Friday, March 27, 2026
Friday, March 27, 2026
Home Blog Page 530

Muniratna ಶಾಸಕ ಮುನಿರತ್ನಗೆ ಜಾಮೀನು ಆಧಾರಿತ ಬಿಡುಗಡೆ

0

Muniratna ಮಹಿಳೆಯ ಮೇಲೆ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆದಿರುವ ಆರ್ ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಿದ್ದಾರೆ.

ಪ್ರಕರಣ ಸಂಬಂಧ ನಿನ್ನೆ ಶಾಸಕ ಮುನಿರತ್ನಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಆದರೆ ಜೈಲು ಅಧಿಕಾರಿಗಳಿಗೆ ಜಾಮೀನು ಪ್ರತಿ ತಡವಾಗಿ ತಲುಪಿತ್ತು.

Muniratna ಹೀಗಾಗಿ ನಿನ್ನೆ ಶಾಸಕ ಮುನಿರತ್ನ ಬಿಡುಗಡೆಯಾಗಿರಲಿಲ್ಲ. ಇದೀಗ ಇಂದು ಬಿಡುಗಡೆಯಾಗಿದ್ದಾರೆ.
ನನ್ನನ್ನು ಹೆದರಿಸಿ ಬೆದರಿಸಿ ಅತ್ಯಾಚಾರ ಎಸಗಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರು ಶಾಸಕ ಮುನಿರತ್ನ ವಿರುದ್ಧ ರಾಮನಗರ ಜಿಲ್ಲೆಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಮುನಿರತ್ನರನ್ನ ಬಂಧಿಸಲಾಗಿತ್ತು.

Shikaripura Horticulture Department ಶಿಕಾರಿಪುರ ತಾಲ್ಲೂಕಿನಲ್ಲಿ ತೋಟದ ಬೆಳೆಗಳ ಪ್ರದೇಶ ವಿಸ್ತರಣೆಗೆ ಕಾಮಗಾರಿ ಕೈಗೊಳ್ಳುವ ಆಸಕ್ತರಿಗೆ ಮಾಹಿತಿ

0

Shikaripura Horticulture Department ಶಿಕಾರಿಪುರ ತೋಟಗಾರಿಕೆ ಇಲಾಖೆಯು 2025-26ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ (ಅಡಿಕೆ, ತೆಂಗು, ಮಾವು, ಗೇರು, ಜಾಯಿಕಾಯಿ ಇತರೆ) ಕಾರ್ಯಕ್ರಮದಡಿ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಇಚ್ಛಿಸುವ ರೈತರಿಂದ ಅರ್ಜಿ ಆಹ್ವಾನಿಸಿದೆ.

Shikaripura Horticulture Department ಆಸಕ್ತರು ರೈತರು ಅರ್ಜಿ ನಮೂನೆಯನ್ನು ಶಿಕಾರಿಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಉದ್ಯೋಗ ಚೀಟಿ, ಆಧಾರ್ ಕಾರ್ಡ್ ಪ್ರತಿ, ಪಹಣಿ, ಜಾತಿ ಪ್ರಮಾಣ ಪತ್ರ (ಎಸ್‌ಸ್ಸಿ/ಎಸ್‌ಟಿ ಆಗಿದ್ದಲ್ಲಿ), ಸಣ್ಣ ಹಿಡುವಳಿ ಪ್ರಮಾಣ ಪತ್ರ (ಸಾಮಾನ್ಯ ವರ್ಗದವರಿಗೆ) ಗಳನ್ನು ಲಗತ್ತಿಸಿ ನ. 05 ರೊಳಗಾಗಿ ಸಲ್ಲಿಸುವಂತೆ ಶಿಕಾರಿಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ಹಿಂದೆ ಫಲಾನುಭವಿಗಳಾಗಿದ್ದಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

Maharshi Valmiki Jayantyotsava ಮಹರ್ಷಿ ವಾಲ್ಮೀಕಿಯನ್ನು ಕವಿ, ಇತಿಹಾಸಕಾರ & ಮನಶ್ಶಾಸ್ತ್ರಜ್ಞ‌ರನ್ನಾಗಿ ನೋಡಬೇಕಾಗಿದೆ- ಡಾ.ಮೋಹನ್ ಚಂದ್ರಗುತ್ತಿ

0

Maharshi Valmiki Jayantyotsava ಮಹಾಕಾವ್ಯ ರಾಮಾಯಣದ ವೈಶಿಷ್ಟ್ಯತೆ ಮತ್ತು ಶತಶತಮಾನಗಳಿಂದ ಗಳಿಸಿರುವ ಜನಪ್ರಿಯತೆಯಿಂದಾಗಿ ಕೃತಿಕಾರ ಮಹರ್ಷಿ ವಾಲ್ಮೀಕಿಯವರು ಕವಿಕುಲ ಸಾರ್ವಭೌಮರಾಗಿ ಸಾಹಿತ್ಯ ಲೋಕದಲ್ಲಿ ಗುರುತಿಸಲ್ಪಡುತ್ತಾರೆ ಹಾಗೂ ಆರಾಧಿಸಲ್ಪಡುತ್ತಾರೆ ಎಂದು ಸಂಸದ ಬಿ. ವೈ. ರಾಘವೇಂದ್ರ ಅವರು ಹೇಳಿದರು.

ಅವರು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಶಿವಮೊಗ್ಗ ಮಹಾನಗರ ಪಾಲಿಕೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ತತ್ವದಿಂದ ದೈವತ್ವಕ್ಕೆ ಏರಿದ ತಮ್ಮ ಕೃತಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಮಹನೀಯ ವಾಲ್ಮೀಕಿ ಅವರು ಆರಂಭದಲ್ಲಿ ಬೇಡರಾಗಿ ನಂತರ ಸಂತರಾಗಿ, ಅಹಿಂಸೆಯ ಪ್ರತಿಪಾದಕರಾಗಿ ಜಗತ್ತಿಗೆ ಸನ್ಮಾರ್ಗದ ಸಂದೇಶ ಸಾರಿದವರು ಮಹರ್ಷಿ ವಾಲ್ಮೀಕಿ ಎಂದವರು ಬಣ್ಣಿಸಿದರು.

ಪ್ರಪಂಚದ ವಿವಿಧ ಭಾಷೆಗಳಿಗೆ ಅನುವಾದಗೊಂಡು ಜಗತ್ತಿನ ಪ್ರತಿಸ್ಥಿತ ವಿಶ್ವವಿದ್ಯಾಲಯ ಗಳಲ್ಲಿ ತತ್ವಜ್ಞಾನಿ ವಾಲ್ಮೀಕಿ ಅವರ ಕೃತಿ ಯನ್ನು ಓದುವ ಮೂಲಕ ಅವರ ಆದರ್ಶಗಳನ್ನು ಅನುಸರಿಸುತ್ತಿರುವುದು, ಅವರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಅನುಕರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ಉಪನ್ಯಾಸಕ ಡಾ. ಮೋಹನ್ ಚಂದ್ರಗುತ್ತಿ ಅವರು ಉಪನ್ಯಾಸ ನೀಡಿ,
ಒಬ್ಬ ಮನಷ್ಯನ ಆದರ್ಶ ಜೀವನ ವಿಚಾರಧಾರೆಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಉದ್ದೇಶದಿಂದ ಜಯಂತಿಗಳನ್ನು ಆಚರಣೆ ಮಾಡಲಾಗುತ್ತದೆ.
ಮಹರ್ಷಿ ವಾಲ್ಮಿಕಿ ಅವರನ್ನು ವಾಲ್ಮಿಕಿಯನ್ನು ಒಬ್ಬ ಕವಿಯಾಗಿ, ಇತಿಹಾಸಕಾರನಾಗಿ, ಮನಶಾಸ್ತ್ರಜ್ಞರಾಗಿ, ನೋಡಬೇಕಾಗಿದೆ‌.
ರಾಮಾಯಣ ವೈಭವೀಕರಣ ಕೃತಿಯಲ್ಲ ವಾಸ್ತಾವದ ಆಧಾರಿತ ಕೃತಿಯಾಗಿದೆ‌. ಸಮಾಜಿಕ ಸ್ಥತಿಗತಿಗಳ ರಾಮ ಸೀತಾ ಲಕ್ಷ್ಮಣ ಜೀವನ‌ ವ್ಯಕ್ತಿತ್ವವನ್ನು ಆಧ್ಯಾತ್ಮಿಕ ಕಥನದ ಮೂಲಕ‌ ಜಗತ್ತಿದೆ ಅರ್ಪಿಸಿದ್ದಾರೆ.

ಇಂದಿನ‌ ಯುವ ಜನತೆಗೆ ವಾಲ್ಮಿಕಿ, ಮದಕರಿ ನಾಯಕರನ್ನು ಆದರ್ಶವಾಗಬೇಕು ತಮ್ಮ ಜೀವನಲ್ಲಿ ಸ್ವೀಕರಿಸಬೇಕು ತಂದೆತಾಯಿಗೌರವಿಸಬೇಕು
ಆರೋಗ್ಯಕರ ಶೈಕ್ಷಣಿಕ ಜ್ಞಾನದ ಬಾಗಿಲು ತೆರಬೇಕಾಗಿದೆ‌.ವಾಲ್ಮಿಕಿ,ಅಂಬೇಡ್ಕರ್ ‌ಅವನ್ನು ದೇವರಾಗಿಸುವುದು ಬೇಡ ಅವರ ಜೀವನ, ಮೌಲ್ಯಗಳು ಪಾಲಿಸುವ ಮೂಲಕ ನಮ್ಮ‌ ಬದುಕಿಗೆ ದೀಪವಾಗಬೇಕಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ್ ಸರ್ಜಿ ಮಾತನಾಡಿ
ಒಬ್ಬ ಸಾಮಾನ್ಯವ್ಯಕ್ತಿ ಮಹಾಕವಿ ಪ್ರಪಂಚಕ್ಕೆ ಅದ್ಬುತ ಗ್ರಂಥವನ್ನು ನೀಡಿದ ಶ್ರೇಷ್ಠವ್ಯಕ್ತಿ ಮಹರ್ಷಿ ವಾಲ್ಮಿಕಿ ಅವರು ನಮಗೆ ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಜಯಂತಿಗಳ ಮೂಲಕ ತೆಗೆದುಕೊಳ್ಳಬೇಕಾಗಿದೆ‌.

ರಾಮ ಲಕ್ಷ್ಮಣ ಸೀತೆ ಹಾಗೂ ರಾವಣನಿಂದಲ್ಲೂ ಒಳ್ಳೆಯ ವಿಚಾರವನ್ನು ಕಲಿಯಬಹುದು ಎಂಬ ಸಂದೇಶವನ್ನು ವಾಲ್ಮಿಕಿ ರಾಮಾಯಣದಿಂದ ತಿಳಿಸಿದ್ದಾರೆ.
ರಾಮಾಯಣ, ಮಹಾಭಾರತದ ಆದರ್ಶಗಳನ್ನು ನಮ್ಮ‌ ಜೀವನಲ್ಲಿ ಅಳವಡಿಸಿಕೊಳ್ಳಬೇಕು ಆಗಮಾತ್ರ ನಮ್ಮ ಜೀವನ ಸಾರ್ಥಕವಾಗಲಿದೆ‌ ಎಂದರು.

Maharshi Valmiki Jayantyotsava ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಎಸ್ ಎನ್ ಚನ್ನಬಸಪ್ಪ ಮಾತನಾಡಿದ
ವಾಲ್ಮಿಕಿ ಅವರು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ ಜಗತ್ತಿಗೆ ಪ್ರಭು ಶ್ರೀರಾಮನ ದರ್ಶನವನ್ನು ಪರಿಚಯಿಸಿದವರು. ಇಡೀ ಜಗತ್ತಿಗೆ ಭಾರತದ ಶಕ್ತಿಯನ್ನು ತೊರಿಸಿಕೊಟ್ಟವರು‌.ರಾಮನ ಬಗ್ಗೆ ಅನೇಕ ಸಂಗತಿಗಳ ಕುರಿತು ಸಂಕ್ಷಿಪ್ತವಾಗಿ ಅರ್ಥಪೂರ್ಣವಾಗಿ ವಾಲ್ಮಿಕಿ ರಾಮಾಯಣದಲ್ಲಿ ವಿವರಿಸಿದ್ದಾರೆ.

ಭಾರತದಲ್ಲಿ ಮಹಾನ್ ವ್ಯಕ್ತಿಗಳು ಕೂಡ ಜಗತ್ತಿಗೆ ಶಕ್ತಿಯಾಗಿದ್ದಾರೆ‌ ಮಹರ್ಷಿ ವಾಲ್ಮಿಕಿ ಅವರು ಮೊದಲ ಸಾಲಿನಲ್ಲಿ ನಿಲುತ್ತಾರೆ.ಅವರ ಆದರ್ಶಗಳನ್ನು ನಾವು ಪಾಲಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಎಸ್. ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ರಾಜ್ಯ ಭೋವಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ಜಿಲ್ಲಾ ನಾಯಕ ವಾಲ್ಮೀಕಿ ಸಂಘದ ಅಧ್ಯಕ್ಷ ಹೆಚ್. ಟಿ. ಬಳಿಗಾರ್, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಸಿಇಓ ಎನ್ ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಜಿ. ಕೆ. ಮಿಥುನ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಧಿಕಾರಿ ಮಟ್ಟದ ಹಿರಿಯ ಅಧಿಕಾರಿಗಳು, ಸಮುದಾಯದ ಮುಖಂಡರು, ವಿದ್ಯಾರ್ಥಿ-ವಿದ್ಯಾರ್ಥಿ ನಿಯರು, ಸಾರ್ವಜನಿಕರು ಉಪಸ್ಥಿತರಿದ್ದರು.

ಇದೆ ಸಂಧರ್ಭದಲ್ಲಿ ಎಸ್. ಎಸ್. ಎಲ್. ಸಿ ಮತ್ತು ಪಿಕ್. ಯು. ಸಿ. ಯಲ್ಲಿ ಅತೀ ಹೆಚ್ಚಿನ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಗಣ್ಯರ ಸಮ್ಮುಖದಲ್ಲಿ ನಗದು ಪುರಸ್ಕಾರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿಯಿಂದ ಕಲಾತಂಡಗಳೊಂದಿಗೆ ಹೊರಟ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆಯು ಅಂತಿಮವಾಗಿ ಕುವೆಂಪು ರಂಗಮಂದಿರದಲ್ಲಿ ಸಂಪನ್ನಗೊಂಡಿತು.

Central Government Employees ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಶೇ.3 ರಷ್ಟು ಹೆಚ್ಚಳ

0

Central Government Employees ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯ ಮೂರು ಪ್ರತಿಶತ ಹೆಚ್ಚುವರಿ ಕಂತು ಮತ್ತು ಪಿಂಚಣಿದಾರರಿಗೆ ಡಿಯರ್‌ನೆಸ್ ರಿಲೀಫ್ ಬಿಡುಗಡೆ ಆದೇಶ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚುವರಿ ಕಂತು ತುಟ್ಟಿಭತ್ಯೆ (ಡಿಎ) ಮತ್ತು 01.07.2024 ರಿಂದ ಪಿಂಚಣಿದಾರರಿಗೆ ಡಿಆರ್‌ನೆಸ್ ರಿಲೀಫ್ (ಡಿಆರ್) ಅನ್ನು ಮೂರು ಪ್ರತಿಶತದಷ್ಟು (3%) ಹೆಚ್ಚಳವನ್ನು ಪ್ರತಿನಿಧಿಸುತ್ತದೆ. ಬೆಲೆ ಏರಿಕೆಯ ವಿರುದ್ಧ ಸರಿದೂಗಿಸಲು ಮೂಲ ವೇತನ/ಪಿಂಚಣಿಯ 50% ಅಸ್ತಿತ್ವದಲ್ಲಿರುವ ದರಕ್ಕಿಂತ ಈ ಹೆಚ್ಚಳವು 7 ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದ ಸ್ವೀಕೃತ ಸೂತ್ರಕ್ಕೆ ಅನುಗುಣವಾಗಿದೆ. ಡಿಎ ಮತ್ತು ಡಿಆರ್ ಎರಡರ ಖಾತೆಯಲ್ಲಿನ ಬೊಕ್ಕಸದ ಮೇಲಿನ ಸಂಯೋಜಿತ ಪರಿಣಾಮವು ವಾರ್ಷಿಕ ರೂ.9,448.35 ಕೋಟಿಗಳಾಗಿರುತ್ತದೆ.

Central Government Employees ಇದರಿಂದ ಸುಮಾರು 49.18 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 64.89 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.

Tungabhadra Dam ಕಲುಷಿತ ಕುಡಿಯುವ ನೀರು: ತಕ್ಷಣ ಶುದ್ಧೀಕರಿಸಿದ ನೀರು ಪೂರೈಕೆಗೆ ಒತ್ತಾಯ

0

Tungabhadra Dam ಶಿವಮೊಗ್ಗ ನಗರದಲ್ಲಿ ಕೆಲ ದಿನಗಳಿಂದ ಮಣ್ಣು ಮಿಶ್ರಿತ ಕಲುಷಿತ ನೀರು, ಪೂರೈಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕರಿಗೆ ತುಂಬಾ ನೀರಿನ ಸಮಸ್ಯೆಯನ್ನು ಉಂಟು ಮಾಡಿರುವ ಬಾರಿ ಮಳೆ ಕಾರಣದಿಂದ ತುಂಗಾ ಜಲಾಶಯದಲ್ಲಿ ಅಪಾರ ಪ್ರಮಾಣದ ಮಣ್ಣು ಮಿಶ್ರಿತ ನೀರು ಸಂಗ್ರಹವಾಗಿದ್ದು ನವರಾತ್ರಿ ಹಬ್ಬದ ಸಂದರ್ಭದಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆಯಾಗಿದ್ದಕ್ಕೆ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಸಾರ್ವಜನಿಕರು ಈ ನೀರು ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು ಜ್ವರ ಜಾಂಡಿಸ್ ಇತರೆ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು ನೀರಿನ ಪ್ರಯೋಗಶಾಲೆ, ಶುದ್ಧೀಕರಣ ಘಟಕದ ಸಮಸ್ಯೆ ಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು

Tungabhadra Dam ನೀರಿನಲ್ಲಿ ಟಾರ್ಬಿಡಿಟಿ ಪ್ರಮಾಣ ಹೆಚ್ಚಾಗಿದೆ ಶುದ್ಧೀಕರಣದ ಹೊರತಾಗಿಯೂ ಟಾರ್ಬಿಡಿಟಿ ಪ್ರಮಾಣ ಕಡಿಮೆಯಾಗುತ್ತಿಲ್ಲ ಇದರಿಂದ ಕೆಂಪು ಬಣ್ಣದ ನೀರು ಪೂರೈಕೆಯಾಗುತ್ತಿದ್ದು ಈಗಾಗಲೇ 150ಕ್ಕೂ ಹೆಚ್ಚು ಕಾರ್ಮಿಕರನ್ನು ಬಳಸಿಕೊಂಡು ಶುದ್ಧೀಕರಣ ಕಾರ್ಯ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದರು,

ಪಾಲಿಕೆ ಮಾಜಿ ಸದಸ್ಯರಾದ ಹೆಚ್ ಸಿ ಯೋಗೇಶ್, ಕೆ ರಂಗನಾಥ್ ಶಿವಕುಮಾರ್ ಕಲೀಂಪಾಶ ರವರು ತಕ್ಷಣ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

Department of Information and Public Relations ಪ್ರಚಾರ ಇಲಾಖೆಯಲ್ಲಿ ಮಾಧ್ಯಮ ಚಟುವಟಿಕೆ ನಿರ್ವಹಣೆ ಬಗ್ಗೆ ಒಂದು ವರ್ಷದ ಅವಧಿಯ ಅಪ್ರೆಂಟಿಷಿಪ್ ಗೆ ಅರ್ಹ ಪಜಾ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

0

Department of Information and Public Relations ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ೨೦೨೪-೨೫ನೇ ಸಾಲಿನ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆಯಡಿ ಜಿಲ್ಲಾ ಕಚೇರಿಯಲ್ಲಿ ಕ್ಷೇತ್ರ ಪ್ರಚಾರ ಕಾರ್ಯಕ್ರಮ ಹಾಗೂ ಮಾಧ್ಯಮ ಚಟುವಟಿಕೆಗಳ ನಿರ್ವಹಣೆ ಕುರಿತು ಒಂದು ವರ್ಷ ಅವಧಿಯ ತರಬೇತಿ ಪಡೆಯಲು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಯು ಪತ್ರಿಕೋದ್ಯಮ ಹಾಗೂ ಮಾಧ್ಯಮ ಕ್ಷೇತ್ರದ ವಿಷಯದಲ್ಲಿ ಪದವಿ/ಸ್ನಾತಕೋತ್ತರ ಪದವಿ ಪಡೆದವರಾಗಿರಬೇಕು. ಕನ್ನಡ, ಇಂಗ್ಲೀಷ್ ಭಾಷೆಯ ಓದು ಮತ್ತು ಬರಹ ಬಲ್ಲವರಾಗಿದ್ದು, ಕಂಪ್ಯೂಟರ್ ಜ್ಞಾನ ಹೊಂದಿದವರಾಗಿರಬೇಕು. ಜನವರಿ-೨೦೨೫ ರಿಂದ ಡಿಸೆಂಬರ್-೨೦೨೫ ರವರೆಗಿನ ೧೨ ತಿಂಗಳ ತರಬೇತಿ ಇದಾಗಿದ್ದು, ಪರಿಶಿಷ್ಟ ಜಾತಿಯ ಇಬ್ಬರು ಅಭ್ಯರ್ಥಿಗಳನ್ನು ಮೆರಿಟ್ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ೧೫,೦೦೦/-ರೂ.ಗಳ ಶಿಷ್ಯವೇತನ ನೀಡಲಾಗುವುದು. ಅಭ್ಯರ್ಥಿಗಳು ಶಿವಮೊಗ್ಗ ಜಿಲ್ಲೆಯವರಾಗಿರಬೇಕು. ಶಿವಮೊಗ್ಗ Department of Information and Public Relations ಜಿಲ್ಲೆಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ನೆರೆಯ ಜಿಲ್ಲೆಯ ಅಭ್ಯರ್ಥಿಗಳನ್ನು ಪರಿಗಣ ಸಲಾಗುವುದು. ಈ ಹಿಂದೆ ಅರ್ಜಿ ಸಲ್ಲಿಸಿ, ಆಯ್ಕೆಯಾಗಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಅವಕಾಶವಿರುವುದಿಲ್ಲ. ಅರ್ಹರು ತಮ್ಮ ಸ್ವವಿವರ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ದಿ:೧೫/೧೧/೨೦೨೪ ರೊಳಗಾಗಿ ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್.ಎಂ.ವಿ.ರಸ್ತೆ, ಶಿವಮೊಗ್ಗ-೫೭೭೨೦೧ ವಿಳಾಸಕ್ಕೆ ಸಲ್ಲಿಸಬಹುದಾಗಿದೆ.

World Karate Federation ಕ್ರೀಡಾಂಗಣದಲ್ಲೇ ರೆಫ್ರೀಗಳು ವಹಿಸಬೇಕಾದ ಜಾಗೃತಿ ಬಗ್ಗೆ ನಡೆದ ಕರಾಟೆ ರೆಫ್ರಿ ಸೆಮಿನಾರ್ ಯಶಸ್ವಿ

0

World Karate Federation ವರ್ಲ್ಡ್ ಕರಾಟೆ ಫೆಡರೇಷನ್ ಮಾನ್ಯತೆ ಪಡೆದ ಕರಾಟೆ ಇಂಡಿಯಾ ಆರ್ಗನೈಸೇಷನ್ ಹಾಗೂ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್‌ ಯಿಂದ ಮಾನ್ಯತೆ ಪಡೆದ ಶಿವಮೊಗ್ಗ ಜಿಲ್ಲೆಯ ಏಕೈಕ ಸಂಸ್ಥೆಯಾಗಿ ಗುರುತಿಸಲ್ಪಟ್ಟ ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್* ವತಿಯಿಂದ
ದಿನಾಂಕ : 13/10/2024 ರಂದು ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ “ರೆಫ್ರಿ ಸೆಮಿನಾರ್” ಕಾರ್ಯಕ್ರಮ ವನ್ನು ಆಯೋಜಿಸಿ, ಯಶಸ್ವಿಯಾಗಿ ನಡೆಸಿಕೊಡಲಾಯಿತು.

ಕಾರ್ಯಕ್ರಮವನ್ನು ಆಯೋಜಿಸಿದ ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ ಜಿಲ್ಲಾಧ್ಯಕ್ಷರಾದ ಶಿಹಾನ್ ಎ.ಝೆಡ್ ಮುಹೀಬ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸನ್ ಸೈ ನವೀನ ಎಸ್ ಜಿಲ್ಲಾ ಉಪಾಧ್ಯಕ್ಷರಾದ
ಸನ್ ಸೈ ಸಾಧಿಕ್ ಜೆ, ಖಜಾಂಚಿರಾದ ಸನ್ ಸೈ ಮಂಜುನಾಥ್, ಹಾಗೂ ಶ್ರೀಶ , ದೀಕ್ಷಾ, ಅಪೂರ್ವ, ಪೃಥ್ವಿ, ಅಂಕಿತ, ಸಮರ್ಥ್, ಆಶಿಕ್ ರವರು ಸೇರಿ ಆಯೋಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿವಮೊಗ್ಗದ ವಿಧಾನ ಪರಿಷತ್ ನ ಶಾಸಕರಾದ ಶ್ರೀಯುತ ಡಿ.ಎಸ್. ಅರುಣ್ , ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ ಸಂ ಸೈ ಭಾರ್ಗವ್‌ರೆಡ್ಡಿ, ಕರ್ನಾಟಕ ರೆಫ್ರಿ ಕಮಿಷನ್ ರಾದ ಕ್ಯೂಷಿ ಕೆ. ಪಿ ಜೋಸ್, ಕೈಗಾರಿಕಾ ಮತ್ತು ತರಬೇತಿ ಇಲಾಖೆರಾದ ಶ್ರೀಯುತ ಡಾ, ನಾಗೇಂದ್ರ ಎಫ್ ಹೊನ್ನಳ್ಳಿ, ಸಮಾಜ ಸೇವಕರಾದ ಶ್ರೀಯುತ ದಿನೇಶ್ ಶೆಟ್ , ಚಿಕ್ಕಮಂಗಳೂರಿನ ಶ್ರೀಯುತ ಸನ್ ಸೈ ವಿನೋದ್ ಕುಮಾರ್, ದಾವಣಗೆರೆಯ ಶ್ರೀಯುತ ಸನ್ ಸೈ ವೆಂಕಟೇಶ್ , ಬೆಂಗಳೂರಿನ ಶ್ರೀಯುತ ಸನ್ ಸೈ ವಿಶ್ವನಾಥ್, ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತದ್ದರು.

World Karate Federation ಈ ವಿಶೇಷ ಕಾರ್ಯಕ್ರಮದಲ್ಲಿ, ಮುಂದಿನ ಪೀಳಿಗೆಯ ರೆಫ್ರಿಗಳಿಗೆ ಅತ್ಯಂತ ನಿಖರವಾದ, ಶ್ರದ್ಧಾವಂತ ಮತ್ತು ತಾಂತ್ರಿಕ ತರಬೇತಿಯನ್ನು ನೀಡಲಾಯಿತು. ತರಬೇತಿಯಲ್ಲಿ ಕೇವಲ ಕೌಶಲ್ಯಾಭಿವೃದ್ದಿಗೇ ಆದ ಗುರುತಿಗೆ ಸೀಮಿತವಾಗದೆ, ತೀರ್ಮಾನಾತ್ಮಕತೆ, ಸಮಯ ಪ್ರಜ್ಞೆ, ನಿಯಮಾವಳಿ ಅರಿವು, ಮತ್ತು ತಾತ್ವಿಕತೆಯ ಬಗ್ಗೆ ವಿವರವಾದ ತರಬೇತಿ ನೀಡಲಾಯಿತು. ಕರಾಟೆ ಕ್ರೀಡೆಯಾದರಲ್ಲಿಯೇ, ರೆಫ್ರಿಗಳು ನಿರ್ಧಾರ ತೆಗೆದುಕೊಳ್ಳುವ ಮಹತ್ವವನ್ನು, ಹಾಗೂ ಅವರು ಪ್ರದರ್ಶಿಸಬೇಕಾದ ನ್ಯಾಯಸಮ್ಮತಿಕೆ ಮತ್ತು ಸಮರ್ಥತೆಯನ್ನು ಪ್ರಸ್ತುತ ಪಡಿಸಲಾಯಿತು.

ಇದು ಕೇವಲ ತರಬೇತಿಯಲ್ಲ, ಮುಂದಿನ ತಲೆಮಾರಿನ ರೆಫ್ರಿಗಳನ್ನು ವಿಶ್ವದ ಮಟ್ಟದಲ್ಲಿ ಉತ್ತುಂಗಕ್ಕೇರಿಸಲು ಸಹಕಾರಿಯಾಗುವಂತಹ ಮಾರ್ಗದರ್ಶನವಾಗಿದೆ. ಈ ತರಬೇತಿಯು ಅವರು ಕ್ರೀಡಾಂಗಣದಲ್ಲಿ ವಹಿಸಬೇಕಾದ ಭೂಮಿಕೆಯನ್ನು ಬಲಪಡಿಸುವ ಜೊತೆಗೆ, ಅವರ ನಿರ್ಧಾರಾತ್ಮಕ ಮತ್ತು ನಾಯಕತ್ವ ಗುಣಗಳನ್ನು ಹೆಚ್ಚಿಸಿತು.

Kateel Ashok Pai Memorial Institute ಮಾನಸಿಕ ವೈದ್ಯರ ಭೇಟಿ ಮಾಡುವವರು ಹುಚ್ಚರು ಎಂಬ ಕೆಟ್ಟ ಕಲ್ಪನೆ ತೆಗೆದು ಹಾಕಬೇಕು- ನ್ಯಾ.ಎಂ.ಎಸ್. ಸಂತೋಷ್

0

Kateel Ashok Pai Memorial Institute ಜನ ಸಾಮಾನ್ಯರು ಮಾನಸಿಕ ರೋಗ ಎಂದರೆ ದೊಡ್ಡ ವಿಚಾರವೆಂದು ತಿಳಿಯುತ್ತಾರೆ, ಮಾನಸಿಕ ವೈದ್ಯರನ್ನು ಬೇಟಿ ಮಾಡಿದರೆ ಹುಚ್ಚರು ಎಂಬ ಪಟ್ಟ ಬರುತ್ತದೆ ಎಂಬ ಕೆಟ್ಟ ಕಲ್ಪನೆಯನ್ನು ತೆಗೆದು ಹಾಕಬೇಕಿದೆ. ಈ ವಿಚಾರ ಸಮಾಜದ ಕಡೆಯ ವ್ಯಕ್ತಿಗೂ ಆಶಾ ಕಾರ್ಯಕರ್ತೆಯರ ಮೂಲಕ ಅರಿವು ಮೂಡಿಸಬೇಕಿದೆ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಎಂ.ಎಸ್ ಸಂತೋಷ್ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಜ್ಞಾನಸುಧೆ- ಸಮಾಜಕಾರ್ಯ ವಿಭಾಗ ಹಾಗೂ ಮನಃಶಾಸ್ತ್ರ ವಿಭಾಗ, ಐಕ್ಯೂಎಸಿ, ಕಟೀಲ್ ಅಶೋಕ್ ಪೈ ಮೆಮೋರಿಯಲ್ ಇನ್‌ಸ್ಟಿಟ್ಯೂ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಇವರುಗಳ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಬಾಂಗಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಆಶಾ ಕಾರ್ಯಕರ್ತೆಯರಿಗೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಕಾರ್ಯಗಾರವು ಆಶಾ ಕಾರ್ಯಕರ್ತೆಯರಿಗೆ ಮಾನಸಿಕ ಆರೋಗ್ಯದ ಕುರಿತು ಸಮಾಜಕ್ಕೆ ಅರಿವು ಮೂಡಿಸಲು ಸಹಾಯಕವಾಗಿದೆ. ಮಾನಸಿಕ ಆರೋಗ್ಯದಲ್ಲಿ ಯಾವ ವೈದ್ಯಕೀಯ ಸೌಲಭ್ಯಗಳು ಸಿಗಲಿದೇ ಎಂದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಿಳಿಯಬೇಕು. ತಾಯಿ ಮಗುವಿನ ಮಾನಸಿಕ ಆರೋಗ್ಯದ ಬಗ್ಗೆ ಆಶಾ ಕಾರ್ಯಕರ್ತೆಯರು ಮಾಹಿತಿಯನ್ನು ಒದಗಿಸಬೇಕು. ಮಾನಸಿಕ ವೈದ್ಯರ ಸಂಪರ್ಕಿಸುವ ವಿಚಾರವನ್ನು ಕಡೆಗಣಿಸಬಾರದು. ಸಮಾಜಕ್ಕೆ ಹತ್ತಿರದವರಾದ ಆಶಾ ಕಾರ್ಯಕರ್ತೆಯರು ಈ ಕಾರ್ಯಗಾರದಲ್ಲಿ ಹೆಚ್ಚಿನ ಮಾಹಿತಿ ಪಡೆದು, ಸಮಾಜಕ್ಕೆ ನೀಡಬೇಕು ಎಂದು ಅವರು ತಿಳಿಸಿದರು.

Kateel Ashok Pai Memorial Institute ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಕೆ. ನಟರಾಜ್ ಮಾತನಾಡಿ ಇತ್ತಿಚೀನ ದಿನಗಳಲ್ಲಿ ಮಾನಸಿಕ ಆರೋಗ್ಯ ಹೆಚ್ಚುತ್ತಿದೆ. ತುಂಬಾ ಸಿರಿವಂತರು ಮಾನಸಿಕ ಆರೋಗ್ಯ ಕಾಯಿಲೆಗೆ ಒಳಗಾಗುತ್ತಿದಾರೆ. ಕೆಲಸ ಮಾಡುವ ಸ್ಥಳದಲ್ಲಿ ಎಲ್ಲರ ಮಾನಸಿಕ ಸ್ಥಿತಿ ಒಂದೆ ರೀತಿಯಲ್ಲಿ ಇರುವುದಿಲ್ಲ. ಕೆಲವರು ಬಹುಬೇಗ ಒತ್ತಡಕ್ಕೆ ಒಳಗಾಗುತ್ತಾರೆ. ಅದಕ್ಕಾಗಿ ಕೇವಲ ಮಾನಸಿಕವಾಗಿ ಮಾತ್ರವಲ್ಲದೆ ದೈಹಿಕವಾಗಿ ವ್ಯಾಯಾಮ, ನಡಿಗೆ, ಯೋಗಭ್ಯಾಸ ಮಾಡುವುದು ಉತ್ತಮ ಎಂದರು.

ಸಮಸ್ಯೆಗಳನ್ನು ಮುಕ್ತವಾಗಿ ಸ್ನೇಹಿತರ ಬಳಿ ಹೇಳಿಕೊಳ್ಳುವುದು ಸಹ ಪರಿಹಾರ ನೀಡುತ್ತದೆ ಎಂದು ಹೇಳಿದರು.
ಮಾನಸ ಟ್ರಸ್ಟ್ ನಿರ್ದೇಶಕರಾದ ಡಾ.ರಜನಿ ಎಸ್ ಪೈ ಮಾತನಾಡಿ ಬೆಳಗ್ಗೆ ಕೆಲಸಕ್ಕೆ ಹೊರಟಾಗಿನಿಂದ ಸಂಜೆ ಮನೆಗೆ ತಲುಪುವವರೆಗೂ ಒಂದು ರೀತಿಯ ಆತಂಕ ಮತ್ತು ಒತ್ತಡದಲ್ಲಿ ಇರುತ್ತವೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಮಾಹಿತಿ ಮತ್ತು ಸೇವೆಯನ್ನು ಒದಗಿಸುವ ಆಶಾ ಕಾರ್ಯಕರ್ತೆಯರು ಆತಂಕ ಮತ್ತು ಒತ್ತಡವನ್ನು ಎದುರಿಸಿ ಹೇಗೆ ಬಾಳಬೇಕೆಂದು ತಿಳಿಯಬೇಕಿದೆ. ಮಾನಸಿಕ ಅನಾರೋಗ್ಯವು ಯಾವುದೋ ದೊಡ್ಡ ರೋಗವಲ್ಲ ಎಂದು ಸಮಾಜಕ್ಕೆ ಅರಿವು ಮೂಡಿಸಬೇಕು ಎಂದರು.

ಸಿಮ್ಸ್ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ರಾಮಪ್ರಸಾದ್ ಮಾತನಾಡಿ ಮಾನಸಿಕ ಆರೋಗ್ಯವು ಎಷ್ಟರ ಮಟ್ಟದಲ್ಲಿ ಇರಬೇಕು ಎಂಬುದು ತಿಳಿಯಬೇಕು. ದೇಹವನ್ನು ನಿಯಂತ್ರಿಸುವ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಮಾನಸಿಕ ಆರೋಗ್ಯ ಕೇಂದ್ರ ಸ್ಥಾಪನೆಯಾಗಿದೆ. ಅಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತದೆ ಎಂಬುದನ್ನು ಜನರಿಗೆ ಮಾಹಿತಿ ತಿಳಿಸಿ ಎಂದು ಹೇಳಿದರು.

ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಕಿರಣ್ ಎಸ್. ಕೆ. ಮಾತನಾಡಿ ಮಾನಸಿಕ ರೋಗ ಇದೆ ಎಂದರೆ ಸಮಾಜದಲ್ಲಿ ನೋಡುವ ರೀತಿಯೆ ಬೇರೆಯಾಗುತ್ತದೆ ಎಂಬ ಕಲ್ಪನೆ ಬಿಡಬೇಕು. ವೈದ್ಯರ ಬಳಿಯಲ್ಲಿ ಮುಕ್ತವಾಗಿ ಹೇಳಿಕೊಂಡರೆ ಸಮಸ್ಯೆ ಪರಿಹರಿಸಬಹುದು. ಕೆಲಸ ಮಾಡುವ ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಪೂರಕವಾದ ವಾತಾವರಣ ಇರಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕಿನ ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್, ಜಿಲ್ಲಾ ಮನೋವೈದ್ಯರಾದ ಡಾ. ಪ್ರಮೋದ್, ಕಟೀಲ್ ಆಶೋಕ್ ಪೈ ಪ್ರಾಚಾರ್ಯರು ಡಾ. ಸಂದ್ಯಾಕಾವೇರಿ, ಶಿಕಾರಿಪುರದ ಮನೋವೈದ್ಯರಾದ ಡಾ.ಸಂಜಯ್, ಸಂಪನ್ಮೂಲ ವ್ಯಕ್ತಿಗಳಾಗಿ ಕೆಎಪಿಎಮ್‌ಸಿ ಮನಃಶಾಸ್ತ್ರ ಮುಖ್ಯಸ್ಥರಾದ ಡಾ.ಅರ್ಚನಾ ಕೆ, ಭಟ್ ಮತ್ತು ಕೆಎಪಿಎಮ್‌ಐಎಹೆಚ್‌ಎಸ್ ಪ್ರಾಶುಂಪಾಲೆ ಡಾ. ಪುಷ್ಪಲತಾ ಹಾಗೂ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಹಾಜರಿದ್ದರು.

Chamber Of Commerce Shivamogga ರಾಮಾಯಣ ನಮ್ಮ ಐತಿಹಾಸಿಕ ಹಿನ್ನೆಲೆಗೆ ಭದ್ರ ಬುನಾದಿ- ಜಿ.ವಿಜಯ ಕುಮಾರ್

0

Chamber Of Commerce Shivamogga ಮಹರ್ಷಿ ವಾಲ್ಮೀಕಿ ಅವರ ತತ್ವ ಆದರ್ಶ ಗುಣಗಳು ಇಂದಿಗೂ ಸಹ ಅಜರಾಮರ. ಅವರು ರಚಿಸಿದ ರಾಮಾಯಣ ಮಹಾಕಾವ್ಯ ಇಂದಿಗೂ ಪ್ರಸ್ತುತ ಹಿಂದೂ ಧರ್ಮದ ಪವಿತ್ರ ಗ್ರಂಥಗಳಲ್ಲಿ ಒಂದಾದ ರಾಮಾಯಣವು ನಮ್ಮ ಐತಿಹಾಸಿಕ ಹಿನ್ನೆಲೆಗೆ ಭದ್ರ ಬುನಾದಿ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್ ಅಭಿಮತ ವ್ಯಕ್ತಪಡಿಸಿದರು.

ಅವರು ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ. ರೋಟರಿ ಈಸ್ಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್. ರೋಟರಿ ಶಿವಮೊಗ್ಗ ಪೂರ್ವ.ಮತ್ತು ಇನ್ನರ್ ವೀಲ್ ಕ್ಲಬ್ ವತಿಯಿಂದ. ಆಯೋಜಿಸಲಾದ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಅವರ ಬಾಲ್ಯದ ಜೀವನ ನೆನೆಸಿಕೊಂಡರೆ ಅವರು ಈ ಮಟ್ಟದಲ್ಲಿ ಬೆಳೆಯುತ್ತಾರೆ ಎನ್ನುವುದೇ ಒಂದು ಅಸಾಧ್ಯವಾಗಿತ್ತು ಒಬ್ಬ ಬೇಡ ನಾಗಿ ತನ್ನ ಬದುಕನ್ನೇ ಪರಿವರ್ತಿಸಿಕೊಂಡು ಸಮಾಜಕ್ಕೆ ಉತ್ತಮ ಸಂದೇಶಗಳನ್ನು ಕೊಡುವ ದೊಡ್ಡ ಮಹರ್ಷಿಯಾಗಿ ಬೆಳೆದಿದ್ದು ಮರೆಯಲಾಗದ ಕಥೆಯಾಗಿದೆ ಈ ನಿಟ್ಟಿನಲ್ಲಿ ಇಂದು ರಾಜ್ಯಾದ್ಯಂತ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡುತ್ತಿರುವುದು ತುಂಬಾ ಪ್ರಸ್ತುತವಾಗಿದೆ ಎಂದು ನುಡಿದರು.

Chamber Of Commerce Shivamogga ಇದೇ ಸಂದರ್ಭದಲ್ಲಿ ಛಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷರಾದ ಡಾಕ್ಟರ್ ಪರಮೇಶ್ವರ್ ಡಿ ಶಿಗ್ಗಾವ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮಹರ್ಷಿ ವಾಲ್ಮೀಕಿ ಅವರ ಬದುಕು ಬರಹಗಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ಅವರ ಗ್ರಂಥಗಳು ಇಂದಿಗೂ ಸಹ ಪ್ರಸ್ತುತ. ಈ ಹುಣ್ಣಿಮೆಯ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಆಚರಣೆ ತುಂಬಾ ಅರ್ಥಪೂರ್ಣವಾಗಿದೆ ಎಂದು ನುಡಿದರು ಸಮಾರಂಭದಲ್ಲಿ. ಪ್ರಾಂಶುಪಾಲ ಆರ್ ಸೂರ್ಯನಾರಾಯಣರಾವ್. ಶಿಕ್ಷಕರಾದ ಶ್ರೀಮತಿ ಶ್ವೇತಾ ಸುಜಾತ ಪ್ರದೀಪ ಕುಮಾರ್. ಹನುಮಂತಪ್ಪ ಇಂದ್ರಮ್ಮ. ಮಹೇಶ್ ಪೋಷಕರು ಪದಾಧಿಕಾರಿಗಳು ಉಪಸ್ಥಿತರಿದ್ದರು.

Chamber Of Commerce Shivamogga ಜಿಲ್ಲಾ ಕೈಗಾರಿಕೆ & ವಾಣಿಜ್ಯ ಸಂಘದ ಪದಾಧಿಕಾರಿಗಳಿಂದ ನೂತನ ಜಂಟಿ‌ ಆಯುಕ್ತರ ಭೇಟಿ

0

Chamber Of Commerce Shivamogga ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಉಪಾಧ್ಯಕ್ಷರಾದ ಶ್ರೀಯುತ ಜಿ ವಿಜಯ್ ಕುಮಾರ್ ಅವರ ನೇತೃತ್ವದಲ್ಲಿ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಶ್ರೀಯುತ ವಿಜಯ್ ಕುಮಾರ್ ಜೆಎ ಭತ್ತದ್, ಜಂಟಿ ಆಯುಕ್ತರು (ಜಾರಿ ) ರವರನ್ನು ಸೌಜನ್ಯ ಭೇಟಿ ಮಾಡಲಾಯಿತು

ಅವರನ್ನು ನೂತನ ಹುದ್ದೆಗೆ ಸ್ವಾಗತ ಕೋರಿ, SDCCI ಕಚೇರಿಗೆ ಭೇಟಿ ನೀಡಲು ಕೋರಲಾಯಿತು.

ಈ ಸಂಧರ್ಭದಲ್ಲಿ ಎಸ್ ಡಿ ಸಿಸಿಐ ಸದಸ್ಯರುಗಳ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಸರಕು ಸೇವೆಗಳ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಾಯಿತು. ಮಾನ್ಯ ಜಂಟಿ ಆಯುಕ್ತರು ಸಮಸ್ಯೆಗಳಿಗೆ ಪರಿಹಾರಕ್ಕೆ ಸೂಕ್ತ ಪ್ರಯತ್ನ ಮಾಡುವುದಾಗಿ ತಿಳಿಸಿದರು.

Chamber Of Commerce Shivamogga ಅವರನ್ನು ಈ ಸಂದರ್ಭದಲ್ಲಿ ಸಂಘದ ಪರವಾಗಿ ಸನ್ಮಾನಿಸಲಾಯಿತು. Sdcci ನಲ್ಲಿ ವರ್ತಕರುಗಳ ಜೊತೆಗೆ ಸಂವಾದ ನಡೆಸಿ ಸೆಮಿನಾರ್ ಏರ್ಪಡಿಸಲು ಕೋರಲಾಯಿತು. ಅದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳನ್ನ ಭೇಟಿ ಮಾಡಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಜಿ.ವಿಜಯ್ ಕುಮಾರ್,ಮಾಜಿ ಅಧ್ಯಕ್ಷರಾದ ಡಿ ಎಂ ಶಂಕರಪ್ಪ, ಕಾರ್ಯದರ್ಶಿ ಎ.ಎಂ ಸುರೇಶ್, ಜಂಟಿ ಕಾರ್ಯದರ್ಶಿ ಕೆ.ಎಸ್ ಸುಕುಮಾರ್, ಖಜಾಂಚಿ ಆರ್. ಮನೋಹರ, ನಿರ್ದೇಶಕರುಗಳಾದ ಉದಯ್ ಕುಮಾರ್, ಕಿರಣ್ ಕುಮಾರ್, ಶಂಕರ್, ಲಕ್ಷ್ಮಿ ಗೋಪಿನಾಥ್, ಹಾಜರಿದ್ದರು