Friday, April 3, 2026
Friday, April 3, 2026

ಕೋವಿಡ್ ನಿಂದಾಗಿ ದೇಶದಲ್ಲಿ ಯಾರೂ ಸೌಲಭ್ಯ ವಂಚಿತರಾಗಿಲ್ಲ

Date:

ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ನಿರೋಧಕ ಲಸಿಕೆ ಕಡ್ಡಾಯಗೊಳಿಸಿದ್ದರಿಂದ ಯಾರಿಗೂ ನಷ್ಟವಾಗಿಲ್ಲ ಎಂದು ಸುಪ್ರೀಂಕೋರ್ಟ್ ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ನಿರೋಧಕ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿದ ಕಾರಣ ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಪಡಿತರ ಸೇರಿ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ವಕೀಲ ಪ್ರಶಾಂತ್ ಭೂಷಣ್ ಅವರು ದೂರಿದರು.
ಲಸಿಕೆಗಳ ಕ್ಲಿನಿಕಲ್ ಪ್ರಯೋಗ ಹಾಗೂ ಲಸಿಕೆ ಕಡ್ಡಾಯಗೊಳಿಸಿರುವ ಕುರಿತು ಮಾಹಿತಿ ನೀಡಬೇಕು ಎಂದು ಸಲ್ಲಿಕೆಯಾದ ಅರ್ಜಿಯನ್ನು ನ್ಯಾ.ಎಲ್. ನಾಗೇಶ್ವರ ರಾವ್ ಅವರ ನೇತೃತ್ವದ ನ್ಯಾಯಪೀಠವು ವಿಚಾರಣೆ ನಡೆಸಿತು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಯಾರೂ ಉದ್ಯೋಗ, ಪಡಿತರ ಸೇರಿ ಯಾವುದೇ ಸೌಲಭ್ಯ ಕಳೆದುಕೊಳ್ಳುತ್ತಿಲ್ಲ ಎಂದು ಪ್ರತ್ಯುತ್ತರ ನೀಡಿದರು.
ವಾದ -ಪ್ರತಿವಾದ ಆಲಿಸಿದ ನ್ಯಾಯಾಲಯವು ಅರ್ಜಿ ಕುರಿತ ಅಂತಿಮ ವಿಚಾರಣೆಗೆ ಶೀಘ್ರವೇ ದಿನಾಂಕ ತಿಳಿಸಲಾಗುವುದು ಎಂದು ಆದೇಶ ಹೊರಡಿಸಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga News ಪ್ರಕೃತಿಯನ್ನು ಅನುಸರಿಸಿ ಬದುಕಿದರೆ ಉತ್ತಮ ಆರೋಗ್ಯ ಜೀವನ-ಜಿ.ಎ. ಮಂಜುನಾಥ್.

Shivamogga News ಪ್ರಕೃತಿಯನ್ನು ಅನುಸರಿಸಿ ಬದುಕಿದಲ್ಲಿ ಉತ್ತಮ ಆರೋಗ್ಯ, ಜೀವನ‌ ಹಾಗೂ...

Canara Bank ಕೆನರಾ ಬ್ಯಾಂಕ್ ಸ್ವ- ಉದ್ಯೋಗ ತರಬೇತಿ ಕೇಂದ್ರದಲ್ಲಿ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ.

Canara Bank ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್...

MESCOM ಏಪ್ರಿಲ್ 4. ಶಿವಮೊಗ್ಗದ ಹೊಸಳ್ಳಿ, ರಾಮೇನಕೊಪ್ಪ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ.

MESCOM  ಶಿವಮೊಗ್ಗ ಮಂಡ್ಲಿ 11011 ಕೆವಿ ವಿದ್ಯುತ್ ಉಪಕೇಂದ್ರದಿAದ ಎಂ.ಆರ್.ಎಸ್ 22011...

D.S. Arun ಸೂಕ್ತ ವಿಲೇವಾರಿಯಾಗದ ಘನತ್ಯಾಜ್ಯ: ಸಾರ್ವಜನಿಕ ಆರೋಗ್ಯ, ಪರಿಸರದ ಮೇಲೆ ಪರಿಣಾಮ- ಡಿ‌.ಎಸ್.ಅರುಣ್

D.S. Arun ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ...