Tuesday, March 10, 2026
Tuesday, March 10, 2026
Home Blog Page 393

Zameer Ahmed In Shimoga ಗೋವಿಂದಾಪುರ 652 ಮನೆಗಳ‌ನ್ನು ಫಲಾನುಭವಿಗಳಿಗೆ ವಿತರಿಸಿದ ವಸತಿ ಸಚಿವರು

0

Zameer Ahmed In Shimoga ಶಿವಮೊಗ್ಗ ಸಮೀಪದ ಗೋವಿಂದಾಪುರದಲ್ಲಿ 46 ಎಕರೆ ವಿಶಾಲ ಭೂಪ್ರದೇಶದಲ್ಲಿ ಸುಮಾರು 261.00ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಧಾನಮಂತ್ರಿ ಆವಾಸ್‌ಯೋಜನೆಯಡಿ ಜಿ+2 ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಿದ್ದ 3000ಮನೆಗಳ ಪೈಕಿ 652ಮನೆಗಳನ್ನು ಇಂದು ರಾಜ್ಯ ವಸತಿ, ವಕ್ಫ್‌ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್‌ಅವರು ಫಲಾನುಭವಿಗಳಿಗೆ ಮನೆಯ ಕೀಯನ್ನು ಹಸ್ತಾಂತರಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಗೋವಿಂದಾಪುರದಲ್ಲಿ ಏರ್ಪಡಿಸಲಾಗಿದ್ದ ಫಲಾನುಭವಿಗಳಿಗೆ ಲಾಟರಿ ಮೂಲಕ ಮನೆಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಈ ಹಿಂದೆ ಸುಮಾರು 624 ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಲಾಗಿದೆ ಎಂದ ಅವರು ಈಗಾಗಲೇ ವಿತರಿಸಲಾದ ಮನೆಗಳ ಫಲಾನುಭವಿಗಳು ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಆಗಿರುವ ವಿಳಂಬದಿಂದಾಗಿ ಪ್ರತಿ ಮನೆಯ ವೆಚ್ಚದ ಜೊತೆಗೆ ಹೆಚ್ಚುವರಿಯಾಗಿ ರೂ.2.00ಲಕ್ಷಗಳನ್ನು ಪಾವತಿಸಿರುವುದನ್ನು ಗಮನಿಸಲಾಗಿದ್ದು, ಈ ಎಲ್ಲಾ ಫಲಾನುಭವಿಗಳಿಗೆ ತಾವು ಪಾವತಿಸಿರುವ ಹೆಚ್ಚುವರಿ ಮೊತ್ತವನ್ನು ಮುಂದಿನ ಒಂದೂವರೆ ತಿಂಗಳೊಳಗಾಗಿ ಸರ್ಕಾರದ ವತಿಯಿಂದ ಹಿಂದಿರುಗಿಸಲಾಗುವುದು ಎಂದರು.
ಪ್ರಸ್ತುತ ಸದರಿ ಬಡಾವಣೆಗೆ ತಾತ್ಕಾಲಿಕ ವಿದ್ಯುತ್‌ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿನ ನಿವಾಸಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸುಮಾರು 12ಕೋಟಿ ವೆಚ್ಚದಲ್ಲಿ ಶಾಶ್ವತ ವಿದ್ಯುತ್‌ಸಂಪರ್ಕ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದ ಅವರು, ರಾಜ್ಯದಲ್ಲಿ ಇದೇ ಯೋಜನೆಯಡಿ ನಿರ್ಮಾಣಗೊಳ್ಳಬೇಕಾಗಿದ್ದ 47,860ಮನೆಗಳ ಕಾಮಗಾರಿ ಅಪೂರ್ಣಗೊಂಡಿದ್ದು, ಫಲಾನುಭವಿಗಳು ಸರ್ಕಾರಕ್ಕೆ ಪಾವತಿಸಬೇಕಾದ ಮೊತ್ತ2700ಕೋಟಿ ಬಾಕಿ ಇದೆ. ನಗರದ ಕೊಳಚೆ ನಿರ್ಮೂಲನೆ ಯೋಜನೆಯಡಿ ರಾಜ್ಯದಲ್ಲಿ 180253ಮನೆಗಳು ಮಂಜೂರಾಗಿದ್ದು, ಸದರಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಂದ ಸುಮಾರು 7400ಕೋಟಿ ಮೊತ್ತ ಸರ್ಕಾರಕ್ಕೆ ಬರಬೇಕಾಗಿದೆ. ಅಲ್ಲದೇ ರಾಜೀವ್‌ಗಾಂಧಿ ವಸತಿ ಯೋಜನೆಯಡಿ 7863ಮನೆಗಳ ಫಲಾನುಭವಿಗಳಿಂದ ಸರ್ಕಾರಕ್ಕೆ 2100ಕೋಟಿ ಮೊತ್ತ ಸಂದಾಯವಾಗಿದ್ದು, ಒಟ್ಟಾರೆಯಾಗಿ 9500ಕೋಟಿಗೂ ಅಧಿಕ ಮೊತ್ತ ಸರ್ಕಾರಕ್ಕೆ ಪಾವತಿಯಾಗಬೇಕಾಗಿದೆ. ವಾಸ್ತವದಲ್ಲಿ ಈ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳು ಕಡುಬಡವರಾಗಿದ್ದು, ಹಣ ಹೊಂದಿಸುವುದು ಕಷ್ಟಕರವೆಂಬುದನ್ನು ಮನಗಂಡು ಪಾವತಿಸಬೇಕಾದ ಮೊತ್ತಕ್ಕೆ ರಿಯಾಯಿತಿ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿಸಿಕೊಂಡಿರುವುದಾಗಿ ಅವರು ತಿಳಿಸಿದರು.
ಕಳೆದ ಸಾಲಿನಲ್ಲಿ 36,789 ಫಲಾನುಭವಿಗಳಿಗೆ 500ಕೋಟಿ ರೂ.ಗಳ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿಕೊಡಲು ಉದ್ದೇಶಿಸಲಾಗಿದ್ದು, ಕ್ಯಾಬಿನೆಟ್‌ನಲ್ಲಿ ಚರ್ಚಿಸಿ, ಅನುಮೋದನೆ ಪಡೆದು ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದ ಅವರು, ರಾಜ್ಯದಲ್ಲಿ ರಾಜೀವ್‌ಗಾಂಧಿ ವಸತಿ ಯೋಜನೆ ಮತ್ತು ಕೊಳಚೆ ನಿರ್ಮೂಲನೆ ಯೋಜನೆಯಡಿ ಸುಮಾರು 2,30,000 ಮನೆಗಳನ್ನು ಹಂತಹಂತವಾಗಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಮೊದಲ ಹಂತದಲ್ಲಿ ಹುಬ್ಬಳ್ಳಿಯಲ್ಲಿ 4100ಮನೆಗಳ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
Zameer Ahmed In Shimoga ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 2016ರಲ್ಲಿ 2023ಎಕರೆ ಭೂಪ್ರದೇಶದಲ್ಲಿ ವಸತಿ ರಹಿತರಿಗೆ ಮನೆ ನಿರ್ಮಿಸಿಕೊಡುವ ಬೃಹತ್‌ಯೋಜನೆಯನ್ನು ರೂಪಿಸಿ, ಬೂಮಿಯನ್ನು ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಿಸಲಾಗಿತ್ತು. ನಂತರದ ಸರ್ಕಾರಗಳ ಅವಧಿಯಲ್ಲಿ ಈ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗದಿರುವುದನ್ನು ಗಮನಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಅಂದು ಪ್ರತಿ ಮನೆಗೆ ನಿಗಧಿಪಡಿಸಲಾದ್ದ ರೂ.6.00ಲಕ್ಷ ಗಳ ವೆಚ್ಚದ ಮೊತ್ತವಲ್ಲದೇ ಹೆಚ್ಚುವರಿಯಾಗಿ 3.50ಲಕ್ಷ ರೂ.ಗಳನ್ನು ಪಾವತಿಸಬೇಕಾಗಿದೆ. ಇದು ಜನಸಾಮಾನ್ಯರಿಗೆ ಕಷ್ಟಕರವೆಂಬುದನ್ನು ಮನವರಿಕೆ ಮಾಡಿಕೊಂಡ ಮುಖ್ಯಮಂತ್ರಿಗಳು ಪ್ರತಿ ಫಲಾನುಭವಿಗಳಿಗೆ ರೂ.1.00ಲಕ್ಷ ಮೊತ್ತದ ವಿನಾಯಿತಿ ನೀಡಲು ಉದ್ದೇಶಿಸಿರುವುದಾಗಿ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಕೊಳಚೆ ಪ್ರದೇಶ ನಿರ್ಮೂಲನೆ ಯೋಜನೆಯಡಿ 2725ಮನೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ದೊರೆತಿದ್ದು ಮುಂದಿನ ತಿಂಗಳ ಮಾಸಾಂತ್ಯದಲ್ಲಿ 1545ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಬಸವ, ಅಂಬೇಡ್ಕರ್‌ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸರ್ಕಾರ ನಿಗಧಿಪಡಿಸಿದ್ದ ಸಹಾಯಧನವನ್ನು 1.20ಲಕ್ಷ ರೂ.ಗಳಿಂದ 3.50ಲಕ್ಷ ರೂ.ಗಳಿಗೆ ಹೆಚ್ಚಿಸಲು ಪ್ರಸಕ್ತ ಬಜೆಟ್‌ನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಅವರು ಮಾತನಾಢಿ, ಗೋವಿಂದಾಪುರದ ನೂತನ ಬಡಾವಣೆ ನಿವಾಸಿಗಳ ಅನುಕೂಲಕ್ಕಾಗಿ ಮುಂದಿನ ವಾರದಿಂದಲೇ ನಗರಸಾರಿಗೆ ಸಂಪರ್ಕ ಸೌಲಭ್ಯವನ್ನು ಕಲ್ಪಿಸಿಕೊಡಲು ಹಾಗೂ ಇಲ್ಲಿನ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನೂತನ ಶಾಲಾ ಕಟ್ಟಡವನ್ನು ನಿರ್ಮಿಸಿಕೊಡಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಈ ವಸತಿ ಬಡಾವಣೆಯಲ್ಲಿ ಉಳಿದ ಫಲಾನುಭವಿಗಳಿಗೂ ಮನೆಗಳನ್ನು ನಿರ್ಮಿಸಿಕೊಡಲು ಸಾಧ್ಯವಿರುವ ಎಲ್ಲಾ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು, ರಾಜ್ಯದ ಪ್ರತಿ ಕುಟುಂಬಗಳಿಗೂ ನೆಮ್ಮದಿಯ ಸೂರನ್ನು ಒದಗಿಸುವುದು ಸರ್ಕಾರದ ಜವಾಭ್ದಾರಿಯಾಗಿದ್ದು, ಅದನ್ನು ನಿರ್ವಹಿಸುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುವುದಾಗಿ ತಿಳಿಸಿದರು. ಮಾಜಿ ಮುಖ್ಯಮಂತ್ರಿಗಳಾಗಿದ್ದ ಪೂಜ್ಯ ದಿ.ಬಂಗಾರಪ್ಪನವರು ಕೂಡ ಬಡಜನರಿಗಾಗಿಯೇ ಆಶ್ರಯ ಯೋಜನೆಯನ್ನು ರೂಪಿಸಿ, ಲಕ್ಷಾಂತರ ಕುಟುಂಬಗಳಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿಕೊಟ್ಟಿರುವುದು, ಕೃಷಿಕರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ಸೌಲಭ್ಯ ಕಲ್ಪಿಸಿಕೊಟ್ಟಿದ್ದರ ಮುಂದುವರೆದ ಭಾಗವಾಗಿ ರಾಜ್ಯದ ಪ್ರತಿ ಮನೆಗೂ ಉಚಿತ ಬೆಳನ್ನು ಗೃಹಜ್ಯೋತಿ ಯೋಜನೆಯಡಿ ಒದಗಿಸಲಾಗುತ್ತಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ಒದಗಿಸಲು ಪ್ರತಿ ವರ್ಷ 22000ಕೋಟಿ. ಹಾಗೂ ಮನೆಗಳಿಗೆ ಉಚಿತ ವಿದ್ಯುತ್‌ಒದಗಿಸಲು ಸುಮಾರು 53000ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಅಲ್ಲದೇ ಈ ಗ್ಯಾರೆಂಟಿ ಯೋಜನೆಗಳೊಂದಿಗೆ ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸುಮಾರು 53000ಕೋಟಿ ರೂ.ಗಳನ್ನು ವ್ಯಯ ಮಾಡಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್ಎನ್.ಚನ್ನಬಸಪ್ಪ ಅವರು ಮಾತನಾಡಿ, ಗೋವಿಂದಾಪುರ ಆಶ್ರಯ ಬಡಾವಣೆ ಮಾದರಿ ಬಡಾವಣೆಯಾಗಿ ರೂಪುಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು. ಪ್ರಸ್ತುತ ಅಗತ್ಯವಿರುವ ಶಾಶ್ವತ ವಿದ್ಯುತ್‌ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಸರ್ಕಾರದಿಂದ ಅಗತ್ಯ ಅನುದಾನ ದೊರೆಯಬೇಕು ಎಂದರು.
• ರಾಜ್ಯದಲ್ಲಿ ಪ್ರಧಾನ ಮಂತ್ರಿ ಆವಾಸ್‌ಯೋಜನೆಯಡಿ 5ಲಲಕ್ಷ ಮನೆಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಈಗಾಗಲೇ 2.75ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಉಳಿದ 2.25ಲಕ್ಷ ಮನೆಗಳ ನಿರ್ಮಾಣ ಕಾರ್ಯಪ್ರಗತಿಯಲ್ಲಿದೆ. ರಾಜ್ಯದ ಪ್ರತಿ ವ್ಯಕ್ತಿಯ ಆರೋಗ್ಯ, ಶಿಕ್ಷಣ ಮತ್ತು ವಸತಿ ಸೌಲಭ್ಯ ಕಲ್ಪಿಸಿಕೊಟ್ಟಲ್ಲಿ ಜನಸಾಮಾನ್ಯರ ಜೀವನ ಮಟ್ಟ ಸುಧಾರಣೆಯಾಗಲಿದೆ. ಡಿ.ಎಸ್ ಅರುಣ್‌, ವಿದಾನ ಪರಿಷತ್‌ಸದಸ್ಯ.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ಸದಸ್ಯೆ ಶ್ರೀಮತಿ ಬಲ್ಕಿಶ್‌ಬಾನು, ಡಾ|| ಧನಂಜಯ ಸರ್ಜಿ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಜಿ.ಪಲ್ಲವಿ, ರಾಜ್ಯ ಬೋವಿ ನಿಗಮದ ಅಧ್ಯಕ್ಷ ರವಿಕುಮಾರ್‌, ಜಿಲ್ಲಾಧಿಕಾರಿ ಗುರುದತ್ತಹೆಗಡೆ, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್‌, ರಾಜೀವಗಾಂಧಿ ವಸತಿ ನಿಗಮದ ವ್ಯವಸ್ಥಾಪಕಿ ಶ್ರೀಮತಿ ಸುಶೀಲಮ್ಮ, ಮಹಾನಗರಪಾಲಿಕೆ ಆಯಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್‌ಸೇರಿದಂತೆ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.

ಇದೇ ಕಾರ್ಯಕ್ರಮದಲ್ಲಿ 652ಫಲಾನುಭವಿಗಳಿಗೆ ಲಾಟರಿ ಮೂಲಕ ಮನೆಗಳನ್ನು ಹಂಚಿಕೆ ಮಾಡಲಾಯಿತು.

Breaking News ಅಂಡರ್ ಪಾಸ್ ಇಲ್ಲದೇ ಬೈಪಾಸ್ ನಲ್ಲಿ ಪ್ರಾಯೋಗಿಕವಾಹನ ಸಂಚಾರ. ಭೀಕರ ಅಪಘಾತ. ಸ್ಥಳೀಯರ ಆಕ್ರೋಶ

0

Breaking News ಶಿವಮೊಗ್ಗ- ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರು ತಲುಪುವ ರಾಷ್ಟ್ರೀಯ ಹೆದ್ದಾರಿಯು ಹೊಸದಾಗಿ ನಿರ್ಮಾಣವಾಗುತ್ತಿದೆ. ಹೊಳೆಹೊನ್ನೂರು ಹೊಸ ಸೇತುವೆ ಮೂಲಕ ಬೈಪಾಸ್ ರಸ್ತೆ ಯಲ್ಲಿ ನಿನ್ನೆ ಸಂಜೆಯಿಂದ ಪ್ರಾಯೋಗಿಕವಾಗಿ ಸಂಚಾರಕ್ಕೆ ಬಿಡಲಾಗಿತ್ತು. ಆದರೆ, ಇಂದು ಬೆಳಗ್ಗೆ ಸ್ಥಳೀಯ ನಿವಾಸಿ ಪುಟ್ಟಪ್ಪ (52) ಕ್ಯಾಂಟರ್ ವಾಹನದ ಢಿಕ್ಕಿಗೆ ಬಲಿಯಾದ ದಾರುಣ ಘಟನೆ ವರದಿಯಾಗಿದೆ.

ಈ ಸಂಬಂಧ ಹೊಳೆಹೊನ್ನೂರು, ಎಮ್ಮೆಹಟ್ಟಿ, ಅಗಸನಹಳ್ಳಿ ಸೇರಿದಂತೆ ಸ್ಥಳೀಯರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಅಂಡರ್‌ಪಾಸ್ ನಿರ್ಮಾಣದ ಸ್ಥಳೀಯರ ಒತ್ತಾಯವನ್ನು ನಿರ್ಲಕ್ಷಿಸಿದ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಮತ್ತು ಸ್ಥಳೀಯ ಶಾಸಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಂಗಳವಾರ ಬೆಳಿಗ್ಗೆ, ಟಿವಿಎಸ್ ಎಕ್ಸೆಲ್ ಬೈಕ್‌ನಲ್ಲಿ ಅಗಸನಹಳ್ಳಿಯಿಂದ ಹೊಳೆಹೊನ್ನೂರಿಗೆ ಬರುತ್ತಿದ್ದ ಪುಟ್ಟಪ್ಪ ಎಂಬವರನ್ನು ಕ್ಯಾಂಟರ್ ಡಿಕ್ಕಿಹೊಡೆದು, ಸ್ಥಳದಲ್ಲೇ ಸಾವಿಗೀಡು ಮಾಡಿದೆ.

ಈ ದುರಂತದ ಬಳಿಕ ಸ್ಥಳೀಯರು ಸಾರ್ವಜನಿಕ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದು, ನಮ್ಮ ಮನವಿಗೆ ಸ್ಪಂದಿಸದೆ ಪ್ರಾಯೋಗಿಕವಾಗಿ ಬೈಪಾಸ್ ರಸ್ತೆ ತೆರೆಯುವುದೇ ಈ ಅಪಘಾತದ ಕಾರಣ!ಎಂದು ಆರೋಪಿಸಿದ್ದಾರೆ. ಇದುವರೆಗೆ ಯಾವುದೇ ಅಧಿಕಾರಿಯೂ ಸ್ಥಳಕ್ಕೆ ಆಗಮಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Breaking News ಅಂಡರ್‌ಪಾಸ್ ನಿರ್ಮಾಣದ ಬೇಡಿಕೆ ನಿರ್ಲಕ್ಷ್ಯವೇ ಸಾವಿಗೆ ಕಾರಣ?
ಸ್ಥಳೀಯರು ಈಗಾಗಲೇ ಸಂಸದ, ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿ ಎಮ್ಮೆಹಟ್ಟಿ ಮಾರ್ಗದಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ ಒತ್ತಾಯಿಸಿದ್ದರು ಆದರೆ, ಅದನ್ನು ನಿರ್ಲಕ್ಷಿಸಿ ಪ್ರಾಯೋಗಿಕವಾಗಿ ಬೈಪಾಸ್ ರಸ್ತೆ ಸಂಚಾರಕ್ಕೆ ಅವಕಾಶ ನೀಡಿದ ಪರಿಣಾಮ ಈ ದುರಂತ ಸಂಭವಿಸಿದೆ
ಎಂದು ಆರೋಪಿಸಿದ್ದಾರೆ.

ಪ್ರತಿಭಟನೆಯು ತೀವ್ರ ರೂಪ ಪಡೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಕ್ರಮಗಳನ್ನೂ ಕೈಗೊಳ್ಳುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

Hemant CEO ವಿದ್ಯಾರ್ಥಿಗಳೇ ಪರೀಕ್ಷೆಯನ್ನು ಪರಿ ಶ್ರಮದೊಂದಿಗೆ ಎದುರಿಸು.ಕಾಪಿ ಮಾಡಬೇಡಿ- ಎನ್.ಹೇಮಂತ್

0

Hemant CEO ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದು ಅದನ್ನು ತಮ್ಮ ಶಿಕ್ಷಕರಿಗೆ ಕೊಡುಗೆಯಾಗಿ ನೀಡಬೇಕೆಂದು ಜಿ.ಪಂ. ಸಿಇಓ ಹೇಮಂತ್ ಕರೆ ನೀಡಿದರು.
ನಗರದ ದುರ್ಗಿಗುಡಿ ಪ್ರೌಢಶಾಲೆಯಲ್ಲಿನ ಸಭಾಂಗಣದಲ್ಲಿ ಸೋಮವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಿದ್ದತೆ ಕುರಿತು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಜೀವನದ ಅತಿ ಮುಖ್ಯವಾದ ಘಟ್ಟ. ಯಾಕೆಂದರೆ ಎಸ್‌ಎಸ್‌ಎಲ್‌ಸಿ ಯಲ್ಲಿ ಉತೀರ್ಣರಾದ ಹೆಚ್ಚಿನ ವಿದ್ಯಾಭ್ಯಾಸ ಸಾಧ್ಯವಾಗುತ್ತದೆ. ದೇಶ ಅಭಿವೃದ್ಧಿಯಾದಂತೆ ವಿದ್ಯಾರ್ಹತೆಯು ಹೆಚ್ಚುತ್ತಾ ಹೋಗುತ್ತದೆ ಆ ನಿಟ್ಟಿನಲ್ಲಿ ಎಸ್‌ಎಸ್‌ಎಲ್‌ಸಿ ಯಲ್ಲಿ ಎಲ್ಲರೂ ಉತ್ತೀರ್ಣರಾಗಬೇಕು. ಆಗ ಮಾತ್ರ ಮುಂದಿನ ವಿದ್ಯಾಭ್ಯಾಸಕ್ಕೆ ಹೋಗಲು ಸಾಧ್ಯ ಎಂದರು.
ಜೀವನದಲ್ಲಿ ಎಲ್ಲರಿಗೂ ಶಿಕ್ಷಣ ಅತಿ ಮುಖ್ಯ. ಪೋಷಕರು ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಿಮ್ಮ ಮಕ್ಕಳು ಮುಂದಿನ ದಿನಗಳಲ್ಲಿ ಉನ್ನತ ಮಟ್ಟಕ್ಕೆ ಹೋಗಬೇಕಾದರೆ ಅದಕ್ಕೆ ಶಿಕ್ಷಣ ಮಾನದಂಡವಾಗಿರುತ್ತದೆ. ಹಾಗಾಗಿ ಪೋಷಕರು ಮಕ್ಕಳನ್ನು ಶಾಲೆಯಿಂದ ಬಿಡಿಸುವ ಆಲೋಚನೆಯನ್ನು ತೆಗೆದು ಹಾಕಬೇಕು. ಮಕ್ಕಳಿಗೆ ಸದಾ ಪ್ರೋತ್ಸಾಹಿಸುತ್ತಾ ಅವರ ಸಾಧನೆಗೆ ಬೆನ್ನು ತಟ್ಟಬೇಕು ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಇನ್ನೂ 30 ದಿನ ಬಾಕಿ ಇದೆ. ವಿದ್ಯಾರ್ಥಿಗಳು ಶಿಕ್ಷಕರು ಹೇಳಿಕೊಟ್ಟಿರುವ ಪಾಠಗಳ ಮನನ ಮಾಡಿಕೊಳ್ಳಬೇಕು. ಪರೀಕ್ಷೆ ಹತ್ತಿರ ಇರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ತಪ್ಪಿಸದೆ ಶಿಕ್ಷಕರ ಬಳಿ ಪರೀಕ್ಷೆಯ ಕುರಿತಾಗಿ ಚರ್ಚೆ ನಡೆಸಬೇಕು. ಈ ನಿಟ್ಟಿನಲ್ಲಿ 30 ದಿನಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಬಾರಿ ಕಟ್ಟನಿಟ್ಟಾಗಿ ಪರೀಕ್ಷೆ ನಡೆಯಲಿದ್ದು, ಕಾಪಿ ಮಾಡಲು ಯಾವುದೇ ರೀತಿಯ ಅವಕಾಶ ಇರುವುದಿಲ್ಲ. ಹಾಗಾಗಿ ಎಲ್ಲರೂ ತಮ್ಮ ಪರಿಶ್ರಮದಿಂದ ಪರೀಕ್ಷೆಯನ್ನು ಎದುರಿಸಲು ಸಿದ್ದರಾಗಬೇಕು ಎಂದರು.
Hemant CEO ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿಯಾದ ರಮೇಶ್ ಮಾತನಾಡಿ, ಸರ್ಕಾರಿ ಶಾಲೆ ಮಕ್ಕಳೇ ಬಹುತೇಕ ಈ ಸಮಾಜ ಹಾಗೂ ದೇಶವನ್ನು ಆಳುವವರು. ಹಾಗಾಗಿ ಪೋಷಕರು ಮಕ್ಕಳ ಜೊತೆಗೆ ಸದಾ ಗಟ್ಟಿಯಾಗಿ ನಿಲ್ಲಬೇಕು. ಮನೆಯಲ್ಲಿ ಓದುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಮಕ್ಕಳ ವಿದ್ಯಾಭ್ಯಾಸ ಮುಗಿಯುವವರೆಗೂ ನಿಮ್ಮ ಜವಬ್ದಾರಿಯನ್ನು ಮರೆಯಬಾರದು. ಪೋಷಕರು ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಬೇಕು. ನಿಮ್ಮಿಂದ ಅಸಾಧ್ಯವೆಂಬುದು ಇಲ್ಲ ಎಂಬ ವಿಶ್ವಾಸ ಮೂಡಿಸಬೇಕು ಎಂದರು
ಶಿಕ್ಷಣ, ವಿದ್ಯೆ, ನಡತೆ ಯಾರ ಬಳಿ ಇರುತ್ತದೆಯೋ ಆತ ಉನ್ನತ ಮಟ್ಟಕ್ಕೆ ತಲುಪುತ್ತಾರೆ. ಸೂರ್ಯ ಚಂದ್ರ ಹೇಗೆ ಹಗಲು ಇರುಳು ಎನ್ನದೆ ಕೆಲಸ ಮಾಡುತ್ತಾರೊ ಹಾಗೆ ವಿದ್ಯಾರ್ಥಿಗಳು ಓದಿನಲ್ಲಿ ಸಕ್ರಿಯವಾಗಿರಬೇಕು. ವಿದ್ಯೆ ಕಲಿಯುವ ಅವಕಾಶ ಮನುಷ್ಯ ಮಾತ್ರ ದೊರಕಿರುವುದು ಹಾಗಾಗಿ ನಮ್ಮಲ್ಲಿರುವ ಬುದ್ದಿ ಶಕ್ತಿ ಹಾಗೂ ಜ್ಞಾಪಕ ಶಕ್ತಿ ಬಳಸಿಕೊಂಡು ಮುಂದೆ ಬರಬೇಕು ಎಂದರು.
ಈ ಜಗತ್ತಿನಲ್ಲಿ ಸೋಮಾರಿಗಳೇ ನಿಜವಾದ ಬಡವರು. ಯಾರು ಸಮಯಕ್ಕೆ ಗೌರವ ಕೊಡುವುದಿಲ್ಲವೊ ಅವರು ಜೀವನದಲ್ಲಿ ಹಿಂದೆ ಉಳಿಯುತ್ತಾರೆ. ಸಣ್ಣ ಗುರಿಯನ್ನು ಇಟ್ಟುಕೊಳ್ಳುವುದು ಅಪರಾಧ ಎಂದು ಎಪಿಜಿ ಅಬ್ದುಲ್ ಕಲಾಂ ಹೇಳಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮಾತ್ರ ಮೇಲೆ ಬರಲು ಸಾಧ್ಯ ಎಂದ ಅವರು ವಿದ್ಯಾರ್ಥಿಗಳು ಸರಿಯಾದ ಉದ್ದೇಶ ಮತ್ತು ಗುರಿಯನ್ನು ಹೊಂದಿರಬೇಕು. ಹಾಗೂ ದೊಡ್ಡದಾದ ಗುರಿಯನ್ನು ಸಾಧಿಸಬೇಕು ಎಂದರು.
ಸಭೆಯಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಮೋಹನ್, ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.

Directorate of Women And Child Development Department ಮಹಿಳೆಯರ ಆರ್ಥಿಕ ಪ್ರಗತಿ‌ ಆರ್ ಬಿ‌ ಐ‌‌ ಉದ್ದೇಶ- ಬಿ.ಚಂದ್ರಶೇಖರ್

0

Directorate of Women And Child Development Department ಮಹಿಳಾ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯ. ಈ ದಿಸೆಯಲ್ಲಿ ಆರ್‌ಬಿಐ ಮಹಿಳೆಯರನ್ನು ಸಶಕ್ತೀಕರಣಗೊಳಿಸಲು ಆರ್ಥಿಕ ಸಾಕ್ಷರತೆ-ಮಹಿಳೆಯರ ಅಭಿವೃದ್ದಿ ಕಾರ್ಯಕ್ರಮವನ್ನು ದೇಶಾದ್ಯಂತ ಆಯೋಜಿಸಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಬಿ.ಚಂದ್ರಶೇಖರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ದಿ ಯೋಜನೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಭಾರತೀಯ ರಿಸರ್ವ್ ಬ್ಯಾಂಕ್ ಬೆಂಗಳೂರು, ಲೀಡ್ ಬ್ಯಾಂಕ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಡಿಎಆರ್ ಸಭಾ ಭವನದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಆಯೋಜಿಸಿದ್ದ ಮಹಿಳೆಯರಲ್ಲಿ ಆರ್ಥಿಕ ಸಾಕ್ಷರತೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಅಭಿವೃದ್ದಿ ಹೊಂದಬೇಕು ಎಂಬುದು ಆರ್‌ಬಿಐ ಮುಖ್ಯ ಉದ್ದೇಶವಾಗಿದ್ದು, ಅದಕ್ಕಾಗಿ ಈ ವರ್ಷ ಹಣಕಾಸು ಯೋಜನೆ ಕುರಿತು ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ. ಇದು ಫೆ.24 ರಿಂದ 28 ವರೆಗೆ ನಡೆಯಲಿದ್ದು, ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಸಹಕಾರ ಕ್ಷೇತ್ರದವರೆಗೆ ಆಯೋಜಿಸಲಾಗಿದೆ ಎಂದರು.
ಮನೆ ನಿರ್ವಹಣೆ ಮಾಡುವವರು ಮಹಿಳೆಯರೇ ಆಗಿರುವುದರಿಂದ ಅವರಿಗೆ ಫೈನ್ಶಾಯಲ್ ಪ್ಲಾನಿಂಗ್ ಬಹಳ ಮುಖ್ಯವಾಗಿದೆ. ಸಂಬಳದಲ್ಲಿ ಉಳಿತಾಯ ಮಾಡುವುದನ್ನು ಕಲಿಯಬೇಕು. ನಿಮ್ಮ ಆದಾಯವನ್ನು ಅನಾವಶ್ಯಕವಾಗಿ ಖರ್ಚು ಮಾಡಿದೆ ಉಳಿತಾಯ ಮಾಡಬೇಕು. ಇಲ್ಲದಿದ್ದರೆ ಜೀವನದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಅದರಿಂದ ನಿಮ್ಮ ಹಾಗೂ ಕುಟುಂಬದ ಬೆಳವಣಿಗಗೆ ತೊಂದರೆ ಉಂಟಾಗುತ್ತದೆ. ಅವಶ್ಯಕತೆ ಇದ್ದಲ್ಲಿ ಮಾತ್ರ ಖರ್ಚು ಮಾಡಿ ಇನ್ನುಳಿದ ಹಣವನ್ನು ಬ್ಯಾಂಕ್‌ನಲ್ಲಿ ಉಳಿತಾಯ ಮಾಡಬೇಕು ಎಂದರು.
ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಬಿ.ಆರ್. ಶಂಕರಪ್ಪ ಮಾತನಾಡಿ, ಮಹಿಳೆಯರಲ್ಲಿ ಮಾನಸಿಕ ಸ್ಥೆöÊರ್ಯ ಮೂಡಬೇಕು. ಮಹಿಳೆಯರಿಗೆ ಆಯಸ್ಸು ಹೆಚ್ಚು, ಪುರುಷರಿಗೆ ಆದಾಯ ಹೆಚ್ಚು ಇವೆರಡನ್ನು ಸಮತೋಲನಗೊಳಿಸಲು ಆರ್‌ಬಿಐ ಈ ಯೋಜನೆಯಡಿಯಲ್ಲಿ ಕಾರ್ಯಕ್ರಮವನ್ನು ರೂಪಿಸಿದೆ ಎಂದರು.
Directorate of Women And Child Development Department ಹೆಣ್ಣು ಕುಟುಂಬದ ಕಣ್ಣು. ಕುಟಂಬದಲ್ಲಿನ ಆಗು-ಹೋಗುಗಳು, ಬೇಕು-ಬೇಡಗಳನ್ನು ಹೆಣ್ಣು ಮಕ್ಕಳೇ ಪೂರೈಸೋದು. ಆ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಮಹಿಳೆಯರಿಗೆ ಕೊಟ್ಟಿದೆ. ಅದರ ಜೊತೆಗೆ ಸಾಲದ ಸವಲತ್ತನ್ನು ಕೂಡ ನೀಡುತ್ತಿದೆ. ಉಳಿತಾಯ, ಹೂಡಿಕೆ ಇವೆಲ್ಲವನ್ನು ಜಾಗರೂಕತೆಯಿಂದ ಮಹಿಳೆಯರು ನಿರ್ವಹಿಸಬೇಕು. ಮಹಿಳೆಯರು ಆರ್ಥಿಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳವಾಗ ಕುಟುಂಬದ ಅನಿಸಿಕೆಯನ್ನು ಪಡೆಯಬೇಕು. ಆದಷ್ಟು ಉಳಿತಾಯವನ್ನು ಬ್ಯಾಂಕ್‌ನಲ್ಲೆ ಮಾಡಬೇಕು. ಬ್ಯಾಂಕ್‌ನ ಜೊತೆಗೆ ವ್ಯವಹಾರ ಶುದ್ಧವಾಗಿರಬೇಕು. ಸಾಲವನ್ನು ಪ್ರಾಮಾಣಿಕವಾಗಿ ಕಟ್ಟಬೇಕು ಎಂದರು.
ರೂರಲ್ ಸೆಲ್ಫ್ ಎಂಪ್ಲಾಯಿಮೆAಟ್ ಟ್ರೆöÊನಿಂಗ್ ಇನ್ಸಿ÷್ಟಟ್ಯೂಟ್‌ನ ಕಾಂತೇಶ್ ಮಾತನಾಡಿ, ಮೊದಲು ನಾವು ಉಳಿತಾಯ ಮಾಡುವುದನ್ನು ಕಲಿಯಬೇಕು ನಂತರ ಅದನ್ನು ಹೂಡಿಕೆ ಮಾಡಬೇಕು. ದುಡಿಮೆ ಇಲ್ಲದಿದ್ದರೆ ಹಣಕಾಸಿನ ಸಮಸ್ಯೆಯ ಉಂಟಾಗುತ್ತದೆ. ಅದಕ್ಕೆ ಪ್ರತಿಯೊಬ್ಬರು ದುಡಿಮೆ ಮಾಡಬೇಕು. ಯಾವುದೇ ಉದ್ಯೋಗ ಸಿಗದಿದ್ದರೆ ಸ್ವಂತ ಉದ್ಯೋಗವನ್ನು ಮಾಡಲು ಯೋಚಿಸಬೇಕು ಎಂದರು.
ಇಂದಿನ ವಿದ್ಯಮಾನದಲ್ಲಿ ಸ್ವಂತ ಉದ್ಯೋಗವೇ ಅತ್ಯುತ್ತಮ ಹಾದಿ. ಹಾಗಾಗಿ ಶಿಕ್ಷಣದ ಜೊತೆಗೆ ಕೌಶಲ್ಯವು ಇರಬೇಕು. ಆ ಉದ್ದೇಶದಿಂದ ಕೇಂದ್ರ ಸರ್ಕಾರವು ಗ್ರಾಮೀಣ ಕೌಶಲ್ಯ ತರಬೇತಿ ಸಂಸ್ಥೆಯಡಿಯಲ್ಲಿ ಯೋಜನೆ ರೂಪಿಸಿದೆ. ಕಡಿಮೆ ಅವಧಿಯಲ್ಲಿ ತರಬೇತಿ ನೀಡಲಿದ್ದು, ರೆಸಿಡೆನ್ಸಿ ಮಾದರಿಯಲ್ಲಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಸಿ.ಗಂಗಾಬಾಯಿ, ಸಹಾಯಕ ಲೀಡ್ ಬ್ಯಾಂಕ್ ಮ್ಯಾನೇಜರ್ ಬಿ.ಹೊನ್ನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಲೀಡ್ ಬ್ಯಾಂಕ್‌ನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Lok Adalat ಮಾರ್ಚ್ 8. ಜಿಲ್ಲೆಯಲ್ಲಿನ ಲೋಕ ಅದಾಲತ್ ಬಗ್ಗೆ ‌ಪೂರ್ವಭಾವಿ ಸಭೆ

0

Lok Adalat ಮಾರ್ಚ್ 08ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ನಡೆಸಲು ಉದ್ದೇಶಿಸಿರುವ ಲೋಕ ಅದಾಲತ್ ನ ಪೂರ್ವಸಿದ್ಧತೆಗಳು ಹಾಗೂ ಈಗಾಗಲೇ ನ್ಯಾಯಾಲಯದಲ್ಲಿ ದಾಖಲಾಗಿದ್ದು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲು ಸಾಧ್ಯವಾಗಬಹುದಾದ ಮೊಕದ್ದಮೆಗಳ ಕುರಿತು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾ. ಮಂಜುನಾಥ ನಾಯ್ಕ್ ಅವರು ನ್ಯಾಯಾಧೀಶರು, ಅಭಿಯೋಜಕರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಸಂತೋಷ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಸೇರಿದಂತೆ ವಿವಿಧ ವಿಭಾಗಗಳ ನ್ಯಾಯಾಧೀಶರು ಉಪಸ್ಥಿತರಿದ್ದರು.

Rangayana shimoga ವರ್ತಮಾನದ ತಲ್ಲಣಗಳನ್ನ ಕಟ್ಟಿಕೊಡುವ ನಾಟಕ”ಮೈ ಫ್ಯಾಮಿಲಿ” -ಡಾ.ಮೈತ್ರೇಯಿ ಆದಿತ್ಯ ಪ್ರಸಾದ್.

0

Rangayana shimoga ಇಂತಹದೊಂದು ನಾಟಕ ನಮ್ಮ ಮಕ್ಕಳಿಂದ ಒಡಗೂಡಿ ಪೋಷಕರವರೆಗೂ ಈಗಿನ ಕಾಲಕ್ಕೆ ಬೇಕಾಗಿತ್ತು ಎಂದೆನಿಸಿದ ನಾಟಕವೇ ‘ ಮೈ ಫ್ಯಾಮಿಲಿ’. ಎಲ್ಲರೂ ನೋಡಲೇಬೇಕಾದ ನಾಟಕ ಏಕೆಂದರೆ ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಮೊಬೈಲ್ ಇತ್ಯಾದಿಗಳ ಲೋಕದಲ್ಲಿ ಬದುಕುವಂತೆ ಆಗಿದೆ. ಎಲ್ಲರೂ ಅದನ್ನೇ ತಮ್ಮ ಜಗತ್ತೆಂದೂ ಕಳೆದು ಹೋಗುತ್ತಿರುವ ಈ ಹೊತ್ತಿನಲ್ಲಿ, ಬದುಕಿನ ನಿಜವಾದ ಅರ್ಥ ಕಳೆದು ಹೋಗುವುದರಲ್ಲಿಲ್ಲ. ಬದಲಿಗೆ ಸಂತಸದಿಂದ ಬದುಕುವುದರಲ್ಲಿದೆ ಎಂದು ತಿಳಿಸಿದ ನಾಟಕವಾಗಿದೆ.
ಗಣೇಶ್ ಮಂದರ್ತಿಯವರು ನಿರ್ದೇಶಸಿದ ಮೈಸೂರು ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸಿದ ನಾಟಕವೇ ಮೈ ಫ್ಯಾಮಿಲಿ. ಪ್ರತಿಯೊಂದು ಕುಟುಂಬ ತಮ್ಮ ಮಕ್ಕಳೊಂದಿಗೆ ಕುಳಿತು ನೋಡಬೇಕಾದ ನಾಟಕವಾಗಿದೆ. ಏಕೆಂದರೆ ಈ ಕಥನವು ಆಧುನಿಕ ತಂತ್ರಜ್ಞಾನ ಮತ್ತು ವೇಗದ ನಗರ ನಾಗರೀಕರಣವು ಉಂಟುಮಾಡುವ ಸಾಂಸ್ಕೃತಿಕ ಪಲ್ಲಟಗಳು ಮಕ್ಕಳು, ಕುಟುಂಬ, ಸಮುದಾಯ ಮತ್ತು ಸಮಾಜದ ಸಂಬಂಧಗಳ ಮೇಲೆ ಬೀರುವ ಪರಿಣಾಮಗಳನ್ನು ಹುಡುಕುತ್ತಲೇ ಬಿಡುಗಡೆಯ ದಾರಿಗಳನ್ನು ಶೋಧಿಸುವ ಕಾರ್ಯ ಮಾಡಿದೆ. ಇಂದಿನ ದಿನಗಳಲ್ಲಿ ದುಡಿಮೆಯ ಹಿಂದೆ ಬಿದ್ದು ಅಂದರೆ ಹಣ ಸಂಪಾದನೆಯ ದಾರಿಯಲ್ಲಿಯೇ ಪ್ರಪಂಚ ಮರೆತು ಸಾಗಿ ಮಕ್ಕಳನ್ನು ಒಂಥರಾ ಅನಾಥರನ್ನಾಗಿ ಮಾಡುವ ಪೋಷಕರು ನಿಜಕ್ಕೂ ನೋಡಲೇಬೇಕಾದ ನಾಟಕ ಇದು. ಏಕೆಂದರೆ ಇಂದಿನ ಶಿಕ್ಷಣ ಹಣ ಗಳಿಕೆಗಾಗಿ ಅಷ್ಟೇ ಬಿಟ್ಟರೆ ಅದು ವಿವೇಕ ಕಲಿಸುತ್ತಿಲ್ಲ ಎಂಬುದು ನಾನೊಬ್ಬಳು ಉಪನ್ಯಾಸಕಿಯಾಗಿ ನನಗಾದ ಅನುಭವ. ಹಿಂದೆಲ್ಲಾ ಶಿಕ್ಷಣ ಎಂದರೆ ಶಿಸ್ತು, ಶ್ರದ್ಧೆ, ಸಂಸ್ಕಾರ, ಪ್ರಾಮಾಣಿಕತೆ, ಮೌಲ್ಯ ಇತ್ಯಾದಿಯಾಗಿ ಭಾವಿಸುತ್ತಿದ್ದ ನಾವು ಇಂದು ಶಿಕ್ಷಣ ಎಂದರೆ ಹಣ ಗಳಿಸುವ ಕೋರ್ಸ್ ಗಳನ್ನು ಓದಿ ಅದರಿಂದ ಹಣ ಸಂಪಾದಿಸುವುದು ಎನ್ನುವುದಕ್ಕಷ್ಟೇ ಸೀಮಿತವಾಗಿದೆ.

Rangayana shimoga ಈ ನಾಟಕದಲ್ಲಿನ ಎಲ್ಲ ಪಾತ್ರಗಳು ನಮ್ಮ ಹತ್ತಿರಕ್ಕೆ ಬಂದು ನಮ್ಮನ್ನಾವರಿಸಿಬಿಡುತ್ತವೆ. ಸ್ಯಾಮ್ ಸಾನ್ವಿಯರ ಬಾಲ್ಯ ಕೇವಲ ಮೊಬೈಲ್ ವಿಡಿಯೋ ಗೇಮ್ ಗಳ ಜೊತೆಗೆ ಕಳೆಯುವುದು. ತಂದೆ ಭಾರ್ಗವ್ ಕುಟುಂಬ ಚೆನ್ನಾಗಿರಬೇಕೆಂದೇ ಸದಾ ಆಫೀಸ್ ಆಫೀಸ್ ಎಂದು ಹೋಗುವುದು, ತಾಯಿ ಸೌಮ್ಯ ತನ್ನ ಆಫೀಸ್ ಹಾಗೂ ಪಾರ್ಟಿ ಇವುಗಳಲ್ಲಿಯೇ ಕಾಲ ಕಳೆಯುವುದು, ಮನೆ ಕೆಲಸದಾಕೆ ಸಿರಿ ಮಾತ್ರ ತನ್ನ ಸಮೃದ್ಧ ಬಾಲ್ಯ ಅನುಭವಿಸಿ ಅವುಗಳ ವರ್ಣನೆ ಮಾಡುವಾಗ ಮಕ್ಕಳಿಗೆ ಅಚ್ಚರಿಯೆನಿಸುವುದು, ಹಳ್ಳಿಯ ವಾತಾವರಣದಲ್ಲಿ ಬೆಳೆದ ಆಕೆಯ ಆಟ, ಪಾಠ, ಜಾತ್ರೆ, ನಾಟಕ ಇವುಗಳ ವಿವರಿಸುವಾಗ ಸಿರಿಯ ತಲ್ಲೀನತೆ, ನಂತರ ಸ್ಯಾಮ್ ಗೆ ಹಿಡಿಯುವ ಮೊಬೈಲ್ ಗೀಳು, ಅದರಿಂದ ಅವನು ಅನುಭವಿಸುವ ಯಾತನೆ, ಅವನಿಗೆ ಕನಸೆಂದರೆ ಘೋರ ಎನಿಸುವುದು, ಅದರ ಸ್ವರೂಪ, ಸತಿಪತಿಯರ ಕಲಹ ಎಲ್ಲವನ್ನು ನಮ್ಮ ಕಣ್ಣೆದುರಿಗೆ ತಂದ ರೀತಿ ಇದೆಯಲ್ಲ ಅದು ಬಹಳ ಚಂದವಿತ್ತು. ಸಂಬಂಧಗಳ ಪ್ರಾಮುಖ್ಯತೆ, ಹಣದ ಹಿಂದೆ ಹೋದರೆ ಹಾಳಾಗುವ ಬಾಳು. ಸುಖವ ಅರಸಿ ಹೋಗಿ ಎಲ್ಲವನ್ನು ಕಳೆದುಕೊಳ್ಳುವ ರೀತಿ ಇವೆಲ್ಲವೂ ಇಂದಿಗೆ ಪ್ರಸ್ತುತ.

ಇಲ್ಲಿ ಬರುವ ನಾಟಕದೊಳಗೊಂದು ನಾಟಕ, ರಾಗಿ ಬೋರನಕಥೆ, ಹಳ್ಳಿಯ ಬದುಕಿನ ಶೈಲಿ ಎಲ್ಲವನ್ನ ಕಟ್ಟಿಕೊಟ್ಟ ರೀತಿ ಅದ್ಭುತವಾಗಿತ್ತು. ಗೊಂಬೆಗಳ ದೃಶ್ಯಗಳಂತೂ ಒಳ್ಳೆಯ ರೂಪಕವಾಗಿ ನಾಟಕ ನೋಡುಗನ ಆಕರ್ಷಣೆ ಎಂದರೆ ಅದೇ ಎಂದಂತೆ ಆಗಿತ್ತು. ಅದರ ರೋಚಕತೆ ಮಾತುಗಳು ಮಾತ್ರ ತಲುಪಲು ಸಾಧ್ಯವಾಗದ ಸಂಗತಿಗಳನ್ನು ದೃಶ್ಯ ರೂಪ ಗಳಿಂದ ಅದರ ಭಾವನೆ ಸಹೃದಯ ಪ್ರೇಕ್ಷಕರ ಮನದಾಳಕ್ಕೆ ಉಳಿಯುವಂತೆ ಮಾಡುವಂತೆ ಆಯಿತು. ಮಕ್ಕಳಾಗಲಿ ದೊಡ್ಡವರಾಗಲಿ ತಮ್ಮ ಗಮನವನ್ನು ಸ್ವಲ್ಪವೂ ಬೇರೆಡೆಗೆ ಹೋಗದಂತೆ ಈ ನಾಟಕ ಹಿಡಿದಿಟ್ಟಿತ್ತು. ಆದ್ದರಿಂದಲೇ ಇದೊಂದು ಯಶಸ್ವಿ ರಂಗ ಪ್ರಯೋಗವಾಗಿದೆ. ಕುವೆಂಪುರವರ ಗೀತೆಯಾದ-“ಮಕ್ಕಳ ಸಂಘದೊಳೆಚ್ಚರಗೊಳ್ಳಲಿ ಆನಂದದ ಆ ದಿವ್ಯ ಶಿಶು…. ” ಎನ್ನುವುದನ್ನು ಸಂದರ್ಭಕ್ಕೆ ತಕ್ಕಂತೆ ಈ ನಾಟಕದಲ್ಲಿ ಬಳಸಿಕೊಳ್ಳಲಾಗಿದೆ. ನಿರ್ದೇಶಕರಾದ ಗಣೇಶ್ ಮಂದರ್ತಿಯವರು ಯಶಸ್ವಿಯಾಗಿ ಎಲ್ಲರ ಮನಗೆದ್ದಿದ್ದಾರೆ. ಅವರ ಕಲಾತ್ಮಕ ಆಲೋಚನೆ ನೋಡುಗನನ್ನು ಸೆಳೆದು ಚಿಂತನೆಗೆ ಒರೆಹಚ್ಚುವಂತಾಗಿದೆ. ಪ್ರತಿಯೊಬ್ಬನು ಸಹ ಒಂದಲ್ಲ ಒಂದು ರೀತಿಯಲ್ಲಿ ಕುಟುಂಬಕ್ಕೆ ಮಕ್ಕಳಿಗೆ ಮಹತ್ವ ಕೊಡದೆ ದುಡಿಮೆಯೇ ಬದುಕು ಎಂದು ಜೀವನ ಸಾಗಿಸುತ್ತಿರುವ ಈ ಹೊತ್ತಿನಲ್ಲಿ ಬದುಕು ಹೇಗೆ ಮುಖ್ಯವಾಗುತ್ತದೆ ಎಂಬುದನ್ನು ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಸ್ಕ್ರಿಪ್ಟ್, ಡ್ರಾಮೆಟರ್ಜಿ, ಪರಿಕಲ್ಪನೆ ವಿನ್ಯಾಸ ರಂಗ ವಿನ್ಯಾಸ ಪ್ರಸಾದನ ರಂಗ ಸಜ್ಜಿಕೆ ವಸ್ತ್ರಾಲಂಕಾರ ಬೆಳಕು ಈ ಎಲ್ಲವುಗಳು ಅತ್ಯದ್ಭುತ. ಸ್ವಲ್ಪ ಹೆಚ್ಚು ಎನಿಸದ ಕಡಿಮೆಯೂ ಆಗದ ಹದವಾಗಿ ಇಂಪೆನಿಸುವ ಸಂಗೀತ ಇದರ ಅಂದವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿತು. ಅಭಿನಯಿಸಿದ ನಟರಂತೂ ನಮ್ಮ ಸುತ್ತಲೇ ಇದು ನಡೆಯುತ್ತಿದೆ ಏನೋ ಎನ್ನುವಂತೆ ನಟಿಸಿ ಸಹೃದಯರ ಹೃದಯ ಗೆದ್ದರು.
ಈ ರೀತಿಯ ರಂಗ ಪ್ರಯೋಗಗಳು ಶಾಲೆಗಳಲ್ಲಿ ಪೋಷಕರುಗಳಿಗೆ ಪ್ರದರ್ಶನವಾಗಿ ಇನ್ನೂ ಹೆಚ್ಚು ಹೆಚ್ಚು ಎಲ್ಲರಿಗೂ ತಲುಪುವಂತೆ ಆಗಬೇಕು. ನಿಜಕ್ಕೂ ಈ ಕಾಲಘಟ್ಟದ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳೊಂದಿಗೆ ನೋಡಲೇಬೇಕಾದ ನಾಟಕ ಇದು ಎಂದು ಹೇಳುತ್ತಾ ಇಂತಹ ಒಂದು ಒಳ್ಳೆಯ ಕಲ್ಪನೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.

Budget 2025 ಬಜೆಟ್ ನಲ್ಲಿನ ತೆರಿಗೆ ವಿನಾಯಿತಿಗಳಿಂದ ಜಿಲ್ಲೆಯ ಉದ್ಯಮಕ್ಷೇತ್ರಕ್ಕೆ ಸಹಕಾರವಾಗಲಿದೆ- ಬಿ.ಗೋಪಿನಾಥ್

0

Budget 2025 ಕೇಂದ್ರ ಮುಂಗಡ ಪತ್ರ 2025 ರಲ್ಲಿ ತಂದಿರುವ ವ್ಯಾಪಕ ತೆರಿಗೆ ಸುಧಾರಣಾ ಕ್ರಮ ಮತ್ತು ವಿನಾಯಿತಿಗಳಿಂದ ಗಳಿಂದ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿ ಗಳಿಗೆ ಅನುಕೂಲ ವಾಗುವ ನಿರೀಕ್ಷೆ ಕೇಂದ್ರ ಸರ್ಕಾರವು ಮಂಡಿಸಿದ ಮುಂಗಡಪತ್ರ 2025ರಲ್ಲಿ ಘೋಷಿಸಿರುವ ತೆರಿಗೆ ಸುಧಾರಣ ಕ್ರಮ ಮತ್ತು ತೆರಿಗೆ ವಿನಾಯತಿ ಗಳಿಂದ ಜಿಲ್ಲೆಯ ವಾಣಿಜ್ಯ ಮತ್ತು ಕೈಗಾರಿಕಾ ಬೆಳವಣಿಗೆಗೆ ಸಹಕಾರಿಯಾಗುವ ನಿರೀಕ್ಷೆ ಇದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಶಾಂತಲಾ ಸ್ಪೇರೋ ಕಾಸ್ಟ್ ಸಭಾಂಗಣದಲ್ಲಿ ಕೇಂದ್ರ ಮುಂಗಡಪತ್ರ 2025 ರಲ್ಲಿ ಆದಾಯ ತೆರಿಗೆ ಮತ್ತು ಸರಕು ಮತ್ತು ಸೇವೆ ಕಾಯ್ದೆಗೆ ಆದ ತಿದ್ದುಪಡಿಗಳ ಬಗ್ಗೆ ಆಯೋಜಿಸಿದ್ದ ಸೆಮಿನಾರ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರವು ಕಳೆದ ಹತ್ತು ವರ್ಷಗಳಿಂದ ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆ ವ್ಯವಸ್ಥೆ ಗೆ ಸಂಬಂಧಿಸಿದಂತೆ ಕೈಗೊಂಡಿರುವ ವ್ಯಾಪಕ ಸುಧಾರಣೆ ಕ್ರಮಗಳಿಂದ ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆ ಸಂಗ್ರಹದಲ್ಲಿ ವ್ಯಾಪಕವಾಗಿ ಹೆಚ್ಚಳಗೊಂಡಿದೆ ಹಾಗೂ ಮುಂಬರುವ ಹೊಸ ಆದಾಯ ತೆರಿಗೆ 2025 ಕಾಯ್ದೆಯ ಸರಳಿಕೃತ ವ್ಯವಸ್ಥೆಯಿಂದ ಜಿಲ್ಲೆಯ ವಾಣಿಜ್ಯ ಮತ್ತು ಕೈಗಾರಿಕಾ ಬೆಳವಣಿಗೆಗೆ ಸಹಕಾರಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು ಮುಂದುವರೆದು ಸರಕು ಮತ್ತು ಸೇವಾ ತೆರಿಗೆ ಮತ್ತು ಆದಾಯ ತೆರಿಗೆಯ ತೆರಿಗೆ ಸಂಗ್ರಹಣೆಯಲ್ಲಿ ದಾಖಲೆ ಪ್ರಮಾಣದಲ್ಲಿ ಸಂಗ್ರಹವಾಗಿ ಕರ್ನಾಟಕ ವು ದೇಶದಲ್ಲಿಯೇ ಎರಡನೇ ಸ್ಥಾನಕ್ಕೆ ಬರಲು ತೆರಿಗೆ ಸಲಹೆಗಾರರು ಹಾಗೂ ಸನ್ನದು ಲೆಕ್ಕ ಪರಿಶೋಧಕರ ಮತ್ತು ಪ್ರಾಮಾಣಿಕ ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಿಗಳ ಸಹಕಾರ ಮತ್ತು ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ದರು.

12 ಲಕ್ಷದವರೆಗೆ ತೆರಿಗೆ ವಿನಾಯಿತಿಯನ್ನು ಘೋಷಿಸಿರುವುದು ಮಧ್ಯಮ ವರ್ಗಕ್ಕೆ ತುಂಬಾ ಅನುಕೂಲವಾಗಲಿದೆ ಎಂದರು ಹಾಗೂ ಎಂ ಎಸ್ ಎಂ ಇ ಗಳನ್ನ ಬಲಪಡಿಸಲು , ಸ್ಟಾರ್ಟ್ ಅಪ್ ಗಳನ್ನು ಉತ್ತೇಜಿಸಲು, ಸಣ್ಣ ವ್ಯಾಪಾರಸ್ಥರಿಗೆ ಅನುಕೂಲವಾಗಲು ಆದಾಯ ತೆರಿಗೆಯಲ್ಲಿ ಅನೇಕ ತೆರಿಗೆ ವಿನಾಯಿತಿಗಳನ್ನು ನೀಡಿರುವುದು ಸಮಂಜಸವಾಗಿದೆ ಎಂದು ತಿಳಿಸಿದರು

ವಾಣಿಜ್ಯ ಮತ್ತು ಕೈಗಾರಿಕೆ ಉದ್ಯಮಿಗಳಿಗೆ ಅನುಕೂಲವಾಗುವ ಇಂತಹ ಸೆಮಿನಾರ್ ಕಾರ್ಯಕ್ರಮ ಗಳಿಗೆ ಸಂಘವು ಕೈಜೋಡಿ ಸುತ್ತದೆ ಎಂದರು

Budget 2025 ಈ ಸಂದರ್ಭದಲ್ಲಿ ಸೆಮಿನಾರ್ ನ ವಿಷಯದ ಬಗ್ಗೆ ಸನ್ನದು ಲೆಕ್ಕ ಪರಿಶೋಧಕರು ಹಾಗೂ ಸಂಘದ ತೆರಿಗೆ ಸಲ ಸಮಿತಿಯ ಕಾರ್ಯದರ್ಶಿಯಾದ ಮಧುಸೂದನ್ ನಾವಡ ಯವರು ಮುಂಗಡಪತ್ರದಲ್ಲಿ ಆದಾಯ ತೆರಿಗೆ ಕಾಯ್ದೆಗೆ ಆದ ಬದಲಾವಣೆಗಳು ಹಾಗೂ ತೆರಿಗೆ ದರದ ಕಡಿತದಿಂದ ಉಳಿತಾಯವಾಗುವ ಮೊತ್ತದಿಂದ ಮಧ್ಯಮ ವರ್ಗದವರಿಗೆ ಮತ್ತು ವಾಣಿಜ್ಯೋದ್ಯಮಗಳಿಗೆ ಆಗುವ ಆರ್ಥಿಕ ಅನುಕೂಲತೆ ಬಗ್ಗೆ ವಿವರಿಸಿದರು ಮತ್ತೋರ್ವ ಸನ್ನದು ಲೆಕ್ಕ ಪರಿಶೋಧಕರಾದ ಎಸ್. ಎಸ್. ಶ್ರೀ ರಾಮ್ ರವರು ಕೇಂದ್ರ ಮುಂಗಡಪತ್ರದಲ್ಲಿ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಗೆ ಆದ ತಿದ್ದುಪಡಿಗಳ ಬಗ್ಗೆ ವಿವರವಾಗಿ ಉಪನ್ಯಾಸವನ್ನು ನೀಡಿದರು. ಶ್ರೀಯುತರುಗಳು ತಮ್ಮ ಉಪನ್ಯಾಸದ ಕೊನೆಯಲ್ಲಿ ವ್ಯಾಪಾರಸ್ಥರು ಕೈಗಾರಿಕೋದ್ಯಮಿಗಳು, ಸನ್ನದು ಲೆಕ್ಕ ಪರಿಶೋಧಕರು ಹಾಗೂ ತೆರಿಗೆ ಸಲಹೆ ಗಾರರ ಎಲ್ಲಾ ಸಂದೇಹದ ಪ್ರಶ್ನೆಗಳಿಗೆ ಸಮರ್ಪಕವಾಗಿ ಮಾಹಿತಿಯನ್ನು ನೀಡಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ತೆರಿಗೆ ಸಲಹ ಸಮಿತಿ ಅಧ್ಯಕ್ಷರಾದ CA ಶರತ್, ಎಲ್ಲಾ ಸದಸ್ಯರುಗಳು, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ G.ವಿಜಯ್ ಕುಮಾರ್, ಖಜಾಂಚಿ ಆರ್ ಮನೋಹರ, ನಿರ್ದೇಶಕರುಗಳಾದ ವಸಂತ್ ಹೋಬಳಿ ದಾರ್, ಗಣೇಶ್ ಎಂ ಅಂಗಡಿ, ಲಕ್ಷ್ಮೀದೇವಿ ಗೋಪಿನಾಥ್,ಬಿ ಸುರೇಶ್ ಕುಮಾರ್, ರವಿಪ್ರಕಾಶ್ ಜನ್ನಿ , ಹಾಗೂ ಅನೇಕ ಸನ್ನದು ಲೆಕ್ಕ ಪರಿಶೋಧಕರುಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ತೆರಿಗೆ ಸಲಹೆಗಾರರು, ಸಂಯೋಜಿತ ಸಂಸ್ಥೆಗಳ ಪದಾಧಿಕಾರಿಗಳು,ಅನೇಕ ವಾಣಿಜ್ಯೋದ್ಯಮಿಗಳು ಕೈಗಾರಿಕೋದ್ಯಮಿಗಳು, ಸದಸ್ಯರುಗಳು ಭಾಗವಹಿಸಿದ್ದರು

Mahashivratri 2025 ರಾಜೇಂದ್ರನಗರ ಶಿವಾಲಯದಲ್ಲಿ ಮಹಾಶಿವರಾತ್ರಿ ಪೂಜೆ

0

Mahashivratri 2025 ಶಿವಮೊಗ್ಗ ನಗರದ ರಾಜೇಂದ್ರ ನಗರದಲ್ಲಿರುವ ಶ್ರೀ ಕ್ಷೇತ್ರ ಪಂಪಾವನದಲ್ಲಿ ಶ್ರೀ ಹಂಪಿ ವಿರೂಪಾಕ್ಷ ಲಿಂಗೇಶ್ವರಸ್ವಾಮಿಗೆ ಫೆ.26 ರ ಬುಧವಾರದಂದು ಬೆಳಿಗ್ಗೆ 06 ರಿಂದ 10 ಗಂಟೆಯ ತನಕ ಸಮಸ್ತ ಭಕ್ತಾದಿಗಳಿಂದ ಸ್ವಾಮಿಗೆ ಶ್ರೀರಭಿಷೇಕ ಮತ್ತು ರುದ್ರಾಭಿಷೇಕ ಏರ್ಪಡಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡು ಸ್ವಾಮಿಯ ಕೃಪಗೆ ಪಾತ್ರರಾಗಬೇಕಾಗಿ ಶ್ರೀರಾಮ ಮತ್ತು ಅಯ್ಯಪ್ಪಸ್ವಾಮಿ ಸೇವೆ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಮೊ : 9449455188 ಸಂಪರ್ಕಿಸಬಹುದು.

Karnataka Rakshana Vedike ಸಾರಿಗೆ ಬಸ್ ನಿರ್ವಾಹಕರ ಮೇಲೆ ಮರಾಠಿ ಭಾಷಿಗರ ಹಲ್ಲೆ ಖಂಡಿಸಿ ಪ್ರತಿಭಟನೆ

0

Karnataka Rakshana Vedike ಕರವೇ ಸ್ವಾಭಿಮಾನಿ ಬಣದಿಂದ ಅಶೋಕ ವೃತ್ತದಲ್ಲಿ ಕೆಎಸ್ಆರ್ಟಿಸಿ ನಿರ್ವಾಹಕನ ಮೇಲೆ ಹಲ್ಲೆ ಖಂಡಿಸಿ ಬೃಹತ್ ಪ್ರತಿಭಟನೆ
ಮರಾಠಿಯಲ್ಲಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಕೆಎಸ್ಆರ್ಟಿಸಿ ಬಸ್ ನಿರ್ವಾಹನ ಮೇಲೆ ಹಲ್ಲೆ ನಡೆಸಿದ ಮರಾಠಿ ಪುಂಡರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ನಗರದ ಅಶೋಕ ವೃತ್ತದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಕಂಡಕ್ಟರ್ ಮೇಲೆ ವಿನಾಕಾರಣ ಹಲ್ಲೆ ನಡೆಸುವ ಜೊತೆಗೆ ಪೋಕ್ಸೋ ಪ್ರಕರಣ ದಾಖಲು ಮಾಡಿ ಗಲಾಟೆ Karnataka Rakshana Vedike ಪ್ರಕರಣವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು ಹಾಗೂ ದಾಳಿ ನಡೆಸಿದವರ ಪ್ರತಿ ಕೃತಿಯನ್ನು ದಹಿಸಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಅಲ್ಲೇ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು ರಾಜ್ಯ ಸರ್ಕಾರ ಈ ಪುಂಡರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಜಿಲ್ಲೆಯಲ್ಲಿ ಮಹಾರಾಷ್ಟ್ರದ ಬಸ್ಸಿನ ಮೇಲೆ ಕನ್ನಡದ ಬಾವುಟವನ್ನು ಕಟ್ಟಿ ಚಾಲಕ ಮತ್ತು ನಿರ್ವಾಹಕರಿಗೆ ಮಸಿ ಬೆಳೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್ಎಸ್ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್ ಜಿಲ್ಲಾ ಖಜಾಂಚಿ ಗಣೇಶ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ ಜಿಲ್ಲಾ ಕಾರ್ಯದರ್ಶಿ ರಾಮು ಪತ್ರಿಕಾ ಪ್ರಚಾರ ಸಮಿತಿ ಅಧ್ಯಕ್ಷ ಮಾಲತೇಶ್. ಕನ್ನಡ ಅಭಿಮಾನಿ ಮುಜೀಬ್ ಸತೀಶ್. ಪರಮೇಶ್. ಟಾಟಾ ಏಸ್ ರಾಮಣ್ಣ.ಪುಟ್ಟ .ಸಾಧಿಕ್ ಮಹಿಳಾ ಘಟಕದ ರೇಷ್ಮಾ ಹಾಗೂ ಕಾರ್ಯಕರ್ತರು ಪದಾಧಿಕಾರಿಗಳು ಭಾಗವಹಿಸಿದ್ದರು

Anil Kumar Bhoomreddy “ಅಂಬೇಡ್ಕರ್ ಓದು” ರಾಜ್ಯಾದ್ಯಂತ ವರ್ಷವಿಡೀ ನಡೆಯಬೇಕು- ಅನಿಲ್ ಕುಮಾರ್ ಭೂಮರೆಡ್ಡಿ

0

Anil Kumar Bhoomreddy ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಕುರಿತು ವ್ಯತಿರಿಕ್ತವಾಗಿ ನಡೆದುಕೊಳ್ಳಲಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಯುವ ಜನತೆ ಸಂವಿಧಾನ ಹಾಗೂ ಅಂಬೇಡ್ಕರ್ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರಡ್ಡಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಸೋಮವಾರ ನಗರದ ಕುವೆಂಪು ರಂಗಮAದಿರಲ್ಲಿ ಆಯೋಜಿಸಿದ್ದ “ಅಂಬೇಡ್ಕರ್ ಓದು” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಮಾಜದ ವ್ಯವಸ್ಥೆಯು ಕವಲು ಒಡೆದ ದಾರಿಯಾಗಿದೆ. ಈ ಸಮಯದಲ್ಲಿ ಅಂಬೇಡ್ಕರ್ ಕುರಿತಾದ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ರಾಜ್ಯಾದ್ಯಂತ ವರ್ಷವಿಡಿ ನಡೆಯಬೇಕು. ಆ ಮೂಲಕ ಸಂವಿಧಾನದ ಪರಿಕಲ್ಪನೆ ಎಲ್ಲರಿಗೂ ಅರ್ಥವಾಗಬೇಕು ಎಂದರು.
ಗಣರಾಜ್ಯೋತ್ಸವ ದಿನವು ದೇಶಕ್ಕೆ ಮಹೋನ್ನತವಾಗಿದೆ. ಯಾಕೆಂದರೆ ಸಂವಿಧಾನವನ್ನು ಕೂಡ ಅದೇ ದಿವಸ ಸಮರ್ಪಿಸಲಾಗಿದೆ. ನಮ್ಮ ದೇಶಕ್ಕೆ ಸಂವಿಧಾನವನ್ನು ಸಿದ್ದಪಡಿಸಲು ಅಂಬೇಡ್ಕರ್ ಒಳಗೊಂಡAತೆ ಅನೇಕ ಮಹಾನೀಯರು ಹಲವು ದೇಶಗಳನ್ನು ಸುತ್ತಿ ಅಲ್ಲಿನ ಸಂವಿಧಾನವನ್ನು ಅಧ್ಯಯನ ಮಾಡಿ ಅದರಿಂದ ಅನೇಕ ಮಾಹಿತಿ ಹೆಕ್ಕಿ ತೆಗೆದು ಈ ದೇಶಕ್ಕೆ ಬೃಹತ್ ಸಂವಿಧಾನ ಕೊಟ್ಟಿದ್ದಾರೆ ಎಂದು ತಿಳಿಸಿದರು.
ನಮ್ಮೆಲ್ಲರ ಬದುಕಿನ ಅಸ್ತಿತ್ವ ಸಂವಿಧಾನದ ಅಡಿಯಲ್ಲಿದೆ. ಈ ನಮ್ಮ ಸಂವಿಧಾನದಲ್ಲಿ ಶರಣರು, ತುಳಿತಕ್ಕೆ ಒಳಗಾದವರ ಸಮಾನತೆಯ ಆಶಯ ಇದೆ. ಆ ದಿಸೆಯಲ್ಲಿ ಪ್ರತಿಯೊಬ್ಬರು ಸಂವಿಧಾನವನ್ನು ಅರಿತುಕೊಳ್ಳಬೇಕು. ಅದರ ಗಂಭೀರತೆ ತಿಳಿಯಬೇಕು. ಈ ಮೂಲಕ ನಾವೆಲ್ಲ ದೇಶವನ್ನು ಮುನ್ನಡೆಸಬೇಕು. ಇದನ್ನು ಮರೆತರೆ ಸಮಾಜದಲ್ಲಾಗುವ ದುಷ್ಪÀರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದರು.
Anil Kumar Bhoomreddy ಕುವೆಂಪು ವಿಶ್ವವಿದ್ಯಾಲಯದ ಸಂಶೋಧನಾರ್ಥಿ ಎಂ.ಸAಪತ್‌ಕುಮಾರ್ ವಿಶೇಷ ಉಪನ್ಯಾಸ ನೀಡಿ, “ಅಂಬೇಡ್ಕರ್ ಓದು” ಎನ್ನುವುದು ಅವರ ತತ್ವ, ಆದರ್ಶಗಳ ಮೂಲಕ ಅರ್ಥೈಸಿಕೊಳ್ಳಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಅದನ್ನು ಮರೆತಿದ್ದಾರೆ. ಯುವಜನತೆ ಮೊಬೈಲ್‌ನ ಗೀಳಿಗೆ ಬಿದ್ದು ಓದುವುದನ್ನೆ ಕಡಿಮೆ ಮಾಡಿದ್ದಾರೆ ಎಂದರು.
ಧೈರ್ಯ, ಹಠ, ಛಲ ಇದ್ದರೆ ಮಾತ್ರ ನಾವು ಏನನ್ನಾದರೂ ಸಾಧಿಸಲು ಸಾಧ್ಯವೆಂದು ಬ್ರಿಟನ್ ವಿದ್ವಾಂಸರು ಹೇಳಿದ್ದಾರೆ. ಅಂಬೇಡ್ಕರ್ ಅದರಂತೆ ಬಾಳಿ ಬದುಕಿದವರು. ಆ ಮೂಲಕ ದೇಶÀಕ್ಕೆ ಬೃಹತ್ ಸಂವಿಧಾನ ನೀಡಿದರು. ಶಿಕ್ಷಣದಿಂದ ವಂಚಿತರಾಗಿದ್ದ ಮಹಿಳಾ ಸಮುದಾಯಕ್ಕೆ ಶಿಕ್ಷಣದ ಹಕ್ಕು ಕೊಟ್ಟು ಎಲ್ಲರಂತೆ ಸರಿಸಮಾನವಾಗಿ ಬಾಳಲು ಅವಕಾಶ ಮಾಡಿಕೊಟ್ಟರು ಎಂದರು.
ಅAಬೇಡ್ಕರ್ ಅವರೇ ಒಂದು ಪ್ರೇರಣಾ ಶಕ್ತಿ. ಇಂದಿನ ಯುವಜನತೆ ಅವರನ್ನು ಅರ್ಥೈಸಿಕೊಂಡು ಆ ದಾರಿಯಲ್ಲಿ ಸಾಗಬೇಕು. ಆಂಬೇಡ್ಕರ್ ಅವರ ನಾಯಕತ್ವ ಗುಣವನ್ನು ಬೆಳಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದರು.
“ಅಂಬೇಡ್ಕರ್ ಓದು” ಅಂಗವಾಗಿ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ರವರ ಬದುಕು ಮತ್ತು ಸಾಧನೆಗಳ ಪ್ರಬಂಧ, ರಸಪ್ರಶ್ನೆ, ಆಶುಭಾಷಣ ಹಾಗೂ ಕವನ ವಾಚನ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಡಿ.ಮಲ್ಲೇಶಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಹೆಚ್.ಉಮೇಶ್, ಪುಸ್ತಕ ಮನೆ ಪ್ರಕಾಶಕರಾದ ಸುಂದರ್ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕಿನಿಂದ ವಿದ್ಯಾರ್ಥಿಗಳು ಆಗಮಿಸಿದ್ದರು.