Tuesday, March 10, 2026
Tuesday, March 10, 2026
Home Blog Page 392

S.N Channabasappa ಫಲಾನುಭವಿಗಳಿಗೆ ಮನೆ ವಿತರಣೆ. ಸಂತೋಷಪಟ್ಟ ಶಾಸಕ “ಚೆನ್ನಿ”

0

S.N Channabasappa ಶಿವಮೊಗ್ಗಕ್ಕೆ ಹೊಸ ಭರವಸೆಯ ಅಧ್ಯಾಯ! ಪ್ರಧಾನ ಮಂತ್ರಿ ಆಶ್ರಯ ಯೋಜನೆಯಡಿ ಶಿವಮೊಗ್ಗದ ಫಲಾನುಭವಿಗಳಿಗೆ ಕೊನೆಗೂ ಕನಸಿನ ಮನೆ ದೊರೆತಿದೆ!

ಆಶ್ರಯ ಯೋಜನೆಯಡಿಯಲ್ಲಿ ಶಿವಮೊಗ್ಗದ ಫಲಾನುಭವಿಗಳಿಗೆ ಕೈಗೆಟುಕುವ ಬೆಲೆಯಲ್ಲಿ ಮನೆಗಳನ್ನು ದೊರೆತಿರುವುದು ಹೆಮ್ಮೆಯ ಮತ್ತು ಭಾವನಾತ್ಮಕ ಕ್ಷಣವಾಗಿದೆ. ಈ ಉಪಕ್ರಮದೊಂದಿಗೆ, ಅನೇಕರು ತಮ್ಮದೇ ಆದ ಸ್ಥಳವೆಂದು ಕರೆಯಲು ಶಾಶ್ವತ ನೆಲೆಯನ್ನು ಕಂಡುಕೊಂಡಿದ್ದಾರೆ. ಜೊತೆಗೆ ಸ್ಥಿರತೆ, ಭದ್ರತೆ ಮತ್ತು ಉಜ್ವಲ ಭವಿಷ್ಯದತ್ತ ಒಂದು ದಿಟ್ಟ ಹೆಜ್ಜೆನಿಟ್ಟಿದ್ದಾರೆ.

S.N Channabasappa ಇದು ಕೇವಲ ಮನೆಗಳಷ್ಟೇ ಅಲ್ಲ; ಇದು ಜೀವನವನ್ನು ಸಶಕ್ತಗೊಳಿಸುವುದರ ಬಗ್ಗೆ ಹಾಗೂ ಕೈಗೆಟುಕುವ ವಸತಿ ಒದಗಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಎಲ್ಲರಿಗೂ ಉತ್ತಮ ಗುಣಮಟ್ಟದ ಜೀವನವನ್ನು ಖಾತ್ರಿಪಡಿಸುತ್ತದೆ. ಎಲ್ಲರಿಗೂ ವಸತಿ ಕಲ್ಪಿಸುವ ನಮ್ಮ ಬದ್ಧತೆ ಹಿಂದೆಂದಿಗಿಂತಲೂ ಬಲವಾಗಿದೆ ಮತ್ತು ಉಜ್ವಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಆಶ್ರಯ ಯೋಜನೆಯ ಮನೆಗಳ ಪ್ರತಿಯೊಂದು ಇಟ್ಟಿಗೆಯೂ ಶಿವಮೊಗ್ಗ ಜನತೆಗೆ ನೀಡಿದ ಭರವಸೆ, ಬದ್ಧತೆಯನ್ನು ಪ್ರತಿನಿಧಿಸುತ್ತದೆ. ಸಮೃದ್ಧವಾದ ಶಿವಮೊಗ್ಗದ ಸರ್ವತೋಮುಖ ಅಭಿವೃದ್ಧಿ ಮಾಡುವುದನ್ನು ಮುಂದುವರಿಸುತ್ತಾ, ಎಲ್ಲಾ ಫಲಾನುಭವಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು!

Shimoga News ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ”ಪ್ಯಾಡ್ ಬರ್ನಿಂಗ್ಮಿಷನ್” ಗೆ ‌ಚಾಲನೆ

0

Shimoga News ಆರೋಗ್ಯಕರ ಜೀವನ ಹೊಂದುವುದು ಹದಿಹರೆಯದ ಹೆಣ್ಣು ಮಕ್ಕಳಿಗೆ ಕಷ್ಟ ಸಾಧ್ಯ. ಋತು ಚಕ್ರದ ಸಂದರ್ಭದಲ್ಲಿ ವೈಯುಕ್ತಿಕ ಶುಚಿತ್ವ ಕಾಪಾಡಿಕೊಳ್ಳುವುದು ವಿದ್ಯಾರ್ಥಿನಿಯರಿಗೆ ಅತಿ ಮುಖ್ಯ ಎಂದು ರೋಟರಿ ಶಿವಮೊಗ್ಗ ಜ್ಯೂಬಿಲಿ ಅಧ್ಯಕ್ಷೆ ರೂಪಾ ಪುಣ್ಯಕೋಟಿ ಹೇಳಿದರು.

ರೋಟರಿ ಜಿಲ್ಲೆ 3182 ಜಿಲ್ಲಾ ಅನುದಾನದಲ್ಲಿ ಮಂಜೂರಾಗಿದ್ದ ಅರ್ಥಿಕ ನೆರವಿನಲ್ಲಿ ಬಿ.ಹೆಚ್.ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ’ಪ್ಯಾಡ್ ಬರ್ನಿಂಗ್ ಮಿಷನ್’ ಅಳವಡಿಸಿದ್ದನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಕಾಲೇಜಿನಲ್ಲಿ ಏಳುನೂರುಕ್ಕಿಂತ ಹೆಚ್ಚು ಹೆಣ್ಣು ಮಕ್ಕಳು ಪದವಿ ಪೂರ್ವ ವಿದ್ಯಾಭ್ಯಾಸ ಮಾಡುತ್ತಿದ್ದು, ಬಹಳಷ್ಟು ಮಕ್ಕಳು ಗ್ರಾಮಾಂತರ ಪ್ರದೇಶದಿಂದ ಬಂದವರಿದ್ದಾರೆ. ಇವರಿಗೆ, ಶುಚಿತ್ವದ ಬಗ್ಗೆ ತಿಳುವಳಿಕೆ ನೀಡಲು ಹಾಗೂ ಉತ್ತಮ ಆರೋಗ್ಯ ಹೊಂದಿ ಹೆಚ್ಚು ಅಂಕಗಳಿಸಲು ಅನುಕೂಲ ಮಾಡಿಕೊಡುವ ಸಲುವಾಗಿ ಕಾಲೇಜಿನ ಪ್ರಾಂಶುಪಾಲರು ಅದ್ಯಾಪಕರು, ಪ್ಯಾಡ್ ಬನಿರ್ಂಗ್ ಮಿಷನ್ ಕೊಡಿಸುವಂತೆ ಕೋರಿದ್ದರು. ಅದನ್ನು ನಮ್ಮ ರೋಟರಿ ಜ್ಯೂಬಿಲಿ ಕ್ಲಬ್ ಇಂದು ಪೂರೈಸಿದೆ ಎಂದರು.

ಕಾರ್ಯದರ್ಶಿ ಡಾ. ಪ್ರಕೃತಿ ಮಂಚಾಲೆ ಮಾತನಾಡಿ, ಹದಿಹರೆಯದ ಹೆಣ್ಣು ಮಕ್ಕಳು ಋತುಚಕ್ರದ ವೇಳೆ ವೈಯುಕ್ತಿಕ ಶುಚಿತ್ವಕ್ಕೆ ಹೆಚ್ಚಿನ ಗಮನ ಕೊಡಬೇಕು. ಮೂರು-ನಾಲ್ಕು ಗಂಟೆಗೆ ಒಮ್ಮೆ ಪ್ಯಾಡ್ ಬದಲಾಯಿಸಬೇಕು. ಉಪಯೋಗಿಸಿದ ಪ್ಯಾಡ್ ಎಲ್ಲೆಂದರಲ್ಲಿ ಎಸೆಯಬಾರದು. ಆದ್ದರಿಂದ ಇಂದು ಈ ಕಾಲೇಜಿಗೆ ಪ್ಯಾಡ್ ಬರ್ನಿಂಗ್ ಮಿಷನ್ ಕೊಡಿಸಿದ್ದೇವೆ. ಅದು ಕೆಲವೇ ಕ್ಷಣಗಳಲ್ಲಿ ಸುಟ್ಟು ಪೂರ್ಣ ಬಸ್ಮ ಮಾಡುವುದು. ಇದರಿಂದ ಹಲವಾರು ಸಂಕಷ್ಟಗಳು ದೂರವಾಗುತ್ತದೆ ಎಂದರು.

Shimoga News ಈ ಸಮಯದಲ್ಲಿ ಹೆಣ್ಣುಮಕ್ಕಳು ಹೆಚ್ಚು ನೀರು ಕುಡಿಯಬೇಕು, ನಿಶಕ್ತರಾಗುವುದನ್ನು ತಡೆಗಟ್ಟಬೇಕು. ಹೆಚ್ಚು ಕಬ್ಬಿಣಾಂಶ ಇರುವ ಧಾನ್ಯ, ಕಾಳು, ಮೊಟ್ಟೆ, ತರಕಾರಿ ಆಹಾರದೊಂದಿಗೆ ಸೇವಿಸಬೇಕು, ದೈನಂದಿನ ಚಟುವಟಿಕೆಯಾಗಿ ವ್ಯಾಯಾಮ ಮತ್ತು ಯೋಗ ಮಾಡುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ. ಯಾವುದೇ ಸಮಸ್ಯೆ ಕಂಡಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಎಂದರು.

ರೊ. ಭಾರದ್ವಾಜ ಮಾತನಾಡಿ, ಸರ್ಕಾರಿ ಪದವಿಪೂರ್ವ ಕಾಲೇಜಿಗೆ ನಮ್ಮ ಕ್ಲಬ್ ವತಿಯಿಂದ ಈ ಯಂತ್ರ ಕೊಡುಗೆ ನೀಡಿರುವುದು ಉತ್ತಮ ಕೆಲಸ, ಕಳೆದ ವರ್ಷ ಶುದ್ಧ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದ್ದನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಎಸ್.ಎಸ್.ವಾಗೇಶ್, ನಾಗರಾಜ್, ರೇಣುಕಾರಾದ್ಯ, ರಾಜಶೇಖರ್, ಪ್ರಾಂಶುಪಾಲ ಜಯಂತ್.ಎಸ್, ಪ್ರಾಚಾರ್ಯರಾದ ಭಾರತಿ, ಚಂದ್ರಶೇಖರಪ್ಪ.ಬಿ.ಅರ್, ಗಾಯತ್ರಿ.ಎಂ, ಇಂದಿರಾ, ಗೀತಾ ಕೆ.ಸಿ.ರಾಧಾಮಣಿ.ಎಂ.ಎನ್ ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Sahyadri Narayana Hospital Shimoga ಶ್ರೀಮತಿ ಮೀನಾಕ್ಷಿಯವರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ ವರದಿ ಬಗ್ಗೆ ಸ್ಪಷ್ಟೀಕರಣ

0

Sahyadri Narayana Hospital Shimoga ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ದಾಖಲಾಗಿರುವ ೫೯ ವರ್ಷದ ರೋಗಿ ಶ್ರೀಮತಿ ಮೀನಾಕ್ಷಿಯವರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ಕೆಲ ಮಾಧ್ಯಮ ವರದಿಗಳಲ್ಲಿ ಬಂದಿರುವ ತಪ್ಪು ಮಾಹಿತಿ ಸ್ಪಷ್ಟಪಡಿಸುವ ಉದ್ದೇಶದಿಂದ, ಅವರ ಚಿಕಿತ್ಸೆಗೆ ಸಂಬಂಧಿಸಿದ ನಿಜವಾದ ಅಂಶಗಳನ್ನು ತಿಳಿಸಲು ಈ ಹೇಳಿಕೆ ಬಿಡುಗಡೆ ಮಾಡಲಾಗಿದೆ.

ಶ್ರೀಮತಿ ಮೀನಾಕ್ಷಿಯವರು, 24 ಫೆಬ್ರವರಿ ಸೋಮವಾರದಂದು ಮತ್ತೊಂದು ಖಾಸಗಿ ಆಸ್ಪತ್ರೆಯಿಂದ ರೆಫರ್‌ ಆಗಿ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ದಾಖಲಾಗಿದ್ದರು, ಅಲ್ಲಿ ಅವರು ಸೋಂಕು ಮತ್ತು ರಕ್ತದೊತ್ತಡ ಕುಸಿತಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿದ್ದರು. ನಮ್ಮ ಆಸ್ಪತ್ರೆಗೆ ದಾಖಲಾದ ಕೂಡಲೇ ಅವರನ್ನು ತುರ್ತು ನಿಗಾ ಘಟಕಕ್ಕೆ ಕರೆದೊಯ್ಯಲಾಯಿತು ಮತ್ತು ನಂತರ ವೈದ್ಯಕೀಯ ತೀವ್ರ ನಿಗಾ ಘಟಕ (MICU) ಗೆ ವರ್ಗಾಯಿಸಲಾಯಿತು. ಅವರ ಗಂಭೀರ ಸ್ಥಿತಿಯನ್ನು ಗಮನಿಸಿ, ವೆಂಟಿಲೇಟರ್ ಸಹಿತ ಸಂಪೂರ್ಣ ಚಿಕಿತ್ಸೆ ನೀಡಲಾಯಿತು.

ಕೆಲವು ಮಾಧ್ಯಮ ವರದಿಗಳಲ್ಲಿ, ನಮ್ಮ ವೈದ್ಯರು ಶ್ರೀಮತಿ ಮೀನಾಕ್ಷಿಯವರನ್ನು ಮೃತ ಪಟ್ಟಿದ್ದಾರೆ ಎಂದು ಘೋಷಿಸಿದರು ಮತ್ತು ಅವರ ಮನೆಗೆ ತಲುಪಿದ ಮೇಲೆ ಅವರು “ಅವರು ಮತ್ತೆ ಉಸಿರಾಡಲು ಪ್ರಾರಂಭಿಸಿದರು” ಎಂಬ ಮಾಹಿತಿ ತಪ್ಪಾಗಿ ಪ್ರಕಟಿಸಲಾಗಿದೆ. ನಾವು ಈ ವರದಿಗಳನ್ನು ಪೂರ್ತಿಯಾಗಿ ತಿರಸ್ಕರಿಸುತ್ತೇವೆ ಮತ್ತು ನಮ್ಮ ವೈದ್ಯರು ಯಾವುದೇ ಹಂತದಲ್ಲಿಯೂ ರೋಗಿ ಮೃತ ಪಟ್ಟಿದ್ದಾರೆ ಎಂದು ಘೋಷಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ. ಕುಟುಂಬದ ಒತ್ತಾಯದ ಮೇರೆಗೆ, ವೈದ್ಯಕೀಯ ಸಲಹೆ ವಿರುದ್ಧ (DAMA) ಅವರನ್ನು ಬಿಡುಗಡೆ ಮಾಡಲಾಯಿತು.

Sahyadri Narayana Hospital Shimoga 25 ಫೆಬ್ರವರಿ ಮಂಗಳವಾರದ ಬೆಳಿಗ್ಗೆ, ಅವರ ಆರೋಗ್ಯ ಮತ್ತಷ್ಟು ಗಂಭೀರಗೊಂಡಿದ್ದರಿಂದ ಅವರ ಆರೋಗ್ಯ ಪುನಶ್ಚೇತನಗೊಳ್ಳುವ ಸಾಧ್ಯತೆ ಕಡಿಮೆ ಇರುವ ಬಗ್ಗೆ ಕುಟುಂಬಕ್ಕೆ ತಿಳಿಸಲಾಯಿತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲು ರೋಗಿ ಸಂಬಂಧಿಕರಿಗೆ ತಿಳಿಸಿದರೂ, ಕುಟುಂಬದ ಸದಸ್ಯರು ಅವರ ಬಿಡುಗಡೆಗಾಗಿ ಒತ್ತಾಯಿಸಿದರು. ಹೀಗಾಗಿ, ವೈದ್ಯಕೀಯ ಸಲಹೆಯ ವಿರುದ್ಧವಾಗಿ, ಅಂದು ಬೆಳಿಗ್ಗೆ ಅವರನ್ನು ಬಿಡುಗಡೆ ಮಾಡಲಾಯಿತು. ವೈದ್ಯಕೀಯ ತಂಡವು ಅದರಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ಕುಟುಂಬಕ್ಕೆ ಸ್ಪಷ್ಟವಾದ ಮಾಹಿತಿ ನೀಡಿತ್ತು.

ಆ ನಂತರ, ಮನೆಗೆ ತಲುಪಿದ ಬೆನ್ನಲ್ಲೇ, ರೋಗಿಯ ಪ್ರತಿಕ್ರಿಯೆಯಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಂತೆ ಕಂಡುಬಂದ ಕಾರಣ, ಅವರ ಕುಟುಂಬ ಅದೇ ದಿನ ಕೆಲವೇ ಗಂಟೆಗಳಲ್ಲಿ ಅವರನ್ನು ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಬಂದರು. ತಕ್ಷಣ ಅವರನ್ನು ಪುನಃ ದಾಖಲಿಸಿ, ನಮ್ಮ ವೈದ್ಯಕೀಯ ತಂಡ ಅವರಿಗೆ ಅಗತ್ಯವಾದ ಚಿಕಿತ್ಸೆ ನೀಡುತ್ತಿದೆ. ಆದರೆ, ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ.

Chandragutti ಸೊರಬದಿಂದ ಚಂದ್ರಗುತ್ತಿಗೆ ಭಕ್ತಾದಿಗಳಿಂದ ಶಿವರಾತ್ರಿ‌ಯ ವಿಶೇಷ ಪಾದಯಾತ್ರೆ

0

Chandragutti ಸೊರಬ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿಂದ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ವಕೀಲರ ಸಂಘದ ನೇತೃತ್ವದಲ್ಲಿ ಶಿವರಾತ್ರಿ ಪ್ರಯುಕ್ತ ಪಾದಯಾತ್ರೆ ನಡೆಸಲಾಯಿತು.
ಉಧೋ.. ಉಧೋ… ಶ್ರೀ ರೇಣುಕಾಂಬ ಉಧೋ.. ಎನ್ನುತ್ತಾ ಸುಮಾರು 18 ಕಿ.ಮೀ., ಪಾದಯಾತ್ರೆ ನಡೆಸಲಾಯಿತು. ಬೆಳಗಿನ ಜಾವ 5ಕ್ಕೆ ಆರಂಭವಾದ ಪಾದಯಾತ್ರೆ ಬೆಳಗ್ಗೆ 9ಕ್ಕೆ ಚಂದ್ರಗುತ್ತಿ ದೇವಸ್ಥಾನ ತಲುಪಿತು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಸಿ.ವೈ. ಅಶೋಕ್ ಮಾತನಾಡಿ, ದೇಶದಲ್ಲಿ ಸುಖ, ಶಾಂತಿ ನೆಲೆಸಲಿ, ಉತ್ತಮ ಮಳೆ-ಬೆಳೆಯಾಗಿ ನಾಡಿನ ರೈತ ಸಮೂಹ ನೆಮ್ಮದಿಯಾಗಿರಲಿ ಎಂದು ಪ್ರಾರ್ಥಿಸಿ ಮಲೆನಾಡಿನ ಅಧಿದೇವತೆ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಪಾದಯಾತ್ರೆ ನಡೆಸಲಾಯಿತು. ಸಮಾನ ಮನಸ್ಕರರು ಒಗ್ಗೂಡಿ ನಡೆಸಿದ ಪಾದಯಾತ್ರೆಗೆ ಜನತೆಯಿಂದಲೂ ಉತ್ತಮ ಪ್ರಶಂಸೆ ವ್ಯಕ್ತವಾಯಿತು. ಸರ್ವ ಸಮುದಾಯದವರಿಗೂ ಶಿವ ಆರಾಧ್ಯ ದೈವ. ಶಿವರಾತ್ರಿಯ ಪ್ರಯುಕ್ತ ಚಂದ್ರಗುತ್ತಿಯ ಕಾಲಭೈರವ, ತ್ರಿಶೂಲ ಭೈರವ ದೇವರಿಗೂ ಸಹ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದು ತಿಳಿಸಿದರು.
Chandragutti ಯುವ ವಕೀಲ ಆಶೀಕ್ ನಾಗಪ್ಪ ಮಾತನಾಡಿ, ವಕೀಲ ವೃತ್ತಿಯಲ್ಲಿ ಸದಾ ಒತ್ತಡದಲ್ಲಿರುವವರಿಗೆ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ನೆಮ್ಮದಿಯು ದೊರೆಯುತ್ತದೆ. ಇದರಿಂದ ಮತ್ತಷ್ಟು ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.
ಪಾದಯಾತ್ರೆಯಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಎಸ್. ಅರುಣ್, ಓಂಕಾರಪ್ಪ, ಸತ್ಯನಾರಾಯಣ, ಚಂದ್ರಶೇಖರ್, ಎಚ್. ಆನಂದ್, ಗುರುಮೂರ್ತಿ, ಆಶೀಕ್ ನಾಗಪ್ಪ, ಪರಶುರಾಮ, ಶ್ರೀ ರೇಣುಕಾಂಬ ಭಕ್ತ ಸಮೂಹದ ಹೂವಪ್ಪ ಯಂಕೇನ್, ಏಕಾಂತಪ್ಪ, ತನ್ಮಯ್, ಭರತ್ ಪಾಲ್ಗೊಂಡಿದ್ದರು.

Eshwara Vana ಶಿವರಾತ್ರಿ ಪ್ರಯುಕ್ತ‌ “ಈಶ್ವರವನ”ದಲ್ಲಿ ರಕ್ತದಾನ ಶಿಬಿರ

0

Eshwara Vana ಇಂದು ಮಹಾಶಿವರಾತ್ರಿ ಅಂಗವಾಗಿ ನವ್ಯಶ್ರೀ ಈಶ್ವರ ವನ ಅಬ್ಬಲೆಗೆರೆಯಲ್ಲಿ. ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು ಭಾರತೀಯ ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಬ್ಯಾಂಕ್. ಹಾಗೂ ರೋಟರಿ ಮಿಡ್ ಟೌನ್ ರಕ್ತ ನಿಧಿ. ಸಹಯೋಗದೊಂದಿಗೆ. ಆಯೋಜಿಸನಾದ ರಕ್ತದಾನ ಶಿಬಿರದಲ್ಲಿ ಈಶ್ವರನ ಭಕ್ತರು. ನವ್ಯಶ್ರೀ ಟ್ರಸ್ಟಿನ ಪದಾಧಿಕಾರಿಗಳು ಸಾರ್ವಜನಿಕರು ರಕ್ತದಾನ ಮಾಡಿ ಶಿವನ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಉಚಿತವಾಗಿ ರಕ್ತದ ಗುಂಪು ತಪಾಸಣೆ ಮತ್ತು ಹಿಮೋಗ್ಲೋಬಿನ್ ತಪಾಸಣೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ರಕ್ತದಾನಿಗಳಿಗೆ ನೋವ್ಯಶ್ರೀ ನಾಗೇಶ್ ಅವರು ಪ್ರಮಾಣ ಪತ್ರ ನೀಡಿ ಗೌರವಿಸಿದರು ಕಾರ್ಯಕ್ರಮದಲ್ಲಿಸಾರ್ವಜನಿಕ ಸಂಪರ್ಕ ಅಧಿಕಾರಿ ಶೃತಿ ಎಸ್ ಕೆ. ಹಿರಿಯ ಸಂಚಾಲಕ ಅಧಿಕಾರಿ ಹಾಗೂ ರಕ್ತದಾನಿ ಧರಣೇಂದ್ರ ದಿನಕರ್. ವೈದ್ಯಾಧಿಕಾರಿ ಡಾ. ಎಸ್ ದಿನಕರ್. ಲಕ್ಷ್ಮಿ. ನವ್ಯಶ್ರೀ ನಾಗೇಶ್. ಪ್ರದೀಪ್. ಉಪಸ್ಥಿತರಿದ್ದರು

S N Channabasappa ಕ್ರೀಡೆ, ಮನಸ್ಸುಗಳನ್ನ ಪರಸ್ಪರ ಹತ್ತಿರವಾಗಿಸುತ್ತದೆ- ಶಾಸಕ ಚನ್ನಬಸಪ್ಪ

0

S N Channabasappa ಡೆಗಳಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ಆರೋಗ್ಯಕ್ಕೆ ಆಟಗಳೇ ಉತ್ತಮ ಮದ್ದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಬಣ್ಣಿಸಿದರು. ನಗರದ ಗೋಪಾಲ ಬಡಾವಣೆಯಲ್ಲಿ ಬುಧವಾರ ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಉದ್ಘಾಟಿಸಿ, ಎಂಸಿಸಿ ಕಪ್ ಸೀಸನ್-೨ ಟೆನ್ನಿಸ್ ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆ ಮನಸ್ಸುಗಳನ್ನು ಪರಸ್ಪರ ಹತ್ತಿರವಾಗಿಸುತ್ತದೆ. ಆಟಗಳಿಂದ ಸ್ನೇಹ ಮತ್ತಷ್ಟು ಗಟ್ಟಿಯಾಗುತ್ತದೆ. ಮಹಾ ಶಿವರಾತ್ರಿ ದಿನದಂದೇ ಉದ್ಘಾಟನೆಗೊಂಡಿರುವ ಈ ಸಂಘ ಸಾಕಷ್ಟು ಉನ್ನತಿ ಸಾಧಿಸಲಿ. ಸಾಮಾಜಕ್ಕೆ ಉತ್ತಮ ಕೊಡುಗೆ ನೀಡಲಿ ಎಂದು ಶುಭ ಕೋರಿದರು.
ರಾಜ್ಯ ಹಿಂದುಳಿದ ವರ್ಗಗಳ ಸಂಯೋಜಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಜಿ.ಡಿ.ಮಂಜುನಾಥ್ ಮಾತನಾಡಿ, ಸಚಿವ ಮಧು ಬಂಗಾರಪ್ಪ ಅವರ ಸತತ ಪರಿಶ್ರಮದ ಫಲವಾಗಿ ಗೋಪಾಲಗೌಡ ಬಡಾವಣೆಯಲ್ಲಿ ಬ್ಯಾಂಡ್ಮಿಟನ್ S N Channabasappa ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಸರ್ಕಾರ ಸಮ್ಮತಿ ಸೂಚಿಸಿದೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಹೆಸರಿನಲ್ಲಿ ೧ ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಗಂಣ ತಲೆ ಎತ್ತಲಿದ್ದು, ಈಗಾಗಲೇ ೩೦ ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದರು.
ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾ ನಾಯಕ್ ಆಟಗಾರರಿಗೆ ಶುಭ ಕೋರಿದರು.
ಬಿಜೆಪಿ ಶಿವಮೊಗ್ಗ ನಗರ ಘಟಕದ ಉಪಾಧ್ಯಕ್ಷ ಎಸ್.ಕುಮಾರ್, ಸಂಘದ ಗೌರವ ಅಧ್ಯಕ್ಷ ಎಂ.ಗೋವಿಂದರಾಜು, ಅಧ್ಯಕ್ಷ ಎಂ.ಡಿ.ಶ್ರೀನಿವಾಸ್, ಉಪಾಧ್ಯಕ್ಷ ಕೆ.ಅಶೋಕ್ ಕುಮಾರ್, ಕಾರ್ಯದರ್ಶಿ ಹರಿಪ್ರಕಾಶ್ ಇತರರು ಇದ್ದರು.

Sri Shivaganga Yoga Kendra ಶಿವಗಂಗಾ ಯೋಗಕೇಂದ್ರದಲ್ಲಿಮಹಾರುದ್ರಾಭಿಷೇಕ

0

Sri Shivaganga Yoga Kendra  ಮಹಾಶಿವರಾತ್ರಿ ಅಂಗವಾಗಿ ಶಿವಗಂಗಾ ಯೋಗ ಕೇಂದ್ರದಲ್ಲಿ ಧ್ಯಾನ ಮೂರ್ತಿ ಶಿವನಿಗೆ ವಿಶೇಷ ರುದ್ರಾಭಿಷೇಕ ಮಹಾಪೂಜೆ
ಇಂದು ಮಹಾಶಿವರಾತ್ರಿಯ ವಿಶೇಷ ದಿನದ ಅಂಗವಾಗಿ ವಿನೋಬನಗರದ ಕಲ್ಲಳ್ಳಿ ಯಲ್ಲಿರುವ ಶಿವಗಂಗಾ ಯೋಗ ಕೇಂದ್ರದ ಧ್ಯಾನ ಮೂರ್ತಿ ಈಶ್ವರನಿಗೆ ವಿಶೇಷ ಪೂಜೆ ಮಹಾರುದ್ರಾಭಿಷೇಕ ವನ್ನು ಇಂದು ಬೆಳಿಗ್ಗೆ 5:00 ಗಂಟೆ ಯಿಂದ ಗುರುಗಳ ಸಾನಿಧ್ಯದಲ್ಲಿ ನೆರವೇರಿಸಲಾಯಿತು ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ಕಲಗೋಡ್ ರತ್ನಾಕರ್ ಯೋಗಾಚಾರ್ಯ ಡಾ. ಸಿವಿ ರುದ್ರಾರಾಧ್ಯ. ಲವ ಕುಮಾರ್, ಶಿವಮೊಗ್ಗ ಜಿಲ್ಲೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್. ಯೋಗ ಶಿಕ್ಷಕರಾದ ವಿಜಯ ಬಾಯರ್. ಹಾಗೂ ಯೋಗಪಟುಗಳು ಮತ್ತು ವಿವಿಧ ಶಾಖೆಯ ಯೋಗ ಶಿಕ್ಷಕರು ಮಾತೆಯರು ಮಕ್ಕಳು ಉಪಸ್ಥಿತರಿದ್ದರು

Mahashivratri 2025 “ಭೋಲೇನಾಥ್ ಕಿ‌ ಜೈ”-ಲೇ: ಎನ್.ಜಯಭೀಮ ಜೊಯಿಸ್. ಶಿವಮೊಗ್ಗ

0

Mahashivratri 2025 ಮಹಾಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾಗಿದೆ.ಈ ಹಬ್ಬದ ವೈಶಿಷ್ಟ್ಯವೆಂದರೆ
ಇಡೀದಿನ ಉಪವಾಸ,ಜಾಗರಣೆಗಳನ್ನು ಮಾಡಿ,
ನಾಲ್ಕು ಯಾಮಗಳಲ್ಲಿಯೂ ಶಿವಪೂಜೆಯನ್ನು ಮಾಡುವುದರ ಮೂಲಕ ಆಚರಿಸಲಾಗುತ್ತದೆ.ಇಡೀ
ಭಾರತದಾದ್ಯಂತಬಹುತೇಕಎಲ್ಲಾಭಾಗಗಳಲ್ಲಿಯೂ ಆಚರಿಸುವ ಹಬ್ಬ ಇದಾಗಿದೆ.
ಶಿವಭಕ್ತರ ಪಾಲಿಗೆ ಮಂಗಳಕರರಾತ್ರಿ.ಸಾಮಾನ್ಯ
ವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು
ಹೊತ್ತು ಪೂಜೆ ನಡೆಯುತ್ತದೆ.ರಾತ್ರಿ ಎಂದರೆ ಕತ್ತಲು,ಕತ್ತಲು ಎಂದರೆ ಅಜ್ಞಾನ,ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನವನ್ನು ದಯಪಾಲಿಸು ಎಂದು ಶಿವನನ್ನು ಪ್ರಾರ್ಥಿಸುವ ಶುಭ ದಿನವೇ ಶಿವ
ರಾತ್ರಿ.ಅಜ್ಞಾನವೆಂಬೊ ಅಂಧಕಾರ ತುಂಬಿರುವಲ್ಲಿ
ಶಿವನು ತನ್ನ ಕಟಾಕ್ಷದಿಂದ ಅಜ್ಞಾನವನ್ನು ಪರಿಹರಿಸಿ
ಜ್ಞಾನದ ಬೆಳಕನ್ನು ನೀಡುತ್ತಾನೆ ಎಂಬ ದೃಢವಾದ ನಂಬಿಕೆ ಇದೆ.
ಶಿವಪುರಾಣದಲ್ಲಿಹೇಳಿರುವಪ್ರಕಾರಶಿವರಾತ್ರಿ
ಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿಅನುಗ್ರಹಮಾಡುವುದಾಗಿಸ್ವತ:ಶಿವನೇ ಪಾರ್ವತಿಯಲ್ಲಿ ತಿಳಿಸಿದ್ದಾನೆ.ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡೀ ಶಿವನ ಕುರಿತು ಜಪ ಮಾಡುತ್ತಾ,ತಪಸ್ಸು ಮಾಡಿ ಶಿವನ ಮೆಚ್ಚಿಕೆಗೆಪಾತ್ರಳಾಗಿವಿವಾಹವಾದಳೆಂಬುದು ಪ್ರತೀತಿ.ಶಿವರುದ್ರತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ.ದೇವತೆಗಳು ಹಾಗೂ ಅಸುರರ ನಡುವೆಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ ಅದನ್ನು ಶಿವ ಕುಡಿದ.ವಿಷವನ್ನು ಗಂಟಲೊಳಗಿಂದ ಇಳಿಯದಂತೆ ಪಾರ್ವತೀ ಇಡೀ ರಾತ್ರಿತಡೆದಳು ಎಂದು ತಿಳಿಸುತ್ತದೆ ಶಿವಪುರಾಣ.
ವಿಷಕುಡಿದಪರಿಣಾಮವಾಗಿಶಿವನಕಂಠ(ಗಂಟಲು)ನೀಲಿ ಬಣ್ಣಕ್ಕೆತಿರುಗುತ್ತದೆ.ಆದ್ದರಿಂದಲೇ ಶಿವನನ್ನು “ನೀಲಕಂಠ”ಎಂದುಕರೆಯುತ್ತಾರೆ.ವಿಷ್ಣುಅಲಂಕಾರ ಪ್ರಿಯನಾದರೆ,ಶಿವ ಅಭಿಷೇಕ ಪ್ರಿಯ,ಸತತ ಜಲಾ
ಭಿಷೇಕ ಪ್ರಿಯನು.
Mahashivratri 2025 ಶಿವನುಭೋಲೇನಾಥಅಂದರೆಮುಗ್ಧನು.ಬೇಡಿದ್ದ
ನ್ನು ನೀಡುವ ದಯಾಳು.ಲಂಕಾಧೀಶ ರಾವಣನಿಗೆ ಅವನಭಕ್ತಿಗೆಮೆಚ್ಚಿಆತ್ಮಲಿಂಗವನ್ನೇಕೊಡುತ್ತಾನೆ.ಶಿವಭಕ್ತಮಾರ್ಕಂಡೇಯನಭಕ್ತಿಗೆಮೆಚ್ಚಿಅವನನ್ನು
ಚಿರಂಜೀವಿಯನ್ನಾಗಿಮಾಡುತ್ತಾನೆ.ಶಿವಭಕ್ತಸಿರಿಯಾಳನಿಗೂ ಒಲಿದ ಶಿವ.ಕರುಣಾಮಯಿಯಾದ ಶಿವನು ಭಕ್ತಿಗೆ ಒಲಿಯುವನು.
ಶಿವನದೇವಾಲಯಗಳಲ್ಲಿರಾತ್ರಿಯಿಡೀಪೂಜಾದಿಗಳು,ಶಿವನಸ್ತೋತ್ರಪಾರಾಯಣಎಲ್ಲವೂನಡೆಯುವವು.ಶಿವರಾತ್ರಿಯ ಮಾರನೆಯ ದಿನ ಪಾರಣೆಯನ್ನು
ಮಾಡಿ ಶಿವರಾತ್ರಿ ಹಬ್ಬವನ್ನು ಆಚರಿಸುವರು.
ಶಿವರಾತ್ರಿಹಬ್ಬದಂದುಭಕ್ತರುಶಿವನದೇವಾಲಯ
ಗಳಿಗೆಹೋಗಿಶಿವನದರ್ಶನಮಾಡಿಧನ್ಯರಾಗುವರು.
ಶಿವರಾತ್ರಿಹಬ್ಬದಂದು ಎಲ್ಲರಿಗೂಸನ್ಮಂಗಳವನ್ನು ಕರುಣಿಸುವಂತೆ ಪರಮೇಶ್ವರನಲ್ಲಿ ಭಕ್ತಿಯಿಂದ
ಪ್ರಾರ್ಥನೆ ಮಾಡೋಣ

Shri Someshwara Temple in Shimoga ಶ್ರೀ ಸೋಮರೆಶ್ವರ ಸ್ವಾಮಿಗೆ ಶಿವರಾತ್ರಿ‌ ಪ್ರಯುಕ್ತ ರುದ್ರಾಭಿಷೇಕ

0

Shri Someshwara Temple in Shimoga ಫೆ, 26, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಶಿವಮೊಗ್ಗ ಶಾಖೆಯ ವತಿಯಿಂದ, ಗುರುಪುರದಲ್ಲಿರುವ ಪುರಾತನ ಕಾಲದ ಶ್ರೀವೀರ ಸೋಮೇಶ್ವರ ಸನ್ನಿಧಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಆದಿಚುಂಚನಗಿರಿ ಶಿವಮೊಗ್ಗ ಶಾಖೆಯ ಪೂಜ್ಯ ಶ್ರೀ ಶ್ರೀ ಸಾಯಿನಾಥ ಸ್ವಾಮೀಜಿಯವರ ಸಾನಿಧ್ಯದಲ್ಲಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಹಾಗೂ ಬಿಲ್ವಪತ್ರೆ, ಪುಷ್ಪಗಳಿಂದ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಪೂಜ್ಯರಿಂದ ನೆರವೇರಿಸಲಾಯಿತು.
Shri Someshwara Temple in Shimoga ಈ ಸಂದರ್ಭದಲ್ಲಿ ಶಾಲೆ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಹೆಚ್., ಶಿಕ್ಷಕರು ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ಶ್ರೀಮಠದ ಸದ್ಭಕ್ತರು ಪಾಲ್ಗೊಂಡಿದ್ದರು

Maha Shivratri 2025 ಮಹಾಶಿವರಾತ್ರಿ ಪ್ರಯುಕ್ತ‌ ಹರಕೆರೆ ಜಾತ್ರೆ ಸುಗಮತೆಗೆ ವಾಹನ ಸಂಚಾರ ಮಾರ್ಗದ ತಾತ್ಕಾಲಿಕ ಬದಲಾವಣೆ ಸೂಚನೆ

0

Maha Shivratri ಫೆ. 26 ಮತ್ತು 27 ರಂದು ಶಿವಮೊಗ್ಗ ನಗರದ ಹರಕೆರೆ ಗ್ರಾಮದಲ್ಲಿ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ನಿಮತ್ತ ಜಾತ್ರೆ ನಡೆಯಲಿದ್ದು, ಫೆ. 26 ರ ಬೆಳಗ್ಗಿನ ಜಾವ 4 ರಿಂದ 27ರ ಬೆಳಗಿನ ಜಾವದವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಹೋಗುವ ಕಾರಣ ಹಾಗೂ ಸೂಳೆಬೈಲು ಬೆಟ್ಟದ ಮಲ್ಲೇಶ್ವರ ದೇವಾಲಯಕ್ಕೂ ಭಕ್ತಾದಿಗಳು ಆಗಮಿಸುವುದರಿಂದ ಈ ಕೆಳಗಿನಂತೆ ತಾತ್ಕಾಲಿಕವಾಗಿ ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಲು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಸೂಚನೆ ಹೊರಡಿಸಿ ಆದೇಶ ನೀಡಿದ್ದಾರೆ.
Maha Shivratri ಶಿವಮೊಗ್ಗದಿಂದ ತೀರ್ಥಹಳ್ಳಿ ಮಾರ್ಗವಾಗಿ ಓಡಾಡುವ ವಾಹನಗಳನ್ನು ಗಜಾನನ ಗ್ಯಾರೇಜ್ ಪಕ್ಕದ ರಸ್ತೆಯಲ್ಲಿ ಹೋಗಿ ರಾಮಿನಕೊಪ್ಪ ಚಾನಲ್ ಮಾರ್ಗವಾಗಿ ಎನ್. ಹೆಚ್. ಆಸ್ಪತ್ರೆ ಪಕ್ಕದ ರಸ್ತೆಗೆ ಬಂದು ಸೇರುವುದು.
ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುವ ಎಲ್ಲಾ ವಾಹನಗಳು ಎನ್. ಹೆಚ್. ರಸ್ತೆಯ ಪಕ್ಕದ ರಸ್ತೆಯ ಮೂಲಕ ರಾಮಿನಕೊಪ್ಪ ಚಾನಲ್ ಕ್ರಾಸ್ ನಿಂದ ಗಜಾನನ ಗ್ಯಾರೇಜ್ ಮೂಲಕ ಬಂದು ಶಿವಮೊಗ್ಗ ಸೇರುವುದು.