Thursday, August 6, 2026
Thursday, August 6, 2026
Home Blog Page 98

Karnataka Forest Department ವಾಹನ ಸಂಚಾರದ ಹೆಚ್ಚಳ: ವನ್ಯಜೀವಿಗಳ ಮುಕ್ತ ಓಡಾಟಕ್ಕೆ ಅಡ್ಡಿಯಾಗಿ ಮಾನವ- ವನ್ಯಪ್ರಾಣಿ ಸಂಘರ್ಷ ಹೆಚ್ಚುತ್ತಿದೆ- ಕುಮಾರ್ ಪುಷ್ಕರ್

0

Karnataka Forest Department ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮಾನವ–ವನ್ಯಜೀವಿ ಸಂಘರ್ಷವೂ ತೀವ್ರವಾಗುತ್ತಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ವನ್ಯಜೀವಿ ಪಾಲಕ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ಹೇಳಿದರು.

ಅವರು ಕರ್ನಾಟಕ ಅರಣ್ಯ ಇಲಾಖೆ, ಚಿಕ್ಕಮಗಳೂರು ವೃತ್ತ ಹಾಗೂ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಸಹಯೋಗದಲ್ಲಿ ಕುವೆಂಪು ವಿಶ್ವವಿದ್ಯಾಲಯದ ವನ್ಯಜೀವಿ ಮತ್ತು ನಿರ್ವಹಣಾ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ವಿಭಾಗ ಆಯೋಜಿಸಿದ್ದ ‘ಮಾನವ–ವನ್ಯಜೀವಿ ಸಂಘರ್ಷ, ಸಹಬಾಳ್ವೆ ಮತ್ತು ಜೀವವೈವಿಧ್ಯ ಸಂರಕ್ಷಣೆ’ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಸುಮಾರು 40 ಸಾವಿರ ಚದರ ಕಿ.ಮೀ. ಅರಣ್ಯ ಪ್ರದೇಶದಲ್ಲಿ 11 ಸಾವಿರ ಚದರ ಕಿ.ಮೀ. ಪ್ರದೇಶವನ್ನು ಸಂರಕ್ಷಿತ ವಲಯವಾಗಿ ಗುರುತಿಸಲಾಗಿದೆ. ಸರ್ಕಾರದ ಸಂರಕ್ಷಣಾ ಕ್ರಮಗಳಿಂದ ವನ್ಯಜೀವಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ತಿಳಿಸಿದರು.

ಅರಣ್ಯದ ಅಂಚಿನಲ್ಲಿ ಕೃಷಿ ಚಟುವಟಿಕೆಗಳು ಹಾಗೂ ವಾಣಿಜ್ಯ ಬೆಳೆಗಳ ಹೆಚ್ಚಳದಿಂದ ಪ್ರಾಣಿಗಳು ಜನವಸತಿ ಪ್ರದೇಶಗಳತ್ತ ಸೆಳೆಯಲ್ಪಡುತ್ತಿವೆ. ರಸ್ತೆ ಅಭಿವೃದ್ಧಿ ಹಾಗೂ ವಾಹನ ಸಂಚಾರ ಹೆಚ್ಚಳದಿಂದ ವನ್ಯಜೀವಿಗಳ ಮುಕ್ತ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ಇದರಿಂದ ಸಂಘರ್ಷ ಹೆಚ್ಚುತ್ತಿದೆ ಎಂದು ಹೇಳಿದರು.

ಸಂಘರ್ಷ ತಡೆಗೆ ರೈಲ್ವೆ ಬ್ಯಾರಿಕೇಡ್‌, ಸೌರ ಬೇಲಿ ಹಾಗೂ ಆನೆ ನಿರೋಧಕ ಕಂದಕಗಳಂತಹ ತಡೆಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ದೀರ್ಘಕಾಲೀನ ಪರಿಹಾರಕ್ಕಾಗಿ ವನ್ಯಜೀವಿಗಳೊಂದಿಗೆ ಸಹಬಾಳ್ವೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

ಸಾಕಾನ್ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಎಚ್‌.ಎನ್‌. ಕುಮಾರ್ ಮಾತನಾಡಿ, ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹೊಸ ಸಮಸ್ಯೆಯಲ್ಲ. ಅದು ಮಾನವ ನಾಗರಿಕತೆಯ ಇತಿಹಾಸದಷ್ಟೇ ಹಳೆಯದು ಎಂದು ಹೇಳಿದರು.

Karnataka Forest Department ಪ್ರಾಚೀನ ಕಾಲದ ನೇಪಾಳದ ಪಶುಪತಿ ಶಿಲ್ಪಕಲೆಯು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧಕ್ಕೆ ಸಾಕ್ಷಿಯಾಗಿದೆ. ‘ಪಶು’ ಎಂದರೆ ಪ್ರಾಣಿ, ‘ಪತಿ’ ಎಂದರೆ ರಕ್ಷಕ ಎಂಬ ಅರ್ಥವಿದ್ದು, ಅಂದಿನ ಕಾಲದಲ್ಲೇ ಪ್ರಾಣಿಗಳಿಗೆ ರಕ್ಷಣೆ ಅಗತ್ಯ ಎಂಬ ಚಿಂತನೆ ಇತ್ತು ಎಂದು ತಿಳಿಸಿದರು.

ಐಎಫ್‌ಎಸ್ ಅಧಿಕಾರಿ ಪುಲ್ಕಿತ್ ಮೀನಾ ಮಾತನಾಡಿ, ತಂತ್ರಜ್ಞಾನ ಮಾತ್ರದಿಂದ ವನ್ಯಜೀವಿ ಸಂರಕ್ಷಣೆ ಸಾಧ್ಯವಿಲ್ಲ. ಜನರಲ್ಲಿ ವನ್ಯಜೀವಿಗಳ ಬಗ್ಗೆ ಸಹಿಷ್ಣುತೆ ಬೆಳೆಸುವುದು ಅಗತ್ಯ ಎಂದರು.

ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಟಿ.ಎನ್‌. ಪ್ರಕಾಶ್ ಕಮ್ಮರಡಿ, ಐಎಫ್ಎಸ್ ಯಶ್‌ಪಾಲ್ ಕ್ಷೀರಸಾಗರ್ ಹಾಗೂ ವನ್ಯಜೀವಿ ನಿರ್ವಹಣಾ ವಿಭಾಗದ ಮುಖ್ಯಸ್ಥ ಪ್ರೊ. ವಿಜಯಕುಮಾರ್ ಉಪಸ್ಥಿತರಿದ್ದರು.

B.Y. Vijayendra ಬಿಜೆಪಿ ಸರ್ಕಾರ ಜಾರಿಮಾಡಿದ್ದ ಶಿಸ್ತುಬದ್ಧ ಸಮವಸ್ತ್ರ ನಿಯಮ ಹಿಂಪಡೆದಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡನೀಯ- ಬಿ.ವೈ.ವಿಜಯೇಂದ್ರ

0

B.Y. Vijayendra ಶೈಕ್ಷಣಿಕ ಕೇಂದ್ರಗಳಲ್ಲಿ ಸಮಾನತೆ ಮತ್ತು ಶಾಲಾ ಮಕ್ಕಳಲ್ಲಿ ಏಕತೆಯನ್ನು ತರುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಶಿಸ್ತುಬದ್ಧ ಸಮವಸ್ತ್ರ ನಿಯಮವನ್ನು ಹಿಂಪಡೆದಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಖಂಡನೀಯ! ಎಂದು ರಾಜ್ಯ ಬಿಜೇಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣ ಹೇಳಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸರ್ಕಾರದ ಕ್ರಮವನ್ನ ಖಂಡಿಸಿದ್ದಾರೆ.

ಸಮವಸ್ತ್ರದ ಮೂಲ ಆಶಯವೇ ಮಕ್ಕಳಲ್ಲಿ ಮೇಲು-ಕೀಳು, ಜಾತಿ-ಮತದ ಭೇದ ಮರೆಸಿ ಸಮಾನತೆಯ ದೀಕ್ಷೆ ನೀಡುವುದಾಗಿದೆ. ಮಕ್ಕಳ ಮನಸ್ಸಿನಲ್ಲಿ ‘ನಾವೆಲ್ಲರೂ ಒಂದು’ ಎಂಬ ಭಾವನೆ ಬಿತ್ತುವ ಬದಲು, ಕೇವಲ ಅವರ ಓಟ್ ಬ್ಯಾಂಕ್ ವರ್ಗದ ಓಲೈಕೆಗಾಗಿ ಶಾಲಾ ಆವರಣದಲ್ಲೂ ಮತೀಯ ವಿಭಜನೆಗೆ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ಕೈಹಾಕಿದೆ. ಈ ಮೂಲಕ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನವರ ಸರ್ಕಾರ ಶೈಕ್ಷಣಿಕ ಪಾವಿತ್ರ್ಯತೆಗಿಂತ ವೋಟ್ ಬ್ಯಾಂಕ್ ರಾಜಕಾರಣಕ್ಕೇ ಆದ್ಯತೆ ನೀಡುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಮಕ್ಕಳಿಗೆ ಹಿಜಾಬ್ ಧರಿಸಲು ಸರ್ಕಾರ ಅವಕಾಶ ನೀಡಿ, ಕೇಸರಿ ಶಾಲ್ ಧರಿಸುವುದಕ್ಕೆ ನಿರ್ಬಂಧ ವಿಧಿಸಿರುವ ನಿಮ್ಮ ತುಘಲಕ್ ಆದೇಶವನ್ನು ಕೂಡಲೇ ಹಿಂಪಡೆಯಿರಿ!

ಶಿಕ್ಷಣ ಸಂಸ್ಥೆಗಳು ಜ್ಞಾನ ಸರೋವರವಿದ್ದಂತೆ, ಇಲ್ಲಿ ವಸ್ತ್ರ ಸಂಹಿತೆ (ಸಮವಸ್ತ್ರ) ಶಿಸ್ತು, ಸಮಭಾವ ಹಾಗೂ ಸಹೋದರತ್ವ ಭಾವವನ್ನು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಕೋಮು ಸಂಕೇತ ಪ್ರತಿನಿಧಿಸುವ ವಸ್ತ್ರ ಧರಿಸಲು ಅವಕಾಶ ನೀಡುವುದು ಹಾಗೂ ಪ್ರೇರಣೆ ನೀಡುವುದು ಶಿಕ್ಷಣ ಸರೋವರಕ್ಕೆ ಕೆಸರು ತುಂಬುವ ಕೆಟ್ಟ ನಡೆಯಾಗುತ್ತದೆ. ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಅಕ್ಷರಶಃ ಅವಿವೇಕಿತನದ ಪರಮಾವಧಿಯಾಗಿದೆ.

ಮಾನ್ಯ ಮುಖ್ಯಮಂತ್ರಿಗಳೇ, ಸರ್ವವ್ಯಾಪಿ ಸರ್ವಸ್ಪರ್ಶಿ ನಿರ್ಮಲ ಸರೋವರದಂತೆ, ಜ್ಞಾನ ದೀವಿಗೆ ಬೆಳಗುತ್ತಿರುವ ನಮ್ಮ ಶಿಕ್ಷಣ ವ್ಯವಸ್ಥೆಗೆ ಕೋಮು ಸಂಕೇತಿಸುವ ಹಿಜಾಬ್ ನಿಂದ ಉಸಿರುಗಟ್ಟಿಸಿ, ಶಿಕ್ಷಣ ಕ್ಷೇತ್ರದಲ್ಲಿಯೂ ಕೋಮುವಾದದ ಜ್ವಾಲೆ ಹತ್ತಿಸಬೇಡಿ!

B.Y. Vijayendra ಶಿಕ್ಷಣ ಸುಧಾರಣೆಯ ಯೋಜನೆ ಹಾಗೂ ಕಾರ್ಯಕ್ರಮಗಳ ಕುರಿತು ತಲೆಕೆಡಿಸಿಕೊಳ್ಳದ ಶಿಕ್ಷಣ ಇಲಾಖೆ ಸರ್ಕಾರಿ ಶಾಲಾ ಕಟ್ಟಡಗಳ ಸುರಕ್ಷತೆ, ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿಯೂ ವಿಫಲವಾಗಿದೆ, ನೈಜ ಶಿಕ್ಷಣ ಬದ್ಧತೆಯನ್ನು ಪ್ರದರ್ಶಿಸುವ ಬದಲು ಸದ್ಯ ಇರುವ ವ್ಯವಸ್ಥೆಯನ್ನೂ ಕುಲಗೆಡಿಸುತ್ತಿರುವುದು ಶಿಕ್ಷಣ ವಿದ್ರೋಹಿ ಕ್ರಮವಾಗಿದೆ. ಈ ಕೂಡಲೇ ಹಿಜಾಬ್ ಅನುಮತಿಯ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳದೇ ಹೋದರೆ ಮುಂದೆ ಉದ್ಭವಿಸಲಿರುವ ಪರಿಸ್ಥಿತಿಗಳಿಗೆ ಕಾಂಗ್ರೆಸ್‌ ಸರ್ಕಾರವೇ ನೇರ ಹೊಣೆಯಗಲಿದೆ. ಎಂದು ಶಾಸಕ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು

Dr. Dhananjaya Sarji ದಾವಣಗೆರೆ ಉಪಚುನಾವಣೆ ಘಟನೆಗೆ ತೇಪೆ ಹಚ್ಚು ಕೆಲಸ ಈಗ ಕಾಂಗ್ರೆಸ್ ಮಾಡಿದೆ.- ಡಾ.ಧನಂಜಯ ಸರ್ಜಿ

0

Dr. Dhananjaya Sarji ಶಿವಮೊಗ್ಗದಲ್ಲಿ ಎಂ ಎಲ್ ಸಿ ಡಾ. ಧನಂಜಯ್ ಸರ್ಜಿ ಅವರು ಶಾಲಾ ಕಾಲೇಜು ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡು ಹೋಗುವ ವಿಚಾರದ ಕುರಿತು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಮೊದಲಿನಿಂದಲೂ ಒಡೆದಾಳುವ ನೀತಿ ಮಾಡಿಕೊಂಡು ಬಂದಿದೆ. ನೀವೇ ಊಹಿಸಿ ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು.
ಒಂದು ಶಾಲಾ ಕಾಲೇಜುಗಳಲ್ಲಿ ಓದುವ ಮಕ್ಕಳು ಒಂದೇ ತರ ಯೂನಿಫಮ್ ಹಾಕೊಂಡು ಹೋಗಬೇಕು ಅನ್ನೋದನ್ನ ಹೈ ಕೋರ್ಟ್ ಎತ್ತಿಹಿಡಿದಿದೆ.

ಅದನ್ನು ದಿಕ್ಕರಿಸಿ ಒಂದು ಸಮುದಾಯವನ್ನು ಓಲೈಕೆ ಮಾಡುವುದಕ್ಕೆ ದಾವಣಗೆರೆಯಲ್ಲಿ ನಡೆದ ಘಟನೆಗೆ ತೇಪೆ ಹಚ್ಚುವ ಕೆಲಸ ಮಾಡಿದೆ ಎಂದರು.

ಕಾಂಗ್ರೆಸ್ ಯಾವಾಗಲೂ ಈ ತುಷ್ಟೀಕರಣ ರಾಜಕಾರಣ ಮಾಡಿಕೊಂಡು ಬಂದಿದೆ. ಒಡೆದಾಳುವ ನೀತಿಯಲ್ಲೇ ಕಾಂಗ್ರೆಸ್ ಬೆಳೆದು ಬಂದಿದೆ.
ಎಷ್ಟೋ ಮುಸಲ್ಮಾನ ಹೆಣ್ಣುಮಕ್ಕಳ ಮೇಲೆ ಪರಿಣಾಮ ಬೀರಬಹುದು.
ಎಷ್ಟೋ ಜನ ಹೆಣ್ಣುಮಕ್ಕಳಿಗೆ ಸ್ನೇಹಿತರು ಇರುತ್ತಾರೆ. ಕೆಲವರು ಹಿಜಾಬ್ ಹಾಕುತ್ತಾರೆ ,ಕೆಲವರು ಹಾಕುತ್ತಿಲ್ಲ. ಇದು ಎಷ್ಟು ಡಿಫ್ರೆನ್ಸ್ ಆಗಬಹುದು .ನಾವೇ ಇದನ್ನು ಪ್ರತ್ಯೇಕ ಮಾಡಿದ ಹಾಗೆ ಎಂದರು.

Dr. Dhananjaya Sarji ಕಾಂಗ್ರೆಸ್ ಮುಸಲ್ಮಾನರ ತುಷ್ಟೀಕರಣಕ್ಕೆ ವಿಧ್ಯಾರ್ಥಿಗಳ ಮದ್ಯೆ ದ್ವೇಷ ಬಿತ್ತುತ್ತಿದೆ. ಹಾಗಾದರೆ ಒಬ್ಬರು ಒಬ್ಬರು ಒಂದೊಂದು ಹಿಜಾಬ್ ಕೇಸರಿ ಶಾಲು ಪೇಟಾ ಹೀಗೆ ಹಾಕೊಂಡು ಬರಬಹುದಲ್ಲ… ಕಾಂಗ್ರೆಸ್ ಹೀಗೆ ಮಾಡೋದು ಖಂಡನೀಯ. ಇದನ್ನು ನಾವು ದಿಕ್ಕರಿಸುತ್ತೇವೆ ಮತ್ತು ಹೋರಾಟವನ್ನು ಮಾಡುತ್ತೇವೆ ಎಂದು ಹೇಳಿದರು

H.K.Patil ಗದಗ ಜಿಲ್ಲೆ ಲಕ್ಕುಂಡಿ ಪುರಾತನ ವಸ್ತುಗಳನ್ನ ದೆಹಲಿ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ವೀಕ್ಷಿಸಿ ಮೆಚ್ಚಿದ ಸಚಿವ ಎಚ್.ಕೆ.ಪಾಟೀಲ್

0

H.K.Patil. ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಇಂದು ಸನ್ಮಾನ್ಯ ಪ್ರವಾಸೋದ್ಯಮ ಸಚಿವರಾದ ಶ್ರೀ ಎಚ್​.ಕೆ ಪಾಟೀಲ ಅವರು ಭೇಟಿ ನೀಡಿ, ನಮ್ಮ ನಾಡಿನ ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಪ್ರದೇಶಕ್ಕೆ ಸೇರಿದ ಅಪರೂಪದ ಪುರಾತನ ವಸ್ತುಗಳ ಸಂಗ್ರಹವನ್ನು ಖುದ್ದಾಗಿ ಪರಿಶೀಲಿಸಿದರು.
1976 ರ ಅಕ್ಟೋಬರ್ 16 ರಂದು ಶ್ರೀ ಡಿ.ಕೆ. ಹೆಬ್ಬೂರ್ ಮತ್ತು ಶ್ರೀ ಟಿ.ಕೆ. ನಾಯಕ್ ಅವರು ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಹಸ್ತಾಂತರಿಸಿದ್ದ 150ಕ್ಕೂ ಹೆಚ್ಚು ಅಮೂಲ್ಯ ಕಲಾಕೃತಿಗಳು ಇಲ್ಲಿದ್ದು, ಪ್ರಾಚೀನ ಶಸ್ತ್ರಾಸ್ತ್ರಗಳು, ಅಪರೂಪದ ಚಿನ್ನ-ಬೆಳ್ಳಿ ನಾಣ್ಯಗಳು, ಸೂಕ್ಷ್ಮ ಕೆತ್ತನೆಯ ಆಭರಣಗಳು ಮತ್ತು ಐತಿಹಾಸಿಕ ಹಸ್ತಪ್ರತಿಗಳು ನಮ್ಮ ನಾಡಿನ ಭವ್ಯ ಇತಿಹಾಸವನ್ನು ಸಾರುವಂತಿವೆ.
H.K.Patil. ಲಾಕರ್‌ನಲ್ಲಿ ಸುರಕ್ಷಿತವಾಗಿರುವ ಈ 150 ಹೆಚ್ಚು ಅಪರೂಪದ ವಸ್ತುಗಳನ್ನು ಸಾರ್ವಜನಿಕರ ವೀಕ್ಷಣೆಗಾಗಿ ದೆಹಲಿಯಲ್ಲೇ ಪ್ರತ್ಯೇಕ ಗ್ಯಾಲರಿಯಲ್ಲಿ ಪ್ರದರ್ಶಿಸಲು ರಾಷ್ಟ್ರೀಯ ವಸ್ತುಸಂಗ್ರಹಾಲಯದೊಂದಿಗೆ ಅಗತ್ಯ ಸಮನ್ವಯ ಸಾಧಿಸುವುದು ಹಾಗೂ ಈ ಅಮೂಲ್ಯ ಕಲಾಕೃತಿಗಳನ್ನು ಶಾಶ್ವತವಾಗಿ ಕರ್ನಾಟಕಕ್ಕೆ ಅದರಲ್ಲೂ ವಿಶೇಷವಾಗಿ ಲಕ್ಕುಂಡಿಗೆ ಮರಳಿ ತರಲು ಕೇಂದ್ರ ಸರ್ಕಾರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯೊಂದಿಗೆ ಅಧಿಕೃತ ಮಾತುಕತೆ ಹಾಗೂ ಕಾನೂನಾತ್ಮಕ ಪ್ರಕ್ರಿಯೆಗಳನ್ನು ತಕ್ಷಣವೇ ಪ್ರಾರಂಭಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಸನ್ಮಾನ್ಯ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

K.S. Eshwarappa “ಮಾರ್ನಾಮಿ ಬೈಲ್” ಕಿರುಚಿತ್ರೋತ್ಸವ ಒಂದು ಸಾಂಸ್ಕೃತಿಕ ಹೆಜ್ಜೆ,- ಕೆ.ಎಸ್.ಈಶ್ವರಪ್ಪ

0

K.S. Eshwarappa ಶಿವಮೊಗ್ಗ ನಗರದ ಪತ್ರಿಕಾ ಭವನದಲ್ಲಿ ಗಾರಾ ಗ್ರೂಪ್ ಸಂಸ್ಥೆಯ ಮಾಧ್ಯಮ ವಿಭಾಗವಾದ ಸೂರ್ಯಗಗನ ಮ್ಯಾಗಜಿನ್ ಹಾಗೂ ಇತ್ಯಾದಿ ಪಾಕ್ಷಿಕ ಪತ್ರಿಕೆಗಳು ಆಯೋಜಿಸುತ್ತಿರುವ ಮಾರ್ನಾಮಿಬೈಲ್ ಕಿರುಚಿತ್ರೋತ್ಸವದ ಮೊದಲ ಪೋಸ್ಟರ್ ಮಾಜೀ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪನವರು ಬಿಡುಗಡೆಗೊಳಿಸಿದರು.

K.S. Eshwarappa ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಾರ್ನಾಮಿಬೈಲ್ ಕಿರುಚಿತ್ರೋತ್ಸವ ಸಾಂಸ್ಕೃತಿಕ ಹೆಜ್ಜೆಯಾಗಿದ್ದು ಕಾರ್ಯಕ್ರಮ ಯಶಸ್ವಿಯಾಗಿ ಜರುಗಲಿ ಎಂದು ಹಾರೈಸಿದರು. ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಆಯೋಜಕರಾದ ಗಾರಾ.ಶ್ರೀನಿವಾಸ್, ಅಚ್ಚೆ ಸಿನಿಮಾ ನಿರ್ದೇಶಕ ಯಶೋಧರ್, ಖಳನಟ ಶ್ರೀನಿವಾಸ್ ಶರ್ಮಾ, ಪತ್ರಕರ್ತರಾದ ದೇಶಾದ್ರಿ, ಬಹುಮುಖಿ ನವೀನ್ ತಲಾರಿ, ಕಿರುಚಿತ್ರ ನಿರ್ದೇಶಕ ನಿತಿನ್, ಕ್ರಿಯೇಟಿವ್ ಗ್ರೂಪ್ ಪರಮೇಶ್ವರ್, ಸಿವಿಲ್ ಇಂಜಿನಿಯರ್ ಭರತ್ ಗುತ್ತಿ, ಕರವೇ ಸ್ವಾಭಿಮಾನಿ ಬಣದ ಸಯ್ಯದ್ ಮುಜಿಬುಲ್ಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮೇ 17. ಶ್ರೀವೀರೇಶ್ವರ ಪುಣ್ಯಾಶ್ರಮದಲ್ಲಿ “118 ನೇ ಗಾನಲಹರಿ”

0

ಶಿವಮೊಗ್ಗ ನಗರ ರಸ್ತೆಯ ಶ್ರೀ ವೀರೇಶ್ವರ ಪುಣ್ಯಾಶ್ರಮ ಡಾ| ಪಂಡಿತ ಪುಟ್ಟರಾಜಕವಿ ಗವಾಯಿ ಗಳವರ ಕುರುಡು ಮಕ್ಕಳ ಸಂಗೀತ ವಿದ್ಯಾಲಯ ಮತ್ತು ಶ್ರೀ ವೀರೇಶ್ವರ ಪುಣ್ಯಾಶ್ರಮ ಉಚಿತ ಸಂಸ್ಕೃತ ಪಾಠಶಾಲೆಯಲ್ಲಿ ಗಾನಲಹರಿ 118ನೆಯ ಅಮಾವಾಸ್ಯೆ ಮೇ 17ನೇ ಶುಕ್ರವಾರ ಸಂಜೆ 6.30ರಿಂದ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಿದೆ.
ರಾಜ್ಯ ಪ್ರಶಸ್ತಿ ಪುರಸ್ಕೃತ ಪಂ. ಆರ್.ಬಿ.ಸಂಗಮೇಶ್ವರ ಗವಾಯಿ ಗಳು ಅಧ್ಯಕ್ಷತೆ ವಹಿಸುವರು. ಶಿಕಾರಿಪುರದ ಶ್ರೀಮತಿ ಅಮೃತಾ ಗಿರಿಧರ್ ಅವರು ಆಧ್ಯಾತ್ಮ ನುಡಿ ಗಳನ್ನಾಡುವರು. ಶ್ರೀಶಿರಡಿ ಸಾಯಿ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ. ಆಶ್ರಮದ ಅಂಧ ಮಕ್ಕಳಿಂದ ಪ್ರಾರ್ಥನೆ ನಡೆಯಲಿದೆ. ಹಿಂದೂಸ್ಥಾನಿ ಗಾಯಕ ಉಡುಪಿಯ ರಮೇಶ್ ಮಹಾಂತಾ ಅವರಿಂದ ಸಂಗೀತ ಸೇವೆ ನಡೆಯಲಿದೆ.
ರಾಮಣ್ಣ ಭಜಂತ್ರಿ ಸಹನಾ, ವೀರ ಭದ್ರಯ್ಯ ಶಾಸ್ತ್ರಿ, ವೇದಘೋಷ, ಪಂ. ಆರ್. ತುಕಾರಾಮ್ ರಂಗಧೋಳ್, ವಿನಾಯಕ್ ಭಟ್ ತಬಲ ಹಾಗೂ ಸಿದ್ದಣ್ಣ ಬಡಿಗೇರ್ ಹಾರೋನಿಯಂನೊಂದಿಗೆ ಸಾಥ್ ನೀಡಲಿದ್ದಾರೆ. ರೇವಣಸಿದ್ದಯ್ಯ ಶಾಸ್ತ್ರಿ ನಿರೂಪಿಸಿದರು.

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಕಾಂಗ್ರೆಸ್ ಚಲ್ಲಾಟ. ಸಮಾಜದಲ್ಲಿ ಕೋಮು ವಿಷ ಬೀಜ ಬಿತ್ತುತ್ತಿದ್ದಾರೆ- ಎನ್.ಕೆ.ಜಗದೀಶ್

0

ರಾಜ್ಯದ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿಹಾಕಲು ಶಿಕ್ಷಣ ಕ್ಷೇತ್ರವನ್ನು ರಾಜಕೀಯ ಅಖಾಡವನ್ನಾಗಿ ಮಾಡಿಕೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಾ, ಸಮಾಜದಲ್ಲಿ ಕೋಮು ವಿಷಬೀಜ ಬಿತ್ತುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಜಗದೀಶ್ ಎನ್.ಕೆ. ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇಬ್ಬಗೆ ನೀತಿ ಮತ್ತು ನೀಟ್ ಪರೀಕ್ಷೆ ಕುರಿತ ಅಪಪ್ರಚಾರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಟ್ (NEET) ಪರೀಕ್ಷೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ “ದ್ರೋಹ”ದ ಮಾತುಗಳನ್ನಾಡುತ್ತಿರುವುದು ಕೇವಲ ರಾಜಕೀಯ ಪ್ರೇರಿತವಾಗಿದೆ. ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ಪಾರದರ್ಶಕತೆ ಕಾಪಾಡಲು ಕೇಂದ್ರ ಸರ್ಕಾರ ಶ್ರಮಿಸುತ್ತಿದ್ದರೆ, ಸಿದ್ದರಾಮಯ್ಯನವರು ಅದಕ್ಕೆ ಅಡ್ಡಿಪಡಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಇವರದೇ ಸರ್ಕಾರ ನಡೆಸಿದ ಸಿಇಟಿ (CET) ಪರೀಕ್ಷೆಯಲ್ಲಿ ಸಾವಿರಾರು ಲೋಪದೋಷಗಳು ಕಂಡುಬಂದಾಗ ಮುಖ್ಯಮಂತ್ರಿಗಳ ನೈತಿಕತೆ ಎಲ್ಲೋಗಿತ್ತು? ತಮ್ಮ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಾಗದವರು ಕೇಂದ್ರ ಸಚಿವರ ರಾಜೀನಾಮೆ ಕೇಳುತ್ತಿರುವುದು ಹಾಸ್ಯಾಸ್ಪದ. ವಿದ್ಯಾರ್ಥಿಗಳ ಪರಿಶ್ರಮದ ಬಗ್ಗೆ ಮಾತನಾಡುವ ಇವರು, ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಶೈಕ್ಷಣಿಕ ಶಿಸ್ತನ್ನು ಸಂಪೂರ್ಣವಾಗಿ ಹಾಳುಮಾಡಿದ್ದಾರೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವೈಫಲ್ಯ ಮತ್ತು ಓಲೈಕೆ ರಾಜಕಾರಣ

“ಮಾಡೋಕೆ ಕೆಲಸ ಇಲ್ಲದೆ, ಬೆಕ್ಕಿನ ಬಾಲ ಬೋಳಿಸಿದನಂತೆ” ಎಂಬ ಗಾದೆ ಮಾತು ನಮ್ಮ ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಅಕ್ಷರಶಃ ಅನ್ವಯಿಸುತ್ತದೆ. ಸರ್ಕಾರಿ ಶಾಲೆಗಳಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿ ಇವೆ, ಶಿಕ್ಷಕರ ನೇಮಕಾತಿಗೆ ಗ್ರಹಣ ಹಿಡಿದಿದೆ. ಅದೆಷ್ಟೋ ಉದ್ಯೋಗಾಕಾಂಕ್ಷಿಗಳು ಆಸೆಗಣ್ಣಿನಿಂದ ಕಾದು ಕುಳಿತಿದ್ದರೂ, ಅವರ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದ ಸಚಿವರು, ಹಿಜಾಬ್ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದ್ದರೂ ಆತುರಾತುರವಾಗಿ ಹಿಜಾಬ್ ಧರಿಸಲು ಅವಕಾಶ ನೀಡಿದ್ದಾರೆ. ಶಿಕ್ಷಣ ಇಲಾಖೆಯನ್ನು ಇವರು ಸಂಪೂರ್ಣವಾಗಿ ತುಷ್ಟೀಕರಣದ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಶಿಕ್ಷಕರ ನೇಮಕಾತಿಗಿಂತಲೂ ಸಚಿವರಿಗೆ ಒಂದು ನಿರ್ದಿಷ್ಟ ಸಮುದಾಯದ ಓಲೈಕೆಯೇ ಮುಖ್ಯವಾಗಿದೆ ಎಂಬುದು ಈ ನಿರ್ಧಾರದಿಂದ ಸ್ಪಷ್ಟವಾಗಿದೆ.

ಸಮವಸ್ತ್ರ ನೀತಿಯ ಬದಲಾವಣೆ ಮತ್ತು ವಿಭಜನೆ ಮನಸ್ಥಿತಿ

ಶಾಲೆಗಳಲ್ಲಿ ಸಮಾನತೆ ಮೂಡಿಸಬೇಕಾದ ಸಮವಸ್ತ್ರ ನೀತಿಯನ್ನು ಕಾಂಗ್ರೆಸ್ ಸರ್ಕಾರವು ಹಂತ ಹಂತವಾಗಿ ನಾಶಮಾಡುತ್ತಿದೆ. ಹಿಜಾಬ್ ಧರಿಸಲು ಅವಕಾಶ ನೀಡಿರುವುದನ್ನು ಸಮರ್ಥಿಸಿಕೊಳ್ಳಲು ಜನಿವಾರ, ಪೇಟ ಮತ್ತು ರುದ್ರಾಕ್ಷಿಗಳ ಹೆಸರನ್ನು ಎಳೆದು ತರುತ್ತಿರುವುದು ಸಿದ್ದರಾಮಯ್ಯನವರ ವಿಭಜನೆ ಮನಸ್ಥಿತಿಗೆ ಸಾಕ್ಷಿ. ಶತಶತಮಾನಗಳಿಂದ ನಮ್ಮ ಸಂಸ್ಕೃತಿಯ ಭಾಗವಾಗಿರುವ ಪದ್ಧತಿಗಳನ್ನು ಹಿಜಾಬ್‌ಗೆ ಹೋಲಿಸುವುದು ಕೇವಲ ಬೌದ್ಧಿಕ ದಿವಾಳಿತನವಲ್ಲದೆ ಮತ್ತೇನೂ ಅಲ್ಲ. ಬಸವಣ್ಣನವರ “ಇವ ನಮ್ಮವ” ಎಂಬ ತತ್ವವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಕಾಂಗ್ರೆಸ್, ಶಾಲಾ ಅಂಗಳದಲ್ಲಿ ಧರ್ಮದ ಆಧಾರದ ಮೇಲೆ ಮಕ್ಕಳನ್ನು ವಿಂಗಡಿಸುವ ‘ತಾಲಿಬಾನಿ’ ಸಂಸ್ಕೃತಿಯನ್ನು ಜಾರಿಗೆ ತರುತ್ತಿದೆ.

ಸಮವಸ್ತ್ರ ನೀತಿಯ ಹೆಸರಲ್ಲಿ ಸಮಾನತೆಗೆ ಧಕ್ಕೆ

ಸಮಾನತೆ ಮತ್ತು ಸೌಹಾರ್ದತೆಯ ಹೆಸರಿನಲ್ಲಿ ತಂದಿರುವ ಹೊಸ ಸಮವಸ್ತ್ರ ನೀತಿಯು ಕೇವಲ ಮತಬ್ಯಾಂಕ್ ರಾಜಕಾರಣದ ಭಾಗವಾಗಿದೆ. ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತಗಳನ್ನು ಉತ್ತೇಜಿಸುವ ಮೂಲಕ ಮಕ್ಕಳ ಮನಸ್ಸಿನಲ್ಲಿ ತಾರತಮ್ಯದ ವಿಷಬೀಜ ಬಿತ್ತಲಾಗುತ್ತಿದೆ. ಕೇಂದ್ರೀಯ ವಿದ್ಯಾಲಯಗಳ ನಿಯಮವನ್ನು ಅರೆಬರೆಯಾಗಿ ಉಲ್ಲೇಖಿಸಿ ದಾರಿ ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಜಿಲ್ಲಾ ಬಿಜೆಪಿಯ ಎಚ್ಚರಿಕೆ ಮತ್ತು ಆಗ್ರಹ

ರಾಜ್ಯ ಸರ್ಕಾರವು ಈ ಕೂಡಲೇ ತನ್ನ ಜನವಿರೋಧಿ ಮತ್ತು ಶಿಕ್ಷಣ ವಿರೋಧಿ ಸಮವಸ್ತ್ರ ಮಾರ್ಗಸೂಚಿಗಳನ್ನು ಹಿಂಪಡೆಯಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ಮತ್ತು ಸಮಾನತೆಯನ್ನು ಕಾಪಾಡಬೇಕು. ನೀಟ್ ಪರೀಕ್ಷೆಯ ಹೆಸರಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವುದನ್ನು ನಿಲ್ಲಿಸಿ, ರಾಜ್ಯದ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಮತ್ತು ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಗಮನ ಹರಿಸಬೇಕು. ಈ ಓಲೈಕೆ ರಾಜಕಾರಣವನ್ನು ನಿಲ್ಲಿಸದಿದ್ದರೆ, ವಿದ್ಯಾರ್ಥಿಗಳು ಮತ್ತು ಪೋಷಕರ ಪರವಾಗಿ ಬಿಜೆಪಿ ಜಿಲ್ಲಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಜಗದೀಶ್ ಎನ್.ಕೆ. ಎಚ್ಚರಿಸಿದ್ದಾರೆ.

State Legal Services Authority ಮೇ 30. ಶಿವಮೊಗ್ಗದಲ್ಲಿ ಬಂಜಾರ ಬಂಧುಗಳಿಗಾಗಿ ಕಾನೂನು ಸಾಕ್ಷರತೆ ಮತ್ತು ಬೃಹತ್ ಆರೋಗ್ಯ ತಪಾಸಣಾ ಶಿಬಿರ- ಪ್ರಭುಲಿಂಗ ಕವಳಿಕಟ್ಟಿ

0

State Legal Services Authority ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಜಿಲ್ಲೆಯಲ್ಲಿನ ಬಂಜಾರ ಸಮುದಾಯದ ಬಂಧುಗಳಿಗಾಗಿ ಮೇ 30ರಂದು ನಗರದ ಬಂಜಾರ ಕನ್ವೆನ್ಶನ್‌ಹಾಲ್‌ನಲ್ಲಿ ಕಾನೂನು ಸಾಕ್ಷರತಾ ಕಾರ್ಯಕ್ರಮ ಹಾಗೂ ಬೃಹತ್‌ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲು ಜಿಲ್ಲಾಡಳಿತ ಸಕಲ ಸಿದ್ದತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಬಂಜಾರ ಸಮುದಾಯದ ಬಂಧುಗಳಿಗೆ ಕಾನೂನು ಅರಿವು ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸುವ ಸಂಬಂಧ ಏರ್ಪಡಿಸಲಾಗಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಬಂಜಾರ ಸಮುದಾಯದವರಿಗೆ ಕಾನೂನು ಅರಿವು ಮತ್ತು ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗುವುದಲ್ಲದೇ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ವಿಷಯ ತಜ್ಞರಿಂದ ಮಾಹಿತಿಯುಕ್ತ ಉಪನ್ಯಾಸ ಕಾರ್ಯಾಗಾರಗಳನ್ನು ಆಯೋಜಿಸಲು ಸೂಚಿಸಲಾಗಿದೆ ಎಂದ ಅವರು, ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಮಾಹಿತಿಯುಕ್ತ 15ಕ್ಕೂ ಹೆಚ್ಚಿನ ಸ್ಟಾಲ್‌ಗಳನ್ನು ಸ್ಥಾಪಿಸಲಾಗುವುದು ಎಂದವರು ನುಡಿದರು.
ಇದೇ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಂಡ ಬಂಜಾರ ಬಂಧುಗಳಿಗೆ ವಿವಿಧ ಇಲಾಖಾ ವತಿಯಿಂದ ಒದಗಿಸಲಾಗುವ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುವುದು. ವಿಶೇಷವಾಗಿ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ, ವೃದ್ಧಾಪ್ಯ ವೇತನ, ವಿಕಲಚೇತನರಿಗೆ ಸೌಲಭ್ಯ, ಅರ್ಹರಿಗೆ ಜಾತಿಪ್ರಮಾಣಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಬಂಜಾರ ಸಮುದಾಯದ ಬಂಧುಗಳು ತಮ್ಮ ತಾಂಡಾಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೂ ಪರಿಹಾರೋಪಾಯಗಳನ್ನು ಉಪಸ್ಥಿತ ಅಧಿಕಾರಿಗಳ ಸಮ್ಮುಖದಲ್ಲಿ ಇತ್ಯರ್ಥಗೊಳಿಸಲು ಉದ್ದೇಶಿಸಲಾಗಿದೆ ಎಂದವರು ನುಡಿದರು.
ವಿಶೇಷವಾಗಿ ತಾಂಡಾ ಅಭಿವೃದ್ಧಿ ನಿಗಮದಿಂದ ಬಂಜಾರ ಸಮುದಾಯದವರ ಉಡುಗೆ-ತೊಡುಗೆ, ಸಾಂಪ್ರದಾಯಿಕ ಶೈಲಿಯ ವಸ್ತ್ರಗಳು, ಸಮುದಾಯದವರು ಉತ್ಪಾದಿಸುವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅಟ್ರಾಸಿಟಿ ಕಾಯ್ದೆ, ಅಂತರ್ಜಾತಿ ವಿವಾಹ, ವಿದ್ಯಾರ್ಥಿವೇತನ ಮತ್ತು ಹಾಸ್ಟೆಲ್‌ಸೌಲಭ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅನುಷ್ಠಾನದಲ್ಲಿರುವ ಗರ್ಭಿಣಿ – ಬಾಣಂತಿ ಮಹಿಳೆಯರಿಗೆ ಒದಗಿಸಲಾಗುವ ಸೌಲಭ್ಯಗಳು, ಪೌಷ್ಠಿಕ ಆಹಾರ, ಪೋಷಣ್‌ಅಭಿಯಾನ ಇತ್ಯಾದಿಗಳ ಪರಿಚಯಾತ್ಮಕ ಸ್ಟಾಲ್‌ಗಳನ್ನು ತೆರೆಯಲಾಗುವುದು. ಅಂತೆಯೇ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸೌಲಭ್ಯಗಳು, ಬೀಜ, ಯಂತ್ರೋಪಕರಣ ಸೌಲಭ್ಯಗಳು ಹಾಗೂ ವಿಶೇಷವಾಗಿ ಬಂಜಾರ ಸಮುದಾಯದವರಿಗೆ ಸರಳವಾಗಿ ದೊರೆಯಬಹುದಾದ ಸರ್ಕಾರಿ ಸೌಲಭ್ಯಗಳ ಕುರಿತು ಕಾರ್ಯಕ್ರಮಕ್ಕೆ ಆಗಮಿಸಿದ ಬಂಜಾರ ಸಮುದಾಯದವರಿಗೆ ಮಾಹಿತಿ ದೊರೆಯಲಿದೆ. ಇಷ್ಟೇ ಅಲ್ಲದೇ ಪಂಚಾಯತ್‌ರಾಜ್‌, ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಮೂಲಕ ದೊರೆಯುವ ಸೌಲಭ್ಯಗಳ ಬಗ್ಗೆಯೂ ಮಾಹಿತಿ ದೊರೆಯಲಿದೆ ಎಂದವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ತಜ್ಞ ವೈದ್ಯರುಗಳು ಆಗಮಿಸಿ, ಉಚಿತ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಮಾತ್ರವಲ್ಲ ಆರೋಗ್ಯ ಇಲಾಖೆಯಿಂದ ಅನುಷ್ಠಾನದಲ್ಲಿರುವ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು. ಇಲಾಖಾವಾರು ಯೋಜನೆಗಳ ವಿಷಯ ನಿರ್ವಾಹಕರು ಉಪಸ್ಥಿತರಿದ್ದು ಮಾಹಿತಿ ನೀಡುವರು. ಬಂಜಾರ ಸಮುದಾಯದವರು ಹೆಚ್ಚಾಗಿರುವ ಶಿವಮೊಗ್ಗ, ಶಿಕಾರಿಪುರ ಮತ್ತು ಭದ್ರಾವತಿ ತಾಲೂಕುಗಳಿಂದ ಸಮುದಾಯದವರನ್ನು ಕರೆತರಲು ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಬಸ್ಸುಗಳನ್ನು ನಿಯೋಜಿಸಲು ಸಾರಿಗೆ ನಿಗಮದ ವ್ಯವಸ್ಥಾಪಕರಿಗೆ ಸೂಚಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಬಂಜಾರ ಸಮುದಾಯದ 3-4 ಗ್ರಾಮಗಳನ್ನು ದತ್ತು ತೆಗೆದುಕೊಂಡು, ಕಾನೂನು ಶಿಬಿರ ಮತ್ತು ಸಮೀಕ್ಷೆಯ ಸ್ವರೂಪದ ಪ್ರಕಾರ ಕಾನೂನು ವಿದ್ಯಾರ್ಥಿಗಳು ಮತ್ತಿತರರ ಸೇವೆಗಳನ್ನು ಬಳಸಿಕೊಂಡು ಸಮೀಕ್ಷೆ ನಡೆಸಲೂ ಉದ್ದೇಶಿಸಲಾಗಿದೆ. ಈ ಕಾರ್ಯಕ್ರಮವನ್ನು ಕೆಎಸ್ಎಲ್ಎಸ್ಎಯ ಗೌರವಾನ್ವಿತ ಕಾರ್ಯನಿರ್ವಾಹಕ ಅಧ್ಯಕ್ಷರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಿವಮೊಗ್ಗ ಜಿಲ್ಲೆಯ ಗೌರವಾನ್ವಿತ ಆಡಳಿತ ನ್ಯಾಯಾಧೀಶರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಂಬಂಧಿತ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ಬಂಜಾರ ಸಮುದಾಯದ ಎಲ್ಲಾ ಬಂಧುಗಳು ಸಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮದ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
State Legal Services Authority ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್‌, ಅಪರ ಜಿಲ್ಲಾಧಿಕಾರಿ ಅಭಿಷೇಕ್‌ವಿ., ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮಲ್ಲೇಶಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು

ಧರೆಗುರುಳಿದ ಜಲಸ್ಥಾವರ, ಜನರ ಕುತೂಹಲ ತಣಿಸಿದ ದೃಶ್ಯ

0

ಶಿವಮೊಗ್ಗ ನಗರದ ಎಂಆರ್‌ಎಸ್‌ ವೃತ್ತದಲ್ಲಿದ್ದ ಹಳೆಯ ವಾಟರ್‌ ಟ್ಯಾಂಕ್‌ ಅನ್ನು ಇಂದು ಮಧ್ಯಾಹ್ನ ಕೆಡವಲಾಯಿತು. ಈ ವಾಟರ್‌ ಟ್ಯಾಂಕ್‌ನಿಂದಾಗಿ ಈ ಸರ್ಕಲ್‌ ಡಬಲ್‌ ಟ್ಯಾಂಕ್‌ ಎಂದೇ ಪ್ರಖ್ಯಾತವಾಗಿತ್ತು.
ದಶಕಗಳ ಹಿಂದೆ ನಿರ್ಮಿಸಲಾಗಿದ್ದ ಈ ನೀರಿನ ಟ್ಯಾಂಕ್‌ ಬಳಕೆಗೆ ಯೋಗ್ಯವಿರಲಿಲ್ಲ ಮತ್ತು ಹಳೆಯದಾಗಿದ್ದರಿಂದ ನೀರು ಸೋರಿಕೆಯಾಗುತ್ತಿತ್ತು. ಆದ್ದರಿಂದ, ಸಾರ್ವಜನಿಕರ ಹಿತದೃಷ್ಟಿಯಿಂದ ಇಲ್ಲಿಂದ ಸ್ವಲ್ಪ ದೂರದಲ್ಲಿ ಈಚೆಗೆ ಹೊಸ ಟ್ಯಾಂಕ್‌ ನಿರ್ಮಿಸಲಾಗಿತ್ತು. ಹಳೆಯ ಟ್ಯಾಂಕ್‌ ದುರ್ಬಲಗೊಂಡಿದ್ದರಿಂದ ಅದನ್ನು ಕೆಡವಲು ಅಧಿಕಾರಿಗಳು ನಿರ್ಧರಿಸಿದ್ದರು.
ಇಂದು ಮಧ್ಯಾಹ್ನ ಜೆಸಿಬಿ ಹಾಗೂ ಆಧುನಿಕ ತಂತ್ರಜ್ಞಾನ ಬಳಸಿ ಹಳೆಯ ಟ್ಯಾಂಕ್‌ ಅನ್ನು ಕೆಡವಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಲ್‌ನಲ್ಲಿ ಕೆಲವು ಹೊತ್ತು ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಸರ್ಕಲ್‌ನ ಸುತ್ತಲೂ ನಿಂತು ನೂರಾರು ಜನರು ಟ್ಯಾಂಕ್‌ ಉರುಳುವ ದೃಶ್ಯವನ್ನು ಕುತೂಹಲದಿಂದ ವೀಕ್ಷಿಸಿದರು. ಈ ಕಾರ್ಯಾಚರಣೆಯು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಈಗ ಸಂಚಾರ ಸುಗಮವಾಗಿದೆ.

ಎಸ್ ಪಿಪಿ ಮತ್ತು ಟಿಎಸ್ ಪಿ ಯೋಜನೆಯಡಿ ಎಸ್ ಟಿ / ಎಸ್ ಸಿ‌ ಪಂಗಡದ ರೈತರಿಗೆ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸೌಲಭ್ಯ: ಅರ್ಜಿ ಸಲ್ಲಿಸಲು ಮೆಸ್ಕಾಂ ಪ್ರಕಟಣೆ

0

ಮೆಸ್ಕಾಂ ವ್ಯಾಪ್ತಿಯ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಉಪ-ವಿಭಾಗದ ಅಡಿಯಲ್ಲಿ ಬರುವ ಎಸ್‌ಸಿ ಮತ್ತು ಎಸ್‌ಟಿ ಪಂಗಡದ ರೈತರಿಗೆ ಕೃಷಿ ಪಂಪ್‌ಸೆಟ್‌ಗಳಿಗೆ 2026-27 ನೇ ಸಾಲಿಗೆ ವಿದ್ಯುತ್ ಸೌಲಭ್ಯ ಒದಗಿಸಲು ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯ ಪ್ರಯೋಜನ ಪಡೆಯಲು ಇಚ್ಛಿಸುವ ಅರ್ಹ ರೈತರು ಅಗತ್ಯ ದಾಖಲೆಗಳಾದ ಇತ್ತೀಚಿನ ಪಹಣಿ ಪ್ರತಿ,
ಜಾತಿ ಪ್ರಮಾಣ ಪತ್ರ (ಆರ್ ಡಿ ಸಂಖ್ಯೆ ನಮೂದಿಸಿರಬೇಕು), ಆಧಾರ ಕಾರ್ಡ್ ಪ್ರತಿ,
ಕೊಳವೆ ಬಾವಿ ಇರುವ ಜಾಗದಲ್ಲಿ ನಿಂತಿರುವ ಫಲಾನುಭವಿಯ ಜಿ.ಪಿ.ಎಸ್ ಫೋಟೋ,
ರೇಷನ್ ಕಾರ್ಡ್ ಪ್ರತಿ (ಬಿಪಿಎಲ್),
ಆದಾಯ ಪ್ರಮಾಣ ಪತ್ರ, ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು,
ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಪ್ರತಿಯೊಂದಿಗೆ
ಜೂನ್ 15 ರೊಳಗಾಗಿ ಶಿರಾಳಕೊಪ್ಪ ಮೆಸ್ಕಾಂ ಉಪ-ವಿಭಾಗದ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಈ ಹಿಂದೆ ಗಂಗಾ ಕಲ್ಯಾಣ ಮತ್ತು ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಈಗಾಗಲೇ ವಿದ್ಯುತ್ ಸಂಪರ್ಕ ಪಡೆದಿರುವವರು ಈ ಯೋಜನೆಗೆ ಅರ್ಹರಿರುವುದಿಲ್ಲ. ಸಲ್ಲಿಕೆಯಾದ ಅರ್ಜಿಗಳನ್ನು ತಾಂತ್ರಿಕ ಕಾರ್ಯಸಾಧ್ಯತೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಆಯ್ಕೆ ಸಮಿತಿಯ ಅನುಮೋದನೆಗೆ ಅನುಗುಣವಾಗಿ ಆದ್ಯತೆ ಮೇರೆಗೆ ಪರಿಗಣಿಸಲಾಗುವುದು ಎಂದು ಶಿರಾಳಕೊಪ್ಪ ಮೆಸ್ಕಾಂ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ತಿಳಿಸಿದ್ದಾರೆ.