ಓಮಿಕ್ರಾನ್ ರೂಪಾಂತರಿಯ 4 ತಳಿಗಳ ಬೆನ್ನತ್ತಿರುವ ವಿಶ್ವ ಆರೋಗ್ಯ ಸಂಸ್ಥೆಯು ಲಘುವಾಗಿ ಪರಿಗಣಿಸಬೇಡಿ ಎಂದು ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದೆ.
ಕೊರೋನಾ ವೈರಸ್ ಮತ್ತಷ್ಟು ಮಾರ್ಪಾಡುಗಳನ್ನು ಮಾಡಿಕೊಂಡು ತನ್ನ ದಾಳಿಯನ್ನು ಮುಂದುವರಿಸುತ್ತಲೇ ಇದೆ.
ಯುರೋಪ್, ಅಮೆರಿಕ, ಏಷ್ಯಾ, ಆಫ್ರಿಕಾದಲ್ಲಿ ಇದನ್ನು ಕಾಣಬಹುದು. ಓಮಿಕ್ರಾನ್ ತಳಿಯಾದ ಬಿಎ.2 ಬಹಳ ವೇಗವಾಗಿ ಪ್ರಸರಣ ಹೊಂದಿದೆ. ಇದೆ ಮುಂದುವರೆದು ಶ್ವಾಸಕೋಶ ಸಂಬಂಧಿತ ಗಂಭೀರ ಕಾಯಿಲೆ ಉಂಟುಮಾಡುವಷ್ಟು ಸಾಮರ್ಥ್ಯ ಪಡೆದಲ್ಲಿ ಓಮಿಕ್ರಾನ್ ರೂಪಾಂತರಿಯು ಮಾರಣಾಂತಿಕ ವಾಗಲಿದೆ.
ಸದ್ಯಕ್ಕೆ ಅಂತ 4 ತಳಿಗಳು ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಾತ್ರವೇ ಕಂಡುಬರುತ್ತಿರುವುದು ಸಮಾಧಾನಕರ ಸಂಗತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧಾನೊಮ್ ಘ್ರೆಬ್ರೆಯೆಸುಸ್ ಅವರು ಹೇಳಿದ್ದಾರೆ. ಮುಖ್ಯವಾಗಿ, ಸದ್ಯ ವಿಶ್ವದಾದ್ಯಂತ ನೀಡಲಾಗುತ್ತಿರುವ ಕೊರೋನಾ ನಿರೋಧಕ ಲಸಿಕೆಗಳು ಮುಂದಿನ ಕೆಲ ತಿಂಗಳ ನಂತರ ಹೊಸ ಕೊರೋನಾ ತಳಿಗಳನ್ನು ನಿಗ್ರಹಿಸುವಲ್ಲಿ ವಿಫಲವಾಗಲಿವೆ. ಆದ್ದರಿಂದ ಲಸಿಕೆಗಳ ಉನ್ನತೀಕರಣದ ಅಗತ್ಯವಿದೆ ಎಂದು ಅವರು ಲಸಿಕೆ ತಯಾರಿಕೆ ಕಂಪನಿಗಳಿಗೆ ಕಿವಿಮಾತು ಹೇಳಿದ್ದಾರೆ