ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವಂತಹ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 324 ಪ್ರೊಬೆಷನರಿ ಅಧಿಕಾರಿ ( PO) ಹುದ್ದೆಗಳ ನೇಮಕಾತಿ ಸೇರಿದಂತೆ 6,328 ಹುದ್ದೆಗಳಿವೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹಾಗೂ ಅರ್ಜಿಯಲ್ಲಿ ಬದಲಾವಣೆ ಮಾಡಲು ಅಕ್ಟೋಬರ್ 25 ರವರೆಗೆ ಕಾಲಾವಕಾಶ ನೀಡಲಾಗಿದೆ.
ಪರಿಶಿಷ್ಟ ಜಾತಿ (SC ) 162
ಇತರೆ ಹಿಂದುಳಿದ ವರ್ಗಗಳಿಗೆ ( OBC) 560
ಆರ್ಥಿಕವಾಗಿ ದುರ್ಬಲ ವಿಭಾಗ (EWS ) 200
ಸಾಮಾನ್ಯ ವರ್ಗಕ್ಕೆ 810 ಹುದ್ದೆಗಳಿವೆ.
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿಯನ್ನು ಹೊಂದಿರಬೇಕು. ತಮ್ಮ ಪದವಿಯ ಅಂತಿಮ ವರ್ಷ ಅಥವಾ ಸೆಮಿಸ್ಟರ್ ನಲ್ಲಿರುವವರು ಸಂದರ್ಶನಕ್ಕೆ ಕರೆದರೆ, ಅವರು ಡಿಸೆಂಬರ್ 31, 2021 ರಂದು ಅಥವಾ ಅದಕ್ಕೂ ಮೊದಲು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂಬುದಕ್ಕೆ ಪುರಾವೆಯನ್ನು ಹಾಜರುಪಡಿಸಬೇಕಾಗುತ್ತದೆ ಎಂಬ ಷರತ್ತಿಗೆ ಒಳಪಟ್ಟು ಅರ್ಜಿ ಸಲ್ಲಿಸಬಹುದು.
ಇಂಟಿಗ್ರೇಟೆಡ್ ಡುಯಲ್ ಡಿಗ್ರಿ (ಐಡಿಡಿ) ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ಐಡಿಡಿ ಉತ್ತಿರ್ಣ ಗೊಳಿಸಿರುವ ದಿನಾಂಕ ಡಿಸೆಂಬರ್ 31, 2021 ರಂದು ಅಥವಾ ಅದಕ್ಕೂ ಮೊದಲು ಇರಬೇಕು ಎಂಬುದನ್ನು ಗಮನಿಸಬೇಕು.
ವಯೋಮಿತಿ
ಅಭ್ಯರ್ಥಿಯು ಏಪ್ರಿಲ್ 1, 2021 ರಂತೆ 21 ವರ್ಷಕ್ಕಿಂತ ಕಡಿಮೆ ಇರಬಾರದು.
30 ವರ್ಷಗಳಿಗಿಂತ ಮೇಲ್ಪಟ್ಟವರಾಗಿರಬಾರದು.
ಎಸ್ಸಿ, ಎಸ್ಟಿ, ಓಬಿಸಿ, ಪಿಡಬ್ಲ್ಯೂಡಿ, ಮಾಜಿ ಸೈನಿಕರು ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ಇದೆ.
ಆಯ್ಕೆ ವಿಧಾನ
ಅಭ್ಯರ್ಥಿಗಳ ಆಯ್ಕೆಯನ್ನು ಪ್ರಿಲಿಮ್ಸ್, ಮೈನ್ಸ್, ಮತ್ತು ಸಂದರ್ಶನದ ಆಧಾರದ ಮೇಲೆ ಮಾಡಲಾಗುತ್ತದೆ. ಫೀಲಿಮ್ಸ್ ನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಮುಂದಿನ ನೇಮಕಾತಿ ಪ್ರಕ್ರಿಯೆಗೆ ಕರೆಯಲಾಗುತ್ತದೆ.
ಅರ್ಜಿ ಸಲ್ಲಿಕೆ ವಿಧಾನ ಮತ್ತು ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು www.sbi.co.in ಜಾಲತಾಣಕ್ಕೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮತ್ತು ಅಧಿಸೂಚನೆ ಸಂಬಂಧಿಸಿದಂತೆ ವಿವರವನ್ನು ಪಡೆಯಬಹುದು.

ವಿಜಯನಗರದ ದೊರೆಗಳು ತಮ್ಮ ವಿಜಯೋತ್ಸವದ ಸಂತೋಷದಲ್ಲಿ ಶೃಂಗೇರಿ ಮಠಕ್ಕೆ ಭೂದಾನವನ್ನು ಮಾಡಿದರು. ಗುರು ವಿದ್ಯಾಶಂಕರ ಅದ್ವಿತೀಯ ದೇವಾಲಯವನ್ನು ಶೃಂಗೇರಿ ಮಠದಲ್ಲಿ ಕಟ್ಟಿಸಿಕೊಟ್ಟರು. ಶೃಂಗೇರಿ ಮಠಕ್ಕೆ ವಿಜಯನಗರದ ಸಾಮ್ರಾಜ್ಯ ಇದ್ದ ಐತಿಹಾಸಿಕ ಸಂಬಂಧವೂ ಶೃಂಗೇರಿ ಮಠದ ಹಲವಾರು ಸಂಪ್ರದಾಯ, ಆಚರಣೆ ಹಾಗೂ ಉತ್ಸವಗಳ ಉಗಮಕ್ಕೆ ಪ್ರೇರಣೆಯಾಯಿತು. ವಿಜಯನಗರದ ಹಕ್ಕ-ಬುಕ್ಕರು ವಿದ್ಯಾರಣ್ಯರಿಗೆ ಕೊಟ್ಟ ರಾಜ ಲಾಂಛನವನ್ನು ಗೌರವದಿಂದ ಶೃಂಗೇರಿ ಮಠದಲ್ಲಿ ದಸರಾ ದರ್ಬಾರ್ ಆಚರಣೆ ಆರಂಭವಾಯಿತು. ವಿಜಯನಗರದ ಸ್ಥಾಪನೆಯಾಗಿ ಇಂದಿಗೆ ಸುಮಾರು ಆರೂವರೆ ಶತಮಾನಗಳು ಕಳೆದರೂ ಇಂದಿಗೂ ಐತಿಹಾಸಿಕ ಧಾರ್ಮಿಕ ಆಚರಣೆಯು ಶೃಂಗೇರಿ ಮಠದ ದಸರಾ ಹಬ್ಬದ ವಿಶೇಷತೆಯಾಗಿದೆ. ಶಾರದಾ ಮಾತೆಯ 9 ಅಲಂಕಾರಗಳು ಹೋಮಹವನ ಪಾರಾಯಣ ಇತ್ಯಾದಿ ಧಾರ್ಮಿಕ ಆಚರಣೆಗಳು ಸಾಧಾರಣವಾಗಿ ನಮ್ಮ ನಾಡಿನ ಎಲ್ಲ ಮಠ-ಮಂದಿರ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಕಂಡುಬರುತ್ತದೆ. ಆದರೆ ಈ ದರ್ಬಾರ ಆಚರಣೆಯು ವಿಜಯನಗರದ ದೊರೆಗಳು ವಿಜಯನಗರ ವೆಂಬ ಮಹಾ ಸಾಮ್ರಾಜ್ಯವನ್ನು ಕಟ್ಟಲು ಕಾರಣೀಭೂತರಾದ ಶ್ರೀ ವಿದ್ಯಾರಣ್ಯರಿಗೆ ಕೊಟ್ಟ ರಾಜ್ಯ ಗೌರವದ ಸಂಕೇತವಾಗಿದ್ದು ಕನ್ನಡನಾಡಿನ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯನ್ನು ಸಾರುತ್ತದೆ.
ವಿಜಯನಗರದ ದೊರೆಗಳ ನಂತರ ಕೆಳದಿ, ತ್ರಾವೆಂಕೂರ್, ಮೈಸೂರು, ಸುರಪುರ, ಜಮಖಂಡಿ, ನೇಪಾಳ, ಬರೋಡ ಮುಂತಾದ ರಾಜಸಂಸ್ಥಾನಗಳು ಶೃಂಗೇರಿ ಜಗದ್ಗುರುಗಳನ್ನು ಅಪಾರವಾಗಿ ಗೌರವಿಸುವ ಮಾರ್ಗದರ್ಶನ ಪಡೆದರೆಂದು ಪತ್ರಾಗಾರದ ಇಲಾಖೆಯ ದಾಖಲೆಗಳು ತಿಳಿಸುತ್ತವೆ. ಇಂದಿಗೂ ಶೃಂಗೇರಿ ದರ್ಬಾರ್ ನಲ್ಲಿ ಭಾರತದ ಹಲವಾರು ರಾಜವಂಶಸ್ಥರು ಗುರುಕಾಣಿಕೆಯನ್ನು ಸಲ್ಲಿಸುವುದು ವಿಶೇಷವಾಗಿದೆ. ಯಾವ ಸ್ವರ್ಣ ಸಿಂಹಾಸನವನ್ನು ಶ್ರೀ ವಿದ್ಯಾರಣ್ಯರು ಹರಿಹರ ಬುಕ್ಕರಾಯರಿಗೆ ಅಲಂಕರಿಸಲು ಸಹಾಯಮಾಡಿದ್ದರೊ ಆ ಸಿಂಹಾಸನವು ಪಾಂಡವರಿಗೆ ಮತ್ತು ವಿಕ್ರಮಾದಿತ್ಯನಿಗೆ ಸೇರಿದ್ದು ಎಂಬ ಪ್ರತೀತಿ ಇದೆ. ಇದೇ ಸ್ವರ್ಣ ಸಿಂಹಾಸನವನ್ನು ಮೈಸೂರು ದೊರೆಗಳು ವಶಪಡಿಸಿಕೊಂಡು ಮೈಸೂರು ಸಂಸ್ಥಾನವನ್ನು ಸಂಸ್ಥಾನವನ್ನು ಕಟ್ಟಿದ್ದರಿಂದ ಸಹಜವಾಗಿವೆ ಮೈಸೂರಿನ ಎಲ್ಲಾ ದೊರೆಗಳು ಶೃಂಗೇರಿ ಗುರುಗಳನ್ನು ರಾಜಗುರುಗಳು ಎಂದು ಗೌರವಿಸುವುದನ್ನು ನಾವು ಇತಿಹಾಸದ ದಾಖಲೆಗಳಲ್ಲಿ ಕಾಣಬಹುದು. ಇಂದಿಗೂ ಶೃಂಗೇರಿ ಜಗದ್ಗುರುಗಳವರು ಇಂದಿಗೂ ವಿಜಯದಶಮಿ ಮೆರವಣಿಗೆಯಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಭಕ್ತಿಪೂರ್ವಕವಾಗಿ ಅರ್ಪಿಸಿದ ಸ್ವರ್ಣ ಪಾಲಕಿಯನ್ನು ಅನುಭವಿಸುವುದನ್ನು ನಾವು ಕಾಣಬಹುದು. ಶೃಂಗೇರಿ ಜಗದ್ಗುರುಗಳಾಗಿದ್ದ ನರಸಿಂಹ ಭಾರತೀ ಸ್ವಾಮಿಗಳವರು ಚಾಮರಾಜ ಒಡೆಯರಿಗೆ ಬಳುವಳಿಯಾಗಿ ಆಶೀರ್ವದಿಸಿದ ನವರತ್ನ ಕೀಟವನ್ನು ಇಂದಿಗೂ ಮೈಸೂರು ದಸರಾ ಆಚರಣೆಯಲ್ಲಿ ಪೂಜಿಸುವುದು ಗುರು-ಶಿಷ್ಯ ಬಾಂಧವ್ಯಕ್ಕೆ ಪ್ರತ್ಯಕ್ಷ ಪ್ರಮಾಣವಾಗಿ ನಿಲ್ಲುತ್ತದೆ.
