Sirsi Police ಶಿರಾಳಕೊಪ್ಪದ ಬಂಕಾಪುರ ಕಾಲೋನಿಯ ಮಹಿಳೆ ಒಬ್ಬಳು ಎಟಿಎಂ ಗ್ರಾಹಕರನ್ನು ವಂಚಿಸಿ ಅವರ ಖಾತೆಯಿಂದ ಹಣ ಎಗರಿಸುತ್ತಿದ್ದ ಘಟನೆಯನ್ನು ಶಿರಸಿ ಪೊಲೀಸರು ಪತ್ತೆ ಮಾಡಿ ಆಕೆಯನ್ನು ಬಂಧಿಸಿದ್ದಾರೆ ಆಕೆಯಿಂದ ಸುಮಾರು ಎರಡು ನೂರು ಎಟಿಎಂ ಕಾರ್ಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಿರಸಿ ಸುತ್ತಮುತ್ತ ಕಾರ್ಯಾಚರಣೆ ನಡೆಸುತ್ತಿದ್ದ ಈ ಮಹಿಳೆಯ ಹೆಸರು ಕೌಸರ್ ಬಾನು ಎಂದಾಗಿದ್ದು , ಐವರು ಮಕ್ಕಳೊಂದಿಗೆ ಶಿರಸಿಯಲ್ಲಿ ಬಾಡಿಗೆ ಮನೆ ಮಾಡಿ ವಾಸಿಸುತ್ತಿದ್ದಳು. ಸದಾ ಎಟಿಎಂ ಸುತ್ತಮುತ್ತ ಸುಳಿದಾಡುತ್ತಿದ್ದ ಈಕೆ ಅಲ್ಲಿ ಹಣ ತೆಗೆಯಲು ಬರುವ ಗ್ರಾಮೀಣ ಜನರ ಮತ್ತು ವಯೋವೃದ್ಧರನ್ನು ಗುರಿ ಮಾಡಿಕೊಂಡು ಅವರನ್ನು ಮೋಸಗೊಳಿಸಿ ನಂತರ ಅವರ ಎಟಿಎಂ ಕಾರ್ಡ್ನಿಂದ ಹಣ ತೆಗೆದುಕೊಡುವ ನಾಟಕ ಮಾಡುತ್ತಿದ್ದಳು. ನಿಮ್ಮ ಕಾರ್ಡಿನಿಂದ ಹಣ ಬರುತ್ತಿಲ್ಲ ಎಂದು ನಂಬಿಸುತ್ತಿದ್ದಳು. ಈ ವೇಳೆ ಅವರಿಗೆ ಕಾರ್ಡನ್ನು ಗೊತ್ತಾಗದಂತೆ ಬದಲಿಸುತ್ತಿದ್ದಳು. ಅವರು ಹೋದ ನಂತರ ಅವರ ಕಾರ್ಡಿನಿಂದ ಹಣ ತೆಗೆಯುತ್ತಿದ್ದಳು. ಇದೇ ರೀತಿ ಸುಮಾರು ಜನರು ಹಣ ಕಳೆದುಕೊಂಡ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
Sirsi Police ಪೊಲೀಸರು ಬ್ಯಾಂಕುಗಳ ಎಟಿಎಂ ಸುತ್ತಮುತ್ತ ಮಾರು ವೇಷದಲ್ಲಿ ನಿಂತು ಮತ್ತು ಸಿ ಸಿ ಕ್ಯಾಮೆರಾ ಗಳನ್ನು ಪರಿಶೀಲಿಸಿ ಈಕೆಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ . ಎಲ್ಲಾ ಘಟನೆಗಳಲ್ಲೂ ಈಕೆ ಒಬ್ಬಳೇ ಭಾಗಿಯಾಗಿರುವುದು ಪೊಲೀಸರಿಗೆ ಕಂಡುಬಂದಿದೆ ಈಕೆಯನ್ನು ಇನ್ನಷ್ಟು ವಿಚಾರಣೆ ನಡೆಸಿ ಬ್ಯಾಗ್ ಪರಿಶೀಲಿಸಿದಾಗ ಸುಮಾರು 2೦೦ರಷ್ಟು ಎಟಿಎಂ ಕಾರ್ಡ್ ಗಳು ಪತ್ತೆಯಾಗಿವೆ.
Sirsi Police ಎಟಿಎಂ ಕಾರ್ಡ್ ಮೂಲಕ ವಂಚಿಸುತ್ತಿದ್ದ ಶಿರಾಳಕೊಪ್ಪದ ಮಹಿಳೆ ಶಿರಸಿಯಲ್ಲಿ ಬಂಧನ
Chamber of Commerce ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್ ನೂತನ ಅಧ್ಯಕ್ಷರಾಗಿ ಬಿ.ಗೋಪಿನಾಥ್ ಆಯ್ಕೆ
Chamber of Commerce ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ( ಎಸ್‌ಡಿಸಿಸಿಐ ) ಅಧ್ಯಕ್ಷರಾಗಿ ಬಿ.ಗೋಪಿನಾಥ್ ಆಯ್ಕೆಯಾಗಿದ್ದಾರೆ.
ಬಿ.ಗೋಪಿನಾಥ್ ಅವರು 19 ವರ್ಷಗಳಿಂದ ಎಸ್‌ಡಿಸಿಸಿಐ ಸದಸ್ಯರಾಗಿದ್ದು, ನಾಲ್ಕು ವರ್ಷ ನಿರ್ದೇಶಕರಾಗಿ, ಐದು ವರ್ಷ ಕಾರ್ಯದರ್ಶಿ ಹಾಗೂ ಮೂರು ವರ್ಷ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ಇದೀಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಬಿ.ಗೋಪಿನಾಥ್, ಎಲ್ಲ ಸದಸ್ಯರ ಸಹಕಾರದಿಂದ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಲು ಶ್ರಮಿಸುತ್ತೇನೆ. ಸಂಘದಿಂದ ನಡೆಯುತ್ತಿರುವ ಕಾರ್ಯಕ್ರಮಗಳನ್ನು ಮುಂದುವರೆಸುವ ಜತೆಯಲ್ಲಿ ಹೊಸ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಎರಡು ವರ್ಷಗಳ ಅವಧಿಯಲ್ಲಿ ಜಾಗೃತಿ ಕಾರ್ಯಕ್ರಮ, ತರಬೇತಿ ಶಿಬಿರ, ಕಾರ್ಯಾಗಾರ ಹಾಗೂ ವಿಶೇಷ ಸಭೆಗಳನ್ನು ನಡೆಸಲಾಗುವುದು. ಎಲ್ಲ ವರ್ಗದ ಉದ್ಯಮಿಗಳೊಂದಿಗೆ ಚರ್ಚಿಸಿ ಆಗಬೇಕಿರುವ ಕೆಲಸಗಳನ್ನು ಎಂಎಲ್‌ಎ, ಎಂಎಲ್‌ಸಿ, ಎಂಪಿ ಸೇರಿದಂತೆ ಜನಪ್ರತಿನಿಧಿಗಳ ಗಮನಕ್ಕೆ ತರಲಾಗುವುದು. ಶಿವಮೊಗ್ಗ ಬ್ರ್ಯಾಂಡ್ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಶಿವಮೊಗ್ಗ ಹಬ್ಬ ಆಯೋಜಿಸಲಾಗುವುದು ಎಂದರು.
ಅಡ್ವಾನ್ಸ್ಡ್ ಸ್ಕಿಲ್ ಅಕಾಡೆಮಿಯ ತರಬೇತಿಗಳನ್ನು ಪರಿಣಾಮಕಾರಿಯಾಗಿ ಜನತೆಗೆ ತಲುಪಿಸಲು ಶ್ರಮಿಸಲಾಗುವುದು. ಪ್ರವಾಸೋದ್ಯಮ ಸರ್ಕ್ಯೂಟ್ ರಚನೆ, ಇ-ವೇಸ್ಟ್ ಪ್ರಾಜೆಕ್ಟ್ ಸೇರಿ ವಿಶೇಷ ಯೋಜನೆಗಳನ್ನು ಸಾಕಾರಗೊಳಿಸಲಾಗುವುದು. ಅಧ್ಯಯನ ದೃಷ್ಟಿಯಿಂದ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
Chamber of Commerce ಶಿವಮೊಗ್ಗ ಜಿಲ್ಲೆಯ ಬೆಳವಣಿಗೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಮಹತ್ವ ಪಾತ್ರ ವಹಿಸುವುದು. ಎಸ್‌ಡಿಸಿಸಿಐ ನಿಯೋಗ ಸಮಿತಿ ರಚಿಸುವುದು. ಶಿವಮೊಗ್ಗ ಅಭಿವೃದ್ಧಿಗೆ ಸಂಬಂಧಪಟ್ಟ ಅಧಿಕಾರಿ, ಶಾಸಕರು, ಸಚಿವರೊಂದಿಗೆ ಪದಾಧಿಕಾರಿಗಳು ಸಮಾಲೋಚನೆ ನಡೆಸುತ್ತೇವೆ ಎಂದರು.
ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಎಲ್ಲ ಹಿರಿಯರು ಜ್ಞಾನ, ಅನುಭವವನ್ನು ಹಂಚಿಕೊಂಡು ಸಂಘವನ್ನು ಉತ್ತಮವಾಗಿ ಮುನ್ನಡೆಸಲು ಸಹಕಾರ ನೀಡಬೇಕು. ಎಸ್.ರುದ್ರೇಗೌಡ, ವಸಂತಕುಮಾರ್, ಅಶ್ವತ್ಥ್ ನಾರಾಯಣ ಶೆಟ್ಟಿ, ಮಹೇಂದ್ರಪ್ಪ, ಡಿ.ಎಸ್.ಅರುಣ್, ಶಂಕರಪ್ಪ, ಜೆ.ಆರ್.ವಾಸುದೇವ್, ಎನ್.ಗೋಪಿನಾಥ್ ಹಾಗೂ ಎಲ್ಲ ನಿರ್ದೇಶಕರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ( ಎಸ್‌ಡಿಸಿಸಿಐ ) ನೂತನ ಪದಾಧಿಕಾರಿಗಳು: ಬಿ.ಗೋಪಿನಾಥ್-ಅಧ್ಯಕ್ಷ, ಜಿ.ವಿಜಯಕುಮಾರ್-ಉಪಾಧ್ಯಕ್ಷ, ಸುರೇಶ್.ಎ.ಎಂ-ಕಾರ್ಯದರ್ಶಿ, ಸುಕುಮಾರ್.ಕೆ.ಎಸ್.-ಜಂಟಿ ಕಾರ್ಯದರ್ಶಿ, ಮನೋಹರ.ಆರ್-ಖಜಾಂಚಿ, ಎನ್.ಗೋಪಿನಾಥ್-ನಿಕಟಪೂರ್ವ ಅಧ್ಯಕ್ಷ.
ವಿವಿಧ ಉಪಸಮಿತಿಗಳ ಅಧ್ಯಕ್ಷರು: ವಸಂತ ಹೋಬಳಿದಾರ್-ಅಡ್ವಾನ್ಸ್ಡ್ ಸ್ಕಿಲ್ ಅಭಿವೃದ್ಧಿ ಸಮಿತಿ, ಉದಯಕುಮಾರ.ಎಸ್.ಎಸ್-ರೈಲ್ವೆ ಅಭಿವೃದ್ಧಿ ಸಮಿತಿ, ರುದ್ರೇಶ್.ಪಿ-ಪ್ರವಾಸೋದ್ಯಮ ಸಮಿತಿ, ಪ್ರದೀಪ್ ಯಲಿ-ಎಂಎಸ್‌ಎಂಇ ಮತ್ತು ಸರ್ಕಾರದ ಯೋಜನೆಗಳ ಜಾಗೃತ ಸಮಿತಿ, ಮಂಜೇಗೌಡ-ಸದಸ್ಯತ್ವ ಅಭಿವೃದ್ಧಿ ಸಮಿತಿ, ಗಣೇಶ ಅಂಗಡಿ-ಮೂಲಸೌಕರ್ಯ ಅಭಿವೃದ್ಧಿ ಸಮಿತಿ, ನರೇಂದ್ರ-ಎಕ್ಸ್ಪೋರ್ಟ್ ಮತ್ತು ಐಪಿ ಫೆಸಿಲಿಟೆಷನ್ ಸೆಂಟರ್ ಸ್ಟಾರ್ಟ್ಅಪ್ ಇನ್ನೋವೆಟಿವ್ ಸಮಿತಿ, ವಿ.ಕೆ.ಜೈನ್-ಟ್ರೇಡ್ ಫೆಸಿಲಿಟೆಷನ್ ಸಮಿತಿ, ರಾಜಶೇಖರ ಕೆ.ಎನ್.-ಎಪಿಎಂಸಿ ಮತ್ತು ಕೃಷಿ ಸಮಿತಿ, ಕಿರಣ್-ಕೈಗಾರಿಕಾ ಅಭಿವೃದ್ಧಿ ಸಮಿತಿ, ಶಿವಕುಮಾರ್-ಪರಿಸರ ಸಮಿತಿ, ಶಂಕರ ಎಸ್.ಪಿ-ಜಿಲ್ಲಾ ಮತ್ತು ತಾಲೂಕು ಅಭಿವೃದ್ಧಿ ಸಮಿತಿ, ಸಿ.ಎ.ಶರತ್-ಪ್ರೋಗ್ರಾಂ ಕಮಿಟಿ ಮತ್ತು ತೆರಿಗೆ ಸಮಿತಿ, ಲಕ್ಷ್ಮೀದೇವಿ ಗೋಪಿನಾಥ್-ಮಹಿಳಾ ಅಭಿವೃದ್ಧಿ ಸಮಿತಿ.

Department of Youth Empowerment and Sports ಕ್ರೀಡೆಯಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯ- ಶಾಸಕ ಚನ್ನಬಸಪ್ಪ
Department of Youth Empowerment and Sports ಕ್ರೀಡೆಯಿಂದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯಬಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ತಿಳಿಸಿದರು.
ನೆಹರು ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕಣರ ಮತ್ತು ಕ್ರೀಡಾ ಇಲಾಖೆ , ಸಾರ್ವಜನಿಕ ಶಿಕ್ಷಣ ಇಲಾಖೆ, ವಿವಿಧ ಕ್ರೀಡಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶಿವಮೊಗ್ಗ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ 2024-25ನೇ ಸಾಲಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಸರಾ ಕ್ರೀಡಾಕೂಟವನ್ನು ಯುವ ಸಬಲೀಕಣರ ಮತ್ತು ಕ್ರೀಡಾ ಇಲಾಖೆಯಿಂದ ಪ್ರತಿ ತಾಲೂಕು ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಪ್ರಯತ್ನ ಈ ಕ್ರೀಡಾಕೂಟದಲ್ಲಿ ನಡೆಯುತ್ತದೆ. ಪ್ರತಿಯೊಬ್ಬ ಕ್ರೀಡಾಪಟು ಕೂಡ ಉತ್ತಮವಾದ ಸಾಮರ್ಥ್ಯವನ್ನು ಹೊಂದಿದ್ದು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಇದು ಒಂದು ಉತ್ತಮ ಅವಕಾಶವಾಗಿದೆ.
ಕ್ರೀಡೆಯು ಮನುಷ್ಯನ ವ್ಯಕ್ತಿತ್ವವನ್ನು ಬದಲಾವಣೆ ಮಾಡಲು ಸಹಕಾರಿಯಾಗಿದ್ದು ತಾಲೂಕು, ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಮುಂದೆ ನಿಮ್ಮ ಸಾಧನೆ ಒಲಿಂಪಿಕ್ ಕ್ರೀಡೆಗಳಲ್ಲಿ ಸ್ಪರ್ಧಿಸಿ ದೇಶಕ್ಕೆ ಕೀರ್ತಿಯನ್ನು ತಂದುಕೊಡುವಂತೆ ಆಗಲಿ, ಅದಕ್ಕಾಗಿ ನಿಮ್ಮ ಪ್ರಯತ್ನ ನಿರಂತರವಾಗಿ ಇರಲಿ ಎಂದು ಹಾರೈಸಿದರು.
ವಿಧಾನಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಆತ್ಮವಿಶ್ವಾಸ ಅತ್ಯಂತ ಮುಖ್ಯವಾಗಿದೆ. ಅದು ಕ್ರೀಡೆಯಿಂದ ಸುಲಭವಾಗಿ ದೊರೆಯುತ್ತದೆ. ಕ್ರೀಡಾಪಟುಗಳು ಕ್ರೀಡೆಯಲ್ಲಿ ಎದುರಿಸುವ ಸವಾಲುಗಳನ್ನು ತಮ್ಮ ಜೀವನಲ್ಲಿ ಕೂಡ ಎಂತಹ ಕಷ್ಟಗಳು ಬಂದರೂ ಎದುರಿಸುವ ಸಾಮರ್ಥ್ಯವನ್ನು ಮೈಗೂಡಿಸಿಕೊಂಡಿರುತ್ತಾರೆ. ಕ್ರೀಡಾಪಟುಗಳು ಉತ್ತಮವಾಗಿ ಪ್ರದರ್ಶನ ನೀಡಬೇಕು. ಇಲ್ಲಿ ಸೋಲು ಗೆಲವು ಮುಖ್ಯವಲ್ಲ. ಎರಡನ್ನೂ ಸಮಾನವಾಗಿ ಸ್ವೀಕರಿಸಿ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು ಎಂದರು.
Department of Youth Empowerment and Sports ವಿಧಾನಪರಿಷತ್ ಸದಸ್ಯರಾದ ಡಿ.ಎಸ್ ಅರುಣ್ ಅವರು ಮಾತನಾಡಿ, ವಿವಿಧ ತಾಲೂಕು ಕೇಂದ್ರಗಳಲ್ಲಿ 14 ಕ್ರೀಡೆಗಳಲ್ಲಿ ಜಯಗಳಿಸಿ ಇಂದು ನಡೆಯುತ್ತಿರುವ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಗಮಿಸಿದ ಎಲ್ಲಾ ಕ್ರೀಡಾಪಟುಗಳು ಉತ್ತಮವಾದ ಪ್ರದರ್ಶನವನ್ನು ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಮುಂದಿನ ದಿನಗಳಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುವಂತೆ ನಿಮ್ಮ ಶ್ರಮ ಇರಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯಾನಾಯ್ಕ್, ವಿವಿಧ ಕ್ರೀಡಾ ಸಂಘ ಸಂಸ್ಥೆಗಳು, ಪದಾಧಿಕಾರಿಗಳು, ಕ್ರೀಡಾಪಟುಗಳು ಉಪಸ್ಥಿತರಿದ್ದರು.

MESCOM ತ್ಯಾವರೆ ಚಟ್ನಳ್ಳಿ ಸುತ್ತಮುತ್ತ ಸೆ,23 ರಂದು ವಿದ್ಯುತ್ ವ್ಯತ್ಯಯ
MESCOM ಶಿವಮೊಗ್ಗ ತಾವರೆಚಟ್ನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಇರುವುದರಿಂದ ಸೆ. 24 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ನವುಲೆ, ಎಲ್.ಬಿ.ಎಸ್.ನಗರ, ಅಶ್ವತ್‌ನಗರ, ಕೀರ್ತಿನಗರ, ಸವಳಂಗರಸ್ತೆ, ಬಸವೇಶ್ವರ ನಗರ, ಕೃಷಿನಗರ, ರಾಯಲ್ ಬಡಾವಣೆ, ಅನೂಪ್ ಪಾಟೀಲ್, ಕುವೆಂಪುನಗರ, ರೆಡ್ಡಿ ಲೇಔಟ್, ಜ್ಯೋತಿನಗರ, ಜೆ.ಎನ್.ಎನ್.ಸಿ. ಕಾಲೇಜ್, ಶಿವಬಸವನಗರ, ಬೊಮ್ಮನಕಟ್ಟೆ ಎ ರಿಂದ ಹೆಚ್ ಬ್ಲಾಕ್‌ವರೆಗೆ, ಹಳೆ ಬೊಮ್ಮನಕಟ್ಟೆ, ಶಾಂತಿನಗರ, ತಾವರೆಚಟ್ನಹಳ್ಳಿ, MESCOM ಹೊನ್ನಾಳಿರಸ್ತೆ, ಗುಂಡಪ್ಪ ಶೆಡ್, ಶಂಕರಮಠರಸ್ತೆ, ಮಲ್ಲೇಶ್ವರನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
CM Siddharamaih ಕಲ್ಯಾಣ ಕರ್ನಾಟಕದ ಎಲ್ಲಾ ‘ಲೋಕ’ ಸ್ಥಾನಗಳನ್ನ ನಮ್ಮ ಪಕ್ಷಕ್ಕೆ ಕೊಟ್ಟಿದ್ದೀರಿ- ಸಿದ್ಧರಾಮಯ್ಯ
CM Siddharamaih ಕಲ್ಯಾಣ ಕರ್ನಾಟಕದ ಎಲ್ಲಾ ಲೋಕಸಭಾ ಸ್ಥಾನಗಳನ್ನು ನಮ್ಮ ಪಕ್ಷಕ್ಕೆ ಕೊಟ್ಟಿದ್ದೀರಿ. ನಾವು ಕಲ್ಯಾಣ ಕರ್ನಾಟಕದಲ್ಲಿ ವಿಶೇಷ ಕ್ಯಾಬಿನೆಟ್ ನಡೆಸಿ 46 ವಿಷಯಗಳನ್ನು, ಅನೇಕ ಕಾರ್ಯಕ್ರಮಗಳನ್ನು ಕಲ್ಯಾಣ ಕರ್ನಾಟಕದ ಅಭಿವಧ್ಧಿಗಾಗಿ ಘೋಷಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕಕ್ಕೆ 371ಜೆ ಜಾರಿ ಮಾಡಲು ಕೇಂದ್ರದಲ್ಲಿದ್ದ ಬಿಜೆಪಿ ಸರ್ಕಾರ ವಿರೋಧಿಸಿತ್ತು. ಆದರೆ ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ 371 ಜೆ ಜಾರಿ ಮಾಡಿದರು.
CM Siddharamaih ಪ್ರಾದೇಶಿಕ ಅಸಮಾನತೆ ಅಧ್ಯಯನಕ್ಕೆ ಗೋವಿಂದರಾವ್ ಅವರ ಸಮಿತಿ ರಚಿಸಿದ್ದೇವೆ. ಸಮಿತಿ ವರದಿ ನೀಡುತ್ತಿದ್ದಂತೆ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಹೊಸ ನೀಲನಕ್ಷೆ ರಚಿಸುತ್ತೇವೆ. ಈಗಾಗಲೇ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ₹5,000 ಕೋಟಿ ಘೋಷಿಸಿ ಆಗಿದೆ. ಕೇಂದ್ರ ಸರ್ಕಾರ ಕೂಡ ₹5,000 ಕೋಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದೇವೆ. ಕೇಂದ್ರ ಕೊಡುತ್ತದೋ ಇಲ್ಲವೋ ನೀವೇ ನೋಡಿ.ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
S.N.Chennabasappa ಪೌರಕಾರ್ಮಿಕರೊಂದಿಗೆ ಹೆಜ್ಜೆಹಾಕಿದ ಶಾಸಕ ‘ಚೆನ್ನಿ’
S.N.Chennabasappa ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸ್ವಚ್ಛ ಹಾಗೂ ಸ್ವಸ್ಥ ಭಾರತದ ರೂವಾರಿಗಳು, ಸ್ವಚ್ಛತಾ ಕಾರ್ಯದ ಮೂಲಕ ಜನರ ಆರೋಗ್ಯವನ್ನು ಹಾಗೂ ನಗರ, ಪಟ್ಟಣಗಳ ಪರಿಸರವನ್ನು ಸಂರಕ್ಷಿಸುತ್ತಿರುವ ಸೇವಾ ನಿರತ ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಲಾಗಿದ್ದ “ಪೌರಕಾರ್ಮಿಕರ S.N.Chennabasappa ದಿನಾಚರಣೆಯಲ್ಲಿ” ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಪಾಲ್ಗೊಂಡು, ತಮ್ಮ ನೆಚ್ಚಿನ ಪೌರ ಕಾರ್ಮಿಕರ ಜೊತೆ ಹೆಜ್ಜೆ ಹಾಕಿದರು.
Karnataka Drama Academy ನಾಡಿನ ಮುಖ್ಯಮಂತ್ರಿಗಳ ಸ್ವಹಸ್ತದಿಂದ ಪ್ರಶಸ್ತಿ ಪಡೆದದ್ದು ನನ್ನ ಜೀವನದ ಅಮೂಲ್ಯ ದಿನ- ರಮೇಶ್ ಬೇಗಾರ್
Karnataka Drama Academy ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ 2022 – 23 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಯನ್ನು ಮಲೆನಾಡ ಪ್ರಸಿದ್ಧ ರಂಗಭೂಮಿ ಮತ್ತು ಚಲನಚಿತ್ರ ನಿರ್ದೇಶಕ ರಮೇಶ್ ಬೇಗಾರ್ ಇವರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನಿಸಿದರು.
ಇತ್ತೀಚಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ದಲ್ಲಿ ನಾಟಕ ಅಕಾಡೆಮಿ ಆಯೋಜಿಸಿದ್ದ ವರ್ಣ ರಂಜಿತ ಕಾರ್ಯಕ್ರಮ ದಲ್ಲಿ ರಮೇಶ್ ಪ್ರಶಸ್ತಿ ಪುರಸ್ಕೃತರಾದರು.
Karnataka Drama Academy ಈ ಕಾರ್ಯಕ್ರಮ ದಲ್ಲಿ ಮುಖ್ಯಮಂತ್ರಿಯವರಲ್ಲದೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಮಾಜಿ ಸಚಿವೆ ನಟಿ ಉಮಾಶ್ರೀ ಮತ್ತು ನಾಟಕ ಅಕಾಡೆಮಿ ಅಧ್ಯಕ್ಷ ಕೆ ವಿ ನಾಗರಾಜ್ ಮೂರ್ತಿ ಉಪಸ್ಥಿತರಿದ್ದರು.
ಪ್ರಶಸ್ತಿ ಯು 25 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಕಂಚಿನ ನಟರಾಜ ಪ್ರತಿಮೆಯನ್ನು ಒಳಗೊಂಡಿದೆ.
ಈ ಸಂದರ್ಭದಲ್ಲಿ ಮಾಧ್ಯಮ ಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ರಮೇಶ್ ಬೇಗಾರ್ ಪ್ರಶಸ್ತಿ ಯು ನನ್ನೊಂದಿಗೆ 4 ದಶಕ ಗಳಿಂದ ಹೆಜ್ಜೆ ಹಾಕಿದ ಕಲಾವಿದ ಮಿತ್ರ ರ ಕೊಡುಗೆಯಾಗಿದೆ. ಅವರ ಮತ್ತು ಮಲೆನಾಡ ಕಲಾ ಪೋಷಕರ ಅಮೋಘ ಸಹಕಾರದಿಂದ ಪ್ರಶಸ್ತಿ ಲಭಿಸಿದೆ. ನಾಡಿನ ಮುಖ್ಯಮಂತ್ರಿ ಗಳಿಂದಲೇ ಪ್ರಶಸ್ತಿ ಸ್ವೀಕರಿಸಿದ್ದು ಜೀವನದ ಅಮೂಲ್ಯ ದಿನ ಎಂದು ತಿಳಿಸಿದರು.

Sri Lanka Election ಶ್ರೀಲಂಕಾ ಅಧ್ಯಕ್ಷರಾಗಿ ಅನುರ ಕುಮಾರ ಡಿಸ್ಸನಾಯಕೆ ಆಯ್ಕೆ
Sri Lanka Election ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಮಾರ್ಕ್ಸ್‌ವಾದಿ ನಾಯಕ ಅನುರ ಕುಮಾರ ದಿಸ್ಸನಾಯಕೆ ಆರಂಭಿಕ ಮುನ್ನಡೆ ಗಳಿಸಿದ್ದಾರೆ.
ದಿಸ್ಸನಾಯಕೆ ಅವರು ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಒಕ್ಕೂಟದ ಅಭ್ಯರ್ಥಿಯಾಗಿ ಮಾರ್ಕ್ಸ್‌ವಾದಿ ಜನತಾ ವಿಮುಕ್ತಿ ಪೆರೆಮುನಾ (ಜೆವಿಪಿ) ಪಕ್ಷದಿಂದ ಕಣಕ್ಕಿಳಿದಿದ್ದಾರೆ.
ಶ್ರೀಲಂಕಾದ ಚುನಾವಣಾ ಆಯೋಗದ ಪ್ರಕಾರ ಇದುವರೆಗೆ ಎಣಿಕೆಯಾದ ಮತಗಳಲ್ಲಿ ಶೇ. 53 ರಷ್ಟನ್ನು ದಿಸ್ಸನಾಯಕೆ ಪಡೆದುಕೊಂಡಿದ್ದು, ಮುನ್ನಡೆಯಲ್ಲಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಪ್ರತಿಪಕ್ಷದ ನಾಯಕ ಸಜಿತ್ ಪ್ರೇಮದಾಸ ಶೇ. 22ರಷ್ಟು ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರೆ, ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮೂರನೇ ಸ್ಥಾನದಲ್ಲಿದ್ದಾರೆ.
ಚುನಾವಣಾ ಆಯೋಗದ ಪ್ರಕಾರ, ಅರ್ಹ 17 ಮಿಲಿಯನ್ ಜನರಲ್ಲಿ ಸುಮಾರು 75 ಪ್ರತಿಶತದಷ್ಟು ಜನರು ಶನಿವಾರ ನಡೆದ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ.
55 ವರ್ಷದ ದಿಸ್ಸನಾಯಕೆ ಅವರ ಪಕ್ಷವು ಶ್ರೀಲಂಕಾ ಸಂಸತ್‌ನಲ್ಲಿ ಮೂರು ಸ್ಥಾನಗಳನ್ನು ಹೊಂದಿದೆ. ಭ್ರಷ್ಟಾಚಾರ ವಿರೋಧಿ ಕಠಿಣ ಕ್ರಮಗಳು ಮತ್ತು ಜನಸ್ನೇಹಿ ನೀತಿಗಳನ್ನು ರೂಪಿಸುವುದಾಗಿ ದಿಸ್ಸನಾಯಕೆ ಚುನಾವಣೆ ಪ್ರಚಾರದ ವೇಳೆ ಭರವಸೆ ನೀಡಿದ್ದಾರೆ.
ದಿಸ್ಸನಾಯಕೆ ಅವರ ಪಕ್ಷ ಸರ್ಕಾರದ ಜನರ ವಿರೋಧಿ ತೆರಿಗೆ ಮತ್ತು ಆರ್ಥಿಕ ನೀತಿಗಳ ವಿರುದ್ಧ ಹೋರಾಟ ನಡೆಸಿ ಶ್ರೀಲಂಕಾ ಜನತೆಯ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ.
2022ರಲ್ಲಿ ಶ್ರೀಲಂಕಾದಲ್ಲಿ ತೀವ್ರ ಅರ್ಥಿಕ ಬಿಕ್ಕಟ್ಟು ಉಂಟಾಗಿ ಹಣದುಬ್ಬರ ಗಗನಕ್ಕೇರಿತ್ತು.
Sri Lanka Election ಜನರಿಗೆ ಅಗತ್ಯ ವಸ್ತುಗಳ ಕೊರತೆ ಉಂಟಾಗಿ ಪರದಾಡುವಂತಾಗಿತ್ತು. ಆಗ ಸರ್ಕಾರದ ವಿರುದ್ದ ಹೋರಾಟ ರೂಪಿಸಿದ್ದರ ಹಿಂದೆ ದಿಸ್ಸನಾಯಕೆ ಅವರ ಪಾತ್ರ ದೊಡ್ಡದಿತ್ತು. ಅವರು ನೇರವಾಗಿ ದಂಗೆಯೇಳದಿದ್ದರೂ, ಜನರು ಹೋರಾಟ ಕೈಗೊಂಡಿದ್ದರ ಹಿಂದೆ ಅವರ ಪ್ರೇರೇಪಣೆಯಿತ್ತು ಎಂದು ವರದಿಗಳು ಹೇಳಿವೆ.
ರಾಜಪಕ್ಸೆ ಅವರ ರಾಜೀನಾಮೆಯ ನಂತರ ಉಂಟಾದ ನಾಯಕತ್ವದ ಕೊರತೆಯು ದಿಸ್ಸನಾಯಕೆಗೆ ಮತ್ತು ಅವರ ಪಕ್ಷಕ್ಕೆ ದೊಡ್ಡ ಅವಕಾಶ ಮಾಡಿ ಕೊಟ್ಟಿತು. ಭ್ರಮನಿರಸನಗೊಂಡ ನಾಗರಿಕರ ಜೊತೆ ನಿಂತ ದಿಸ್ಸನಾಯಕೆ, ಸಾಮಾಜಿಕ ನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ಕೈಗೊಂಡಿದ್ದರು. ಅವೆಲ್ಲವೂ, ಈ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಗೊಂಡಿರುವ ಲಕ್ಷಣ ಕಾಣುತ್ತಿದೆ.
Supreme Court ಕೇಂದ್ರದಿಂದ 8 ಹೊಸ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇಮಕ
Supreme Court ಸುಪ್ರಿಂಕೋರ್ಟ್ ತರಾಟೆಗೆ ತೆಗೆದುಕೊಂಡ ನಂತರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮದ್ರಾಸ್ ಹೈಕೋರ್ಟ್ ಸೇರಿದಂತೆ ವಿವಿಧ ಹೈಕೋರ್ಟ್‌ಗಳಿಗೆ ಎಂಟು ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕೆ ಶನಿವಾರ ಅಧಿಸೂಚನೆ ಹೊರಡಿಸಿದೆ. ಕೊಲಿಜಿಯಂ ತನ್ನ ಜುಲೈ 11 ರ ಶಿಫಾರಸುಗಳಲ್ಲಿ ಕೆಲವು ತಿದ್ದುಪಡಿ ಮಾಡಿದ ನಂತರ ನೇಮಕಾತಿಗಳು ನಡೆದಿವೆ.
ತನ್ನ ಕೊಲಿಜಿಯಂ ವ್ಯವಸ್ಥೆಯು “ಶೋಧನಾ ಸಮಿತಿ” ಅಲ್ಲ ಎಂದು ಸುಪ್ರಿಂಕೋರ್ಟ್ ಪೀಠವು ಹೇಳಿದ ಒಂದು ದಿನದ ನಂತರ ಈ ನೇಮಕಾತಿಗಳು ನಡೆದಿವೆ. ನ್ಯಾಯಮೂರ್ತಿಗಳ ನೇಮಕಾತಿಗಾಗಿ ಪುನ: ಶಿಪಾರಸು ಮಾಡಲಾದ, ಆದರೆ ಇನ್ನೂ ಕೇಂದ್ರವು ಅದಕ್ಕೆ ಅನುಮತಿ ನೀಡದ ಹೆಸರುಗಳ ಸ್ಥಿತಿಯ ಕುರಿತು ವರದಿಯನ್ನು ಸಲ್ಲಿಸುವಂತೆ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರನ್ನು ಕೇಳಿತ್ತು.
ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಅರ್ಜುನ್ ರಾಮ್ ಮೇಘವಾಲ್ ಅವರು ‘ಎಕ್ಸ್’ ಮೂಲಕ ಹೊಸ ನೇಮಕಾತಿಗಳನ್ನು ಪ್ರಕಟಿಸಿದ್ದಾರೆ. “ಭಾರತದ ಸಂವಿಧಾನವು ನೀಡಿರುವ ಅಧಿಕಾರಗಳ ಅನುಷ್ಠಾನದಲ್ಲಿ, ರಾಷ್ಟ್ರಪತಿಗಳು 8 ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಿಸಲು ಹಾಗೂ ವರ್ಗಾವಣೆ ಮಾಡಿದ್ದಾರೆ” ಎಂದು ಅವರು ಬರೆದಿದ್ದಾರೆ.
Supreme Court ವಿವಿಧ ರಾಜ್ಯ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ನ್ಯಾಯಾಧೀಶರು ಈ ಕೆಳಗಿನಂತಿದ್ದಾರೆ:
ನ್ಯಾಯಮೂರ್ತಿ ಮನಮೋಹನ್ (ಪ್ರಸ್ತುತ ದೆಹಲಿ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ) – ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ.
ನ್ಯಾಯಮೂರ್ತಿ ರಾಜೀವ್ ಶಕ್ಧರ್ (ಪ್ರಸ್ತುತ ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರು) – ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ.
ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ (ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರು) – ಮಧ್ಯಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ.
ನ್ಯಾಯಮೂರ್ತಿ ಇಂದ್ರ ಪ್ರಸನ್ನ ಮುಖರ್ಜಿ (ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಾಧೀಶರು) – ಮೇಘಾಲಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ.
ನ್ಯಾಯಮೂರ್ತಿ ನಿತಿನ್ ಮಧುಕರ್ ಜಮ್ದಾರ್ (ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರು) – ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ.
ನ್ಯಾಯಮೂರ್ತಿ ತಾಶಿ ರಬ್ಸ್ತಾನ್ (ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್‌ನ ನ್ಯಾಯಾಧೀಶರು) – ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ.
ನ್ಯಾಯಮೂರ್ತಿ ಕೆ.ಆರ್. ಶ್ರೀರಾಮ್ (ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರು) – ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ.
ನ್ಯಾಯಮೂರ್ತಿ ಎಂ.ಎಸ್. ರಾಮಚಂದ್ರ ರಾವ್ (ಪ್ರಸ್ತುತ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ) – ಜಾರ್ಖಂಡ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ
ಹೆಚ್ಚುವರಿಯಾಗಿ, ಮೂರು ನ್ಯಾಯಾಂಗ ಅಧಿಕಾರಿಗಳನ್ನು ಮದ್ರಾಸ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ. ಆರ್.ಪೂರ್ಣಿಮಾ, ಎಂ.ಜೋತಿರಾಮನ್ ಮತ್ತು ಡಾ.ಅಗಸ್ಟಿನ್ ದೇವದಾಸ್ ಮರಿಯಾ ಕ್ಲೀಟ್ ಅವರು ಈ ಪಟ್ಟಿಯಲ್ಲಿ ಇದ್ದಾರೆ.
