Wednesday, April 8, 2026
Wednesday, April 8, 2026
Home Blog Page 632

Rain In Shivamogga ಜಡಿಮಳೆಗೆ ಶಿವಮೊಗ್ಗ ತಾಲ್ಲೂಕಿನಲ್ಲಿ 25 ಕ್ಕೂ ಹೆಚ್ಚು ಮನೆಗಳು ಕುಸಿತ ಕಂಡಿವೆ

0

Rain In Shivamogga ಶಿವಮೊಗ್ಗ ತಾಲೂಕಿನಲ್ಲಿ 25 ಕ್ಕೂ ಹೆಚ್ಚು ಮನೆಗಳು ಧರೆಗುರುಳಿರುವ ಬಗ್ಗೆ ವರದಿಯಾಗಿದೆ.
ಕೆಲವು ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಅದೃಷ್ಠವಶಾತ್ ಜನಗಳು ಇಲ್ಲದ ವೇಳೆ ಬಿದ್ದ ಪರಿಣಾಮ ಯಾವುದೇ ಪ್ರಾಣಿ ಹಾನಿ ಸಂಭವಿಸಿಲ್ಲ. ಶಿವಮೊಗ್ಗದಲ್ಲಿ ಮಳೆಯ ಆರ್ಭಟ ಕಂಡು ಬರುತ್ತಿಲ್ಲ ಆದರೆ ಮಳೆಗೆ ಥಂಡಿ ಹಿಡಿದಿದೆ. ಮೇಲೆ ಸೋನೆ ಮಳೆ ಅವಾಂತರಗಳನ್ನ ಸೃಷ್ಠಿಸುತ್ತಿವೆ. ಕೋಹಳ್ಳಿ, ಆಯನೂರು, ತ್ಯಾಜುವಳ್ಳಿ, ಹಾರನಹಳ್ಳಿ
ಮುದ್ದಿನಕೊಪ್ಪ, ಹಾರೋಬೆನವಳ್ಳಿಯಲ್ಲಿ ಸುಮಾರು 20ಕ್ಕೂ ಹೆಚ್ಚುಮನೆಗಳು ಧರೆಗೆ ಉರುಳಿವೆ.

ತ್ಯಾಜುವಳ್ಳಿಯಲ್ಲಿ ಶೋಭಾ ಸತೀಶ್ ಅವರ ಮನೆ, ಹಾರನಹಳ್ಳಿಯಲ್ಲಿ ಷಣ್ಮುಖ ರಾವ್, ಮುದ್ದಿನಕೊಪ್ಪದಲ್ಲಿ ಸುಕ್ಕಮ್ಮ ರಾಮಭೋವಿ. ಹಾರೋಬೆನವಳ್ಳಿಯಲ್ಲಿ ಬಸವರಾಜ್ ಎಂಬುವರ ಮನೆ ಹಾನಿಗೊಳಗಾಗಿವೆ.
ಸೊರಬದಲ್ಲಿ ಹಲವೆಡೆ ಧರೆಗುರುಳಿದ ವಿದ್ಯುತ್ ಕಂಬ
ಸೊರಬ ತಾಲೂಕು ಸಾರೆಕೊಪ್ಪ ಗ್ರಾಮ, ಹರಿಗಿ ನಾಗರಾಜ್ ಎಂಬವರ ಮನೆ ಕುಸಿದು ಬಿದ್ದಿದೆ.

ಹಾಗೆ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಅವಾಂತರ ಸೃಷ್ಠಿಸಿವೆ. ಹಲವೆಡೆ ಕರೆಂಟ್ ಕಂಬ ಬಿದ್ದುಹೋಗಿದೆ.
ತೀರ್ಥಹಳ್ಳಿ ವರದಿ:
ತಾಲೂಕಿನಾದ್ಯಂತ ಭಾರಿ ಮಳೆ ಹಾಗೂ ಗಾಳಿಗೆ ಹಲವೆಡೆ ಮನೆ,ಕೊಟ್ಟಿಗೆ ಕುಸಿತ,ರಸ್ತೆಗೆ ಬಿದ್ದ ವಿದ್ಯುತ್ ಕಂಬಗಳು,ಅಡಿಕೆ ತೋಟ,ಗದ್ದೆಗಳಿಗೆ ಹಳ್ಳ ಕೊಳ್ಳಗಳ ನೀರು ನುಗ್ಗಿ ಮಲೆನಾಡಿನ ಕೃಷಿಕರ ಪಾಲಿಗೆ ಭಯಹುಟ್ಟಿಸಿದೆ.
ಪ್ರಮುಖ ನದಿಗಳಾದ ತುಂಗೆ,ಮಾಲ ತಿ ನದಿಗಳ ನೀರಿನ ಮಟ್ಟ ಗಣನೀಯವಾಗಿ ಏರತೊಡಗಿದೆ,ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

Rain In Shivamogga ತಾಲೂಕಿನ ಬಹಳಷ್ಟು ಕಡೆ ಗಾಳಿಯ ರಭಸಕ್ಕೆ ವಿದ್ಯುತ್ ಕಂಬಗಳು ಧರೆಗೆ ಉರುಳಿದ ಹಿನ್ನೆಲೆಯಲ್ಲಿ ಕನಿಷ್ಠ ಮೂರ್ನಾಲ್ಕು ದಿನಗಳ ಕಾಲ ವಿದ್ಯುತ್ ಗಾಗಿ ಗ್ರಾಮಸ್ಥರು ಕಾಯುವಂತಾಗಿದೆ.
ಪಟ್ಟಣ ವ್ಯಾಪ್ತಿಯ ಮಿಲ್ಕೇರಿಯ ಉದಯ್ ಮಡಿವಾಳ್ ಹಾಗೂ ಬೆಟ್ಟಮಕ್ಕಿಯ ಬಡಾವಣೆಯಲ್ಲಿ ಮನೆಯ ಗೋಡೆ ಗಾಳಿ ಮಳೆಯಿಂದ ಕುಸಿದು ಬಿದ್ದಿದೆ.

ಇದರಿಂದ ಯಾರಿಗೂ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿದು ಬಂದಿದೆ,ಘಟನಾ ಸ್ಥಳಕ್ಕೆ ಪ.ಪಂ.ಅಧಿಕಾರಿಗಳು ಭೇಟಿ ನೀಡಿದ್ದಾರೆ.

Anandiben Patel ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಬಿಜೆಪಿ ಮಾಜಿ ಶಾಸಕರಿಗೆ ರಾಷ್ಟ್ರಪತಿಗಳಿಂದ ಕ್ಷಮಾದಾನ

0

Anandiben Patel ಸಮಾಜವಾದಿ ಪಕ್ಷದ ಶಾಸಕನ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಉತ್ತರ ಪ್ರದೇಶದ ಬಿಜೆಪಿ ಮಾಜಿ ಶಾಸಕ ಉದಯಭಾನ್‌ ಕರ್ವಾರಿಯಾ ಅವರಿಗೆ ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌ ಕ್ಷಮಾದಾನ ನೀಡಿದ ಹಿನ್ನೆಲೆ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ನೈನಿ ಕೇಂದ್ರ ಕಾರಾಗೃಹದ ಹಿರಿಯ ಸೂಪರಿಂಟೆಂಡೆಂಟ್ ರಂಗ್ ಬಹದ್ದೂರ್ ಪಟೇಲ್ ಅವರು ಪಿಟಿಐಗೆ ನೀಡಿರುವ ಮಾಹಿತಿ ಪ್ರಕಾರ, ಉದಯಭಾನ್ ಕರ್ವಾರಿಯಾ ಅವರ ಬಿಡುಗಡೆ ಆದೇಶವನ್ನು ಬುಧವಾರ ಸಂಜೆ ಸ್ವೀಕರಿಸಲಾಗಿದ್ದು, ಆದೇಶದಂತೆ ಅವರನ್ನು ಗುರುವಾರ ಬೆಳಿಗ್ಗೆ ಬಿಡುಗಡೆ ಮಾಡಲಾಗಿದೆ.

ಕರ್ವಾರಿಯಾ ಅವರನ್ನು ಅವಧಿಪೂರ್ವ ಬಿಡುಗಡೆ ಮಾಡಬೇಕು ಎಂಬ ರಾಜ್ಯ ಸರ್ಕಾರದ ಶಿಫಾರಸ್ಸು ಒಪ್ಪಿಕೊಂಡ ರಾಜ್ಯಪಾಲರು, ಸಂವಿಧಾನದ 161 ನೇ ವಿಧಿಯಡಿ ಅವರಿಗೆ ನೀಡಲಾದ ಅಧಿಕಾರವನ್ನು ಬಳಸಿಕೊಂಡು ಬಿಡುಗಡೆ ಆದೇಶ ನೀಡಿದ್ದಾರೆ ಎಂದು ವರದಿಗಳು ಹೇಳಿವೆ.

ಸಂವಿಧಾನದ 161 ನೇ ವಿಧಿಯು ಅಪರಾಧಿಗಳಿಗೆ ಕ್ಷಮಾಪಣೆ ನೀಡುವುದು, ಶಿಕ್ಷೆ ಹಿಂಪಡೆಯುವುದು ಬಿಡುಗಡೆಗೆ ಆದೇಶ ನೀಡುವುದು, ಅಪರಾಧಿಯ ಶಿಕ್ಷೆಯನ್ನು ಬದಲಾಯಿಸುವುದು ಸೇರಿದಂತೆ ಹಲವು ಅಧಿಕಾರಿಗಳನ್ನು ರಾಜ್ಯಪಾಲರಿಗೆ ನೀಡುತ್ತದೆ ಎಂದು ತಿಳಿದು ಬಂದಿದೆ.

Anandiben Patel ಪ್ರಯಾಗರಾಜ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಜೈಲಿನಲ್ಲಿ ಕರ್ವಾರಿಯಾ ಅವರ ಉತ್ತಮ ನಡವಳಿಕೆಯನ್ನು ಉಲ್ಲೇಖಿಸಿ ಅವರನ್ನು ಬಿಡುಗಡೆ ಮಾಡಲು ಶಿಫಾರಸು ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1996ರ ಆಗಸ್ಟ್‌ನಲ್ಲಿ ಸಮಾಜವಾದಿ ಪಕ್ಷದ ಶಾಸಕ ಜವಾಹರ್ ಯಾದವ್ ಅವರ ಹತ್ಯೆಗೆ ಸಂಬಂಧಿಸಿದಂತೆ ಪ್ರಯಾಗ್‌ರಾಜ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಕರ್ವಾರಿಯಾ ಅವರಿಗೆ ನವೆಂಬರ್ 4,2019 ರಂದು ಜೀವಾವಧಿ ಶಿಕ್ಷೆ ವಿಧಿಸಿದ್ದರು.

Guddekal Balasubrahmanya Swami ಆಡಿಕೃತ್ತಿಕೆ ಜಾತ್ರ ಸಂದರ್ಭ ಸ್ಥಳಿಯ ನಿವಾಸಿಗಳ ಸಂಚಾರಕ್ಕೆ ಅಡಚಣೆಯಾಗದಂತೆ ಕ್ರಮಕ್ಕೆ ಮನವಿ

0

Guddekal Balasubrahmanya Swami ಜು 28-29ರಂದು ನಗರದ ಗುಡ್ಡೇಕಲ್ ಬಾಲಸುಬ್ರಹ್ಮಣ್ಯ ಸ್ವಾಮಿಯ ಅಡಿಕೃತಿಕೆ ಜಾತ್ರೆ ನಡೆಯುತ್ತಿರುವ ವ್ಯಾಪ್ತಿಯ ನಿವಾಸಿಗಳ ಸಂಚಾರಕ್ಕೆ ಅಡಚಣೆ ಆಗದಂತೆ ಜಿಲ್ಲಾಡಳಿತದ ಕ್ರಮವಹಿಸಬೇಕೆಂದು ನಾಗರೀಕರು ಮನವಿ ಮಾಡಿಕೊಂಡಿದ್ದಾರೆ.

ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ತುಂಗಾ ಸೇತುವೆಯಿಂದಲೆ ಹೊಳೆಹೊನ್ನೂರು ರಸ್ತೆಗೆ ಎಲ್ಲಾ ಬಗೆಯ ವಾಹನ ಸಂಚಾರವನ್ನು ನಿಷೇಧಿಸುತ್ತಿದ್ದರಿಂದ ಶಾಂತಮ್ಮ ಲೇಔಟ್, ಚಿಕ್ಕಲ್,ಸಿದ್ದೇಶ್ವರ ನಗರ,
ಗುರುಪುರ ನಿವಾಸಿ ಗಳಿಗೆ, ಶಾಲಾ – ಕಾಲೇಜು ವಿದ್ಯಾರ್ಥಿಗಳು ಪರದಾಡಬೇಕಿತ್ತು.

Guddekal Balasubrahmanya Swami ಈ ವರ್ಷ ಮೇಲ್ಸುತುವೆ ನಿರ್ಮಾಣವಾಗಿರುವುದರಿಂದ ಆ ರಸ್ತೆ ಬಳಕೆ ಕೂಡ ಆಗುತ್ತಿದೆ. ಜಾತ್ರೆ ಗೆ ಬರುವ ಭಕ್ತಾದಿಗಳಿಗೆ ಯಾವುದಾದರೂ ಒಂದು ರಸ್ತೆ ಬಳಕೆಗೆ ಅವಕಾಶ ಮಾಡಿಕೊಡುವ ಮೂಲಕ ಮತ್ತೊಂದು
ರಸ್ತೆಯಲ್ಲಿ ಜಾತ್ರಾ ವ್ಯಾಪ್ತಿಯ ನಿವಾಸಿಗಳ ಲಘುವಾಹನಗಳ ಸಂಚಾರಕ್ಕೆ ಅವಕಾಶಮಾಡಿಕೊಡಬೇಕಾಗಿ ಶಾಂತಮ್ಮ
ಲೇಔಟ್, ಚಿಕ್ಕಲ್,ಸಿದ್ದೇಶ್ವರ ನಗರ, ಗುರುಪುರ ನಿವಾಸಿಗಳು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Linganamakki Reservoir ಗಂಗಾಪೂಜೆ ನಂತರ ಲಿಂಗನಮಕ್ಕಿ ಜಲಾಶಯ ನೀರು ನದಿಗೆ ಬಿಡುಗಡೆ

0

Linganamakki Reservoir ವ್ಯಾಪಕ ಮಳೆಯಿಂದಾಗಿ ಶಿವಮೊಗ್ಗದಲ್ಲಿ ಜಲಾಶಯಗಳು ಬಹುತೇಕ ಮುಕ್ಕಾಲು ಭಾಗ ಭರ್ತಿಯಾಗುತ್ತಿದೆ. ಈ ನಿಟ್ಟಿನಲ್ಲಿ ಲಿಂಗನಮಕ್ಕಿ ಜಲಾಶಯದಲ್ಲಿ ಇವತ್ತು ಗಂಗಾ ಪೂಜೆಯ ನಿಮಿತ್ತ ನದಿಗೆ ಡ್ಯಾಂನಿಂದ ಗೇಟು ತೆಗೆದು ನೀರು ಹರಿಯಬಿಡಲಾಗಿದೆ.

ಪ್ರತಿವರ್ಷ ಶರಾವತಿ ಕಣಿವೆ ಪ್ರದೇಶದಲ್ಲಿರುವ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ 1800 ಅಡಿ ದಾಟಿದ ಬಳಿಕ ಗಂಗಾ ಪೂಜೆಯನ್ನ ಕೈಗೊಳ್ಳಲಾಗುತ್ತದೆ. ಅದೆ ರೀತಿಯಲ್ಲಿ ಈ ಸಲವೂ ಕೈಗೊಳ್ಳಲಾಗಿದೆ.

Linganamakki Reservoir ಪ್ರತೀತಿಯಂತೆ ಗಂಗಾಪೂಜೆ ಮುಗಿದ ಬಳಿಕ ಜಲಾಶಯದಿಂದ ಸ್ವಲ್ಪ ಪ್ರಮಾಣದ ನೀರನ್ನು ನದಿಗೆ ಹರಿಸಲಾಗಿದೆ.
ಗಂಗಾಪೂಜೆ ನಿಮಿತ್ತ ಕರ್ನಾಟಕ ವಿದ್ಯುತ್‌ ನಿಗಮ ಈಗಾಗಲೇ ಸುತ್ತೊಲೆ ಸಹ ಹೊರಡಿಸಿತ್ತು. ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯದ ನೀರಿನ ಮಟ್ಟವು 1802.70 ಅಡಿಗಳಷ್ಟು ತಲುಪಿದೆ.

Bahujana Samaj Party ಪರಿಶಿಷ್ಟ ಜಾತಿ/ವರ್ಗಗಳಿಗೆ ಮೀಸಲಿದ್ದ ಹಣವನ್ನ ಇತರೆ ಕಾರ್ಯಕ್ಕೆ ಬಳಕೆ ವಿರುದ್ಧ ಬಿಎಸ್ ಪಿ ಪ್ರತಿಭಟನೆ

0

Bahujana Samaj Party ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರಿಗೆ ಮೀಸಲಿಟ್ಟ ಹಣವನ್ನು ಇತರೆ ಕಾರ್ಯಕ್ಕೆ ಬಳಸಿಕೊಳ್ಳುವುದನ್ನು ವಿರೋಧಿಸಿ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗಕ್ಕೆ ಎಸ್.ಸಿ.,ಎಸ್.ಪಿ., ಮತ್ತು ಟಿ.ಎಸ್.ಪಿ. ಮೀಸಲು ಹಣವನ್ನು ಜನಾಂಗದ ಪ್ರಗತಿಗೆ ಯಾವುದೇ ಸರ್ಕಾರಗಳು ಬಳಸದೇ ಬೇರೆ ಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಹೊರತಾಗಿಲ್ಲ, ಅದರಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಪರಿಶಿಷ್ಟರ ಅಭಿವೃದ್ಧಿಗೆಂದು ಮೀಸಲಿಟ್ಟ ಕೋಟ್ಯಾಂತರ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ ಎಂದು ದೂರಿದರು.

10 ವರ್ಷಗಳಲ್ಲಿ ಎರಡು ಲಕ್ಷ 56 ಸಾವಿರ ಕೋಟಿ ಹಣವನ್ನು ಇತರೆ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ. ಈ ಹಣದಿಂದ ಪರಿಶಿಷ್ಟರ ವಿದ್ಯಾರ್ಥಿಗಳ ಶಿಕ್ಷಣಕ್ಕೆ, ಬಡವರ ಮನೆಗಳಿಗೆ, ನಿರುದ್ಯೋಗಿಗಳಿಗೆ ನೆರವು, ಭೂ ರಹಿತ ಕುಟುಂಬಕ್ಕೆ ಜಮೀನು ನೀಡಬಹುದಿತ್ತು. ಆರೋಗ್ಯಕ್ಕೆ ಸಂಬಂಧಿಸಿದಂತೆ ಉತ್ತಮ ಚಿಕಿತ್ಸೆ ಕೊಡಬಹುದಿತ್ತು.

Bahujana Samaj Party ಆದರೆ ಮೂರು ಸರ್ಕಾರಗಳು ಈ ಕೆಲಸ ಮಾಡದೇ ದ್ರೋಹ ಬಗೆದಿವೆ ಎಂದು ದೂರಿದರು.
ಜಾತ್ಯತೀತ, ಮನುವಾದಿ, ಜಾತಿವಾದಿ ಇವೆಲ್ಲವೂ ಒಂದೇ ಆಗಿವೆ. ಈ ಮೂರು ಪಕ್ಷಗಳಿಂದ ಬಹುಜನರ ಉದ್ದಾರ ಸಾಧ್ಯವಿಲ್ಲ. ಬಿಜೆಪಿ ಹುಲ್ಲಿನ ಮೇಲಿನ ಹಾವು ಇದ್ದಂತೆ. ಕಾಂಗ್ರೆಸ್ ಹುಲ್ಲಿನ ಒಳಗಿರುವ ಹಾವಿದ್ದಂತೆ, ಹಾಗಾಗಿ ಇನ್ನಾದರೂ ಪರಿಶಿಷ್ಟರ ಉದ್ದಾರಕ್ಕಾಗಿ ಎಲ್ಲಾ ಸರ್ಕಾರಗಳು ಪ್ರಯತ್ನಿಸಬೇಕು. ಮತ್ತು ಪರಿಶಿಷ್ಟರ ಕಲ್ಯಾಣಕ್ಕಾಗಿಯೇ ಮೀಸಲಿಟ್ಟ ಹಣವನ್ನು ಬಳಸಬೇಕು ಎಂದರು.

ಪ್ರತಿಭಟನೆಯಲ್ಲಿ ಬಿ.ಎಸ್.ಪಿ. ಜಿಲ್ಲಾಧ್ಯಕ್ಷ ಎ.ಡಿ.ಶಿವಪ್ಪ, ಪ್ರಮುಖರಾದ ಹೆಚ್.ಎಂ. ಶ್ರೀನಿವಾಸ್, ಎಂ. ಕೃಷ್ಣಪ್ಪ, ಎ.ಡಿ. ಶಿವಮೂರ್ತಿ, ರಾಜಪ್ಪ, ಗುತ್ಯಪ್ಪ, ಲಕ್ಷ್ಮೀಪತಿ, ಲೋಕೇಶ್, ಅಫ್ಸರ್ ಪಾಶಾ ಮೊದಲಾದವರಿದ್ದರು.

Land Mafia ಭೂ ಮಾಫಿಯಾ ಪರವಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಆಗ್ರಹ

0

land mafia ಭೂ ಮಾಫಿಯಾ ಪರವಾಗಿ ಸುಳ್ಳು ವರದಿ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಲೆನಾಡು ಕನ್ನಡ ಪಡೆಯ ಜಿಲ್ಲಾಧ್ಯಕ್ಷ ಮಂಜುನಾಥ್ ಪೂಜಾರಿ ಆಗ್ರಹಿಸಿದರು.

ಪ್ರೆಸ್ ಟ್ರಸ್ಟಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸನಗರ ತಾಲೂಕು ತಹಶೀಲ್ದಾರ್ ರಶ್ಮಿ ಹಾಗೂ ರಿಪ್ಪನ್‌ಪೇಟೆ ಗ್ರಾ.ಪಂ. ಸದಸ್ಯ ಆರ್.ವಿ. ನಿರೂಪ ಕುಮಾರ್ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಭೂ ಮಾಪೀಯದವರ ಪರವಾಗಿ ಸುಳ್ಳು ವರದಿ ನೀಡುತ್ತಿದ್ದು, ಹಿರಿಯ ಅಧಿಕಾರಿಗಳಿಂದ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದರು.

ಹೊಸನಗರ ತಾಲ್ಲೂಕು ಕೆರೆಹಳ್ಳಿ ಹೋಬಳಿ ಗವಟೂರು ಗ್ರಾಮದ ಸರ್ವೆ ನಂ.೪೫೯/೧ ಮತ್ತು ೪೨೬ರಲ್ಲಿ ಪಿಎನ್‌ಆರ್ ಗ್ಲೋಬಲ್ ಡೆವಲಪರ್ ಎಂಬ ಸಂಸ್ಥೆಯವರು ಬಡಾವಣೆ ನಿರ್ಮಿಸಿದ್ದಾರೆ. ಯಾವುದೇ ವಸತಿ ಬಡಾವಣೆ ಮಾಡಲು ೩೦ ಅಡಿ ಸಂಪರ್ಕ ರಸ್ತೆ ಕಡ್ಡಾಯವಾಗಿರುತ್ತದೆ. ಆದರೆ ಇಲ್ಲಿ ರಸ್ತೆಯೇ ಇರುವುದಿಲ್ಲ. ಆದರೂ ಕೂಡ ಡೆವಲಪರ್ ಮಾಲೀಕನು ಆಗಿದ್ದ, ಆರ್.ವಿ. ನಿರೂಪಕುಮಾರ್ ಎಂಬಾತ ಗ್ರಾಮಪಂಚಾಯಿತಿ ಸದಸ್ಯ ರಸ್ತೆಯಿದೆ ಎಂದು ರಿಪ್ಪನ್ ಪೇಟೆ ಗ್ರಾ.ಪಂ. ಅಭಿವೃದ್ಧಿ ಅಧಿ ಕಾರಿಯಿಂದ ಸುಳ್ಳು ನಿರಾಪೇಕ್ಷಣ ಪತ್ರ ಪಡೆದು ಭೂ ಪರಿವರ್ತನೆ ಮಾಡಿಕೊಂಡಿದ್ದಾನೆ ಎಂದು ದೂರಿದರು.

Land Mafia ರಸ್ತೆ ಇರುವಿಕೆಗೆ ಸಂಬಂಧಪಟ್ಟಂತೆ ಮಾಹಿತಿ ಹಕ್ಕಿನಲ್ಲಿ ಕೇಳಿದರೆ, ಒಂದೊಂದು ರೀತಿ ಉತ್ತರ ಕೊಡುತ್ತಾರೆ. ರಸ್ತೆ ಇರುವುದು ಗೊತ್ತಿಲ್ಲ ಎನ್ನುತ್ತಾರೆ. ಗ್ರಾ.ಪಂ.ನಲ್ಲಿ ದಾಖಲೆ ಇಲ್ಲ ಎನ್ನುತ್ತಾರೆ. ಮತ್ತೆ ಇವರೇ ರಸ್ತೆ ನಿರ್ಮಿಸುತ್ತಾರೆ. ಆದರೆ ನಿಜವಾಗಿಯೂ ಅಲ್ಲಿ ರಸ್ತೆ ಇರುವುದಿಲ್ಲ. ಉಪಗ್ರಹ ಆಧಾರಿತ ಛಾಯಾಚಿತ್ರ ಪಡೆದರೆ ಸತ್ಯ ಗೊತ್ತಾಗುತ್ತದೆ. ಭೂಮಾಪೀಯಾದವರಿಗೆ ಅನುಕೂಲ ಮಾಡುವ ದೃಷ್ಟಿಯಿಂದ ವಹಿವಾಟು ರಸ್ತೆ ಎಂಬ ಹೊಸ ಶಬ್ದ ಉಲ್ಲೇಖಿಸಿ ವರದಿ ಮಾಡುತ್ತಾರೆ ಎಂದು ದೂರಿದರು.

ಹೀಗೆ ಭೂ ಮಾಫಿಯ ಪರವಾಗಿ ಸುಳ್ಳು ವರದಿ ನೀಡಿರುವ ತಹಶೀಲ್ದಾರ್, ಗ್ರಾ.ಪಂ. ಸದಸ್ಯ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮುಂತಾದವರ ಮೇಲೆ ತನಿಖೆ ನಡೆಸಿ ಸೂಕ್ತಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮನೋಹರ್, ಶೃತಿ ಶೇಟ್, ಅಶ್ವಿನಿ ಗೌಡ, ದಿವ್ಯಾ ಉಪಸ್ಥಿತರಿದ್ದರು.

CM Siddharamaih ಮೂಡಾ ಹಗರಣ ಆರೋಪ ನನ್ನ ಮೇಲಿನ ರಾಜಕೀಯ ದುರುದ್ದೇಶ- ಸಿದ್ಧರಾಮಯ್ಯ

0

CM Siddharamaih ಸಿದ್ದರಾಮಯ್ಯನವರು ಮೈಸೂರಿನಲ್ಲಿ ದಲಿತರ ಜಮೀನನ್ನು ಕಬಳಿಸಿದ್ದಾರೆ’’ ಎಂದು ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಡುತ್ತಿರುವ ಆರೋಪ ಸಂಪೂರ್ಣ ನಿರಾಧಾರವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.

ಇದು ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ಪಕ್ಷ ಮತ್ತು ನನ್ನ‍ನ್ನು ಗುರಿಯಾಗಿಟ್ಟುಕೊಂಡು ನಡೆಯುತ್ತಿರುವ ಯೋಜಿತ ಪಿತೂರಿಯಾಗಿದೆ.
CM Siddharamaih ವ್ಯವಸ್ಥೆಯಲ್ಲಿ ಎಲ್ಲಕ್ಕಿಂತಲೂ ಸರ್ವೋಚ್ಚವಾದುದು ಜನತಾ ನ್ಯಾಯಾಲಯ. ವಿರೋಧ ಪಕ್ಷಗಳು ಆರೋಪಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದ ಅಧಿಕೃತ ಭೂ ದಾಖಲೆಗಳ ಆಧರಿಸಿದ ನನ್ನ ಹೇಳಿಕೆಯನ್ನು ನಾನು ಇಂದು ರಾಜ್ಯದ ಜನತೆಯ ಮುಂದೆ ಇಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ
“X”ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

Kateel Ashok Pai Memorial College ಬದಲಾದ ಆದ್ಯತೆಗಳನ್ನ ಗಮನಿಸಿ ಬಜೆಟ್ ತಯಾರಿ. ಪರಿವರ್ತನೆಯ ದೂರದೃಷ್ಟಿತ್ವಕ್ಕೆ ಈಗಿನ ಬಜೆಟ್ ಪೂರಕ- ಡಾ.ಶ್ರೀನಿವಾಸಮೂರ್ತಿ

0

Kateel Ashok Pai Memorial College ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ‘ಕೌಟಿಲ್ಯ ವೇದಿಕೆ’ ಹಾಗೂ ವಾಣಿಜ್ಯ ವಿಭಾಗದ ಸಹಯೋಗದಲ್ಲಿ ‘ಬಜೆಟ್ 2024 ರ ವಿಶ್ಲೇಷಣೆ’ ಎಂಬ ವಿಶೇಷ ಉಪನ್ಯಾಸವನ್ನು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿತ್ತು. ಈ ಉಪನ್ಯಾಸಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಜೆಎನ್ ಎನ್ ಸಿ ಇ ಕಾಲೇಜಿನ ನಿರ್ವಹಣಾ ವಿಭಾಗದ ಪ್ರಾಧ್ಯಾಪಕರಾದ ಡಾ.ಶ್ರೀನಿವಾಸ ಮೂರ್ತಿಯವರು ಬಜೆಟ್ ವಿಶ್ಲೇಷಣೆ ಎಂಬುದು ಒಂದು ವೈಜ್ಞಾನಿಕ ಪ್ರಕ್ರಿಯೆ ಎಂದು ಹೇಳಿದರು. ಕೇಂದ್ರ ಸರ್ಕಾರ ಮಂಡಿಸಿದ 2024 ರ ಬಜೆಟ್‌ನ ಸೂಕ್ಷ್ಮ ಅಂಶಗಳ ವಿಶ್ಲೇಷಣೆಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡ ಅವರು “ಭಾರತದ ಬಜೆಟ್ ಭಾರತದ ಸರ್ವತೋಮುಖ ಪ್ರಗತಿ ಹಾಗೂ ಅಭಿವೃದ್ಧಿಯ ದಿಕ್ಸೂಚಿ, ಬದಲಾಗುತ್ತಿರುವ ಕಾಲದಲ್ಲಿ ಬದಲಾದ ಆಲೋಚನಾಕ್ರಮ, ಬದಲಾದ ಆದ್ಯತೆಗಳನ್ನು ಗಮನಿಸಿ ಬಜೆಟ್‌ ಅನ್ನು ತಯಾರಿಸಬೇಕಾಗುತ್ತದೆ” ಎಂದು ಹೇಳುತ್ತಾ ಪರಿವರ್ತನೆಯ ದೂರದೃಷ್ಟಿತ್ವಕ್ಕೆ ಈ ಸಲದ ಬಜೆಟ್ ಪೂರಕವಾಗಿದೆಯೇ ಎಂಬುದನ್ನು ವಿಶ್ಲೇಷಿಸಲು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ ಡಾ.ಶ್ರೀನಿವಾಸಮೂರ್ತಿಯವರು ಡಿಜಿಟಲೀಕರಣ ಹಾಗೂ ಅದರ ಪಾತ್ರವನ್ನು ವಿವರಿಸಿದರು.

Kateel Ashok Pai Memorial College ಕಾಲೇಜಿನ ಶೈಕ್ಷಣಿಕ ಆಡಳಿತಾಧಿಕಾರಿಗಳಾದ ಪ್ರೊ.ರಾಮಚಂದ್ರ ಬಾಳಿಗರವರು ಇದೊಂದು ಉತ್ತಮ ಉಪನ್ಯಾಸ ಎಂದು ಪ್ರಶಂಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಸಂಧ್ಯಾಕಾವೇರಿ ವಹಿಸಿದ್ದರು. ಇದರೊಂದಿಗೆ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಾದ ಶಂಕರ್ ಭಾರದ್ವಾಜ್, ಗೌಸ್‌ಪೀರ್ ಹಾಗೂ ನಿಸರ್ಗರವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಪ್ರಶಾಂತ್, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಕಾವ್ಯ, ಉಪನ್ಯಾಸಕರಾದ ಶ್ರೀಮತಿ ವೀಣಾ ಭಟ್ ಹಾಗೂ ಶ್ರೀಮತಿ ಪ್ರಿಯಾ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಗೌಸ್‌ಪೀರ್ ಕಾರ್ಯಕ್ರಮವನ್ನು ನಿರೂಪಿಸಿ. ಬಿಂದಿಯ ಪ್ರಾರ್ಥಿಸಿ, ನಿಸರ್ಗ ಸ್ವಾಗತಿಸಿ, ತನುಶ್ರೀ ವಂದಿಸಿದರು.

Department of Horticulture ಹವಾಮಾನಾಧಾರಿತ ಬೆಳೆವಿಮೆ ಯೋಜನೆ ನೋಂದಾವಣೆಗೆ ಜುಲೈ 31 ಅಂತಿಮ ದಿನಾಂಕ- ಗುರುದತ್ತ ಹೆಗಡೆ

0

Department of Horticulture ತೋಟಗಾರಿಕೆ ಇಲಾಖೆಯಿಂದ ಮರು ವಿನ್ಯಾಸಗೊಳಿಸಲಾದ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯಡಿ ವಿಮೆ ನೋಂದಣಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರು ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳು ಮತ್ತು ವಿಮಾ ಕಂಪನಿಗಳ ಪ್ರತಿನಿಧಿಗಳೊಂದಿಗೆ ಜುಲೈ 23 ರಂದು ಸಭೆಯನ್ನು ನಡೆಸಿದರು.

ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯಡಿ ಬರುವ ಜಿಲ್ಲೆಯ ಬೆಳೆಗಳಾದ ಅಡಿಕೆ, ಮಾವು, ಕಾಳು ಮೆಣಸು ಮತ್ತು ಶುಂಠಿ ಬೆಳೆಯನ್ನು ಬೆಳೆದಂತಹ, ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ಸಂರಕ್ಷಣೆ ತಂತ್ರಾಂಶದಲ್ಲಿ ನೊಂದಾಯಿಸಲು ಜುಲೈ 31 ರವರೆಗೆ ಅವಕಾಶ ಕಲ್ಪಿಸಲಾಗಿರುತ್ತದೆ.

ವಿಮೆ ನೊಂದಣಿ ಮಾಡುವ ಸಂದರ್ಭದಲ್ಲಿ ರೈತರು ಬೆಳೆದಿರುವಂತಹ ನೊಂದಾಯಿತ ಬೆಳೆಗಳು ಸಂರಕ್ಷಣೆ ತಂತ್ರಾಂಶದಲ್ಲಿ ಕಂಡು ಬಾರದ ಹಿನ್ನಲೆಯಲ್ಲಿ ಹಲವಾರು ರೈತರು ಹವಾಮಾನಾಧಾರಿತ ಬೆಳೆ ಬೆಳೆ ವಿಮೆ ಯೋಜನೆಯಡಿ ನೊಂದಾಯಿಸಲು ಸಾಧ್ಯವಾಗುತ್ತಿಲ್ಲ.

Department of Horticulture ಕಳೆದ ಎರಡು ವರ್ಷಗಳಲ್ಲಿ ಬೆಳೆ ಸಮೀಕ್ಷೆ ಪ್ರಕಾರ ನೊಂದಾಯಿತ ಬೆಳೆ ಬಂದರೆ ಅಥವಾ ಕನಿಷ್ಟ ಒಂದು ವರ್ಷದಲ್ಲಿಯಾದರು ಬೆಳೆ ಸಮೀಕ್ಷೆಯಲ್ಲಿ ನೊಂದಾಯಿತ ಬೆಳೆ ಕಂಡು ಬಂದರೆ ಅಂತಹ ಪ್ರಕರಣಗಳನ್ನು ಪರಿಗಣಿಸಿ ಸಂರಕ್ಷಣೆ ತಂತ್ರಾಂಶದಲ್ಲಿ ನೋಂದಣಿ ಮಾಡಲು ಜಿಲ್ಲಾಧಿಕಾರಿಗಳು ಆದೇಶಿಸುತ್ತಾ, ಜಿಲ್ಲೆಯ ರೈತರು ಸದರಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Bharath Scout and Guides ಅಗ್ನಿವೀರ್ ಸೇವೆಗೆ ಮಕ್ಕಳನ್ನು ಸೇರಿಸಿ- ಮಾಜಿ ಯೋಧ ಮಾಲತೇಶ್

0

Bharath Scout and Guides ಸೇನೆಯಲ್ಲಿ ಸೇವೆಯನ್ನು ಸಲ್ಲಿಸಿರುವುದು ತೃಪ್ತಿತಂದಿದೆ. ಅನುಭವದ ಪ್ರೇರಣಾ ಪೂರ್ವಕ ಮಾತುಗಳಲ್ಲಿ ಮಕ್ಕಳನ್ನು ಅಗ್ನಿವೀರ ಸೇವೆಗೆ ಸೇರಿಸಿ ಸೇವೆ ಸಲ್ಲಿಸುವಂತೆ ಸುಬೇದಾರ್ (ನಿವೃತ್ತ) ಮಾಜಿ ಸೈನಿಕರು ಮಾಲತೇಶ್ ಕರೆ ನೀಡಿದರು.

ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯ ಜಿಲ್ಲಾ ಸ್ಕೌಟ್ಸ ಭವನದಲ್ಲಿ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಸೈನಿಕರಿಗೊಂದು ಸಲಾಮ್’ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಅಮರ್ ಜವಾನ್‌ಗೆ ಪುಷ್ಪ ಅರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಉಧ್ಘಾಟನೆ ಮಾಡಿ ಮಾತನಾಡಿದ ಅವರು, ತಮ್ಮ ಸೇನಾ ಸೇವಾ ಅವಧಿಯಲ್ಲಿ ವಿವಿಧ ಯುದ್ಧದಂತಹ ಕಠಿಣ ಸಮಯದಲ್ಲಿ ನಮ್ಮ ದೇಶದ ಗಡಿಯನ್ನು ಕಾಯುವ ಸೇನಾ ಬಳಗದ ಸೇವೆ ಶೌರ್ಯ, ಜಾಣ್ಮೆ, ನಿಸ್ವಾರ್ಥ ಸೇವೆ, ಮುಖ್ಯವಾಗಿ ದೇಶ ಪ್ರೇಮವನ್ನು ಮೆರೆದು ದೇಶದ ರಕ್ಷಣೆಗಾಗಿ ಕಾರ್ಗಿಲ್ ವಿಜಯದ ಸಮಯದಲ್ಲಿ ಕಾರ್ಗಿಲ್‌ಗಾಗಿ ಪ್ರಾಣತ್ಯಾಗ ಮಾಡಿದ ೫೨೦ ಜನ ವೀರಯೋಧರು ವೀರ ಸ್ವರ್ಗ ಸೇರಿದುದನ್ನು ಸ್ಮರಿಸಿದರು.

ಸಭೆಯಲ್ಲಿ ಉಪಸ್ಥಿತರಿರುವ ಮಕ್ಕಳಿಗೆ ದೇಶಭಕ್ತಿಯನ್ನು ಮೂಡಿಸುವ ವೀರ ಸೇನಾನಿಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಮುಖ್ಯ ಕಾಯರ್ದರ್ಶಿ ಕೆ.ಪಿ.ಬಿಂದುಕುಮಾರ್ ಮಾತನಾಡಿ, ಮಕ್ಕಳಿಗೆ ದೇಶಸೇವೆಯ ಮಹತ್ವವನ್ನು ತಿಳಿಸಿ, ದೇಶದ ಗಡಿಯಲ್ಲಿ ವಿದೇಶಿ ಸೈನಿಕರ ದಾಳಿಯಿಂದ ದೇಶವಾಸಿಗಳನ್ನು ರಕ್ಷಣೆಮಾಡಲು ಹಗಲು ರಾತ್ರಿ ಎನ್ನದೇ ಬಿಸಿಲು ಮಳೆಯ ಪರಿವಿಲ್ಲದೇ ಸೇವೆಸಲ್ಲಿಸುತ್ತಾರೆ. ಅಂಥಹ “ಸೈನಿಕರಿಗೊಂದು ಸಲಾಮ್” ಹಾಗೂ ಮಕ್ಕಳು ದೇಶಪ್ರೇಮವನ್ನು ಬೆಳೆಸಿಕೊಳ್ಳಲು ಕರೆ ನೀಡಿದರು. ನನ್ನ ದೇಶ ನನ್ನ ಜನ ನನ್ನ ಮಾನ ಪ್ರಾಣ ಘನ ತೀರಿಸುವೆನೆ ಅದರ ಋಣ ಈ ಒಂದೇ ಜನ್ಮದಿ ಎಂಬ ಕವಿವಾಣಿಯಂತೆ ಸೈನಿಕರ ಸೇವೆ ಅತ್ಯಮೂಲ್ಯ ಹಾಗೂ ಅವಿಸ್ಮರಣೀಯ ಎಂದು ಹೇಳಿದರು.

Bharath Scout and Guides ಕಾರ್ಯಕ್ರಮದಲ್ಲಿ ಜಿಲ್ಲಾ ಗೈಡ್ ಆಯುಕ್ತೆ ಶಕುಂತಲಾ ಚಂದ್ರಶೇಖರ್, ಜಿಲ್ಲಾ ಕಾರ್ಯದರ್ಶಿಗಳಾದ ಹೆಚ್.ಪರಮೇಶ್ವರ, ಜಂಟಿಕಾರ್ಯದರ್ಶಿ ಲಕ್ಷ್ಮಿ ಕೆ ರವಿ, ವಿಜಯಕುಮಾರ್, ಮಲ್ಲಿಕಾರ್ಜುನ ಕಾನೂರ್, ರಾಜೇಶ್ ವಿ ಅವಲಕ್ಕಿ, ಕಾತ್ಯಾಯಿನಿ.ಸಿ.ಎಸ್, ಎಂ.ಹೇಮಲತಾ, ಆರ್.ಮೀನಾಕ್ಷಮ್ಮ, ದಾಕ್ಷಾಯಣಿ, ರಾಜಕುಮಾರ್, ಸಂದೇಶ್ ನಾಡಿಗ್, ಬಿಂದು ಶೇಖರ್, ಗೀತಾ ಚಿಕ್ಮಠ್, ನಾಗಪ್ರಿಯ, ಕಸ್ತೂರಬಾ ಬಾಲಿಕಾ ಶಾಲೆಯ ಗೈಡ್ ವಿದ್ಯಾರ್ಥಿನಿಯರು, ಮೇರಿ ಇಮ್ಯಾಕ್ಯುಲೆಟ್ ಶಾಲೆಯ ಗೈಡ್ ಮಕ್ಕಳು, ಎಟಿಎನ್‌ಸಿಸಿ, ಡಿವಿಎಸ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ ರೇಂಜರ್ ವಿದ್ಯಾರ್ಥಿಗಳು ದಳನಾಯಕ, ನಾಯಕಿಯರೊಂದಿಗೆ ಭಾಗವಹಿಸಿದ್ದರು.

ರಾಜೇಶ್ ವಿ ಅವಲಕ್ಕಿ ನಿರೂಪಿಸಿ, ಹೆಚ್.ಪರಮೇಶ್ವರ ಸ್ವಾಗತಿಸಿ, ವಿಜಯಕುಮಾರ್ ವಂದಿಸಿದರು. ರಾಷ್ಟç ಗೀತೆಯೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.