Monday, June 23, 2025
Monday, June 23, 2025

B.Y.Raghavendra ಬಿವೈಆರ್ ಗೆಲುವಿನ ಓಟ ನಿಲ್ಲಿಸಲಾಗದು- ಜೆ.ಎಸ್.ಚಿದಾನಂದ ಗೌಡ

Date:

B.Y.Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಗೆಲುವು ನಿಶ್ಚಿತವಾಗಿದ್ದು, ಸೊರಬ ವಿಧಾನಸಭಾ ಕ್ಷೇತ್ರದಲ್ಲೂ ಬಹುಮತ ದೊರೆಯಲಿದೆ ಎಂದು ಬಿಜೆಪಿ ಮುಖಂಡ ಹಾಗೂ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾರ್ಯಕರ್ತರೇ ಜೀವಾಳವಾದ ಬಿಜೆಪಿಯಲ್ಲಿ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಲಾಯಿತು. ನರೇಂದ್ರ ಮೋದಿಯವರು ಪುನಃ ಪ್ರಧಾನಿಯಾಗಬೇಕು. ಬಿ.ವೈ. ರಾಘವೇಂದ್ರ ಅವರು ಕ್ಷೇತ್ರದ ಸಂಸದರಾಗಬೇಕು ಎನ್ನುವ ದೃಢ ಸಂಕಲ್ಪದೊಂದಿಗೆ ಜನತೆ ಬಿಜೆಪಿಗೆ ಹೆಚ್ಚಿನ ಬಹುಮತ ಸೂಚಿಸಿದ್ದಾರೆ. ಕ್ಷೇತ್ರದ ಆನವಟ್ಟಿ, ಜಡೆ, ಕಸಬಾ ಹೋಬಳಿಯಲ್ಲಿ ಅತ್ಯಧಿಕ ಮತಗಳು ಬಿಜೆಪಿಗೆ ಒಲಿದಿದೆ. ಎದುರಾಳಿ ಪಕ್ಷದವರ ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೇ ಮತದಾರರು ಬಿಜೆಪಿಗೆ ಮತ ನೀಡಿದ್ದಾರೆ ಎಂದಿದ್ದಾರೆ.
ಜಿಲ್ಲೆಯಲ್ಲಿ ರಾಘವೇಂದ್ರ ಅವರು ಸುಮಾರು ೨.೫ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವ ನಿರೀಕ್ಷೆ ಇದ್ದು, ತಾಲೂಕಿನಲ್ಲಿ ಸುಮಾರು ೩೫ ಸಾವಿರಕ್ಕೂ ಅಧಿಕ ಮತಗಳಿಂದ ಮುನ್ನೆಡೆ ಸಾಧಿಸಲಿದ್ದಾರೆ. ತಾಲೂಕಿನಲ್ಲಿ ತಾವು ಪಕ್ಷದ ಪ್ರಚಾರದ ಉದ್ದೇಶದಿಂದ ಪ್ರವಾಸ ಕೈಗೊಂಡ ವೇಳೆಯಲ್ಲಿ ಈ ವಿಷಯವನ್ನು ಗಮನಿಸಿದ್ದೇನೆ.

B.Y.Raghavendra ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತ್ತು ಯುವ ಮತದಾರರು ದೇಶದ ಸುರಕ್ಷತೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿರುವುದು ಬೆಳಕಿಗೆ ಬಂದಿದೆ. ಬಿ.ಎಸ್. ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾದ ತರುವಾಯ ಜಿಲ್ಲೆಯ ಚಿತ್ರಣವೇ ಬದಲಾಯಿತು. ಬಿ.ವೈ. ರಾಘವೇಂದ್ರ ಅವರು ಸಂಸದರಾದ ತರುವಾಯ ಜಿಲ್ಲೆಯಲ್ಲಿ ಅಭಿವೃದ್ಧಿ ಶಕೆ ಆರಂಭವಾಗಿರುವುದನ್ನು ಮತದಾರರು ಅರಿತಿದ್ದಾರೆ. ಈ ನಿಟ್ಟಿನಲ್ಲಿ ಬಿ.ವೈ. ರಾಘವೇಂದ್ರ ಅವರ ಗೆಲುವಿನ ಓಟವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಬಿಜೆಪಿಯ ಅವಶ್ಯಕತೆ ಮತ್ತು ಗೆಲುವಿನ ಕುರಿತು ಪ್ರತಿಯೊಬ್ಬ ಮತದಾರರ ಮನೆ ಮತ್ತು ಮನಗಳಿಗೆ ತಲುಪುವಂತೆ ಕಾರ್ಯಕರ್ತರು ಕಾರ್ಯನಿರ್ವಹಿಸಿದ್ದಾರೆ. ಬಿ.ವೈ. ರಾಘವೇಂದ್ರ ಅವರು ಪುನಃ ಸಂಸದರಾಗುವುದು ಶತಸಿದ್ಧ ಎಂದಿರುವ ಅವರು, ಬಿಜೆಪಿಗಾಗಿ ಹಗಲಿರುಳು ಶ್ರಮದಿಸಿದ ಕಾರ್ಯಕರ್ತರಿಗೂ ಮತ್ತು ಮತ ನೀಡಿದ ಮತದಾರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ಸಮುದಾಯಗಳ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸುವ ಉದ್ದೇಶವಿದೆ – ಮಧು ಬಂಗಾರಪ್ಪ

Madhu Bangarappa ರಾಜ್ಯದಲ್ಲಿನ ವಿವಿಧ ಜಾತಿ ಜನಾಂಗಗಳ, ಅದರಲ್ಲೂ ಮುಖ್ಯವಾಗಿ ಹಿಂದುಳಿದ...

DK Shivakumar ಎತ್ತಿನಹೊಳೆ ಯೋಜನೆ ಕಾಮಗಾರಿ‌ ಪರಿಶೀಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

DK Shivakumar ಎತ್ತಿನ ಹೊಳೆ ಯೋಜನೆಯ ಮೂಲಕ ಕುಡಿಯುವ ನೀರನ್ನು ಬರಪೀಡಿತ...

Royal English Medium School ರಾಯಲ್ ಡೈಮಂಡ್ ಶಾಲೆಯಲ್ಲಿ‌ ನಿತ್ಯ ಯೋಗ ಮಾಡುವ ಸಂಕಲ್ಪ ಸ್ವೀಕಾರ

Royal English Medium School ಶಿವಮೊಗ್ಗ ನಗರದ ಹೆಸರಾಂತ ವಿದ್ಯಾಸಂಸ್ಥೆಯಲ್ಲಿ ಒಂದಾದ...