Saturday, March 7, 2026
Saturday, March 7, 2026
Home Blog Page 367

Kuvempu University ಸ್ವೀಕರಿಸಿದ 160 ದೂರುಗಳ‌‌ ಪೈಕಿ ಸ್ಥಳದಲ್ಲೇ 35 ಅಹವಾಲಿಗೆ ಪರಿಹಾರ ನೀಡಿದ ಉಪಲೋಕಾಯುಕ್ತರು

0

Kuvempu University ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಜನರು ಸರ್ಕಾರಿ ಅಧಿಕಾರಿಗಳ ವಿರುದ್ದ, ಸರ್ಕಾರಿ ಕೆಲಸ ಪಡೆಯುವಲ್ಲಿ ಆಗುತ್ತಿರುವ ವಿಳಂಬ ಇತರೆ ಕುರಿತು ಮಾನ್ಯ ನ್ಯಾಯಮೂರ್ತಿಗಳು ಹಾಗೂ ಉಪ ಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ಇವರಿಗೆ ನೇರವಾಗಿ ದೂರು ಸಲ್ಲಿಸಿದರು.

“ಸಾರ್ವಜನಿಕರಿಂದ ಕುಂದುಕೊರತೆಗಳ ಬಗ್ಗೆ ದೂರು ಸ್ವೀಕಾರ, ವಿಚಾರಣೆ ಹಾಗೂ ವಿಲೇವಾರಿ ಸಭಾ ಕಾರ್ಯಕ್ರಮದಲ್ಲಿ ಬುಧವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ರವೆಗೆ ವಿವಿಧ ಸರ್ಕಾರಿ ಇಲಾಖೆಗಳು, ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸುಮಾರು 160 ದೂರುಗಳು ಸ್ವೀಕೃತಗೊಂಡಿದ್ದು, ವಿಚಾರಣೆ ಕೈಗೊಂಡು, 35 ಅರ್ಜಿಗಳನ್ನು ಮಾನ್ಯ ಉಪ ಲೋಕಾಯುಕ್ತರು ವಿಲೇವಾರಿ ಮಾಡಿದರು.

ಮಹಾನಗರಪಾಲಿಕೆ, ಕಂದಾಯ ಇಲಾಖೆ, ಗ್ರಾ.ಪಂ ಗಳು, ಕುವೆಂಪು ವಿಶ್ವವಿದ್ಯಾಲಯ, ಅರಣ್ಯ ಇಲಾಖೆ, ಪಿಡಬ್ಲ್ಯೂಡಿ, ಸಹಕಾರ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವಿರುದ್ದ ಅರ್ಜಿದಾರರು ದೂರನ್ನು ಸಲ್ಲಿಸಿದರು.

ಉಪ ಲೋಕಾಯುಕ್ತರು ಸದರಿ ದೂರುಗಳ ವಿಚಾರಣೆ ನಡೆಸಿ, ಮಧ್ಯಾಹ್ನದ ಹೊತ್ತಿಗೆ ಸ್ಥಳದಲ್ಲೇ 35 ಅರ್ಜಿಗಳನ್ನು ವಿಲೇವಾರಿ ಮಾಡಿದರು. ತಮ್ಮ ವ್ಯಾಪ್ತಿಗೆ ಒಳಪಡದ ಪ್ರಕರಣಗಳಿಗೆ ಎಲ್ಲಿ ಹೋಗಬೇಕೆಂದು ಮಾರ್ಗದರ್ಶನ ಮಾಡಿದರು.

ರೂ.3 ಲಕ್ಷದೊಳಗಿನ ಆದಾಯ ಇರುವ ದೂರುದಾರರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ಪಡೆಯಲು ಸಲಹೆ ನೀಡಿದರು.

ಶಿವಮೊಗ್ಗ ತಾಲ್ಲೂಕಿನ ಭಾಗೀರಥಮ್ಮ ನವರು ಪೌತಿಯಾದ ಪತಿಯ ಮೂರನೇ ಪತ್ನಿಯಾಗಿದ್ದು ತಮ್ಮ ಪತಿಯ ಪಿಂಚಣಿ ಪಡೆಯುವ ಸಂಬಂಧ ಮರಣ ಪ್ರಮಾಣ ಪತ್ರ ಇತರೆ ದಾಖಲೆ ಕೋರಿ ಅರ್ಜಿ ಸಲ್ಲಿಸಿದ ಸಂಬಂಧ ದೂರು ನೀಡಿದ್ದು, ಈ ಕುರಿತು ವಿಚಾರಣೆ ನಡೆಸಿದ ಉಪ ಲೋಕಾಯುಕ್ತರು ಈ ಅರ್ಜಿಯು ತಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ, ಎಸಿ ಯವರಿಗೆ ಮೇಲ್ಮನವಿ ಸಲ್ಲಿಸುವಂತೆ ತಿಳಿಸಿದರು.

ಭದ್ರಾವತಿ ತಾಲ್ಲೂಕಿನ ಸಿದ್ಲೀಪುರ ಗ್ರಾಮದ ರವಿ ಆರ್ ಎಂಬುವವರು ಭದ್ರಾವತಿ ತಹಶೀಲ್ದಾರರು, ಎಡಿಎಲ್‌ಆರ್ ವಿರುದ್ದ ದೂರು ಸಲ್ಲಿಸಿ, ಪೋಡಿ ಮಾಡಿಕೊಡುವಂತೆ ಕೋರಿದರು.

ಉಪ ಲೋಕಾಯುಕ್ತರು, ದೂರುದಾರರಿಗೆ ನಿಯಮಾನುಸಾರ ಪೋಡಿಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು. ಕುವೆಂಪು ವಿವಿ ಯ ಪ್ರೊ. ರವೀಂದ್ರ ಅವರು ಹಳೆ ಪಿಂಚಣಿಯನ್ನು ಮುಂದುವರೆಸುವಂತೆ ಕುವೆಂಪು ವಿವಿಯ ಕುಲಪತಿಗಳಾದ ಪ್ರೊ.ಶರತ್ ಅನಂತಮೂರ್ತಿ ವಿರುದ್ದ ದೂರು ಸಲ್ಲಿಸಿದ್ದು, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ವಿಶ್ವವಿದ್ಯಾಲಯದಲ್ಲೇ ಈ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ತಿಳಿಸಿದರು.

Kuvempu University ವಿನೋಬನಗರದ ಎಸ್.ಸಿ.ಪ್ರಕಾಶ್‌ರವರು ಕಟ್ಟಡದಲ್ಲಿ ಬಹು ಮಹಡಿಗಳನ್ನು ಕಟ್ಟುತ್ತಲೇ ಹೋಗುತ್ತಿರುವ ಬಗ್ಗೆ ಪಾಲಿಕೆಯ ಆಯುಕ್ತರ ವಿರುದ್ಧ ದೂರು ನೀಡಿದಾಗ, ಲೋಕಾಯುಕ್ತರು ಈ ಕುರಿತಂತೆ ಸಂಬಂಧಿಸಿದ ಪಾಲಿಕೆ ಆಯುಕ್ತರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ವಿದ್ಯಾನಗರದ ಜಿ.ಪಿ.ಚಂದ್ರಶೇಖರಪ್ಪ ಸರ್ವೇ ನಂ 8 ರಲ್ಲಿ ನಿರ್ಮಾಣವಾಗಿರುವ ಕಾಲುವೆ ತರೆವುಗೊಳಿಸುವಂತೆ ಪಾಲಿಕೆಯ ಆಯುಕ್ತರ ವಿರುದ್ಧ ದೂರ ಸಲ್ಲಿಸಿದ್ದು, ಲೋಕಾಯುಕ್ತರು ಈ ಕಾಲವೆಯ ಸ್ಥಳ ಪರಿಶೀಲನೆ ಮಾಡಲು ಸೂಚಿಸಿ, ಒಂದು ವೇಳೆ ಕಾಲುವೆ ಅವರ ಜಾಗದಲ್ಲಿ ಹೋಗಿದ್ದರೆ ಅದಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ತಿಳಿಸಿದರು.

ಕಾರ್ಗಲ್‌ನ ಸೀತಾಕಟ್ಟೆ ಜೋಗದ ಶಂಕರ್ ರವರು ಕಾರ್ಗಲ್‌ನ ವಲಯ ಅರಣ್ಯಾಧಿಕಾರಿಗಳು ತಮ್ಮ ಅರ್ಜಿ ಬಾಕಿ ಇರುವಾಗಲೆ ಕಾನೂನು ಬಾಹಿರವಾಗಿ ಜಮೀನಿನಿಂದ ನಮ್ಮನ್ನು ಒಕ್ಕಲೆಬ್ಬಿಸಿದ್ದಾರೆ ಎಂದು ದೂರು ನೀಡಿದ್ದು, ಲೋಕಾಯುಕ್ತರು ಇದನ್ನು ಪರಿಶೀಲಿಸಿ ಕಾನೂನುಬಾಹಿರವಾಗಿ ಒಕ್ಕಲೆಬ್ಬಿಸಿದ್ದರೆ ಸೂಕ್ತ ಪರಿಹಾರ ನೀಡಬೇಕೆಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರಿನ ಗಣೇಶ್ ರವರು ಗ್ರಾ. ಪಂ ಒಂದರ ಸದಸ್ಯರು ಪಿಡಿಓ ಸಹಿಯನ್ನು ನಕಲಿ ಮಾಡಿದ್ದು ಈ ಸಂಬಂಧ ಜಿ.ಪಂ ಸಿಇಓ ಹೇಮಂತ್ ಅವರ ವಿರುದ್ಧ ದೂರು ನೀಡಿದ್ದು, ಲೋಕಾಯುಕ್ತರು ಇದು ರೆಗ್ಯುಲರ್ ದೂರು ಆಗಿರುವುದರಿಂದ ನೀವು ಪೊಲೀಸರಿಗೆ ದೂರು ನೀಡಿ ಎಂದ ಅವರು ಜಿ.ಪಂ. ಸಿಇಓ ಗೆ ಪೂರ್ವಭಾವಿ ವರದಿ ನೀಡಿ ಎಂದು ತಿಳಿಸಿದರು.

ಶಿವಮೊಗ್ಗ ಅಶೋಕನಗರದ ಎ.ಸುಮತಿ ಮತ್ತು ಎ.ಸರೋಜರವರು ಪ್ರತ್ಯೇಕವಾಗಿ ವಾರ್ಡ್ ನಂ 31 ರ ವಿಷಯ ನಿರ್ವಾಹಕ ಗುರುಮೂರ್ತಿಯವರ ಕುರಿತು ಮನೆ ಖಾತೆ ವಿಚಾರವಾಗಿ ಪಾಲಿಕೆ ಆಯುಕ್ತರ ವಿರುದ್ಧ ದೂರು ನೀಡಿದರು. ಈ ದೂರಿನ ವಿಚಾರಣೆ ನಡೆಸಿ ಸ್ಥಳದಲ್ಲೇ ವಿಲೇವಾರಿ ಮಾಡಿ ದೂರುದಾರರಿಗೆ ಖಾತೆಗಳನ್ನು ನೀಡಲಾಯಿತು.

ಆದರ್ಶ ಪ್ರಾವಿಜನ್ ಸ್ಟೋರ್ ಮಾಲೀಕರು ಎಪಿಎಂಸಿಯ ಕಾರ್ಯದರ್ಶಿ ನಾಗರಾಜ ವಿರುದ್ಧ ದೂರು ನೀಡಿದ್ದು, ವಿಚಾರಣೆ ಕೈಗೊಂಡ ಉಪ ಲೋಕಾಯುಕ್ತರು ಇದು ಸಿವಿಲ್ ನ್ಯಾಯಾಲಯ ವ್ಯಾಪ್ತಿಗೆ ಬರುವುದರಿಂದ ಅಲ್ಲಿ ಪ್ರಕರಣ ದಾಖಲಿಸಲು ತಿಳಿಸಿದರು.

ಶಿವಮೊಗ್ಗ ಗೋಪಿ ಸರ್ಕಲ್‌ನ ಎಂ.ಎಸ್. ಅರುಂಧತಿ, ನಮ್ಮ ಕೈಗಾರಿಕಾ ಜಾಗದಲ್ಲಿ ಇತರೆ ವ್ಯಕ್ತಿ ಕಟ್ಟಡ ಕಟ್ಟಿಕೊಂಡಿದ್ದಾರೆ ಅದನ್ನು ಬಿಡಿಸಿಕೊಡಬೇಕೆಂದು ಪಾಲಿಕೆ ಆಯುಕ್ತ ವಿರುದ್ಧ ದೂರು ನೀಡಿದ್ದು, ಇದು ಖಾಸಗಿ ವ್ಯಕ್ತಿಗಳ ನಡುವಿನ ವಿವಾದವಾದ್ದರಿಂದ ಇದನ್ನು ಕೋರ್ಟ್ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಲೋಕಾಯುಕ್ತರು ಸೂಚನೆ ನೀಡಿದರು.

ಶಿವಮೊಗ್ಗದ ಬಿ.ಮಂಜುನಾಥ್ ತಮ್ಮ ಜಮೀನಿನಲ್ಲಿ ರಸ್ತೆ ನಿರ್ಮಾಣವಾಗಿದ್ದು ಅದನ್ನು ತೆರವುಗೊಳಿಸುವಂತೆ ಕೋರಿದರು. ಉಪ ಲೋಕಾಯುಕ್ತರು ಸದರಿ ರಸ್ತೆ ಸರ್ಕಾರಿ ಅಥವಾ ಖಾಸಗಿ ಜಮೀನಿನಲ್ಲಿ ಇದೆಯಾ ಎಂದು ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದರು.

ಗೀತ ಮತ್ತು ಗ್ರಾಮಸ್ಥರು ಮೋಜಪ್ಪನ ಹೊಸೂರು ಅಬ್ಬಲಗೆರೆ ಇವರು ಗ್ರಾಮ ಆಡಳಿತ ಅಧಿಕಾರಿ ಯೋಗೇಶ್ ನಾಯಕ್ ವಿರುದ್ದ ಸಲ್ಲಿಸಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಿಲ್ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದ್ದು, ಇತ್ಯರ್ಥವಾದ ನಂತರ ಅರ್ಜಿ ಸಲ್ಲಿಸುವಂತೆ ತಿಳಿಸಿದರು.

ಬೆಳಿಗ್ಗೆಯಿಂದಲೇ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ಪ್ರತ್ಯೇಕ ಕೌಂಟರ್‌ಗಳನ್ನು ತೆರೆದು ಸಾರ್ವಜನಿಕರಿಂದ ಕುಂದು ಕೊರತೆಗಳ ದೂರು ಅರ್ಜಿಗಳನ್ನು ಸ್ವೀಕರಿಸಿ ಅವರಿಗೆ ಟೋಕನ್ ನಂ. ನೀಡಿ ಸಭೆ ಸರಾಗವಾಗಿ ಜರುಗುವಂತೆ ವ್ಯವಸ್ಥೆ ಮಾಡಲಾಗಿತ್ತು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ, ಜಿ.ಪಂ. ಸಿಇಓ ಎನ್. ಹೇಮಂತ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಜಿ.ಕೆ. ಮಿಥುನ್ ಕುಮಾರ್, ಜಿಲ್ಲಾ ನ್ಯಾಯಾಧೀಶರು ಮತ್ತು ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರು ಹಾಗೂ ವಿಚಾರಣೆಗಳು-14 ರ ಎನ್.ಆರ್. ಲೋಕಪ್ಪ, ಜಿಲ್ಲಾ ನ್ಯಾಯಾಧೀಶರು ಮತ್ತು ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರು ಹಾಗೂ ವಿಚಾರಣೆಗಳು-05 ರ ಜಿ.ವಿ. ವಿಜಯನಂದ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದÀ ಸದಸ್ಯ ಕಾರ್ಯದರ್ಶಿಯಾದ ಎಂ.ಎಸ್ ಸಂತೋಷ್, ಸಿವಿಲ್ ನ್ಯಾಯಾಧೀಶರು ಮತ್ತು ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿಯಾದ ಕಿರಣ್ ಪಿ.ಎಂ. ಪಾಟೀಲ್, ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಂಜುನಾಥ್ ಚೌದರಿ, ಜಿಲ್ಲಾ ಅರಣ್ಯಾಧಿಕಾರಿ ಶಿವಶಂಕರ್, ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Child Rights and Protection ಫೋಕ್ಸೋ‌ ಪ್ರಕರಣಗಳ ತುರ್ತುದೂರು ದಾಖಲಿಸದಿದ್ದಲ್ಲಿ ಠಾಣಾಧೀಕಾರಿಗಳೂ ಶಿಕ್ಷೆಗೆ ಅರ್ಹರು- ನ್ಯಾ.ಎಂ.ಎಸ್.ಸಂತೋಷ್

0

Child Rights and Protection ಬಾಲ್ಯವಿವಾಹ ನಿಷೇಧ ಕಾಯ್ದೆ ಪೋಕ್ಸೋ ಕಾಯ್ದೆ-2012ರ ಅಡಿಯಲ್ಲಿ ದಾಖಲಾಗುವ ಮಕ್ಕಳ ಸುರಕ್ಷತೆ ಮತ್ತು ಕಾನೂನಿನಡಿಯಲ್ಲಿರುವ ಸೌಲಭ್ಯದ ಕುರಿತು ಮಾಹಿತಿ ನೀಡಿದರು. ಪೋಕ್ಸೋ ಪ್ರಕರಣಗಳಲ್ಲಿ ಎಂಎಲ್‌ಸಿಯನ್ನು ತುರ್ತಾಗಿ ಮಾಡಿಸುವ ಅಗತ್ಯ ಇದೆ. ಠಾಣಾ ಅಧಿಕಾರಿಗಳು ಈ ಮಾಹಿತಿಯನ್ವಯ ದೂರು ದಾಖಲಿಸಲು ನಿಗದಿತ ಅವದಿಯಲ್ಲಿ ಕ್ರಮ ವಹಿಸದಿದ್ದಲ್ಲಿ ಅವರು ಕೂಡಾ ಕಾನೂನಿನಡಿಯಲ್ಲಿ ಶಿಕ್ಷೆಗೆ ಅರ್ಹರಾಗುತ್ತಾರೆ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್. ತಿಳಿಸಿದರು.
Child Rights and Protection ಅವರು ಇತ್ತೀಚೆಗೆ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತುರಕ್ಷಣೆ) ಕಾಯ್ದೆ 2015, ತಿದ್ದುಪಡಿಕಾಯ್ದೆ 2021 ಹಾಗೂ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತುರಕ್ಷಣೆ) ಮಾದರಿ ನಿಯಮಗಳು, 2016, ತಿದ್ದುಪಡಿ ಮಾದರಿ ನಿಯಮಗಳು, 2022, Adoption Regulations-2022, ಮಕ್ಕಳ ಸಹಾಯವಾಣಿ-1098/112, ಮಕ್ಕಳ ಪಾಲನಾ ಸಂಸ್ಥೆಗಳ ದಾಖಲಾತಿ ನಿರ್ವಹಣೆ ಮತ್ತು ಮೂಲಭೂತ ಸೌಕರ್ಯಗಳು,ಶೈಕ್ಷಣಿಕ ಸೌಲಭ್ಯಗಳು, ಮಕ್ಕಳ ರಕ್ಷಣಾ ನೀತಿ-2016, ಪರಿಷ್ಕರಣೆ-2023, ಬಾಲ್ಯವಿವಾಹ ನಿಷೇಧ ಕಾಯ್ದೆ-2006, ಮಕ್ಕಳ ಹಕ್ಕುಗಳು ಮತ್ತು ಸುರಕ್ಷತೆ, ಪೋಕ್ಸೋ ಕಾಯ್ದೆ-2012, ಮಕ್ಕಳ ಸಹಾಯವಾಣಿ-1098 ಸಾಮಾಜಿಕ ಜಾಲತಾಣ/ಅಪರಾಧಗಳ ಕುರಿತು ಜಿಲ್ಲಾ ಮಟ್ಟದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ನೋಂದಣಾಧಿಕಾರಿಗಳು, ಜನನ ಮತ್ತು ನೋಂದಣಿ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು, ಜಿಲ್ಲಾ ಮಟ್ಟದ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳು, ಸಖಿ ಕೇಂದ್ರ, ಮಕ್ಕಳ ಸಹಾಯವಾಣಿ, ಸರ್ಕಾರಿ, ಅನುದಾನಿತ ಮತ್ತು ಸರ್ಕಾರೇತರ ಮಕ್ಕಳ ಪಾಲನಾ ಸಂಸ್ಥೆಗಳ ಅಧಿಕಾರಿ/ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಾಜರಿದ್ದ ತಾಜುದ್ದೀನ್‌ಖಾನ್, ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ, ಶಿವಮೊಗ್ಗ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಸ್ತುತ ದಿನಮಾನಗಳಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿದ್ದು ಮಕ್ಕಳ ಪಾಲನಾ ಸಂಸ್ಥೆಗಳಿAದ ಕುಟುಂಬಕ್ಕೆ ಹೋದವರು ಪುನ: ಸಂಸ್ಥೆಗೆ ಮರಳಿದಂತಹ ಮಕ್ಕಳ ಸುರಕ್ಷತೆಯ ಹಿತದೃಷ್ಠಿಯಿಂದ ವೈಧ್ಯಕೀಯ ತಪಾಸಣೆ ನಡೆಸುವುದು ಅತಿ ಮುಖ್ಯವಾಗಿರುತ್ತದೆ. ಹದಿಹರೆಯದ ಗರ್ಭಧಾರಣೆ ಮಾಹಿತಿಯು ವೈದ್ಯರಿಗೆ ತಿಳಿದ ಸಂದರ್ಭದಲ್ಲಿ ತಕ್ಷಣ ದೂರು ನೀಡುವುದು ಹಾಗೂ ಅನಾಥ, ಪರಿತ್ಯಕ್ತ ಮಕ್ಕಳನ್ನು ಕಾನೂನಿನಡಿ ದತ್ತು ಪ್ರಕ್ರಿಯೆಗೆ ಒಳಪಡಿಸಿದ್ದಲ್ಲಿ ಅಂತಹ ಮಕ್ಕಳಿಗೆ ನೀಡುವ ಉತ್ತಮ ಭವಿಷ್ಯದ ಕುರಿತು ಸಿಗುವ ಆತ್ಮತೃಪ್ತಿಯು ನಮ್ಮೆಲ್ಲರಿಗೆ ಹೆಮ್ಮೆ ತರುವಂತಹ ವಿಷಯವಾಗಿದೆ ಎಂದರು.
ಮAಜುನಾಥ ಆರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾಘಟಕ, ಶಿವಮೊಗ್ಗ ಇವರು ಅಧ್ಯಕ್ಷೀಯ ನುಡಿಗಳನ್ನು ಆಡುತ್ತಾ ಜಿಲ್ಲಾ ಮಟ್ಟದಲ್ಲಿ ಎಲ್ಲಾ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದು, 2022-23ನೇ ಸಾಲಿನಲ್ಲಿ ಒಟ್ಟು 116 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 64 ಪ್ರಕರಣಗಳನ್ನು ತಡೆಹಿಡಿಯಲಾಗಿರುತ್ತದೆ. 52 ಪ್ರಕರಣಗಳಿಗೆ ಎಫ್.ಐ.ಆರ್ ದಾಖಲಾಗಿರುತ್ತದೆ. 2023-24ನೇ ಸಾಲಿನಲ್ಲಿ ಒಟ್ಟು 140 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 63 ಪ್ರಕರಣಗಳನ್ನು ತಡೆಹಿಡಿಯಲಾಗಿರುತ್ತದೆ. 77 ಪ್ರಕರಣಗಳಿಗೆ ಎಫ್.ಐ.ಆರ್ ದಾಖಲಾಗಿರುತ್ತದೆ. 2024-25ನೇ ಸಾಲಿನ ಇಲ್ಲಿಯವರೆಗೆ ಒಟ್ಟು 100 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 30 ಪ್ರಕರಣಗಳನ್ನು ತಡೆಹಿಡಿಯಲಾಗಿರುತ್ತದೆ. 69 ಪ್ರಕರಣಗಳಿಗೆ ಎಫ್.ಐ.ಆರ್ ದಾಖಲಾಗಿರುತ್ತದೆ. ಜಿಲ್ಲೆಯಲ್ಲಿರುವ ಎಲ್ಲಾ ಇಲಾಖೆಗಳ ಬಾಲ್ಯವಿವಾಹ ನಿಷೇದಾಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಸಿದ್ದಲ್ಲಿ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ತರಬೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಂಜುನಾಥ ಪಾಟೀಲ್, ಈಸ್ಟ್ ಟ್ರಾಫಿಕ್ ಪೊಲೀಸ್ ಠಾಣೆ, ಶಿವಮೊಗ್ಗ ಇವರು ಬಾಲ್ಯವಿವಾಹ ನಿಷೇಧ ಕಾಯ್ದೆ-2006, ಮಕ್ಕಳ ಹಕ್ಕುಗಳು ಮತ್ತು ಸುರಕ್ಷತೆ, ಪೋಕ್ಸೋ ಕಾಯ್ದೆ-2012, ಮಕ್ಕಳ ಸಹಾಯವಾಣಿ-1098 ಸಾಮಾಜಿಕ ಜಾಲತಾಣ/ಅಪರಾಧಗಳ, ಮಕ್ಕಳ ಅನೈತಿಕ ಸಾಗಾಣಿಕೆ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾಘಟಕದ ಅಧಿಕಾರಿಗಳು ಬಾಲನ್ಯಾಯ (ಮಕ್ಕಳ ಪಾಲನೆ ಮತ್ತುರಕ್ಷಣೆ) ಕಾಯ್ದೆ 2015, ತಿದ್ದುಪಡಿಕಾಯ್ದೆ 2021 ಹಾಗೂ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತುರಕ್ಷಣೆ) ಮಾದರಿ ನಿಯಮಗಳು, 2016, ತಿದ್ದುಪಡಿ ಮಾದರಿ ನಿಯಮಗಳು, 2022, Adoption Regulations-2022, ಮಕ್ಕಳ ಸಹಾಯವಾಣಿ-1098/112, ಮಕ್ಕಳ ಪಾಲನಾ ಸಂಸ್ಥೆಗಳ ದಾಖಲಾತಿ ನಿರ್ವಹಣೆ ಮತ್ತು ಮೂಲಭೂತ ಸೌಕರ್ಯಗಳು, ಶೈಕ್ಷಣಿಕ ಸೌಲಭ್ಯಗಳು, ಮಕ್ಕಳ ರಕ್ಷಣಾ ನೀತಿ-2016, ಪರಿಷ್ಕರಣೆ-2023 ಕುರಿತು ಮಾಹಿತಿ ನೀಡಿದರು.
ತರಬೇತಿ ಕಾರ್ಯಕ್ರಮದಲ್ಲಿ ಗಾಯಿತ್ರಿ ಡಿ.ಎಸ್, ರಕ್ಷಣಾಧಿಕಾರಿ(ಸಾಂಸ್ಥಿಕ) ಇವರು ಸ್ವಾಗತಿಸಿದರು. ಗಣೇಶ್ ಹೆಚ್. ರಕ್ಷಣಾಧಿಕಾರಿ(ಅಸಾಂಸ್ಥಿಕ) ಇವರು ನಿರೂಪಿಸಿದರು. ಭರತ್ ಎಸ್. ಎಂ. ಸಮಾಜ ಕಾರ್ಯಕರ್ತರು ವಂದಿಸಿದರು

Bhadra Command Area Development Authority ನೀರಿನ ಸದ್ಬಳಕೆ ಮಾಡುವಲ್ಲಿ‌‌ ಸಹಕಾರ ಸಂಘಗಳದ್ದು ಮಹತ್ವದ ಪಾತ್ರ- ಕೆ.ಪಿ.ಅಂಶುಮಂತ್

0

Bhadra Command Area Development Authority ನೀರು ಬಳಕೆದಾರರ ಸಹಕಾರ ಸಂಘಗಳ ಮೂಲಕ ನೀರಿನ ಸದ್ಬಳಕೆ ಕಾರ್ಯ ಆಗುತ್ತಿದ್ದು ಇವು ಸ್ವಾಯತ್ತ ಸಂಸ್ಥೆಗಳAತೆ ಕೆಲಸ ಮಾಡುತ್ತಿವೆ ಎಂದು ಕಾಡಾ ಅಧ್ಯಕ್ಷರಾದ ಡಾ. ಕೆ.ಪಿ.ಅಂಶುಮಂತ್ ಶ್ಲಾಘಿಸಿದರು.
ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ನೀರು ಬಳಕೆದಾರರ ಸಂಘಗಳಿಗೆ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರವು ತಾಂತ್ರಿಕ, ಸಹಕಾರ ಹಾಗೂ ರೈತ ಸಂಪರ್ಕ ಈ ಮೂರು ಹಂತದಲ್ಲಿ ಕೆಲಸ ಮಾಡುತ್ತಿದೆ. ನೀರು ಬಳಕೆದಾರರ ಸಂಘಗಳನ್ನು ಬಲವರ್ಧನೆ ಮಾಡಲಾಗುತ್ತಿದೆ. ಇವು ಸ್ವಾಯತ್ತ ಸರ್ಕಾರದ ರೀತಿಯಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡುತ್ತಿವೆ. ಕಾಡಾ ವ್ಯಾಪ್ತಿಯಲ್ಲಿ ಒಟ್ಟು 537 ಸಂಘಗಳಿದ್ದು 120 ಸಕ್ರಿಯವಾಗಿವೆ.
ಕೊನೆ ಭಾಗದ ರೈತರಿಗೂ ನೀರು ತಲುಪಿಸುವ ಯೋಜನೆ ಇದ್ದು, ಸರ್ಕಾರ ರೈತಪರವಾಗಿ ಹೆಜ್ಜೆ ಇಡುತ್ತಿದೆ. ಭದ್ರಾ ಮೇಲ್ದಂಡೆ, ತುಂಗಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದ್ದು, ಈ ವ್ಯಾಪ್ತಿಯಲ್ಲಿ ಸಂಘದ ಸದಸ್ಯರು, ರೈತರನ್ನು ಗುರುತಿಸಿದ್ದೇವೆ. ನಿರಂತರ ಅವರ ಸಂಪರ್ಕದಲ್ಲಿದ್ದೇವೆ. ಸ್ಥಳೀಯ ಅಹವಾಲು ಸ್ವೀಕಾರ ಮಾಡಲಾಗುತ್ತಿದೆ. ಸಂಘಗಳು ಪ್ರಗತಿ ಸಾಧಿಸಿವೆ. ರೈತರು ಬಲವಾಗಿದ್ದರೆ ಮಾತ್ರ ಪ್ರಗತಿ ಸಾಧ್ಯ. ನೀರು ಸದ್ಬಳಕೆ ಬಗ್ಗೆ ಅರಿವು ಮೂಡಿಸುವಲ್ಲಿ ಸೊಸೈಟಿಗಳ ಪಾತ್ರ ಮಹತ್ವದ್ದಾಗಿದೆ. ರೈತರಿಂದ ಹಾಗೂ ಸಂಘದಿAದ ಪ್ರಾಧಿಕಾರಕ್ಕೆ ನಿರಂತರ ಸಹಕಾರ ಲಭಿಸಿದೆ ಎಂದರು.
Bhadra Command Area Development Authority ಕಾಡಾ ವ್ಯಾಪ್ತಿಯಲ್ಲಿ ಬರುವ ಐಸಿಸಿ ಅಧ್ಯಕ್ಷರು, ಉಸ್ತುವಾರಿ ಸಚಿವರ ಸಂಪೂರ್ಣ ಸಹಕಾರ ದೊರೆಯುತ್ತಿದೆ. ಕೊನೆ ಭಾಗದ ರೈತರಿಗೆ ನೀರು ತಲುಪಿಸಲು ಐತಿಹಾಸಿಕ ಕಾನೂನುಗಳನ್ನು ರೂಪಿಸಿ ಅನುಷ್ಟಾನಗೊಳಿಸಲಾಗಿದೆ. ಅಧಿಕಾರಿಗಳ ಶ್ರಮವೂ ಇದೆ. ಭೂಮಿ ಆರೋಗ್ಯ ಕಾಪಾಡಲು ನರೇಗಾ ಮತ್ತು ಕಾಡಾ ಸಹಯೋಗದಲ್ಲಿ ಸವಳು ಜವಳು ಕುರಿತು ಪೈಲಟ್ ಕಾರ್ಯಕ್ರಮ ರೂಪಿಸಲಾಗುತ್ತಿದೆ. 10 ತಾಲ್ಲೂಕುಗಳ ಮುಂಚೂಣಿಯಲ್ಲಿರುವ ಸಂಘಗಳನ್ನು ಗುರುತಿಸಿ ಬಲವರ್ಧನೆಗಾಗಿ ಯಂತ್ರೋಪಕರಣ ಮತ್ತು ಅನುದಾನ ವಿತರಣೆ ಮಾಡಲಾಗಿದೆ. ರೈತರು ಮತ್ತು ಸಂಘಗಳ ಅನುಕೂಲಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಸಹಕಾರ ಸಂಘಗಳನ್ನು ಉತ್ತೇಜಿಸಲು, ಬೆಳೆಯಲು ಅವಕಾಶ ನೀಡಲು ಸೌಲಭ್ಯ ವಿತರಣೆ ಮಾಡಲಾಗುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕಾಡಾ ಮಾಜಿ ಮುಖ್ಯ ಇಂಜಿನಿಯರ್ ಚೆಲುವರಾಜು, ಕೃಷಿಯಲ್ಲಿ ನೀರಿನ ಸದ್ಬಳಕೆಯಾಗಬೇಕು. ನೀರಿನ ಉಳಿತಾಯ ಮಾಡುವಂತಹ ಪದ್ದತಿ ಅಳವಡಿಸಿಕೊಂಡು, ಕೃಷಿಯಲ್ಲಿ ಹೊಸ ಚಿಂತನೆ , ಹೊಸ ಆವಿಷ್ಕಾರಗಳು ಹಾಗೂ ನವೀನ ತಂತ್ರಜ್ಞಾನವನ್ನು ಅಳವಡಿಕೊಳ್ಳಬೇಕು. ಅಕ್ಕಪಕ್ಕದವರಿಗೆ ಉತ್ತೇಜನ ನೀಡಿ ಮಾದರಿಯಾಗಬೇಕು ಎಂದು ಹೇಳಿದರು.
ಸಹಕಾರ ಸಂಘಗಳು ಸ್ವಾಯತ್ತ ಸಂಸ್ಥೆಯ ರೀತಿ ಕೆಲಸ ಮಾಡುತ್ತಿವೆ. ನೀರಿನ ಕಂದಾಯ ಸಂಗ್ರಹ ಅಷ್ಟೇ ಪ್ರಮುಖ ಅಲ್ಲ. ಕೋಲ್ಡ್ ಸ್ಟೋರೇಜ್, ಗೊಬ್ಬರ, ಬೀಜ, ಮೈಕ್ರೋ ಇರಿಗೇಷನ್ ಕೃಷಿಯಲ್ಲಿ ಹೊಸ ಆವಿಷ್ಕಾರ ಪದ್ಧತಿಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು. ಜಲಾಶಯದಲ್ಲಿ ಯಥೇಚ್ಛ ನೀರು ಇಲ್ಲ. ನೀರಿನ ಲಭ್ಯತೆ ಕಡಿಮೆ ಆಗುತ್ತಿರುವಾಗ ಬದಲಾವಣೆ ಆಗದಿದ್ದರೆ ಕಷ್ಟವಾಗುತ್ತದೆ. ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಿದೆ. ನಾಗರೀಕ ಸೌಲಭ್ಯಗಳು, ಕೈಗಾರಿಕೆಗೂ ನೀರು ನೀಡಬೇಕಿದೆ. ಆದ್ದರಿಂದ ಬದಲಾವಣೆಗೆ ಹೊಂದಿಕೊಳ್ಳಬೇಕಿದೆ. ಸಣ್ಣ ನೀರಾವರಿ ಉತ್ತೇಜಿಸಲು ಸಹಕಾರ ಸಂಘಗಳ ಸಹಕಾರ ಬೇಕು. ಯಾವ್ಯಾವ ಬೆಳೆಗೆ ಎಷ್ಟು ನೀರು ಬೇಕೆಂಬ ಬಗ್ಗೆ ತಿಳಿಯಬೇಕು. ಇಸ್ರೇಲ್ ಕೃಷಿ ಮಾದರಿ ನೋಡಲು ರೈತರಿಗೆ ಅವಕಾಶ ನೀಡಲಾಗಿದೆ. ಬೋರ್ ಹನಿ ನೀರಾವರಿ ಯಿಂದ ಉತ್ತಮ ಬೆಳೆಯನ್ನು ಬೆಳೆಯಲಾಗುತ್ತಿದೆ ಎಂದ ಅವರು ಹೊಸ ಹೊಸ ಅನ್ವೇಷಣೆ ಅಳವಡಿಸಿಕೊಳ್ಳಬೇಕು. ರೈತರು ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಬೆಳೆ ಬೆಳೆಯತ್ತಿರುವುದನ್ನು ಕಾಣುತ್ತಿದ್ದೇವೆ. ನೀರು ಬಳಕೆದಾರರು ಸಂಘದ ಮೂಲಕ ಬದಲಾವಣೆ ತರಬೇಕು ಎಂದರು.
ತುಮಕೂರು ಮತ್ತು ಚಿತ್ರದುರ್ಗ ಬ್ರಾಂಚ್‌ಗಳಲ್ಲಿ 2.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಣ್ಣ ನೀರಾವರಿ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿದೆ. ನೀರಿನ ಸದ್ಬಳಕೆ ಬಗ್ಗೆ ರೈತರೆಲ್ಲ ಯೋಚಿಸಬೇಕು. ನೀರಿನ ಉಳಿತಾಯ ದ ಬಗ್ಗೆ ಚಿಂತಿಸಬೇಕು. ಸರ್ಕಾರ ಹೊಸ ಹೊಸ ಯೊಜನೆಗಳು, ಪದ್ದತಿಗಳನ್ನು ತರುತ್ತಿದೆ ಅದನ್ನು ಅಳವಡಿಸಿಕೊಳ್ಳಬೇಕು ಎಂದರು.
ಎಲೆಬೇತೂರು ನೀರು ಬಳಕೆದಾರರ ಸಂಘದ ಅಧ್ಯಕ್ಷ ಹೆಚ್.ಬಸವರಾಜಪ್ಪ ಮಾತನಾಡಿ, ಸಂಘದ ಸರಿಯಾದ ಸದ್ಬಳಕೆ ಮಾಡಿಕೊಂಡಲ್ಲಿ ಅಭಿವೃದ್ಧಿ ಸಾಧ್ಯ. ಸಂಘದವರು ರೈತರ ಮನವೊಲಿಸಿ ನೀರು ಸದ್ಬಳಕೆ ಬಗ್ಗೆ ತಿಳಿಸಬೇಕು. ಯಾವ್ಯಾವ ಬೆಳೆಗೆ ಎಷ್ಟೆಷ್ಟು ನೀರು ಬೇಕೆಂದು ಸಂಘಗಳು ಅರಿವು ಮೂಡಿಸಬೇಕು. ಯಥೇಚ್ಛವಾಗಿ ಬಳಸುವವರ ಮನವೊಲಿಸಿ, ಕಡಿಮೆ ಬಳಕೆ ಮಾಡಿ ನೀರು ಉಳಿತಾಯ ಮಾಡಲು ಉತ್ತೇಜಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಹತ್ತು ಸಹಕಾರ ಸಂಘಗಳಿಗೆ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಯಿತು.
ಕಾಡಾ ಆಡಳಿತಾಧಿಕಾರಿ ಸತೀಶ್, ತಾಂತ್ರಿಕ ಅಧೀಕ್ಷಕ ಅಭಿಯಂತರ ಪ್ರಶಾಂತ್, ನಾಗೇಶ್ ಢೋಂಗ್ರೆ, ನಾಗ ಸುಲೋಚನ ಹಾಗೂ ಹತ್ತು ಸಂಘಗಳ ಪದಾಧಿಕಾರಿಗಳು ಉಪಸ್ಥಿತರದ್ದರು.

Narayana Hrudayalaya ಮಾರ್ಚ್ 23. ಬಂಟರ ಸಂಘದ ಆಶ್ರಯದಲ್ಲಿ‌ ಉಚಿತ ಆರೋಗ್ಯ ತಪಾಸಣಾ ಶಿಬಿರ

0

Narayana Hrudayalaya ಬಂಟರ ಯಾನೆ ನಾಡವರ ಸಂಘ ಶಿವಮೊಗ್ಗ ಇವರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮಾ.23ರ ಭಾನುವಾರ ಬೆಳಿಗ್ಗೆ 10ಗಂಟೆಗೆ ಬಂಟರ ಭವನ,100 ಅಡಿ ರಸ್ತೆ, ಗೋಪಾಲಗೌಡ ಬಡಾವಣೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.

ನಾರಾಯಣ ಹೃದಯಾಲಯ, ವಾಸನ್ ಐ ಕೇರ್ ಮತ್ತು ದಂತ ವೈದ್ಯ ಸಂಯುಕ್ತ ಆಶ್ರಯದಲ್ಲಿ ಬಿಪಿ, ಜಿಆರ್‌ಬಿಸ್, ಇಸಿಜಿ, ಇಸಿಹೆಚ್‌ಓ, ದಂತ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ಇದರ ಸದುಪಯೋಗವನ್ನು ಸಮಾಜ ಬಾಂಧವರು ಮತ್ತು ಸಾರ್ವಜನಿಕರು ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷರು-ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಮುಂಚಿತವಾಗಿ ಹೆಸರು ನೊಂದಾಯಿಸುವವರು ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿ.ಮಂಜುನಾಥ್ ಮೊ : ೯೬೧೧೫೮೪೧೫೩ ಸಂಪರ್ಕಿಸಬಹುದು.

International Women’s Day ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕು-ಕೆ.ವಿ.ಯಶೋದಾ ರಾಜಣ್ಣ

0

International Women’s Day ಮಹಿಳೆಯರು ಪ್ರತಿಯೊಂದು ಕ್ಷೇತ್ರಗಳಲ್ಲಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ ಎಂದು ಕಾವೇರಿ ನದಿ ರಕ್ಷಣಾ ಸಮಿತಿ ಕಾರ್ಯಾಧ್ಯಕ್ಷೆ ಕೆ.ವಿ.ಯಶೋಧ ರಾಜಣ್ಣ ಅಭಿಪ್ರಾಯಪಟ್ಟರು.
ಭದ್ರಾವತಿಯಲ್ಲಿ ಚುಂಚಾದ್ರಿ ಮಹಿಳಾ ವೇದಿಕೆಯಿಂದ ರೋಟರಿ ಕ್ಲಬ್ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಉದ್ಯಮ, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಉನ್ನತ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಚುಂಚಾದ್ರಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಡಾ. ಆರ್. ಅನುರಾಧ ಪಟೇಲ್ ಮಾತನಾಡಿ, ಅನೇಕ ಸಮಾಜಮುಖಿ ಕೆಲಸಗಳಲ್ಲಿ ಮಹಿಳೆಯರು ಸಾಧನೆ ಮಾಡಿ ಸಮಾಜಕ್ಕೆ ಗೌರವ ತಂದಿದ್ದಾರೆ. ಅವರೆಲ್ಲರೂ ನಮಗೆ ಆದರ್ಶ. ಸ್ಥಳೀಯವಾಗಿಯೂ ಸಾಧನೆ ಮಾಡಿದ ಅನೇಕ ಮಹಿಳೆಯರು ನಮ್ಮಲ್ಲಿ ಇದ್ದಾರೆ. ಮುಂದೆ ಸಹ ಇನ್ನೂ ಹೆಚ್ಚಿನ ಸಮಾಜಮುಖಿ ಕೆಲಸಗಳನ್ನು ಮಾಡಿ ಮನೆಗೂ, ಕುಟುಂಬಕ್ಕೂ ಸಮಾಜಕ್ಕೂ ಕೀರ್ತಿ ತರಬೇಕು ಎಂದರು.
International Women’s Day ಚುಂಚಾದ್ರಿ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಧಾಮಣಿ ವೆಂಕಟೇಶ್ ಹಾಗೂ ಎಲ್ಲಾ ಪದಾಧಿಕಾರಿಗಳು ಕಾರ್ಯಕ್ರಮವನ್ನು ಅದ್ದೂರಿಯಾಗಿ ಯಶಸ್ವಿಯಾಗಿ ನೆರವೇರಿಸಿದರು. ಸುಧಾ ವೆಂಕಟೇಶ ಅವರು ಎಲ್ಲಾ ಮಹಿಳೆಯರಿಗೂ ಮಹಿಳಾ ದಿನಾಚರಣೆ ಶುಭಾಶಯ ಕೋರಿದರು.
ಮಂಡ್ಯ ಕನ್ನಡ ಸಾಹಿತ್ಯ ಪರಿಷತ್‌ನ ಸುಜಾತ ಕೃಷ್ಣ, ಅಂಭ್ರಣಿ ಸಾಂಸ್ಕೃತಿಕ ವೇದಿಕೆ ಶಿವಮೊಗ್ಗ ಅಧ್ಯಕ್ಷೆ ಗಾಯತ್ರಿ ಯಲ್ಲಪ್ಪ ಗೌಡ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಮಹಿಳಾ ಘಟಕ ಹಾಸನ ಕಾರ್ಯಾಧ್ಯಕ್ಷೆ ಸುಧಾಮಣಿ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಹಾಸನ ಜಿಲ್ಲಾಧ್ಯಕ್ಷೆ ತಾರಾಮಣಿ, ನಳಿನಿ ಪ್ರವೀಣ್, ರೋಟರಿ ಕ್ಲಬ್ ಭದ್ರಾವತಿ ಅಧ್ಯಕ್ಷೆ ಜಿ ರಾಘವೇಂದ್ರ ಉಪಾಧ್ಯಾಯ ಹಾಜರಿದ್ದರು.

ಅಧಿಕಾರಿಗಳು‌ ಜನಸ್ನೇಹಿಯಾಗಿ‌ ಕಾರ್ಯ ನಿರ್ವಹಿಸಿ- ನ್ಯಾ.ಕೆ.ಎನ್.ಫಣೀಂದ್ರ

0

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ-ಸಿಬ್ಬಂಧಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಸೇವೆ ಬಯಸಿ ಬರುವ ಸಾರ್ವಜನಿಕರಿಗೆ ಅನವಶ್ಯಕ ವಿಳಂಬಕ್ಕೆ ಅವಕಾಶವಿಲ್ಲದಂತೆ ಸೇವೆ ಒದಗಿಸಿಕೊಡುವ ಮೂಲಕ ಜನಸ್ನೇಹಿಯಾಗಿ ನಡೆದುಕೊಳ್ಳುವಂತೆ ಉಪಲೋಕಾಯುಕ್ತ ನ್ಯಾ. ಕೆ.ಎನ್.ಫಣೀಂದ್ರ ಅವರು ತಿಳಿಸಿದರು.
ಅವರು ಶಿವಮೊಗ್ಗ ನಗರದ ಗಾಂಧಿ ಉದ್ಯಾನವನ, ತುಂಗಾನಾಲೆ, ಇಂದಿರಾ ಕ್ಯಾಂಟೀನ್‌ ಮತ್ತು ನವುಲೆ ಕೆರೆ ಪ್ರದೇಶಗಳಿಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.ಗಾಂಧಿ ಉದ್ಯಾನವನಕ್ಕೆ ಭೇಟಿ ನೀಡಿದ ಅವರು ಅಲ್ಲಿನ ಪಾದಚಾರಿಗಳು ಮಾಡಿದ ಸಾಮಾನ್ಯದಿಂದ ಗಂಭೀರ ಸ್ವರೂಪದ ಆರೋಪಗಳನ್ನು ಆಲಿಸಿದ ಅವರು, ಮುಂದಿನ 20ದಿನಗಳೊಳಗಾಗಿ ವಾಯುವಿಹಾರಿಗಳಿಗೆ ಅನುಕೂಲವಾಗುವಂತೆ ಉದ್ಯಾನವನದ ಆಯ್ದ ನಾಲ್ಕು ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, ಬೆಳಕು, ಒದಗಿಸುವುದರ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸೂಚಿಸಿದರು.
ನಿಗಧಿಪಡಿಸಿದ ಕಾಲಮಿತಿಯಲ್ಲಿ ಸಂಪೂರ್ಣ ಕಾರ್ಯವನ್ನು ಪೂರ್ಣಗೊಳಿಸಬೇಕು. ಅಲ್ಲಿಯವರೆಗೂ ಪಾಲಿಕೆ ಆಯುಕ್ತರ ವಿರುದ್ಧ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಳ್ಳಲಾಗುವುದು. ಸಮಸ್ಯೆಗಳಿಗೆ ಪರಿಹಾರ ದೊರಕಿದ ಮಾಹಿತಿ ನೀಡಿದ ನಂತರ ದಾಖಲಿಸಿಕೊಳ್ಳಲಾದ ದೂರನ್ನು ವಿಲೇ ಮಾಡಲಾಗುವುದು ಎಂದ ಅವರು, ಪಾಲಿಕೆ ಅಧಿಕಾರಿಗಳು, ಉದ್ಯಾನವನದ ಉಸ್ತುವಾರಿ ಸಿಬ್ಬಂಧಿಗಳು ತಮ್ಮ ಜಬಾಬ್ದಾರಿಯರಿತು ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಈ ಉದ್ಯಾನವನಕ್ಕೆ ಸ್ಥಳೀಯ ಲೋಕಾಯುಕ್ತ ಅಧಿಕಾರಿ-ಸಿಬ್ಬಂಧಿಗಳು ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲಿಸಿ ವಾಸ್ತವ ವರದಿ ನೀಡುವರು ಎಂದವರು ನುಡಿದರು.
ಉದ್ಯಾನವನದ ಅಭಿವೃದ್ಧಿಗೆ ಹಣಕಾಸಿನ ಅಗತ್ಯವಿದ್ದಲ್ಲಿ ಕೂಡಲೇ ಅನುದಾನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಪಾಲಿಕೆ ಆಯುಕ್ತರು ಉದ್ಯಾನವನದಲ್ಲಿ ಕೈಗೊಳ್ಳಬೇಕಾಗಿರುವ ತುರ್ತು ಕಾರ್ಯಗಳ ಬಗ್ಗೆ ಕೂಡಲೇ ಕ್ರಿಯಾಯೋಜನೆಯನ್ನು ರಚಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅವರು ಸೂಚಿಸಿದರು. ಸಾರ್ವಜನಿಕರೂ ಕೂಡ ಇಲ್ಲಿನ ಸ್ವಚ್ಚತೆಗೆ ಗಮನಹರಿಸುವಂತೆ ಸೂಚಿಸಿದರು. ಮುಂದಿನ ದಿನಗಳಲ್ಲಿ ಉದ್ಯಾನವನದಲ್ಲಿ ಮಕ್ಕಳ ಸುರಕ್ಷತೆಗೆ ಕ್ರಮಗಳನ್ನು ಕೈಗೊಳ್ಳುವಂತೆಯೂ ಅವರು ಸಲಹೆ ನೀಡಿದರು.
ದಿನನಿತ್ಯ ಉದ್ಯಾನವನಕ್ಕೆ ಆಗಮಿಸುವ ವಾಯುವಿಹಾರಿಗಳು ತಮ್ಮದಾದ ಸಂಘಟನೆಯೊಂದನ್ನು ರಚಿಸಿಕೊಂಡು ಪಾರ್ಕನ್ನು ಮಾದರಿಯನ್ನಾಗಿ ನಿರ್ಮಿಸುವ ಬಗ್ಗೆ ಚರ್ಚಿಸಬೇಕು. ಅಲ್ಲದೇ ಸಕಾಲದಲ್ಲಿ ಪಾಲಿಕೆ ಅಧಿಕಾರಿಗಳಿಗೆ ಸಲಹೆ ನೀಡುವಂತೆ ಅವರು ಸೂಚಿಸಿದರು.
ಉದ್ಯಾನವನದ ಅಭಿವೃದ್ಧಿಗೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿರುವುದರ ಜೊತೆಗೆ ಅನುದಾನದ ಕೊರತೆಯೂ ಪ್ರಮುಖವಾದ ಕಾರಣವಾಗಿರುವುದನ್ನು ಗುರುತಿಸಲಾಗಿದೆ. ಇಲ್ಲಿನ ಅಭಿಯಂತರರು ಮುಂದಿನ ಆರು ತಿಂಗಳೊಳಗಾಗಿ ಉದ್ಯಾನವನ್ನು ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದಾರೆ. ಸಮಸ್ಯೆಗಳನ್ನು ಆಧ್ಯತೆಯ ಮೇಲೆ ಇತ್ಯರ್ಥಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ತುಂಗಾ ನಾಲೆಗೆ ಅಧಿಕಾರಿಗಳೊಂದಿಗೆ ಲೋಕಾಯುಕ್ತರ ಭೇಟಿ : ರಾಜೇಂದ್ರ ನಗರದಲ್ಲಿ ಹರಿದು ಹೋಗುವ ತುಂಗಾನಾಲೆ ನಗರದ ತ್ಯಾಜ್ಯದಿಂದ ತುಂಬಿಹೋಗಿದ್ದು, ಸಾಂಕ್ರಾಮಿಕ ರೋಗಗಳ ಆಗರವಾಗಿದೆ. ಇದನ್ನು ಸ್ವಚ್ಚಗೊಳಿಸುವಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸ್ವಚ್ಚತೆ ಎಂಬುದು ಸರ್ಕಾರದ ಇಲಾಖೆಗಳ ಕಾರ್ಯ ಮಾತ್ರವಲ್ಲ, ಇಲ್ಲಿನ ನಿವಾಸಿಗಳು ಕೂಡ ನಾಲೆಗೆ ಕಸ ಹಾಕದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಈ ಪ್ರದೇಶದಲ್ಲಿನ ಅಶುದ್ಧ ಗಾಳಿ ಮತ್ತು ತ್ಯಾಜ್ಯದ ನಿಯಂತ್ರಣಕ್ಕೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳುವಂತೆ ಉಪಲೋಕಾಯುಕ್ತರು ಪಾಲಿಕೆ ಅಭಿಯಂತರ ಭರತ್‌ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮಾತನಾಡಿ, ಈ ನಾಲೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಿಸಿದ ಇಲಾಖಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ತುರ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ಆಸ್ಪತ್ರೆಯ ತ್ಯಾಜ್ಯ ಹಾಕುತ್ತಿರುವವರ ಬಗ್ಗೆ ಮಾಹಿತಿ ನೀಡಿದಲ್ಲಿ ಅಂತಹ ಆಸ್ಪತ್ರೆಗಳ ವೈದ್ಯರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ನವುಲೆ ಕೆರೆ ಭೇಟಿ : ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಸ್ಥಳೀಯ ಜಿಲ್ಲಾಧಿಕಾರಿ, ಮಹಾನಗರಪಾಲಿಕೆ ಆಯುಕ್ತರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಅಲ್ಲಿನ ಕೆರೆಯಲ್ಲಿ ಹೆಚ್ಚಿನ ಹೂಳು ತುಂಬಿದ್ದು ಮುಚ್ಚಿಹೋಗುವ ಸ್ಥಿತಿಯಲ್ಲಿರುವುದನ್ನು ಗಮನಿಸಿದ ಅವರು, ಸಂಬಂಧಿಸಿದ ಇಲಾಖಾ ಅಧಿಕಾರಿಗಳು ನಗರದ ಹೃದಯ ಭಾಗದಲ್ಲಿರುವ ಇಂತಹ ಬೃಹತ್‌ಕೆರೆಯನ್ನು ಸ್ವಚ್ಚಗೊಳಿಸಿ, ಸಾರ್ವಜನಿಕ ಬಳಕೆಗೆ ಅನುಕೂಲವಾಗುವಂತೆ ರೂಪಿಸಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಕಚೇರಿಯ ನ್ಯಾ.ಲೋಕಪ್ಪ ಎನ್.ಆರ್, ಜೆ.ವಿ.ವಿಜಯಾನಂದ್‌, ಕಿರಣ್‌ ಪಿ.ಎಂ.ಪಾಟೀಲ್‌, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್‌ಎಂ.ಎಸ್., ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಜಿ.ಕೆ.ಮಿಥುನಕುಮಾರ್‌, ಲೋಕಾಯುಕ್ತ ಎಸ್.ಪಿ. ಮಂಜುನಾಥಚೌಧರಿ‌ಎಂ.ಹೆಚ್.ಮತ್ತಿತರರು ಉಪಸ್ಥಿತರಿದ್ದರು.

Kateel Ashok Pai College ಪ್ರತಿಯೋರ್ವ ವಿದ್ಯಾರ್ಥಿಯು ತನ್ನ ಪದವಿಯ ಸಂಗಡ ಔದ್ಯೋಗಿಕ‌ ಕೌಶಲ್ಯಗಳ ಪರಿಜ್ಞಾನ ಹೊಂದಿರಬೇಕು- ಡಾ.ಸುರುಜಿತ್ ಸಿಂಗ್ ಪಾಬ್ಲಾ

0

Kateel Ashok Pai College ಶಿವಮೊಗ್ಗದಲ್ಲಿ ಕಟೀಲು ಅಶೋಕ ‌ಪೈ ಸ್ಮಾರಕ ಕಾಲೇಜಿಗೆ ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಿಂದ ವಿಶೇಷ ಟ್ಯಾಲಿ ಹಾಗೂ ಐಟಿ ಕೋರ್ಸ್ ಗಳಿಗೆ ಸಹಯೋಗ – ಬ್ರಿಗೇ ಡಿಯರ್ ಡಾಕ್ಟರ್ ಸುರಜಿತ್ ಸಿಂಗ್ ಪಾಬ್ಲಾ
ದಿನಾಂಕ 18 ಮಾರ್ಚ್ 2025 ರಂದು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದ ಸಹಯೋಗದೊಂದಿಗೆ ನಡೆಸಲಾಗುವ ಟ್ಯಾಲಿ ಹಾಗೂ ಐಟಿ ಕೋರ್ಸುಗಳ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಉದ್ಘಾಟನೆಯನ್ನು ನೆರವೇರಿಸಿದ ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರದ ಅಧ್ಯಕ್ಷರಾದ ಬ್ರಿಗೇಡ್ ಡಾಕ್ಟರ್ ಸುರುಜಿತ್ ಸಿಂಗ್ ಪಾಬ್ಲಾ ರವರು ಮಾತನಾಡುತ್ತಾ “ಕಟೀಲು ಅಶೋಕ ಪೈ ಸ್ಮಾರಕ ಕಾಲೇಜು ಒಂದು ಬಹಳ ಮುಖ್ಯವಾದ ಹೆಜ್ಜೆಯನ್ನು ಇಟ್ಟಿದೆ .

ಇಂದು ಔದ್ಯೋಗಿಕ ಕ್ಷೇತ್ರಕ್ಕೆ ಆಯ್ಕೆಯಾಗಲು ಪ್ರತಿಯೊಬ್ಬ ವಿದ್ಯಾರ್ಥಿಗೆ ಕೇವಲ ಪದವಿ ಪ್ರಶಸ್ತಿ ಪತ್ರಗಳು ಸಾಕಾಗುವುದಿಲ್ಲ,ವಿದ್ಯಾರ್ಥಿಯೊಬ್ಬನಲ್ಲ್ರಿರುವ ಔದ್ಯೋಗಿಕ ಕೌಶಲ್ಯಗಳಿಗೂ ಅಷ್ಟೇ ಪ್ರಾಶಸ್ತ್ಯವನ್ನು ನೀಡಲಾಗುತ್ತಿದೆ ,ಇದಕ್ಕಾಗಿಯೇ ಈಗ ಒಬ್ಬ ವಿದ್ಯಾರ್ಥಿಯು ತನ್ನ ಪದವಿ ಅಧ್ಯಯನದ ಸಂದರ್ಭದಲ್ಲಿಯೇ ಕೌಶಲ್ಯ ಅಭಿವೃದ್ಧಿಯ ಡಿಪ್ಲೋಮಾ ಅಥವಾ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಮಾಡಿಕೊಳ್ಳುವ ಅನಿವಾರ್ಯತೆ ಇದೆ .ಔದ್ಯೋಗಿಕ ಕ್ಷೇತ್ರಗಳ ಅವಶ್ಯಕತೆ ಹಾಗೂ ಪದವಿ ಪಠ್ಯಕ್ರಮದ ನಡುವೆ ಇರುವ ಅಂತರವನ್ನು ಕಡಿಮೆ ಮಾಡಿ ಉದ್ಯೋಗಕ್ಕೆ ತಕ್ಕ ಜ್ಞಾನ ಹಾಗೂ ಕೌಶಲ್ಯಗಳನ್ನು ರೂಪಿಸಿಕೊಳ್ಳಲು ಇಂದು ವಿದ್ಯಾರ್ಥಿಗಳಿಗೆ ಬಹಳ ಅವಕಾಶಗಳಿವೆ. ಇದನ್ನೆಲ್ಲ ಮನಗಂಡು ಮಣಿಪಾಲ ಶಿಕ್ಷಣ ಸಂಸ್ಥೆಯ ಮೂಲಕ ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಪ್ರಾರಂಭಿಸಿ ಒಂದು ವಿಶ್ವವಿದ್ಯಾಲಯ ಮಟ್ಟದ ವಿವಿಧ ಕೌಶಲ್ಯ ಅಭಿವೃದ್ಧಿ ಕೋರ್ಸ್ ಗಳನ್ನು ನಡೆಸಲಾಗುತ್ತಿದೆ .ಇಲ್ಲಿ ಕೊಡ ಮಾಡುವ ಇಪ್ಪತ್ತು ಕೋರ್ಸುಗಳು ಕೂಡ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕೌನ್ಸಿಲ್ ನ ಮಾನ್ಯತೆಯನ್ನು ಪಡೆದಿವೆ.ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರವು ತನ್ನ ಕೇಂದ್ರದ ವಿದ್ಯಾರ್ಥಿಗಳಿಗೆ ನೇರವಾಗಿ ಕೌಶಲ್ಯಗಳ ಪ್ರಾಯೋಗಿಕ ಕಲಿಕೆಗೆ ಅಗತ್ಯವಾದ ಪಠ್ಯಕ್ರಮವನ್ನು ಹಾಗೂ ಸುವ್ಯವಸ್ಥಿತ ಪ್ರಯೋಗಾಲಯಗಳನ್ನು ಹೊಂದಿದೆ .ಇಲ್ಲಿಯವರೆಗೂ ಮಣಿಪಾಲ್ ನಲ್ಲಿರುವ ಈ ಕೇಂದ್ರವು ಉಡುಪಿ ಜಿಲ್ಲೆಗಷ್ಟೇ ತನ್ನ ವ್ಯಾಪ್ತಿಯನ್ನು ಸೀಮಿತಗೊಳಿಸಿತ್ತು.

Kateel Ashok Pai College ಆದರೆ ಮೊತ್ತ ಮೊದಲ ಬಾರಿಗೆ ಮಾನಸ ಸಂಸ್ಥೆಯ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಮಣಿಪಾಲ್ ನ ಕೌಶಲ್ಯ ಅಭಿವೃದ್ಧಿ ಕೇಂದ್ರದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡು ವಿದ್ಯಾರ್ಥಿಗಳಿಗಾಗಿ ಬಿಕಾಂ ಜೊತೆಗೆ ಟ್ಯಾಲಿ ಕೋರ್ಸ್ ಗಳನ್ನು ಬಿಸಿಎ ಜೊತೆಗೆ ವಿವಿಧ ಐಟಿ ಕೋರ್ಸ್ ಗಳನ್ನು ಪ್ರಾರಂಭಿಸಲು ನಿರ್ಧಾರ ಮಾಡಿರುವುದು ಎರಡು ಸಂಸ್ಥೆಗಳ ಶೈಕ್ಷಣಿಕ ಹಾದಿಯಲ್ಲಿ ಬಹಳ ಮುಖ್ಯವಾದ ಮೈಲಿಗಲ್ಲು ಆಗಿದೆ. ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಬಿಕಾಂ ಅಥವಾ ಬಿಸಿಎ ಮಾಡುವ ವಿದ್ಯಾರ್ಥಿಗಳಿಗೆ ಟ್ಯಾಲಿ ಕೋರ್ಸ್ಗಳು ಹಾಗೂ ಐಟಿ ಕೋರ್ಸ್ಗಳು ಲಭ್ಯವಾಗಲಿರುವುದು ಅವರ ಉದ್ಯೋಗಾವಕಾಶಗಳನ್ನು ವಿಪುಲವಾಗಿ ವಿಸ್ತರಿಸಬಲ್ಲದು .ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಸಂಸ್ಥೆಯು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನೊಂದಿಗೆ ಸಹಯೋಗವನ್ನು ನೀಡುವ ಮೂಲಕ ಉತ್ತಮ ಗುಣಮಟ್ಟದ ಕೌಶಲ್ಯ ತರಬೇತಿಗೆ ಬದ್ದತೆಯೊಂದಿಗೆ ಮುಂದುವರಿಯವುದು ” ಎಂದು ಅವರು ತಿಳಿಸಿದರು.

ಇದೇ ಕಾರ್ಯಕ್ರಮದಲ್ಲಿ ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರದ ಕುಲ ಸಚಿವರಾದ ಡಾಕ್ಟರ್ ಅಂಜನಯ್ಯ ದೇವಿನೇನಿಯವರು ಮಾತನಾಡುತ್ತಾ ಕೌಶಲ್ಯ ಅಭಿವೃದ್ಧಿ ಎಂಬುದು ಯಾವುದೇ ವಿದ್ಯಾರ್ಥಿಯು ತನ್ನ ಪದವಿಯೊಂದಿಗೆ ಪಡೆದುಕೊಳ್ಳಬೇಕಾದ ಬಹಳ ಮುಖ್ಯವಾದ ಪರಿಣತಿ ..ಈ ಮೂಲಕವಾಗಿ ತನ್ನ ವೃತ್ತಿಪರತೆಯನ್ನು ಔದ್ಯೋಗಿಕ ಬದ್ಧತೆಯನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು. ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರವು, ಕಟೀಲ್ ಅಶೋಕ್ ವೈ ಸ್ಮಾರಕ ಕಾಲೇಜಿಗೆ ಸಹಯೋಗವನ್ನು ನೀಡುವ ಮೂಲಕ ತನ್ನ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಪ್ರಾದೇಶಿಕವಾಗಿ ವಿಸ್ತರಿಸಿದಂತಾಗಿದೆ ,ಇದು ಎರಡು ಸಂಸ್ಥೆಗಳು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ನೀಡಬಹುದಾದ ಅತ್ಯಮೂಲ್ಯ ಕೊಡುಗೆ ಎಂದು ಅವರು ತಿಳಿಸಿದರು. ಮಾನಸ ಸಂಸ್ಥೆಯ ನಿರ್ದೇಶಕರಾದ ಡಾ. ರಜನಿ ಪೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಆಡಳಿತ ಅಧಿಕಾರಿಗಳಾದ ಪ್ರೊಫೆಸರ್ ರಾಮಚಂದ್ರ ಬಾಳಿಗಾರವರು ಮಾನಸ ಸಂಸ್ಥೆಯ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ವಿದ್ಯಾರ್ಥಿಗಳನ್ನು ಔದ್ಯೋಗಿಕವಾಗಿ ಹಾಗೂ ವೃತ್ತಿಪರತೆಯೊಂದಿಗೆ ಅಭಿವೃದ್ಧಿಪಡಿಸಲು ಈ ಒಡಂಬಡಿಕೆಯನ್ನು ಮಾಡಿಕೊಂಡಿದೆ ,ವಿದ್ಯಾರ್ಥಿಗಳು ತಮ್ಮ ವಿಶೇಷ ಕೌಶಲ್ಯದ ಮೂಲಕ ತಮ್ಮ ಪದವಿ ಮುಗಿಸುವ ಸಂದರ್ಭ ದಲ್ಲಿ ಉದ್ಯೋಗಿಕ ಕ್ಷೇತ್ರಗಳು ಇವರತ್ತ ಆಕರ್ಷಿತರಾಗುವಂತೆ ಮಾಡಬೇಕಿದೆ ಅಂತಹ ಸಾಮರ್ಥ್ಯ ಹಾಗೂ ವ್ಯಕ್ತಿತ್ವ ರೂಪಿಸುವುದು ಸಂಸ್ಥೆಯ ದೂರ ದೃಷ್ಟಿ ಎಂದು ತಿಳಿಸಿದರು .

ಇನ್ನು ಮುಂದೆ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಬಿಕಾಂ ಅಧ್ಯಯನ ಮಾಡಲಿರುವ ಎಲ್ಲ ವಿದ್ಯಾರ್ಥಿಗಳು ಕೂಡ ಪ್ರತಿಷ್ಠಿತ ಟ್ಯಾಲಿ ಕೋರ್ಸ್ ಗಳನ್ನು ಕೂಡ ಪೂರೈಸಿಕೊಳ್ಳಲಿರುವರು ಹಾಗೂ ಬಿಸಿಎ ಅಧ್ಯಯನ ಮಾಡುವ ಎಲ್ಲ ವಿದ್ಯಾರ್ಥಿಗಳಿಗೂ ವಿವಿಧ ಐಟಿ ಕೋರ್ಸ್ ಗಳನ್ನು ಮಾಡುವ ಅವಕಾಶವಿರುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾಕ್ಟರ್ ಸಂಧ್ಯಾ ಕಾವೇರಿ ಅವರು ಮಾನಸ ಟ್ರಸ್ಟ್ ಹಾಗೂ ಮಣಿಪಾಲ ಶಿಕ್ಷಣ ಸಂಸ್ಥೆಗಳು ಕೊಟ್ಟಿರುವ ಅವಕಾಶವನ್ನು ನಿರ್ವಹಿಸುವ ಜವಾಬ್ದಾರಿ ಹಾಗೂ ಬದ್ಧತೆಯನ್ನು ಕಟೀಲ್ ಅಶೋಕ್ ಪೈಸ್ಮಾರಕ ಕಾಲೇಜು ಅತ್ಯಂತ ಸಂತೋಷದಿಂದ ನಿರ್ವಹಿಸುತ್ತದೆ .

ಬಿಕಾಂ ಹಾಗೂ ಬಿಸಿಎ ಪದವಿಗಳು ವಿವಿಧ ಔದ್ಯೋಗಿಕ ಅವಕಾಶಗಳನ್ನು ಒದಗಿಸುತ್ತಿರುವ ಇಂದಿನ ಕಾಲದಲ್ಲಿ ಇದರೊಂದಿಗೆ ದೊರೆಯುವ ಕೌಶಲ್ಯ ಅಭಿವೃದ್ಧಿ ಕೋರ್ಸುಗಳು ಈ ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ವೃತ್ತಿಪರ ಸಾಮರ್ಥ್ಯವನ್ನು ಒದಗಿಸುತ್ತದೆ ಎಂದು ತಿಳಿಸಿದರು .

ಕಾರ್ಯಕ್ರಮದಲ್ಲಿ ಬಿಸಿಎ ವಿಭಾಗದ ಮುಖ್ಯಸ್ಥರಾದ ಶ್ರೀ ಮಂಗೇಶ್ ಪೈ ಬಿಕಾಂ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಕಾವ್ಯ ರಾಯ್ಕರ್, ಪ್ಲೇಸ್ಮೆಂಟ್ ಆಫೀಸರ್ ಶ್ರೀ ಅನುಮೋಲ್ ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದ ನಂತರ ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರದ ಡಾಕ್ಟರ್ ರಾಜಲಕ್ಷ್ಮೀ ಆನಂದ್ ರವರು ವಿದ್ಯಾರ್ಥಿಗಳಿಗೆ ಟಾಲಿ ಕೋರ್ಸ್ ನ ಮೂಲಭೂತ ಅಂಶಗಳ ಸ್ಥೂಲ ಪರಿಚಯವನ್ನು ಮಾಡಿಕೊಟ್ಟರು. ಹಾಗೂ ವಿದ್ಯಾರ್ಥಿಗಳಿಗೆ ಇಂದು ಅತಿ ಅಗತ್ಯವಾಗಿ ಬೇಕಾಗಿರುವ ಪವರ್ ಬಿ ಐ ,ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ಇನ್ನಿತರ ಐಟಿ ಕೋರ್ಸ್ಗಳ ಪ್ರಾಮುಖ್ಯತೆ ಹಾಗೂ ಪ್ರಮುಖ ಅಂಶಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಕಾವ್ಯ ಕಾರ್ಯಕ್ರಮವನ್ನು ನಿರೂಪಿಸಿದರು.

ಕುಮಾರಿ ಲಾವಣ್ಯ ಅತಿಥಿಗಳ ಪರಿಚಯವನ್ನು ಮಾಡಿಕೊಟ್ಟರು. ತನ್ಮಯಿ ಹಾಗೂ ಸಂಗಡಿಗರು ಪ್ರಾರ್ಥನೆಯನ್ನು ಹಾಡಿದರು .ಉದ್ಘಾಟನಾ ಕಾರ್ಯಕ್ರಮದ ವಂದನಾರ್ಪಣೆಯನ್ನು ಉಪನ್ಯಾಸಕ ಅನುಮೋಲ್ ರವರು ನಡೆಸಿಕೊಟ್ಟರು.

Mescom ಮಾರ್ಚ್ 21. ಶಿಕಾರಿಪುರ‌ ಮೆಸ್ಕಾಂ ಉಪವಿಭಾಗೀಯ ಕಛೇರಿಯಲ್ಲಿ‌‌ ಜನ ಸಂಪರ್ಕ‌ ಸಭೆ

0

Mescom ಶಿಕಾರಿಪುರ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮಾ. 21 ರಂದು ಬೆಳಿಗ್ಗೆ 11.00 ರಿಂದ 01.00 ಗಂಟೆಯವರೆಗೆ ಜನಸಂಪರ್ಕ ಸಭೆ ನಡೆಯಲ್ಲಿದೆ.

ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.

ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ; 9448289519.

Shivamogga APMC ಎಪಿಎಂಸಿಗಳಲ್ಲಿ ಅಡಕೆ ನೇರ ಖರೀದಿ ನಿಷೇಧ & ಕ್ಯಾಂಪ್ಕೋಸ್, ಮ್ಯಾಮ್ಕೋಸ್ ಸೇರಿ ಸಹಕಾರಿ ಸಂಘಗಳಿಗೆ ಉತ್ತೇಜನ -ಸಚಿವ ಶಿವಾನಂದ ಪಾಟೀಲ

0

Shivamogga APMC ಎಪಿಎಂಸಿಗಳಲ್ಲಿ ಅಡಕೆ ನೇರ ಖರೀದಿಗೆ ಕಡಿವಾಣ ಹಾಕಲಿದ್ದು, ಖಾಸಗಿಯವರಿಗೆ ಲೈಸೆನ್ಸ್ ನೀಡುವುದಿಲ್ಲ. ಕ್ಯಾಂಪ್ಕೋಸ್, ಮ್ಯಾಮ್ಕೋಸ್ನಂತಹ ಸಹಕಾರಿ ಸಂಘಗಳಿಗೆ ಉತ್ತೇಜನ ನೀಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಶಿವಮೊಗ್ಗ ಜಿಲ್ಲೆಯ ಅಡಕೆ ಬೆಳೆಗಾರರಿಗೆ ಹಾಗೂ ಅಡಕೆ ಮಾರಾಟ ಸಹಕಾರ ಸಂಘಗಳಿಗೆ ಸಂಬಂಧಿಸಿದ ವಿಷಯ ಕುರಿತು ಶಾಸಕ ಆರಗ ಜ್ಞಾನೇಂದ್ರ ನೇತೃತ್ವದ ಸಹಕಾರ ಸಂಘಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಸಚಿವರು, ಅಡಕೆ ಅಕ್ರಮ ವಹಿವಾಟಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶಿವಮೊಗ್ಗ ಎಪಿಎಂಸಿಯಲ್ಲಿ ನೇರ ಖರೀದಿ ಮೂಲಕ ಸಂಗ್ರಹವಾಗಿರುವ ಸೆಸ್ ಹಾಗೂ ಸಹಕಾರ ಸಂಘಗಳ ಮೂಲಕ ನಡೆದ ವಹಿವಾಟಿನಿಂದ ಸಂಗ್ರಹವಾಗಿರುವ ಸೆಸ್ ಪ್ರಮಾಣದ ಬಗ್ಗೆ ವಾರದಲ್ಲಿ ವರದಿ ಕೊಡಿ ಎಂದು ಕೃಷಿ ಮಾರುಕಟ್ಟೆ ನಿರ್ದೇಶಕ ಶಿವಾನಂದ ಕಾಪ್ಸೆ ಅವರಿಗೆ ನಿರ್ದೇಶನ ನೀಡಿದರು.
ಖಾಸಗಿ ವರ್ತಕರಲ್ಲಿ ಕೆಲವರು ತೆರಿಗೆ ವಂಚನೆ ಮಾಡುವುದನ್ನು ನಿಯಂತ್ರಿಸಲು ವಿಚಕ್ಷಣ ದಳ ರಚನೆ ಮಾಡಲಾಗಿದ್ದು, ನಾಲ್ಕು ಚೆಕ್ಪೋಸ್ಟ್ಗಳನ್ನು ರಚನೆ ಮಾಡಲಾಗುವುದು ಎಂದು ಹೇಳಿದರು.
ಸಹಕಾರ ಸಂಘಗಳಿಗೆ ಉತ್ತೇಜನ ನೀಡಲು ಸರ್ಕಾರ ಬದ್ಧವಾಗಿದ್ದು, ಅಗತ್ಯ ಸಹಕಾರ ನೀಡಲಾಗುವುದು. ಲಾಭ ಮಾಡುವುದು ಎಪಿಎಂಸಿ ಉದ್ದೇಶವಲ್ಲ. ಆಯಾ ಎಪಿಎಂಸಿಗಳಿಂದ ಬರುವ ಆದಾಯವನ್ನು ಸ್ಥಳೀಯವಾಗಿ ಅಭಿವೃದ್ಧಿಗೆ ವಿನಿಯೋಗ ಮಾಡುವುದು ಸರ್ಕಾರದ ಉದ್ದೇಶ. ಎಪಿಎಂಸಿಗಳು ಆರ್ಥಿಕವಾಗಿ ಸದೃಢವಾದರೆ ರೈತರಿಗೆ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
Shivamogga APMC ಅಡಕೆ ದಾಸ್ತಾನು ಮಾಡುವ ಗೋದಾಮುಗಳ ಬಾಡಿಗೆಯನ್ನು ಈಗಾಗಲೇ ಪ್ರತಿಶತ 40ರಷ್ಟು ಕಡಿಮೆ ಮಾಡಲಾಗಿದೆ. ಶಿವಮೊಗ್ಗ ಎಪಿಎಂಸಿಗೆ ಮಾಹಿತಿ ಇಲ್ಲದಿದ್ದರೆ ಇಲ್ಲಿನ ಅಧಿಕಾರಿಗಳ ಮೂಲಕ ನಿರ್ದೇಶನ ನೀಡಿ ಕಡಿಮೆ ಮಾಡಿರುವ ಬಾಡಿಗೆಯನ್ನು ಆಕರ ಮಾಡಲು ನಿರ್ದೇಶನ ನೀಡಲಾಗುವುದು ಎಂದು ಹೇಳಿದರು.
ರಾಜ್ಯದ ಹಲವು ಎಪಿಎಂಸಿಗಳಲ್ಲಿ ಗೋದಾಮುಗಳು ಖಾಲಿ ಇವೆ. ನಬಾರ್ಡ್ ನೆರವು ಸಿಕ್ಕಿದೆ ಎಂದು ಹಿಂದೆ ಗೋದಾಮುಗಳನ್ನು ನಿರ್ಮಿಸಿರುವುದರಿಂದ ಉಪಯೋಗವಾಗುತ್ತಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಗೋದಾಮುಗಳಿಗೆ ಬೇಡಿಕೆ ಇದ್ದು, ಅಗತ್ಯ ಜಾಗವನ್ನು ಇಲಾಖೆಯಿಂದಲೇ ಖರೀದಿಸಿ ಗೋದಾಮು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಖಾಸಗಿ ಎಪಿಎಂಸಿಗಳನ್ನು ಸರ್ಕಾರ ಯಾವುದೇ ಕಾರಣಕ್ಕೂ ಉತ್ತೇಜಿಸುವುದಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ನಾಲ್ಕು ಖಾಸಗಿ ಎಪಿಎಂಸಿಗಳಿಗೆ ಪರವಾನಗಿ ನೀಡಲಾಗಿದೆ. ಈ ಖಾಸಗಿ ಎಪಿಎಂಸಿಗಳನ್ನು ಮುಚ್ಚಬೇಕು ಎಂಬ ಬೇಡಿಕೆ ಕೂಡಾ ಇದೆ ಎಂದು ಗಮನಕ್ಕೆ ತಂದರು.
ರಾಜ್ಯದ ಹಲವು ಎಪಿಎಂಸಿಗಳಲ್ಲಿ ಕೃಷಿಯೇತರ ವಹಿವಾಟು ನಡೆಯುತ್ತಿರುವುದು ಗಮನದಲ್ಲಿದೆ. ಕಿರಾಣಿ ಅಂಗಡಿಗಳು, ಸಿಮೆಂಟ್, ಸ್ಟೀಲ್ ವಿತರಕರು, ಪ್ಲಾಸ್ಟಿಕ್ವ್ಯಾಪಾರಿಗಳೂ ಇದ್ದಾರೆ. ಹಲವು ಕಡೆ ವಾಸದ ಮನೆಗಳನ್ನೂ ನಿರ್ಮಿಸಲಾಗಿದೆ. ಎಪಿಎಂಸಿಗಳು ಸಂಪೂರ್ಣವಾಗಿ ಕೃಷಿ ವಹಿವಾಟಿಗೆ ಸೀಮಿತವಾಗಿರಬೇಕು ಎಂಬುದು ಸರ್ಕಾರದ ಆಶಯವಾಗಿದ್ದು, ಕೃಷಿಯೇತರ ವಹಿವಾಟನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬಹುಮಹಡಿ ಕಟ್ಟಡಗಳ ಮೇಲೆ ಹೊಸದಾಗಿ ಶುಲ್ಕ ನಿಗದಿಪಡಿಸಲಾಗಿದ್ದು, ಸಹಕಾರಿ ಸಂಘಗಳಿಗೆ ರಿಯಾಯಿತಿ ನೀಡಬೇಕು ಎಂಬ ಬೇಡಿಕೆಯನ್ನು ಪರಿಗಣಿಸಲಾಗುವುದು ಎಂದು ಸಚಿವರು ಹೇಳಿದರು.
ಸೌಹಾರ್ದ ಸಹಕಾರಿ ಸಂಘಗಳಿಗೆ ಎಪಿಎಂಸಿ ಸೆಸ್ನಲ್ಲಿ ರಿಯಾಯಿತಿ ನೀಡಬೇಕು ಎಂಬ ಬೇಡಿಕೆ ಸಾಧುವಲ್ಲ. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದರು.
ಶಾಸಕರಾದ ಆರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ, ಡಿ.ಜಿ. ಶಾಂತನಗೌಡ, ಕೃಷಿ ಮಾರುಕಟ್ಟೆ ನಿರ್ದೇಶನ ಶಿವಾನಂದ ಕಾಪ್ಸೆ, ಹೆಚ್ಚವರಿ ನಿರ್ದೇಶಕರಾದ ನಾಗೇಶ್ (ಯೋಜನೆ), ನಜೀಬುಲ್ಲಾ ಖಾನ್ (ಆಡಳಿತ), ಮ್ಯಾಮ್ಕೋಸ್ ಉಪಾಧ್ಯಕ್ಷ ಮಹೇಶ್, ಸುಬ್ರಹ್ಮಣ್ಯ ವೈ.ಎಸ್., ಕೆ.ವಿ. ಸೂರ್ಯನಾರಾಯಣ, ಕೆ.ಬಿ. ಕೃಷ್ಣಮೂರ್ತಿ, ಎನ್.ಕೆ. ನಾಗೇಂದ್ರ, ಎಚ್.ಬಿ. ರಮಾಕಾಂತ ಮತ್ತಿತರ ಸಹಕಾರಿಗಳು ಉಪಸ್ಥಿತರಿದ್ದರು.

ಲಾಭಕ್ಕಾಗಿ ಅಲ್ಲ
ಎಪಿಎಂಸಿಗಳು ಲಾಭ ಮಾಡುವ ಉದ್ದೇಶದಿಂದ ಸ್ಥಾಪಿತವಾಗಿಲ್ಲ. ಕೆಲವು ಅಧಿಕಾರಿಗಳು ರಿಯಲ್ ಎಸ್ಟೇಟ್ ರೀತಿ ಲಾಭದ ಲೆಕ್ಕಾಚಾರ ಹಾಕುತ್ತಾರೆ. ಇದು ಸರಿಯಾದ ಕ್ರಮ ಅಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ರೈತರ ಹಿತರಕ್ಷಣೆಗೆ ಸರ್ಕಾರ ಕೈಗೊಂಡ ಕ್ರಮಗಳನ್ನು ಸಚಿವ ಶಿವಾನಂದ ಪಾಟೀಲ ಅವರು ವಿವರಿಸಿದ ನಂತರ, ಸಂತೃಪ್ತಿ ವ್ಯಕ್ತಪಡಿಸದ ಜ್ಞಾನೇಂದ್ರ, ಎಪಿಎಂಸಿಗಳು ರೈತಸ್ನೇಹಿಯಾಗಿರಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಕ್ರಮಗಳನ್ನು ಬೆಂಬಲಿಸುತ್ತೇನೆ ಎಂದರು.

ಖಾಸಗಿ ಎಪಿಎಂಸಿ ಮುಚ್ಚಿ
ರಾಜ್ಯದಲ್ಲಿರುವ ಖಾಸಗಿ ಎಪಿಎಂಸಿಗಳನ್ನು ಮುಚ್ಚಬೇಕು. ಹೊಸದಾಗಿ ಖಾಸಗಿಯವರಿಗೆ ಅನುಮತಿ ನೀಡಬಾರದು ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣಸಚಿವರಿಗೆ ಮನವಿ ಮಾಡಿದರು.
ಸರ್ಕಾರ ಯಾವುದೇ ಕಾರಣಕ್ಕೂ ಖಾಸಗಿ ಎಪಿಎಂಸಿ ಆರಂಭ ಮಾಡುವುದಿಲ್ಲ. ಸರ್ಕಾರದ ಎಪಿಎಂಸಿಗಳನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಿ ರೈತರಿಗೆ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಆರಂಭಿಸಿರುವ ನಾಲ್ಕು ಖಾಸಗಿ ಮಾರುಕಟ್ಟೆಗಳನ್ನು ಮುಚ್ಚುವ ಬೇಡಿಕೆ ಇದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

Karnataka Sanga Shivamogga “ಸ್ತ್ರೀ‌ ಎಂದರೆ ಅಷ್ಟೇ ಸಾಕೆ?” ಕರ್ನಾಟಕ‌ ಸಂಘದಲ್ಲಿ ವಿನೂತನ‌‌ ಕಾರ್ಯಕ್ರಮ

0

Karnataka Sanga Shivamogga ದಿನಾಂಕ 21ನೇ ಮಾರ್ಚ್ 2025ರ ಶುಕ್ರವಾರ ಸಂಜೆ 5:30ಕ್ಕೆ ಕರ್ನಾಟಕ ಸಂಘ ಭವನದಲ್ಲಿ ಉಪಾಧ್ಯಕ್ಷರಾದ ಡಾ. ನಾಗಮಣಿ ಎಸ್. ಇವರ ಅಧ್ಯಕ್ಷತೆಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮ ‘ಸ್ತೀ ಎಂದರೆ ಅಷ್ಟೇ ಸಾಕೆ?!…’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಶ್ರೀಮತಿ ಸಹನಾ ಕಾಂತಬೈಲು, ಸಾಹಿತಿಗಳು, ಚೆಂಬು ಗ್ರಾಮ, ಮಡಿಕೇರಿ, ಇವರು ‘ಗೃಹಿಣಿ ಮತ್ತು ಸಾಹಿತ್ಯ’ ವಿಷಯದ ಕುರಿತು ಮತ್ತು ಶ್ರೀಮತಿ ವಾಸಂತಿ ಶೆಣೈ ಆಕಾಶವಾಣಿ ಹಾಗೂ ದೂರದರ್ಶನ ಸಂಗೀತ ಕಲಾವಿದರು, ಉಡುಪಿ, ಇವರು ‘ಗೃಹಿಣಿ ಮತ್ತು ಸಂಗೀತ’ ವಿಷಯದ ಕುರಿತು ಮಾತನಾಡಲಿದ್ದಾರೆ.

ದಿನಾಂಕ ೨೨ನೇ ಮಾರ್ಚ್ 2025ರ ಶನಿವಾರ ಸಂಜೆ 5:30ಕ್ಕೆ ಕರ್ನಾಟಕ ಸಂಘ ಭವನದಲ್ಲಿ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತ್ರೀ ಇವರ ಅಧ್ಯಕ್ಷತೆಯಲ್ಲಿ ತಿಂಗಳ ಅತಿಥಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Karnataka Sanga Shivamogga ಭದ್ರಾವತಿಯ ಪ್ರೊ. ಎಸ್.ಎಸ್. ವಿಜಯಾ (ವಿಜಯದೇವಿ), ಎಮೆರಿಟಸ್ ಪ್ರಾಧ್ಯಾಪಕರು, ಸಾಹಿತಿಗಳು ಇವರು ‘ಅಲ್ಲಮನಂತರಂಗ’ ವಿಷಯದ ಕುರಿತು ಮಾತನಾಡಲಿದ್ದಾರೆ.

ಆಸಕ್ತರು ಈ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಈ ಮೂಲಕ ವಿನಂತಿಸಲಾಗಿದೆ.