Thursday, June 11, 2026
Thursday, June 11, 2026
Home Blog Page 2015

ಇಂಗ್ಲೆಂಡ್ ವಿರುದ್ಧ ನೆಲಕಚ್ಚಿದ ಶ್ರೀಲಂಕಾ

0

ಟಿ – 20 ವಿಶ್ವಕಪ್ ಟೂರ್ನಿಯ ಸೂಪರ್ – 12 ರ A – ಗುಂಪಿನ ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳ ನಡುವೆ ಪಂದ್ಯ ನಡೆಯಿತು. ಶ್ರೀಲಂಕಾ ತಂಡದ ವಿರುದ್ಧ ಇಂಗ್ಲೆಂಡ್ ರೋಚಕ ಜಯಗಳಿಸಿದೆ.

ಶಾರ್ಜಾದ ಶೇಕ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 163 ರನ್ ಕಲೆಹಾಕಿತು. ಆರಂಭಿಕ ಹಿನ್ನಡೆ ಕಂಡು ರೋಚಕ ಬ್ಯಾಟಿಂಗ್ ಮಾಡಿದ ಜೋಸ್ ಬಟ್ಲರ್ ಮತ್ತು ಇಯಾನ್ ಮಾರ್ಗನ್ ರವರ ಉತ್ತಮ ಪ್ರದರ್ಶನದೊಂದಿಗೆ ತಂಡದ ಗೆಲುವಿಗೆ ಆಸರೆಯಾದರು.

ಜೋಸ್ ಬಟ್ಲರ್ ರವರು 67 ಎಸೆತಗಳಲ್ಲಿ 6 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿ 101 ರನ್ ಗಳಿಸುವ ಮೂಲಕ ಸೆಂಚುರಿ ಬಾರಿಸಿದರು. ಹಾಗೆಯೇ ಇಯಾನ್ ಮಾರ್ಗನ್ ರವರು 36 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ಗಳನ್ನು ಸಿಡಿಸಿ 40 ರನ್ ಗಳನ್ನೂ ಕಲೆ ಹಾಕಿದರು.

5.2 ಓವರ್ ಗಳಲ್ಲಿ ಕೇವಲ 35 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ತಂಡದ ಸ್ಥಿತಿ ರಕ್ಷಣಾತ್ಮಕ ಆಟದೊಂದಿಗೆ ಇನ್ನಿಂಗ್ಸ್ ಕಟ್ಟಿದ ಈ ಜೋಡಿ ಕ್ರಮೇಣ ಅಬ್ಬರಿಸತೊಡಗಿ 4 ನೇ ವಿಕೆಟ್ ಗೆ ಕೇವಲ 78 ಎಸೆತಗಳಲ್ಲಿ 112 ರನ್ ಗಳ ಕಾಣಿಕೆ ನೀಡಿದರು. ಇಂಗ್ಲೆಂಡ್ ತಂಡ ಕೊನೆಯ 10 ಓವರ್ ಗಳಲ್ಲಿ 1 ವಿಕೆಟ್ ಗೆ 116 ರನ್ ಗಳಿಸಿತು. ಅದರಲ್ಲೂ ಇನ್ನಿಂಗ್ಸ್ ನ ಕೊನೆಯ ಓವರ್ ನ (19.5) ಕೊನೆಯ ಬಾಲ್ ನಲ್ಲಿ ಸಿಕ್ಸರ್ ಸಿಡಿಸುವುದರ ಮೂಲಕ ಬಟ್ಲರ್ ಆಕರ್ಷಕ ಶತಕ ಪೂರೈಸಿದರು. ಇದರೊಂದಿಗೆ ಟಿ – 20 ವಿಶ್ವಕಪ್ ಇತಿಹಾಸದಲ್ಲಿ ಶತಕ ಬಾರಿಸಿದ 8 ನೇ ಹಾಗೂ ಋತುವಿನ ಮೊದಲ ಆಟಗಾರ ಎಂಬ ಗೌರವಕ್ಕೆ ಬಟ್ಲರ್ ಪಾತ್ರರಾದರು.

ಒಟ್ಟಿನಲ್ಲಿ ಇವರಿಬ್ಬರ ಉತ್ತಮ ಪ್ರದರ್ಶನ ಮೂಲಕ ಬಹಳ ತಾಳ್ಮೆಯಿಂದ ಸಮಯೋಚಿತ ಬ್ಯಾಟಿಂಗ್ ಫಲವಾಗಿ ಇಂಗ್ಲೆಂಡ್ ತಂಡ ಟಿ – 20 ವಿಶ್ವಕಪ್ ಟೂರ್ನಿಯ ಸೂಪರ್ 12 ರ ಹಂತದ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ 164 ರನ್ ಗಳ ಸವಾಲ್ ಹಾಕಿತು.
163 ರನ್ ಗಳನ್ನ ಗೆಲುವಿನ ಗುರಿ ಬೆನ್ನತ್ತಿ ಹೋರಾಡುವ ಹೊತ್ತಿಗೆ 8 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿತು. ತಂಡದ ಪ್ರಮುಖ ಬ್ಯಾಟ್ಸ್ಮನ್ ಗಳು ಬಹಳ ಬೇಗನೆ ವಿಕೆಟ್ ಗಳನ್ನ ಒಪ್ಪಿಸಿ ಸಂಕಷ್ಟಕ್ಕೆ ಸಿಲುಕಿದ ಶ್ರೀಲಂಕಾ 19 ಓವರ್ ಗಳಲ್ಲಿ 137 ರನ್ ಗಳಿಸಿತು.ತಲಾ 2 ವಿಕೆಟ್ ಗಳಿಸಿದ ಇಂಗ್ಲೆಂಡ್ ತಂಡದ ಮೋಯಿನ್ ಅಲಿ, ಆದಿಲ್ ರಶೀದ್ ಮತ್ತು ಕ್ರಿಸ್ ಜೋರ್ಡಾನ್ ಅವರು ಶ್ರೀಲಂಕಾದ ಕುಸಿತಕ್ಕೆ ಕಾರಣರಾದರು. ಇಂಗ್ಲೆಂಡ್ ತಂಡಕ್ಕೆ ಶರಣಾಯಿತು.

ಅಡಿಕೆ ಹಾಳೆಯಲ್ಲಿ ಆಕರ್ಷಕ ವಸ್ತುಗಳು

0

ಪ್ರಾಚೀನ ಕಾಲದಿಂದ ಮನೆಬಳಕೆಯ ವಸ್ತುಗಳು ಬಿದಿರು ಮತ್ತು ಬೆತ್ತದಿಂದ ತಯಾರಿಸಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹೆಚ್ಚಾಗಿದೆ. ಇದರಿಂದ ಬೆತ್ತ ಬಿದಿರು ವಸ್ತುಗಳ ಉತ್ಪನ್ನಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾ ಬಂದಿದೆ. ಪ್ಲಾಸ್ಟಿಕ್ ಪರಿಸರಕ್ಕೆ ವಿಷಕಾರಿ ವಸ್ತುವಾಗಿದೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ಪ್ಲಾಸ್ಟಿಕ್ ಬಳಕೆ ತಗ್ಗಿಸಲು, ನಿಸರ್ಗದ ವಸ್ತುಗಳು ಎಸ್ಎಲ್ ಪಡೆದೆ ನಮ್ಮ ದೈನಂದಿನ ಬಳಕೆ ವಸ್ತುಗಳಾಗಿ ವಿವಿಧ ನಮೂನೆ ಹೊಂದಲು ಸಾಧ್ಯವಾಗಲಿದೆ.

ಜಿ -20 : ಜಾಗತಿಕ ತಾಪಮಾನಕ್ಕೆ ನಿಯಂತ್ರಣ

0

ಜಿ -20 ಶೃಂಗದಲ್ಲಿ ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪನಿಗಳಿಗೆ ಶೇ.15 ಗ್ಲೋಬಲ್ ಮಿನಿಮಮ್ ಟ್ಯಾಕ್ಸ್ ವಿಧಿಸುವ ವಿಚಾರ, ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಬಳಕೆ ಕಡಿಮೆ ಮಾಡಿ, ನವೀಕರಿಸಬಹುದಾದ ಇಂಧನ ಬಳಕೆಗೆ ಆದ್ಯತೆ ನೀಡುವುದು, ಹಸಿರು ಮನೆ ಅನಿಲ ಹೊರಸೂಸುವಿಕೆ ಕಡಿಮೆ ಮಾಡುವುದು ಮುಂತಾದ ವಿಷಯಗಳು ಚರ್ಚೆಗೆ ಒಳಗಾದವು.
ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್ ಗೆ ಮಿತಿಗೊಳಿಸಲು 2015ರ ಪ್ಯಾರಿಸ್ ಸಮ್ಮೇಳನದಲ್ಲಿ ಜಾಗತಿಕ ನಾಯಕರು ಸಮ್ಮತಿಸಿದ್ದರು. ಇದು ಪರಾಮರ್ಶೆ ಈ ಸಿಒಪಿ 26 ಶೃಂಗಸಭೆಯಲ್ಲಿ ನಡೆಯಲಿದೆ. ಕಳೆದ ಒಂದೂವರೆ ಶತಮಾನದಲ್ಲೇ ಇಳೆ 1.1 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಯಾಗಿದೆ. ಇದನ್ನು ಆಧಾರವಾಗಿಟ್ಟುಕೊಂಡು 2030ರ ವೇಳೆಗೆ 1.5 ಡಿಗ್ರಿ ಸೆಲ್ಸಿಯಸ್ ಮಿತಿ ದಾಟಲಿದೆ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.
‘ಚೀನಾ ಸೇರಿ ಪ್ರಮುಖ ರಾಷ್ಟ್ರಗಳು ಕಲ್ಲಿದ್ದಲು ಯೋಜನೆ ಸ್ಥಗಿತಗೊಳಿಸುವ ವಿಚಾರದಲ್ಲಿ ಬದ್ಧತೆ ತೋರಿಸಬೇಕು. ಗ್ಲಾಸ್ಗೋವ್ ನಲ್ಲಿ ಈ ಬಗ್ಗೆ ಘೋಷಣೆ ಮಾಡಿ ಪರಿಸರ ಸ್ನೇಹಿ ಇಂಧನ ಬಳಕೆ ಕಡೆಗೆ ಗಮನ ಹರಿಸಬೇಕು” ಎಂದು ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದರು.
ಜಗತ್ತಿನ ದೊಡ್ಡ ಅರ್ಥವ್ಯವಸ್ಥೆಯ ನಾಯಕರು ಜಿ-20 ಶೃಂಗದ ಎರಡನೇ ಮತ್ತು ಕೊನೆಯ ದಿನ ಹವಾಮಾನ ವೈಪರಿತ್ಯದ ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿ ಮಾತನಾಡಿದರು.
ಸ್ಕಾಟ್ಲೆಂಡ್ ನ ಗ್ಲಾಸ್ಗೋವ್ ನಲ್ಲಿ ಸಿಒಪಿ 26 ಶೃಂಗ ಶುರುವಾಗಿದ್ದು, ಮುಂದಿನ ಎರಡು ವಾರಗಳ ವಿವಿಧ ರಾಷ್ಟ್ರಗಳ ನಾಯಕರು ಹವಾಮಾನ ವೈಪರಿತ್ಯ ತಡೆಗೆ ತೆಗೆದುಕೊಂಡ ಕ್ರಮಗಳ ವಿವರವನ್ನು ಜಗತ್ತಿನೆದುರು ಪ್ರಸ್ತುತಪಡಿಸಲಿದ್ದಾರೆ.
ಜಗತ್ತಿನ ಹಸಿರು ಮನೆ ಅನಿಲ ಹೊರಸೂಸುವಿಕೆಯ 4ನೇ ಮೂರಂಶದಷ್ಟು ಹೊಂದಿರುವ ಜಿ-20 ರಾಷ್ಟ್ರಗಳು, ಏರುತ್ತಿರುವ ತಾಪಮಾನ ಕಡಿಮೆ ಮಾಡಲು ಬಡರಾಷ್ಟ್ರಗಳಿಗೆ ನೆರವಾಗುತ್ತ, ತಮ್ಮ ದೇಶಗಳಲ್ಲಿ ಮಾಲಿನ್ಯ ತಡೆಗೆ ಹೇಗೆ ಎಲ್ಲರಿಗೂ ಹೊಂದುವಂತಹ ಕ್ರಮ ತೆಗೆದುಕೊಳ್ಳುವುದು ಎಂಬ ಬಗ್ಗೆ ಚಿಂತನೆ ನಡೆಸಿವೆ.
ಆಸ್ಟ್ರೇಲಿಯಾ, ರಷ್ಯಾ, ಜಪಾನ್, ಚೀನಾ ಮತ್ತು ಭಾರತ ದೇಶಗಳು ಹವಾಮಾನ ವೈಪರಿತ್ಯ ಕಡೆಗೆ ಸಂಬಂಧಿಸಿ ಬದ್ಧತೆಯನ್ನು ತೋರಿಸಬೇಕು. ಪ್ರತಿರೋಧದ ಭಾಷೆಯನ್ನು ಬಿಟ್ಟು ಪ್ಯಾರಿಸ್ ಒಪ್ಪಂದ ಅಂಶಗಳಿಗೆ ಅನುಗುಣವಾಗಿ ಕ್ರಮಗಳನ್ನು ನಿಶ್ಚಿತ ಗಡುವಿನೊಳಗೆ ಜಾರಿಗೊಳಿಸಬೇಕು ಎಂದು ಐರೋಪ್ಯ ಒಕ್ಕೂಟ ಆಗ್ರಹಿಸಿದೆ.

ಲಾಕ್ ಡೌನ್ ಅವಧಿ : ಶಾಲಾ ಕಟ್ಟಡ ನಿರ್ವಹಣಾ ಕೊರತೆ

0

ಕೋವಿಡ್, ಲಾಕ್ ಡೌನ್ ನಂತರ ರಾಜ್ಯಾದ್ಯಂತ ಪ್ರಾಥಮಿಕ ಶಾಲೆಗಳು ಸೇರಿ ಎಲ್ಲ ಶಾಲಾ-ಕಾಲೇಜುಗಳು ಪ್ರಾರಂಭಗೊಂಡಿವೆ. ಶಾಲೆಗಳಲ್ಲಿ ಮಕ್ಕಳ ದಾಖಲಾತಿ 2.35 ಲಕ್ಷದ ದಾಟಿದೆ ಎನ್ನಲಾಗುತ್ತಿದೆ. ಆದರೆ ಮೂಲಸೌಕರ್ಯ ಕೊರತೆಯಿಂದ ಸರ್ಕಾರಿ ಶಾಲೆಗಳು ಬಳಲುತ್ತಿವೆ.
ನಿರ್ವಹಣೆ ಕೊರತೆಯಿಂದ ಸರಕಾರಿ ಶಾಲೆಗಳು ಶಿಥಿಲಗೊಂಡಿವೆ. ಈ ಸಂಬಂಧ 13 ಮಾನದಂಡಗಳನ್ನು ಅನುಸರಿಸಿ, ಶಾಲೆಗಳಲ್ಲಿರುವ ಕೊರತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಖಾಸಗಿ ಕಂಪನಿಗಳ ಸಿಎಸ್ಆರ್ ನಿಧಿ, ಸ್ವಯಂ ಸೇವಾ ಸಂಸ್ಥೆ, ಹಳೆ ವಿದ್ಯಾರ್ಥಿ ಸಂಘಗಳ ನೆರವಿನಿಂದ ಈ ಶಾಲೆಗಳ ರಿಪೇರಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಾರ್ಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಶಾಲೆಗಳು ಮುಚ್ಚಿದ್ದ ಕಾರಣ ನಿರ್ವಹಣೆ ಮಾಡಲಾಗದೇ, ಹಾಗೂ ಮಳೆಯಿಂದಾಗಿ ಹಲವೆಡೆ ಕಟ್ಟಡಗಳು ಕುಸಿದಿವೆ. ರಾಜ್ಯಾದ್ಯಂತ 7,800 ಶಾಲಾ ಕಟ್ಟಡಗಳು ಹಾನಿಗೊಳಗಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಶಾಲೆಗಳಲ್ಲಿರುವ ಮೂಲಸೌಕರ್ಯ ಮತ್ತು ಸ್ಥಿತಿಗತಿಗಳ ಬಗ್ಗೆ ಶಿಕ್ಷಣ ಇಲಾಖೆ ಮಾಹಿತಿ ಸಂಗ್ರಹಿಸಿದೆ. ಮೂರು ಸಾವಿರಕ್ಕೂ ಹೆಚ್ಚು ಶಾಲಾ ಕಟ್ಟಡಗಳು ತೀವ್ರವಾಗಿ ಹಾನಿಗೊಳಗಾಗಿದ್ದು ನಾಲ್ಕು ಸಾವಿರಕ್ಕೂ ಹೆಚ್ಚು ಕಟ್ಟಡಗಳು ಮಧ್ಯಮ ಪ್ರಮಾಣದ ಹಾನಿಗೊಳಗಾಗಿವೆ ಇದರಲ್ಲಿ ಗ್ರಾಮೀಣ ಮತ್ತು ಪ್ರಾರ್ಥಮಿಕ ಶಾಲೆಗಳೇ ಹೆಚ್ಚು ಎಂಬ ವಿಚಾರಗಳು ಬೆಳಕಿಗೆ ಬಂದಿವೆ. ಸೂಕ್ತ ಕ್ರಮವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ.

ವಾಣಿಜ್ಯ ಬಳಕೆ ಸಿಲಿಂಡರ್ ಗಳ ಬೆಲೆ ಏರಿಕೆ

0

ವಾಣಿಜ್ಯ ಬಳಕೆಯ ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್ ಗಳ ಬೆಲೆ ರೂ. 266 ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ 19 ಕೆಜಿ ತೂಕದ ವಾಣಿಜ್ಯ ಸಿಲೆಂಡರ್ ಬೆಲೆ 2000.50 ಪೈಸೆ ಮುಟ್ಟಿದೆ. ಮುಂಚೆ ಈ ಬೆಲೆ ರೂ.1734 ಇತ್ತು. ಗೃಹಬಳಕೆಯ ಸಿಲಿಂಡರ್ ಗಳ ಬೆಲೆ ಏರಿಕೆ ಮಾಡಿಲ್ಲ.

ಕೊನೆಗೂ ಧಕ್ಕಿದ ಪರಿಹಾರ : ಕಾರ್ಮಿಕರ ನಿಟ್ಟುಸಿರು

0

ತುಂಗಭದ್ರಾ ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೆ 26 ವರ್ಷ ನಂತರ ಬಾಕಿ ಪರಿಹಾರ ವಿತರಿಸಲಾಯಿತು. ಪರಿಹಾರಕ್ಕಾಗಿ ಹತ್ತಾರು ವರ್ಷದಿಂದ ಕಾದಿದ್ದ ಕಾರ್ಮಿಕರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.
ಪರಿಹಾರ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಎಂಎಲ್‌ಸಿ ಆಯನೂರು ಮಂಜುನಾಥ್ ಅವರು ಮಾತನಾಡಿ, 26ವರ್ಷ ನಂತರ ಕಾರ್ಮಿಕರ ಹೋರಾಟಕ್ಕೆ ಜಯಸಿಕ್ಕಿದೆ. ಇದಕ್ಕಾಗಿ ಶ್ರಮಿಸಿದ ಆಡಳಿತ ಮಂಡಳಿ, ಕಾರ್ಮಿಕ ಇಲಾಖೆ, ಕಾರ್ಮಿಕ ಮಂಡಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕಾರ್ಮಿಕ ಇಲಾಖೆ ಆಯುಕ್ತ ನಾಗರಾಜ್ ಮಾತನಾಡಿ, ಪರಿಹಾರದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಎಲ್ಲ ದಾಖಲೆಗಳನ್ನು ಪರಿಶೀಲಿಸಿದ್ದೇನೆ. 26 ವರ್ಷ ನಂತರ ಪರಿಹಾರ ಮಂಜುರಾಗಿರುವುದು ಸಂತಸ ತಂದಿದೆ ಎಂದರು.

ಕಾರ್ಖಾನೆ ಮಾಲೀಕ ಮಣಿವೇಲನ್, ನಿರ್ದೇಶಕರಾದ ಸುರೇಶ್, ರವಿಚಂದ್ರನ್, ಮಂಗಳೂರು ವಲಯದ ಕಾರ್ಮಿಕ ಆಯುಕ್ತ ಶಿವಕುಮಾರ್ ಇತರರು ಹಾಜರಿದ್ದರು.

ಮೊದಲ ದಿನವೇ ಸುಮಾರು 500 ಮಂದಿಗೆ ಪರಿಹಾರ ಚೆಕ್ ವಿತರಿಸಲಾಯಿತು. ಒಟ್ಟು 926 ಮಂದಿಗೆ 19 ಕೋಟಿ ಪರಿಹಾರ ವಿತರಿಸಬೇಕಿದ್ದು ವಿತರಣೆ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಮುಂದುವರೆಯಲಿದೆ.

ರಜನಿ ಕ್ಷೇಮವಾಗಿದ್ದಾರೆ

ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್, ತಲೈವಾ ರಜನಿಕಾಂತ್ ಚಿಕಿತ್ಸೆ ಬಳಿಕ ಮರಳಿ ಮನೆ ಸೇರಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಗುಣಮುಖರಾಗಿದ್ದು ಮನೆಗೆ ಹಿಂದಿರುಗಿದ್ದಾರೆ.
ಅಕ್ಟೋಬರ್ 28 ರಂದು ಎದೆನೋವು ಹಾಗೂ ಸುಸ್ತು ಕಾಣಿಸಿಕೊಂಡ ಹಿನ್ನೆಲೆ ರಜನಿಕಾಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈಗ ರಜನಿಕಾಂತ್ ಆರೋಗ್ಯವಾಗಿದ್ದು, ಆತಂಕ ಪಡುವ ಯಾವ ಅಗತ್ಯವೂ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಭಯದ ನೆರಳಲ್ಲಿ ಜಿಮ್

0

ನಟ ಪುನೀತ್ ರಾಜಕುಮಾರ್ ಸಾವಿಗೆ ಅತಿಯಾದ ವ್ಯಾಯಾಮ ಕಾರಣ ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಇದರಿಂದ ಯುವ ಪೀಳಿಗೆ ಆತಂಕಕ್ಕೊಳಗಾಗಿದ್ದಾರೆ.

ಕೆಲವರು ಜಿಮ್ ಗಳಿಗೆ ಗುಡ್ ಬೈ ಹೇಳಿ, ತಮ್ಮ ಸದಸ್ಯತ್ವವನ್ನು ಮುಂದುವರಿಸುವುದಿಲ್ಲ ಎಂದು ಫಿಟ್ನೆಸ್ ಕೇಂದ್ರಗಳಿಗೆ ಗೈರು ಹಾಜರಾಗುತ್ತಿದ್ದಾರೆ. ಈಗಷ್ಟೇ ಕರೋನಾ ಲಾಕ್ಡೌನ್ ಎದುರಾದ ಸಂಕಷ್ಟದಿಂದ ಹೊರಬರಲು ಯತ್ನಿಸುತ್ತಿದ್ದ ಫಿಟ್ನೆಸ್ ಮಾಲೀಕರಿಗೆ ಈ ವಿಷಯ ಆಘಾತವನ್ನುಂಟುಮಾಡಿದೆ.

ಇದರ ಸಲುವಾಗಿ ಸುರಕ್ಷತೆ ದೃಷ್ಟಿಯಿಂದ ಜಿಮ್ ಹಾಗೂ ಫಿಟ್ನೆಸ್ ಸೆಂಟರ್ ಗಳಿಗೆ ವಿಶೇಷ ಮಾರ್ಗಸೂಚಿ ನಿಯಮಗಳನ್ನು ರೂಪಿಸುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು. ಜಿಮ್ ಮತ್ತು ಫಿಟ್ನೆಸ್ ಸೆಂಟರ್ ಗಳಲ್ಲಿ ದೈಹಿಕ ಕಸರತ್ತಿನ ವೇಳೆ ಸುರಕ್ಷತೆ ನಿಯಮಗಳನ್ನು ಪಾಲಿಸ ಬೇಕಾದ ಅಗತ್ಯವಿದೆ. ಇದಕ್ಕೆ ಕಡ್ಡಾಯವಾಗಿ ಸುರಕ್ಷತಾ ಸಾಮಗ್ರಿಗಳು, ಇತರ ನಿರ್ವಹಣೆ ಸೇರಿ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ, ಹೃದಯ ತಜ್ಞರಿಂದ ವರದಿ ತಯಾರಿಸಿ ಮಾರ್ಗಸೂಚಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಅನಾರೋಗ್ಯ ಸಮಸ್ಯೆಗಳು ಕಂಡು ಬಂದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕೆಲಸ, ಪ್ರಥಮ ಚಿಕಿತ್ಸೆ ಮತ್ತು ಆಸ್ಪತ್ರೆಗೆ ದಾಖಲಿಸುವುದು. ವಿಶೇಷ ಮಾರ್ಗದರ್ಶನ ತರಬೇತಿಯನ್ನು ಜಿಮ್ ಮತ್ತು ಫಿಟ್ನೆಸ್ ತರಬೇತಿದಾರರಿಗೆ ನೀಡಲಾಗುವುದು ಎಂದು ತಿಳಿಸಿದರು. 16 ವರ್ಷದ ಹಿಂದೆ ಪುನೀತ್ ರಾಜಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಅವರು ಇಬ್ಬರೂ ಒಂದೇ ಸಲ ಜಿಮ್ ಅಭ್ಯಾಸ ಆರಂಭಿಸಿದ್ದರು. ಪುನೀತ್ ದೇಹದಂಡನೆ ನೋಡಲು ಸಂತೋಷವಾಗುತ್ತಿತ್ತು. ಆದರೆ ಈಗ ಸಂಬಂಧಿಸಿರುವ ಆಘಾತದಿಂದ ಜಿಮ್ ಮಾಡಬೇಕಾ , ಅಥವಾ ಮಾಡಬಾರದು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಹಲವಾರು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಒಂದೆರಡು ಪ್ರಕರಣಗಳಿಂದ ಜಿಮ್ ಮಾಡುವುದು ತಪ್ಪು ಎಂಬ ನಿರ್ಧಾರ ಸರಿ ಇಲ್ಲ ಎಂದು ಮಾಧ್ಯಮ ಮಿತ್ರರಿಗೆ ತಿಳಿಸಿದರು.

ಟಿ – 20 ಆಫ್ಘಾನ್ ಗೆ ಮಣಿದ ನಮೀಬಿಯಾ

0

ಟಿ – 20 ವಿಶ್ವಕಪ್ ಟೂರ್ನಿಯ ಸೂಪರ್ – 12 ರ B – ಗುಂಪಿನ ಅಫ್ಘಾನಿಸ್ತಾನ ಮತ್ತು ನಮೀಬಿಯಾ ತಂಡಗಳ ನಡುವೆ ಪಂದ್ಯ ನಡೆಯಿತು. ನಮೀಬಿಯಾ ವಿರುದ್ಧ ಅಫ್ಘಾನಿಸ್ತಾನ ಭರ್ಜರಿ ಜಯ ಸಾಧಿಸಿತು.
ಅಬುಧಾಬಿಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ ಕಲೆಹಾಕಿತು. ಕ್ರಮಾಂಕದಲ್ಲಿ ಮೊದಲು ಬ್ಯಾಟಿಂಗ್ ನಲ್ಲಿ ಆಡಿದ ಮೊಹಮದ್ ಶಾಹಜಾದ್ 33 ಎಸೆತಕ್ಕೆ 3 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 45 ರನ್ ಗಳನ್ನ ಕಲೆಹಾಕಿದರು.ಹಾಗೂ ನಾಯಕ ಮೊಹಮದ್ ನಬಿ 17 ಎಸೆತಕ್ಕೆ 5 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ 32 ರನ್ ಕಲೆ ಹಾಕಿದರು. ಇವರಿಬ್ಬರ ಜೊತೆಯಾಟದ ಬಿರುಸಿನ ಬ್ಯಾಟಿಂಗ್ ನಿಂದ ನಮೀಬಿಯಾ ತಂಡ ನಲುಗಾಡಿತು.
160 ರನ್ ಗಳ ಗೆಲುವಿನ ಗುರಿಯನ್ನಿಟ್ಟುಕೊಂಡು ಬೆನ್ನತ್ತಿ ಆಡಿದ ನಮೀಬಿಯಾ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿ. ಹಮೀದ್ ಹಸನ್ 9 ರನ್ ಗಳಿಗೆ 3 ವಿಕೆಟ್ ತೆಗೆದುಕೊಂಡರು. ಹಾಗೆಯೇ ನವೀನ್ ಉಲ್ ಹಕ್ 26 ರನ್ ಗಳಿಗೆ 3 ವಿಕೆಟ್ ತೆಗೆದುಕೊಂಡರು. ಇವರಿಬ್ಬರ ಜೋಡಿಯ ಮಾರಕ ದಾಳಿಗೆ ಬೆಚ್ಚಿಬಿದ್ದ ಕ್ರಿಕೆಟ್ ನ ಶಿಶು ಎಂದೇ ಪ್ರಖ್ಯಾತಿ ಪಡೆದ ನಮೀಬಿಯಾ ತಂಡ ಬಹಳ ಹೀನಾಯ ಸೋಲನ್ನು ಕಂಡಿತು.

ಮತ್ತೆ ,ಮಳೆ ಹುಯ್ಯಲಿದೆ

0

ರಾಜ್ಯದ ವಿವಿದೆಡೆ ಗುಡುಗು ಸಿಡಿಲು ಸಹಿತ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನವೆಂಬರ್ 1ರಿಂದ 4ರವರೆಗೆ ಶಿವಮೊಗ್ಗ, ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಡಗು, ದಾವಣಗೆರೆ ಈ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನವೆಂಬರ್ 2ರಿಂದ ಭಾರಿ ಮಳೆಯಾಗಲಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಸೇರಿದಂತೆ ಸಾಧಾರಣ ಮಳೆಯಾಗಬಹುದು. ನವೆಂಬರ್ 5 ರಿಂದ ರಾಜ್ಯಾದ್ಯಂತ ಮಳೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.