Wednesday, August 12, 2026
Wednesday, August 12, 2026
Home Blog Page 225

MSME ಎಂಎಸ್ಎಮ್ಇ ಗಲ ಅಭಿವೃದ್ಧಿಗೆ ಅನೇಕ ಯೋಜನೆಗಳಿವೆ. ಅವುಗಳನ್ನ ಸದುಪಯೋಗಪಡಿಸಿಕೊಳ್ಳಬೇಕು- ಆರ್.ಗಣೇಶ್.

0

MSME ಜಾಗತಿಕವಾಗಿ ನಮ್ಮ ದೇಶ ಬಹು ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಎಂಎಸ್‌ಎಂಇ ಗಳ ಪಾತ್ರ ಮಹತ್ತರವಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಂಎಸ್‌ಎಂಇ ಗಳ ಅಭಿವೃದ್ದಿಗಾಗಿ ಅನೇಕ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ರೂಪಿಸಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಉದ್ಯಮಿಗಳಿಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್.ಗಣೇಶ್ ಕರೆ ನೀಡಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಶಿವಮೊಗ್ಗ, ಕೆಸಿಟಿಯು ಬೆಂಗಳೂರು ಹಾಗೂ ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸಂಘ ಶಿವಮೊಗ್ಗ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೆರೊಕ್ಯಾಸ್ಟ್ ಸಭಾಂಗಣದಲ್ಲಿ ಎಂಎಸ್‌ಎಂಇ ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು(ಆರ್‌ಎಎಂಪಿ) ಯೋಜನೆಯಡಿಯಲ್ಲಿ ‘ನೋ ಯುರ್ ಎಂಎಸ್‌ಎAಇ ಇಕೊ ಸಿಸ್ಟಂ’(ಏಟಿoತಿ ಥಿouಡಿ ಒSಒಇ ಇಛಿo Sಥಿsಣem) ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ದೇಶ ಜಾಗತಿಕವಾಗಿ 4 ನೇ ದೊಡ್ಡ ಆರ್ಥಿಕ ಶಕ್ತಿಯಾಗಿದ್ದು ಇನ್ನೂ ಎತ್ತರಕ್ಕೇರಲು ಎಂಎಸ್‌ಎಂಇ ಗಳ ಪಾತ್ರ ಮುಖ್ಯವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಂಎಸ್‌ಎಂಇ ಗಳ ಅಭಿವೃದ್ದಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿವೆ. ರಾಜ್ಯ ಸರ್ಕಾರ ಪ್ರತಿ 5 ವರ್ಷಕ್ಕೊಮ್ಮೆ ಹೊಸ ಕೈಗಾರಿಕಾ ನೀತಿ ರೂಪಿಸಿ, ರಿಯಾಯಿತಿ ಮತ್ತು ಉತ್ತೇಜನಗಳನ್ನು ನೀಡುತ್ತಿದೆ.
ಎಂಎಸ್‌ಎಂಇ ಗಳ ಸ್ಥಾಪನೆಯಿಂದ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ. ರಾಜ್ಯ ಸರ್ಕಾರ ಎಂಎಸ್‌ಎಂಇ ಉತ್ತೇಜಿಸಲು 2 ಎಕರೆ ಕೃಷಿ ಭೂಮಿ ಕನ್ವವರ್ಷನ್‌ನ್ನು 30 ದಿನಗಳ ಒಳಗೆ ಮಾಡಲು ಅನುಮೋದನೆ ನೀಡಿದ್ದು, 30 ದಿನಗಳ ಒಳಗೆ ಆಗದಿದ್ದರೆ ಆಟೋ ಕನ್ವವರ್ಷನ್ ಮಾಡುವಂತಹ ಐತಿಹಾಸಿಕ ನಿಲುವು ತೆಗೆದುಕೊಂಡಿದೆ.
ಎಂಎಸ್‌ಎಂಇ ಗಳ ಅಭಿವೃದ್ಧಿಯಿಂದ ಜಿಡಿಪಿ ಮತ್ತು ಉದ್ಯೋಗಾವಕಾಶದಲ್ಲಿ ಪ್ರಗತಿಯಾಗಿ ದೇಶದ ಅಭಿವೃದ್ಧಿಯಾಗಲಿದ್ದು ಇಲಾಖೆಗಳು ಎಂಎಸ್‌ಎಂ ಇಗಳಿಗೆ ತಮ್ಮ ಸಹಕಾರ ನೀಡಬೇಕು. ಹೊಸ ನೀತಿಗಳು, ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಂಡು ಎಂಎಸ್‌ಎಂಇ ಗಳಿಗೆ ಉತ್ತಮ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷರಾದ ಜೋಯಿಸ್ ರಾಮಾಚಾರ್ ಮಾತನಾಡಿ, ಕೃಷಿಯ ನಂತರ ಅತಿ ದೊಡ್ಡ ಆರ್ಥಿಕ ವಲಯವಾಗಿ ಹೊರಹೊಮ್ಮುತ್ತಿರುವ ಎಂಎಸ್‌ಎಂಇ ಪ್ರಾರಂಭಿಸಲು ಸರ್ಕಾರದಿಂದ ಸಿಗುವ ಸೌಲಭ್ಯಗಳು ಹಾಗೂ ಈ ಕುರಿತು ಸಮಗ್ರ ಮಾಹಿತಿ ನೀಡುವ ಈ ಕಾರ್ಯಾಗಾರ ಅತಿ ಉಪಯುಕ್ತವಾಗಿದ್ದು ಹೊಸ ಉದ್ಯಮಿಗಳು ಸೇರಿದಂತೆ ಎಲ್ಲರೂ ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕೆಂದರು.

MSME ಅತಿ ಸಣ್ಣ, ಸಣ್ಣ, ಮಧ್ಯಮ ಉದ್ಯಮಗಳನ್ನು (ಎಂಎಸ್‌ಎಂಇ) ಆರಂಭಿಸಲು ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ತಿಳಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ.

ಈ ಕಾರ್ಯಾಗಾರದಲ್ಲಿ ಎಂಎಸ್‌ಎಂಇ ಆರಂಭಿಸಲು ಅಗತ್ಯವಾದ ಎಲ್ಲ ಮಾಹಿತಿಯೂ ಸಿಗಲಿದೆ. ಮುಂದಿನ ದಿನ ತಾಲ್ಲೂಕು ಮಟ್ಟದಲ್ಲಿ ಈ ಕಾರ್ಯಾಗಾರ ನಡೆಸುವ ಉದ್ದೇಶವಿದೆ.
ಈ ಹಿಂದೆ ಒಂದು ಉದ್ಯಮ ಆರಂಭಿಸುವುದು ಅಷ್ಟು ಸುಲಭವಾಗಿರಲಿಲ್ಲ. ಮಾಹಿತಿ, ತರಬೇತಿ, ಮೂಲಭೂತ ಸೌಕರ್ಯಗಳ ಕೊರತೆ ಇತ್ತು. ಸರ್ಕಾರದಿಂದ ಸೌಲಭ್ಯವೂ ಕಷ್ಟ ಇತ್ತು. ಆದರೆ ಇದೀಗ ಮಾಹಿತಿ ಹೇರಳವಾಗಿ ದೊರೆಯುತ್ತಿದೆ. ದೇಶಾದ್ಯಂತ ತರಬೇತಿ ಕೇಂದ್ರಗಳಿವೆ. ಇಲಾಖೆಗಳಲ್ಲೂ ವ್ಯವಸ್ಥಿತ ಕಾರ್ಯಕ್ರಮಗಳಿವೆ.

ಡಿಜಿಟಲ್ ಮೀಡಿಯಾದಲ್ಲೂ ಮಾಹಿತಿ ಸಾಕಷ್ಟಿದೆ. ಸರ್ಕಾರ ನೀಡುವ ಸೌಲಭ್ಯಗಳ ಕುರಿತಾದ ಈ ಕಾರ್ಯಾಗಾರ ತುಂಬಾ ಉಪಯುಕ್ತವಾಗಿದೆ. ಹಾಗೂ ಇಲಾಖೆ ಅಧಿಕಾರಿಗಳು ಅತ್ಯಂತ ಸಹಕಾರಿಯಾಗಿದ್ದಾರೆ. ಹೊಸಬರು ಸೇರಿದಂತೆ ಎಲ್ಲ ಉದ್ಯಮಾಕಾಂಕ್ಷಿಗಳು ಇಂತಹ ಕಾರ್ಯಕ್ರಮಗಳ ಸದ್ಬಳಕೆ ಮಾಡಿಕೊಳ್ಳಿರಿ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್ ಪಿ ಮಾತನಾಡಿ, ಎಂಎಸ್‌ಎಂಇ ಗಳ ಅಭಿವೃದ್ಧಿಯಿಂದ ದೇಶದ ಆರ್ಥಿಕತೆ ಸುಧಾರಣೆ ಆಗುತ್ತಿದೆ. ಕಳೆದ ಬಜೆಟ್‌ನಲ್ಲಿ ಎಂಎಸ್‌ಎಂಇ ಗಳಿಗೆ ಸಾಕಷ್ಟು ಯೋಜನೆಗಳನ್ನು ಕಲ್ಪಿಸಲಾಗಿದೆ.

ನಮ್ಮ ದೇಶ ಉತ್ಪಾದನಾ ಹಬ್ ಆಗಲು ಪ್ರಯತ್ನ ಮಾಡಲಾಗುತ್ತಿದ್ದು ಹೊಸ ಮತ್ತು ಯುವ ಉದ್ಯಮಿಗಳು ಮುಂದೆ ಬರಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳ ವಿವರ ಮತ್ತು ಎಲ್ಲ ರೀತಿಯ ಮಾಹಿತಿ ಇಂತಹ ಕಾರ್ಯಾಗಾರದಲ್ಲಿ ನೀಡಿ ಸಹಕರಿಸಲಾಗುತ್ತಿದೆ. ಭೂಮಿ ಖರೀದಿಯಿಂದ ಹಿಡಿದು, ಬ್ಯಾಂಕ್ ಸಾಲ, ಉದ್ಯಮ ಸ್ಥಾಪನೆವರೆಗೆ ಸಹಕಾರ ದೊರಕಲಿದೆ. ಬ್ಯಾಂಕ್‌ನವರೂ ಕೈ ಜೋಡಿಸಿದ್ದಾರೆ. ಹೊಸ ಉದ್ಯಮ, ಕೈಗಾರಿಕೆಗಳನ್ನು ಆರಂಭಿಸಲು ಅಗತ್ಯವಾದ ಎಲ್ಲ ಜ್ಞಾನ, ಮಾಹಿತಿ ಸಹಕಾರ ಇಲ್ಲಿ ಲಭ್ಯವಿದ್ದು, ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದರು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ವಿಶುಕುಮಾರ್ ಮಾತನಾಡಿ, ಕೃಷಿ ಹೊರತಾದ ಎಲ್ಲ ವ್ಯವಹಾರಗಳು ಎಂಎಸ್‌ಎಂಇ ಆಗಿವೆ. ಇವು ನಮ್ಮ ಆರ್ಥಿಕತೆಯ ಬೆನ್ನೆಲುಬಾಗಿದ್ದು ನಮ್ಮ ಸರ್ಕಾರಗಳು ಕೂಡ ಎಂಎಸ್‌ಎಂಇ ಗಳಿಗೆ ಅತ್ಯಂತ ಪ್ರಾಮುಖ್ಯತೆ ನೀಡಿವೆ. ದೇಶದ ಶೇ.30 ಜಿಡಿಪಿ ಎಂಎಸ್‌ಎಂಇ ಯ ಕೊಡುಗೆಯಾಗಿದ್ದು, 28 ಕೋಟಿಗೂ ಅಧಿಕ ಉದ್ಯೋಗ ನೀಡಿವೆ. ಸುಮಾರು 6.8 ಕೋಟಿ ಎಂಎಸ್‌ಎಂಇ ಗಳು ನೋಂದಣಿಯಾಗಿವೆ. ಈಗ ಬಹುತೇಕ ಕೈಗಾರಿಕೆಗಳು ಎಂಎಸ್‌ಎಂಇ ಚೌಕಟ್ಟಿನಲ್ಲಿ ಬರುತ್ತಿವೆ. ಎಂಎಸ್‌ಎಂಇ ಗಳಿಗೆ ಉದ್ಯಮ್ ನೋಂದಣಿ ಕಡ್ಡಾಯವಾಗಿದ್ದು ಇದರಿಂದ ಸರ್ಕಾರಿ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ.

ಜೊತೆಗೆ ಪ್ರತಿ ವರ್ಷ ಅಪ್‌ಡೇಟ್ ಮಾಡಬೇಕು. ಕಮರ್ಷಿಯಲ್ ಸಿಬಿಲ್ ರೇಟಿಂಗ್ ಚೆನ್ನಾಗಿರಬೇಕು. ಬ್ಯಾಲೆನ್ಸ್ ಶೀಟ್ ರೇಷಿಯೋ ಚೆನ್ನಾಗಿಟ್ಟುಕೊಳ್ಳಬೇಕು. ಬ್ಯಾಂಕ್‌ಗಳಿಗೆ ಕಂತು ಕಟ್ಟುವ ದಿನ ಕಟ್ಟದೇ ವಿಳಂಬ ಮಾಡಿದರೆ ಸಿಬಿಲ್ ರೇಟಿಂಗ್ ಇಳಿಕೆಯಾಗುತ್ತದೆ. ಆದ್ದರಿಂದ ಈ ಬಗ್ಗೆ ಗಮನ ಹರಿಸಬೇಕು. ಎಂಎಸ್‌ಎಂಇ ಗಳಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳಿದ್ದು ಸಿಜಿಟಿಎಂಎಸ್ ಕೂಡ ಉತ್ತಮ ಯೋಜನೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉದ್ಯಮಿ ಉಮೇಶ್ ಶಾಸ್ತ್ರಿ, ಉದ್ಯಮಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು. ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸಂಘದ ಕಾರ್ಯದರ್ಶಿ ಎಸ್.ವಿಶ್ವನಾಥಯ್ಯ ಸ್ವಾಗತಿಸಿದರು.

Mescom ಜನವರಿ 17. ಮಾಚೇನಹಳ್ಳಿ ಸುತ್ತಮುತ್ತ ವಿದ್ಯುತ್ನಿಲುಗಡೆ .ಮೆಸ್ಕಾಂ ಪ್ರಕಟಣೆ..

0

Mescom ಶಿವಮೊಗ್ಗ ಎಂ.ಆರ್.ಎಸ್. 220 ಕೆವಿ.ವಿದ್ಯುತ್ ಸ್ವೀಕರಣ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿದ್ದು, ಮಾಚೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಜ. 17 ರಂದು ಬೆಳಗ್ಗೆ 9.30 ರಿಂದ ಸಂಜೆ 4.00 ರವರೆಗೆ ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಸಿದ್ದರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ, ಜಯಂತಿಗ್ರಾಮ, ಹೊನ್ನವಿಲೆ, ಜಿಲ್ಲಾ ಕೇಂದ್ರ ಕಾರಾಗೃಹ, ಕಿಯೋನಿಕ್ಸ್ ಐಟಿ ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆ.ಎಸ್.ಆರ್.ಪಿ ಕಾಲೋನಿ, ನವುಲೆ ಬಸವಾಪುರ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Mescom ಶಿವಮೊಗ್ಗ ನಗರ ಉಪವಿಭಾಗ 2ರ ವ್ಯಾಪ್ತಿಯ ಮಂಡ್ಲಿ ಭಾಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿದ್ದು, ಜ. 17 ರಂದು ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ಪೇಪರ್ ಪ್ಯಾಕೇಜ್, ಅರಮನೆ ಹೋಟೆಲ್, ಹಳೇ ಮಂಡ್ಲಿ, ಗಂಧರ್ವನಗರ, ಹರಕೆರೆ, ಶಂಕರ ಕಣ್ಣಿನ ಆಸ್ಪತ್ರೆ, ವಿಜಯವಾಣಿ ಪ್ರೆಸ್ ಹತ್ತಿರ, ಸವಾಯಿ ಪಾಳ್ಯ, ಕುರುಬರ ಪಾಳ್ಯ, ಶ್ರೀನಿವಾಸ ಲೇಔಟ್, ಇಲಿಯಾಜ್ ನಗರ 1 ರಿಂದ 4ನೇ ಕ್ರಾಸ್, ನಾರಾಯಣ ಹೃದಯಾಲಯ, ಗಜಾನನ ಗ್ಯಾರೇಜ್, ಮಂಜುನಾಥ ರೈಸ್‌ಮಿಲ್, ಬೆನಕೇಶ್ವರ ರೈಸ್ ಮಿಲ್, ಅನ್ನಪೂರ್ಣೇಶ್ವರಿ ಬಡಾವಣೆ, ಗಾಜನೂರು ಗ್ರಾಮಾಂತರ ಪ್ರದೇಶ, ರಾಮಿನಕೊಪ್ಪ ಗ್ರಾಮಾಂತರ ಪ್ರದೇಶ, ಮಲ್ನಾಡ್ ಕೊಕೊ,, ತಿವಾರಿ ಕಾಂಕ್ರೀಟ್, ಶಾರದಾನಗರ 1 ರಿಂದ 5ನೇ ಕ್ರಾಸ್, ಭೈರವ ಟಾರ್ಪಲ್, ಓಂ ಲ್ಯಾಬ್, ಗಣೇಶ ಇಂಜಿನಿಯರಿಂಗ್ ವರ್ಕ್ಸ್ ಹಾಗೂ ಸುತ್ತಮುತ್ತಲಿನ ಐಪಿ ಲಿಮಿಟ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Sahyadri Areca Co-Op Society ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರಿ ಬ್ಯಾಂಕ್; ಪಿ.ವೀರಮ್ಮ ಅಧ್ಯಕ್ಷರಾಗಿ‌ ಅವಿರೋಧ ಆಯ್ಕೆ

0

Sahyadri Areca Co-Op Society ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ ನಿ., ದರ್ಗಾ ಕಾಂಪ್ಲೆಕ್ಸ್, ತಿಲಕ್ ನಗರ, ಶಿವಮೊಗ್ಗ ಇದರ 2026-2031ನೇ ಸಾಲಿನವರೆಗೆ ದಿನಾಂಕ:05-01-2026ರಂದು ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಶ್ರೀಮತಿ ವೀರಮ್ಮ.ಪಿ ಹಾಗೂ ಅವರ ಸಾರತ್ಯದಲ್ಲಿ ಸಂಪೂರ್ಣ ನಿರ್ದೇಶಕ ಮಂಡಳಿಯವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

Sahyadri Areca Co-Op Society ದಿನಾಂಕ:14-01-2026 ರಂದು ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾಗಿ ಸತತವಾಗಿ 2007ರಿಂದ 7ನೇ ಬಾರಿಗೆ ಶ್ರೀಮತಿ ವೀರಮ್ಮ.ಪಿ ರವರು ಮುಂದಿನ 5 ವರ್ಷದ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಎಂ.ಕೆ.ಜ್ಯೋತಿ ರವರು ಆಯ್ಕೆಯಾಗಿರುತ್ತಾರೆ.

ಈ ಸಂದರ್ಭದಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳು, ಪಿಗ್ಮಿ ಸಂಗ್ರಹಕಾರರು ಶುಭ ಹಾರೈಸಿದ್ದಾರೆ.

Chess ಜನವರಿ 18 ರಾಜ್ಯಮಟ್ಟದ ರಾಪಿಡ್ ಚೆಸ್ ಪಂದ್ಯಾವಳಿ

0

Chess ಜನವರಿ 18 ಭಾನುವಾರ ದಂದು ಚಾಣಕ್ಯ ಚೆಸ್ ಸ್ಕೂಲ್ ಹಾಗೂ ಭಾರತೀಯ ವಿದ್ಯಾ ಭವನ ಸ್ಕೂಲ್ ಸಹಯೋಗದಲ್ಲಿ, ಶಿವಮೊಗ್ಗ ನಗರದ ವಿದ್ಯಾ ನಗರ ಬಡಾವಣೆಯ ಭಾರತೀಯ ವಿದ್ಯಾ ಭವನ ಶಾಲೆಯಲ್ಲಿ ರಾಜ್ಯ ಮಟ್ಟದ ರಾಪಿಡ್ ಚೆಸ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಈ ಪಂದ್ಯದಲ್ಲಿ ರಾಜ್ಯದ ಎಲ್ಲಾ 17ವರ್ಷ ವಯೋಮಿತಿಯ ಮಕ್ಕಳು ಭಾಗವಹಿಸಬಹುದು.

ಆಸಕ್ತರು ಹೆಸರು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9845830133 ,9741591672

Shimoga News ರಾಜ್ಯ “ಯುವ ಪ್ರಶಸ್ತಿ,- 2025-26” . ಶಿವಮೊಗ್ಗದ ಎಸ್.ವಿ.ರಂಜಿತಾ ಆಯ್ಕೆ.

0

Shimoga News ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಯುವಜನ ವತಿಯಿಂದ ಕನ್ನಡ ರಾಜ್ಯ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಬಾಲಾಜಿ ಅವರ ನೇತೃತ್ವದಲ್ಲಿ ನೀಡುವ ‘ಯುವ ಸಂಭ್ರಮ 2026’ ‘ರಾಜ್ಯ ಯುವ ಪ್ರಶಸ್ತಿ 2025-26’ಕ್ಕೆ ಶಿವಮೊಗ್ಗ ಜಿಲ್ಲಾ ಜಾನಪದ ಪರಿಷತ್, ಯುವ ಬ್ರಿಗೇಡ್ ಜಾನಪದ ಕಲಾವಿದೆ, ನಿರೂಪಕಿ ಎಸ್.ವಿ.ರಂಜಿತಾ ಆಯ್ಕೆಯಾಗಿದ್ದಾರೆ.

Shimoga News ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜನವರಿ 18ರಂದು ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆಯಲಿದೆ. ಡಿವಿಎಸ್ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಹಾಗೂ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಅಭಿನಂದಿಸಿದ್ದಾರೆ.

B.Y. Raghavendra ಕಾಯಕವೇ ಶ್ರೇಷ್ಠ, ಮನುಷ್ಯತ್ವ ಬೋಧಿಸುವುದೇ ನಿಜವಾದ ಧರ್ಮ- ಬಿ.ವೈ.ರಾಘವೇಂದ್ರ

0

B.Y. Raghavendra ಕಾಯಕವೇ ಎಲ್ಲಕ್ಕಿಂತ ಶ್ರೇಷ್ಟ. ಮನುಷ್ಯತ್ವ ಬೋಧಿಸುವುದೇ ನಿಜವಾದ ಧರ್ಮ ಎಂದು ನಂಬಿ ಅದನ್ನೇ ಪ್ರತಿಪಾತಿಸುತ್ತಿದ್ದ ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರರು ನಮ್ಮೆಲ್ಲರಿಗೂ ಆದರ್ಶ ಪುರುಷರು ಎಂದು ಸಂಸದರಾದ ಬಿ.ವೈ.ರಾಘವೇಂದ್ರ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಭೋವಿ ವಿದ್ಯಾವರ್ಧಕ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಸಿದ್ದರಾಮೇಶ್ವರರು ನೇರ ಮತ್ತು ನಿಷ್ಟುರ ನುಡಿಯ ದಾರ್ಶಜನಿಕರು. ಬಸವಾದಿ ಶರಣರೊಂದಿಗೆ ಸಮ ಸಮಾಜದ ನಿರ್ಮಾಣದಲ್ಲಿ ತೊಡಗಿದ್ದವರು. 12 ನೇ ಶತಮಾನದಲ್ಲೇ ನೂರಾರು ಕೆರೆ ಕಟ್ಟೆಗಳನ್ನು ನಿರ್ಮಿಸುವ ಮೂಲಕ ನೀರಾವರಿ ಕ್ರಾಂತಿಗೆ ನಾಂದಿ ಹಾಡಿದವರು. ಕುಡಿಯುವ ನೀರಿನ ಯೋಜನೆಗಳಿಗೆ ಇವರೇ ಪ್ರೇರಕ ಶಕ್ತಿ .
ಇವರು ದೂರದೃಷ್ಟಿವುಳ್ಳ ಕಾರ್ಯಕ್ರಮ ನೀಡುತ್ತಿದ್ದರು. ಹಾಗೂ ಜನ ಸೇವೆಯ ಮೂಲಕ ಶಿವಾರಾಧನೆ ಮಾಡುತ್ತಿದ್ದರು. ಇಂತಹ ದಾರ್ಶನಿಕರ ಜೀವನ ಮೌಲ್ಯಗಳನ್ನು ನಾವು ಅಳವಡಿಸಿಕೊಂಡಲ್ಲಿ ಈ ಸಮಾಜಕ್ಕೆ, ನಮ್ಮ ಜೀವನಕ್ಕೆ ನಾವು ನ್ಯಾಯ ಒದಗಿಸಬಹುದು.
ಮೂಢನಂಬಿಕೆ, ಅಸಮಾನತೆ, ತಾರತಮ್ಯ ತಿರಸ್ಕರಿಸಿದ್ದ ಅವರು ಮನುಷ್ಯತ್ವವೇ ಮುಖ್ಯವೆಂದು ಮನುಕುಲದ ಏಳ್ಗೆಗಾಗಿ ದುಡಿದರು. ಇಂತಹ ಮಹಾನ್ ಪುರುಷರ ಮೌಲ್ಯಗಳು, ತತ್ವಗಳು ಯುವ ಪೀಳಿಗೆಗೆ ಎಂದಿಗೂ ಮಾದರಿಯಾಗಿವೆ ಎಂದ ಅವರು ಶ್ರೀ ಸಿದ್ದರಾಮೇಶ್ವರರಂತೆ ಅವರ ಸಮಾಜ ಕೂಡ ಶ್ರೇಷ್ಠವಾಗಿದೆ ಎಂದರು.
B.Y. Raghavendra ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾದ ದೇಶಾದ್ರಿ ಹೊಸ್ಮನೆ ಉಪನ್ಯಾಸ ನೀಡಿ ಮಾತನಾಡಿ, ಯಾವುದೇ ಮಹಾನ್‌ಪುರುಷರ, ದಾರ್ಶನಿಕರ ಜಯಂತಿಗಳು ಆತ್ಮಾವಲೋಕನಕ್ಕೆ ಒಂದು ವೇದಿಕೆಯಾಗಿ, ಅವರ ಜೀವನ ಚರಿತ್ರೆ, ಮೌಲ್ಯಗಳು, ತತ್ವಗಳನ್ನು ಅರಿತು ಅವುಗಳನ್ನು ಅಳವಡಿಸಿಕೊಂಡು ಅವರ ದಾರಿಯಲ್ಲಿ ನಡೆಯುವ ಪ್ರಯತ್ನಗಳಾಗಬೇಕೇ ವಿನಃ ಕೇವಲ ಸಭೆ ಸಭಾರಂಭಗಳಿಗೆ ಸೀಮಿತವಾಗಬಾರದು ಎಂದರು.
ಶ್ರೀ ಸಿದ್ದರಾಮೇಶ್ವರರು ಕಾಯಕಯೋಗಿಗಳು. ಕಾಯಕವೇ ಸರ್ವಶ್ರೇಷ್ಟವೆಂದು ಅದನ್ನೇ ನಂಬಿ ನಡೆದವರು. 12 ನೇ ಶತಮಾನದಲ್ಲಿಯೇ ಯಾವುದೇ ಆಧುನಿಕ ಇಂಜಿನಿಯರಿAಗ್ ವ್ಯವಸ್ಥೆ ಇಲ್ಲದ ಕಾಲದಲ್ಲಿ ಜನ-ಜಾನುವಾರುಗಳಿಗೆ ಅತ್ಯುತ್ತಮವಾದ ಕೆರೆ ಕಟ್ಟೆಗಳನ್ನು ನಿರ್ಮಿಸಿದ್ದರು. ಸಮ ಸಮಾಜದ ನಿರ್ಮಾಣಕ್ಕಾಗಿ ಬಸವಾದಿ ಶರಣರೊಂದಿಗೆ ಹೋರಾಡಿದ್ದರು. ಅತ್ಯುತ್ನತ ಉನ್ನತ ಸ್ಥಾನವಾದ ಅನುಭವ ಮಂಟಪದ 3 ನೇ ಪೀಠಾಧ್ಯಕ್ಷರಾಗಿದ್ದರು.
12 ನೇ ಶತಮಾನದ ವಚನ ಚಳವಳಿಯನ್ನು ನಾವ್ಯಾರೂ ಮರೆಯಲಿಕ್ಕೆ ಸಾಧ್ಯವಿಲ್ಲ. ಅಂತಹ ಚಳವಳಿಯಲ್ಲಿ ಇವರು ಮುಂಚೂಣಿಯಲ್ಲಿದ್ದು, ಬಸವಣ್ಣನವರ ಸಮ ಸಮಾಜ ನಿರ್ಮಾಣ ಪರಿಕಲ್ಪನೆಯಿಂದ ಪ್ರೇರೇಪಣೆಗೊಂಡು ಅದೇ ಮಾರ್ಗದಲ್ಲಿ ನಡೆದವರು.
ಶ್ರಮ ಸಂಸ್ಕೃತಿಯಲ್ಲಿ ನಂಬಿಕೆ ಇರಿಸಿದ್ದ ಇವರು ಮೂರ್ತಿ ಪೂಜೆಗಿಂತ ಕಾಯಕವೇ ಶ್ರೇಷ್ಟವೆಂದು ನಡೆದವರು. ಮನುಕುಲದ ಏಳ್ಗೆಯೇ ಮುಖ್ಯ ಎಂದು ನಂಬಿದವರು. ನಾವು ಕೂಡ ಇಂತಹ ದಾರ್ಶನಿಕರ ದೇವಾಲಯ ನಿರ್ಮಿಸಿ ಇವರ ಮೂರ್ತಿ ಪೂಜೆ ಮಾಡುವುದಕ್ಕಿಂತ ಇವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ನಡೆಯಬೇಕು. ಶೋಷಿತ ಸಮಾಜಗಳ ಸಂಘಟಕರಾದ ಇವರು ಸಂಘಟನೆಯ ಪ್ರತಿಪಾದಕರಾಗಿದ್ದು, ನಾವೆಲ್ಲ ಸಂಘಟಿತರಾಗಬೇಕು ಹಾಗೂ ಇವರ ಆದರ್ಶಗಳ ಅಡಿಯಲ್ಲಿ ನಾವು ಸಮಾಜ ಕಟ್ಟಬೇಕು.
ಕೇವಲ ಮೂರ್ತಿ ಪೂಜೆ ಮಾಡಿದರೆ ಸಮಾಜ ಎಚ್ಚರಗೊಳ್ಳಲು ಸಾಧ್ಯವಿಲ್ಲ. ವಚನಕಾರರ ಅನುಯಾಯಿಗಳಾದ ನಮ್ಮ ಸಮಾಜ ಆಚರಣೆಗಳಿಗೆ ಬಲಿಯಾಗುತ್ತಿದ್ದೇವೆ. ಆಚರಣೆಗಳಿಗಿಂತ ತಿಳುವಳಿಕೆಯ ಜ್ಞಾನದ ಕಡೆ ನಡೆಯಬೇಕಿದೆ ಎಂದ ಅವರು ಶ್ರೀ ಸಿದ್ದರಾಮೇಶ್ವರ ಬಾಲ್ಯ ಸೇರಿದಂತೆ ಜೀವನ ಚರಿತ್ರೆ ಕುರಿತು ವಿವರಿಸಿದರು.
ಶ್ರೀ ಸಿದ್ದರಾಮೇಶ್ವರರು ಅಧಿಕಾರದ ಆಸೆ ತಿರಸ್ಕರಿಸಿ, ಬಸವಣ್ಣನವರ ಸಂಪರ್ಕ ಬೆಳೆಸಿ ವಚನ ಚಳವಳಿಯಲ್ಲಿ ಪಾಲ್ಗೊಳ್ಳುತ್ತಾರೆ. ಜಾತಿ ವ್ಯವಸ್ಥೆ ವಿರುದ್ದ ಹೋರಾಡುತ್ತಾರೆ.
ಕಲ್ಲು, ಮಣ್ಣು, ನೀರಿನ ಮೂಲಕ ದೊಡ್ಡ ದೊಡ್ಡ ಕಟ್ಟಡಗಳು, ಅರಮನೆ, ಅಣೆಕಟ್ಟು ಇತರೆ ಕಟ್ಟುವ ಸಂಸ್ಕೃತಿಯ ಪ್ರತೀಕವಾದ ನಮ್ಮ ಸಮಾಜ ಕೀಳರಿಮೆ ಬಿಟ್ಟು ಉನ್ನತ ಸ್ಥಾನದಲ್ಲಿದ್ದೇವೆ ಎಂದು ಹೆಮ್ಮೆ ಪಡಬೇಕು. ಸಂಘಟಿತರಾಗಬೇಕು. ನಮ್ಮ ಸಮಾಜಕ್ಕಾಗಿ ನಾವು ಕೊಡುಗೆಗಳನ್ನು ನೀಡಬೇಕು. ಕುಲಗುರುಗಳ ಮಹತ್ವ ತಿಳಿದು ಎಚ್ಚರಗೊಳ್ಳಬೇಕು. ಅವರ ವಚನಗಳ ಸಾರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದ ಅವರು ಅವರ ಆದರ್ಶಗಳನ್ನು ಪಾಲಿಸಿದರೆ ಮಾತ್ರ ಸಮಾಜದ ಉದ್ದಾರ ಸಾಧ್ಯ ಎಂದರು.
ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಲೆಮಾರಿಗಳ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ, ರಾಜ್ಯ ಜವಳಿ ಮೂಲ ಸೌಲಭ್ಯ(ವಿದ್ಯುತ್ ಮಗ್ಗಗಳ) ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಚೇತನ್ ಕೆ ಮಾತನಾಡಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್ ಸಿ ಎಸ್, ಜಿಲ್ಲಾ ಭೋವಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎನ್ ರವಿಕುಮಾರ್, ತಾಲ್ಲೂಕು ಭೋವಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಟಿ.ಜಗದೀಶ್, ಸಮಾಜದ ಮುಖಂಡರು, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ರಮೇಶ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ರ‍್ದೇಶಕ ಉಮೇಶ್ ಹೆಚ್, ಅಧಿಕಾರಿಗಳು ಹಾಜರಿದ್ದರು.

“ಕಲಬೆರಕೆ ತಿಂಡಿ ತಿನಿಸು ಸೇವಿಸದಿರಿ” ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ಸಾರ್ವಜನಿಕ ಜಾಗೃತಿ

0

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿ ಕಲಬೆರಕೆ ಹೆಚ್ಚುತ್ತಿರುವುದು ಜನರ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟು ಮಾಡುತ್ತಿರುವ ಹಿನ್ನಲೆಯಲ್ಲಿ, ಸುರಕ್ಷಿತ, ಶುದ್ಧ ಹಾಗೂ ಗುಣಮಟ್ಟದ ಆಹಾರವನ್ನು ಜನರಿಗೆ ಒದಗಿಸುವ ಉದ್ದೇಶದಿಂದ “ಕಲಬೆರಕೆ ತಡೆಗೆ – ನಮ್ಮ ನಡಿಗೆ” ಆಹಾರ ಸುರಕ್ಷತಾ ಅಭಿಯಾನ – 2026 ಅನ್ನು ಹಮ್ಮಿಕೊಳ್ಳಲಾಗಿದೆ.
ಈ ಅಭಿಯಾನದ ಮೂಲಕ ಆಹಾರ ಕಲಬೆರಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಆಹಾರ ಸುರಕ್ಷತಾ ಕಾಯ್ದೆ-2006ರ ಮಹತ್ವವನ್ನು ತಿಳಿಸುವುದರ ಜೊತೆಗೆ, ಸುರಕ್ಷಿತ ಆಹಾರದ ಬಳಕೆಯನ್ನು ಉತ್ತೇಜಿಸುವುದು ಮುಖ್ಯ ಗುರಿಯಾಗಿದೆ. ಜನಸಾಮಾನ್ಯರ ಸಹಕಾರದೊಂದಿಗೆ ಶುದ್ಧ ಆಹಾರ ಸಂಸ್ಕೃತಿಯನ್ನು ಬೆಳೆಸಿ, ಉತ್ತಮ ಆರೋಗ್ಯಯುತ ಸಮಾಜ ನಿರ್ಮಿಸುವುದೇ ಈ ಅಭಿಯಾನದ ಆಶಯವಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಅನ್ವಯ ಆಹಾರ ವಸ್ತುಗಳ ಉತ್ಪಾದನೆ ಸಂಸ್ಕರಣೆ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಸಣ್ಣ ಮಧ್ಯಮ ಪರಮಾಣದ ಉತ್ಪಾದಕರು, ಬೀದಿ ಬದಿ ಆಹಾರ ವಸ್ತುಗಳ ವ್ಯಾಪಾರಿಗಳು, ಪಾಸ್ಟ್ ಫುಡ್ ಕೇಂದ್ರಗಳು, ಬೇಕರಿಗಳು, ಹೋಟೆಲ್ ಮತ್ತು ರೆಸ್ಟೋರೆಂಟ್, ಜ್ಯೂಸ್ ಸೆಂಟರ್, ಐಸ್ ಕ್ರೀಮ್ ಹಾಗೂ ಕಾಂಡಿಮೆಂಟ್ಸ್ ಮಾಲೀಕರುಗಳು ಇಲ್ಲಿ ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
ಆಹಾರ ತಯಾರಿಕೆ, ಸಂಗ್ರಹಣೆ, ಸಾಗಾಣಿಕೆ, ಮಾರಾಟ ಮಾಡುವವರು ಕಡ್ಡಾಯವಾಗಿ FSSAI ನ ನೊಂದಣಿ/ಪರವಾನಿಗೆಯನ್ನು ಹೊಂದಿರಬೇಕಾಗಿರುವುದು ಕಡ್ಡಾಯ. ನಿಷೇಧಿತ ಕೃತಕ ಬಣ್ಣಗಳು ಮತ್ತು ಹಾನಿಕಾರಕ ರಸಾಯನಿಕ ವಸ್ತುಗಳನ್ನು ಆಹಾರ ತಯಾರಿಕೆಯಲ್ಲಿ ಬಳಸಬಾರದು. ಆಹಾರ ತಯಾರಿಕೆಯಲ್ಲಿ ಕೃತಕ ರುಚಿಕಾರಕಗಳನ್ನು (ಎಂಎಸ್‌ಜಿ/ಟೆಸ್ಟಿಂಗ್ ಪೌಂಡರ್) ಬಳಕೆ ಮಾಡಬಾರದು. ಕಳಪೆ ಗುಣಮಟ್ಟದ, ಕಲಬೆರಕೆಯಾಗಿರುವ, ಹಾನಿಕಾರಕ ಆಹಾರ ವಸ್ತುಗಳ ತಯಾರಿಕೆ ದಾಸ್ತಾನು ವಿತರಣೆ ಮತ್ತು ಮಾರಾಟ ಮಾಡುವಂತಿಲ್ಲ. ಅವಧಿ ಮೀರಿದ ಆಹಾರ ಪದಾರ್ಥಗಳು ಮತ್ತು ಅವಧಿ ಮುಗಿಯುವ ದಿನಾಂಕ ಹೊಂದಿರದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬಾರದು. ತಪ್ಪುದಾರಿಗೆ ಎಳೆಯುವ ಜಾಹೀರಾತು ನೀಡುವ ಮೂಲಕ ಆಹಾರ ವಸ್ತುಗಳ ಉತ್ಪಾದನೆ, ಸಂಸ್ಕರಣೆ ಮತ್ತು ಮಾರಾಟ ಮಾಡಬಾರದು. ಆಹಾರ ಪದಾರ್ಥಗಳನ್ನು ಅನಾರೋಗ್ಯಕರ ಮತ್ತು ಅನೈರ್ಮಲ್ಯಕರ ವಾತಾವರಣದಲ್ಲಿ ಸಂಸ್ಕರಿಸುವುದು ಮತ್ತು ತಯಾರಿಸುವುದು ನಿಷೇಧಿಸಲಾಗಿದೆ. ಆಹಾರ ತಯಾರಿಕೆ ಸಂಸ್ಕರಣೆಯಲ್ಲಿ ಶುದ್ದಿಕರಿಸಿದ ನೀರುನ್ನು ಬಳಕೆ ಮಾಡಬೇಕು. ಕಲಬೆರಕೆ ಕಾರಕ ವಸ್ತುಗಳನ್ನು ಆಹಾರ ತಯಾರಿಕಾ ಸ್ಥಳದಲ್ಲಿ ಹೊಂದಿರಬಾರದು. ಆಹಾರ ತಯಾರಿಕೆ, ಸಂಸ್ಕರಣೆಯಲ್ಲಿ ಶುದ್ಧವಾದ ನೀರನ್ನು ಬಳಕೆ ಮಾಡಬೇಕು. ಮಹಾನಗರ ಪಾಲಿಕೆ/ನಗರಸಭೆ/ಪುರಸಭೆ/ಪಟ್ಟಣ ಅಥವಾ ಗ್ರಾಮ ಪಂಚಾಯಿತಿಯ ವ್ಯಾಪಾರೋಧ್ಯಮ ಪರವಾನಿಗೆ ಹೊಂದಿರಬೇಕಾಗಿರುವುದು ಕಡ್ಡಾಯ. ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡುವಂತಿಲ್ಲ.
ಇವೇ ಮೊದಲಾದ ಉಪಬಂಧಗಳಿಗೆ ಸಂಬಂಧಪಟ್ಟಂತೆ ಆಹಾರ ವಸ್ತಗಳ ಉತ್ಪಾದನೆ, ಸಂಸ್ಕರಣ ಮತ್ತು ಮಾರಾಟ ವ್ಯವಹಾರದಲ್ಲಿ ತೊಡಗಿರುವ ವ್ಯಕ್ತಿ ಮತ್ತು ಸಂಸ್ಥೆಗಳು ಈ ಮೇಲ್ಕಂಡ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದಲ್ಲಿ ಅಂತಹ ಅಪರಾಧಗಳಿಗೆ ಗರಿಷ್ಟ 05 ಲಕ್ಷದವರೆಗೆ ದಂಡ ಮತ್ತು ಗರಿಷ್ಟ 03 ವರ್ಷಗಳವರೆಗೆ ಕಾರಗೃಹ ವಾಸ ಮತ್ತು ಈ ಎರಡು ದಂಡನೆಗಳಿಗೆ ಗುರಿಮಾಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರನ್ವಯ ಅವಕಾಶ ಕಲ್ಪಿಸಲಾಗಿದ್ದು, ಎಲ್ಲಾ ರೀತಿಯ ಆಹಾರ ವಸ್ತು ಪ್ರವರ್ತಕರುಗಳಿಗೆ ಈ ಮೂಲಕ ಸಾರ್ವಜನಿಕ ತಿಳುವಳಿಕೆ ನೀಡಲಾಗಿದೆ.
ಈ ಯಾವುದೇ ಉಲ್ಲಂಘನೆಗಳು ಕಂಡುಬಂದಲ್ಲಿ ಸಾರ್ವಜನಿಕರು, ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರದ ಕಛೇರಿ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳನ್ನು ಹಾಗೂ ಟೋಲ್ ಫ್ರೀ ನಂ.080-22270035 ಅನ್ನು ಅಥವಾ ಆರೋಗ್ಯ ನೀರಿಕ್ಷಕರು/ ಮಹಾನಗರ ಪಾಲಿಕೆ/ ಆಹಾರ ನೀರಿಕ್ಷಕರು/ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇವರನ್ನು ಸಂಪರ್ಕಿಸಲು ಕೋರಿದೆ.

ಬೆಜ್ಜವಳ್ಳಿಯಲ್ಲಿ ಇರುಮುಡಿ ಅರ್ಪಿಸಿದ ನಟ ಶಿವರಾಜ್ ದಂಪತಿ

0

ಮಕರ ಸಂಕ್ರಮಣ ಅಂಗವಾಗಿ ಕರ್ನಾಟಕದ ಶಬರಿಮಲೆ ಅಯ್ಯಪ್ಪ ಸ್ವಾಮಿ ಕ್ಷೇತ್ರ ಎಂದು ಪ್ರಸಿದ್ಧಿ ಪಡೆದ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಡೆದ ಮಕರ ಸಂಕ್ರಾಂತಿ ಉತ್ಸವ ಹಾಗೂ ಪೀಠ ಸ್ಥಾಪನೆಯ 14ನೇ ವರ್ಷದ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರನಟ ಡಾ.ಶಿವರಾಜ್ ಕುಮಾರ್ ಹಾಗೂ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ದಂಪತಿಗಳು ಮಾಲೆ ಧರಿಸಿ, ಇರುಮುಡಿ ಕಟ್ಟಿ ದೇವಸ್ಥಾನಕ್ಕೆ ತೆರಳಿದರು.

ಈ ವೇಳೆ ಗರುಡ ದರ್ಶನ ಪಡೆದು, ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಯ್ಯಪ್ಪ ಸ್ವಾಮಿ ಉತ್ಸವ ಮೂರ್ತಿಯನ್ನು ಹೊತ್ತ ಪಲ್ಲಕ್ಕಿ ಮೆರವಣಿಗೆಯಲ್ಲಿ ಭಾಗವಹಿಸಿ, ಅಯ್ಯಪ್ಪ ಸ್ವಾಮಿಯ ದಿವ್ಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು

Department of Labour ಕಾರ್ಮಿಕ ಇಲಾಖೆಯಿಂದ ದಿಢೀರ್ ಧಾಳಿ: 4 ಕಿಶೋರ ಕಾರ್ಮಿಕರ ಪತ್ತೆ

0

Department of Labour ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಅನಿರೀಕ್ಷಿತ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದ್ದು, 04 ಕಿಶೋರಾ ಕಾರ್ಮಿಕರು ಪತ್ತೆಯಾಗಿರುತ್ತಾರೆ. ಈ ಕಿಶೋರಾ ಕಾರ್ಮಿಕರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ತಿಳಿಸಿರುತ್ತಾರೆ.

ಈ ತಪಾಸಣೆಯಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರಾ ಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿಕಾಯ್ದೆ 2016ರಡಿ ಶಿವಮೊಗ್ಗ ನಗರದ ತೀರ್ಥಹಳ್ಳಿ ರಸ್ತೆ, ಬೈಪಾಸ್, ನ್ಯೂ ಮಂಡ್ಲಿಯ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಆಟೋವಕ್ಸ್, ಬೀದಿ ಬದಿ ವ್ಯಾಪಾರಿಗಳಿಗೆ, ಬಾಲ ಕಾರ್ಮಿಕ ಕಾಯ್ದೆಯ ಕುರಿತು ಅರಿವು ಮೂಡಿಸಲಾಯಿತು. ಈ ತಪಾಸಣೆಯಲ್ಲಿ ಕೃಷ್ಣ ಎಂ. ಕಾರ್ಮಿಕ ನಿರೀಕ್ಷಕರು, ಶಿವಮೊಗ್ಗ, ರಘುನಾಥ ಎ.ಎಸ್. ಯೋಜನಾ ನಿರ್ದೇಶಕರು, ಲಕ್ಷಣ್, ಪೊಲೀಸ್ ಇಲಾಖೆ ಮತ್ತು ಪುನೀತ್ ಜಿಲ್ಲಾ ಮಕ್ಕಳ ರಕ್ಷಣಾಘಟಕ, ರಾಮಪ್ಪ ಶಿಕ್ಷಕರು ಈ ತಂಡದಲ್ಲಿ ಭಾಗವಹಿಸಿದ್ದರು.

ಅಭಿಮಾನಿ ಮಿತ್ರರೊಂದಿಗೆ ಸಂಕ್ರಾತಿ ಸಂಭ್ರಮದಲ್ಲಿ ಪಾಲ್ಗೊಂಡ ಸಂಸದ ರಾಘವೇಂದ್ರ

0

ಶಿವಮೊಗ್ಗದ ಸಂಸದ ರಾಘವೇಂದ್ರ ನಿವಾಸದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

ಎಲ್ಲರಿಗೂ ಎಳ್ಳು-ಬೆಲ್ಲ ಹಂಚಿ, ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಭದ್ರಾವತಿ ಬಿಜೆಪಿ ಮುಖಂಡರು, ವೈದ್ಯ ಮಿತ್ರರು ಹಾಗೂ ಅಭಿಮಾನಿಗಳು, ಕಾರ್ಯಕರ್ತರು ಉಪಸ್ಥಿತರಿಕರು.