ಶಿಖರ್ ಧವನ್, ಶ್ರೇಯಸ್ ಅಯ್ಯರ್, ರವಿಚಂದ್ರನ್ ಅಶ್ವಿನ್ ಮುಂತಾದ ಭಾರತೀಯ ಆಟಗಾರರು ಮತ್ತು ಪ್ಯಾಟ್ ಕಮಿನ್ಸ್, ಡೇವಿಡ್ ವಾರ್ನರ್, ಕಗಿಸೊ ರಬಾಡ ಇನ್ನು ಮುಂತಾದ ವಿದೇಶಿ ಆಟಗಾರರು ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಎರಡು ಕೋಟಿ ರೂಪಾಯಿ ಮೂಲ ಬೆಲೆ ಹೊಂದಿದ್ದಾರೆ. ಇದು ಐಪಿಎಲ್ 15ನೇ ಆವೃತ್ತಿಯ ಹರಾಜಿನ ಗರಿಷ್ಠ ಮೂಲ ಬೆಲೆ.
ಭಾರತದ ಹಿರಿಯ ಆಟಗಾರರಾದ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಇಶಾಂತ್ ಶರ್ಮಾ, ಅಂಜಿಕ್ಯ ರಹಾನೆ ಕೂಡ ಎರಡು ಕೋಟಿ ರೂಪಾಯಿ ಮೂಲಬೆಲೆ ಹೊಂದಿದ್ದಾರೆ.
ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ಹರಾಜು ನಡೆಯಲಿದೆ. ಒಟ್ಟು 590 ಆಟಗಾರರು ಹರಾಜಿಗಿರುವ ಆಟಗಾರರ ಅಂತಿಮ ಪಟ್ಟಿ ಬಿಡುಗಡೆ ಕಳೆದ ತಿಂಗಳು ಬಿಡುಗಡೆ ಮಾಡಲಾಗಿದ್ದ 1,214ರ ಪಟ್ಟಿ 590 ಕ್ಕೆ ಕಡಿತಗೊಂಡಿದೆ. 590 ಕ್ರಿಕೆಟಿಗರ ಪೈಕಿ 228 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದರು. 355 ಮಂದಿ ಅಂತರಾಷ್ಟ್ರೀಯ ಪಂದ್ಯಗಳನ್ನಾಡದವರು. ಮತ್ತು ಏಳು ಮಂದಿ ಸಹ ಸದಸ್ಯ ರಾಷ್ಟ್ರಗಳಿಗೆ ಸೇರಿದವರಾಗಿದ್ದಾರೆ.
ಶ್ರೇಯಸ್ ಅಯ್ಯರ್ ಮತ್ತು ಶಿಖರ್ ಧವನ್ ಹರಾಜಿನಲ್ಲಿ ಅತ್ಯಂತ ಬೇಡಿಕೆಯ ಆಟಗಾರರಾಗಲಿದ್ದಾರೆ. ಹಾಗೆಯೇ ಇಶಾನ್ ಕಿಶನ್,ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ದೀಪಕ್ ಚಾಹರ್ ಕಳೆದ ಆವೃತ್ತಿಯ ಗರಿಷ್ಠ ವಿಕೆಟ್ ಗಳಿಕೆ ಗಾರ ಹರ್ಷಲ್ ಪಟೇಲ್, ಸ್ಪಿನ್ನರ್ ಯಜ್ವೆಂದ್ರ ಚಹಲ್ ಮತ್ತು ವೇಗದ ಬೌಲರ್ ಶಾರ್ದುಲ್ ಠಾಕೂರ್ ಅವರನ್ನು ಖರೀದಿಸಲು 10 ತಂಡಗಳ ನಡುವೆ ಭಾರೀ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.
ವಿದೇಶಿ ಆಟಗಾರರ ಪೈಕಿ ವೇಗಿಗಳಾದ ಟ್ರೆಂಟ್ ಬೌಲ್ಟ್, ಪ್ಯಾಟ್ ಕಮಿನ್ಸ್, ಆಸ್ಟ್ರೇಲಿಯಾದ ಬ್ಯಾಟರ್ ಗಳಾದ ಮಿಚೆಲ್ ಮಾರ್ಷ್ ಹಾಗೂ ಸ್ಟೀವ್ ಸ್ಮಿತ್, ಬಾಂಗ್ಲಾದೇಶದ ಮಾಜಿ ನಾಯಕ ಶಕಿಬ್ ಅಲ್ ಹಸನ್ ಮತ್ತು ದೊಡ್ಡ ಹೊಡೆತಗಳ ಆಟಗಾರ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಅವರನ್ನು ಕೊಂಡುಕೊಳ್ಳಲು ಫ್ರಾಂಚೈಸಿ ಗಳು ಮುಗಿಬೀಳುವ ಸಾಧ್ಯತೆಗಳಿವೆ.
ಆದರೆ, ಎರಡು ಕೋಟಿ ರೂಪಾಯಿ ಮೂಲ ಬೆಲೆ ಹೊಂದಿರುವ ಸುರೇಶ್ ರೈನಾ, ರಾಬಿನ್ ಉತ್ತಪ್ಪ ಮುಂತಾದ ಭಾರತದ ಹಿರಿಯ ಆಟಗಾರರನ್ನು ಕೊಂಡುಕೊಳ್ಳಲು ಫ್ರಾಂಚೈಸಿಗಳು ಮುಗಿ ಬೀಳುವ ಸಾಧ್ಯತೆ ಕಡಿಮೆ ಇದೆ.