ನಿರ್ಲಕ್ಷ್ಯ ಕೆಲಸ ಕರ್ತವ್ಯಗಳನ್ನು ಮಾಡದೇ ಇರುವುದಾಗಿದೆ.

ಈ ಮೇಲ್ಕಂಡ ಲಕ್ಷಣಗಳನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಬಹುದಾಗಿದೆ.
ಇದರಲ್ಲಿ ಭಯಪಡುವಂತಹದ್ದೇನಿಲ್ಲ. ಮಾನಸಿಕ ರೋಗಿಗಳು ಕೂಡ ನಮ್ಮ ನಿಮ್ಮಂತೆಯೇ ಮನುಷ್ಯರು ನಾವು ನೀವು ಸೇರಿ ಈ ತರನಾದ ರೋಗಿಗಳನ್ನು ಗುರುತಿಸಿ ಕಂಡುಬಂದಲ್ಲಿ ನಿಮ್ಮ ಹತ್ತಿರದ ಪ್ರಾಥಮಿಕ ಸಮುದಾಯ, ತಾಲ್ಲೂಕು ಆರೋಗ್ಯ ಕೇಂದ್ರ, ಪೋಲಿಸ್ ಇಲಾಖೆಗೆ ಅಥವಾ ಸರ್ಕಾರೇತರ ಸಂಸ್ಥೆಯವರಿಗೆ ಮಾಹಿತಿಯನ್ನು ನೀಡಿ ಅವರಿಗೆ ಮನೋವೈದ್ಯರ ತಂಡದವರಿಂದ ಚಿಕಿತ್ಸೆ ಕೊಡಿಸುವುದು, ಜೊತೆಗೆ ರೋಗಿಗಳ ಮೇಲೆ ಹಲ್ಲೆ, ದೌರ್ಜನ್ಯ, ಅಪಹಾಸ್ಯ ಮಾಡುವುದು, ಹುಚ್ಚ ಎಂದು ಕರೆಯುವುದು, ಮತ್ತು ರೋಗಿಯನ್ನು ಕೋಣೆಯಲ್ಲಿ ಬಂಧಿಸುವುದು ಶಿಕ್ಷಾರ್ಹ ಅಪರಾದ, ಈ ರೀತಿಯಾಗಿ ಮಾಡುತ್ತಿರುವವರ ವಿರುದ್ಧ ಮಾನಸಿಕ ಆರೋಗ್ಯ ಆರೈಕೆ ಕಾಯ್ದೆ 2017ರಡಿಯಲ್ಲಿ ದೂರನ್ನು ದಾಖಲಿಸಬಹುದಾಗಿದೆ.

ಇವುಗಳನ್ನು ತಡೆಯುವುದು, ರೋಗಿಯನ್ನು ಆರೈಕೆ ಮಾಡುವವರಿಲ್ಲದಿದ್ದರೆ ಅವರನ್ನು ಪುರ್ನವಸತಿ ಕೇಂದ್ರಗಳಿಗೆ ಸೇರಿಸುವುದು, ಅವರಿಗೆ ಸಾಮಾಜಿಕ ಬೆಂಬಲ ನೀಡುವುದಾಗಿದೆ. ಈ ರೀತಿಯಾಗಿ ನಾವು ನೀವು ಸ್ಕ್ಕಿಜೋಫ್ರೇನಿಯಾ ರೋಗಿಗಳಿಗೆ ಸಹಾಯ ಮಾಡಬಹುದಾಗಿದೆ.
ಒಟ್ಟಾರೆ ಪ್ರಸ್ತುತವಾಗಿ ನಮ್ಮ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ದಾವಣಗೆರೆ ಜಿಲ್ಲೆಯಲ್ಲಿ 3000 ಸಾವಿರಕ್ಕೂ ಹೆಚ್ಚು ಜನ ಮನೋರೋಗಿಗಳಿದ್ದು. ಅದರಲ್ಲಿ 750 ಕ್ಕೂ ಹೆಚ್ಚು ಸ್ಕೀಜೋಫ್ರೇನಿಯಾ ಖಾಯಿಲೆಗೆ ಒಳಗಾದ ಮನೊರೋಗಿಗಳೂ, ನಮ್ಮ ಕಾರ್ಯಕ್ರಮದಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಮ್ಮ ಕಾರ್ಯಕ್ರಮದಲ್ಲಿ ಮನೋವೈದ್ಯರ ತಂಡವಿದ್ದು. ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ಸಮುದಾಯದಲ್ಲಿ ಜನಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸಿ ತಾಲ್ಲೂಕುವಾರು (ಮನೋಚೈತನ್ಯ) ದಿನದಂದು ಮಾನಸಿಕ ಆರೋಗ್ಯ ಶಿಬಿರವನ್ನು ಏರ್ಪಡಿಸಿ, ಮನೊರೋಗಿಗಳಿಗೆ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆಯನ್ನು ನೀಡುತ್ತಿದ್ದಾರೆ.

ಜೊತೆಗೆ ಜಿಲ್ಲೆಯಲ್ಲಿರುವ ವೈದ್ಯರಿಗೆ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಿಗೆ, ಪೋಲೀಸ್ ಸಿಬ್ಬಂದಿಗಳಿಗೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಶಿಕ್ಷಣ ಇಲಾಖೆ ಸಿಬ್ಬಂದಿ ವರ್ಗದವರಿಗೆ, ಕೃಷಿ ಮತ್ತು ತೋಟಗಾರಿಕೆ ಸಿಬ್ಬಂದಿ ವರ್ಗದವರಿಗೂ, ಧಾರ್ಮಿಕ ಚಿಂತಕರುಗಳಿಗೆ ಸೇರಿದಂತೆ ಇನ್ನೂ ಮುಂತಾದ ಇಲಾಖಾವಾರು ಸಿಬ್ಬಂದಿಗಳಿಗೆ ಮಾನಸಿಕ ಆರೋಗ್ಯದ ಬಗ್ಗೆ, ಒತ್ತಡ ನಿರ್ವಹಣೆ ಬಗ್ಗೆ, ಆತ್ಮಹತ್ಯೆ ತಡೆಗಟ್ಟುವ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಳೆದ 6 ವರ್ಷಗಳಿಂದಲೂ ಕೂಡ ಜಾಗೃತಿ ಮೂಡಿಸಲಾಗುತ್ತಿದೆ.

ನಮ್ಮ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ಸಿಗುವಂತಹ ಸೌಲಭ್ಯಗಳು: ಗುಣಮಟ್ಟದ ಔಷದಿ, ಚಿಕಿತ್ಸೆ, ಆಪ್ತಸಮಾಲೋಚನೆ ಮತ್ತು ಸಲಹೆ, ಮನೋವೈದ್ಯಕೀಯ ಶಿಕ್ಷಣ ಮತ್ತು, ಮನೆಭೇಟಿ ಕಾರ್ಯಕ್ರಮ, ವೃತ್ತಿಪರ ತರಬೇತಿ ಶಿಕ್ಷಣ, ಆರೋಗ್ಯ ಸಹಾಯವಾಣಿ “104” ಈ ರೀತಿಯ ಎಲ್ಲಾ ಸೌಲಭ್ಯಗಳು ಲಭ್ಯವಿದೆ.

ಡಾ.ಮುರಳಿಧರ ಪಿ. ಡಿ.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳು
ದಾವಣಗೆರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Legal Services Authority ಮಹಿಳೆ & ಮಕ್ಕಳ ಕಾನೂನುಗಳ ಸದುಪಯೋಗ ಆಗಬೇಕು- ನ್ಯಾ.ಮಂಜುನಾಥ ನಾಯಕ್

Legal Services Authority ಮಹಿಳೆಯರು, ಮಕ್ಕಳು ಮತ್ತು ಹಿಂದುಳಿದ ವರ್ಗಗಳಿಗೆ ಸರ್ಕಾರ...

JCI Shivamogga ಜೆಸಿಐ ಇಂಡಿಯಾ ವಲಯ- 24 ರ ಅಧ್ಯಕ್ಷರಾಗಿ ಗೌರೀಶ್ ಭಾರ್ಗವ ಆಯ್ಕೆ

JCI Shivamogga ಜೆಸಿಐ ಇಂಡಿಯಾ ವಲಯ -24 ಅಧ್ಯಕ್ಷರಾಗಿ ಶ್ರೀ...

Kittur Rani Chennamma ಕಿತ್ತೂರು ಉತ್ಸವ ಯಶಸ್ವಯಾಗಿ ನೆರವೇರಲಿ- ಎಸ್.ಎನ್.ಚನ್ನಬಸಪ್ಪ

Kittur Rani Chennamma ಈ ದೇಶದ ಸಂರಕ್ಷಣೆಗಾಗಿ ಹೋರಾಡಿದ ವೀರ ವನಿತೆ...