Saturday, March 28, 2026
Saturday, March 28, 2026
Home Blog Page 544

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

0

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ ಜಮೀನಿಗೆ ಪರಿಹಾರ ರೂಪದಲ್ಲಿ ನೀಡಿದ್ದ ನಿವೇಶನಗಳನ್ನು ನನ್ನ ಪತ್ನಿ ಪಾರ್ವತಿ ಹಿಂದಿರುಗಿಸಿದ್ದಾರೆ.

ನನ್ನ ವಿರುದ್ದ ರಾಜಕೀಯ ದ್ವೇಷ ಸಾಧನೆಗಾಗಿ ವಿರೋಧ ಪಕ್ಷಗಳು ಸುಳ್ಳು ದೂರನ್ನು ಸೃಷ್ಟಿಸಿ ನನ್ನ ಕುಟುಂಬವನ್ನು ವಿವಾದಕ್ಕೆ ಎಳೆದು ತಂದಿರುವುದು ರಾಜ್ಯದ ಜನತೆಗೂ ತಿಳಿದಿದೆ.

ಈ ಅನ್ಯಾಯಕ್ಕೆ ತಲೆಬಾಗದೆ ಹೋರಾಟ ಮಾಡಬೇಕೆಂಬುದು ನನ್ನ ನಿಲುವಾಗಿತ್ತು.

ಆದರೆ ನನ್ನ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರದಿಂದ ನೊಂದಿರುವ ನನ್ನ ಪತ್ನಿ ಈ ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರ ಕೈಗೊಂಡು, ನನಗೂ ಆಶ್ಚರ್ಯ ಉಂಟು ಮಾಡಿದ್ದಾರೆ.

CM Siddharamaih ನನ್ನ ನಾಲ್ಕು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಎಂದೂ ಕೂಡಾ ಮಧ್ಯೆಪ್ರವೇಶಿಸದೆ ಕುಟುಂಬಕ್ಕಷ್ಟೆ ಸೀಮಿತವಾಗಿದ್ದ ನನ್ನ ಪತ್ನಿ ನನ್ನ ವಿರುದ್ಧದ ದ್ವೇಷದ ರಾಜಕಾರಣಕ್ಕೆ ಬಲಿಯಾಗಿ ಮಾನಸಿಕವಾಗಿ ಹಿಂಸೆ ಅನುಭವಿಸುವಂತಾಗಿರುವುದಕ್ಕೆ
ನನಗೆ ವಿಷಾದ ಇದೆ.

ಹೀಗಿದ್ದರೂ ನಿವೇಶನಗಳನ್ನು ಹಿಂದಿರುಗಿಸಿದ ನನ್ನ ಪತ್ನಿಯ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದಾರೆ.

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

0

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ ಅವರು ತಮ್ಮ ಪತ್ನಿ ಹೆಸರಿನಲ್ಲಿ ಪಡೆದಿದ್ದ 14 ಸೈಟುಗಳನ್ನ ಹಿಂತಿರುಗಿಸುವ ನಿರ್ಧಾರ ಮಾಡಿದ್ದು, ನಾನು ತಪ್ಪೇ ಮಾಡಿಲ್ಲ ಎನ್ನುತ್ತಿದ್ದವರು ಈಗ ತಮ್ಮ ತಪ್ಪನ್ನ ಒಪ್ಪಿಕೊಂಡು ಸತ್ಯಕ್ಕೆ ಶರಣಾಗಿರುವುದು ನಮ್ಮ ಹೋರಾಟದ ಹಾದಿಯಲ್ಲಿ ಸಿಕ್ಕಿರುವ ಮತ್ತೊಂದು ಜಯ.

ಆದರೆ ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ ನಿರಪರಾಧಿ ಆಗಿಬಿಡುತ್ತಾನೆಯೇ? ಕದ್ದ ಮಾಲನ್ನು ವಾಪಸ್ಸು ಕೊಟ್ಟ ತಕ್ಷಣ ಕಳ್ಳತನ ಮಾಫಿ ಆಗಿಬಿಡುತ್ತದೆಯೇ?

‘ಕೆಟ್ಟ ಮೇಲೆ ಬುದ್ಧಿ ಬಂತು’ ಎಂಬಂತೆ ಈಗಲಾದರೂ ಸಿದ್ದರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ ಎನ್ನುವುದು ಸಮಾಧಾನಕರ ವಿಷಯ.

R. Ashok ಆದರೆ ‘ಅಡಿಕೆಗೆ ಹೋದ ಮಾನ, ಆನೆ ಕೊಟ್ಟರೂ ಬರುವುದಿಲ್ಲ’ ಸಿಎಂ ಸಿದ್ದರಾಮಯ್ಯನವರೇ. ತಾವು ತನಿಖೆ ಎದುರಿಸಲೇ ಬೇಕು. ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲೇ ಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಸಿದ್ಧರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

Actor Mithun Chakraborty ಪದ್ಮಭೂಷಣ ಪುರಸ್ಕೃತ ನಟ ಮಿಥುನ್ ಚಕ್ರವರ್ತಿಗೆ ದಾದಾ ಫಾಲ್ಕೆ ಪ್ರಶಸ್ತಿ ಘೋಷಣೆ

0

Actor Mithun Chakraborty ಹಿಂದಿ ಸಿನಿಮಾ ರಂಗದ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ, ದೇಶದ ಸಿನಿಮಾ ರಂಗದಲ್ಲಿ ನೀಡಲಾಗುವ ಅತ್ಯುನ್ನತ ಗೌರವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಕಳೆದ ಕೆಲ ತಿಂಗಳುಗಳ ಹಿಂದಷ್ಟೆ ಮಿಥುನ್ ಚಕ್ರವರ್ತಿ ಅವರು ಪ್ರತಿಷ್ಠಿತ ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದರು. ಇದರ ಬೆನ್ನಲ್ಲೆ ಅವರು, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವಕ್ಕೂ ಪಾತ್ರರಾಗಿದ್ದಾರೆ.
ಮಿಥುನ್ ಚಕ್ರವರ್ತಿ ಅವರು ಸಿನಿಮಾ ಮಾತ್ರವಲ್ಲದೆ ರಾಜಕಾರಣಿಯಾಗಿ, ಟಿವಿ ನಿರೂಪಕರಾಗಿಯೂ ಹೆಸರು ಸಂಪಾದಿಸಿದ್ದಾರೆ. ಸಿನಿಮಾಗಳ ನಿರ್ಮಾಪಕರಾಗಿದ್ದಾರೆ. ಕಳೆದ ಹಲವು ದಶಕಗಳಿಂದ ಅವರು ಸಿನಿ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ.

1950 ರಲ್ಲಿ ಜನಿಸಿದ್ದ ಮಿಥುನ್ ಚಕ್ರವರ್ತಿ ಅವರು,1976 ರಲ್ಲಿ ‘ಮೃಗಯಾ ಸಿನಿಮಾದಲ್ಲಿ ನಟಿಸುವ ಮೂಲಕ, ಚಿತ್ರರಂಗಕ್ಕೆ ಕಾಲಿರಿಸಿದ್ದರು. ಆಗ ಅವರಿಗೆ 26 ವರ್ಷವಾಗಿತ್ತು. ಮೊದಲ ಸಿನಿಮಾದಲ್ಲಿನ ಅಭಿನಯಕ್ಕೆ ಅವರಿಗೆ ರಾಷ್ಟ್ರ ಪ್ರಶಸ್ತಿ ಗೌರವಕ್ಕೆ ಪಾತರಾಗಿದ್ದರು.

Actor Mithun Chakraborty ಅಕ್ಟೋಬರ್ 08 ರಂದು ನಡೆಯುವ ನ್ಯಾಷನಲ್ ಫಿಲಂ ಅವಾರ್ಡ್ ಸಮಾರಂಭದಲ್ಲಿ ಮಿಥುನ್ ಚಕ್ರವರ್ತಿ ಅವರಿಗೆ ಪ್ರದಾನ ಮಾಡಲಾಗುತ್ತಿದೆ.

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

0

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ ಊರಗಡೂರು ವಸತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆಯ ಅರ್ಜಿಗಳನ್ನು ಹಂಚಲು ಕೊನೆಯ ದಿನಾಂಕವನ್ನು ಅ.05 ರವರೆಗೆ ವಿಸ್ತರಿಸಲಾಗಿದ್ದು, ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅ.30ರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಶಿ-ಭ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ.

Gandhi Jayanti ಸಾಗರ ತಾಲ್ಲೂಕಿನಲ್ಲಿ ಯಶಸ್ವಿಯಾಗಿ ನಡೆದ ಸ್ವಚ್ಛತಾ ಹಿ ಸೇವಾ ಚಟುವಟಿಕೆ

0

Gandhi Jayanti ಭಾರತ ಸರ್ಕಾರದ, ಯುವ ವ್ಯವಹಾರ ಮತ್ತು ಕ್ರೀಡಾ ಇಲಾಖೆಯು ರಾಷ್ಟ್ರದಾದ್ಯಂತ ಮೈ ಭಾರತ್ ನ ಸ್ವಚ್ಛ ಭಾರತ್ ಮಿಷನ್-‌ ನಯಾ ಸಂಕಲ್ಪದ ಯೋಜನೆಯಲ್ಲಿ ಸ್ವಭಾವ್‌ ಸ್ವಚ್ಛತಾ, ಸಂಸ್ಕಾರ್‌ ಸ್ವಚ್ಛತೆ ಎಂಬ ಶೀರ್ಷಿಕೆಯಡಿಯಲ್ಲಿ ಅಕ್ಟೊಬರ್ 2 ರಂದು ಗಾಂಧಿ ಜಯಂತಿಯ ಪ್ರಯುಕ್ತ ಸೆಪ್ಟೆಂಬರ್‌ 17 ರಿಂದ 2ನೇ ಅಕ್ಟೋಬರ್‌ 2024 ವರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರ ಶಿವಮೊಗ್ಗ ಮತ್ತು ನಗರ ಸಭೆ, ಸಾಗರ ,ಎನ್.ಸಿ.ಸಿ, ಎಲ್. ಬಿ ಅಂಡ್ ಎಸ್. ಬಿ ಕಾಲೇಜ್. ಎನ್.ಎಸ್.ಎಸ್‌, ಶ್ರೀಮತಿ. ಇಂದಿರಾಗಾಂಧಿ ಪ್ರಥಮ ದರ್ಜೆ ಮಹಿಳಾ ಕಾಲೇಜು,. ಸರಕಾರಿ ಪ್ರಥಮ ದರ್ಜೆ ಕಾಲೇಜು, ಸಾಗರ ಸ್ವತಂತ್ರ ಪದವಿ ಪೂರ್ವ ಕಾಲೇಜು,ಹ್ಯುಮಾನಿಟಿ ಯೂತ್ ಕ್ಲಬ್ ಇವರ ಸಹಯೋಗದೊಂದಿಗೆ ದಿನಾಂಕ 30.09.2024 ರಂದು” ಸ್ವಚ್ಛತ ಹೀ ಸೇವಾ ” ಕಾರ್ಯಕ್ರಮವನ್ನು ಸಾಗರ ತಾಲ್ಲೂಕಿನಲ್ಲಿ ಹಮ್ಮಿಕೊಂಡಿದ್ದು, ಸ್ವಚ್ಛತಾ ಅಭಿಯಾನದ ಮೂಲಕ ಯಶಸ್ವಿಗೊಳಿಸಲಾಯಿತು.

ಈ ಕಾರ್ಯಕ್ರಮವನ್ನು ಸಾಗರ ನಗರಸಭೆಯ ಪೌರಯುಕ್ತರಾದ ಶ್ರೀ ನಾಗಪ್ಪ ಸರ್ ಅವರು ಉದ್ಘಾಟಿಸಿ ಗಾಂಧೀಜಿ ಕಂಡ ಸ್ವಚ್ಚ ಭಾರತದ ಕನಸನ್ನು ನಾವೆಲ್ಲರೂ ಸೇರಿ ಸಂಪೂರ್ಣಗೊಳಿಸಲು ಇನ್ನಷ್ಟು ಪ್ರಯತ್ನ ಪಡೋಣ, ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಎಂದು ತಿಳಿಸಿದರು.

ಶ್ರೀ. ಉಲ್ಲಾಸ್‌ ಕೆ.ಟಿ.ಕೆ ಯುವ ಸಮನ್ವಯಅಧಿಕಾರಿಗಳು, ನೆಹರು ಯುವ ಕೇಂದ್ರ ಶಿವಮೊಗ್ಗ ಸ್ವಚ್ಛತಾ ಸಂಕಲ್ಪದ ಬಗ್ಗೆ ಸ್ವಚ್ಛತಾ ಅಭಿಯಾನದ ಕುರಿತು ಮಾಹಿತಿಯನ್ನು ನೀಡಿ, ಮುಂದಿನ ದಿನಗಳಲ್ಲಿ ನಮ್ಮ ಸುತ್ತಮುತ್ತ ಇರುವ ಜಾಗವನ್ನು ಸ್ವಚ್ಛವಾಗಿಡಲು ನಾವುಗಳೆ ಮೊದಲಿಗರಾಗಬೇಕು.ಮತ್ತು ಬೇರೆಯವರ ಜೊತೆ ಕೈಜೋಡಿಸಿ ಪರಿಸರವನ್ನು ಸ್ವಚ್ಛವಾಗಿರಿಸಬೇಕು , ಎಂಬ ಮಾಹಿತಿಯನ್ನು ನೀಡಿದರು.

Gandhi Jayanti ಈ ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ಅಭಿಯಂತರರಾದ ಶ್ರೀ ಶೈಲೇಶ್ ರವರು ಮತ್ತು ನೂತನ್ ಎನ್ ಸಿ, ಸಿ. ಗಿರೀಶ್ ಶೆಟ್, ಹರೀಶ್, ಗಣೇಶ್, ಆಟೋ ಲೆಫ್ಟಿನೆಂಟ್ ದೀಪ ಎಲ್ಲಾ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ಸಮಯದಲ್ಲಿ ಸಾಗರ ತಾಲ್ಲೂಕಿನ ಬಸ್ಟ್ಯಾಂಡ್‌, ಕೋರ್ಟ್‌ ಸರ್ಕಲ್‌, ನಗರಸಭೆ ಆವರಣವನ್ನು ಸ್ವಚ್ಛಗೊಳಿಸಲಾಯಿತು.ಹಾಗೂ ನಮ್ಮ ದೇಶ ಸ್ವಚ್ಛ ದೇಶ ಎಂಬ ಘೋಷವಾಕ್ಯವನ್ನು ಹೇಳಿದರು.

Karnataka State Farmers Association ಆನೆದಾಳಿಗೆ ಮೃತಪಟ್ಟ ಪುರದಾಳ್ ನಿವಾಸಿಗೆ ₹25 ಲಕ್ಷ ಪರಿಹಾರ ನೀಡಲು ಆಗ್ರಹ

0

Karnataka State Farmers Association ಶಿವಮೊಗ್ಗ ನಗರದ ಅಂಚಿನಲ್ಲಿರುವ ಪುರದಾಳ್ ಆಲದೇವರ ಹೊಸೂರು ಗ್ರಾಮದಲ್ಲಿ ರೈತ ಹನುಮಂತಪ್ಪ ದಾಸಣ್ಣನವರು ಜಮೀನಿನಲ್ಲಿ ಕೆಲಸ ಮಾಡುವಾಗ ಆನೆ ದಾಳಿ ಮಾಡಿ ಕೊಂದು ಹಾಕಿದ್ದು ಇವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಡಬೇಕು. ಪುರದಾಳ್, ಬೇಳೂರು ಹಾಗೂ ತಮ್ಮಡಿಹಳ್ಳಿ, ಸುತ್ತಮುತ್ತ ಗ್ರಾಮಗಳಲ್ಲಿ ಆನೆಗಳಲ್ಲಿ ಗುಂಪಾಗಿ ಬಂದು ಬೆಳೆನಾಶ ಮಾಡಿರುವುದಕ್ಕೆ ಪರಿಹಾರ ಕೊಡುವುದು. ಆನೆಗಳನ್ನು ಗ್ರಾಮಗಳಿಗೆ, ರೈತನ ಹೊಲಗಳಿಗೆ ಬರದಂತೆ ತಡೆಯಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಪುರದಾಳು ಗ್ರಾಮದ ಹನುಮಂತಪ್ಪ ದಾಸಣ್ಣನವರು ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಆನೆ ಆತನ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಅರಣ್ಯ ಇಲಾಖೆಯವರು ಈತನ ಕುಟುಂಬಕ್ಕೆ ಸರ್ಕಾರ ನಿಗಧಿ ಮಾಡಿರುವಂತೆ 25 ಲಕ್ಷ ರೂ. ಪರಿಹಾರವನ್ನು ತಕ್ಷಣ ಕೊಡಬೇಕು. ಗುಂಪಾಗಿ ರೈತನ ಜಮೀನಿನ ಮೇಲೆ ದಾಳಿ ಮಾಡುತ್ತಿದ್ದು, ರೈತನು ಬೆಳೆದ ಬೆಳೆಗಳು ಮೆಕ್ಕಜೋಳ, ಬಾಳೆ, ಅಡಿಕೆ ನಾಶ ಪಡಿಸಿ ರೈತನಿಗೆ ಅಪಾರ ನಷ್ಟ ಉಂಟು ಮಾಡುತ್ತಿವೆ ಎಂದರು.

Karnataka State Farmers Association ಕೆಲವು ಗ್ರಾಮಗಳಿಗೆ ನುಗ್ಗಿದ ಉದಾಹರಣೆಗಳು ಸಹ ಇವೆ. ಈ ’ರೀತಿಯಾಗಿ ಪದೇ ಪದೇ ದಾಳಿ ಮಾಡುತ್ತಿರುವುದರಿಂದ ರೈತರು ಜೀವನ ಮರಣದ ಭಯದಿಂದ ಆತಂಕದಿಂದ ಬದುಕುತ್ತಿದ್ದಾರೆ. ಆದ್ದರಿಂದ ತಕ್ಷಣ ಇವರಿಗೆ ರಕ್ಷಣೆ ಒದಗಿಸುವುದರ ಜೊತೆಗೆ ಸೂಕ್ತ ಬೆಳೆ ನಷ್ಟ ಪರಿಹಾರವನ್ನು ಕೊಡಬೇಕು ಮತ್ತು ಜಮೀನಿಗೆ ಗ್ರಾಮದೊಳಗೆ ಆನೆಗಳು ಬಾರದ ಹಾಗೆ ತಡೆಯಬೇಕು. ತತಕ್ಷಣದಿಂದ ಇವುಗಳನ್ನು ಕಾಡಿ ಕಳುಹಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯಾದ್ಯಂತ ಕಾಡು ಪ್ರಾಣಿಗಳೂ ಮತ್ತು ಮಾನವನ ಮಧ್ಯೆ ಇತ್ತಿಚಿನ ದಿನಗಳಲ್ಲಿ ಸಂಘರ್ಷ ನಡೆಯುತ್ತಲೇ ಇದೆ. ಬಗ್ಗೆ ರೈತ ಸಂಘ ಸರ್ಕಾರದ ಜೊತೆ ಮಾತುಕತೆ ನಡೆಸಿ, ಒತ್ತಾಯ ಮಾಡಲಾಗಿದೆ.

Shivamogga Karnataka Sanga ಕರ್ನಾಟಕ ಸಂಘದ ನಿರ್ಗಮಿತ ಅಧ್ಯಕ್ಷ ಸುಂದರ್ ರಾಜ್ ಅವರಿಂದ ಮಾಧ್ಯಮಗಳಿಗೆ ಧನ್ಯವಾದ ಅರ್ಪಣೆ

0

Shivamogga Karnataka Sanga ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲದಿಂದ ನಾನು ಯಶಸ್ವಿಯಾಗಿ ಮೂರು ವರ್ಷಗಳ ಕಾಲ ಕರ್ನಾಟಕ ಸಂಘದ ಅಧ್ಯಕ್ಷನಾಗಿ ಕೆಲಸ ನಿರ್ವಹಿಸುಬಂತಾಯಿತು. ಅದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ ಎಂದು ಶಿವಮೊಗ್ಗ ಕರ್ನಾಟಕ ಸಂಘದ ನಿರ್ಗಮಿತ ಅಧ್ಯಕ್ಷರಾದ ಎಂ.ಎನ್. ಸುಂದರರಾಜ್ ಅವರು ತಿಳಿಸಿದ್ದಾರೆ. ಮೂರು ವರ್ಷಗಳಲ್ಲಿ ನಡೆದ ಕಾರ್ಯಗಳ ಸಂಕ್ಷಿಪ್ತ ವರದಿ ಇಲ್ಲಿದೆ.

  1. ೩೬ ಸಾಹಿತಿಗಳಿಗೆ ಪುಸ್ತಕ ಬಹುಮಾನ
  2. ರಾಜ್ಯೋತ್ಸವ ಪ್ರಶಸ್ತಿ ಸೇರಿ ಮೂರು ರಾಜ್ಯಮಟ್ಟದ ಪ್ರಶಸ್ತಿ
  3. ೧೯ ಸಿಸಿ ಕ್ಯಾಮರಾಗಳ ಅಳವಡಿಕೆ
  4. ೨೩ ತಿಂಗಳ ಅತಿಥಿ ಕಾರ್ಯಕ್ರಮ
  5. ಮೂರು ಚಿತ್ರಕಲಾ ಪ್ರದರ್ಶನ
  6. ವೇದಿಕೆಯ ಎರಡೂ ಬದಿ ತೈಲ ವರ್ಣ ಚಿತ್ರ
  7. ಇಡೀ ಕಟ್ಟಡದ ಬಣ್ಣ ಲೇಪನ
  8. ಕರ್ನಾಟಕ ಸಂಘದ ಹೆಸರಿನ ವಿದ್ಯುತ್ ಫಲಕ ಅಳವಡಿಕೆ
  9. ಆಕಾಶವಾಣಿಯ ಕನ್ನಡ ಕಜ್ಜಾಯ ಕಾರ್ಯಕ್ರಮದಲ್ಲಿ ಸಂಘದ ಕುರಿತು ವಿಶೇಷ ಕಾರ್ಯಕ್ರಮ
  10. ದೂರದರ್ಶನ ಚಂದನದಲ್ಲಿ ಸಂದರ್ಶನ ಪ್ರಸಾರ
  11. ೩೫ ರಾಜ್ಯಮಟ್ಟದ ಸಾಹಿತಿಗಳು ಮತ್ತು ಕಲಾವಿದರನ್ನು ಆಹ್ವಾನಿಸಲಾಗಿದೆ
  12. ೫ ಸಂಗೀತ ಕಾರ್ಯಕ್ರಮ
  13. ಎರಡು ನಾಟಕ ಪ್ರದರ್ಶನ
  14. ಹತ್ತು ಸಂಘ ಸಂಸ್ಥೆಗಳ ಸಹಯೋಗ
  15. ಮೂರು ವಿಚಾರ ಸಂಕಿರಣ ಗಳು
  16. ‌ಕಾವ್ಯ- ಕಥನ ಗೋಷ್ಠಿ
  17. ಐದು ಹಿರಿಯ ಸಾಹಿತಿಗಳಿಗೆ ಜೀವಮಾನ ಸಾಧನೆ ಪ್ರಶಸ್ತಿ
  18. ರಾಜ್ಯೋತ್ಸವದ ಸಮಯದಲ್ಲಿ ನೀಡಿದ ಐದು ಲಕ್ಷ ರೂ.ನ್ನು ಇಡುಗಂಟಾಗಿ ಇಟ್ಟು ಅದರಲ್ಲಿ ಬರುವ ಬಡ್ಡಿಯಿಂದ ಪ್ರತಿವರ್ಷ ಇಬ್ಬರು ವ್ಯಕ್ತಿ ಅಥವಾ ಸಂಸ್ಥೆ ಗೆ ನಗದು ಪುರಸ್ಕಾರ ಮತ್ತು ಸನ್ಮಾನ.
  19. ಸಿಬ್ಬಂದಿಗೆ ಸೇವಾ ಭದ್ರತೆ
  20. ಇಷ್ಟೆಲ್ಲ ಕಾರ್ಯಕ್ರಮ ಮಾಡಲು ನೆರವಾದ ತಮಗೆ ಹೃತ್ಪೂರ್ವಕ ವಂದನೆಗಳು.

Shakahari Film ಶಾಖಾಹಾರಿ ಚಿತ್ರಕ್ಕೆ ಕಾನೂನು ಜಯ

0

Shakahari Film ಶಿವಮೊಗ್ಗದ ಕೀಳಂಬಿ ಮೀಡಿಯಾ ಲ್ಯಾಬ್ ನಿರ್ಮಿಸಿದ್ದ ಶಾಖಾಹಾರಿ ಸಿನಿಮಾದಲ್ಲಿ ರಸಿಕ ರಸಿಕಾ ಹಾಡನ್ನು ಬಳಸಿ ಕಾಪಿರೈಟ್ ಉಲ್ಲಂಘಿಸಲಾಗಿದೆ ಎಂದು ಸಾರೆಗಾಮ ಇಂಡಿಯಾ ಲಿಮಿಟೆಡ್ ಸಂಸ್ಥೆ ಆರೋಪಿಸಿ ಅಮೆಜಾನ್ ಪ್ರೈಮ್ ಗೆ ದೂರು ನೀಡಿತ್ತು ಹಾಗೂ ಕೀಳಂಬಿ ಮೀಡಿಯಾ ಲ್ಯಾಬ್ ಗೆ ಹಣದ ಬೇಡಿಕೆ ಇಟ್ಟಿತ್ತು.

ಇದನ್ನು ಪ್ರಶ್ನಿಸಿ ಕೀಳಂಬಿ ಮೀಡಿಯಾ ಲ್ಯಾಬ್ ಶಿವಮೊಗ್ಗ ಕಮರ್ಷಿಯಲ್ ಕೋರ್ಟ್ ನಲ್ಲಿ ಪ್ರಕರಣವನ್ನು ದಾಖಲಿಸಿತ್ತು. ಇಂದು ಘನ ನ್ಯಾಯಾಲಯವು ಕೀಳಂಬಿ ಮೀಡಿಯಾ ಲ್ಯಾಬ್ ಪರ ವಕೀಲರ ವಾದವನ್ನು ಆಲಿಸಿ, ಸಾರೆಗಾಮ ಇಂಡಿಯಾ ಸಂಸ್ಥೆ ಶಾಖಾಹಾರಿ ಸಿನೆಮಾದಲ್ಲಿ ಯಾವುದೇ ಕಾಪಿರೈಟ್ ಉಲ್ಲಂಘನೆ ಆಗಿದೆ ಎಂದು ಯಾವುದೇ ಹೇಳಿಕೆ ನೀಡಬಾರದು ಎಂದು ಹಾಗೂ ಅಮೆಜಾನ್ ಪ್ರೈಮ್ ರವರು ತಮ್ಮ ಒಟಿಟಿ ಪ್ಲಾಟ್ ಫಾರಂ ನಿಂದ ಶಾಖಾಹಾರಿ ಸಿನೆಮಾವನ್ನು ತೆಗೆಯಬಾರದೆಂದು ಮಧ್ಯಂತರ ಆದೇಶ ನೀಡಿದೆ.

ಕೀಳಂಬಿ ಮೀಡಿಯಾ ಲ್ಯಾಬ್ ಪರ ವಕೀಲರಾದ ಬೆಂಗಳೂರಿನ ರವಿಶಂಕರ್ ಭಟ್ ವಾದಿಸಿದ್ದರು.


Shakahari Film ಶಾಖಾಹಾರಿ ಸಿನಿಮಾ ಈ ವರ್ಷ ಚಿತ್ರಮಂದಿರಗಳಲ್ಲಿ ಮತ್ತು ಓಟಿಟಿಯಲ್ಲಿ ಕೆಲವೇ ಕೆಲವು ಹೆಸರು ಮಾಡಿರುವ ಕನ್ನಡ ಸಿನಿಮಾಗಳಲ್ಲಿ ಒಂದಾಗಿದೆ. ದುರದೃಷ್ಟವಶಾತ್ ಸಾರೆಗಾಮ ಇಂಡಿಯಾ ಸಂಸ್ಥೆ ಸುಳ್ಳು ಆರೋಪ ಮಾಡಿದ್ದು ಬೇಸರವಾಗಿತ್ತು. ಆದರೆ ಕೋರ್ಟ್ ಸಿನಿಮಾದಲ್ಲಿ ಯಾವುದೇ ಕಾಫಿ ರೈಟ್ ಉಲ್ಲಂಘನೆಯಾಗಿಲ್ಲ, ಕಾನೂನಾತ್ಮಕ ವಾಗಿ ಎಲ್ಲವೂ ಸರಿಯಾಗಿದೆ ಎಂದು ಮಧ್ಯಂತರ ತೀರ್ಪು ನೀಡಿದೆ ಎಂದು ಶಾಖಾಹಾರಿ ಸಿನಿಮಾ ನಿರ್ಮಾಪಕರಾದ ರಾಜೇಶ್ ಕೀಳಂಬಿಯವರು ತಿಳಿಸಿದ್ದಾರೆ.


Mahatma Gandhi ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ, ಫಲಿತಾಂಶ ಪ್ರಕಟ

0

Mahatma Gandhi ರಾಷ್ಟ್ರಪಿತ ,ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ/ಸ್ನಾತಕೋತ್ತರ ಪದವಿ ವಿಭಾಗಗಳಿಗೆ ಪ್ರತ್ಯೇಕವಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.

ಪ್ರೌಢಶಾಲೆ ವಿಭಾಗ ಫಲಿತಾಂಶ
ದಿವ್ಯಾ ಶ್ರೀಶೈಲ ಗಾಣಿಗೇರ,ಸರ್ಕಾರಿ ಪ್ರೌಢಶಾಲೆ, ಕೆಎಸ್‌ಆರ್‌ಪಿ,ಮಚ್ಚೆ,ಬೆಳಗಾವಿ(ಪ್ರಥಮ),ಸಮರ್ಥ ನಾಗರಾಜ ಅರ್ಕಸಾಲಿ ,ಸರ್ಕಾರಿ ಪ್ರೌಢಶಾಲೆ,ಹುನಗುಂದ,ತಾ.ಮುಂಡಗೋಡ,ಉತ್ತರ ಕನ್ನಡ ಜಿಲ್ಲೆ(ದ್ವಿತೀಯ), ಚೈತನ್ಯ ಕೆ.ಎಂ.ಸಂತ ಅನ್ನಮ್ಮ ಪ್ರೌಢಶಾಲೆ, ವಿರಾಜಪೇಟೆ, ಕೊಡಗು ಜಿಲ್ಲೆ(ತೃತೀಯ)

ಪದವಿಪೂರ್ವ ಕಾಲೇಜು ವಿಭಾಗ ಫಲಿತಾಂಶ
ವಿಜಯಕುಮಾರ್ ಬ.ದೊಡ್ಡಮನಿ,ಸರ್ಕಾರಿ ಪ.ಪೂ.ಕಾಲೇಜು, ಮುಳಗುಂದ,ಗದಗ ಜಿಲ್ಲೆ (ಪ್ರಥಮ), ಪರೀಕ್ಷಾನಂದ್, ಮರಿಮಲ್ಲಪ್ಪ ಪ.ಪೂ.ಕಾಲೇಜು,ಮೈಸೂರು (ದ್ವಿತೀಯ),ಗೋರಮ್ಮ,ಬಾಲಕಿಯರ ಸರ್ಕಾರಿ ಪ.ಪೂ.ಕಾಲೇಜು,ಕೋಲಾರ(ತೃತೀಯ)

ಪದವಿ/ಸ್ನಾತಕೋತ್ತರ ವಿಭಾಗ ಫಲಿತಾಂಶ
ಪ್ರವೀಣ್ ನಿಂಗಪ್ಪ ಕಿತ್ನೂರ,ಕನ್ನಡ ವಿ.ವಿ.ಹಂಪಿ,ವಿಜಯನಗರ ಜಿಲ್ಲೆ (ಪ್ರಥಮ),
ಶರಣಪ್ಪ,ತುಮಕೂರು ವಿ.ವಿ.ತುಮಕೂರು(ದ್ವಿತೀಯ), ನಸೀಮಾ ಇ.ಚಪ್ಪರಬಂದ್,ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯಪುರ (ತೃತೀಯ)

Mahatma Gandhi ಗಾಂಧೀಜಿಯವರ ತತ್ವಗಳಿಂದ ದೇಶ ಕಟ್ಟುವ ಬಗೆ,ಗಾಂಧೀಜಿ ವಿಚಾರದಲ್ಲಿ ಸತ್ಯಾಗ್ರಹ,ಅಸ್ಪೃಶ್ಯತೆ ನಿವಾರಣೆಗೆ ಗಾಂಧೀಜಿಯವರ ಪ್ರಯೋಗಗಳು,ಗಾಂಧೀಜಿ ಹಾಗೂ ಪ್ರಜಾಪ್ರಭುತ್ವ, ಸ್ವರಾಜ್, ಆರ್ಥಿಕ ಚಿಂತನೆಗಳು,ಸತ್ಯದ ಪರಿಕಲ್ಪನೆ ಮತ್ತಿತರ ವಿಷಯಗಳ ಕುರಿತು ಪ್ರಬಂಧ ಸ್ಪರ್ಧೆ ನಡೆದಿತ್ತು.ರಾಜ್ಯದಾದ್ಯಂತ ಪ್ರೌಢಶಾಲೆ ವಿಭಾಗದಲ್ಲಿ 1,24,392 ವಿದ್ಯಾರ್ಥಿಗಳು,ಪಿಯುಸಿ ವಿಭಾಗದಲ್ಲಿ 12,840 ವಿದ್ಯಾರ್ಥಿಗಳು, ಕಾಲೇಜು ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ 17,062 ವಿದ್ಯಾರ್ಥಿಗಳು ಸೇರಿ ಒಟ್ಟು 1,54,294 ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ರಾಜ್ಯ ಮಟ್ಟದಲ್ಲಿ ಪ್ರಥಮ ,ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಕ್ರಮವಾಗಿ 31000 ರೂ.,21,000 ರೂ ಹಾಗೂ 11,000 ರೂ.ನಗದು ಪುರಸ್ಕಾರ ಹಾಗೂ ಪ್ರಮಾಣ ಪತ್ರಗಳನ್ನು ಅಕ್ಟೋಬರ್ 2 ರಂದು ಸಂಜೆ 4.30 ಕ್ಕೆ ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೇಂದ್ರ ಕಚೇರಿಯ ಸುಲೋಚನ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಹುಮಾನ ವಿತರಣೆ ಮಾಡಲಿದ್ದಾರೆ ಎಂದು ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ತಿಳಿಸಿದ್ದಾರೆ.

Yaduveer Wadiyar ಶಿವಮೊಗ್ಗ ಹಬ್ಬ ಯಶಸ್ವಿಗೊಳಿಸಿ- ಸಂಸದ ಯದುವೀರ್

0

Yaduveer Wadiyar ಪ್ರವಾಸೋದ್ಯಮ ಹಾಗೂ ಜಿಲ್ಲೆಯ ಉದ್ಯಮಿಗಳ ಪ್ರೋತ್ಸಾಹಿಸುವ ದೃಷ್ಟಿಯಿಂದ ಆಯೋಜಿಸಲಿರುವ ಶಿವಮೊಗ್ಗ ಹಬ್ಬ ಯಶಸ್ವಿಗೊಳಿಸಿ ಎಂದು ಮೈಸೂರು ಸಂಸ್ಥಾನದ ರಾಜವಂಶಸ್ಥ, ಸಂಸದ ಯದುವೀರ ಕೃಷ್ಣದತ್ತ ಜಯಚಾಮರಾಜ ಒಡೆಯರ್ ಹೇಳಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ನಿವಾಸದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನೂತನ ಪದಾಧಿಕಾರಿಗಳೊಂದಿಗೆ ಸಮಾಲೋಚಿಸಿ ಮಾತನಾಡಿದ ಅವರು, ಶಿವಮೊಗ್ಗ ಹಬ್ಬ ಒಳ್ಳೆಯ ಅಲೋಚನೆ ಆಗಿದ್ದು, ಉತ್ತಮವಾಗಿ ಆಯೋಜಿಸಿ ಎಂದು ತಿಳಿಸಿದರು.
ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ವಾಣಿಜ್ಯ ಮತ್ತು ಕೈಗಾರಿಕಾ ಪ್ರಗತಿಯ ಬಗ್ಗೆ ಹಾಗೂ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ವಾಣಿಜ್ಯ ಮತ್ತು ಕೈಗಾರಿಕಾ ಸಂಘಕ್ಕೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ನೂತನ ಆಡಳಿತ ಮಂಡಳಿಯು ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಆಲೋಚನೆ ನಡೆಸಲಾಗಿದ್ದು, ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಲಾಗುವುದು ಎಂದು ಹೇಳಿದರು.
Yaduveer Wadiyar ವಿಶೇಷವಾಗಿ ಉದ್ಯಮಿಗಳಿಗೆ ಪ್ರೋತ್ಸಾಹಿಸಲು ಹಾಗೂ ಪ್ರವಾಸೋದ್ಯಮಕ್ಕೆ ಪೂರಕ ಚಟುವಟಿಕೆ ನಡೆಸುವ ದೃಷ್ಟಿಯಿಂದ ಮರ‍್ನಾಲ್ಕು ತಿಂಗಳಲ್ಲಿ ಶಿವಮೊಗ್ಗ ಹಬ್ಬ ಆಯೋಜಿಸಲು ಉದ್ದೇಶಿಸಲಾಗಿದೆ. ಇ-ವೇಸ್ಟ್ ಮ್ಯಾನೇಜ್‌ಮೆಂಟ್ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಮೈಸೂರು ಸಂಸ್ಥಾನದ ರಾಜವಂಶಸ್ಥ, ಸಂಸದ ಯದುವೀರ ಕೃಷ್ಣದತ್ತ ಜಯಚಾಮರಾಜ ಒಡೆಯರ್ ಅವರನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಸನ್ಮಾನಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಜಂಟಿ ಕಾರ್ಯದರ್ಶಿ ಕೆ.ಎಸ್.ಸುಕುಮಾರ್, ಖಜಾಂಚಿ ಆರ್.ಮನೋಹರ್, ಲಕ್ಷ್ಮೀದೇವಿ ಗೋಪಿನಾಥ್ , ಪಿ.ರುದ್ರೇಶ್ ಉಪಸ್ಥಿತರಿದ್ದರು.