Wednesday, November 18, 2026
Wednesday, November 18, 2026
Home Blog Page 965

Lok Sabha Election ಪ್ರಾಥಮಿಕ ಮಾಹಿತಿಯಂತೆ ಜಿಲ್ಲೆಯಲ್ಲಿ ಶೇ78 ರಷ್ಟು ಮತದಾನ- ಗುರುದತ್ತ ಹೆಗಡೆ

0

Lok Sabha Election ಪ್ರಾಥಮಿಕ ಮಾಹಿತಿಯಂತೆ ಜಿಲ್ಲೆಯಲ್ಲಿ ಶೇ78 ರಷ್ಟು ಮತದಾನ– ಗುರುದತ್ತ ಹೆಗಡೆ ಶಿವಮೊಗ್ಗ ಲೋಕಸಭಾ ಚುನಾವಣೆ ಹಿನ್ನೆಲೆ
ಶಿವಮೊಗ್ಗ ಡಿಸಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗುರುದತ್ ಹೆಗಡೆ ಅವರು ಮಾದ್ಯಮ ಮಿತ್ರರೊಂದಿಗೆ ಮಾತನಾಡಿದರು.

ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ.
ಕೆಲವೊಂದು ಕಡೆ ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿ ಶಾಂತಿಯತವಾಗಿ ಮತದಾನವಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ
ಶೇ.78 ರಷ್ಟು ಮತದಾನವಾಗಿದೆ ಎಂದು ತಿಳಿಸಿದರು.

ಕಳೆದ 2019ರಲ್ಲಿ ನಡೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇಕಡ 76 ರಷ್ಟು ಮತದಾನವಾಗಿತ್ತು.
ಈ ಬಾರಿ ಉತ್ತಮವಾದ ಸಂಖ್ಯೆಯಲ್ಲಿ ಮತದಾನ ನಡೆದಿದೆ.ಬಿಸಿಲನ್ನು ಲೆಕ್ಕಿಸದೆ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.ಶಾಂತಿಯುವಾದ ಮತದಾನವಾಗಿದೆ ಎಂದರು.

Lok Sabha Election ಪ್ರಾಥಮಿಕ ಮಾಹಿತಿಯಂತೆ ಜಿಲ್ಲೆಯಲ್ಲಿ ಶೇ78 ರಷ್ಟು ಮತದಾನ- ಗುರುದತ್ತ ಹೆಗಡೆ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ
40 ಕಡೆ ವಿವಿ ಪ್ಯಾಟ್ ಗಳನ್ನು ಬದಲಾಯಿಸಿದ್ದೇವೆ.ಹಾಗೆಯೇ ವಿವಿಧ
12 ಕಡೆ ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್ ಬದಲಾಯಿಸಿದ್ದೇವೆ.
ಮತದಾನ ಪ್ರಕ್ರಿಯೆ ಮುಗಿದಿರುವುದರಿಂದ ಮತ ಯಂತ್ರಗಳನ್ನು ಭದ್ರತೆಯಲ್ಲಿ ಮತ ಎಣಿಕೆ ಕೇಂದ್ರಕ್ಕೆ ತರಲಾಗುತ್ತದೆ ಎಂದು ಹೇಳಿದರು.

ಜಿಪಿಎಸ್ ಯುಳ್ಳ ವಾಹನದಲ್ಲಿ ಪೊಲೀಸ್ ಭದ್ರತೆಯಲ್ಲಿ ಮತ ಯಂತ್ರಗಳನ್ನ ತರಲಾಗುತ್ತದೆ‌.
ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭೆಯ ಮತಯಂತ್ರಗಳು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಮತ ಎಣಿಕೆ ಕೇಂದ್ರಕ್ಕೆ ಬರಲಿವೆ.ಮತ ಎಣಿಕೆ ಕೇಂದ್ರದಲ್ಲಿ ಮೂರು ಹಂತದ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಮತ ಎಣಿಕೆ ಕೇಂದ್ರದ ವ್ಯವಸ್ಥೆಯನ್ನು ಸಿಸಿ ಕ್ಯಾಮೆರಾ ಮೂಲಕ ಸರಿಹಡಿಯಲಾಗುತ್ತದೆ.
ವಿವಿಧ ಪಕ್ಷದ ಅಭ್ಯರ್ಥಿಗಳು ಹಾಗೂ ಅವರಿಂದ ಅನುಮತಿ ಪಡೆದ ಅಧಿಕೃತ ಏಜೆಂಟರು ಇದನ್ನು ಬಂದು ಪರಿಶೀಲಿಸಬಹುದು.
ಮತದಾನ ಯಶಸ್ವಿಯಾಗಲು ಜಿಲ್ಲಾ ಸ್ವೀಟ್ ಸಮಿತಿ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

Karnataka School Examination and Assessment Board ಮೇ 9 ರಂದು ಎಸ್ಎಸ್ಎಲ್ ಸಿ ಪರೀಕ್ಷೆ-1 ರ ಫಲಿತಾಂಶ

0

Karnataka School Examination and Assessment Board 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವು ಮೇ 9ರ ಬೆಳಗ್ಗೆ 10.30ಕ್ಕೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, ಮಾರ್ಚ್/ಏಪ್ರಿಲ್ 2024ರ ಎಸ್.ಎಸ್.ಎಲ್.ಸಿ ಪರೀಕ್ಷೆ-1 ಅನ್ನು ದಿನಾಂಕ: 25.03.2024 ರಿಂದ 06.04.2024 ರವರೆಗೆ ನಡೆಸಲಾಯಿತು.

Karnataka School Examination and Assessment Board ಎಲ್ಲ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿರುತ್ತದೆ. ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಿಸುವ ಸಂಬಂಧ ದಿನಾಂಕ: 09.05.2024 ರಂದು ಬೆಳಗ್ಗೆ 10.30ಕ್ಕೆ ಮಲ್ಲೇಶ್ವರದಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಸುದ್ದಿಗೋಷ್ಠಿಯನ್ನು ಕರೆಯಲಾಗಿದೆ ಎಂದು ಹೇಳಿದೆ.

Election ಒಂದು ಮತದ ಮಹಿಮೆ ತಿಳಿಯಿರಣ್ಣಾ… ಸಾಮಾಜಿಕ ಜಾಲತಾಣದ ಮಾಹಿತಿ

0

Election ಮತದಾನದ ಬಗ್ಗೆ ಉದಾಸೀನತೆ (ನಿರ್ಲಕ್ಷ್ಯ) ಮಾಡುವವರಿಗೆ ಮತ್ತು ಅದೇ ದಿನ ಕಾರ್ಯಕ್ರಮ ಇಟ್ಟುಕೊಳ್ಳವವರಿಗೆ ಒಂದು ವಿಶೇಷ ನವಿ.

(1)ಮತದಾನ ಮಾಡಬೇಕು
2008 ರಲ್ಲಿ, ಸಿಪಿ ಜೋಶಿ ಅವರು ರಾಜಸ್ಥಾನದ ನಾಥದ್ವಾರ ಕ್ಷೇತ್ರದಿಂದ ಕೇವಲ ಒಂದು ಮತದಿಂದ ಸೋತರು, ಅವರ ಚಾಲಕನಿಗೆ ಮತದಾನ ಮಾಡಲು ಸಮಯ ಸಿಗಲಿಲ್ಲ.

(2) ಮತದಾನ ಮಾಡಬೇಕು
ಏಕೆಂದರೆ 1776ರಲ್ಲಿ ಅಮೆರಿಕದಲ್ಲಿ ಇನ್ನೊಂದು ಮತವನ್ನು ಪಡೆಯುವ ಮೂಲಕ ಜರ್ಮನ್ ಭಾಷೆಯ ಬದಲಿಗೆ ಇಂಗ್ಲಿಷ್ ಅಧಿಕೃತ ಭಾಷೆಯಾಯಿತು.

(3) ಮತದಾನ ಮಾಡಬೇಕು
ಏಕೆಂದರೆ 1998 ರಲ್ಲಿ ವಾಜಪೇಯಿ ಸರ್ಕಾರ ಕೇವಲ ಒಂದು ಮತದಿಂದ ಪತನವಾಯಿತು.

(4)ಮತದಾನ ಮಾಡಬೇಕು
ಏಕೆಂದರೆ 1917 ರಲ್ಲಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸರ್ದಾರ್ ಪಟೇಲ್ ಕೇವಲ ಒಂದು ಮತದಿಂದ ಸೋತರು.

Election (5)ಮತದಾನ ಮಾಡಬೇಕು
ಏಕೆಂದರೆ 1923 ರಲ್ಲಿ, ಒಂದು ಹೆಚ್ಚಿನ ಮತವನ್ನು ಪಡೆಯುವ ಮೂಲಕ, ಹಿಟ್ಲರ್ ನಾಜಿ ಪಕ್ಷದ ಮುಖ್ಯಸ್ಥನಾದನು ಮತ್ತು ಹಿಟ್ಲರ್ ಯುಗವು ಪ್ರಾರಂಭವಾಯಿತು.

(6)ಮತದಾನ ಮಾಡಬೇಕು
ಏಕೆಂದರೆ 1875 ರಲ್ಲಿ, ರಾಜಪ್ರಭುತ್ವವನ್ನು ಫ್ರಾನ್ಸ್‌ನಲ್ಲಿ ಕೇವಲ ಒಂದು ಮತದೊಂದಿಗೆ ಗಣರಾಜ್ಯದಿಂದ ಬದಲಾಯಿಸಲಾಯಿತು.

(7)ಮತದಾನ ಮಾಡಬೇಕು
ಏಕೆಂದರೆ ಒಂದು ವೋಟು ಹಾಕದ ನಿಮ್ಮಿಂದ ದೇಶ ಹಾಳು ಮಾಡುವವರಿಗೆ ಅವಕಾಶ ಸಿಗುತ್ತದೆ…

B.Y.Raghavendra ಬಿವೈಆರ್ ಗೆಲುವಿನ ಓಟ ನಿಲ್ಲಿಸಲಾಗದು- ಜೆ.ಎಸ್.ಚಿದಾನಂದ ಗೌಡ

0

B.Y.Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಗೆಲುವು ನಿಶ್ಚಿತವಾಗಿದ್ದು, ಸೊರಬ ವಿಧಾನಸಭಾ ಕ್ಷೇತ್ರದಲ್ಲೂ ಬಹುಮತ ದೊರೆಯಲಿದೆ ಎಂದು ಬಿಜೆಪಿ ಮುಖಂಡ ಹಾಗೂ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾರ್ಯಕರ್ತರೇ ಜೀವಾಳವಾದ ಬಿಜೆಪಿಯಲ್ಲಿ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಲಾಯಿತು. ನರೇಂದ್ರ ಮೋದಿಯವರು ಪುನಃ ಪ್ರಧಾನಿಯಾಗಬೇಕು. ಬಿ.ವೈ. ರಾಘವೇಂದ್ರ ಅವರು ಕ್ಷೇತ್ರದ ಸಂಸದರಾಗಬೇಕು ಎನ್ನುವ ದೃಢ ಸಂಕಲ್ಪದೊಂದಿಗೆ ಜನತೆ ಬಿಜೆಪಿಗೆ ಹೆಚ್ಚಿನ ಬಹುಮತ ಸೂಚಿಸಿದ್ದಾರೆ. ಕ್ಷೇತ್ರದ ಆನವಟ್ಟಿ, ಜಡೆ, ಕಸಬಾ ಹೋಬಳಿಯಲ್ಲಿ ಅತ್ಯಧಿಕ ಮತಗಳು ಬಿಜೆಪಿಗೆ ಒಲಿದಿದೆ. ಎದುರಾಳಿ ಪಕ್ಷದವರ ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೇ ಮತದಾರರು ಬಿಜೆಪಿಗೆ ಮತ ನೀಡಿದ್ದಾರೆ ಎಂದಿದ್ದಾರೆ.
ಜಿಲ್ಲೆಯಲ್ಲಿ ರಾಘವೇಂದ್ರ ಅವರು ಸುಮಾರು ೨.೫ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವ ನಿರೀಕ್ಷೆ ಇದ್ದು, ತಾಲೂಕಿನಲ್ಲಿ ಸುಮಾರು ೩೫ ಸಾವಿರಕ್ಕೂ ಅಧಿಕ ಮತಗಳಿಂದ ಮುನ್ನೆಡೆ ಸಾಧಿಸಲಿದ್ದಾರೆ. ತಾಲೂಕಿನಲ್ಲಿ ತಾವು ಪಕ್ಷದ ಪ್ರಚಾರದ ಉದ್ದೇಶದಿಂದ ಪ್ರವಾಸ ಕೈಗೊಂಡ ವೇಳೆಯಲ್ಲಿ ಈ ವಿಷಯವನ್ನು ಗಮನಿಸಿದ್ದೇನೆ.

B.Y.Raghavendra ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತ್ತು ಯುವ ಮತದಾರರು ದೇಶದ ಸುರಕ್ಷತೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿರುವುದು ಬೆಳಕಿಗೆ ಬಂದಿದೆ. ಬಿ.ಎಸ್. ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾದ ತರುವಾಯ ಜಿಲ್ಲೆಯ ಚಿತ್ರಣವೇ ಬದಲಾಯಿತು. ಬಿ.ವೈ. ರಾಘವೇಂದ್ರ ಅವರು ಸಂಸದರಾದ ತರುವಾಯ ಜಿಲ್ಲೆಯಲ್ಲಿ ಅಭಿವೃದ್ಧಿ ಶಕೆ ಆರಂಭವಾಗಿರುವುದನ್ನು ಮತದಾರರು ಅರಿತಿದ್ದಾರೆ. ಈ ನಿಟ್ಟಿನಲ್ಲಿ ಬಿ.ವೈ. ರಾಘವೇಂದ್ರ ಅವರ ಗೆಲುವಿನ ಓಟವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಬಿಜೆಪಿಯ ಅವಶ್ಯಕತೆ ಮತ್ತು ಗೆಲುವಿನ ಕುರಿತು ಪ್ರತಿಯೊಬ್ಬ ಮತದಾರರ ಮನೆ ಮತ್ತು ಮನಗಳಿಗೆ ತಲುಪುವಂತೆ ಕಾರ್ಯಕರ್ತರು ಕಾರ್ಯನಿರ್ವಹಿಸಿದ್ದಾರೆ. ಬಿ.ವೈ. ರಾಘವೇಂದ್ರ ಅವರು ಪುನಃ ಸಂಸದರಾಗುವುದು ಶತಸಿದ್ಧ ಎಂದಿರುವ ಅವರು, ಬಿಜೆಪಿಗಾಗಿ ಹಗಲಿರುಳು ಶ್ರಮದಿಸಿದ ಕಾರ್ಯಕರ್ತರಿಗೂ ಮತ್ತು ಮತ ನೀಡಿದ ಮತದಾರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Blood Donation 63 ನೇ ಬಾರಿ ರಕ್ತದಾನ ಮಾಡಿದ ಧರ್ಮೇಂದ್ರ ಉಡುಗಣಿ

0

Blood Donation ಶಿವಮೊಗ್ಗ ನಗರದ ಎಸ್ ಸಿದ್ಧಯ್ಯ ರಸ್ತೆಯ ಬೆನಕ ಗಾರ್ಮೆಂಟ್ಸ್ ಮಾಲೀಕರಾದ ಧರ್ಮೇಂದ್ರ ಉಡುಗಣಿ ಅವರು ರೋಗಿಯೋರ್ವ ರಿಗೆ ರಕ್ತದಾನ ಮಾಡಿದ್ದಾರೆ. ಇದು ಇವರ 63ನೇ ರಕ್ತದಾನವಾಗಿದೆ.

Rotary Shivamogga ಮತದಾನಕ್ಕೆ ಮಾದರಿಯಾಗಿ ಸಹಕರಿಸಿದ ಮಾಲೀಕರು

0

Rotary Shivamogga ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಡಿ.ಕಿಶೋರ್‌ ಕುಮಾರ್‌ ಅವರ ತಾಯಿ ಶಾರದಮ್ಮ ( 86 ) ಬೆಡ್ ರಿಟರ್ನ್ ಪೇಷಂಟ್ ಆಗಿದ್ದರೂ ಶಿವಮೊಗ್ಗ ನಗರದಿಂದ ತೀರ್ಥಹಳ್ಳಿ ತಾಲೂಕು ಆರಗಾ ಗ್ರಾಮಕ್ಕೆ ಆಂಬುಲೆನ್ಸ್ ನಲ್ಲಿ ತೆರಳಿ ಜವಾಬ್ದಾರಿಯುತವಾಗಿ ಮತದಾನದ ಹಕ್ಕು ಚಲಾಯಿಸಿ ಮಾದರಿಯಾಗಿದ್ದಾರೆ.

Rotary Shivamogga ಡಿ.ಕಿಶೋರ್‌ ಕುಮಾರ್‌ ಅವರು ಶಿವಮೊಗ್ಗ ನಗರದ ನೆಪ್ಚುನ್ ಆಟೋ ವರ್ಕ್ಸ್ ಮಾಲೀಕರಾಗಿದ್ದು, ಚುನಾವಣೆಯ ದಿನ ಎಲ್ಲರೂ ಮತ ಚಲಾಯಿಸಬೇಕು ಹಾಗೂ ಎಲ್ಲ ವ್ಯಕ್ತಿಗಳ ಮತ ಹಾಕುವ ಹಕ್ಕನ್ನು ಪಾಲಿಸಬೇಕೆಂದು ಸಂಸ್ಥೆಯಲ್ಲಿ ಕೆಲಸ ಮಾಡುವ ಎಲ್ಲಾ ಕೆಲಸಗಾರರಿಗೂ ರಜೆ ಘೋಷಣೆ ಮಾಡಿದ್ದರು.

ಮತ ಚಲಾಯಿಸಲು ಪ್ರೋತ್ಸಾಹಿಸಿ ಎಲ್ಲಾ ಕೆಲಸಗಾರರು ಮತ ಚಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

Klive Special Article ವಿಶೇಷ ಸಮೀಕ್ಷಾ ವರದಿ: ಶೇಷಗಿರಿ.

0

ಮತದಾನದ ಬಳಿಕ ಹೀಗೊಂದು ಲೆಕ್ಕಾಚಾರ….

ಕಾಂಗ್ರೆಸ್ ಗೆಲುವಿನ ಸಾಧ್ಯತೆಯೇ ಹೆಚ್ಚು…

Klive Special Article ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ ಶೇ. 62ರಷ್ಟು ಮತದಾನವಾಗಿದೆ. ಅಂದರೆ 21 ಲಕ್ಷ ಮತದಾರರಲ್ಲಿ 13 ಲಕ್ಷ ಮತಗಳಷ್ಟು ಚಲಾವಣೆಯಾಗಿದೆ.
ಒಂದು ಲೆಕ್ಕಾಚಾರದ ಪ್ರಕಾರ ಮುಸ್ಲಿಮರು ಶೇ. 65-70ರಷ್ಟು ಮತದಾನ ಮಾಡಿದ್ದು ಸಂಪೂರ್ಣವಾಗಿ ಕಾಂಗ್ರೆಸ್‌ಗೆ ಹಾಕಿರುತ್ತಾರೆ. ಅಂದರೆ ಅಲ್ಲಿಗೆ ಕಾಂಗ್ರೆಸ್‌ಗೆ 3,10 ಲಕ್ಷ ಮತಗಳು ಬಿದ್ದಂತಾಯ್ತು. ಇನ್ನು ಎಸ್‌ಸಿ (ಬಲಗೈ) 2 ಲಕ್ಷ ಮತದಾರರು ಇದ್ದು, ಇವರಲ್ಲಿ ಶೇ. 70ರಷ್ಟು ಮತದಾನ ಮಾಡಿದ್ದು, ಅವರಲ್ಲಿ ಶೇ. 95%ರಷ್ಟು ಜನ ಕಾಂಗ್ರೆಸ್‌ಗೆ ಹಾಕಿರುತ್ತಾರೆ. ಅಂದರೆ ಅಲ್ಲಿ 1.30 ಲಕ್ಷ ಮತಗಳು ಕಾಂಗ್ರೆಸ್‌ಗೆ ಬಂದಂತಾಯ್ತು.
ಕೋಲಿ-ಕಬ್ಬಲಿಗರು 2.50 ಲಕ್ಷ ಮತದಾರರಿದ್ದು, ಅವರಲ್ಲಿ ಶೇ. 60 ಮತದಾನ ಮಾಡಿದ್ದು, ಆ ಪೈಕಿ ಶೇ. 75ರಷ್ಟು ಜನರು ಕಾಂಗ್ರೆಸ್‌ಗೆ ಹಾಕಿರುತ್ತಾರೆ. ಅಂದರೆ ಅಲ್ಲಿ 1.10 ಲಕ್ಷ ಮತಗಳು ಕಾಂಗ್ರೆಸ್‌ಗೆ ಬಂದಂತಾಯ್ತು.
ಲಿಂಗಾಯತರು 4.60 ಲಕ್ಷ ಇದ್ದು, ಇವರಲ್ಲಿ ಶೇ. 65ರಷ್ಟು ಮತದಾನ ಮಾಡಿದ್ದು, ಆ ಪೈಕಿ ಕಾಂಗ್ರೆಸ್‌ಗೆ 25ರಷ್ಟು ಮತ ಹಾಕಿರುತ್ತಾರೆ. ಅಂದರೆ 75 ಸಾವಿರ ಮತಗಳು ಬಂದAತಾಯ್ತು.
ಬAಜಾರ ಮತದಾರರು 1.40 ಲಕ್ಷ ಇದ್ದು, ಇವರಲ್ಲಿ ಶೇ. 70ರಷ್ಟು ಮತದಾನ ಮಾಡಿದ್ದು, 95 ಸಾವಿರ ಮತದಾರರು ಮತದಾನ ಮಾಡಿದ್ದು, ಇದರಲ್ಲಿ ಶೇ. 10ರಷ್ಟು ಅಂದರೆ 15 ಸಾವಿರ ಮತದಾರರು ಕಾಂಗ್ರೆಸ್‌ಗೆ ಹಾಕಿರುತ್ತಾರೆ.
ಮಾದಿಗ ಮತದಾರರು 1.50 ಲಕ್ಷ ಇದ್ದು, ಇವರಲ್ಲಿ ಶೇ. 60ರಷ್ಟು ಮತದಾನ ಮಾಡಿದ್ದು, ಅವರಲ್ಲಿ ಶೇ. 40ರಷ್ಟು ಕಾಂಗ್ರೆಸ್‌ಗೆ ಮತದಾನ ಮಾಡಿದ್ದು, 35 ಸಾವಿರ ಕಾಂಗ್ರೆಸ್‌ಗೆ ಹಾಕಿರುತ್ತಾರೆ.

Klive Special Article ಭೋವಿ-ವಡ್ಡರು, ಕುರುಬರು, ವಿಶ್ವಕರ್ಮ, ರೆಡ್ಡಿ, ಕೊರಮ-ಕೊರಚ, ಡೋರ, ವಾಲ್ಮೀಕಿ, ಮಡಿವಾಳ, ಹೂಗಾರ, ಸವಿತಾ-ಹಡಪದ, ಕ್ಷತ್ರಿಯ, ಮರಾಠ,
ಮತ್ತಿತರ ಸಮುದಾಯಗಳಿಂದ ಕನಿಷ್ಠ ತಲಾ 5-10 ಸಾವಿರ ಮತ ಬಂದರೂ ಸಾಕು ಕಾಂಗ್ರೆಸ್ ಗೆಲ್ಲಲಿದೆ. ಹೀಗೆಯೇ ಆಗಲಿದೆ.

Manasa Trust ಮಾನಸ ಟ್ರಸ್ಟ್ & ಅಡ್ವಾನ್ಸ್ಡ್ ಸ್ಕಿಲ್ ಅಕಾಡೆಮಿ ಒಡಂಬಡಿಕೆಗೆ ಸಹಿ

0

Manasa Trust ಕೌಶಲ್ಯ ತರಬೇತಿ ನೀಡುವ ಆಶಯದಿಂದ ಅಡ್ವಾನ್ಸ್ಡ್‌ ಸ್ಕಿಲ್ ಅಕಾಡೆಮಿ ಹಾಗೂ ಮಾನಸ ಟ್ರಸ್ಟ್ ಒಡಂಬಡಿಕೆ ಮಾಡಿಕೊಂಡಿದೆ. ಮಾನಸ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಕೌಶಲ್ಯವೃದ್ಧಿಗೆ ಅಗತ್ಯ ತರಬೇತಿ ನೀಡುವುದು ಒಡಂಬಡಿಕೆಯ ಪ್ರಮುಖ ಆಶಯವಾಗಿದೆ.
ಮಾನಸ ಟ್ರಸ್ಟ್ ವತಿಯಿಂದ ಮ್ಯಾನೇಜಿಂಗ್ ಟ್ರಸ್ಟಿ ಡಾ. ರಜನಿ ಪೈ, ಪ್ರೀತಿ ವಿ ಶಾನಭಾಗ್ ಹಾಗೂ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಅಧ್ಯಕ್ಷ ಎನ್.ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್ ಒಡಂಬಡಿಕೆ ಸಹಿ ಹಾಕಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಸ್ಕಿಲ್ ಅಕಾಡೆಮಿ ವತಿಯಿಂದ ಮಾನಸ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಅಗತ್ಯ ಕೌಶಲ್ಯಗಳನ್ನು ತರಬೇತಿ ನೀಡುವುದು ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡುವುದು ಪ್ರಮುಖ ಉದ್ದೇಶವಾಗಿದೆ. ಇದರಿಂದ ಉತ್ತಮ ಪರಿಣಾಮಗಳನ್ನು ವೃತ್ತಿಯಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.
Manasa Trust ಸ್ಕಿಲ್ ಅಕಾಡೆಮಿಯು ಈಗಾಗಲೇ ವಿವಿಧ ಶಿಕ್ಷಣ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಯುಗಕ್ಕೆ ಪೂರಕವಾಗಿ ವೃತ್ತಿಗೆ ಅವಶ್ಯವಿರುವ ಕೌಶಲ್ಯಗಳನ್ನು ಕಲಿಸುತ್ತಿದೆ. ಇದರೊಂದಿಗೆ ಉದ್ಯೋಗ ನೀಡುವ ಸಂಸ್ಥೆಗಳೊಂದಿಗೆಯು ಸ್ಕಿಲ್ ಅಕಾಡೆಮಿ ಕಾರ್ಯ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಶಿಕ್ಷಣ ಪೂರೈಕೆ ನಂತರ ಉದ್ಯೋಗ ಅವಕಾಶ ಕಲ್ಪಿಸಿಕೊಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಮಾನಸ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ರಜನಿ ಪೈ ಅವರು ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಒಡಂಬಡಿಕೆಯು ಅನುಕೂಲವಾಗಲಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಒಡಂಬಡಿಕೆ ವೇಳೆಯಲ್ಲಿ ಸ್ಕಿಲ್ ಅಕಾಡೆಮಿ ಸಿಇಒ ಸವಿತಾ ಮಾಧವ್, ಕಟೀಲ್ ಅಶೋಕ್ ಪೈ ಮೆಮೋರಿಯಲ್ ಕಾಲೇಜ್ ಡಾ. ಸಂಧ್ಯಾ ಕಾವೇರಿ, ಮಾನಸ ಗ್ರೂಪ್ ಆಡಳಿತಾಧಿಕಾರಿ ಪ್ರೊ. ಆರ್.ಕೆ.ಬಾಳಿಗ ಉಪಸ್ಥಿತರಿದ್ದರು.

World Red Cross Day ರಕ್ತದಾನದಿಂದ ಬುದ್ಧಿ ಚುರುಕು. ದೇಹ ಸದೃಢ- ಡಾ.ದಿನೇಶ್

0

World Red Cross Day ಜಗತ್ತಿನಲ್ಲಿ ರಕ್ತದಾನಕ್ಕಿಂತ ಅನ್ಯದಾನ ಬೇರೆ ಇಲ್ಲ. ರಕ್ತವನ್ನು ಕೃತಕವಾಗಿ ಉತ್ಪಾದನೆ ಮಾಡಲು ಆಗುವುದಿಲ್ಲ ರಕ್ತದಾನದಿಂದ ಬುದ್ಧಿ ಚುರುಕಾಗುವುದರ ಜೊತೆಗೆ ಸದಾ ಸದೃಢರಾಗಿ ಆರೋಗ್ಯವಾಗಿರುತ್ತಾರೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾಕ್ಟರ್ ದಿನೇಶ್ ಅವರು ಅಭಿಮತ ವ್ಯಕ್ತಪಡಿಸಿದರು.

ಸಂಜೀವಿನಿ ರೆಡ್ ಕ್ರಾಸ್, ರಕ್ತ ನಿಧಿಯಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ಹೆನ್ರಿ ಡೊನಾಲ್ಡ್ ರವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಳ್ಳಲಾದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಅವರು ಯುದ್ಧಕಾಲದಲ್ಲಿ ನಡೆದ ಘೋರ ದುರಂತವನ್ನು ನೋಡಿ ರಕ್ತದ ಕೊರತೆಯನ್ನು ನೀಗಿಸಲು ರೆಡ್ ಕ್ರಾಸ್ ಸಂಸ್ಥೆಯನ್ನ ಪ್ರಾರಂಭ ಮಾಡಿದರು ಇದರಿಂದ ಕೋಟ್ಯಾಂತರ ಜನರಿಗೆ ಅನುಕೂಲವಾಯಿತು. ಮನುಕುಲದ ಸೇವೆಯಲ್ಲಿ ಭಾರತೀಯ ಕ್ರಾಸ್ ಸಂಸ್ಥೆ ಸದಾ ಮುಂಚೂಣಿಯಲ್ಲಿದೆ.ಈ ನಿಟ್ಟಿನಲ್ಲಿ ಎಲ್ಲಾ ಯುವಕರು ರಕ್ತದಾನ ಮಾಡುವುದರ ಮುಖಾಂತರ ರಕ್ತದ ಕೊರತೆಯನ್ನು ನೀಗಿಸಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಜೆಸಿಐ ಶಿವಮೊಗ್ಗ ಬರವಸೆ ಸಂಸ್ಥೆಯ ಅಧ್ಯಕ್ಷರಾದ ಲಕ್ಷ್ಮಿಕಾಂತ್ ರವರು ಮಾತನಾಡುತ್ತಾ ಸಾವಿರಾರು ವರ್ಷಗಳ ಮನುಕುಲದ ಸೇವೆಯಲ್ಲಿ ತೊಡಗಿಕೊಂಡಿರುವ ರೆಡ್ ಕ್ರಾಸ್ ಸಂಸ್ಥೆ ಇಂದಿಗೂ ಸದಾ ಸೇವೆ ಸಲ್ಲಿಸುತ್ತಿದೆ ಈ ನಿಟ್ಟಿನಲ್ಲಿ ಇವತ್ತು ವಿಶ್ವ ರೆಡ್ ಕ್ರಾಸ್ ಸಂಸ್ಥೆಯ ದಿನಾಚರಣೆ ಅಂಗವಾಗಿ ನಮ್ಮ ಎಲ್ಲಾ ಸದಸ್ಯರು ಸಾರ್ವಜನಿಕರು ರಕ್ತದಾನ ಮಾಡಿ ಸಮಾಜದಲ್ಲಿ ಪವಿತ್ರ ದಾನಿಗಳಾದರು.

World Red Cross Day 112 ಬಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್ ಅವರು ಮಾತನಾಡುತ್ತಾ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮನುಕುಲಕ್ಕೆ ವಿಶೇಷವಾದ ಸೇವೆಯನ್ನ ಸಲ್ಲಿಸುತ್ತಾ ಬಂದಿದೆ ಸುನಾಮಿ ಹಾಗೂ ಕರೋನಾದಲ್ಲಿ ಮಾಡಿದ ಸೇವೆ ಅವಿಸ್ಮರಣೀಯ ಇಂದು ಸಾಕಷ್ಟು ರಕ್ತದ ಕೊರತೆ ಇದೆ ಅದನ್ನು ನೀಗಿಸಲು ರಕ್ತದಾನ ಒಂದೇ ದಾರಿ ಆದರಿಂದ ಎಲ್ಲರೂ ರಕ್ತದಾನ ಮಾಡಿ ಸಮಾಜದಲ್ಲಿ ನಿಜವಾದ ಹೀರೋಗಳ ಆಗಬೇಕೆಂದು ಮನವಿ ಮಾಡಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರದ ಶ್ರೀ ವಿಜಯಕುಮಾರ್ ಅವರು ಮಾತನಾಡುತ್ತಾ. ನಾನು 47 ಬಾರಿ ರಕ್ತದಾನ ಮಾಡಿದ್ದೇನೆ ರಕ್ತದಾನ ಮಾಡುವುದರಿಂದ ಯಾವುದೇ ತರಹದ ದೇಹಕ್ಕೆ ಆರೋಗ್ಯ ಹಾಳಾಗುವುದಿಲ್ಲ ಮೂಢನಂಬಿಕೆಯಿಂದ ಹೊರ ಬಂದು ಎಲ್ಲರೂ ರಕ್ತದಾನ ಮಾಡಿ ರಥದಾನ ಮಾಡುವುದರಿಂದ ಹೃದಯಘಾತ ಕಡಿಮೆಯಾಗುತ್ತದೆ ಸದಾ ನವನವಿಕೆ ಹಾಗೂ ನಮಗೆ ಗೊತ್ತಿಲ್ಲದ ಕಾಯಿಲೆಗಳ ಬಗ್ಗೆ ಮಾಹಿತಿ ಈ ರಕ್ತದಾನದಿಂದ ಸಿಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ವೈದ್ಯರ ಸಲಹೆ ಮೇರೆಗೆ ರಕ್ತದಾನ ಮಾಡಿ. ಎಂದು ಕರೆ ನೀಡಿದರು.

ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಮಂಜು ಸಿ ಅಪ್ಪಾಜಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಜೆಸಿಐ ಭರವಸೆಯ ಸಂಸ್ಥೆಯ ಸದಸ್ಯರು ರಕ್ತದಾನ ಮಾಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಜೆಸಿಐ ಸಂಸ್ಥೆಯ ಪದಾಧಿಕಾರಿಗಳು ಸ್ಪಂದನ ಹೆಲ್ತ್ ಫೌಂಡೇಶನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

Lok Sabha Election “ಬನ್ನಿ ಮತಗಟ್ಟೆಗೆ” ಪುಸ್ತಕ ಲೋಕಾರ್ಪಣೆ

0

Lok Sabha Election ಭಾರತದ ಬಹುದೊಡ್ಡ ಚುನಾವಣೆ ಲೋಕಸಭಾ ಚುನಾವಣೆಯಾಗಿದ್ದು ಜನವಾಸಿಗಳಿಗೆ ಮತದಾನದ ಹಕ್ಕನ್ನು ತಿಳಿಸುವ ದೃಷ್ಟಿಯಿಂದ ಪತ್ರಕರ್ತ ಹಾಗೂ ಲೇಖಕರಾದ ಗಾರಾ.ಶ್ರೀನಿವಾಸ್ ವಿರಚಿತ “ಬನ್ನಿ ಮತಗಟ್ಟಗೆ” ಎನ್ನುವ ಕೃತಿಯನ್ನು ವಿವಿಧ ಸಂಘಟನೆಯ ಪ್ರಮುಖರು ಬಿಡುಗಡೆಗೊಳಿಸಿದರು.

ಮತದಾನ ಎಂಬುದು ಬದುಕಿನ ಹಕ್ಕು, ಅದು ಉತ್ತಮ ಜನಪ್ರತಿನಿಧಿ ಆಯ್ಕೆಗೆ, ಸದೃಡ ಸಮಾಜ ನಿರ್ಮಾಣಕ್ಕೆ ಪ್ರತಿಪಾದಿಸುತ್ತದೆ, ಪ್ರಜಾಪ್ರಭುತ್ವದ ವಿಶೇಷವಾದ ಹಕ್ಕಿನ ಸ್ವಾತಂತ್ರತೆಯನ್ನು ಜನತೆ ಕಳೆದುಕೊಳ್ಳಬಾರದು ಎಂದು ತಿಳಿಸಿದರು, ಈ ಕೃತಿಯಲ್ಲಿರುವ ಪದ್ಯಗಳು ಜಾಗೃತ ಮೂಡಿಸುವಂತಹ ನಿಟ್ಟಿನಲ್ಲಿ ಓದುಗರರಿಗೆ ಸಾರ್ವಜನಿಕರಿಗೆ ಸಂದೇಶವನ್ನು ಕಟ್ಟಿಕೊಡುತ್ತದೆ ಎಂದು ಲೇಖಕ ಗಾರಾ.ಶ್ರೀನಿವಾಸ್ ಹೇಳಿದರು.

Lok Sabha Election ಈ ಸಂದರ್ಭದಲ್ಲಿ ಕೆ.ಎಸ್ ವಾಲಿಬಾಲ್ ಶಶಿ, ಶ್ರೀನಾಥ್, ಕಿರಣ್, ಪತ್ರಕರ್ತರಾದ ಭರತೇಶ್ ಆದೀಶೇಷ್, ಕರವೇ ಯುವಸೇನೆಯ ಜಿಲ್ಲಾಧ್ಯಕ್ಷರಾದ ಕಿರಣ್ ಕರವೇ, ರಂಗಕರ್ಮಿ ಶಿವಕುಮಾರಯ್ಯ ಮಾರವಳ್ಳಿಯವರು ಉಪಸ್ಥಿತರಿದ್ದರು.