Tuesday, April 7, 2026
Tuesday, April 7, 2026
Home Blog Page 622

Interact Club ವಿದ್ಯಾರ್ಥಿ ಶಕ್ತಿ,ರಾಷ್ಟ್ರದ ಶಕ್ತಿ- ಜಿ.ಕಿರಣ್ ಕುಮಾ

0

Interact Club ಇಂಟರಾಕ್ಟ್ ಕ್ಲಬ್ 1962 ರಲ್ಲಿ ಪ್ರಾರಂಭವಾಗಿ ಶಾಲೆಯ ಇಂಟರಾಕ್ಟ್ ಕ್ಲಬ್ ನಿಂದ ಉತ್ತಮ ವಿದ್ಯಾರ್ಥಿ ನಾಯಕರನ್ನು ಸಮಾಜಕ್ಕೆ ಕೊಟ್ಟಿದೆ ಎಂದು ಶಿವಮೊಗ್ಗ ಸೆಂಟ್ರಲ್ ಕ್ಲಬ್ ನ ಅಧ್ಯಕ್ಷ ಕಿರಣ್ ಕುಮಾರ್.ಜಿ ಹೇಳಿದರು.

ಶಿವಮೊಗ್ಗ ನಗರದ ವಿನೋಬನಗರ ಡಿವಿಎಸ್ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಇಂಟರಾಕ್ಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಶಕ್ತಿ ರಾಷ್ಟ್ರದ ಶಕ್ತಿ ಎಂದು ತಿಳಿಸಿ, ಅಧ್ಯಕ್ಷರಿಗೂ ಹಾಗೂ ಕಾರ್ಯದರ್ಶಿಗಳಿಗೂ ಶುಭಾಶಯ ತಿಳಿಸಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನ ಇಂಟರಾಕ್ಟ್ ಚೇರ್ಮನ್ ವಿನೋದ್ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಇಂಟರಾಕ್ಟ್ ಕ್ಲಬ್, ವಿದ್ಯಾರ್ಥಿಗಳು ನಾಯಕತ್ವ ಗುಣ ಹಾಗೂ ವಾಕ್ ಚಾತುರ್ಯಾ ಕಲಿಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಇಂಟರಾಕ್ಟ್ ಕ್ಲಬ್ಬಿನ ಅಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು.

Interact Club ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಲಕ್ಷ್ಮಣ್, ರೋಟರಿ ಸಂಸ್ಥೆಯು ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ವಿದ್ಯಾರ್ಥಿಗಳ ಜೀವನದಲ್ಲಿ ಸ್ವಂತವಾಗಿ ಒಂದು ಕಾರ್ಯಕ್ರಮವನ್ನು ಆಯೋಜಿಸಿ ಅವರ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸ್ಥಾಪಿಸಿರುವುದು ಶ್ಲಾಘನೀಯ.

ಇದಕ್ಕೆ ಎಲ್ಲಾ ರೋಟರಿ ಸಂಸ್ಥೆಯ ಅಧ್ಯಕ್ಷರಿಗೂ ಹಾಗೂ ಸದಸ್ಯರಿಗೂ ಧನ್ಯವಾದಗಳು ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಸದಸ್ಯ ಕಾರ್ಯದರ್ಶಿ ಈಶ್ವರ್, ಇಂಟರಾಕ್ಟ್ ಚೇರ್ಮನ್ ವಿನೋದ್, ಖಜಾಂಚಿ ಬಸವರಾಜ್, ಮಾಜಿ ಅಸಿಸ್ಟೆಂಟ್ ಗೌವರ್ನರ್ ರವಿ ಕೋಟೋಜಿ, ನಿರಂಜನ, ಗುರುರಾಜ್, ಗಣೇಶ್ ಅಂಗಡಿ, ಜಗದೀಶ್, ಗಣೇಶ್.ಕೆ.ವಿ, ಗಿರೀಶ್, ಮೋಹನ್, ದೀಪಾ ಜೈಶೀಲ್ ಶೆಟ್ಟಿ, ರಾಜಶ್ರೀ ಬಸವರಾಜ, ಜ್ಯೋತಿ ಶ್ರೀರಾಮ್, ಆನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಗೀತಾ ಜಗದೀಶ್, ಕಾರ್ಯದರ್ಶಿ ಶುಭ ಚಿದಾನಂದ್ ಹಾಗೂ ನಯನ ಗಣೇಶ್ ಸೇರಿದಂತೆ ಇತರೆ ಸದಸ್ಯರು ಉಪಸ್ಥಿತರಿದ್ದರು

Balebailu-Kuruvalli Bypass Road ಭಯಾನಕ ಮಳೆಗೆ ಮತ್ತೆ ಕುಸಿದ ಬಾಳೆಬೈಲು-ಕುರುವಳ್ಳಿ ಬೈಪಾಸ್ ರಸ್ತೆ ಸನಿಹದ ಗುಡ್ಡ

0

Balebailu-Kuruvalli Bypass Road ಕಳೆದ ಹದಿನೈದು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಭಯಾನಕ ಮಳೆಗೆ ಪಟ್ಟಣ ವ್ಯಾಪ್ತಿಯ ಬಾಳೆಬಯಲು- ಕುರುವಳ್ಳಿಯ ಬೈಪಾಸ್ ರಸ್ತೆಯ ಗುಡ್ಡ ಮತ್ತೆ ಕುಸಿಯಲು ಆರಂಭಿಸಿದೆ. ಕಳೆದ ವಾರ ಈ ಬೈಪಾಸ್ ರಸ್ತೆಯ ಗುಡ್ಡಕುಸಿತದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿದ್ದರು.

Balebailu-Kuruvalli Bypass Road ಮಳೆಯ ಅಬ್ಬರಕ್ಕೆ ಗುಡ್ಡದ ಸವಕಲು ಮಣ್ಣು ಜರಿಯುತಲಿದ್ದು ತಡೆಗೋಡೆಯನ್ನು ದಾಟಿ ರಸ್ತೆಯಲ್ಲಿ ಬಿದ್ದಿದ್ದು,ಕಳೆದ ಒಂದು ವಾರದಿಂದ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ

Rotary Club Shivamogga ಪ್ರತಿಭಾವಂತರನ್ನು ಉದ್ಯಮಿಗಳನ್ನಾಗಿಸಲು ಸೂಕ್ತ ವೇದಿಕೆ ಒದಗಿಸುತ್ತಿದ್ದೇವೆ – ಶ್ರೀಹರೀಶ್ ಗದಗಿನ್

0

Rotary Club Shivamogga ಮಲೆನಾಡು ಭಾಗದಲ್ಲಿ ಹೊಸ ಸ್ಟಾರ್ಟ್ ಅಪ್ ಗಳು ಆರಂಭವಾಗಲು ಉತ್ತಮ ಅವಕಾಶವಿದ್ದು ನಾವೀನ್ಯತೆ ಹೊಂದಿರುವ ಉದ್ಯಮ ಚಿಂತನೆಗಳು ಕಾರ್ಯರೂಪಕ್ಕೆ ಬರಬೇಕು. ಬೆಂಗಳೂರಿನಂತೆಯೇ ಮಲೆನಾಡು ಭಾಗವೂ ಕೂಡ ಹೂಡಿಕೆದಾರರನ್ನು ಆಕರ್ಷಿಸಿ ಇಲ್ಲಿನ ಪ್ರತಿಭಾವಂತರನ್ನು ಉದ್ಯಮಿಗಳನ್ನಾಗಿಸಲು ಬೇಕಾದ ವೇದಿಕೆಯನ್ನು ಒದಗಿಸುತ್ತಿದ್ದೇವೆ ಎಂದು ಅನ್ವೇಷಣ ಟೆಕ್ನಾಲಜಿ ಬಿಸಿನೆಸ್ ಇನಕ್ಯುಬೇಟರ್ ನ ಮುಖ್ಯಸ್ಥರಾದ ಶ್ರೀ ಹರೀಶ್ ಗದಗಿನ್ ರವರು ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಇದರ ವಾರದ ಸಭೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹರೀಶ್ ರವರು ಕ್ರಿಯಾಶೀಲ ನವ ಉದ್ಯಮಿಗಳಿಗೆ ಅವಶ್ಯಕವಿರುವ ತರಬೇತಿ, ಹೂಡಿಕೆದಾರರು, ಮಾರುಕಟ್ಟೆ, ಮುಂತಾದ ವಿಷಯಗಳನ್ನು ಒದಗಿಸುವಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಅನ್ವೇಷಣ ಸಂಸ್ಥೆ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು. ತಮ್ಮ ಸಂಸ್ಥೆಯ ಮೂಲಕ ಯುವ ಸೃಷ್ಟಿ, ದಿಕ್ಸೂಚಿ, ವೃದ್ಧಿ ಹಾಗೂ ವೇಗ ಎಂಬ ವಿವಿಧ ಕಾರ್ಯಯೋಜನೆಗಳ ಮೂಲಕ ಸ್ಟಾರ್ಟ್ ಅಪ್ ಉದ್ದಿಮೆದಾರರಿಗೆ ಅಗತ್ಯ ಸೇವೆ ಕಲ್ಪಿಸಿ ಯುವಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿಯೇ ಯುವ ಜನರಿಗೆ ಉದ್ಯಮಶೀಲತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಿ ಈಗಾಗಲೇ ಮಲೆನಾಡು ಭಾಗದ 8000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ತಲುಪಿರುವುದಾಗಿಯೂ ತಿಳಿಸಿದರು. ಕಾಕುಡ್ ಎಂಬ ಸ್ಟಾರ್ಟ್ ಅಪ್ ಸಂಸ್ಥಾಪಕರಾದ ಶ್ರೀ ವಿನಯ್ ರವರು ಮಾತನಾಡಿ ಅನ್ವೇಷಣದ ಮಾರ್ಗದರ್ಶನದಿಂದ ತಮ್ಮ ಉದ್ದಿಮೆಯ ಬೆಳವಣಿಗೆಗೆ ಆದ ಉಪಯೋಗಗಳ ಬಗ್ಗೆ ತಿಳಿಸಿದರು.
Rotary Club Shivamogga ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಇದರ ಅಧ್ಯಕ್ಷರಾದ ರೊ,ಮುಸ್ತಾಕ್ ಅಲಿಶಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿವಮೊಗ್ಗದಂತಹ ನಗರದಲ್ಲಿ ವಾಣಿಜ್ಯೋದ್ಯಮಕ್ಕೆ ಬೇಕಾಗಿರುವ ಹೊಸ ಆಯಾಮವನ್ನು ನೀಡುವಲ್ಲಿ ಶ್ರಮಿಸುತ್ತಿರುವ ಅನ್ವೇಷಣ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಕ್ಲಬ್ ನ ಕಾರ್ಯದರ್ಶಿ ರೊ.ಶ್ರೀಕಾಂತ್ ಎ.ವಿ., ಸಹ ಕಾರ್ಯದರ್ಶಿ ರೊ.ಡಾ.ಸಿದ್ಧಲಿಂಗ ಮೂರ್ತಿ, ವಲಯ ಸೇನಾನಿ ರೊ.ಮಂಜುಳಾ ರಾಜು, ಅನ್ವೇಷಣ ಸಂಸ್ಥೆಯ ಇನ್ ಕ್ಯುಬೇಶನ್ ಮ್ಯಾನೇಜರ್ ಶ್ರೀ ಭರತ್ ಹಾಗೂ ಕ್ಲಬ್ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕ್ಲಬ್ ವತಿಯಿಂದ ಶ್ರೀ ಹರೀಶ್ ಗದಗಿನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Krishnarajendra Water Purification Plant ಶಿವಮೊಗ್ಗ ಜಲಶುದ್ಧಿಕರಣ ಘಟಕ ಲಿಂಕಿಂಗ್ ನಿರ್ವಹಣೆ: ಆಗಸ್ಟ್ 5 ರಂದು ಕೆಲವೆಡೆ ನೀರು ಸರಬರಾಜಿನಲ್ಲಿ ವ್ಯತ್ಯಯ

0

Krishnarajendra Water Purification Plant ಶಿವಮೊಗ್ಗ ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿ ಆರ್.ಎಂ. 9 ಕೊಳವೆ ಮಾರ್ಗದ ಲಿಂಕಿಂಗ್ ಸಂಬಂಧ ಪಂಪಿಂಗ್ ನಿಲುಗಡೆ ಮಾಡುವುದರಿಂದ ಆ.05 ರಂದು ನಗರದ ಸೂಳೆಬೈಲು, ಊರುಗಡೂರು ಮಾರಿಕಾಂಬ ದೇವಸ್ಥಾನ, ಸಹ್ಯಾದ್ರಿ ಕಾಲೇಜ್ (ಎಂ.ಆರ್.ಎಸ್.), ಸಹ್ಯಾದ್ರಿ ಕಾಲೇಜ್-2, ಗುಡ್ಡೇಕಲ್, ಪುರಲೆ, ಸಿದ್ದೇಶ್ವರ ನಗರ, ವಾದಿ-ಎ-ಹುದಾ, ಮೆಹಬೂಬ್‌ನಗರ, ಹರಿಗೆ, ಮಲವಗೊಪ್ಪ ಪ್ರದೇಶಗಳಲ್ಲಿ ನೀರು ಸರಬರಾಜು ವಿತರಣಾ ವ್ಯವಸ್ಥೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ

Bharat Scout and Guide ಜಿಲ್ಲಾ ಸ್ಕೌಟ್ & ಗೈಡ್ಸ್ ವತಿಯಿಂದ ವಿ ಸ್ಕಾರ್ಫ್ ದಿನಾಚರಣೆ

0

Bharat Scout and Guide ಭಾರತ್ ಸ್ಕೌಟ್ ಮತ್ತು ಗೈಡ್ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಯ ವತಿಯಿಂದ “ವಿಶ್ವ ಸ್ಕಾರ್ಫ್ ಡೆ ಹಾಗೂ ಸ್ಕೌಟಿಂಗ್ ಸೂರ್ಯೋದಯ ದಿನಾಚರಣೆ”ಯನ್ನು ಆಚರಿಸಲಾಯಿತು.

ಕಾರ್ಯಕ್ರಮವು ಧ್ವಜಾರೋಹಣದೊಂದಿಗೆ ಆರಂಭವಾಯಿತು. ಸಭಾ ಕಾರ್ಯಕ್ರಮವು ಸಾಮೂಹಿಕ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಶ್ರೀ ರಾಜೇಶ್.ವಿ.ಅವಲಕ್ಕಿ. ಕಾರ್ಯದರ್ಶಿ ಸ್ಥಳೀಯ ಸಂಸ್ಥೆ ಇವರು ದಿನದ ಮಹತ್ವವನ್ನು ಸರ್ವರಿಗೂ ತಿಳಿಸಿದರು.

ಈ ಸಂದರ್ಭದಲ್ಲಿ ಸ್ಕೌಟಿಂಗ್ ಚಳುವಳಿಯ ಸಂಸ್ಥಾಪಕರಾದ ಲಾರ್ಡ್ ಬೇಡನ್ ಪೋವೆಲ್ ಹಾಗೂ ಶ್ರೀಮತಿ ಲೇಡಿ ಬೇಡನ್ ಪೋವೆಲ್ ಅವರ ಭಾವಚಿತ್ರಕ್ಕೆ ಸ್ಕಾರ್ಫ್ ಧರಿಸುವ ಮೂಲಕ ಗೌರವಿಸಲಾಯಿತು.

ಶ್ರೀಮತಿ ಗೀತಾ ಚಿಕ್ಮಠ್ ಜಿಲ್ಲಾ ತರಬೇತಿ ಆಯುಕ್ತರು(ಗೈಡ್) ಇವರು ಸ್ಕೌಟ್ ಗೈಡ್ ವಂದನೆಯೊಂದಿಗೆ ಪ್ರತಿಜ್ಞೆಯ ಪುನರುಚ್ಛಾರಣೆ ಮಾಡಿಸಿದರು.

Bharat Scout and Guide ನಂತರ ಅಧ್ಯಕ್ಷೀಯ ನುಡಿಯಲ್ಲಿ ಮಾತನಾಡಿದ ಜಿಲ್ಲಾಮುಖ್ಯ ಆಯುಕ್ತರಾದ ಶ್ರೀ.ಕೆ.ಪಿ.ಬಿಂದುಕುಮಾರ್ ಅವರು ವಿಶ್ವ ಸ್ಕಾರ್ಫ್ ದಿನಾಚರಣೆಯ ಪರಿಕಲ್ಪನೆಯಂತೆ ಈ ಹಿಂದೆ ಸ್ಕೌಟಿಂಗ್ ಚಳುವಳಿಯಲ್ಲಿದ್ದವರು ಹಾಗೂ ಪ್ರಸ್ತುತ ಸಕ್ರಿಯವಾಗಿ ರುವ ಎಲ್ಲಾ ಸದಸ್ಯರು ಸಾರ್ವಜನಿಕವಾಗಿ ಸ್ಕಾರ್ಫ್ ನ್ನು ಧರಿಸಿ ಎಂದೆಂದಿಗೂ ಸ್ಕೌಟಿಂಗ್ ಚಳುವಳಿಯ ತತ್ವಗಳನ್ನು ಪ್ರಚಾರಪಡಿಸ ಬೇಕೆಂದು ಹೇಳುತ್ತಾ” ಒಮ್ಮೆ ಸ್ಕೌಟ್ ಆದರೆ ಆತ ಯಾವಾಗಲೂ ಸ್ಕೌಟ್ ಆಗಿರುತ್ತಾನೆ ಎಂದು ಕರೆ ನೀಡಿದರು.

ನಗರದ ವಿವಿಧ ಶಾಲೆಗಳ ಸ್ಕೌಟ್ ಮತ್ತು ಗೈಡ್ ಮಕ್ಕಳು ಹಾಗೂ ದಳನಾಯಕರುಗಳಾದ ಶ್ರೀಮತಿ.M.L.ಶಾಂತಮ್ಮ, ಶ್ರೀಮತಿ. M.ಹೇಮಲತಾ. ಶ್ರೀಮತಿ.ಸುನಂದಮ್ಮ. ಶ್ರೀಮತಿ ನಾಗಪ್ರಿಯಾ, ಶ್ರೀ.ಕೃಷ್ಣಸ್ವಾಮಿ, ಪ್ರತಿನಿಧಿ ಭದ್ರಾವತಿ, ಶ್ರೀ. ನಾಗರಾಜ್, ಹಿರಿಯ ಸ್ಕೌಟ್ ಮಾಸ್ಟರ್, ಶ್ರೀ ವಿವೆಕಾನಂದ ಮಾನೆ , ಸ್ಕೌಟ್ ಮಾಸ್ಟರ್. ಜಿಲ್ಲಾ. ಸಹಕಾರ್ಯದರ್ಶಿ ಶ್ರೀ ವೈ.ಆರ್.ವೀರೇಶಪ್ಪ,ಹಾಗೂ ಜಿಲ್ಲಾ ಸಂಸ್ಥೆಯ ಸಿಬ್ಬಂಧಿ ವರ್ಗದವರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾಸಂಸ್ಥೆಯ ಕಾರ್ಯದರ್ಶಿ ಶ್ರೀ ಪರಮೇಶ್ವರ ಸ್ವಾಗತವನ್ನು ಕೋರಿದರು. ಶ್ರೀ.ಜಿ. ವಿಜಯಕುಮಾರ್.PRO. ವಂದನಾರ್ಪಣೆ ಮಾಡಿದರು. ಶ್ರೀ ರಾಜೇಶ್.ವಿ.ಅವಲಕ್ಕಿ ನಿರೂಪಣೆ ಮಾಡಿದರು.

Maharaja Gruhavaibhava ಮಹಾರಾಜ ಗೃಹವೈಭವ್ ನಲ್ಲಿ ಗೋದ್ರೆಜ್ ಲಾಕರ್ ಗಳ ವಿಶೇಷ ರಿಯಾಯಿತಿ ಮಾರಾಟ

0

Maharaja Gruhavaibhava ಶಿವಮೊಗ್ಗ ನಗರದ ಕುವೆಂಪು ರಸ್ತೆ ನಂಜಪ್ಪ ಆಸ್ಪತ್ರೆ ಸಮೀಪ ಮಹರಾಜ ಗೃಹ ವೈಭವ ಶೋರೂಂನಲ್ಲಿ ಆ. 2ರಿಂದ 18ರವರೆಗೆ ಗೋದ್ರೇಜ್ ಕಂಪನಿಯ ಲಾಕರ್‌ಗಳ ಮೇಲೆ ವಿಶೇಷ ರಿಯಾಯ್ತಿ ಸ್ಕೀಂ ನ್ನು ನಗರಸಭಾ ಮಾಜಿ ಅಧ್ಯಕ್ಷರಾದ ಎನ್.ಜೆ. ರಾಜಶೇಖರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾಲೀಕ ಗಣೇಶ್ ಪ್ರಸಾದ್, ಷಣ್ಮುಖಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Karnataka Examination Authority ಪಿಜಿ ಸಿಇಟಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ- ಪ್ರದೀಪ್ ನಿಕ್ಕಂ

0

Karnataka Examination Authority ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಆ.04 ರಂದು 2024 ನೇ ಸಾಲಿನ ಪಿಜಿಸಿಇಟಿ ಪರೀಕ್ಷೆಗಳು ನಗರದ ಒಟ್ಟು 07 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಅಗತ್ಯವಾದ ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಜಿಲ್ಲಾಡಳಿತ ಕಚೇರಿಯ ಕಚೇರಿ ಸಹಾಯಕರಾದ ಪ್ರದೀಪ್ ನಿಕ್ಕಂ ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆ.01 ರಂದು ಏರ್ಪಡಿಸಲಾಗಿದ್ದ 2024 ನೇ ಸಾಲಿನ ಪಿಜಿಸಿಇಟಿ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಆಸನ ವ್ಯವಸ್ಥೆ, ಮೂಲಭೂತ ಸೌಕರ್ಯಗಳು ಸೇರಿದಂತೆ ಪಾರದರ್ಶಕವಾಗಿ ಪರೀಕ್ಷೆ ನಡೆಯಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಆ.04 ರಂದು ನಗರದ 07 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 10.30 ರಿಂದ 12.30 ರವರೆಗೆ ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 4.30 ರವರೆಗೆ ಪರೀಕ್ಷೆಗಳು ನಡೆಯಲಿವೆ. ಬೆಳಗಿನ ಅಧಿವೇಶನದಲ್ಲಿ ಎಂಸಿಎ ಮತ್ತು ಮಧ್ಯಾಹ್ನದ ಅಧಿವೇಶನದಲ್ಲಿ ಎಂಬಿಎ ಗೆ ಪಿಜಿಸಿಇಟಿ ಪರೀಕ್ಷೆಗಳು ನಡೆಯಲಿವೆ.
ಎಂಸಿಎ ಗೆ 1286 ಮತ್ತು ಎಂಬಿಎ ಗೆ 2421 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪ್ರಶ್ನೆ ಪತ್ರಿಕೆ ಸಾಗಾಟ ಮಾಡಲು ತ್ರಿಸದಸ್ಯ ಸಮಿತಿ ನೇಮಿಸಿ ಈಗಾಗಲೇ ಆದೇಶಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ಮೀ ವ್ಯಾಪ್ತಿಯಲ್ಲಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ-23 ರ ಕಲಂ 163 ರನ್ವಯ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಲಾಗಿದೆ.
ಪ್ರಶ್ನೆ ಪತ್ರಿಕೆ ಸಾಗಾಟ ವಾಹನಕ್ಕೆ ಹಾಗೂ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಬಂದೋಬಸ್ತ್ಗೆ ಪೊಲೀಸ್ ಇಲಾಖೆಗೆ ಪತ್ರ ಬರೆಯಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಮೂರು ಜನ ಅಧಿಕಾರಿಗಳನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಹಾಗೂ ಪ್ರತಿ ಕೇಂದ್ರಕ್ಕೆ ವೀಕ್ಷಕರು, ಪ್ರಶ್ನೆ ಪತ್ರಿಕೆ ಪಾಲಕರು, ಜಾಗೃತ ದಳದ ಸಿಬ್ಬಂದಿಗಳು ಮತ್ತು ಅಗತ್ಯವಿರುವ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದರು.
ಪರೀಕ್ಷೆಗಳನ್ನು ಶಾಂತಯುತವಾಗಿ ನಡೆಸಲು ಪರೀಕ್ಷಾ ಅವಧಿಯಲ್ಲಿ ಯಾವುದೇ ರೀತಿಯ ಅವ್ಯವಹಾರಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ಕೇಂದ್ರಗಳಿಗೂ ಓರ್ವ ಮಹಿಳಾ ಮತ್ತು ಓರ್ವ ಪುರಷ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲು ಹಾಗೂ ಜಿಲ್ಲಾ ಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ತರಲು ಪ್ರತಿ ಮಾರ್ಗಕ್ಕೆ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಪೊಲೀಸ್ ಇಲಾಖೆಗೆ ಕೋರಲಾಗಿದೆ ಎಂದರು.
Karnataka Examination Authority ಡಿಡಿಪಿಯು ಚಂದ್ರಪ್ಪ ಗುಂಡೆಪಲ್ಲಿ ಮಾತನಾಡಿ, ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಟಿವಿ ಅಳವಡಿಸಲಾಗಿದ್ದು ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಗೊಂದಲವಿಲ್ಲದೇ ಸುಸೂತ್ರವಾಗಿ ಪರೀಕ್ಷೆಗಳು ನಡೆಯಲು ಅವಶ್ಯಕವಾದ ಸಕಲ ಸಿದ್ದತಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಖಜಾನಾಧಿಕಾರಿ ಸಾವಿತ್ರಿ, ವಿವಿಧ ಕಾಲೇಜುನಗಳ ಪ್ರಾಂಶುಪಾಲರು, ಪರೀಕ್ಷೆಗೆ ನಿಯೋಜಿತರಾದ ಅಧಿಕಾರಿಗಳು ಪಾಲ್ಗೊಂಡಿದ್ದರು.

Pradhan Mantri Awas Yojana ಶಾಸಕ ಚೆನ್ನಿ ಅವರಿಂದ ಗೋವಿಂದಪುರ, ಗೋಪಿಶೆಟ್ಟಿ ಕೊಪ್ಪಗಳಲ್ಲಿನ 4836 ಮನೆ ನಿರ್ಮಾಣ ಕಾಮಗಾರಿ ಪರಿಶೀಲನೆ

0

Pradhana Mantri Awas Yojana ಶಿವಮೊಗ್ಗ ನಗರದ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಗೋವಿಂದಪುರ ಹಾಗೂ ಗೋಪಿಶೆಟ್ಟಿಕೊಪ್ಪ ಬಡಾವಣೆಗಳಲ್ಲಿ G+2 ಮಾದರಿಯಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ನಿರ್ಮಾಣ ಹಂತದಲ್ಲಿರುವ 4836 ಮನೆಗಳ ಕಾಮಗಾರಿಯ ಪ್ರಗತಿಯ ಪರಿಶೀಲನೆ ನಡೆಸಿದರು.

ಈ ವೇಳೆ ಅಧಿಕಾರಿಗಳಿಂದ ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿ ಕುರಿತು ಚರ್ಚಿಸಿ, ಶೀಘ್ರವಾಗಿ ಮನೆಗಳ ಕಾಮಗಾರಿಯನ್ನು ಪೂರ್ಣಗೊಳಿಸಲು ನಿರ್ದೇಶನ ನೀಡಿ, ನಿಧಾನ ಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯ ಕುರಿತು ಸಂಬಂಧ ಪಟ್ಟ ಗುತ್ತಿಗೆದಾರರಿಗೆ ನೋಟಿಸ್ ನೀಡಲು ತೀರ್ಮಾನಿಸಲಾಯಿತು.

Pradhana Mantri Awas Yojana ಈ ಸಂದರ್ಭದಲ್ಲಿ ವಸತಿ ಇಲಾಖೆ, ಬೆಂಗಳೂರು ಪ್ರಧಾನ ಕಾರ್ಯದರ್ಶಿಗಳಾದ ನವೀನ್ ರಾಜ್ ಸಿಂಗ್ ಐ.ಎ.ಎಸ್ ಪ್ರಧಾನ ವ್ಯವಸ್ಥಾಪಕರಾದ ಸುಶೀಲಮ್ಮ , ಮಹಾನಗರ ಪಾಲಿಕೆ ಆಯುಕ್ತರಾದ ಡಾ. ಕವಿತಾ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

MESCOM ಆಗಸ್ಟ್ 3 ರಂದು ಕೋಟೆ ರಸ್ತೆ ಸುತ್ತಮುತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

0

MESCOM ಶಿವಮೊಗ್ಗ ನಗರದ ಕೋಟೆ ಮಾರಿಕಾಂಬ ದೇವಸ್ಥಾನದ ಬಳಿ ಕಂಬಗಳನ್ನು ಬದಲಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ. 03 ರಂದು ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ಕೋಟೆ ರಸ್ತೆ, ಎಸ್.ಪಿ.ಎಂ.ರಸ್ತೆ,

MESCOM ಓ.ಬಿ.ಎಲ್.ರಸ್ತೆ, ಮಹಾರಾಗ ರಸ್ತೆ, ಅಶೋಕ ರಸ್ತೆ, ಶಿವಾಜಿ ರಸ್ತೆ, ವಿನಾಯಕ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಲಷ್ಕರ್ ಮೊಹಲ್ಲಾ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Department of Sericulture ರೇಷ್ಮೆ ಇಲಾಖೆಯ ವಿವಿಧ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

0

Department of Sericulture ರೇಷ್ಮೆ ಇಲಾಖೆಯು 2024-25ನೇ ಸಾಲಿನ ಜಿಲ್ಲಾ ಪಂಚಾಯತ್ ಯೋಜನೆಗಳಾದ ಹೊಸ ಹಿಪ್ಪುನೇರಳೆ ನಾಟಿ ಮತ್ತು ಹಿಪ್ಪು ನೇರಳೆ ನರ್ಸರಿ ಸ್ಥಾಪನೆ ಮಾಡಲು ಸಹಾಯಧನಕ್ಕಾಗಿ ಆರ್ಹರಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಆಸಕ್ತರು www.shimoga.nic.in ವೆಬ್‌ಸೈಟ್ ಮೂಲಕ ಆಗಸ್ಟ್ 31ರೊಳಗಾಗಿ ಅರ್ಜಿ ಸಲ್ಲಿಸುವಂತೆ ರೇಷ್ಮೆ ಉಪನಿರ್ದೇಶಕರು ತಿಳಿಸಿರುತ್ತಾರೆ.

Department of Sericulture ಹೆಚ್ಚಿನ ಮಾಹಿತಿಗಾಗಿ ರೇಷ್ಮೆ ಉಪನಿರ್ದೇಶಕರು, ರೇಷ್ಮೆ ಇಲಾಖೆ, 100 ಅಡಿರಸ್ತೆ, ರಾಜೇಂದ್ರನಗರ, ನಿರ್ಮಲ ನರ್ಸಿಂಗ್ ಹೋಂ ಎದುರು, ಶಿವಮೊಗ್ಗ, ದೂ.ಸಂ.: 9845849636 / 08182-295637 ಗಳನ್ನು ಸಂಪರ್ಕಿಸುವುದು.