Monday, August 24, 2026
Monday, August 24, 2026

ರಷ್ಯದಿಂದ ಸ್ಥಳಾಂತರಗೊಳ್ಳಲಿರುವಇನ್ಫೋಸಿಸ್

Date:

ಐಟಿ ದಿಗ್ಗಜ ಇನ್ಫೋಸಿಸ್ ತನ್ನ ಸೇವೆಗಳನ್ನು ರಷ್ಯಾದಿಂದ ತನ್ನ ಇತರ ಜಾಗತಿಕ ವಿತರಣಾ ಕೇಂದ್ರಗಳಿಗೆ ವರ್ಗಾಯಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ರಷ್ಯಾದಲ್ಲಿ ಇನ್ಫೋಸಿಸ್ ಅಸ್ತಿತ್ವದ ಬಗ್ಗೆ ಹಾಗೂ ಪತ್ನಿ ಅಕ್ಷತಾ ಮೂರ್ತಿ ಅವರ ಪಾಲು ಇರುವ ಬಗ್ಗೆ ಇನ್ಫೋಸಿಸ್ ಸಹ ಸ್ಥಾಪಕ ನಾರಾಯಣ ಮೂರ್ತಿ ಅಳಿಯ,ಬ್ರಿಟನ್‌ನ ಹಣಕಾಸು ಸಚಿವ ರಿಷಿ ಸುನಕ್ ಅವರಿಗೆ ಸಂದರ್ಶನದಲ್ಲಿ ಪ್ರಶ್ನೆಗಳನ್ನು ಕೇಳಿದ ನಂತರ ಈ ಬೆಳವಣಿಗೆ ಕಂಡು ಬಂದಿದೆ.

ಇನ್ಫೋಸಿಸ್ ರಷ್ಯಾದಿಂದ ಇತರ ಜಾಗತಿಕ ವಿತರಣಾ ಕೇಂದ್ರಗಳಿಗೆ ಸೇವೆಗಳನ್ನು ಬದಲಾಯಿಸುತ್ತಿದೆ ಎಂದು ಮೂಲಗಳು ತಿಳಿಸಿವೆ ಆದರೆ ಯಾವುದೇ ವಿವರಗಳನ್ನು ನೀಡಿಲ್ಲ. ಇನ್ಫೋಸಿಸ್ ರಷ್ಯಾದಲ್ಲಿ 100 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿದೆ ಮತ್ತು ಅಲ್ಲಿನ ಸ್ಥಳೀಯ ಸಿಬ್ಬಂದಿಯ ಸ್ಥಿತಿ ಹಾಗೂ ಅವರನ್ನು ಸ್ಥಳಾಂತರಿಸಲಾಗುತ್ತದೆಯೇ ಎಂದು ಕೂಡಾ ಸ್ಪಷ್ಟತೆ ದೊರಕಿಲ್ಲ.

ಇನ್ನು ಮಾಧ್ಯಮಗಳ ಇಮೇಲ್‌ಗಳಿಗೆ, ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಇನ್ಫೋಸಿಸ್ ಹೇಳಿದೆ ಎಂದು ಎನ್‌ಡಿ ಟಿವಿ ಸುದ್ದಿ ಮಾಡಿದೆ

ಉಕ್ರೇನ್‌ ಮೇಲೆ ರಷ್ಯಾವು ದಾಳಿ ನಡೆಸಿದ ನಂತರ ಯುಕೆ ಈ ಹಿಂದೆ ರಷ್ಯಾದ ವ್ಯವಹಾರಗಳು ಮತ್ತು ವ್ಯಕ್ತಿಗಳ ಮೇಲೆ ವ್ಯಾಪಕ ನಿರ್ಬಂಧಗಳನ್ನು ವಿಧಿಸಿದೆ.

ರಷ್ಯಾದ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿರುವುದನ್ನು ಉಲ್ಲೇಖಿಸಿ, ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿಯವರ ಅಳಿಯ ಸುನಕ್‌ ಅವರಿಗೆ ಪ್ರಶ್ನೆಗಳ ಬಾಂಬ್‌ ಹಾಕಲಾಗಿತ್ತು. ರಷ್ಯಾದಲ್ಲಿ ಇನ್ಫೋಸಿಸ್ ಅಸ್ತಿತ್ವದ ಬಗ್ಗೆ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಅವರ ಪಾಲು ಇರುವ ಬಗ್ಗೆ ತೀಕ್ಷ್ಣವಾದ ಪ್ರಶ್ನೆಗಳನ್ನು ಎದುರಿಸಿದರು.

ರಷ್ಯಾದ ಮೇಲೆ ಬ್ರಿಟನ್ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರುತ್ತಿರುವ ಸಂದರ್ಭದಲ್ಲಿ, ರಿಷಿ ಸುನಕ್ ಅವರಿಗೆ ತಮ್ಮ ಮನೆಯಲ್ಲಿ ನಿಯಮಗಳನ್ನು ಅನುಸರಿಸುತ್ತಿಲ್ಲವೇ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯುಕೆ ಹಣಕಾಸು ಸಚಿವ ರಿಷಿ ಸುನಕ್ ಅವರು ಖಾಸಗಿ ಕಂಪನಿಗಳ ಕಾರ್ಯಾಚರಣೆಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಒತ್ತಾಯಿಸಿದರು. ಇದು ಯಾವುದೇ ಖಾಸಗಿ ಕಂಪನಿಯ ವೈಯಕ್ತಿಕ ವಿಷಯವಾಗಿದೆ ಎಂದು ಸ್ಪಷ್ಟಪಡಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K. Shivakumar 500 ಕೆಪಿಎಸ್ ಶಾಲೆಗಳನ್ನ ಸಮಗ್ರ ಉನ್ನತೀಕರಿಸುವ “ಶಿಕ್ಷಣ ಕ್ರಾಂತಿ-2030″ಯೋಜನೆಗೆ ಹೆಜ್ಜೆಯಿಟ್ಟಿದ್ದೇವೆ,- ಡಿ.ಕೆ.ಶಿವಕುಮಾರ್.

D.K. Shivakumar ನಮ್ಮ ಹಳ್ಳಿಯ ಮಣ್ಣಿನ ಪ್ರತಿಭೆಗಳು ವಿಶ್ವದಂಗಳದಲ್ಲಿ ರಾರಾಜಿಸಬೇಕು, ಅವರಿಗೆ ಅತ್ಯುನ್ನತ...

B.Y. Raghavendra “ಸರ್ಕಾರಿ ಶಾಲೆಗೆ ನೀವು ಸಲ್ಲಿಸಿರುವ ಅಪಾರಸೇವೆಗೆ ದೊರೆತ ಅರ್ಹ ಗೌರವ”- ಬಿ.ವೈ.ರಾಘವೇಂದ್ರ.

B.Y. Raghavendra ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿರುವ...

Shivamogga News ಹರಕೆರೆ ರಿಂಗ್ ರಸ್ತೆಯಲ್ಲಿ ದರೋಡೆ ಮಾಡಿದ್ದ ಖದೀಮರು ಈಗ ‘ಅಂದರ್’.

Shivamogga News ಹರಕೆರೆ ರಿಂಗ್‌ರೋಡ್‌ನಲ್ಲಿ ಸಾರ್ವಜನಿಕರನ್ನು ಬೆದರಿಸಿ, ಹಲ್ಲೆ ನಡೆಸಿ ಹಣ...

D. Devaraj Arasu ದೇವರಾಜ ಅರಸು ಅವರಿಗೆ ನಮ್ಮರೈತರು ಚಿರ ಋಣಿಯಾಗಿರಬೇಕು – ಬಿ.ಆರ್.ಜಯಂತ್.

D. Devaraj Arasu  1974ರ ಭೂ ಸುಧಾರಣಾ ಕಾಯ್ದೆಗೆ ಐತಿಹಾಸಿಕ ಮಹತ್ವವಿದ್ದು,...