Saturday, March 7, 2026
Saturday, March 7, 2026
Home Blog Page 368

Bharat Scouts and Guides ವಿದ್ಯಾರ್ಥಿಗಳೆ ಕ್ರೀಡೆ ಮತ್ತು ಸಾಂಸ್ಕೃತಿಕ ಮನೋಭಾವನೆ ಬೆಳೆಸಿಕೊಳ್ಳಿ- ಶಕುಂತಲಾ ಚಂದ್ರಶೇಖರ್

0

Bharat Scouts and Guides ವಿದ್ಯಾರ್ಥಿಗಳು ಶ್ರದ್ಧೆ, ಪರಿಶ್ರಮ ವಹಿಸಿ ಮುನ್ನಡೆದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ತಾಳ್ಮೆಯಿಂದ ಅಧ್ಯಯನ ನಡೆಸಿ ಉತ್ತಮ ಅಂಕ ಗಳಿಸಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಮಲೆನಾಡು ಓಪನ್ ಗ್ರೂಪ್ ಹಾಗೂ ಸ್ಥಳೀಯ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸರಸ್ವತಿ ಹಾಗೂ ಗಣೇಶ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳನ್ನು ಪರಿಪೂರ್ಣ ವ್ಯಕ್ತಿಗಳಾಗಿ ನಿರ್ಮಾಣ ಮಾಡುವಲ್ಲಿ ಶಿಕ್ಷಣ ತುಂಬಾ ಅಗತ್ಯ. ಇದರ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಮನೋಭಾವನೆಯನ್ನು ಕೂಡ ಬಳಸಿಕೊಂಡಲ್ಲಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ನಿರ್ಮಾಣಗೊಳ್ಳುತ್ತಾರೆ. ಎಂದು ನುಡಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಸ್ಥಾನಿಕ ಆಯುಕ್ತ ಜಿ ವಿಜಯಕುಮಾರ್ ಮಾತನಾಡಿ, ತಂತ್ರಜ್ಞಾನ ಸಾಕಷ್ಟು ಬೆಳವಣಿಗೆಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆಯಾಗಿದೆ. ಒಳ್ಳೆ ಒಳ್ಳೆಯ ಅವಕಾಶಗಳು ಸಹ ಇದೆ. ಆದ್ದರಿಂದ ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಉತ್ತಮ ಅಭ್ಯಾಸ, ಕೌಶಲ್ಯಗಳಿಂದ ಹಾಗೂ ಒಳ್ಳೆಯ ವಾತಾವರಣದಲ್ಲಿ ಅಭ್ಯಾಸ ಮಾಡಿದಾಗ ಉತ್ತಮ ಸಾಧನೆ ಮಾಡಬಹುದು ಎಂದರು.

Bharat Scouts and Guides ಸ್ಥಳೀಯ ಸಂಸ್ಥೆಗಳ ಕಾರ್ಯದರ್ಶಿ ರಾಜೇಶ್ ಅವಲಕ್ಕಿ ಮಾತನಾಡಿ, ಶಿವಮೊಗ್ಗದ ಎಲ್ಲಾ ಶಾಲೆಯ ಮಕ್ಕಳು ಸರಸ್ವತಿ ಪೂಜೆಯಲ್ಲಿ ಪಾಲ್ಗೊಂಡು ಭಕ್ತಿ ಶ್ರದ್ಧೆ ಹಾಗೂ ಧನ್ಯತೆಯಿಂದ ಆರಾಧನೆ ಮಾಡುತ್ತ ಅಭ್ಯಾಸ ಮಾಡುತ್ತಾರೆ. ಪರೀಕ್ಷೆಯಲ್ಲಿ ಎಲ್ಲರೂ ಉತ್ತಮ ಅಂಕ ಪಡೆದು ಪಾಸಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಗೆ ಹೆಸರು ತರಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್ ಕಾನೂರು, ಸಹ ಕಾರ್ಯದರ್ಶಿ ವೈಆರ್ ವೀರೇಶಪ್ಪ, ರಾಘವೇಂದ್ರ ಹಾಗೂ ಪದಾಧಿಕಾರಿಗಳು ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳು ಶಿಕ್ಷಕರು ಉಪಸ್ಥಿತರಿದ್ದರು.

DC Shivamogga ಉಪಲೋಕಾಯುಕ್ತರಿಂದ ಪಾರ್ಕ್ ಗಳಿಗೆ ಅನಿರೀಕ್ಷಿತ ಭೇಟಿ

0

DC Shivamogga ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ‌ ಅವರು,ಸಾರ್ವಜನಿಕರು ನೀಡಿದ ಅಹವಾಲುಗಳ ಪ್ರಕಾರ ಶಿವಮೊಗ್ಗದ ಕೆಲವು ಉದ್ಯಾನವನಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕಣ್ಣೆದುರೇ ಅವರು‌ ಕಂಡಿರುವ‌ ಅವ್ಯವಸ್ಥೆಗಳ ಬಗ್ಗೆ‌ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿ ಇ ಓ ಅವರ ಗಮನಕ್ಕೆ ತಂದರು. ಸೂಕ್ತ ಪರಿಹಾರ‌ ಕೆಲಸ ಆರಂಭಿಸಲು ಸೂಚಿಸಿದರು.
DC Shivamogga ಜಿಲ್ಲಾಧಿಕಾರಿಗಳಾದ‌ ಗುರುದತ್ತ ಹೆಗಡೆ ಮತ್ತು‌‌ ಜಿಲ್ಲಾ ‌ಪಂಚಾಯತ್ ಸಿಇಓ ಎನ್. ಹೇಮಂತ್ ಅವರು‌‌ ಮತ್ತು‌‌ ಇತರ ‌ಇಲಾಖಾ ಮುಖ್ಯಸ್ಥರು ‌ಉಪಲೋಕಾಯುಕ್ತರಿಗೆ ಸಾಥ್‌ ನೀಡಿದರು.

Kuvempu University ಶ್ರೀಮತಿ ಕಾವ್ಯ ಅವರಿಗೆ ಕುವೆಂಪು ವಿವಿ ಪಿಎಚ್ ಡಿ ಪದವಿ

0

Kuvempu University ಕುವೆಂಪು ವಿಶ್ವವಿದ್ಯಾನಿಲಯವು ಶ್ರೀಮತಿ ಕಾವ್ಯ ಕೋಂ ಟಿ.ಎಸ್. ಯೋಗೀಶ್ ಇವರಿಗೆ “ಸಂಸ್ಕೃತದಲ್ಲಿ ಭಾಸನ ಏಕಾಂಕ ನಾಟಕಗಳ ವಿಮರ್ಶಾತ್ಮಕ ಅಧ್ಯಯ” ಎಂಬ ವಿಷಯದ ಕುರಿತು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥೆ ಹಾಗೂ ಪ್ರಾಧ್ಯಾಪಕಿ ಡಾ. ಎಂ.ಎ. ಶೃತಿಕೀರ್ತೀ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಪ್ರೌಢಪ್ರಬಂಧಕ್ಕೆ ಡಾಕ್ಟರೇಡ್ ಪದವಿ ನೀಡಿ ಗೌರವಿಸಿದೆ.
ಕಾವ್ಯರವರು ಶಿವಮೊಗ್ಗದ ಸಂಸ್ಕೃತ ಪಂಡಿತ ಡಾ. ಸಿ. ರೇಣುಕಾರಾಧ್ಯ ಇವರ ಪುತ್ರಿಯಾಗಿದ್ದು, ಶ್ರೀ ಜಗದ್ಗುರು ಗುರುಬಸವೇಶ್ವರ ಸಂಸ್ಕೃತ ಪಾಠಶಾಲೆ, ಶ್ರೀ ಬೆಕ್ಕಿನಕಲ್ಮಠದಲ್ಲಿ ಸಂಸ್ಕೃತ ಶಿಕ್ಷಕಿಯಾಗಿದ್ದಾರೆ

Sangeet Samarpan Trust ಕಲಿಯುವ ಎಳೆಯ‌ ಮನಸ್ಸುಗಳಿಗೆ ಸಂಗೀತ ಚೇತೋಹಾರಿ- ಕೆ.ವಿ.ಶಿವಕುಮಾರ್

0

Sangeet Samarpan Trust ಸಂಗೀತವೇ ಒಂದು ಭಾಷೆ. ಅದು ವಿಶ್ವದೆಲ್ಲೆಡೆ ಪಸರಿಸುವ ಜಾಗತಿಕ ಭಾಷೆ. ಇದಕ್ಕೆ ಯಾವುದೇ ಗಡಿಯ ಮಿತಿಗಳಿಲ್ಲ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷರು, ನಮ್ಮ ನಾಡು ಪತ್ರಿಕೆಯ ಸಂಪಾದಕರೂ ಅದ ಕೆ. ವಿ. ಶಿವಕುಮಾರ್ ಪ್ರತಿಪಾದಿಸಿದರು.
ಶಿವಮೊಗ್ಗ ನಗರದ “ಸಂಗೀತ್ ಸಮರ್ಪಣ್ ಟ್ರಸ್ಟ್” ವತಿಯಿಂದ ಆರ್.ಟಿ.ಓ. ಕಛೇರಿ ರಸ್ತೆಯ ಪತ್ರಿಕಾ ಭವನದ ಮೊದಲ ಮಹಡಿಯಲ್ಲಿ ನಡೆದ ಧ್ವನಿ ಸಂಸ್ಕರಣ, ಸಂಗೀತದ ವಿಧಾನ ಶಾಸ್ತ್ರ ಹಾಗೂ ಸುಗಮ ಸಂಗೀತದ ಕಲಿಕಾ ಶಿಬಿರ (ಕಾರ್ಯಾಗಾರ) ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮನುಷ್ಯನ ನೋವು ನಲಿವಿಗೆ ಸಂಗೀತ ಒಂದು ಪರಿಣಾಮಕಾರಿ ಅಭಿವ್ಯಕ್ತಿ. ಸಂಗೀತ ಮಾನಸಿಕ ಸಂತೋಷ, ಉಲ್ಲಾಸಕ್ಕೆ ಕಾರಣವಾಗುತ್ತದೆ ಎಂದರು.
ಸAಗೀತವೂ ಸೇರಿದಂತೆ ಯಾವುದೇ ಕಲೆಯ ಕಲಿಕೆ ಮತ್ತು ಗ್ರಹಿಕೆಗೆ ಅವಸರದ ಪ್ರವೃತ್ತಿ ಸಲ್ಲ. ಇದಕ್ಕೆ ವಯೋಮಾನದ ಮಿತಿಯೂ ಇರಲ್ಲ ಎಂದು ಕಿವಿ ಮಾತು ಹೇಳಿದ ಅವರು, ಮುಖ್ಯವಾಗಿ ನಮ್ಮ ಪರಂಪರಾಗತ ಸಂಗೀತ, ಸುಗಮ ಸಂಗೀತವನ್ನು ಪೋಷಕರು ಮಕ್ಕಳಿಗೆ ಕಲಿಸುವುದರ ಮೂಲಕ ಆ ಎಳೆಯ ಮನಸ್ಸನ್ನು ಚೇತೂಹಾರಿಯಾಗಿಸಬಹುದು. ನಿರಂತರ ಕಲಿಕೆಯಿಂದ ಮಾತ್ರ ಯಶಸ್ಸು ಸಾಧ್ಯ ಎಂಬುದನ್ನು ಮರೆಯಬಾರದು ಎಂದರು.
ಸುಗಮ ಸಂಗೀತ ಕ್ಷೇತ್ರಕ್ಕೆ ತನ್ನದೇ ಆದ ಶ್ರೇಷ್ಟ ಪರಂಪರೆ ಇದೆ. ಇಂದಿನ ವೇಗದ ಬದುಕಿನಲ್ಲಿ ಈ ಪ್ರಕಾರವನ್ನು ಮುಂದಿನ ಪೀಳಿಗೆಗೆ ದಾಟಿಸುವ ಅಗತ್ಯವೂ ಇದೆ. ಈ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಾಗಾರ ಹೆಚ್ಚು ಅರ್ಥಪೂರ್ಣ. ಗಾಯಕಿ ಸುರೇಖಾ ಹೆಗಡೆಯವರ ಶ್ರಮ ಸಾರ್ಥಕ ಎಂದ ಅವರು, ಶಿಬಿರದಲ್ಲಿ ಪಾಲ್ಗೊಂಡು ಕ್ರಮಬದ್ಧ ಕಲಿಕೆಯ ಮಾರ್ಗದರ್ಶನ ನೀಡಿರುವ ಸಂಪನ್ಮೂಲ ವ್ಯಕ್ತಿಗಳಾದ ಪುತ್ತೂರು ನರಸಿಂಹ ನಾಯಕ್, ಮ್ಯಾಂಡೋಲಿನ್ ಮುರಳಿಯವರ ಚಿಂತನೆಗಳನ್ನು ಗಾಯನ ಬದುಕಿನಲ್ಲಿ ಸಮರ್ಥವಾಗಿ ಬಳಸಿಕೊಳ್ಳಿ ಎಂದರು.
Sangeet Samarpan Trust ಎರಡು ದಿನಗಳ ಈ ಕಾರ್ಯಾಗಾರದಲ್ಲಿ ನಾಡಿನ ಪ್ರಖ್ಯಾತ ಸುಗಮ ಸಂಗೀತ ಗಾಯಕ, ಸಂಗೀತ ನಿರ್ದೇಶಕ ಪುತ್ತೂರು ನರಸಿಂಹ ನಾಯಕ್ ಹಾಗೂ ಸಂಗೀತ ಸಂಯೋಜಕ, ವ್ಯವಸ್ಥಾಪಕ ಮೆಂಡೋಲಿನ್ ಎನ್.ಎಸ್. ಪ್ರಸಾದ್ ರವರು ಪಾಲ್ಗೊಂಡು ಧ್ವನಿ ಸಂಸ್ಕರಣ, ಗ್ರಹಿಕೆ, ಸಂಗೀತದ ರಾಗ-ತಾಳಗಳ ಮಾಹಿತಿ, ಸಂಯೋಜನೆ ಮಹತ್ವ, ಜೊತೆಗೆ ಸುಗಮ ಸಂಗೀತದ ಕಲಿಕೆಯ ಮಾರ್ಗಗಳನ್ನು ಪರಿಚಯಿಸಿದರು.
ಹಳೆಯ ಹೆಸರಾಂತ ಕವಿಗಳ ಕಾಣದಿಹ ದಾರಿಯಲಿ, ಹುದುಗಲಾರದ ದುಃಖ, ದೃಢ ಆಗು ನೋವಿಂದ, ಯಾಕೋ ಕಾಣೆ ರುದ್ರವೀಣೆ, ಹೂವರಳುವ ಸಮಯದಲ್ಲಿ, ಎಲೆ ಎಲೆ ಮಲ್ಲಿಗೆ ಹೀಗೆ ಹಲವಾರು ಹೊಸ ಹೊಸ ಕವಿಗೀತೆಗಳನ್ನು ಆರಿಸಿ, ಉತ್ತಮ ರಾಗ ಸಂಯೋಜನೆಗಳನ್ನು ಹೊಂದಿರುವ, ಸಂಪನ್ಮೂಲ ವ್ಯಕ್ತಿಗಳೇ ಸಂಯೋಜಿಸಿದ ಒಂದಷ್ಟು ಹೊಸ ಭಾವಗೀತೆಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಿಕೊಡಲಾಯಿತು.
ಟ್ರಸ್ಟ್ ಅಧ್ಯಕ್ಷೆ, ಗಾಯಕಿ ಸುರೇಖಾ ಹೆಗಡೆ ಈ ಶಿಬಿರವನ್ನು ಸಂಘಟಿಸಿದ್ದರು. ನಗರದ ತಬಲ ಮಾಂತ್ರಿಕ ಪಂಡಿತ್ ತುಕಾರಾಂ ರಂಗಧೋಳ್ ತಬಲದಲ್ಲಿ ಹಾಗೂ ಕೀಬೋರ್ಡ್ ನಲ್ಲಿ ನಗರ ನಾಗಭೂಷಣ ಉಡುಪ ಸಾಥ್ ನೀಡಿದರು.
ಈ ಶಿಬಿರದಲ್ಲಿ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ನೂರಕ್ಕೂ ಹೆಚ್ಚು ಸಂಗೀತ ಕಲಿಕಾ ಅಭ್ಯರ್ಥಿಗಳು ಭಾಗವಹಿಸಿದ್ದರು.

Klive Special Article ಗ್ಯಾರಂಟಿಗಳ ಸುತ್ತ .. ಅಭಿವೃದ್ಧಿಯ ಹುತ್ತ.!

0
  • ಡಾ.ಸುಧೀಂದ್ರ.
  • ಪ್ರಧಾನ ಸಂಪಾದಕ.
    ಕೆ ಲೈವ್.

Klive Special Article ಈಗ ಗ್ಯಾರಂಟಿಗಳ ಯುಗ. ದೆಹಲಿಯಲ್ಲಿ ಕೇಜರಿವಾಲ್ ಹುಟ್ಟುಹಾಕಿದ ಈ ಸೂತ್ರ ಇಡೀ ದೇಶದ ಮತ್ತು‌‌ ಪ್ರಜಾಪ್ರಭುತ್ವದ ‌ನೈತಿಕತೆಯ ಬುಡ ಅಲ್ಲಾಡಿಸುತ್ತಿದೆ.
ನಾವು ಕಟ್ಟುವ ತೆರಿಗೆಯ‌ ಹಣದಿಂದಲೇ ಆಡಳಿತ ಪಕ್ಷವು ಯೋಜನೆಗಳನ್ನ ತಯಾರಿಸುತ್ತದೆ.
ಇದು ರಾಜನೀತಿ. ನಿಜ.
ಆದರೆ ನಮ್ಮ ತೆರಿಗೆ ಕೇವಲ ಅನುತ್ಪಾದಕ ರಂಗಕ್ಕೆ ವ್ಯಯವಾದರೆ ‌ಏನು ಲಾಭ. ಅದೂ ಅಲ್ಲದೆ‌
ಒಬ್ಬರ ತೆರಿಗೆ ಹಣವನ್ನ ಮತ್ತೊಬ್ಬರಿಗೆ ಸುರಿಯುವುದು ಯಾವ ನ್ಯಾಯ?
ಬಡವರ ಏಳಿಗೆ ಮಾಡಬೇಕು ನಿಜ.
ಅದು ನ್ಯಾಯಯುತವಾಗಿರಬೇಕು.
ರಾಜ್ಯ ಸರ್ಕಾರವು‌ ಸಂಗ್ರಹಿಸಿದ ತೆರಿಗೆಯಲ್ಲಿ ಕೇಂದ್ರಕ್ಕೆ‌ ತನ್ನ ಪಾಲು ಕೇಳುವುದು ನ್ಯಾಯವಾದರೆ ‌ನಮ್ಮಲ್ಲೇ ತೆರಿಗೆ‌‌ಕಟ್ಟುವ ಬಹುಜನ‌ ತಮ್ಮ‌ತೆರಿಗೆ ಹಣವು‌ ಅನುತ್ಪಾದಕ‌ ಕ್ಷೇತ್ರಕ್ಕೆ‌‌ ಖರ್ಚುಗೈಯುವುದು ಸಮಂಜಸವೆ? ಎಂದು‌ ವಿವೇಚಿಸುವುದು‌ ತಪ್ಪಲ್ಲ.

ಆರ್ಥಿಕತೆಯ ಮೇಲೆ‌ ಈತರಹದ ಗ್ಯಾರಂಟಿ ಕೊಡುಗೆಗೆಳು‌ ಪ್ರಭಾವ ಬೀರುತ್ತವೆಯೆ? ಎಂಬ ಪ್ರಶ್ನೆಗೆ ‌ವೈಜ್ಞಾನಿಕ ವಿಶ್ಲೇಷಣೆ ಇದೂವರೆಗೆ ಯಾವ ಆರ್ಥಿಕ ತಜ್ಞರೂ ಮಾಡಿಲ್ಲ. ರಾಜಕೀಯ‌ ಪಕ್ಷಗಳ. ಆರ್ಥಿಕ‌ ಸಲಹೆಗಾರರೂ ತಲೆಕೆಡಿಸಿಕೊಂಡಿಲ್ಲ.
ಜನ ಸಾಮಾನ್ಯರು‌‌ ಕೇವಲ‌ ಮಾಧ್ಯಮಗಳಲ್ಲಿ ನಡೆಯುವ‌‌ ಪರಸ್ಪರ‌
ಮಾತಿನ‌‌ ದೊಂಬರಾಟದಿಂದ ಅಷ್ಟಿಷ್ಟು ಅರ್ಥಮಾಡಿಕೊಳ್ಳಬೇಕಷ್ಟೆ.
ಬೇರೆ ರಾಜ್ಯಗಳಲ್ಲಿ‌ಜಾರಿಮಾಡಿರುವ ಗ್ಯಾರಂಟಿ‌‌‌ ಯೋಜನೆಯ ಫಲಿತಾಂಶ ಅಲ್ಲಿನ ಸರ್ಕಾರಗಳಿಗೆ‌‌ ಕ್ರಮೇಣ ಉಸಿರುಗಟ್ಟುವಂತೆ ಮಾಡಿದೆ.
ಈಗ ದೆಹಲಿಯಲ್ಲಿ‌‌ ಸರ್ಕಾರ ಬದಲಾಗಿದೆ. ಆದರೆ ಗ್ಯಾರಂಟಿ‌‌ ಕೊಡುಗೆ ವಿರೋಧಿಸಿದ ಬಿಜೆಪಿಯೂ‌ ಕೂಡ
ಮಹಿಳೆಯರಿಗೆ ಮಾಹೆಯಾನ‌ ರೂ
2500 ನೀಡಲು ನಿರ್ಧರಿಸಿದೆ.
Klive Special Article ನಮ್ಮ ರಾಜ್ಯದಲ್ಲಿ‌ ಗೃಹಲಕ್ಚ್ಮಿ‌ ಬಗ್ಗೆ ವಿವಾದ ನಿಂತೇ ಇಲ್ಲ. ಫ್ರೀಬಸ್ ಪ್ರಯಾಣದಿಂದ‌‌ ಸಾರಿಗೆ ಇಲಾಖೆಯ ಬಗ್ಗೆ ಸಚಿವರ‌ ಅಲ್ಲಲ್ಲೇ ತಮ್ಮ‌ ಒಳಸಂಕಟವನ್ನ ಮಾಧ್ಯಮಗಳಲ್ಲಿ ಹೊರಹಾಕುತಿದ್ದಾರೆ.
ಹಾಲಿನ ದರ, ನೋಂದಣಿ ದರ , ಸಾರ್ವಜನಿಕ ಪ್ರಯಾಣ ದರ, ಬೆಂಗಳೂರು ಜನಕ್ಕೆ ನೀರಿನ ತೆರಿಗೆ, ವಿದ್ಯುತ್ ದರ…ಹೀಗೆ ಬರೆ ಕೊಡುತ್ತಲೇ ಇದೆ‌‌ ರಾಜ್ಯ ಸರ್ಕಾರ.
ಎಸ್ ಸಿ/ ಎಸ್ ಟಿ ಗಳ ಅಭಿವೃದ್ದಿ ಅನುದಾನವನ್ನ ಗ್ಯಾರಂಟಿಗಳಿಗೆ ಖರ್ಚು ಮಾಡುತ್ತಿರುವ‌ ಆರೋಪಗಳನ್ನ ನಾವು ಕೇಳುತ್ತಿದ್ದೇವೆ.
ಎಲ್ಲೋ ಒಂದೆಡೆ ಸತ್ಯ ನಿಖರ‌‌ ಮತ್ತು‌ ಖಾರವಾಗಿದೆ. ಅದನ್ನ ಸರ್ಕಾರ ‌ಬಿಟ್ಟುಕೊಡುತ್ತಿಲ್ಲ.
ದರ ಏರಿಸದೇ ‌ಇಷ್ಟು ದೀರ್ಘ ವರ್ಷಗಳಾಗಿವೆ. ಅದಕ್ಕೋಸ್ಕರ‌‌‌ ವಿಧಿಯಿಲ್ಲದೇ ದರ ಏರಿಕೆ‌‌ ಅನಿವಾರ್ಯ
ಎಂಬ ಹೇಳಿಕೆಗಳು‌ ಎಷ್ಟು ಬಾಲಿಶ. ಎಂಬುದನ್ನ ಆಡಳಿತ‌‌ದ‌‌ಮಂದಿ ಅರ್ಥಮಾಡಿಕೊಳ್ಳಬೇಕು.
ತೆರಿಗೆ ಕಟ್ಟುವವರೂ ಪ್ರಜೆಗಳೆ. ಅವರೂ ಮತದಾರರೆ. ಆದರೆ ತೆರಿಗೆ ಸಲ್ಲಿಸುವ ವರ್ಗಕ್ಕೆ‌ ಸರ್ಕಾರದ ಅವಜ್ಞೆ ಯಾಕೆ?
ನಮ್ಮ ತೆರಿಗೆ ನಮಗೆ‌‌ ನೀಡಿ‌‌ ಎಂಬ ಆಂದೋಲನವನ್ನು ತೆರಿಗೆ ಕಟ್ಟುವ‌ ವರ್ಗ
ಆರಂಭಿಸಿದರೆ ಅಚ್ಚರಿಯೇನಿಲ್ಲ.

  • ಡಾ.ಸುಧೀಂದ್ರ.
  • ಪ್ರಧಾನ ಸಂಪಾದಕ.
    ಕೆ ಲೈವ್.

Karnataka Educational & Charitable Trust ಕಠಿಣ ಪರಿಶ್ರಮ, ನಿರಂತರ ಅಭ್ಯಾಸ & ಉತ್ತಮ ಆರೋಗ್ಯದಿಂದ ಪರೀಕ್ಷೆಯಲ್ಲಿ ಯಶಸ್ಸು- ಎಂ.ಚಂದ್ರಶೇಖರಯ್ಯ

0

Karnataka Educational & Charitable Trust ಎಸ್.ಎಸ್.ಎಲ್.ಸಿ.ಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಯು ಸಮೀಪಿಸುತ್ತಿದ್ದು, ದೈವಾನುಗ್ರಹದೊಂದಿಗೆ, ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ನಿರಂತರ ಅಭ್ಯಾಸ ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಪರೀಕ್ಷೆಯನ್ನು ಎದುರಿಸಿದಾಗ ಪರೀಕ್ಷೆಯಲ್ಲಿ ಯಶಸ್ಸು ಶತಃಸಿದ್ಧ ಎಂದು ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ (ರಿ.,)ನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ನಿವೃತ್ತ ಡಿ.ಪಿ.ಐ. ರೊ. ಚಂದ್ರಶೇಖರಯ್ಯ ಎಂ., ಇವರು ಅಭಿಪ್ರಾಯ ಪಟ್ಟರು.
ಅವರು ಇಂದು ನಗರದ ರೋಟರಿ ಪೂರ್ವ ಆಂಗ್ಲ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಶಾರದಾ ಪೂಜಾ ಕಾರ್ಯಕ್ರಮ ಹಾಗೂ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ತಮ್ಮ ಮಾತನ್ನು ಮುಂದುವರೆಸಿದ ಅವರು ಈ ವರ್ಷ ಶಿಕ್ಷಕರು ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ವಿಷಯಗಳಲ್ಲಿ ಏರ್ಪಡಿಸಿದ ವಿಶೇಷ ತರಗತಿಗಳ ಮೂಲಕ ಮಾಡಿದ ಗುಣಮಟ್ಟದ ಬೋಧನೆ ಅದಕ್ಕೆ ಮಕ್ಕಳು ಸ್ಪಂದಿಸಿದ ವಿಧಾನ ಇವುಗಳನ್ನು ಅವಲೋಕಿಸಿದಾಗ ಕಳೆದ ವರ್ಷದಂತೆ ಈ ವರ್ಷವು ಶೇ.100 ಫಲಿತಾಂಶವನ್ನು ಕಾಯ್ದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ರೊ. ಅರುಣ್ ದೀಕ್ಷಿತ್ ಇವರು ಮಾತನಾಡುತ್ತಾ, ವಿದ್ಯಾರ್ಥಿ ಜೀವನ ಒಂದು ಅಮೂಲ್ಯ ಅವಧಿಯಾಗಿದ್ದು, ಈ ಅವಧಿಯಲ್ಲಿ ಮೈಗೂಡಿಸಿಕೊಂಡ ಒಳ್ಳೊಳ್ಳೆ ಅಭ್ಯಾಸಗಳು, ಹವ್ಯಾಸಗಳ ಜೊತೆಗೆ ತಮ್ಮ ಪರಿಶ್ರಮದಿಂದ ಉತ್ತಮ ಅಂಕಗಳೊAದಿಗೆ ಒಳ್ಳೆಯ ಫಲಿತಾಂಶವನ್ನು ಗಳಿಸಿಕೊಟ್ಟು ಶಾಲೆಯ ಅತ್ಯುತ್ತಮ ಹಳೆಯ ವಿದ್ಯಾರ್ಥಿಗಳಾಗಬೇಕೆಂಬ ಕಿವಿ ಮಾತು ಹೇಳಿದರು.
ರೋಟರಿ ಶಾಲೆಯ ಪ್ರಾರಂಭದಿAದಲೂ ಉತ್ತಮ ಶಾಲಾ ಆಚರಣೆಗಳನ್ನು ಹಮ್ಮಿಕೊಂಡು ಬಂದಿದ್ದು ಅದರಂತೆ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ತಮಗೆ ಮನಪೂರ್ವಕವಾಗಿ ವಿದ್ಯೆಯನ್ನು ಧಾರೆ ಎರೆದ ಶಿಕ್ಷಕರ ಸೇವೆಯನ್ನು ಸ್ಮರಿಸುವುದರ ಜೊತೆಗೆ ಶಿಕ್ಷಕರೆಲ್ಲರಿಗೂ ಗುರು ಕಾಣಿಕೆ ನೀಡಿದರು. ಅದೇ ರೀತಿ ೯ನೇ ತರಗತಿ ವಿದ್ಯಾರ್ಥಿಗಳು ಶಾಲೆಯನ್ನು ಬಿಟ್ಟು ತೆರಳುತ್ತಿರುವ ೧೦ನೇ ತರಗತಿ ಸಹೋದರ-ಸಹೋದರಿಯರಿಗೆ ನೆನಪಿನ ಕಾಣಿಕೆ ನೀಡಿ ಶುಭ ಹಾರೈಸಿದರು.
ಶಿಕ್ಷಕರ ಪರವಾಗಿ ಸಹ ಶಿಕ್ಷಕಿ ಕಾವ್ಯ ಬಿ.ಎಸ್. & ವಿದ್ಯಾ ಪಿ., ಇವರು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಹಾಗೂ ಸಮಯ ಪರಿಪಾಲನೆ ಬಗ್ಗೆ ಕಿವಿ ಮಾತು ಹೇಳಿದರು.
Karnataka Educational & Charitable Trust ಈ ಸಮಾರಂಭದಲ್ಲಿ ಅತಿಥಿಗಳಾಗಿ ಹಾಜರಿದ್ದ, ಟ್ರಸ್ಟ್ನ ಉಪಾಧ್ಯಕ್ಷ ರೊ. ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್, ಟ್ರಸ್ಟ್ನ ಕಾರ್ಯದರ್ಶಿ ರೊ. ರಾಮಚಂದ್ರ ಎಸ್.ಸಿ., ಜಂಟಿ ಕಾರ್ಯದರ್ಶಿ ರೊ. ನಾಗವೇಣಿ ಎಸ್.ಆರ್., ಕ್ಲಬ್‌ನ ಕಾರ್ಯದರ್ಶಿ ರೊ. ಶಶಿಕಾಂತ್ ನಾಡಿಗ್, ಶಾಲೆಯ ಪ್ರಾಂಶುಪಾಲರಾದ ಸೂರ್ಯನಾರಾಯಣ್ ಆರ್., ಇವರುಗಳು ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯವನ್ನು ನಿವಾರಿಸಿಕೊಂಡು ಧೈರ್ಯ ಹಾಗೂ ಸಮಚಿತ್ತದಿಂದ ಪ್ರಶ್ನೆಗಳಿಗೆ ಉತ್ತರ ಬರೆಯುವ ವಿಧಾನವನ್ನು ಮನ ಮುಟ್ಟುವಂತೆ ತಮ್ಮ ಮಾತುಗಳಲ್ಲಿ ತಿಳಿಸಿದರು.
ಹಿರಿಯ ಟ್ರಸ್ಟಿ ರೊ. ರಾಮಚಂದ್ರ ರಾವ್ ಕೆ.ಜಿ., ತಮ್ಮ ಪತ್ನಿ ಹಾಗೂ ಸಂಬAಧಿಕರು ಬರೆದ ೭ ಪುಸ್ತಕಗಳನ್ನು ರೋಟರಿ ಶಾಲೆಯ ಗ್ರಂಥಾಲಯಕ್ಕೆ ನೀಡಿದರು. ಇದೇ ಸಂದರ್ಭದಲ್ಲಿ ಶಾಲೆಯಿಂದ ಬೀಳ್ಕೊಡುತ್ತಿರುವ ೧೦ನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಒಂದು ವಾಟರ್ ಫಿಲ್ಟರ್‌ನ್ನು ಕಾಣಿಕೆಯಾಗಿ ನೀಡಿದರು. ಇದೇ ಸಂದರ್ಭದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿದ ಮದನ್ ಕುಮಾರ್ & ಯಶಸ್ ಈ ಮಕ್ಕಳ ಪೋಷಕರಾದ ರವೀಂದ್ರ ದಂಪತಿಗಳನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಶಾಲೆಯ ಹಿರಿಯ ಶಿಕ್ಷಕಿ ಸುಷ್ಮಾ ಬಿ.ಎಲ್. ಸ್ವಾಗತಿಸಿ, ಶಿಕ್ಷಕಿ ಶ್ವೇತಾ ಎ.ಟಿ. ವಂದಿಸಿದರು. ಕು. ರುಕ್ಕಯ್ಯ ಕಾರ್ಯಕ್ರಮದ ನಿರ್ವಹಣೆ ಮಾಡಿದರು.

Guarantee Scheme ಗ್ಯಾರಂಟಿ ಹಣ ಅಕ್ರಮ ವ್ಯಯ ವಿರೋಧಿಸಿ ರಾಜ್ಯ ಬಿಜೆಪಿ & ಜೆಡಿಎಸ್ ಪ್ರತಿಭಟನೆ

0

Guarantee Scheme ಗ್ಯಾರಂಟಿ ಅನುಷ್ಠಾನ ಸಮಿತಿಗಾಗಿ ರಾಜ್ಯದ ಜನರ ತೆರಿಗೆ ಹಣವನ್ನು ದುರುಪಯೋಗ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಇಂದು ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ಶಾಸಕರುಗಳು ವಿಧಾನ ಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಶಿವಮೊಗ್ಗ ನಗರದ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭಾಗವಹಿಸಿದ್ದರು.

Guarantee Scheme ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ, ಪ್ರತಿಪಕ್ಷ ನಾಯಕರಾದ ಶ್ರೀ ಆರ್.‌ ಅಶೋಕ್‌, ವಿಧಾನ ಪರಿಷತ್‌ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಸುರೇಶ್ ಬಾಬು, ಜೆಡಿಎಸ್ ವಿಧಾನ ಪರಿಷತ್‌ನ ನಾಯಕರಾದ ಶ್ರೀ ಭೋಜೆಗೌಡ, ಬಿಜೆಪಿ ಮತ್ತು ಜೆಡಿಎಸ್‍ನ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು‌ ಉಪಸ್ಥಿತರಿದ್ದರು.

Directorate of Child Protection ಬಾಲಕರ ಬಾಲಮಂದಿರಕ್ಕೆ ಬಾಡಿಗೆ ಕಟ್ಟಡ ಒದಗಿಸಲು ಮಾಲೀಕರಿಂದ ಅರ್ಜಿ ಆಹ್ವಾನ

0

Directorate of Child Protection ಶಿವಮೊಗ್ಗ ನಗರದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಕ್ಕಳ ಪಾಲನಾ ಸಂಸ್ಥೆಯಾದ ಸರ್ಕಾರಿ ಬಾಲಕರ ಬಾಲಮಂದಿರದ ಬಾಡಿಗೆ ಕಟ್ಟಡ ಕರಾರು ಮುಗಿದಿದ್ದು ಹೊಸ ಬಾಡಿಗೆ ಕಟ್ಟಡದ ಅವಶ್ಯಕತೆ ಇದ್ದು ಆಸಕ್ತರು ಅರ್ಜಿ ಆಹ್ವಾನಿಸಲಾಗಿದೆ.
ಆಲ್ಕೋಳ ಗ್ರಾಮದ ಮಂಗಳ ಮಂದಿರ ಕಟ್ಟಡದಲ್ಲಿ ಬಾಡಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು ಪ್ರಸ್ತುತ ಬಾಡಿಗೆ ಕರಾರು ಮುಗಿದಿರುವ ಕಾರಣ ಸರ್ಕಾರಿ ಬಾಲಮಂದಿರ ಶಿವಮೊಗ್ಗ ಸಂಸ್ಥೆಗೆ ಬಾಡಿಗೆ ಕಟ್ಟಡದ ಅವಶ್ಯಕತೆ ಇರುತ್ತದೆ. ಕಛೇರಿ ನೆಡೆಸಲು ಹಾಗೂ 50 ಮಕ್ಕಳಿಗೆ (6 ರಿಂದ 18 ವರ್ಷದೊಳಗಿನ) ಮಲಗುವ ಕೊಠಡಿ 04, ವಿಶಾಲವಾದ ಅಡುಗೆ ಮನೆ 01, ಊಟದ ಕೊಠಡಿ 01, ಶೌಚಾಲಯ 07, ಸ್ನಾನ ಗೃಹ 05, ಓದುವ ಕೊಠಡಿ 02, ದಾಸ್ತಾನು ಕೊಠಡಿ 03, ಇತರೆ ಕೊಠಡಿ 03, ಗಳನ್ನೊಳಗೊಂಡAತೆ ಮೂಲಭೂತ ಸೌಕರ್ಯವುಳ್ಳ ಸುಸಜ್ಜಿತವಾದ ಬಾಡಿಗೆ ಕಟ್ಟಡ ಅವಶ್ಯವಿದ್ದು. 1 ಕಿ. ಮೀ ವ್ಯಾಪ್ತಿಯೊಳಗೆ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆ ಇರುವಂತAಹ ಬಾಡಿಗೆ ಕಟ್ಟಡ ಬೇಕಾಗಿರುತ್ತದೆ. ಪಿ.ಡಬ್ಲೂ.ಡಿ ನಿಗದಿ ಪಡಿಸಿರುವ ಅಥವಾ ಮಾಸಿಕ ರೂ. 40,000/- ಮಿತಿಗೊಳಪಟ್ಟು ಮಾಸಿಕ ಬಾಡಿಗೆಯನ್ನು ಪಾವತಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಬಾಲಕರ ಬಾಲಮಂದಿರದ ದೂ. ಸಂ. 08182-222131 ಹಾಗೂ ಅಧೀಕ್ಷಕರನ್ನು ಸಂಪರ್ಕಿಸಬಹುದಾಗಿದೆ ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರು ತಿಳಿಸಿದ್ದಾರೆ.

DC Shivamogga ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ- ಎನ್.ಹೇಮಂತ್

0

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಮಾ.21 ರಿಂದ ಏ.04 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದ್ದು, ಶಾಂತಿಯುತವಾಗಿ ಮತ್ತು ಪಾರದರ್ಶಕವಾಗಿ ಪರೀಕ್ಷೆಗಳು ನಡೆಯಲು ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿ.ಪಂ.ಸಿಇಓ ಹೇಮಂತ್ ಎನ್ ತಿಳಿಸಿದರು.
ಕುವೆಂಪು ರಂಗಮಂದಿರದಲ್ಲಿ ಮಾ.17 ರಂದು ಪರೀಕ್ಷೆಗೆ ನಿಯೋಜಿತಗೊಂಡ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾ.21 ರಿಂದ ಏ.4 ರವರೆಗೆ ಜಿಲ್ಲೆಯ 79 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದೆ. 23162 ರೆಗ್ಯುಲರ್, 266 ಪುನರಾವರ್ತಿತ, 439 ಖಾಸಗಿ ನೋಂದಾಯಿತ, 130 ಖಾಸಗಿ ಪುನರಾವರ್ತಿತ ಸೇರಿ ಒಟ್ಟು 23997 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಸೂಕ್ತ ಆಸನಗಳ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳ ಸೂಕ್ತ ವ್ಯವಸ್ಥೆ ಇರುವುದನ್ನು ಬಿಇಓ ಗಳು ಭೇಟಿ ನೀಡಿ ಖಾತ್ರಿ ಪಡಿಸಿಕೊಳ್ಳಬೇಕು.
ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಯಾವುದೇ ಜೆರಾಕ್ಸ್ ಅಂಗಡಿಗಳು ಅಲ್ಲಿ ಕಾರ್ಯ ನಿರ್ವಹಿಸುವಂತಿಲ್ಲ. ಮೊಬೈಲ್ ಸೇರಿದಂತೆ ಯಾವುದೇ ರೀತಿಯ ವಿದ್ಯುನ್ಮಾನ ಉಪಕರಣಗಳಿಗೆ ಅವಕಾಶವಿರುವುದಿಲ್ಲ.
ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಮಾಡಲು ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಓಆರ್‌ಎಸ್, ಪ್ರಥಮ ಚಿಕಿತ್ಸೆ ಕಿಟ್ ಇರಿಸಿಕೊಳ್ಳಲು ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಸಿಬ್ಬಂದಿ ಮತ್ತು ಜಾಗೃತ ದಳ ಅಧಿಕಾರಿಗಳನ್ನು ಹೊರತುಪಡಿಸಿ ಇನ್ನಾವ ಸಾರ್ವಜನಿಕರಿಗೆ, ಸಂಘ ಸಂಸ್ಥೆಗಳಿಗೆ ಪ್ರವೇಶ ಇರುವುದಿಲ್ಲ. ಜಿಲ್ಲೆಯಲ್ಲಿ ಪರೀಕ್ಷೆಗಳು ಪಾರದರ್ಶಕವಾಗಿ ನಡೆದು ಬರುತ್ತಿವೆ. ಈ ಬಾರಿಯ ಪರೀಕ್ಷೆಗಳು ಸಹ ಶಿಸ್ತಿನಿಂದ ಆಗಬೇಕು. ಕಳೆದ ವರ್ಷದಿಂದ ಪ್ರತಿ ಕೊಠಡಿಯಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. ವೆಬ್‌ಕಾಸ್ಟಿಂಗ್‌ನಲ್ಲಿ 3 ಹಂತದಲ್ಲಿ ವೀಕ್ಷಣೆ ಮಾಡಲಾಗುತ್ತದೆ. ಈ ಬಾರಿ ಕೃತಕ ತಂತ್ರಜ್ಞಾನ ಬಳಸಿ ಫೇಸ್ ಡಿಟೆಕ್ಷನ್ ಮಾಡಲಾಗುತ್ತಿದೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಕೊಠಡಿಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಬೇಕು. ಹಾಗೂ ಪರೀಕ್ಷೆ ನಿಯೋಜಿತ ಅಧಿಕಾರಿಗಳು ಎಚ್ಚರಿಕೆಯಿಂದ ಪರೀಕ್ಷೆಗಳನ್ನು ನಡೆಸಬೇಕು ಎಂದ ಅವರು ಜಿಲ್ಲೆಯಲ್ಲಿ ಈ ಬಾರಿಯೂ ಉತ್ತಮ ಫಲಿತಾಂಶ ಲಭಿಸುತ್ತದೆ ಎಂಬ ವಿಶ್ವಾಸವಿದೆ ಎಂದರು.

DC Shivamogga ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಅಥವಾ ಪರೀಕ್ಷೆ ಮುಂದೂಡಲಾಗಿದೆ ಎಂಬಂತಹ ಯಾವುದೇ ರೀತಿಯ ವದಂತಿಗಳಿಗೆ ವಿದ್ಯಾರ್ಥಿಗಳು ಕಿವಿಗೊಡಬಾರದು. ಬದಲಿಗೆ ಪರೀಕ್ಷೆಗೆ ಸಜ್ಜಾಗಿರಬೇಕು. ಪೋಷಕರು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಪರೀಕ್ಷೆ ಹಿಂದಿನ ದಿನ ಅಥವಾ ಬೆಳಿಗ್ಗೆ ಆಯಾಸವಾಗುವಂತಹ ಯಾವುದೇ ಕಾರ್ಯ ಮಾಡದೇ, ಪೌಷ್ಟಿಕವಾದ ಆಹಾರ ಸೇವಿಸಿ ಪರೀಕ್ಷೆಗೆ ಹಾಜರಾಗಬೇಕು. ನಿರ್ಭೀತಿಯಿಂದ ಪರೀಕ್ಷೆಯನ್ನು ಎದುರಿಸಬೇಕು. ಖಂಡಿತವಾಗಿ ಉತ್ತಮವಾಗಿ ಪರೀಕ್ಷೆ ಬರೆದು, ಉತ್ತಮ ಅಂಕ ಗಳಿಸುತ್ತೀರ. ಎನ್.ಹೇಮಂತ್, ಜಿ.ಪಂ ಸಿಇಓ

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಮುಖ್ಯ ಘಟ್ಟ. ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಫಲ ದೊರಕಲಿದೆ. ಪ್ರಯತ್ನ ಉತ್ತಮವಾಗಿರಲಿ. ಪೊಲೀಸ್ ಇಲಾಖೆ ವತಿಯಿಂದ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಭದ್ರತೆ, ಪ್ರಶ್ನ ಪತ್ತಿಕೆ, ಉತ್ತರ ಪತ್ರಿಕೆ ಸಾಗಾಟಕ್ಕೆ ಸಹಕಾರ ಸೇರಿದಂತೆ ಅಗತ್ಯ ಸೇವೆ ನೀಡಲಾಗುವುದು ಎಂದ ಅವರು ಜಿಲ್ಲೆಯಲ್ಲಿ ಮಾದರಿಯಾಗಿ ಪರೀಕ್ಷೆ ನಡೆಸೋಣ. ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ದೂರುಗಳು ಮತ್ತು ಸಹಾಯ ಬೇಕಿದ್ದಲ್ಲಿ ಜಿಲ್ಲಾ ಕಂಟ್ರೋಲ್ ರೂಂ ಸಂಖ್ಯೆ : 9480803300 ಗೆ ಕರೆ ಮಾಡಬಹುದು ಎಂದು ತಿಳಿಸಿದರು.
ಡಿಡಿಪಿಐ ಮಂಜುನಾಥ್ ಮಾತನಾಡಿ, 79 ಸ್ಥಾನಿಕ ಜಾಗೃತ ದಳದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲೆಯ 30 ಮಾರ್ಗಗಳಿಗೆ 30 ಜನ ಮಾರ್ಗಾಧಿಕಾರಿಗಳ ನೇಮಕ ಆಗಿದೆ. 79 ಮೊಬೈಲ್ ಸ್ವಾಧೀನಾಧಿಕಾರಿಗಳ ನೇಮಕ ಆಗಿದೆ. 30 ಅನ್ಯ ಇಲಾಖಾಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಕ ಮಾಡಲು ಸಿದ್ದತೆ ಮಾಡಲಾಗಿದೆ.
ಜಿಲ್ಲಾ ಪಂಚಾಯತ್ ಸಿಇಓ ರವರು ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉತ್ತಮ ಫಲಿತಾಂಶ ಬರಲು ಸಾಕಷ್ಟು ಚಟುವಟಿಕೆಗಳನ್ನು ಮಾಡಿಸುತ್ತಿದ್ದಾರೆ. ಬಿಇಓ, ಶಿಕ್ಷಕರು ಸಹ ಸಾಕಷ್ಟು ಪರಿಶ್ರಮ ಹಾಕಿದ್ದಾರೆ. ದೂರದಿಂದ ಬರುವ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆ ತರಲು ಉತ್ತಮ ವಾಹನ ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗಳು ಪರೀಕ್ಷೆ ವೇಳೆ ಊಟ ಬಿಟ್ಟು ಓದುವುದು ಮಾಡದೇ, ಊಟ-ಉಪಹಾರ ಸೇವಿಸಿ ಪರೀಕ್ಷೆ ಬರೆಯಲು ಬರಬೇಕು. ಒಟ್ಟಾರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಹಬ್ಬದ ರೀತಿಯಲ್ಲಿ ಆಚರಿಸೋಣ. ಎಲ್ಲ ಮಕ್ಕಳು ನಿರ್ಭೀತಿಯಿಂದ ಪರೀಕ್ಷೆಯಲ್ಲಿ ಪಾಲ್ಗೊಳ್ಳಿರಿ ಎಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ(ಪ್ರಾಥಮಿಕ ಶಿಕ್ಷಣ)ರು ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಸಿಪ್ರಿಯನ್ ಮೊಂತೆಯೋ ಮಾತನಾಡಿ, ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಪೂರ್ಣ ತಯಾರಿ ನಡೆಸಲಾಗಿದೆ. ಮೊಬೈಲ್ ಸ್ವಾಧಿನಾಧಿಕಾರಿ ಸೇರಿದಂತೆ ಎಲ್ಲ ಪರೀಕ್ಷಾ ನಿಯೋಜಿತ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಲ್ಲಿ ಶಾಂತ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ದೂರದಿಂದ ಬರುವ ಮಕ್ಕಳ ಪಟ್ಟಿ ಮಾಡಿ, ಅವರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಮಾಡಬೇಕು. ಮೂಲಭೂತ ಸೌಕರ್ಯಗಳನ್ನು ಒದಗಿಸಿ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಎಲ್ಲರೂ ಸಹಕರಿಸಬೇಕೆಂದು ಕೋರಿದರು.
ಸಭೆಯಲ್ಲಿ ಡಯಟ್‌ನ ಪ್ರಾಂಶುಪಾಲ(ಪ್ರಭಾರ)ರಾದ ಡಾ.ಹರಿಪ್ರಸಾದ್ ಜಿ.ವಿ, ಜಿಲ್ಲಾ ಖಜಾನಾಧಿಕಾರಿ ಸಾವಿತ್ರಿ, ಪರೀಕ್ಷೆಗೆ ನಿಯೋಜನೆಗೊಂಡ ಅಧಿಕಾರಿಗಳು ಪಾಲ್ಗೊಂಡಿದ್ದರು.

Karnataka State Writers’ Association ಖಾಕಿ ತೊಟ್ಟರೂ ಬರವಣಿಗೆ ಆಸಕ್ತಿ ಹೊಂದಿರುವ ತಿಮ್ಮೇಶಪ್ಪನವರಿಗೆ ಸಾಹಿತ್ಯ ಸೌರಭ ಪ್ರಶಸ್ತಿ

0

Karnataka State Writers’ Association ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಹಾಗೂ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ನಗರ ಕರ್ನಾಟಕ ಸಂಘದಲ್ಲಿ 5ನೇ ವರ್ಷಾಚರಣೆಯ ಸವಿ ನೆನಪಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮತ್ತು ಪ್ರಶಸ್ತ್ತಿ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ನಗರದ ಪೊಲೀಸ್ ಇಲಾಖೆಯಲ್ಲಿ ಸೇವೆ ಮಾಡುತ್ತಾ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ತಿಮ್ಮೇಶಪ್ಪ ಗುಡ್ಡೇಹಳ್ಳಿ ಅವರ ಸಾಧನೆ ಗುರುತಿಸಿ ರಾಷ್ಟ್ರಮಟ್ಟದ ಸಾಹಿತ್ಯ ಸೌರಭ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಜಿಲ್ಲಾಧ್ಯಕ್ಷರಾದ ರಾಮು ಎನ್. ರಾಥೋಡ್, ಡಾ. ಹಸೀನಾ, ಸಂಸ್ಥಾಪಕ ಅಧ್ಯಕ್ಷ ಮಧು ನಾಯ್ಕ್ ಲಂಬಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.