ಬಜೆಟ್ ನಲ್ಲಿ ಕಾವೇರಿ, ಕೃಷ್ಣ ಮತ್ತು ಪೆನ್ನಾರ್ ನದಿ ಜೋಡಣೆ ಪ್ರಸ್ತಾವವಿದೆ. ಯೋಜನೆಯಲ್ಲಿ ರಾಜ್ಯದ ನೀರಿನ ಪಾಲು ನಿರ್ಧಾರ ಆದ ಬಳಿಕವೇ ಇದಕ್ಕೆ ಒಪ್ಪಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದ್ದಾರೆ.
ರಾಜ್ಯದ ಬಂಡವಾಳ ಖಾತೆಗೆ ಹಿಂದೆ 26,000 ಕೋಟಿ ರೂ. ಬರುತ್ತಿತ್ತು. ಈ ಬಾರಿ 3 ಸಾವಿರ ರೂ. ಕೋಟಿ ಅಧಿಕವಾಗಿ ಬರುವ ನಿರೀಕ್ಷೆಯಿದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಮೂಲಸೌಕರ್ಯ ಯೋಜನೆಗಳು ಮೆಟ್ರೋ ಗೆ ಹೆಚ್ಚಿನ ಅನುದಾನ ಸಿಗಲಿದೆ.
ಸಣ್ಣ, ಅತಿ ಸಣ್ಣ ಕೈಗಾರಿಕೆಗಳ ಚೇತರಿಕೆ ರೂ.50 ಸಾವಿರ ಕೋಟಿಯಿಂದ ರೂ.5 ಲಕ್ಷಕೋಟಿ ನೀಡಲಾಗುವುದು.
ದೇಶದಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಸಣ್ಣ ಕೈಗಾರಿಕೆಗಳಿವೆ. ಇದರ ಪ್ರಯೋಜನ ರಾಜ್ಯದ ಉದ್ಯಮಿಗಳಿಗೆ ಸಿಗಲಿದೆ ಎಂದರು.
ಡಿಜಿಟಲೀಕರಣ, ನಗರ ಯೋಜನೆ ತಜ್ಞರ ಬಳಕೆಗೆ ಒತ್ತು ನೀಡಲಾಗಿದೆ. ನಗರ ಸಾರಿಗೆಗೆ ದೊಡ್ಡ ಪ್ರಮಾಣದ ಅನುದಾನ ಮೀಸಲಿಡಲಾಗಿದೆ. ದೇಶದ ಕೃಷಿಯಲ್ಲಿ ಸ್ವಾವಲಂಬನೆಯ ದೃಷ್ಟಿಯಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ದೇಶಾದ್ಯಂತ ನೊಂದಣಿ ವ್ಯವಸ್ಥೆ ಒಂದೇ ಮಾದರಿ ಇರಬೇಕು ಎಂದು ಒನ್ ನೇಷನ್ ಒನ್ ಪ್ರಾಪರ್ಟಿ ಕಾರ್ಯಕ್ರಮ ರೂಪಿಸಲಾಗಿದೆ. ಬಹಳಷ್ಟು ರಾಜ್ಯಗಳಲ್ಲಿ ನೊಂದಣಿ ವ್ಯವಸ್ಥೆಯಲ್ಲಿ ವ್ಯತ್ಯಾಸಗಳಿವೆ. ಇವುಗಳನ್ನು ನಿವಾರಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.