Friday, February 6, 2026
Friday, February 6, 2026
Home Blog Page 1868

ಕ್ರಿಪ್ಟೊ ಕರೆನ್ಸಿ : ಯುವಜನತೆ ಜಾಗೃತರಾಗಿ

0

ಸೈಬರ್ ತಂತ್ರಜ್ಞಾನ ಕುರಿತ ‘ಸಿಡ್ನಿ ಡಯಲಾಗ್’ ವೇದಿಕೆಯಲ್ಲಿ ವರ್ಚುವಲ್ ಆಗಿ ಭಾರತದ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾತನಾಡಿ ‘ಇಡೀ ಜಗತ್ತಿನ ಪ್ರಜಾತಂತ್ರ ದೇಶಗಳು ಬಿಟ್ ಕಾಯಿನ್ ಹಾಗೂ ಕ್ರಿಪ್ಟೊ ಕರೆನ್ಸಿಗಳು ಹ್ಯಾಕರ್ ಗಳ ಕೈಗೆ ಸಿಗದಂತೆ ನೋಡಿಕೊಳ್ಳಲು ಪರಸ್ಪರ ಸಹಕಾರ ನೀಡಬೇಕೆಂದು’ ಒತ್ತಾಯಿಸಿದರು.

ಕ್ರಿಪ್ಟೊ ಕರೆನ್ಸಿಗಳನ್ನು ಭಯೋತ್ಪಾದಕ ಸಂಘಟನೆಗಳು ಹಾಗೂ ಸಂಘಟಿತ ಅಪರಾಧ ಎಸಗುವ ಗುಂಪುಗಳು ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳ ಬಗ್ಗೆ ಭಾರತ ಮತ್ತು ಇತರೆ ದೇಶಗಳಲ್ಲಿ ಆತಂಕ ಮೂಡಿದೆ. ಅರ್ಥ ವ್ಯವಸ್ಥೆಯನ್ನು ಅಸ್ಥಿರಗೊಳಿಸುವ ಅಪಾಯವನ್ನು ಕ್ರಿಪ್ಟೊ ಕರೆನ್ಸಿಗಳು ತಂದೊಡ್ಡಿದೆ ಎಂಬ ಕಳವಳ ಎಲ್ಲೆಡೆ ವ್ಯಕ್ತವಾಗಿದೆ.

ಆರ್ಥಿಕ ಅಪರಾಧಗಳನ್ನು ಎಸಗಿ, ವಿದೇಶಕ್ಕೆ ಪರಾರಿಯಾಗಿರುವವರನ್ನು ದೇಶಕ್ಕೆ ವಾಪಸ್ ಕರೆಸಲು ಎಲ್ಲಾ ಬಗ್ಗೆ ಪ್ರಯತ್ನಗಳು ನಡೆಸಲಾಗಿದೆ ಎಂದು ಈ ವೇಳೆ ಮೋದಿ ಅವರು ತಿಳಿಸಿದರು.

ಕ್ರಿಪ್ಟೊ ಕರೆನ್ಸಿಗಳು ನಮ್ಮ ಯುವಕರನ್ನು ಹಾಳು ಮಾಡಬಲ್ಲದು ಎಂದು ಆತಂಕ ಮೋದಿಜಿ ಈ ವೇಳೆ ವ್ಯಕ್ತಪಡಿಸಿದ್ದರು.

ಕಳುವಾದ ಮಾಲು ವಾರಸುದಾರರಿಗೆ ವಾಪಸ್

0

ಕಳೆದ ಒಂದು ವರ್ಷದೊಳಗಿನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಪೊಲೀಸರು 231 ಪ್ರಕರಣಗಳನ್ನು ಪತ್ತೆಹಚ್ಚಿ 3.3.ರೂ ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 518 ಸ್ವತ್ತು ಕಳುವು ಪ್ರಕರಣಗಳು ದಾಖಲಾಗಿತು. ಅದರಲ್ಲಿ 231 ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬರೋಬ್ಬರಿ 3.3 ಕೋಟಿ ಮೌಲ್ಯದ ಸ್ವತ್ತುಗಳನ್ನು ಪೊಲೀಸರು ಸಂಬಂಧಪಟ್ಟ ವಾರಸುದಾರರಿಗೆ ಹಿಂತಿರುಗಿಸಿದರು.

2ಕೆಜಿ 879 ಗ್ರಾಂ ಬಂಗಾರದ ಆಭರಣಗಳು, 14 ಕೆಜಿ 394 ಗ್ರಾಂ ಬೆಳ್ಳಿ ಸಾಮಗ್ರಿಗಳು, 73 ವಾಹನಗಳು, 27 ಮೊಬೈಲ್ ಫೋನ್ ಗಳು, 6 ಜಾನುವಾರುಗಳು, 39 ಕ್ವಿಂಟಲ್ ಅಡಿಕೆ, ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳೆದುಕೊಂಡಿದ್ದ ವಾರಸುದಾರರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ ಲಕ್ಷ್ಮೀಪ್ರಸಾದ್ ಅವರು ಹಿಂತಿರುಗಿಸಿದರು.

ಶಿವಮೊಗ್ಗ ಜಿಲ್ಲಾ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ತಿರುಪತಿಯಲ್ಲಿ ಮಹಾಪೂರ, ಯಾತ್ರಿಕರಿಗೆ ಅಡಚಣೆ

0

ತಿರುಪತಿಯಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದೆ. ಭಕ್ತಾದಿಗಳ ಸುರಕ್ಷತೆಗಾಗಿ, ಬೆಟ್ಟದ ಮೇಲಿರುವ ದೇವಾಲಯಕ್ಕೆ ತೆರಳುವ 2 ಪಾದಚಾರಿ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಮುಂದಿನ ಆದೇಶದವರೆಗೆ ಈ ನಿಯಮಗಳು ಜಾರಿಯಲ್ಲಿದೆ ಎಂದು ತಿರುಪತಿ ತಿರುಮಲ ದೇವಸ್ಥಾನದ ಟ್ರಸ್ಟ್ ತಿಳಿಸಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ, ನೇಲ್ಲೂರು , ಚಿತ್ತೂರು ಹಾಗೂ ಕಡಪ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದೆ. ಇಲ್ಲಿನ ನದಿಗಳು ಉಕ್ಕಿ ಹರಿಯುತ್ತಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಿರಂತರವಾಗಿ ಸುರಿಯುತ್ತಿರುವ ತೀವ್ರ ಮಳೆಯಿಂದಾಗಿ ತಿರುಪತಿಯಲ್ಲಿನ ಜನಜೀವನಕ್ಕೆ ಅಡ್ಡಿ ಉಂಟಾಗಿದೆ. ತಿರುಪತಿಗೆ ಬರುವಂತಹ ಭಕ್ತಾದಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ವೆಂಕಟರಮಣನ ದೇವಾಲಯಕ್ಕೆ ಸಾಗುವ ರಸ್ತೆಗಳ ಮೇಲೆ ಕಲ್ಲು, ಮಣ್ಣು ತುಂಬಿಕೊಂಡಿದೆ. ಅವುಗಳನ್ನು ತೆರವುಗೊಳಿಸುವ ಕೆಲಸದಲ್ಲಿ ಅಧಿಕಾರಿ ,ಸಿಬ್ಬಂದಿಗಳು ನಿರತರಾಗಿದ್ದಾರೆ.

ವೆಂಕಟೇಶ್ವರನ ದರ್ಶನಕ್ಕೆ ಸಾಗುವ ಸರದಿಸಾಲಿನ ಜಾಗದಲ್ಲಿ ನೀರು ನಿಂತಿದೆ. ತಿರುಪತಿಯ ರೇಣಿಗುಂಟ ವಿಮಾನ ನಿಲ್ದಾಣ ವು ಜಲಾವೃತಗೊಂಡಿದೆ. ತಿರುಪತಿ ಹೈದರಾಬಾದ್ ಮತ್ತು ಬೆಂಗಳೂರು ವಿಮಾನಗಳು ವಾಪಸ್ ತೆರಳುವಂತೆ ಸೂಚಿಸಲಾಗಿದೆ. ದೆಹಲಿಯಿಂದ ಬರುವ ವಿಮಾನವನ್ನು ಕೂಡ ರದ್ದುಗೊಳಿಸಲಾಗಿದೆ. ಈ ವಿಷಯವನ್ನು ತಿರುಪತಿ ವಿಮಾನ ನಿಲ್ದಾಣದ ನಿರ್ದೇಶಕ ಎಸ್. ಸುರೇಶ್ ತಿಳಿಸಿದ್ದಾರೆ.

ನಾರಾಯಣ ಗಿರಿಯಲ್ಲಿರುವ ಅತಿಥಿ ಭವನದ ಮೂರು ಕೊಠಡಿಗಳು ಭೂಕುಸಿತದಿಂದ ಜಖಂ ಆಗಿವೆ. ಅಲ್ಲಿ ವಸತಿ ಹೊಂದಿದ್ದ, ಯಾತ್ರಿಕರನ್ನು ಎಸ್ ವಿ ಅತಿಥಿ ಭವನಕ್ಕೆ ಸ್ಥಳಾಂತರ ಮಾಡಲಾಗಿದೆ.

ಸ್ವರ್ಣಮುಖಿ ನದಿಯ ಪ್ರವಾಹದಿಂದಾಗಿ ತಿರುಪತಿ ಸನಿಹದ ಶ್ರೀನಿವಾಸ ಮಂಗಾಪುರದಲ್ಲಿ 2 ಆಟೋರಿಕ್ಷಾಗಳು ತೇಲಿ ಹೋಗಿದೆ. ರೇಣಿಗುಂಟ ಹೆದ್ದಾರಿಯಲ್ಲಿ ಬರುವ ಆಂಜನೇಯಪುರ ಎಂಬಲ್ಲಿನ ಸೇತುವೆಯ ಮೇಲೆ ಲಾರಿ ಒಂದು ನಿಂತ ಪರಿಣಾಮ, ವಾಹನ ಚಾಲನೆಗೆ ಅಡ್ಡಿ ಉಂಟಾಗಿದೆ.

ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವರು ಚಿತ್ತೂರು ಜಿಲ್ಲಾಧಿಕಾರಿಗಳಿಗೆ, ಪರಿಸ್ಥಿತಿಯ ಬಗ್ಗೆ ಪರಮರ್ಶೆ ನಡೆಸಿದ್ದಾರೆ.

ಪ್ರಸ್ತುತ ಪ್ರವಾಹದಲ್ಲಿ ಸಿಕ್ಕಿರುವ ಜನರನ್ನು ರಕ್ಷಿಸಲು ಮತ್ತು ಪುನರ್ವಸತಿ ಕಲ್ಪಿಸಲು ಆದೇಶ ನೀಡಿದ್ದಾರೆ.

ಮೂರು ಕೃಷಿ ಕಾಯ್ದೆ ವಾಪಸ್: ಪ್ರಧಾನಿ ಘೋಷಣೆ

0

ಈಗ ಜಾರಿಯಲ್ಲಿರುವ ಮೂರು ಕೃಷಿ ಕಾಯ್ದೆಗಳನ್ನು ಸರ್ಕಾರವು ವಾಪಸ್ ಪಡೆಯುವ ಪ್ರಕ್ರಿಯೆ ಆರಂಭ ಮಾಡಲಿದೆ. ಬರುವ ಸಂಸತ್ತಿನ ಅಧಿವೇಶನದಲ್ಲಿ, ಅವುಗಳನ್ನು ಸಂವಿಧಾನಾತ್ಮಕ ಕ್ರಮಗಳ ಮೂಲಕ ವಜಾ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಕಳೆದ ಒಂದು ವರ್ಷದಿಂದ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ್ ಕೃಷಿಕರು ಈ ಮೂರು ಕೃಷಿ ಕಾಯ್ದೆ ರದ್ದುಗೊಳಿಸಲು ಒತ್ತಾಯಿಸಿ, ದೆಹಲಿಯ ಹೊರವಲಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಧಾನಿ ಮೋದಿಜಿ ಅವರು ಪ್ರತಿಭಟನಾನಿರತ ಕೃಷಿಕರು ತಮ್ಮ ಮನೆಗಳಿಗೆ ಹಿಂದಿರುಗಬೇಕು. ಮತ್ತು ಈ ಕೃಷಿ ಕಾಯ್ದೆಗಳನ್ನು ಹಿಂಪಡೆಯಲಾಗುವುದು ಎಂದು ತಿಳಿಸಿದ್ದಾರೆ. ಅವರು ತಮ್ಮ ಸಂದೇಶದಲ್ಲಿ ಈ ಕೃಷಿ ಕಾಯ್ದೆಗಳ ಗುರಿಯು ಕೃಷಿಕರನ್ನು ಬಲಪಡಿಸುವುದೇ ಆಗಿದೆ. ಆದರೆ ಉತ್ತಮ ಪ್ರಯತ್ನ ಮಾಡಿದರು ಕೂಡ, ಕೆಲವು ವರ್ಗದ ಕೃಷಿಕರನ್ನು ಮನವರಿಕೆ ಮಾಡಿಕೊಡಲಾಗಲಿಲ್ಲ.

“ನಾನು, ಮತ್ತಷ್ಟು ಕಠಿಣವಾಗಿ ಶ್ರಮಿಸುತ್ತೇನೆ. ನಿಮ್ಮ ಕನಸುಗಳನ್ನು ,ದೇಶದ ಕನಸುಗಳನ್ನು ಈಡೇರಿಸಲು ಸಾಧ್ಯ ಮಾಡುತ್ತೇನೆ” ಎಂದು ಭರವಸೆ ನೀಡಿದ್ದಾರೆ.

ರಾಜ್ಯದಲ್ಲಿ ಮಳೆ ಅನಾಹುತ,ಅವ್ಯಾಹತ

0

ಬಂಗಾಳಕೊಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ರಾಜ್ಯದ ಕೆಲವೆಡೆ ಭಾರಿ ಪ್ರಮಾಣದ ಮಳೆಯಾಗುತ್ತದೆ. ಇನ್ನು ಒಂದು ವಾರ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

ನಿರಂತರ ವಾಯುಭಾರ ಕುಸಿತ ಕ್ಕೆ ಕೇವಲ ‘ಲಾ ನಿನಾ ಚಂಡಮಾರುತ ‘ಒಂದೇ ಕಾರಣವಲ್ಲ. ಜಾಗತಿಕ ತಾಪಮಾನವು ಕಾರಣವಾಗಿದೆ. ಇದು ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಹೆಚ್ಚು ಮಳೆ. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಕಡಿಮೆ ಮಳೆ ತರುತ್ತದೆ. ಇದರಿಂದ ಪ್ರಕೃತಿ ವಿಕೋಪಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಮಾಲೋಚಕ ಡಾ. ಜಿ. ಎಸ್. ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.

ಕಳೆದ ಎರಡು ವಾರಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ನವೆಂಬರ್ ತಿಂಗಳಲ್ಲಿ ಸುರಿಯುವ ವಾಡಿಕೆ ಮಳೆಗಿಂತ ಶೇ.62 ರಷ್ಟು ಅಧಿಕವಾಗಿದೆ.

ಲಾ ನಿನಾ ಚಂಡಮಾರುತದ ಪರಿಣಾಮದಿಂದ ವಾಯುಭಾರಕುಸಿತ ಹೆಚ್ಚಾಗುತ್ತಿವೆ. ಇದರ ಪರಿಣಾಮವಾಗಿ ರಾಜ್ಯದ ಹಲವೆಡೆ ನಿರಂತರವಾಗಿ ಮಳೆಯಾಗುತ್ತಿದೆ. ಮತ್ತೆ ಕುಸಿತ ಮುಂದುವರಿಯುವ ಸಾಧ್ಯತೆಯಿದೆ. ಇದರಿಂದ ಮಳೆ ನಿಲ್ಲುವ ಸಾಧ್ಯತೆ ಕಡಿಮೆ ಇದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಶಾಲೆಗಳಿಗೆ ರಜೆ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

ಮಳೆ ರಭಸಕ್ಕೆ ಕೆಲವು ಹಳೆಯ ಕಟ್ಟಡಗಳು ನೆಲಕ್ಕುರುಳಿವೆ. ಬೆಳೆ ಹಾನಿ ಉಂಟಾಗಿದೆ. ಅನೇಕ ಸೇತುವೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ಸತತವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಇಂದು 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ತುಮಕೂರು, ಬೆಳಗಾವಿ, ದಾರವಾಡ ಮುಂತಾದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಏಳು ಸಹಸ್ರಕ್ಕೂ ಹೆಚ್ಚು ಹಳ್ಳಿಗಳಿಗೆ 4G ಸೌಲಭ್ಯ

0

ಆಂಧ್ರಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್, ಮಹಾರಾಷ್ಟ್ರ ಮತ್ತು ಒಡಿಶಾ ಸೇರಿದಂತೆ ಐದು ರಾಜ್ಯಗಳಾದ್ಯಂತ ಮಹತ್ವಾಕಾಂಕ್ಷೆಯ ಜಿಲ್ಲೆಗಳ ವ್ಯಾಪ್ತಿಗೆ ಒಳಪಡದ ಹಳ್ಳಿಗಳಲ್ಲಿ ಮೊಬೈಲ್ ಸೇವೆಗಳನ್ನು ಒದಗಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಅಧಿಕೃತ ಪ್ರಕಟಣೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮೊದಲ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. “ಯೋಜನೆಯು 44 ಮಹತ್ವಾಕಾಂಕ್ಷೆಯ ಜಿಲ್ಲೆಗಳ 7,287 ಹಳ್ಳಿಗಳಲ್ಲಿ 4G ಆಧಾರಿತ ಮೊಬೈಲ್ ಸೇವೆಗಳನ್ನು ಒದಗಿಸಲು ಉದ್ದೇಶಿಸಿದೆ. ಐದು ವರ್ಷಗಳ ಕಾರ್ಯಾಚರಣೆಯ ವೆಚ್ಚ 6,466 ಕೋಟಿ ರೂ.
“ಈ ಯೋಜನೆಗೆ ಸಾರ್ವತ್ರಿಕ ಸೇವಾ ಬಾಧ್ಯತೆಯ ನಿಧಿಯಿಂದ ಹಣವನ್ನು ನೀಡಲಾಗುವುದು. ಒಪ್ಪಂದಕ್ಕೆ ಸಹಿ ಹಾಕಿದ ನಂತರ 18 ತಿಂಗಳೊಳಗೆ ಯೋಜನೆ ಪೂರ್ಣಗೊಳ್ಳುತ್ತದೆ ಮತ್ತು ನವೆಂಬರ್ 23 ರೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ” ಎಂದು ತಿಳಿದು ಬಂದಿದೆ. ಗುರುತಿಸಲ್ಪಟ್ಟ ಗ್ರಾಮಗಳಲ್ಲಿ 4G ಮೊಬೈಲ್ ಸೇವೆಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದ ಕೆಲಸವನ್ನು ಅಸ್ತಿತ್ವದಲ್ಲಿರುವ ಸಾರ್ವತ್ರಿಕ ಸೇವಾ ಬಾಧ್ಯತೆಯ ನಿಧಿಯ ಕಾರ್ಯವಿಧಾನಗಳ ಪ್ರಕಾರ ಮತ್ತು ಮುಕ್ತ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ನೀಡಲಾಗುತ್ತದೆ. 5 ರಾಜ್ಯಗಳಾದ್ಯಂತ ಮಹತ್ವಾಕಾಂಕ್ಷೆಯ ಜಿಲ್ಲೆಗಳ ದೂರದ ವ್ಯಾಪ್ತಿಯ ಪ್ರದೇಶಗಳಲ್ಲಿ ಮೊಬೈಲ್ ಸೇವೆಗಳನ್ನು ಒದಗಿಸುವ ಪ್ರಸ್ತುತ ಪ್ರಸ್ತಾವನೆಯು ಸ್ವಾವಲಂಬನೆಗೆ ಉಪಯುಕ್ತವಾದ ಡಿಜಿಟಲ್ ಸಂಪರ್ಕವನ್ನು ಹೆಚ್ಚಿಸುತ್ತದೆ. ಕಲಿಕೆಯನ್ನು ಸುಗಮಗೊಳಿಸುತ್ತದೆ, ಮಾಹಿತಿ ಮತ್ತು ಜ್ಞಾನದ ಪ್ರಸರಣ, ಕೌಶಲ್ಯ ಉನ್ನತೀಕರಣ ಮತ್ತು ಅಭಿವೃದ್ಧಿ, ವಿಪತ್ತು ನಿರ್ವಹಣೆ, ಇ-ಆಡಳಿತ ಉಪಕ್ರಮಗಳು, ಉದ್ಯಮಗಳ ಸ್ಥಾಪನೆ ಮತ್ತು ಇ-ಕಾಮರ್ಸ್ ಸೌಲಭ್ಯಗಳು, ಜ್ಞಾನ ಹಂಚಿಕೆ ಮತ್ತು ಉದ್ಯೋಗಾವಕಾಶಗಳ ಲಭ್ಯತೆಗಾಗಿ ಶಿಕ್ಷಣ ಸಂಸ್ಥೆಗಳಿಗೆ ಸಾಕಷ್ಟು ಬೆಂಬಲವನ್ನು ಒದಗಿಸುವುದು ಮತ್ತು ಪ್ರಜಾಪ್ರಭುತ್ವ ಉತ್ಪಾದನೆಯನ್ನು ಉತ್ತೇಜಿಸುವ ಮತ್ತು ಆತ್ಮ ನಿರ್ಭರದ ಉದ್ದೇಶಗಳನ್ನು ಪೂರೈಸುವ ಡಿಜಿಟಲ್ ಇಂಡಿಯಾದ ದೃಷ್ಟಿಯನ್ನು ಪೂರೈಸುವುದು ಈ ಯೋಜನೆಯ ಮಹತ್ವವಾಗಿದೆ.

ಮಕ್ಕಳೊಂದಿಗೆ ಬರೆಯಿರಿ -ಲೇಖಕ ಕಾರ್ತಿಕ್ ಶಂಕರ್

0

ಕಾರ್ತಿಕ್ ಶಂಕರ್ ಅವರು ವಿಕಾಸಾತ್ಮಕ ಪರಿಸರಶಾಸ್ತ್ರಜ್ಞ.
ಇವರು ಪರಿಸರ ವಿಜ್ಞಾನ ಮತ್ತು ವಿಕಸನೀಯ ಜೀವನಚರಿತ್ರೆ ಕಪ್ಪೆ, ಹಲ್ಲಿಗಳು, ಹಾವುಗಳು ಮತ್ತು ಪಶ್ಚಿಮ ಘಟ್ಟಗಳಾದ್ಯಂತ ಸಮುದ್ರ ಆಮೆಗಳು ಮತ್ತು ಬಂಡೆಗಳ ಮೀನುಗಳ ನಡುವೆ ಅಧ್ಯಯನ ಮಾಡಿದ್ದಾರೆ. ಇದರ ಮಧ್ಯೆ, ಇವರು ರೋಹಿಣಿ ನಿಲೇಕಣಿ ಅವರೊಂದಿಗೆ ಆಮೆಯ ಆಕರ್ಷಕ ಜೀವನದ ಬಗ್ಗೆ ಭಾಷಣವನ್ನು ನೀಡಿದ್ದರು. ಇದರ ಪರಿಣಾಮದಿಂದ ಕಾರ್ತಿಕ್ ಶಂಕರ್ ಅವರು ಮಕ್ಕಳಿಗೆ ವಿಜ್ಞಾನದ ಬಗ್ಗೆ ಬರೆಯಲು ಪ್ರಾರಂಭಿಸಿದರು. ಅವರ ಕಣ್ಣುಗಳಿಂದ ವಿಜ್ಞಾನವು ಸುಂದರ ಮತ್ತು ಓದಲು ಸಾಧ್ಯವಿದೆ ಎಂದು ನಾನು ಕಂಡುಕೊಂಡೆ ಎಂದು ಹೇಳುತ್ತಾರೆ. ಇವರ ವೈಜ್ಞಾನಿಕ ಪತ್ರಿಕೆಗಳನ್ನು ಸಾಮಾನ್ಯವಾಗಿ ಕೆಲವು ಜನರು ಓದುತ್ತಾರೆ ಆದರೆ ಮಕ್ಕಳಿಗಾಗಿ ಇವರು ಬರೆದ ಪುಸ್ತಕಗಳು 10,000 ಪ್ರತಿಗಳು ಮಾರಾಟವಾಗಿವೆ. ಇವರು ಆಮೆಗಳ ಮೇಲೆ ಬರೆದ ಪುಸ್ತಕವನ್ನು ರೊಮೇನಿಯನ್ ಮತ್ತು ಇಂಗ್ಲೊ ಸೇರಿದಂತೆ 12 ಭಾಷೆಗಳಿಗೆ ಅನುವಾದಿಸಲಾಗಿದೆ. ಇದರಿಂದ ಮಕ್ಕಳನ್ನು ತಲುಪಲು ಸಾಧ್ಯವಾಗುವುದು ಸಂತೋಷಕರವಾಗಿದೆ ಎನ್ನುತ್ತಾರೆ ಕಾರ್ತಿಕ್ ಶಂಕರ್. ಇವರು ನೀಲಗಿರಿಯಲ್ಲಿನ ಪೊದೆ ಕಪ್ಪೆಯ ಬಗ್ಗೆಯೂ ಬರೆದಿದ್ದಾರೆ. ನೈಸರ್ಗಿಕ ಪ್ರಪಂಚದೊಂದಿಗಿನ ಇವರ ಆಕರ್ಷಣೆ, ಅದರ ಜಟಿಲತೆಗಳು ಮತ್ತು ವಿಸ್ಮಯಗಳನ್ನು ಮಕ್ಕಳಿಗೆ ತಿಳಿಸಲು ಪ್ರಯತ್ನಿಸುತ್ತಾರೆ. ಜನರು ತಮ್ಮ ಸುತ್ತಲೂ ಇರುವದನ್ನು ಸಂರಕ್ಷಿಸುವಲ್ಲಿ ತೊಡಗಿಸಿಕೊಳ್ಳುವುದು ಕಡಿಮೆ ಎಂಬುದು ಇವರ ನಂಬಿಕೆ. ಸಂರಕ್ಷಣೆ ಎಂದರೆ ಜನರು ಮತ್ತು ಪ್ರಕೃತಿಯನ್ನು ಪ್ರತ್ಯೇಕಿಸುವುದು ಅಲ್ಲ ಆದರೆ, ಎಲ್ಲಾ ಜೀವಗಳ ನಡುವಿನ ಸಂಬಂಧಗಳ ವ್ಯಾಪ್ತಿಯನ್ನು ಉತ್ತೇಜಿಸುವುದು ಎಂದು ಮಕ್ಕಳಿಗೆ ತಿಳಿ ಹೇಳುತ್ತಾರೆ.
ನಾವು ಬದಲಾಗಬಹುದು ಎಂದು ನಾವು ಭಾವಿಸುತ್ತೇವೆ, ಅದಕ್ಕಾಗಿಯೇ ನಾವು ವಿಜ್ಞಾನ, ಸಂರಕ್ಷಣೆ ಅಥವಾ ಕಲೆಯಲ್ಲಿ ಕೆಲಸ ಮಾಡುತ್ತೇವೆ. ನಾವು ಸಂವಹನ ಮಾಡಬೇಕು ಮಕ್ಕಳಿಗೆ ಅಂತಹ ಭರವಸೆ, ಹವಾಮಾನದ ನೈಜತೆಯ ಬಗ್ಗೆ ಅವುಗಳನ್ನು ರಕ್ಷಿಸುವುದರ ಬಗ್ಗೆ ತಿಳಿಸುವುದು ಅತ್ಯಗತ್ಯವಾಗಿದೆ ಎಂದು ಹೇಳುತ್ತಾರೆ. ಆಮೆಗಳ ಕುರಿತಾದ ಇವರ ಪುಸ್ತಕದಲ್ಲಿ, ನಾಯಕಿ ತನ್ನ ಮೂಲದ ಕಡಲ ತೀರಕ್ಕೆ ದಾರಿ ಮಾಡಿಕೊಡುತ್ತಾಳೆ ಆದರೆ ಅವಳು ಮೊದಲು ಟ್ರಾಲ್ ಬಲೆಗಳು ಮತ್ತು ಶಾರ್ಕ್‌ಗಳಂತಹ ಮಾರಣಾಂತಿಕ ಬೆದರಿಕೆಗಳಿಂದ ಪಾರಾಗಬೇಕು. ಇತರ ಆಮೆಗಳು ಬಲೆಗಳಲ್ಲಿ ಸಿಕ್ಕಿಬಿದ್ದಿರುವ ಕೆಲವು ಚಿತ್ರಣಗಳಿವೆ. ನನ್ನ ಬರಹಗಳು ಮಕ್ಕಳಿಗೆ ಪ್ರಕೃತಿಯ ಹೊಸ ನೋಟವನ್ನು ವಿಕಸಿಸಲು ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಸಂರಕ್ಷಣೆಯು ಸಾಮಾನ್ಯವಾಗಿ ಎಲೈಟ್ ಮತ್ತು ಬಹಿಷ್ಕಾರದ ಕ್ಷಣವಾಗಬಹುದು, ಅದು ಮಾನವರು ಮತ್ತು ಪ್ರಕೃತಿಯನ್ನು ಪರಸ್ಪರ ಪ್ರತ್ಯೇಕವಾಗಿ ಯೋಚಿಸಲು ಒಲವು ತೋರುತ್ತದೆ- ಆದ್ದರಿಂದ, ಇದು ಭೂಮಿಯಿಂದ ವಾಸಿಸುವ ಈಗಾಗಲೇ ಅಂಚಿನಲ್ಲಿರುವ ಸಮುದಾಯಗಳ ಮೇಲೆ 7 ಪರಿಣಾಮಗಳನ್ನು ಉಂಟುಮಾಡಬಹುದು. ಸೌಂದರ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳೊಂದಿಗೆ ವಿವಿಧ ರೀತಿಯ ಸಮರ್ಥನೀಯ ಬಳಕೆಯನ್ನು ಒಳಗೊಂಡಿರುವ ಮಾನವರು ಮತ್ತು ಪ್ರಕೃತಿಯ ನಡುವೆ ನಾವು ಹೆಚ್ಚು ಸಂಪರ್ಕವನ್ನು ಬೆಳೆಸಿಕೊಳ್ಳಬೇಕು. ಇದು ಸಂಭವಿಸಬೇಕಾದರೆ, ನಾವು ಮಕ್ಕಳೊಂದಿಗೆ ಬೆರೆಯಲು ಪ್ರಾರಂಭಿಸಬೇಕು. ಮಕ್ಕಳು ಯಾವಾಗಲೂ ನೈಸರ್ಗಿಕ ಪ್ರಪಂಚದ ಅದ್ಭುತ ಗುಣಗಳನ್ನು ಇಷ್ಟಪಡುವುದು ಗಮನಾರ್ಹ. ಮಕ್ಕಳಲ್ಲಿ ಪ್ರಕೃತಿಯ ಕುರಿತು ಸುಂದರವಾದ ದೃಶ್ಯವನ್ನು ಕಟ್ಟಬೇಕು. ಬಾಲ್ಯದಲ್ಲಿಯೇ ಮಕ್ಕಳಿಗೆ ಪರಿಸರದ ಬಗೆಗಿನ ಒಲವನ್ನು ಹೆಚ್ಚಿಸಬೇಕು. ಇದರಿಂದ ಅವರು ಒಳ್ಳೆಯ ಮೌಲ್ಯಗಳನ್ನು ಕಲಿಯುತ್ತಾರೆ. ಪ್ರಕೃತಿಯನ್ನು ಪ್ರೀತಿಸುತ್ತಾರೆ ಎಂದು ಕಾರ್ತಿಕ್ ಶಂಕರ್ ಅವರು ಭಾವಿಸುತ್ತಾರೆ.

ದೇಶದಲ್ಲಿ ಇ- ಕಾಮರ್ಸ್ ಚೇತರಿಕೆ

0

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ವಹಿವಾಟಿನಿಂದಾಗಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಗೆ ರಫ್ತು ಮಾಡಲು ಸಹಕಾರಿಯಾಗಿದೆ. ಇದರಿಂದ ದೇಶದ ರಫ್ತು ಹೆಚ್ಚಿಸಲು ಸಾಧ್ಯವಾಗಲಿದೆ.

ಎಂಎಸ್ಎಂಇ ಗಳು ಮಾರುಕಟ್ಟೆ ಪ್ರವೇಶಕ್ಕೆ ನಿರ್ಬಂಧ, ಆರಂಭಿಕ ಹೂಡಿಕೆಯ ಸವಾಲು, ಬೇಡಿಕೆಯಲ್ಲಿ ಅನಿಶ್ಚಿತತೆಯನ್ನು ಎದುರಿಸುತ್ತಿವೆ. ಈ ಸವಾಲುಗಳನ್ನು ಪರಿಹರಿಸಲು ಇ ಕಾಮರ್ಸ್ ಸಹಾಯಕಾರಿಯಾಗುತ್ತದೆ. ಇ-ಕಾಮರ್ಸ್ ವೇದಿಕೆಯು ಎಂಎಸ್ಎಂಇ ಗಳಿಗೆ ಜಾಗತಿಕ ಮಟ್ಟದಲ್ಲಿ ಗ್ರಾಹಕರನ್ನು ಸಂಪರ್ಕಿಸಲು ಸಹಾಯಕವಾಗುತ್ತದೆ. ಗಡಿಯಾಚೆಗಿನ ವ್ಯವಹಾರವನ್ನು ಹೆಚ್ಚಿಸಲು ಸುಲಭವಾಗುತ್ತದೆ. ಅಂತರಾಷ್ಟ್ರೀಯ ಗ್ರಾಹಕರನ್ನು ಸೆಳೆಯಲು ಸಾಧ್ಯವಾಗುತ್ತದೆ.

ಏಳರಿಂದ ಎಂಟು ವರ್ಷಗಳ ಹಿಂದೆ ಎಂ.ಎಸ್.ಎಂ.ಇ ರಫ್ತು ವ್ಯವಹರಿಸಲು ಜಾಗತಿಕ ವ್ಯಾಪಾರ ಮೇಳಗಳಲ್ಲಿ ಭಾಗವಹಿಸಬೇಕಾಗಿತ್ತು. ಅಲ್ಲಿ ಆರ್ಡರ್ ಗಳನ್ನು ಬುಕ್ ಮಾಡಬೇಕಾಗುತ್ತಿತ್ತು. ಲಾಜಿಸ್ಟಿಕ್ಸ್, ಪೇಮೆಂಟ್ ಗೆ ಕಾಯುವುದು ಇತ್ಯಾದಿ ಸವಾಲುಗಳು ಎದುರಾಗುತ್ತಿದ್ದವು. ಆದರೆ ಈಗ ತಂತ್ರಜ್ಞಾನದ ಮುಖಾಂತರ ಇ-ಕಾಮರ್ಸ್ ಕ್ಷೇತ್ರ ವಿಸ್ತಾರವಾಗಿರುವುದರಿಂದ ಅಡಚಣೆಗಳನ್ನು ನಿವಾರಿಸಬಹುದಾಗಿದೆ.

ರಂಗಶಿಕ್ಷಣ ಸರ್ಟಿಫಿಕೇಟ್ ಕೋರ್ಸ್ : ಸಂದೇಶ್ ಜವಳಿ

0

ಶಿವವಮೊಗ್ಗ ರಂಗಾಯಣದಲ್ಲಿ ಮುಂದಿನ ತಿಂಗಳಿನಿಂದ ಮೂರು ತಿಂಗಳ ರಂಗಶಿಕ್ಷಣ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲಾಗುತ್ತಿದೆ ಎಂದು ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ ಅವರು ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ರಂಗಭೂಮಿಯ ಹೊಸ ಆಯಾಮಗಳನ್ನು ರಂಗಾಸಕ್ತರಿಗೆ ಪರಿಚಯಿಸುವ, ನಾಟಕ ಸಾಹಿತ್ಯವನ್ನು ಅಧ್ಯಯನ ಮಾಡಿಸುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಕಟೀಲು ಅಶೋಕ ಪೈ ಸ್ಮಾರಕ ಕಾಲೇಜಿನ ಸಹಯೋಗದೊಂದಿಗೆ ಕೋರ್ಸ್ ಪ್ರಾರಂಭಿಸಲಾಗುತ್ತಿದೆ ಎಂದರು.

ಮೂರು ತಿಂಗಳ ಅವಧಿಯಲ್ಲಿ ರಂಗಪಠ್ಯಗಳಾದ ಜಾಗತಿಕ ರಂಗಭೂಮಿ, ಭರತನ ನಾಟ್ಯಶಾಸ್ತ್ರ, ಭಾರತೀಯ ರಂಗಭೂಮಿ, ಅಭಿನಯ ಸಿದ್ಧಾಂತಗಳು ಮತ್ತು ಪ್ರಾಯೋಗಿಕ ತರಗತಿಗಳಾದ ನಾಟಕ ಪ್ರಕಾರಗಳು ಮತ್ತು ರಚನೆ, ನಿರ್ದೇಶನ ಮತ್ತು ರಂಗ ತರಬೇತಿ ಮತ್ತು ನೇಪಥ್ಯ ವಿಚಾರಗಳ ಕುರಿತು ತರಬೇತಿ ನೀಡಲಾಗುವುದು. ಮುಂದಿನ ವರ್ಷದಿಂದ ಕುವೆಂಪು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಒಂದು ವರ್ಷದ ರಂಗಶಿಕ್ಷಣ ಕೋರ್ಸ್ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.

ರಂಗಶಿಕ್ಷಣಕ್ಕೆ ಸೇರ ಬಯಸುವ ಅಭ್ಯರ್ಥಿಗಳು ಕನಿಷ್ಟ ಪಿಯುಸಿ/ತತ್ಸಮಾನ ತೇರ್ಗಡೆಯಾಗಿರಬೇಕು. 18ರಿಂದ 35 ವರ್ಷ ಒಳಗಿರಬೇಕು. ಕೋರ್ಸಿನ ತರಬೇತಿ ಅವಧಿ ಸಂಜೆ 5.30ರಿಂದ ರಾತ್ರಿ 8ರವರೆಗೆ ನಡೆಯಲಿದ್ದು, ವಾರದಲ್ಲಿ ನಾಲ್ಕು ದಿನ ಕಟೀಲು ಅಶೋಕ ಪೈ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. 30ಮಂದಿಗೆ ಪ್ರವೇಶಕ್ಕೆ ಅವಕಾಶವಿದ್ದು, ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಜಿ ನಮೂನೆ ರಂಗಾಯಣ ಮತ್ತು ಕಾಲೇಜಿನಲ್ಲಿ ಲಭ್ಯವಿದೆ. ಅರ್ಜಿಯೊಂದಿಗೆ ಶೈಕ್ಷಣಿಕ ಅಂಕಪಟ್ಟಿಯ ಪ್ರತಿ, ಪಾರ್ಸ್‍ಪೋರ್ಟ್ ಅಳತೆಯ 4 ಭಾವಚಿತ್ರ ಮತ್ತು ಆಧಾರ್ ಕಾರ್ಡ್‍ನ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು ಎಂದರು.

ಕಾಶ್ಮೀರ: ಕುಲ್ಗಾಂ ನಲ್ಲಿ ಉಗ್ರರ ಹತ್ಯೆ

0

ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭದ್ರತಾಪಡೆಗಳು ಕಾರ್ಯಾಚರಣೆ ನಡೆಸಿದ್ದು, ಇದರಲ್ಲಿ ತಯ್ಬಾ ಕಮಾಂಡರ್ ಸೇರಿದಂತೆ ಐವರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ.

ಕುಲ್ಗಾಂ ಜಿಲ್ಲೆಯ ಗೋಪಾಲಪೊರ ಪ್ರದೇಶದಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ದಾಳಿ ನಡೆಯಿತು. ಈ ಸಂದರ್ಭದಲ್ಲಿ ಭದ್ರತಾ ಪಡೆಯ ಗುಂಡಿಗೆ ಐವರು ಉಗ್ರರು ಬಲಿಯಾಗಿದ್ದಾರೆ.

ಉಗ್ರರು ಅಡಗಿ ಕುಳಿತಿರುವುದು ಖಚಿತವಾದ ಬಳಿಕ ಭದ್ರತಾ ಸಿಬ್ಬಂದಿಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ಗುಂಡಿನ ಚಕಮಕಿ ನಡೆದಿದೆ. ಈ ವೇಳೆಗೆ ಸೇನಾ ದಾಳಿಯಲ್ಲಿ ಉಗ್ರರನ್ನು ಹತ್ಯೆಗಯ್ಯಲಾಗಿದೆ.

ಪುಲ್ವಾಮ ಹೆದ್ದಾರಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ಇಬ್ಬರು ಲಷ್ಕರ್ ಉಗ್ರರು ಸೆರೆಸಿಕ್ಕಿದ್ದಾರೆ. ಅಮೀರ್ ಬಶೀರ್ ಮತ್ತು ಮುಕ್ತಾರ್ ಭಟ್ ಎಂಬ ಉಗ್ರರಿಂದ ಅಪಾರ ಸ್ಪೋಟಕ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.