Manjunath Chennamumbapur ಬಿಜೆಪಿ ಎಸ್‌ಸಿ ಮೋರ್ಚಾದ ಉಸ್ತುವಾರಿಯಾಗಿದ್ದ ಮಂಜುನಾಥ್ ಚೆನ್ನಮುಂಬಾಪುರ ಅವರ ವಿರುದ್ಧ ಮತ್ತೋರ್ವ ಮಹಿಳೆ ದೂರು ದಾಖಲಿಸಿದ್ದಾರೆ. ಇವರು ಸಹ ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಮತ್ತು ಹಣ ಪಡೆದಿರುವ ಆರೋಪದ ಅಡಿ ಮಹಿಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
40 ವರ್ಷದ ಮಹಿಳೆಯೊಬ್ಬರಿಗೆ ಅಂಗನವಾಡಿ ಕೆಲಸ ಕೊಡಿಸುವುದಾಗಿ ಹತ್ತಿರವಾಗಿದ್ದ ಮಂಜುನಾಥ್ ನಂತರ ದೈಹಿಕ ಸಂಪರ್ಕ ಬೆಳೆಸಿ ಮದುವೆಯಾಗುವುದಾಗಿ ನಂಬಿಸಿದ್ದರು. ನಂತರ ಮಂಜುನಾಥ್ ಅವರು ಮದುವೆಯಾಗಿದ್ದಾಗ ತಿಳಿದು ಬಂದಿತ್ತು. ಇವರ ಮೊದಲ ಪತ್ನಿಯೂ ಮಹಿಳೆಯೊಂದಿಗೆ ಮಂಜುನಾಥ್ ಅವರು ಮದುವೆಯಾಗಲು ಒಪ್ಪಿಗೆ ನೀಡಿದ್ದರೂ ಸಹ ಮದುವೆಯಾಗದೆ 6 ಲಕ್ಷದ ವರೆಗೆ ಹಣ ಪಡೆದು ನಂತರ, ಕರೆ ಮಾಡಿದರೂ ಕರೆ ಸ್ವೀಕರಿಸದೆ ಇದ್ದಾಗ ಮನೆಗೆ ತೆರಳಿದಾಗ ಮಹಿಳೆಯ ಮೇಲೆ ನಡೆಸಿದ್ದ ಘಟನೆ ಸೆ.1 ರಂದು ನಡೆದಿತ್ತು.
Manjunath Chennamumbapur ಈಗ 50 ವರ್ಷದ ಮಹಿಳೆಯೊಬ್ಬರು ಮಂಜುನಾಥ್ ಅವರಿಂದ ದೈಹಿಕ ಸಂಪರ್ಕ ಬೆಳೆಸಿ ನಂತರ ವಂಚನೆ ಮಾಡಿರುವ ಘಟನೆ ಕುರಿತು ಮಹಿಳಾ ಠಾಣೆಯಲ್ಲಿ ಎರಡನೇ ಎಫ್ಐಆರ್ ದಾಖಲಾಗಿದೆ. ನಾಗವೇಣಿ ಮತ್ತು ಆಶಾರವರಿಂದ ಎರಡು ಎಫ್ಐಆರ್ ದಾಖಲಾಗಿದೆ.
Manjunath Chennamumbapur ಆರೋಪಿ ಮಂಜುನಾಥ್ ವಿರುದ್ಧ ಮತ್ತೊಂದು ಲೈಂಗಿಕ ದೌರ್ಜನ್ಯದ ದೂರು ದಾಖಲು
JCI Institute ಸೆ.15 ರವರೆಗೆ ಜಿಸಿಐ ಹಬ್ಬ ಆಚರಣೆ- ಪೂರ್ಣಿಮಾ ಸುನೀಲ್
JCI Institute ಸೇವಾ ಮನೋಭಾವ ಹಾಗೂ ನಾಯಕತ್ವ ಗುಣ ಬೆಳೆಸುವಲ್ಲಿ ಜೆಸಿಐ ಮಹತ್ತರ ಪಾತ್ರ ವಹಿಸುತ್ತದೆ ಎಂದು ಜೆಸಿಐ ಸಪ್ತಾಹ ಸಂಯೋಜಕಿ ಪೂರ್ಣಿಮಾ ಸುನೀಲ್ ಹೇಳಿದರು.
ಜೆಸಿಐ ಸಪ್ತಾಹದ ಅಂಗವಾಗಿ ಮಿಷನ್ ಕಾಂಪೌಂಡ್‌ನಲ್ಲಿ ಇರುವ ಪಾರ್ಕ್ ನಲ್ಲಿ ಜೆಸಿಐ ಇಂಡಿಯಾದ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಸಮಾಜಮುಖಿ ಕೆಲಸದೊಂದಿಗೆ ತರಬೇತಿ ನೀಡುವ ಜತೆಯಲ್ಲಿ ಸ್ವಸ್ಥ ಸಮಾಜ ಕಟ್ಟಲು ನಿರಂತರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಜೆಸಿಐ ಸಂಸ್ಥೆ ಪ್ರತಿ ವರ್ಷ ಸಪ್ತಾಹ ನಡೆಸುತ್ತಿದ್ದು, ಪ್ರಸ್ತಕ ಸಾಲಿನಲ್ಲಿ ಸೆ. 9ರಿಂದ 15ರವರೆಗೆ ಜೆಸಿಐ ಹಬ್ಬ ಆಚರಿಸುತ್ತಿದ್ದು, ಸಪ್ತಾಹದಲ್ಲಿ ಸಾರ್ವಜನಿಕ ಸಂವಹನ ಹಾಗೂ ಸೇವೆಗೆ ಸಂಬಂಧಿಸಿ ವೈವಿಧ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಸೇವೆ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
JCI Institute ಜೆಸಿಐ ಸಂಸ್ಥೆಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದು, ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ಆರೋಗ್ಯ ಜಾಗೃತಿ ಶಿಬಿರಗಳನ್ನು ನಡೆಸಲಾಗುತ್ತದೆ. ಯುವಜನರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಕೆಲಸವನ್ನು ಜೆಸಿಐ ಸಂಸ್ಥೆ ಮಾಡುತ್ತದೆ ಎಂದು ತಿಳಿಸಿದರು.
ಶುಭಂ ಹೊಟೇಲ್ ಮಾಲೀಕರಾದ ಜೆಸಿ ಚಂದ್ರಹಾಸ ಶೆಟ್ಟಿ, ಉದಯ ಕದಂಬ ಅವರ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಜಡ್‌ಪಿ ಜೆಸಿ ಅನುಷ್ ಗೌಡ, ಪಿಜಡ್ ಅಧಿಕಾರಿಗಳು, ಶಿವಮೊಗ್ಗದ ಜೆಸಿಐ ಘಟಕದ ಎಲ್ಲ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.
Ayanur Manjunath ಬಿಎಸ್ ವೈ ಹೆಸರು ಕೆಡಿಸುತ್ತಿರುವವರೇ ಅವರ ಮಕ್ಕಳು- ಆಯನೂರು ಮಂಜುನಾಥ್
Ayanur Manjunath ನಾನು ಆಡಿದ ಮಾತಿಗೆ ಕ್ಷಮೆ ಕೇಳುವುದಿಲ್ಲ. ಯಡಿಯೂರಪ್ಪ ವಿರುದ್ಧ ನಾನು ಮಾತಾಡಿಲ್ಲ. ಹೆಸರು ಕೆಡಿಸುತ್ತಿರುವವರೇ ಬಿಎಸ್‌ವೈ ಅವರ ಮಕ್ಕಳು. ನಾನು ಕೆಐಡಿಬಿ ಭೂಮಿ, ಪತ್ರಕರ್ತರ ಸೈಟು, ಟೋಲ್ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಮತ್ತು ರಾಘವೇಂದ್ರ ಅವರ ವಿರುದ್ಧ ಆರೋಪ ಮಾಡಿದ್ದೆ. ಅದನ್ನು ಗಮನಿಸದೆ ಮಾಜಿ ಶಾಸಕರಾದ ಹಾಲಪ್ಪ, ರುದ್ರೇಗೌಡರು ಸುದ್ದಿಗೋಷ್ಠಿ ನಡೆಸಿ ನಾನು ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ.
ನನ್ನ ಪ್ರಶ್ನೆಯನ್ನೇ ಅವರಿಬ ಬರೂ ಅರ್ಥೈಸಿಕೊಳ್ಳದೆ ಕ್ಷಮೆ ಕೇಳಬೇಕು ಎನ್ನುತ್ತಿರುವುದು ದಿಕ್ಕುತಪ್ಪಿಸುವ ಯತ್ನವಾಗಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದ್ದಾರೆ.
ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾವತ್ತೂ ಯಡಿಯೂರಪ್ಪನವರ ಪರವಾಗಿ ನಿಲುವು ತಾಳದ ಹರತಾಳು ಹಾಲಪ್ಪನವರು ನಾನು ಕ್ಷಮೆ ಕೇಳಬೇಕು ಎಂದಿದ್ದಾರೆ.ಈ ಹಿಂದೆ ಬಿಎಸ್ ವೈ ವಿರುದ್ಧ ವಾಗ್ದಾಳಿ ನಡೆಸಿದಾಗ, ನಾನು ಮತ್ತು ರೇಣುಕಾಚಾರ್ಯ ಬಿಟ್ಟರೆ ಯಾವ ನಾಯಕರು ಮಾತನಾಡಲಿಲ್ಲ. ಆಗ ಹಾಲಪ್ಪ ಎಲ್ಲಿದ್ದರು ಎಂದು ತಿರುಗೇಟು ನೀಡಿದರು.
Ayanur Manjunath ರಾಘವೇಂದ್ರ ಮತ್ತು ವಿಜೇಂದ್ರ ಅವರ ಭ್ರಷ್ಠಾಚಾರದ ಬಗ್ಗೆ ಮಾತನಾಡಿದರೆ ಸಮಂಜಸವಾದ ಉತ್ತರ ನೀಡಲಿಲ್ಲ. ಹಾಲಪ್ಪನ ಬಂಗಾರಪ್ಪನವರನ್ನ ಬಿಟ್ಟು ಬಂದು ಬಂಗಾರಪ್ಪನವರ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಸರಿ. ಒಪ್ಪಿಕೊಳ್ಳುವೆ. ಬಂಗಾರಪ್ಪ ಬಗ್ಗೆ ಅವರು ಮಾತನಾಡಿಲ್ಲ. ಆದರೆ ಆಗ ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪ ವಿರುದ್ಧ ಮಾತನಾಡಿಲ್ಲವೇ? ಹಾಗೆ ನಾನು ಸಹ ರಾಘವೇಂದ್ರ ಮತ್ತು ವಿಜೇಂದ್ರ ಬಗ್ಗೆ ಮಾತನಾಡಿದ್ದೇನೆಂದು ಸಮರ್ಥಿಸಿಕೊಂಡರು.
Karnataka Neeravari Nigam Limited ರಸ್ತೆ ಗುಂಡಿ ಮುಚ್ಚುವ ಸಾಹಸ ಅಭಿಯಾನ ಕೈಗೊಂಡಿರುವ ಅಬ್ಬಲಗೆರೆ ಯುವಕ
Karnataka Neeravari Nigam Limited ಶಿವಮೊಗ್ಗ ನಗರದ ಹೊರವಲಯ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶ್ರೀ ಬಡಾವಣೆ ನಿವಾಸಿಯಾದ ಖಾಸಗಿ ಸಂಸ್ಥೆಯೊಂದರ ಉದ್ಯೋಗಿ ಗುರುಚರಣ್, ಏಕಾಂಗಿಯಾಗಿ ರಸ್ತೆಯ ಗುಂಡಿ – ಗೊಟರುಗಳಿಗೆ ಮಣ್ಣು ಹಾಕಿ ಮುಚ್ಚುತ್ತಿದ್ದಾನೆ. ಹಲವು ದಿನಗಳಿಂದ ರಸ್ತೆ ಅವ್ಯವಸ್ಥೆ ಸರಿಪಡಿಸುವ ಕಾರ್ಯವನ್ನು ಈತ ನಡೆಸುತ್ತಿದ್ದಾನೆ.
ಅಬ್ಬಲಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆ.ಹೆಚ್.ಬಿ. ಪ್ರೆಸ್ ಕಾಲೋನಿ, ಮಹಾಲಕ್ಷ್ಮೀ, ಶ್ರೀ ಬಡಾವಣೆ ಹಾಗೂ ಸುತ್ತಮುತ್ತಲಿನ ತೋಟ-ಗದ್ದೆಗಳಿಗೆ ಸುಮಾರು ೧ ಕಿ.ಮೀ. ಉದ್ದವಿರುವ ೬೦ ಅಡಿ ಅಗಲದ ಸ್ವಾಮಿ ವಿವೇಕಾನಂದ ಮುಖ್ಯ ರಸ್ತೆ ಯು ಪ್ರಮುಖ ಸಂಪರ್ಕ ಕೊಂಡಿಯಾಗಿದೆ.
ಭಾರೀ ಮಳೆಯಿಂದ ಕೆರೆ ನೀರು ನುಗ್ಗುವುದು ಸೇರಿದಂತೆ ಭಾರೀ ಸರಕು ಸಾಗಾಣೆ ಲಾರಿಗಳ ಸಂಚಾರದಿಂದ, ಸದರಿ ರಸ್ತೆಯು ಗುಂಡಿ – ಗೊಟರು ಬಿದ್ದಿದೆ. ಜನ – ವಾಹನ ಸಂಚಾರಕ್ಕೆ ದುಸ್ತರವಾಗಿ ಪರಿಣಮಿಸಿದೆ. ಕಳೆದ ಹಲವು ವರ್ಷಗಳಿಂದ ಇದೇ ದುಃಸ್ಥಿತಿಯಿದೆ. ಕಳೆದ ವರ್ಷ ಕರ್ನಾಟಕ ನೀರಾವರಿ ನಿಗಮದ ಅನುದಾನದಲ್ಲಿ, ಸದರಿ ರಸ್ತೆಯ ಅಲ್ಪ ಭಾಗಕ್ಕೆ ಡಾಂಬರೀಕರಣ ನಡೆಸಲಾಗಿತ್ತು. ಆದರೆ ಉಳಿದ ಭಾಗದ ರಸ್ತೆ ಅವ್ಯವಸ್ಥೆ ಹಾಗೆಯೇ ಇದೆ.
Karnataka Neeravari Nigam Limited ರಸ್ತೆಯ ಉಳಿದ ಭಾಗಕ್ಕೂ ಡಾಂಬರೀಕರಣ ನಡೆಸುವಂತೆ ಈಗಾಗಲೇ ಕರ್ನಾಟಕ ನೀರಾವರಿ ನಿಗಮ, ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಆಡಳಿತ ಸೇರಿದಂತೆ ತಾಲೂಕು, ಜಿಪಂ ಎಂಜಿನಿಯರಿಂಗ್ ವಿಭಾಗಕ್ಕೆ ಮನವಿ ಮಾಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಭಾರೀ ಮಳೆಗೆ ರಸ್ತೆಯಲ್ಲಿ ದೊಡ್ಡ ಪ್ರಮಾಣದ ಗುಂಡಿಗಳು ಬಿದ್ದಿವೆ.
‘ಬಿಡುವಿನ ವೇಳೆ ರಸ್ತೆಯಲ್ಲಿ ಬಿದ್ದ ಗುಂಡಿ-ಗೊಟರುಗಳಿಗೆ ಮಣ್ಣು ಹಾಕಿ ಮುಚ್ಚುವ ಕಾರ್ಯ ನಡೆಸುತ್ತಿದ್ದೇನೆ. ಸ್ಥಳೀಯ ನಿವಾಸಿ ಕೃಷ್ಣಪ್ಪ ಎಂಬುವರು ಎರಡು ಟ್ರ್ಯಾಕ್ಟರ್ ನಷ್ಟು ಮಣ್ಣು ಕೊಡಿಸಿದ್ದಾರೆ. ಇನ್ನಾದರೂ ಆಡಳಿತ ಎಚ್ಚೆತ್ತುಕೊಳ್ಳಬೇಕು.
ರಸ್ತೆ ಅವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳಬೇಕು’ ಎಂದು ಗುರುಚರಣ್ ಆಗ್ರಹಿಸಿದ್ದಾರೆ.
Klive Special Article ಸ್ವಾತಂತ್ರ್ಯದ ಹಬ್ಬ.ಮನೆಯಲ್ಲಿ ಸಡಗರ ಗೀತ ಗಾಯನ
Klive Special Article ಒಂದು ಕಾರ್ಯಕ್ರಮವಾಗಿ ಬಹುದಿನಗಳವರೆಗೂ ಜನರು ಅದನ್ನು ಸಂಭ್ರಮಿಸುತ್ತ ಮೆಲುಕು ಹಾಕುತ್ತಿದ್ದಾರೆ ಎಂದರೆ ಅದರ ಕುರಿತಾಗಿ ಬರೆಯಲೇಬೇಕೆಂಬ ಹಂಬಲ ಸಹಜ.
ಸ್ವಾತಂತ್ರ್ಯ ದಿನಾಚರಣೆ ಒಂದು ರಾಷ್ಟ್ರೀಯ ಹಬ್ಬವಾಗಿ ಅದು ಬರಿ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳಿಗಷ್ಟೇ ಸೀಮಿತ ಎಂದುಕೊಂಡಿದ್ದ ದಿನಗಳು ಇದ್ದವು. ಆದರೆ ಅದು ಈಗ ನಮ್ಮ ಹೆಮ್ಮೆಯ ಪ್ರಧಾನಿ ಮೋದಿಜಿ ಅವರ ಕಾರಣದಿಂದ ‘ಹರ್ ಘರ್ ತಿರಂಗಾ’ ಎಂದೂ ಮನೆ ಮನೆಯಲ್ಲಿ ಸಂಭ್ರಮಿಸುವಂತಾಯಿತು. ಈ ನಡುವೆ ಕಳೆದ 14 ವರ್ಷಗಳಿಂದಲೂ ನಿರಂತರವಾಗಿ ತಾಯಿ ಭಾರತಿಯ ಪಾದ ಪದ್ಮಗಳ ಪೂಜಿಸೋಣ ಬನ್ನಿ ಎಂದು ಎಲ್ಲರಿಗೂ ಕರೆ ಕೊಡುತ್ತಾ ತಮ್ಮ ಮನೆ ಅಂಗಳದಲ್ಲೇ ಸ್ವಾತಂತ್ರ್ಯೋತವವನ್ನು ಹಬ್ಬವಾಗಿ ಆಚರಿಸುತ್ತಾ ಬಂದಿರುವ ಕುಟುಂಬವು ಒಂದಿದೆ. ಬಾಯರ್ಸ್ ಕಂಪ್ಯೂಟರ್ಸ್ ನ ಮಾಲೀಕರಾದ ಶ್ರೀಯುತ ಚಂದ್ರಶೇಖರ್ ಬಾಯರ್ ಹಾಗೂ ಅವರ ಪತ್ನಿ ಶ್ರೀಮತಿ ಜ್ಯೋತಿ ಬಾಯರ್ ತಾವು ವಿವಾಹವಾದ ದಿನದಿಂದಲೂ ಮನೆಯಲ್ಲಿ
ದೀಪಾವಳಿ, ನವರಾತ್ರಿ ಹಬ್ಬ, ಜನ್ಮದಿನಾಚರಣೆ ಹಾಗೂ ವಿವಾಹ ವಾರ್ಷಿಕೋತ್ಸವವೇ ಮೊದಲಾದ ಇತರೆ ಹಬ್ಬಗಳನ್ನು ವಿಶೇಷವಾಗಿ ಆಚರಿಸಿಕೊಳ್ಳದೆ ಸ್ವಾತಂತ್ರ್ಯೋತ್ಸವ ಮತ್ತು ಸತ್ಯನಾರಾಯಣ ಪೂಜೆ ಎಂದು ಕರೆದು ನೂರಾರು ಜನರಿಗೆ ದೇಶಪ್ರೇಮದ ಸುಧೆಯನ್ನು ಹರಿಸುತ್ತಾ ಬಂದಿದ್ದಾರೆ. ಅನೇಕ ಮಹನೀಯರನ್ನು ಕರೆಸಿ ಉಪನ್ಯಾಸ ಮಾಡಿದ್ದಾರೆ. ಅಲ್ಲದೆ ಸಾಮಾನ್ಯ ಕೆಲಸವನ್ನು ನಿಷ್ಠೆಯಿಂದ ಮಾಡಿದ ಜನರನ್ನು ಗುರುತಿಸಿ, ಅವರಿಗೆ ಸ್ವದೇಶಿ ವಸ್ತುಗಳನ್ನೇ ಉಡುಗೊರೆಯಾಗಿ ನೀಡಿ ಸನ್ಮಾನಿಸುತ್ತಾ ಬಂದಿದ್ದಾರೆ. ಕಾರ್ಯಕ್ರಮದ ನಂತರ ಪುಷ್ಕಳ ಭೋಜನವನ್ನು ಸಹ ಹಾಕಿಸುತ್ತಾರೆ.
Klive Special Article ಇದರಲ್ಲೇನು ವಿಶೇಷ ಎಂದರೆ ಈ ಬಾರಿ ಆಯೋಜಿಸಿದ “ತಾಯಿ ಭಾರತಿಗೆ ಗೀತನಮನ” ಎಂಬ ಕಾರ್ಯಕ್ರಮ. ಯಾವಾಗಲೂ ಉಪನ್ಯಾಸ ಏರ್ಪಡಿಸಿ ಬಂದಂತಹ ಜನರಿಗೆ ದೇಶಪ್ರೇಮದ ಕುರಿತಾಗಿ ತಿಳಿಸುತ್ತಿದ್ದ ಅವರು ಸಂಗೀತದ ಸುಧೆಯೊಂದಿಗೆ ತಾಯಿ ಭಾರತಿಗೆ ಗಾನ ನಮನವನ್ನು ಸಲ್ಲಿಸಿದ್ದು ವಿಶೇಷ. ಅದಕ್ಕೆ ಖ್ಯಾತವಾಗ್ಮಿಗಳು, ಚಿಂತಕರು, ಲೇಖಕರು, ಕವಿ, ವಿಮರ್ಶಕರೂ ಆದಂತಹ ಶ್ರೀ ವಿನಯ್ ಶಿವಮೊಗ್ಗ ಅವರ ನವಿರಾದ ನಿರೂಪಣೆಯೊಂದಿಗೆ ಮಲೆನಾಡಿನ ಹೆಮ್ಮೆಯ ಪ್ರತಿಭೆ ಶ್ರೀ ಪೃಥ್ವಿ ಗೌಡ ಅವರ ಅದ್ಭುತವಾದ ರಾಗ ಲಹರಿ ಕೇಳುಗನ ಹೃನ್ಮನ ತಣಿಸಿತು.
ಅವರ ಆಯ್ಕೆಯ ಹಾಡುಗಳು ರೋಮಾಂಚನ ತರಿಸುವಂತಿತ್ತು ಮತ್ತು ಮನಸ್ಸಿನಾಳ ಇಳಿದ್ದು ಕೇಳುಗನಿಗೆ ರಸಗಂಗೆಯಲ್ಲಿ ಮಿಂದೆದ್ದ ಅನುಭವ ತಂದಿತು. ಒಂದೊಂದು ಹಾಡುಗಳೂ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿ ಸುಮ್ಮನೆ ಆಲಿಸುವಂತೆ ಮಾಡಿದ್ದೇ ಅಲ್ಲದೆ ದೇಶಪ್ರೇಮದ ಚಿಂತನೆ ಇನ್ನಷ್ಟು ಆವರಿಸುವಂತೆ ಮಾಡಿತುಕೂಡ. ಪೃಥ್ವಿ ಗೌಡ ಅವರ ಅದ್ಭುತವಾದ ಕಂಠಸಿರಿಯಿಂದ ಮೂಡಿಬಂದ ಹಾಡೆಲ್ಲವೂ ಮತ್ತೆ ಮತ್ತೆ ಆಲಿಸಬೇಕೆಂಬ ಭಾವ ಮೂಡಿಸುವಂತಿತ್ತು.
ಇದಕ್ಕೆ ತಕ್ಕನಾಗಿಯೇ ಅತಿ ಹೆಚ್ಚು ಅಲ್ಲದ ಅತಿ ಕಡಿಮೆಯೂ ಅಲ್ಲದ ಸೊಗಸಾದ ನಿರೂಪಣೆಯಂತೂ ಮತ್ತೊಂದು ವಿಶಿಷ್ಟ. ಮಕ್ಕಳಿಗೆ ತಾಯಿ ಮುದ್ದು ಮಾಡುತ್ತಲೇ ಮೌಲ್ಯದ ಪಾಠವನ್ನು ಕಲಿಸುವಂತೆ ವಿನಯ್ ಶಿವಮೊಗ್ಗ ಅವರು ಕಾರ್ಯಕ್ರಮದ ಔಚಿತ್ಯತೆ, ದೇಶದ ಹಿರಿಮೆ ಹಾಡಿನ ಕುರಿತಾಗಿ ಹೇಳುವುದೇ ಅಲ್ಲದೆ ಪರಿಸರ ಕಾಳಜಿಯೊಂದಿಗೆ ಮುಂದಿನ ತಲೆಮಾರಿಗೆ ನಾವು ದಾಟಿಸುವ ಮೌಲ್ಯಗಳ ಕುರಿತಾಗಿ ತಿಳಿಸಿದಂತೆ ಕಾರ್ಯಕ್ರಮದ ಶ್ರೇಷ್ಠತೆಯನ್ನು ಹೆಚ್ಚಿಸುವಂತಿತ್ತು. ಏಕೆಂದರೆ ಬರಿ ಹಾಡಿನ ರಸಾಸ್ವಾದದಲ್ಲಿಯೇ ಕಳೆಯುವಂತೆ ಮಾಡದೆ ಎಚ್ಚರಿಕೆಯನ್ನು ಸಹ ಮಾತಿನ ನಡು ನಡುವೆ ನೀಡಿ ಬಂದಿದ್ದವರಿಗೆ ಮೌಲ್ಯದ ಅರಿವು ಮತ್ತು ಪರಿಸರ, ಜಲ ಇತ್ಯಾದಿಗಳ ಸಂರಕ್ಷಣೆಗೆ ನಾವೇನು ಮಾಡಬಹುದೆಂಬುದನ್ನು ತಿಳಿಸಿಕೊಟ್ಟರು. ಹಾಗಾಗಿ ತಾಯಿ ಭಾರತಿಗೆ ಗೀತನಮನ ಯಶಸ್ವಿಯಾಯಿತು. ಆಯ್ಕೆ ಮಾಡಿಕೊಂಡಿದ್ದ ಪ್ರತಿಯೊಂದು ಹಾಡೂ ಅಷ್ಟೇ ಮಧುರವಾಗಿತ್ತಲ್ಲದೆ ನಾನು ಇರಲಿ ಇಲ್ಲದಿರಲಿ ನನ್ನ ಭಾರತ ಬೆಳಗುತಿರಲಿ… ಎನ್ನುವುದನ್ನು ಸಾಕಾರಗೊಳಿಸುವಂತಿತ್ತು. ಹಾಗಾಗಿ ವಿನಯ್ ಶಿವಮೊಗ್ಗ ಹಾಗೂ ಪೃಥ್ವಿ ಅವರು ನಡೆಸಿಕೊಟ್ಟ ಗೀತ ಮನ ಸಾರ್ಥಕವಾಯಿತು. ಇದೊಂದು ನಿಜಕ್ಕೂ ಶಕ್ತಿಯುತ ಸಭಾ ಕಾರ್ಯಕ್ರಮವೇ ಆಯಿತು.
ನಂತರ ಗುರುವಿಗೆ ನಮನ ಎಂದು ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಮತಿ ನಿರ್ಮಲಾ ನಾಯಕ್, ಸಂಸ್ಕೃತದ ಕಾರ್ಯ ಮಾಡುತ್ತಿರುವ ಶ್ರೀಮತಿ ಮನು ಚೌಹಾಣ್, ದೇಶ ಕಾಯ್ದ ಯೋಧ ಅದರಲ್ಲೂ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಶ್ರೀ ಸುಧೀರ್ ಅವರಿಗೆ, ನಂತರ ಅಧ್ಯಾತ್ಮ ಸಾಧನೆ ಮಾಡಿ ಭಜನಾ ಪರಿಷತ್ ನ ಕಾರ್ಯದರ್ಶಿಗಳಾದ ಶ್ರೀ ಶಬರೀಶ್ ಕಣ್ಣನ್ ಇವರುಗಳಿಗೆ ಮಾಡಿದ ಸನ್ಮಾನವು ಯೋಗ್ಯವಾಗಿಯೇ ಇತ್ತು.
ಈ ಎಲ್ಲವನ್ನು ಮಾಡಿ ಸಾರ್ಥಕತೆ ಪಡೆದ ಶ್ರೀ ಚಂದ್ರಶೇಖರ್ ಬಾಯರ್ ದಂಪತಿಗಳಿಗೆ ಶತಕೋಟಿ ಪ್ರಣಾಮಗಳು. ಇಂತಹ ದಂಪತಿಗಳ ಸಂಖ್ಯೆ ಇನ್ನು ಬೆಳೆಯುವಂತಾಗಲಿ ಎಂದು ಆಶಿಸುತ್ತಾ ಕಾರ್ಯಕ್ರಮಕ್ಕೆ ಬರಲಾಗದವರಿಗೆ ನೋಡಬೇಕೆಂಬ ಆಸೆ ಉಳ್ಳವರಿಗೆ ಶಿವಮೊಗ್ಗದ ಯುಟ್ಯೂಬ್ ಚಾನೆಲ್ ಆದ ಸಮುದ್ಯತ ಭಾರತದ https://youtu.be/7f5WXZaJsYo?si=582NKdpO-2HgNjJm ಈ ಲಿಂಕ್ ನಲ್ಲಿ ಸದಾ ಲಭ್ಯವಿದೆ. ಇದನ್ನು ನೋಡಿ ನಮ್ಮದೇಶ ನಮ್ಮ ಹೆಮ್ಮೆ ಎಂಬಂತೆ ಬದುಕ ನಡೆಸೋಣ ಅಲ್ಲವೆ!!!!
ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಉಪನ್ಯಾಸಕರು
ಪೇಸ್ ಕಾಲೇಜು
Bharat Scouts and Guides ಉತ್ಸವದ ಸಂದರ್ಭಗಳು ಪ್ರತಿಭೆ ಅನಾವರಣಕ್ಕೆ ಸಹಕಾರಿ-ಕೆ.ಪಿ.ಬಿಂದು ಕುಮಾರ್
ಹಬ್ಬ ಹರಿದಿನಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಹಬ್ಬಗಳು ನಮ್ಮನ್ನು ಪರಸ್ಪರ ಒಂದಾಗಿಸಲು, ನಮ್ಮ ಪ್ರೀತಿ, ವಿಶ್ವಾಸ ಹಂಚಿಕೊಳ್ಳಲು ಹಾಗೂ ಭಾವನೆಗಳನ್ನು ವ್ಯಕ್ತಪಡಿಸಲು ಸಹಕಾರಿಯಾಗುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಮುಖ್ಯ ಆಯುಕ್ತ ಕೆ.ಪಿ.ಬಿಂದುಕುಮಾರ್ ಹೇಳಿದರು.
ಶಿವಮೊಗ್ಗ ನಗರದಲ್ಲಿರುವ ಸ್ಕೌಟ್ ಭವನದಲ್ಲಿ ಮಲ್ನಾಡ್ ಓಪನ್ ಗ್ರೂಪ್‌ನಿಂದ ಆಯೋಜಿಸಿದ್ದ ಪರಿಸರ ಗಣಪತಿ ಗಣೇಶೋತ್ಸವ ವಿಶೇಷ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ಸವ ಸಂದರ್ಭಗಳಲ್ಲಿ ಪ್ರತಿಭೆ ಅನಾವರಣಗೊಳಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಎಚ್.ಪರಮೇಶ್ವರ್ ಮಾತನಾಡಿ, ಸಾಕಷ್ಟು ವರ್ಷಗಳಿಂದ ನಿರಂತರವಾಗಿ ಭಕ್ತಿ ಶ್ರದ್ಧೆಯಿಂದ ಗಣೇಶನ ಪ್ರತಿಷ್ಠಾಪಿಸಿ ಪೂಜೆ, ಹೋಮ, ಹವನಗಳನ್ನು ನಡೆಸಿಕೊಂಡು ಬಂದಿದ್ದು, ಎಲ್ಲರಿಗೂ ಒಳಿತಾಗಲಿ ಎಂದು ಆಶಿಸಿದರು.
Bharat Scouts and Guides ಇದೇ ಸಂದರ್ಭದಲ್ಲಿ ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್ ಮಾತನಾಡಿ, ಮಕ್ಕಳಲ್ಲಿ ಧಾರ್ಮಿಕ ಭಾವನೆ ಜತೆಗೆ ಆತ್ಮವಿಶ್ವಾಸ ಮೂಡಿಸುವುದರ ಜತೆಗೆ ಸಂವಹನ ಕೌಶಲ್ಯ ವೃದ್ಧಿಯಾಗುತ್ತದೆ. ಮಲ್ನಾಡ್ ಓಪನ್ ಗ್ರೂಪ್ ಮಕ್ಕಳು ಪದಾಧಿಕಾರಿಗಳು ಶ್ರಮ ವಹಿಸಿ ಪರಿಸರ ಗಣಪತಿ ಮಾಡಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಸಂತೋಷದ ಸಂಗತಿ ಎಂದು ತಿಳಿಸಿದರು.
ಪ್ರಮುಖರಾದ ಶ್ರೀನಿವಾಸ್ ವರ್ಮಾ, ಮಲ್ಲಿಕಾರ್ಜುನ ಕಾನೂರ್, ರಾಜೇಶ್ ಅವಲಕ್ಕಿ, ಕೃಷ್ಣಪ್ಪ , ಚೇತನ್ ರಾಯನಹಳ್ಳಿ, ಲೋಹಿತ್ ಕುಮಾರ್ , ಪೃಥ್ವಿರಾಜ್ ಗಿರಿಮಾಜಿ , ರೇವಂತ್ ಹೆಚ್ ಪಿ , ಗಣೇಶ್ ಹೆಚ್ ವಿ , ಹೇಮಲತಾ , ಆಶಾ ವರ್ಮಾ , ರಕ್ಷಾ ಹೆಚ್ ಎಸ್ , ಪೃಥ್ವಿ, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಹಾಜರಿದ್ದರು.
International Democracy Day ಸೆ.15 ಅಂತಾರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನದ ವಿಶೇಷ ಮಾನವ ಸರಪಳಿ “
International Democracy Day ರಾಜ್ಯ ಸರ್ಕಾರವು ತೀರ್ಮಾನಿಸಿದಂತೆ ಸೆ. 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಬೀದರ್ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೆ ಮಾನವ ಸರಪಳಿ ರಚನೆ ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಲಾಗುತ್ತಿದ್ದು, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಾರೇಹಳ್ಳಿ ಗ್ರಾಮದಿಂದ ಪ್ರಾರಂಭಿಸಿ ಭದ್ರಾವತಿ-ಶಿವಮೊಗ್ಗ ನಗರದ ಮೂಲಕ ಹಾದು ಶಿವಮೊಗ್ಗ ತಾಲೂಕಿನ ಮಡಿಕೆಚೀಲೂರು ಗ್ರಾಮದವರೆಗೆ ಸುಮಾರು 60 ಕಿ.ಮೀ. ಮಾನವ ಸರಪಳಿಯನ್ನು ರಚನೆ ಮಾಡುವ ಮೂಲಕ ಆಚರಿಸಲಾಗುತ್ತಿದೆ.
International Democracy Day ಸಾರ್ವಜನಿಕರು ಸೆ. 15 ರಂದು ಬೆಳಗ್ಗೆ 8.30ಕ್ಕೆ ಈ ನಿಗದಿತ ಮಾರ್ಗದಲ್ಲಿ ಹಾಜರಿದ್ದು, ಮಾನವ ಸರಪಳಿ ರಚನೆಗೆ ಕೈಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡುವಂತೆ ಹಾಗೂ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಬೆಳಗ್ಗೆ 8.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದು, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಪಂವಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಕೋರಿದ್ದಾರೆ.
Dr. H B Manjunath ನಾಯಕತ್ವ ಎಂದರೆ ಇತರರ ಮೇಲೆ ದರ್ಪ ತೋರಿಸುವುದಲ್ಲ- ಡಾ.ಎಚ್.ಬಿ.ಮಂಜುನಾಥ್
Dr. H B Manjunath ಸ್ವ ಸಾಮರ್ಥ್ಯದ ಅರಿವು ಸಾಧನೆಗೆ ಪ್ರೇರಣೆಯಾಗುತ್ತದೆ, ಭಾರತದ ಯುವಶಕ್ತಿಯು ಜಾಗತಿಕ ಮಟ್ಟದ ಸಾಧನೆಗಾಗಿ ಸ್ವ ಸಾಮರ್ಥ್ಯದ ಅರಿವನ್ನು ಮಾಡಿಕೊಳ್ಳಬೇಕಿದೆ ಎಂದು ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ ಕರೆಕೊಟ್ಟರು.
ದಾವಣಗೆರೆ ನಗರದ ಅಜ್ಜಂಪುರ ಗೋವಿಂದ ಸ್ವಾಮಿ ಭಾಗ್ಯಲಕ್ಷ್ಮಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ನಾಯಕತ್ವ ಗುಣ ಎಂದರೆ ಇತರರ ಮೇಲೆ ದರ್ಪ ತೋರಿಸುವುದಲ್ಲ, ಎಲ್ಲರ ಅಭಿಪ್ರಾಯಗಳಿಗೆ ಅವಕಾಶಕೊಟ್ಟು ಅದರಲ್ಲಿ ಯೋಗ್ಯವಾದದನ್ನು ವಿಧಾಯಕ ಕಾರ್ಯಗಳಿಗೆ ಅಳವಡಿಸುವುದಾಗಿದೆ. ಉತ್ತಮ ನಾಯಕ ಎನಿಸಿಕೊಳ್ಳಬೇಕಾದಲ್ಲಿ ಉತ್ತಮರೊಂದಿಗೆ ಸ್ನೇಹ ಸಹಾ ಅವಶ್ಯ, ಪಿಯುಸಿ ಅವಧಿಯು ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಪರ್ವಕಾಲವಾಗಿದೆ, ದೇಶದಲ್ಲಿ ವಾರ್ಷಿಕ ಸುಮಾರು ಒಂದುವರೆ ಕೋಟಿ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಎದುರಿಸುತ್ತಿದ್ದು ಕರ್ನಾಟಕದಲ್ಲಿ 6,98,000 ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಎದುರಿಸುತ್ತಾರೆ.
Dr. H B Manjunath ಪದವಿಯ ನಂತರ ಉದ್ಯೋಗ ಅರಸುವುದಕ್ಕಿಂತ ಉದ್ಯೋಗ ದಾತರಾಗುವುದು ವೈಯುಕ್ತಿಕ ಭವಿಷ್ಯಕ್ಕೂ ರಾಷ್ಟ್ರದ ಭವಿಷ್ಯಕ್ಕೂ ಉತ್ತಮ ಎಂದರು. ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ ವಜ್ರ ಮಹೋತ್ಸವ ವಿದ್ಯಾಪೀಠ ಹಾಗೂ ಕಾಲೇಜಿನ ಉಪಾಧ್ಯಕ್ಷ ಆರ್ ಎಲ್ ಪ್ರಭಾಕರ್ ರವರ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿಯ ಕಾಸಲ್ ಎಸ್ ಸತೀಶ್, ಆರ್ ಜಿ ನಾಗೇಂದ್ರ ಪ್ರಸಾದ್, ಜೆ ವಿ ಗೋಪಾಲಕೃಷ್ಣ ಶ್ರೇಷ್ಟಿ, ಡಾ. ಬಿ ಪಿ ಕುಮಾರ್, ಆರ್ ಸಿ ಹಾಲಪ್ಪ ಶೆಟ್ಟಿ, ಪ್ರಾಂಶುಪಾಲ ಎಸ್ ಪ್ರದೀಪ್ ಕುಮಾರ್, ವಿದ್ಯಾರ್ಥಿ ಸಂಘದ ಮುರಳಿಧರ ಹೆಚ್, ನರೇಂದ್ರ ಗೌಡ ಜಿ, ಸಮೀರ್ ಆರ್ ಉಪಸ್ಥಿತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಗೌರವಿಸಲಾಯಿತು. ಕುವೆಂಪು ಕನ್ನಡ ಭವನದಲ್ಲಿ ಏರ್ಪಾಡಾಗಿದ್ದ ಕಾರ್ಯಕ್ರಮದ ನಿರೂಪಣೆಯನ್ನು ಅಧ್ಯಾಪಕ ವರ್ಗದ ಸಂಗೀತಾ, ಉಷಾ, ಪ್ರಸನ್ನ ರವರು ಮಾಡಿದರೆ ಪ್ರಾರ್ಥನೆಯನ್ನು ಗಗನ ಶ್ರೀ ಹಾಡಿದರು, ವಂದನೆಗಳನ್ನು ಮಂಜುನಾಥ ಸಮರ್ಪಿಸಿದರು. ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿ
McGann Teaching District Hospital ಶಿವಮೊಗ್ಗ ಬೋಧನಾ ಜಿಲ್ಲಾಸ್ಪತ್ರೆಯಲ್ಲಿ ಅಫಿನಿಟಿ- 70 ಜಿ & ಅಲ್ಟ್ರಾ ಸೌಂಡ್ ಯಂತ್ರಗಳ ಚಾಲನಾ ಉದ್ಘಾಟನೆ
McGann Teaching District Hospital ಶಿವಮೊಗ್ಗ ಬೋಧನಾ ಜಿಲ್ಲಾ ಆಸ್ಪತ್ರೆಯಲ್ಲಿ ಆ.28 ರಂದು ಅಫಿನಿಟಿ – 70 ಜಿ ಮತ್ತು ಅಲ್ಟ್ರಾಸೌಂಡ್ ಯಂತ್ರಗಳನ್ನು ಉದ್ಘಾಟಿಸಲಾಗಿದ್ದು, ಅಫಿನಿಟಿ-70ಜಿ ಯಂತ್ರದಿಂದ ಯಕೃತ್(ಲಿವರ್)ನಲ್ಲಿ ಕಂಡು ಬರುವ ಅತೀ ಸೂಕ್ಷö್ಮ ರೋಗಳಗಳನ್ನ ಮತ್ತು ಮೂತ್ರಪಿಂಡದ ಖಾಯಿಲೆಯನ್ನು ಮೊದಲ ಹಂತದಲ್ಲಿಯೇ ರೋಗ ಪತ್ತೆ ಹಚ್ಚಿ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗುತ್ತದೆ.
McGann Teaching District Hospital 2007 ರಿಂದ ರೇಡಿಯೋ-ಡಯೋಗ್ನೊಸಿಸ್ ವಿಭಾಗದಲ್ಲಿ ಎಕ್ಸ್ರೇ, ಸಿಟಿ ಸ್ಕ್ಯಾನಿಂಗ್, ಎಂಆರ್‌ಐ, ಅಲ್ಟಾçಸೌಂಡ್ ಸೇವೆಗಳನ್ನು ರೋಗಿಗಳಿಗೆ ಒದಗಿಸಲಾಗುತ್ತಿದೆ. ರೇಡಿಯೋ ಡಯೋಗ್ನೊಸಿಸ್ ವಿಭಾಗದಲ್ಲಿ ಉನ್ನತ ಎಕ್ಸ್-ರೇ ಮಷೀನ್‌ಗಳು, ಅಲ್ಟಾçಸೌಂಡ್ ಮಷೀನ್ಸ್, ಸಿಟಿ ಮಷೀನ್‌ಗಳು 4, ಎಂಆರ್‌ಐ ಯಂತ್ರಗಳು ಲಭ್ಯವಿರುತ್ತವೆ.
ಈ ಸೌಲಭ್ಯದಿಂದ ರೋಗಿಗಳಿಗೆ ಸಕಾಲದಲ್ಲಿ ವರದಿಯನ್ನು ನೀಡಲು ಸಾಧ್ಯವಾಗುತ್ತಿದೆ. ಪದವಿಪೂರ್ವ ಮತ್ತು ಸ್ನಾತಕೋತ್ತರ ಪದವೀಧರರಿಗೆ ಹಾಗೂ ಕಲಿಕಾ ವಿದ್ಯಾರ್ಥಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ತರಬೇತಿಯನ್ನು ನೀಡುವ ಗುರಿ ಹೊಂದಲಾಗಿದೆ. ಒಂದು ದಿನಕ್ಕೆ 100 ರಿಂದ 120 ಅಲ್ಟಾçಸೌಂಡ್ ಸ್ಕ್ಯಾನಿಂಗ್ ಮತ್ತು 125 ರಿಂದ 130 ಸಿಟಿ ಹಾಗೂ 20 ರಿಂದ 25 ಎಂಆರ್‌ಐ ಸೇವೆಯನ್ನು ನೀಡಲಾಗುತ್ತಿದೆ ಎಂದು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು/ಡೀನ್ ತಿಳಿಸಿದ್ದಾರೆ.
