Sunday, March 29, 2026
Sunday, March 29, 2026
Home Blog Page 554

Advanced Skills Development Academy ಯುವಜನರಿಗೆ ಅಗತ್ಯವಿರುವ ಕೌಶಲಗಳನ್ನು ಕಲ್ಪಿಸಿ ಉತ್ತಮ ಸಾಧನೆಗೆ ಪ್ರೇರೇಪಿಸಬೇಕು- ಡಾ.ಧನಂಜಯ ಸರ್ಜಿ

0

Advanced Skills Development Academy ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಶಿಕ್ಷಣದ ಜತೆಯು ಕೌಶಲ್ಯ ಅತ್ಯಂತ ಮುಖ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಅಡ್ವಾನ್ಸ್ಡ್‌ ಸ್ಕಿಲ್ ಡೆವಲಪ್‌ಮೆಂಟ್ ಅಕಾಡೆಮಿ ಮತ್ತು ವಿಸ್ಟಾ ತಂತ್ರಜ್ಞಾನ ಸಂಸ್ಥೆಯಿಂದ ಆಯೋಜಿಸಿದ್ದ ವೃತ್ತಿ ಕೌಶಲ್ಯ ಮಾರ್ಗದರ್ಶನ ತರಬೇತಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಣಾ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಸ್ಕಿಲ್ ಅಕಾಡೆಮಿ ಶಿವಮೊಗ್ಗದಲ್ಲಿ ಆರಂಭವಾಗಿರುವುದು ಹೆಮ್ಮೆಯ ವಿಚಾರವಾಗಿದ್ದು, ಸ್ಕಿಲ್ ಅಕಾಡೆಮಿಯು ಯುವಜನರಿಗೆ ಅಗತ್ಯವಿರುವ ಕೌಶಲ್ಯಗಳನ್ನು ಕಲಿಸುವ ಮೂಲಕ ಉತ್ತಮ ಸಾಧನೆ ಮಾಡಲು ಪ್ರೇರೆಪಿಸಬೇಕು ಎಂದು ತಿಳಿಸಿದರು.

Advanced Skills Development Academy ವೃತ್ತಿ ಜೀವನದಲ್ಲಿ ಉನ್ನತ ಹಂತಕ್ಕೆ ತಲುಪಲು ಹೆಚ್ಚಿನ ಮಟ್ಟದ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣದ ಜತೆಯಲ್ಲಿ ಕೌಶಲ್ಯವಿದ್ದರೆ ಅದ್ಭುತ ಸಾಧನೆ ಮಾಡಬಹುದು. ತಾವು ಆಸಕ್ತಿ ಹೊಂದಿರುವ ಕ್ಷೇತ್ರದಲ್ಲಿ ಯಾವ ಕೌಶಲ್ಯ ಅಗತ್ಯ ಎಂಬುದನ್ನು ಆರಂಭದಲ್ಲಿ ಮನಗಾಣಬೇಕು. ನನ್ನ ಜೀವನದಲ್ಲಿ ನಾನು ಕೌಶಲ್ಯಕ್ಕೆ ಆದ್ಯತೆ ನೀಡಿದ್ದರಿಂದ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ 50 ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರದಲ್ಲಿ ವಿಸ್ಟಾ ಸಂಸ್ಥೆಯಿಂದ ಸ್ಕಾಲರ್‌ಶಿಪ್ ನೀಡಲಾಯಿತು. 15 ಜನರಿಗೆ 20 ಸಾವಿರ ರೂ., 15 ಜನರಿಗೆ 10 ಸಾವಿರ ರೂ. ಹಾಗೂ 20 ಜನರಿಗೆ 5 ಸಾವಿರ ರೂ. ಸ್ಕಾಲರ್‌ಶಿಪ್ ನೀಡಲಾಯಿತು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಯುವಜನರು ಕೌಶಲ್ಯ ಕಲಿಕೆಗೆ ಶಿಕ್ಷಣದ ಅವಧಿಯಲ್ಲೇ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಇದರಿಂದ ಉದ್ಯೋಗ ಕ್ಷೇತ್ರದಲ್ಲಿ ವೇಗಗತಿಯಲ್ಲಿ ಪ್ರಗತಿ ಸಾಧಿಸಲು ಸಾಧ್ಯ. ಶಿವಮೊಗ್ಗ ಜಿಲ್ಲೆಯಲ್ಲಿ ಉದ್ಯಮ ಆರಂಭಿಸಲು ಪೂರಕ ವಾತಾವರಣ ಇದ್ದು, ಯುವಜನತೆ ಉದ್ಯಮ ಆರಂಭಿಸಿ ಉದ್ಯೋಗ ಅವಕಾಶ ಸೃಷ್ಟಿಸಬೇಕು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಶಂಕರನಾರಾಯಣ, ಡಾ. ರಜನಿ ಪೈ, ಎಸ್.ಎನ್.ನಾಗರಾಜ, ಪೂರ್ಣಿಮಾ, ವಿಸ್ಟಾ ಸಂಸ್ಥೆಯ ಎ.ಎಸ್.ವಿನಯಕುಮಾರ್, ಸಂಜಯಕುಮಾರ್, ಪದಾಧಿಕಾರಿಗಳು ಹಾಜರಿದ್ದರು.

Rotary Club Shivamogga ಹಲ್ಲುಗಳ ಸ್ಬಚ್ಛತೆ ಜೊತೆ ಖನಿಜಯುಕ್ತ ಆಹಾರ ಸೇವನೆ ಉಪಯುಕ್ತ- ಡಾ.ಭರತ್

0

Rotary Club Shivamogga ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಜೊತೆಗೆ ಸೊಪ್ಪು, ತರಕಾರಿ, ಹಣ್ಣು, ರಾಗಿ ಮುದ್ದೆ ಅಂತಹ ಖನಿಜಯುಕ್ತ ಆಹಾರ ಸೇವಿಸುವುದರಿಂದ ಹಲ್ಲುಗಳು ರಕ್ಷಣೆಯಾಗುತ್ತದೆ ಎಂದು ಇಂಡಿಯನ್ ಡೆಂಟಲ್ ಅಸೋಸಿಯೇಷನ್ ರಾಜ್ಯ ಅಧ್ಯಕ್ಷರಾದ ಡಾ. ಭರತ್ ತಿಳಿಸಿದರು.

ಶಿವಮೊಗ್ಗ ನಗರದ ಮೇಲಿನ ಅನಸವಾಡಿ ತುಂಗಾ ಪ್ರೌಢಶಾಲೆಯಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 32ನೇ ಶ್ರದ್ಧಾಂಜಲಿ ಪ್ರಯುಕ್ತ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಶ್ರೀ ತರಳಬಾಳು ಫೌಂಡೇಶನ್ ಸಿರಿಗೆರೆ ಹಾಗೂ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಮತ್ತು ಡೆಂಟಲ್ ಇಂಡಿಯನ್ ಅಸೋಸಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ದಂತ ಚಿಕಿತ್ಸೆ, ಆರೋಗ್ಯ ತಪಾಸಣೆ, ಔಷಧ ವಿತರಣೆ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಲ್ಲುಗಳ ಸ್ವಚ್ಚತೆ ಹಾಗೂ ಹಲ್ಲುಗಳ ರಕ್ಷಣೆ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ರೋಟರಿ ಸಂಸ್ಥೆಯು ಸಮಾಜದಲ್ಲಿ ಆರೋಗ್ಯಕರ ವಾತಾವರಣ ಸೃಷ್ಟಿ ಮಾಡುವುದರ ಜೊತೆಗೆ ಸಮಾಜಕ್ಕೆ ಹಲವಾರು ಕೊಡುಗೆಯನ್ನು ಕೊಟ್ಟಿದೆ. ಯಾವುದೇ ಅಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆ ಮಾಡುವ ವ್ಯವಸ್ಥೆ ರೋಟರಿ ಸಂಸ್ಥೆ ಎಂದು ತಿಳಿಸಿದರು.

ಈ ವೇಳೆ ಡಾ. ಸಾತ್ವಿಕ್ ಮಾತನಾಡಿ, ಆರೋಗ್ಯವೇ ಭಾಗ್ಯ. ಆರೋಗ್ಯದ ಬಗ್ಗೆ ನಿರ್ಲಕ್ಷ ತೋರದೆ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದರು.

Rotary Club Shivamogga ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಧಾ ವೇದಮೂರ್ತಿ ಮಾತನಾಡಿ, ರೋಟರಿ ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಹಾಗೆಯೇ ಸ್ಕೂಲ್ ಮಕ್ಕಳಿಗೆ ಉಚಿತ ಸಮವಸ್ತ್ರ ನೀಡಿದ್ದಕ್ಕೆ ರೋಟರಿ ಸೆಂಟ್ರಲ್ ಗೆ ಕೃತಜ್ಞತೆ ತಿಳಿಸಿದರು.

ಶಿಬಿರದ ಪ್ರಯೋಜನವನ್ನು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪಡೆದುಕೊಂಡರು. ಕಾರ್ಯಕ್ರಮದ ಸಂಯೋಜಕರಗಿ ರಮೇಶ್.ಎನ್ ಸಂಯೋಜಿಸಿದ್ದರು. ಫ್ರಾಂಕ್ ಕೋ ಇಂಡಿಯಾ ಸಂಜಯ್ ಅವರು ಉಚಿತ ಔಷಧವನ್ನು ನೀಡಿದರು.

ಸಂತೋಷ್ ಮೆಡಿಕಲ್ ಅವರು ಉಚಿತ ಶುಗರ್ ಟೆಸ್ಟ್ ನೀಡಲ್ ಗಳನ್ನು ನೀಡಿದರು. ದಂತ ಚಿಕಿತ್ಸಾ ಉಸ್ತುವಾರಿಯನ್ನು ಸಂತೋಷ.ಬಿ.ಎ ಅವರು ವಹಿಸಿಕೊಂಡಿದ್ದರು. ಮಕ್ಕಳಿಗೆ ಉಚಿತವಾಗಿ ಟೂತ್ ಪೇಸ್ಟ್ ಹಾಗೂ ಬ್ರಷ್ ಅನ್ನು ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಅವರು ನೀಡಿದರು. ಪಿಡಿಜೆ ಜಿ.ಎನ್.ಪ್ರಕಾಶ್ ಅವರು ರಕ್ತದಾನ ಶಿಬಿರದ ಮೊಬೈಲ್ ವ್ಯಾನ್ ಅನ್ನು ಆಯೋಜನೆ ಮಾಡಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶ್.ಜಿ, ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಎಂ.ಬಸವರಾಜಪ್ಪ ಮತ್ತು ಶಾಲಾ ಸಂಯೋಜಕರಾದ ಚಂದ್ರಶೇಖರ್.ಎಂ.ಡಿ, ಕಾರ್ಯದರ್ಶಿ ಈಶ್ವರ್.ಬಿ.ವಿ, ರವಿ ಕೋಟೊಜಿ, ಧರ್ಮೇಂದ್ರ ಸಿಂಗ್, ಮಂಜುನಾಥ್ ಹೆಗಡೆ, ದೀಪಾ ಶೆಟ್ಟಿ, ಬಸವರಾಜ ಬಿ.ಎನ್, ಅಧ್ಯಕ್ಷರಾದ ಗೀತಾ ಜಗದೀಶ್, ಕಾರ್ಯದರ್ಶಿ ಶುಭಾ ಚಿದಾನಂದ್ ಉಪಸ್ಥಿತರಿದ್ದರು.

Chamber Of Commerce Shivamogga ಬಾಲ್ಯದಿಂದಲೇ ಸಂಗೀತಾಭ್ಯಾಸ. ಉತ್ತಮ ಸಾಧನೆಗೆ ಸಾಧ್ಯ- ಜಿ.ವಿಜಯ ಕುಮಾರ್

0

Chamber Of Commerce Shivamogga ಮಕ್ಕಳಿಗೆ ಬಾಲ್ಯದಿಂದಲೇ ಸಂಗೀತ ಅಭ್ಯಾಸ ಮಾಡಿಸುವುದರಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸಂಗೀತ ಕಲಿಕೆಯು ಆತ್ಮವಿಶ್ವಾಸ ಮೂಡಿಸುತ್ತದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಹೇಳಿದರು.
ಶಿವಮೊಗ್ಗ ನಗರದ ಎಸ್‌ಎಸ್ ಕಾಂಪ್ಲೆಕ್ಸ್ ನಲ್ಲಿ ಆಯೋಜಿಸಿದ್ದ ಮಲೆನಾಡು ಗಾನ ಕೋಗಿಲೆಗಳ ಗಾಯನ ಸಮ್ಮಿಲನ ಹಾಗೂ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಸಂಗೀತ ಅಭ್ಯಾಸ ಖಿನ್ನತೆಯಿಂದ ದೂರವಾಗಲು ನೆರವಾಗುತ್ತದೆ. ಮನುಷ್ಯನ ಮನಸ್ಸಿಗೆ ಔಷಧವಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
Chamber Of Commerce Shivamogga ಈಗಾಗಲೇ ರಮೇಶ್ ಮಲ್ಲಾಪುರ ಹಾಗೂ ಮಥುರಾ ನಾಗರಾಜ್ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ಕರೋಕೆ ಗಾಯನ ಕಾರ್ಯಕ್ರಮಗಳು ಸಾಕಷ್ಟು ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವುದರ ಜತೆಗೆ ಪ್ರತಿಭೆ ಅನಾವರಣಗೊಳ್ಳಲು ಸಹಕಾರಿಯಾಗಿದೆ. ಕಲಾವಿದರನ್ನು ಬೆಳೆಸಲು ಇಂತಹ ಒಳ್ಳೆಯ ವೇದಿಕೆಗಳು ಅವಶ್ಯಕ ಎಂದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಗಾಯಕರಿಗೆ ಶುಭಕೋರಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಲೆನಾಡು ಗಾನ ಕೋಗಿಲೆಗಳ ಕಲಾಸಂಘದ ರಮೇಶ ಮಲ್ಲಾಪುರ ಮಾತನಾಡಿ, ಈ ದಿನ ನಡೆಯುತ್ತಿರುವ 11ನೇ ಕಾರ್ಯಕ್ರಮಕ್ಕೆ ಸಾಕಷ್ಟು ಜನ ಆಗಮಿಸಿದ್ದು, ಬರುವ ದಿನಗಳಲ್ಲಿ ಇನ್ನು ದೊಡ್ಡ ದೊಡ್ಡ ವೇದಿಕೆ ಕಲ್ಪಿಸಿ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಎಲ್ಲರ ಸಹಕಾರದಿಂದ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಇದರಿಂದ ಪ್ರತಿಭಾವಂತ ಗಾಯಕರಿಗೆ ಅವಕಾಶ ಸಿಗಲಿದೆ. ಸಂಗೀತ ಆಸಕ್ತರಿಗೆ ಉತ್ತಮ ವೇದಿಕೆ ಕಲ್ಪಿಸುವುದು ಅತ್ಯಂತ ಮುಖ್ಯ ಎಂದು ಹೇಳಿದರು. ಮಥುರಾ ನಾಗರಾಜ್, ಸುಮಿತ್ರಾ ರವೀಂದ್ರ, ಶ್ಯಾಮಲಾ ಸತೀಶ್ ಹಾಗೂ ಗಾಯಕರು ಉಪಸ್ಥಿತರಿದ್ದರು.

MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗೀಯ ಕಚೇರಿಯಲ್ಲಿ ಸೆ. 26 ರಂದು ಜನ ಸಂಪರ್ಕ ಸಭೆ

0

MESCOM ಮೆಸ್ಕಾಂ ಸಾಗರ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ದಿನಾಂಕ 26.09.2024 ರಂದು ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.

MESCOM ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ; 9480880595.

SPSS PU College ವಿದ್ಯಾರ್ಥಿಗಳು ಪರೀಕ್ಷೆಯನ್ನು ಹಬ್ಬ ಎಂದು ಭಾವಿಸಿದರೆ ಆತಂಕವಿರದು- ಪ್ರೊ.ಎಂ.ಪಿ.ರುದ್ರಪ್ಪ

0

SPSS PU College ಮಕ್ಕಳು ವಿಜ್ಞಾನ ವಿಷಯ ಅಭ್ಯಾಸ ಮಾಡಬೇಕೆಂದು ಬಹುತೇಕ ಪೋಷಕರ ಅಭಿಲಾಷೆ ಆದರೆ ವಿದ್ಯಾರ್ಥಿಗಳು ವಿಜ್ಞಾನ ಗಣಿತಗಳು ಕಷ್ಟ ಎಂದುಕೊಳ್ಳುತ್ತಾರೆ. ಆಸಕ್ತಿ ಬೆಳೆಸಿಕೊಂಡಲ್ಲಿ ಇವು ಎಂದೂ ಕಷ್ಟಕರವಲ್ಲ ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ಎಂಪಿ ರುದ್ರಪ್ಪ ಹೇಳಿದರು.

ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವೇದಿಕೆ, ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಒಂದು ಮನೆ ನಡೆಸುವುದಕ್ಕಿಂತ ಒಂದು ಶಿಕ್ಷಣ ಸಂಸ್ಥೆ ನಡೆಸುವುದು ಕಷ್ಟಕರ, ಅಧ್ಯಾಪಕರು ವೇತನಕ್ಕಿಂತ ಆತ್ಮ ಸಂತೋಷಕ್ಕೆ ಪ್ರಾಧಾನ್ಯತೆ ನೀಡಿ ಪಾಠ ಮಾಡಬೇಕು, ವಿದ್ಯಾರ್ಥಿಗಳು ಪರೀಕ್ಷೆಯನ್ನು ಹಬ್ಬವೆಂದು ಸ್ವೀಕರಿಸಿದರಲ್ಲಿ ಭಯ ಆತಂಕ ಇರುವುದಿಲ್ಲ ಎಂದರು.

ಮುಖ್ಯ ಅತಿಥಿಗಳಾಗಿ ಹರಪನಹಳ್ಳಿಯ ಎ ಡಿ ಬಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ಎ ಎಂ ರಾಜಶೇಖರಯ್ಯ ಮಾತನಾಡಿ ಅತಿಯಾದ ಮೊಬೈಲ್ ಮೋಹವು ಸಾಧನೆಗೆ ಅಡ್ಡಿಯಾಗಬಹುದು, ವಿಜ್ಞಾನ ತಂತ್ರಜ್ಞಾನಗಳು ಜೀವನ ಸುಗಮಗೊಳಿಸಬೇಕೇ ಹೊರತು ಜೀವನ ಸಮಾಧಾನಗಳನ್ನು ನಾಶ ಮಾಡಬಾರದು, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತರ ಬರೆಯುವ ಮೊದಲು ಪ್ರಶ್ನೆ ಪತ್ರಿಕೆಯನ್ನು ಚೆನ್ನಾಗಿ ಓದಿಕೊಳ್ಳಬೇಕು ಆಗ ಉತ್ತರವು ಸುಲಭವಾಗಿ ಹೊಳೆಯುತ್ತದೆ ಎಂದರಲ್ಲದೇ ಶಿಕ್ಷಕ ವೃತ್ತಿಯು ಅತ್ಯಂತ ಪವಿತ್ರವಾಗಿದ್ದು ಯಾವುದೇ ಸಾಧನೆಗೂ ಇದು ಕಡಿಮೆಯೇನಲ್ಲ ಎಂದರು.

SPSS PU College ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಡಾ ಜಿ ಸಾಯಿ ವಿಶೇಷ ಆಹ್ವಾನಿತರಾಗಿದ್ದರು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಉಮೇಶ್ ರವರು ವಿದ್ಯಾರ್ಥಿಗಳು ಸಾಧನೆಯ ಸಂಕಲ್ಪ ಮಾಡಬೇಕು, ಶೈಕ್ಷಣಿಕ ಸಾಧನೆಯೇ ವಿದ್ಯಾರ್ಥಿಗಳು ಗುರುಗಳಿಗೆ ಕೊಡುವ ಗುರುದಕ್ಷಿಣೆ ಎಂದರು. ಅಧ್ಯಾಪಕ ವರ್ಗದ ಎಲ್ ಎಸ್ ಶರ್ಮಿಳಾ, ಕೆ ಸಿ ವಿಜಯಕುಮಾರ್, ಬಿ ಎಂ ಶಿವಕುಮಾರ್, ಕೆ ಸಿ ಶಿವಶಂಕರ್, ಶ್ರುತಿ, ಚೇತನ್ ಹೆಚ್ ಜಿ, ಗಗನ ಟಿ ಎಂ, ರಾಜೇಶ್ವರಿ, ವಿದ್ಯಾರ್ಥಿ ಸಂಘದ ವಿಶ್ವನಾಥ್, ಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದು ನಿರೂಪಣೆಯನ್ನು ಮೇಘ ಎ ಆರ್, ಅಕ್ಷತಾ ಮಾಡಿದರೆ ಪ್ರಾರ್ಥನೆಯನ್ನು ದರ್ಶನ್ ಆರ್ ಹಾಡಿದರು. ಎಸ್ ಮೇಘನಾ ಸ್ವಾಗತ ಕೋರಿದರು.

ಅತಿಥಿಗಳ ಪರಿಚಯವನ್ನು ವನಿತಾ, ಸುವಿಧಾ ಮಾಡಿದರೆ ಪ್ರತಿಭಾ ಪುರಸ್ಕಾರವನ್ನು ಉಪನ್ಯಾಸಕ ಕೆ ಸಿ ಶಿವಶಂಕರ್ ನೆರವೇರಿಸಿದರು. ರೀತು ವಂದನೆ ಸಲ್ಲಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಪ್ರಸ್ತುತಿಗಳು ನೆರವೇರಿದವು.
-ಚಿತ್ರ ಹಾಗೂ ವರದಿ ಡಾ. ಹೆಚ್ ಬಿ ಮಂಜುನಾಥ, ಹಿರಿಯ ಪತ್ರಕರ್ತರು-

Backward Classes Welfare Department ಹಿಂದುಳಿದ ವರ್ಗಗಳ ಕಾನೂನು‌ ಪದವೀಧರಿಗೆ ‌ಇಲಾಖೆಯ ಪ್ರಕಟಣೆ

0

Backward Classes Welfare Department 2024-25 ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ವಕೀಲರಿಗೆ ಪ್ರೋತ್ಸಾಹ ಧನ ಕಾರ್ಯಕ್ರಮದಡಿ ಕಾನೂನು ಪದವೀಧರ ಅಭ್ಯರ್ಥಿಗಳಿಗೆ ನ್ಯಾಯವಾದಿ ವೃತ್ತಿಯ ಪ್ರಾಯೋಗಿಕ ತರಬೇತಿ ಜೊತೆಗೆ ತರಬೇತಿ ಭತ್ಯೆ ನೀಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿ ಭತ್ಯೆ ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸಿದ್ದು, ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಪ್ರವರ್ಗವಾರು ನಿಗದಿಪಡಿಸಿದ ಗುರಿಗನುಗುಣವಾಗಿ ಮೆರಿಟ್ ಆಧಾರದ ಮೇಲೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ತರಬೇತಿ ಅವಧಿಯು 04 ವರ್ಷಗಳದ್ದಾಗಿದ್ದು, ಮಾಹೆಯಾನ ರೂ.4000 ಗಳ ತರಬೇತಿ ಭತ್ಯೆ ನೀಡಲಾಗುವುದು. ಪ್ರವರ್ಗ 2ಎ, 3ಎ ಮತ್ತು 3ಬಿ ಗಳಿಗೆ ಕುಟುಂಬದ ಒಟ್ಟು ವಾರ್ಷಿಕ ಆದಾಯ ರೂ.2.50 ಲಕ್ಷ ಹಾಗೂ ಅಭ್ಯರ್ಥಿಯ ಗರಿಷ್ಟ ವಯೋಮಿತಿಯು ಪ್ರಕಟಣೆ ದಿನಾಂಕಕ್ಕೆ 30 ವರ್ಷಗಳನ್ನು ಮೀರಬಾರದು. ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.3.50 ಲಕ್ಷ ಆದಾಯದ ಮಿತಿಯನ್ನು ನಿಗದಿಪಡಿಸಲಾಗಿದೆ. ಹಾಗೂ ಅಭ್ಯರ್ಥಿಯ ಗರಿಷ್ಟ ವಯೋಮಿತಿಯು 31 ವರ್ಷಗಳು ಮೀರಿರಬಾರದು. ತರಬೇತಿಗೆ ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕಾನೂನು ಪರೀಕ್ಷೆಯಲ್ಲಿ ತೇರ್ಗಡೆಯಾಗಿ 2 ವರ್ಷ ಅವಧಿಯ ಒಳಗಿರುವವರು ಮಾತ್ರ ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಬಾರ್ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿಸಿರಬೇಕು.
Backward Classes Welfare Department ಆಸಕ್ತರು ಅರ್ಜಿ ನಮೂನೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬಸವಚೇತನ ಬಿಲ್ಡಿಂಗ್, 100 ಅಡಿ ರಸ್ತೆ, ರವೀಂದ್ರನಗರ, ಶಿವಮೊಗ್ಗ ಇಲ್ಲಿದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಅ.10 ರೊಳಗಾಗಿ ಸಲ್ಲಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ: 08182-222129 ಅಥವಾ ಸಂಪರ್ಕಿಸುವುದು.

Spice Jet Airlines ಅಕ್ಟೋಬರ್ 10 ರಿಂದ ಶಿವಮೊಗ್ಗಕ್ಕೆ ಸ್ಪೈಸ್ ಜೆಟ್ ವಿಮಾನ ಸೇವೆ ಆರಂಭ

0

Spice Jet Airlines ಸ್ಪೈಸ್‌ ಜೆಟ್‌ ವಿಮಾನಯಾನ ಸಂಸ್ಥೆ ಶಿವಮೊಗ್ಗ – ಹೈದರಾಬಾದ್‌ ಮತ್ತು ಶಿವಮೊಗ್ಗ – ಚೆನ್ನೈ ಮಧ್ಯೆ ವಿಮಾನಯಾನ ಸೇವೆ ಆರಂಭಿಸುತ್ತಿದೆ. ಅ.10ರಿಂದ ಶಿವಮೊಗ್ಗದಿಂದ ಮೂರನೆ ವಿಮಾನಯಾನ ಸಂಸ್ಥೆ ಹಾರಾಟ ನಡೆಸಲಿದೆ.

ಚೆನ್ನೈಯಿಂದ ಶಿವಮೊಗ್ಗ: ಬೆಳಗ್ಗೆ 10:40ಕ್ಕೆ ಹೊರಟು, ಮಧ್ಯಾಹ್ನ 12:10ಕ್ಕೆ ತಲುಪಲಿದೆ.

ಶಿವಮೊಗ್ಗದಿಂದ ಹೈದರಾಬಾದ್: ಮಧ್ಯಾಹ್ನ 12:35ಕ್ಕೆ ಹೊರಟು, ಮಧ್ಯಾಹ್ನ 2:05ಕ್ಕೆ ತಲುಪಲಿದೆ.

ಹೈದರಾಬಾದ್‌ನಿಂದ ಶಿವಮೊಗ್ಗ: ಮಧ್ಯಾಹ್ನ 2:40ಕ್ಕೆ ಹೊರಟು, ಸಂಜೆ 4:10ಕ್ಕೆ ತಲುಪಲಿದೆ.

ಶಿವಮೊಗ್ಗದಿಂದ ಚೆನ್ನೈ: ಸಂಜೆ 4:25ಕ್ಕೆ ಹೊರಟು, ಸಂಜೆ 5:55ಕ್ಕೆ ತಲುಪಲಿದೆ.

Spice Jet Airlines ಈ ಹೊಸ ವಿಮಾನ ಮಾರ್ಗಗಳು ಶಿವಮೊಗ್ಗದ ಸಂಪರ್ಕವನ್ನು ಉತ್ತಮಗೊಳಿಸಿ, ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಇದಕ್ಕೆ ಸಹಕರಿಸಿದ ಸ್ಪೈಸ್‌ಜೆಟ್‌ಗೆ ಶಿವಮೊಗ್ಗ ಜನತ ಧನ್ಯವಾದಗಳನ್ನ ಅರ್ಪಿಸಿದ್ದಾರೆ..

Atishi Marlena ದೆಹಲಿ ಮುಖ್ಯಮಂತ್ರಿಯಾಗಿ ಆತಿಶಿ ಮರ್ಲೇನಾ ಪ್ರಮಾಣವಚನ ಸ್ವೀಕಾರ

0

Atishi Marlena ಆಮ್ ಆದ್ಮಿ ಪಕ್ಷದ(ಎಎಪಿ) ನಾಯಕಿ ಆತಿಶಿ ಮರ್ಲೇನಾ ಅವರು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು ಪ್ರಮಾಣವಚನ ಭೋದಿಸಿದರು. ಇದೇ ವೇಳೆ ಸೌರಭ್ ಭಾರದ್ವಾಜ್, ಗೋಪಾಲ್ ರಾಯ್, ಇಮ್ರಾನ್ ಹುಸೇನ್, ಖೈಲಾಶ್ ಗೆಹ್ಲೋಟ್ ಮತ್ತು ಮುಖೇಶ್ ಅಹ್ಲಾವತ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಅರವಿಂದ್ ಕೇಜ್ರಿವಾಲ್ ಅವರು ರಾಜೀನಾಮೆ ನೀಡಿರುವ ಹಿನ್ನೆಲೆ, ಆತಿಶಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ.
ದೆಹಲಿಯ ಆಪಾದಿತ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಕೇಜ್ರಿವಾಲ್ ಅವರು ಇತ್ತೀಚೆಗೆ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದರು. ಬಳಿಕ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆತಿಶಿ ಅವರನ್ನು ನೂತನ ಸಿಎಂ ಆಗಿ ಆಯ್ಕೆ ಮಾಡಿದ್ದರು.
Atishi Marlena ಬಿಜೆಪಿಯ ಸುಷ್ಮಾ ಸ್ವರಾಜ್ ಮತ್ತು ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ನಂತರ ಆತಿಶಿ ಅವರು ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಕಲ್ಕಾಜಿ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿರುವ ಅವರು, ಹಿಂದಿನ ಅರವಿಂದ್ ಕೇಜ್ರಿವಾಲ್ ಸರ್ಕಾರದಲ್ಲಿ ಅನೇಕ ಖಾತೆಗಳನ್ನು ಹೊಂದಿದ್ದರು.
ಆತಿಶಿ ದೆಹಲಿಯ ಮುಖ್ಯಮಂತ್ರಿಯಾದ ಅತ್ಯಂತ ಕಿರಿಯ ನಾಯಕಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಸೆಪ್ಟೆಂಬರ್ 26-27ರಂದು ನಡೆಯಲಿರುವ ವಿಶೇಷ ಅಧಿವೇಶನದಲ್ಲಿ 70 ಸದಸ್ಯರ ವಿಧಾನಸಭೆಯಲ್ಲಿ ಆತಿಶಿ ಅವರು ತಮ್ಮ ಸರ್ಕಾರದ ಬಹುಮತವನ್ನು ಸಾಬೀತುಪಡಿಸಬೇಕಾಗಿದೆ.

B. Y. Vijayendra ಮುನಿರತ್ನ ತಪ್ಪೆಸಗಿದ್ದರೆ ಶಿಕ್ಷೆಯಾಗಲಿ: ಬಿ.ವೈ.ವಿಜಯೇಂದ್ರ

0

B. Y. Vijayendra ಶಾಸಕ ಮುನಿರತ್ನ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ, ನಾವು ಬೇಡ ಎನ್ನುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ ಹೇಳಿದರು. ನಗರದ ಬಸವಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಬಸವ ಮರುಳಸಿದ್ದ ” ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಜಾತಿ ನಿಂದನೆ. ಬೆದರಿಕೆ ದಾಖಲಾಗಿ ಜಾಮೀನು ಸಿಕ್ಕಿತ್ತು. ಈಗ ಅವರ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿ ಮತ್ತೆ ಬಂಧನಕ್ಕೊಳಗಾಗಿದ್ದಾರೆ. ಮುನಿರತ್ನ ಅವರಿಂದ ತಪ್ಪು ಆಗಿದ್ದರೆ ಶಿಕ್ಷೆ ಆಗಲಿ, ಆದರೆ ತನಿಖೆ ಮಾತ್ರ ಸರಿಯಾಗಿ ಆಗಬೇಕು. ರಾಜಕೀಯ ಹಗೆತನಕ್ಕಾಗಿ ಪ್ರಕರಣ ದಾಖಲಾಗುವುದು ಮತ್ತು ತನಿಖೆ, ಬಂಧನದಂತಹ ಪ್ರಕ್ರಿಯೆಗಳು ನಡೆಯಬಾರದು. ಈ ಬೆಳವಣಿಗೆಗಳು ರಾಜಕೀಯಕ್ಕೆ ಒಳ್ಳೆ ಹೆಸರು ತರುವುದಿಲ್ಲ ಎಂದು ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಕುಲಸಚಿವರಿಗೆ ಅಲ್ಲಿನ ಪೊಲೀಸರು ವಿದ್ಯಾರ್ಥಿಗಳನ್ನು ಗಣಪತಿ ವಿಸರ್ಜನೆಗೆ ಕಳುಹಿಸಬೇಡಿ ಎಂದು ಪತ್ರ ಬರೆಯುತ್ತಾರೆ. ಈ ರೀತಿಯ ನಡವಳಿಕೆ ಹಿಂದೆ ಯಾವ ಸರಕಾರದ ಅವಧಿಯಲ್ಲಿಯೂ ಆಗಿಲ್ಲ. ಹಬ್ಬ ಆಚರಣೆಯಲ್ಲಿ ಭಾಗವಹಿಸಬಾರದು ಎಂದು ಪತ್ರ ಬರೆದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು. ಕುಲಸಚಿವರು ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
B. Y. Vijayendra ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗೆಲ್ಲ ಹಿಂದೂಗಳ ಮೇಲೆ ದಬ್ಬಾ ಳಿಕೆಗಳು ಹೆಚ್ಚುತ್ತವೆ. ಬಹುಸಂಖ್ಯಾತರ ಹಬ್ಬ ಹರಿದಿನಗಳನ್ನೂ ನೆಮ್ಮದಿಯಾಗಿ ಆಚರಿಸುವಂತಿಲ್ಲ. ಗಣೇಶೋತ್ಸವದ ಮೆರವಣಣಿಗೆ ಮೇಲೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆಯಲಾಗುತ್ತಿದೆ. ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗುವಂತಹ ಕೃತ್ಯಗಳು ನಡೆಯುತ್ತಲೇ ಇವೆ. ನಾಗಮಂಗಲದಲ್ಲಿ ಮತೀಯ ಶಕ್ತಿಗಳು ದಾಂಧಲೆ ಎಬ್ಬಿಸಿವೆ. ಹಬ್ಬದ ಸಂಭ್ರಮ ದಲ್ಲಿದ್ದ ಊರಿನಲ್ಲಿ ದ್ವೇಷ ಕಾರಲಾಗಿದೆ ಎಂದರು.

Shimoga Chamber of Commerce and Industry ಪ್ರತಿ ಕಾರ್ಯ ಕ್ಷೇತ್ರದಲ್ಲಿ ಜ್ಞಾನಕ್ಕಿಂತ ಅನುಭವ ಆಧಾರಿತ ಕೌಶಲ್ಯ ಪ್ರಮುಖ ಪಾತ್ರ ವಹಿಸುತ್ತದೆ – ಡಿ.ಎಸ್. ಅರುಣ್

0

Shimoga Chamber of Commerce and Industry ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ(ರಿ) ಅಡ್ವಾನ್ಸ್ ಸ್ಕಿಲ್ ಡೆವೆಲಪ್‌ಮೆಂಟ್ ಅಕಾಡೆಮಿ ಮತ್ತು ವಿಸ್ಟಾ ತಂತ್ರಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ವೃತ್ತಿ ಕೌಶಲ್ಯ ತರಬೇತಿ ಬಗ್ಗೆ ಮಾರ್ಗದರ್ಶನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಣೆ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಉದ್ಘಾಟಿಸಿ ಮಾತನಾಡಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ತುಂಬಾ ವರ್ಷಗಳ ಕನಸಾದ ಅಡ್ವಾನ್ಸ್ಡ್ ಸ್ಕಿಲ್ ಡೆವೆಲಪ್‌ಮೆಂಟ್ ಅಕಾಡೆಮಿಯನ್ನು ಪ್ರಾರಂಭಿಸಿರುವುದಕ್ಕೆ ಸಂಘದ ಅಧ್ಯಕ್ಷರು ಮತ್ತು ಪಧಾಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿ ಪ್ರತಿ ಕಾರ್ಯಕೇತ್ರದಲ್ಲೂ ಜ್ಞಾನಕ್ಕಿಂತ ಅನುಭವ ಆಧಾರಿತ ಕೌಶಲ್ಯದ ಅವಶ್ಯಕತೆಯನ್ನು ತಮ್ಮ ಭಾಷಣದಲ್ಲಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಎನ್ ಗೋಪಿನಾಥ್ ವಹಿಸಿ ಮಾತನಾಡಿ ಸಂಘದ ಅಡಿಯಲ್ಲಿ ಅಕಾಡೆಮಿ ಪ್ರಾರಂಬಿಸಿದ್ದು ವಿದ್ಯಾರ್ಥಿಗಳ ಶಿಕ್ಷಣ ಮತ್ತು ಉದ್ಯೋಗದ ಮದ್ಯ ಇರುವ ಅಂತರವನ್ನು ಹೋಗಲಾಡಿಸಲು ಸುಮಾರು 25 ಲಕ್ಷ ಬಂಡವಾಳವನ್ನು ತೊಡಗಿಸಿದ್ದು ಇದು ಶಿವಮೊಗ್ಗ ಜಿಲ್ಲೆಯ ಭವಿಷ್ಯಕ್ಕಾಗಿ ಹಾಗೂ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಹೂಡಿದ ಬಂಡವಾಳ 2050ರ ಹೊತ್ತಿಗೆ ಶಿವಮೊಗ್ಗ ಕೈಗಾರಿಕಾ ಕ್ಷೇತ್ರ, ವಾಣಿಜ್ಯ ಕ್ಷೇತ್ರ ಹಾಗೂ ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಹೊಂದಿದ ಜಿಲ್ಲೆ, ಉನ್ನತ ಕೌಶಲ್ಯ ಕೇಂದ್ರವಾಗಿ ಶಿವಮೊಗ್ಗ ವಿಷನ್ 2050ರ ಆಶಯದಂತೆ ಹೊರಹೊಮ್ಮುವ ನಂಬಿಕೆ ಇದೆ ಎಂದು ತಿಳಿಸಿದರು.

Shimoga Chamber of Commerce and Industry ಶ್ರೀಮತಿ ಪೂರ್ಣಿಮಾ ಡಿ, ಎಜುರೈಟ್ ಕಾಲೇಜಿನ ಪ್ರಂಶುಪಾಲರಾದ ಶ್ರೀ ಶಂಕರ್‌ನಾರಾಯಣ, ರಾಷ್ಟಿçÃಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಎಸ್.ಎನ್ ನಾಗಾರಾಜ್ ಮತ್ತು ಮಾನಸ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರಜಿನಿ ಪೈ ರವರು ವಿದ್ಯಾರ್ಥಿಗಳಿಗೆ ಇಂದಿನ ವಿದ್ಯಾಭ್ಯಾಸದಲ್ಲಿ ಸ್ಕಿಲ್‌ನ ಅಗತ್ಯತೆಯ ಬಗ್ಗೆ ಸವಿವರವಾಗಿ ಮಾತನಾಡಿ ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡೆದು ತಮ್ಮ ಜೀವನವನ್ನು ರೂಪಿಸಿಕೊಳ್ಳುವ ಅಗತ್ಯತೆಯನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಸ್ಟಾ ಕಂಪೆನಿಯ ಕೋ-ಫೌಂಡರ್ ಶ್ರೀ ವಿನಯ್ ಕುಮಾರ್ ಎ.ಎಸ್ ಮತ್ತು ಚಿಫ್ ಆಪರೇಟಿಂಗ್ ಆಫೀಸರ್ ಸ್ಕಿಲ್ ಅಕಾಡೆಮಿಯ ಉದ್ದೇಶದೊಂದಿಗೆ ಪ್ರಸ್ತಾವಿಕ ನುಡಿ ನುಡಿದರು ಶ್ರೀ ಸಂಜಯ್ ಕುಮಾರ್ ವಿಶ್ವಕರ್ಮರವರು ತರಬೇತಿ ಕಾರ್ಯಕ್ರಮದ ಮಾರ್ಗದರ್ಶನ ಬಗ್ಗೆ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಬಿ. ಗೋಪಿನಾಥ್ ಸಹಕಾರ್ಯದರ್ಶಿ ಜಿ. ವಿಜಯಕುಮಾರ್, ಡಿ.ಎಂ. ಶಂಕರಪ್ಪ, ಎಸ್.ಎಸ್ ಉದಯಕುಮಾರ್, ಮಧುಸೂದನ ಐತಾಳ್, ಪ್ರದೀಪ್ ವಿ. ಎಲಿ, ತೇಜಶ್ರೀ ಎಸ್.ಹೆಚ್ ಇತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ವಸಂತ್ ಹೋಬಳಿದಾರ್‌ರವರು ವಂದನಾರ್ಪಣೆ ಸಲ್ಲಿಸಿದರು.