ಕೇಂದ್ರ ಸರ್ಕಾರ ಮಾತೃಭಾಷಾ ಶಿಕ್ಷಣಕ್ಕೆ ಮಾನ್ಯತೆ ಕೊಡಬೇಕು ಎಂದು ಆಗಾಗ ಹೇಳುತ್ತಲೇ ಇರುತ್ತದೆ. ಆದರೆ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗೆ ಅತ್ಯಂತ ಕಡಿಮೆ ಅನುದಾನ ನೀಡುತ್ತಿದೆ. ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ಕನ್ನಡಭಾಷೆಗೆ ವರ್ಷಕ್ಕೆ ಕೇವಲ 1 ಕೋಟಿ ರೂ. ನೀಡುತ್ತಿರುವುದು ಬೇಸರ ತಂದಿದೆ.
ಕಳೆದ ಏಳು ವರ್ಷದಲ್ಲಿ ಕನ್ನಡಭಾಷೆಗೆ ಕೇವಲ 8.39 ಕೋಟಿ ರೂ. ಅನುದಾನ ನೀಡಿದೆ. ಆದರೆ ತಮಿಳು ಭಾಷೆಗೆ ಕಳೆದ ಏಳು ವರ್ಷಗಳಲ್ಲಿ 50 ಕೋಟಿ ರೂ ಅನುದಾನ ನೀಡಿರುವುದು ಭಾಷೆಗಳ ಮಧ್ಯೆ ತಾರತಮ್ಯದ ವಿಚಾರದಲ್ಲೂ ನೋವು ತಂದಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಅವರು ಕನ್ನಡ ಭಾಷೆಗೆ ನೀಡುತ್ತಿರುವ ಕನಿಷ್ಠ ಅನುದಾನದ ಬಗ್ಗೆ ಪ್ರಸ್ತಾಪಿಸಿದ ಈ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಯುತ್ತಿದೆ. ಅಲ್ಲದೆ ಸಂಸ್ಕೃತ ಭಾಷೆಗೆ ಅದೇ ಅವಧಿಯಲ್ಲಿ ಸಯ1200 ಕೋಟಿ ರೂ. ಇರುವುದು ಕೂಡ ಚರ್ಚೆಯ ಒಂದು ಭಾಗವಾಗಿದೆ.
ಕನ್ನಡ ಪರ ಹೋರಾಟಗಾರ ಅರುಣ್ ಜಾವಗಲ್ ಅವರು “ಕನ್ನಡದ ಪ್ರಾಚೀನ ಗ್ರಂಥಗಳ ಉಳಿವಷ್ಟೇ ಅಲ್ಲ, ಮುಂದಿನ ಭವಿಷ್ಯಕ್ಕಾಗಿ ಕನ್ನಡವನ್ನು ತಂತ್ರಜ್ಞಾನ ಶಕ್ತ ಭಾಷೆಯಾಗಿ ಉಳಿಸುವ ಅಗತ್ಯ ಹೆಚ್ಚಿದೆ. ಈ ನಿಟ್ಟಿನಲ್ಲಿ ಅನುವಾದ ಮತ್ತಿತರ ನೂರಾರು ಕೆಲಸಗಳು ಆಗಬೇಕಿದೆ. ಇದಕ್ಕೆಲ್ಲಾ ಅನುದಾನ ಬೇಕು. ರಾಜ್ಯದಿಂದ ವರ್ಷಕ್ಕೆ 2.5 ಲಕ್ಷ ಕೋಟಿಯಷ್ಟು ತೆರಿಗೆ ಪಡೆಯುವ ಕೇಂದ್ರ ಜುಜುಬಿ 1 ಕೋಟಿ ನೀಡಿ ಕೈತೊಳೆದುಕೊಳ್ಳುತ್ತಿದೆ. ಈ ಬಗ್ಗೆ ಯಾವ ಜನಪ್ರತಿನಿಧಿಗಳು ಪ್ರಶ್ನೆ ಮಾಡುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.