Saturday, December 6, 2025
Saturday, December 6, 2025
Home Blog Page 1827

ಮೀನುಕೃಷಿಕರಿಗೂ ಈಗ ಕಿಸಾನ್ ಕಾರ್ಡ್

0

ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿನ ಎಲ್ಲಾ ಪ್ರಯೋಜನಗಳನ್ನು ಮೀನುಗಾರರಿಗೂ ನೀಡಲು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಸಿದ್ದಪಡಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಎಲ್ ಮುರುಗನ್ ತಿಳಿಸಿದ್ದಾರೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಕೇಂದ್ರ ಸರ್ಕಾರ ರೈತರಿಗೆ ನೀಡಿರುವ ಯೋಜನೆಯಾಗಿದೆ. ಇದರ ಮೂಲಕ ರೈತರು ಸಕಾಲದಲ್ಲಿ ಸಾಲ ಪಡೆಯಲು ಸಾಧ್ಯವಾಗುತ್ತದೆ. ಈ ಯೋಜನೆಯನ್ನು 1998 ರಲ್ಲಿ ಪ್ರಾರಂಭಿಸಲಾಯಿತು. ರೈತರಿಗೆ ಸಕಾಲದಲ್ಲಿ ಅಲ್ಪಾವಧಿ ಸಾಲ ನೀಡುವುದು ಇದರ ಉದ್ದೇಶವಾಗಿದೆ. ಈಗ ಈ ಸೌಲಭ್ಯವನ್ನು ಶೀಘ್ರವೇ ಮೀನುಗಾರರಿಗೂ ವಿಸ್ತರಿಸಲಾಗುವುದು ಎಂದು ಕೇಂದ್ರ ಮೀನುಗಾರಿಕೆ ಮತ್ತು ಪಶು ಸಂಗೋಪನೆ ಖಾತೆ ಸಹಾಯಕ ಸಚಿವ ಎಲ್. ಮುರುಗನ್ ಹೇಳಿದ್ದಾರೆ.
ಎಲ್ಲ ರೈತರು ಅಥವಾ ಜಂಟಿ ರೈತರು, ಗುತ್ತಿಗೆ ರೈತರು, ಹತ್ತು ರೈತರು ಒಳಗೊಂಡಿರುವ ಜಂಟಿ ಹೊಣೆಗಾರಿಕೆ ಗುಂಪುಗಳು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆಯಬಹುದಾಗಿದೆ. ಇವರು ಒಂದು ಅವಧಿಯಲ್ಲಿ ಗರಿಷ್ಠ ಮೂರು ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು. ಕೆಸಿಸಿ ಸಾಲ ಪಡೆದ ರೈತರ ಬೆಳೆಗಳಿಗೆ ಬೆಳೆ ವಿಮೆ ಕೂಡ ಲಭ್ಯವಿರುತ್ತದೆ. ಈಗ ಎಲ್ಲ ಸೌಲಭ್ಯಗಳನ್ನು ಮೀನುಗಾರರಿಗೂ ಕಲ್ಪಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
“ಕಡಲ ಆಹಾರ ರಪ್ತು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದ ಐದು ಪ್ರಮುಖ ಮೀನುಗಾರಿಕೆ ಬಂದರುಗಳನ್ನು ಅಂತರಾಷ್ಟ್ರೀಯ ಗುಣಮಟ್ಟ ಹಾಗೂ ಅತ್ಯಾಧುನಿಕ ಸಂಸ್ಕರಣಾ ಘಟಕಗಳೊಂದಿಗೆ ಮೇಲ್ದರ್ಜೆಗೆ ಏರಿಸಲು ತೀರ್ಮಾನಿಸಲಾಗಿದೆ” ಎಂದು ಸಚಿವರು ಮಾಹಿತಿ ನೀಡಿದರು.

ಫೇಸ್ಬುಕ್ ಅಸಲಿ v/s ನಕಲಿ

0

ಭಾರತದಲ್ಲಿ ದ್ವೇಷ ಭಾಷಣ, ಸುಳ್ಳು ಸುದ್ದಿಗಳು ಮತ್ತು ಹಿಂಸಾಚಾರವನ್ನು ಫೇಸ್ಬುಕ್ನ ನಿಯಮಗಳಿಂದ ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದು ಫೇಸ್ಬುಕ್ ಆಂತರಿಕ ವರದಿಯಲ್ಲಿ ವಿವರಿಸಲಾಗಿದೆ.
‘ಫೇಸ್ಬುಕ್ ನ ಉದ್ಯೋಗಿಯೊಬ್ಬರು, ತಾವು ಕೇರಳದವರು ಎಂದು ಬಿಂಬಿಸಿಕೊಳ್ಳುವ ಅಂತಹ ನಕಲಿ ಖಾತೆಯನ್ನು 2019ರ ಪೆಬ್ರವರಿಯಲ್ಲಿ ಆರಂಭಿಸಿದ್ದರು. ಆ ಖಾತೆಗೆ ಬರುವ ಸ್ನೇಹ ಸಲಹೆಗಳು, ಸ್ನೆಹ ವಿನಂತಿಗಳು. ವಿಡಿಯೋ ಮತ್ತು ಪೋಸ್ಟ್ ಸಲಹೆಗಳನ್ನು ಫೇಸ್ಬುಕ್ ನಿಯಮಕ್ಕೆ ಅನುಗುಣವಾಗಿ ಅಂಗೀಕರಿಸುತ್ತಾ ಹೋಗುವುದು ಈ ಅಧ್ಯಯನದ ಭಾಗವಾಗಿತ್ತು. ಖಾತೆ ಆರಂಭಿಸಿ ಮೂರು ವಾರಗಳ ಅವಧಿಯಲ್ಲಿ ದ್ವೇಷ ಭಾಷಣ, ಸುಳ್ಳು ಸುದ್ದಿ ಮತ್ತು ಹಿಂಸಾಚಾರವನ್ನು ಉದ್ದೀಪಿಸುವ ಫೇಸ್ಬುಕ್ ಗುಂಪುಗಳ, ಖಾತೆಗಳ, ಪೋಸ್ಟ್ ಗಳ ಸಲಹೆಗಳು ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದವು. ಇದಕ್ಕೆ ಸಂಬಂಧಿಸಿದ ವರದಿಯನ್ನು ನಂತರದ ಒಂದು ತಿಂಗಳಲ್ಲಿ ಫೇಸ್ಬುಕ್ ಆಂತರಿಕವಾಗಿ ಪ್ರಕಟಿಸಿತ್ತು’ ಎಂಬ ಮಾಹಿತಿ ತಿಳಿದು ಬಂದಿದೆ.
2019ರ ಚುನಾವಣೆ ಸಂದರ್ಭದಲ್ಲಿ ಫೇಸ್ಬುಕ್ ಕೇಂದ್ರ ಕಚೇರಿಯ ಸಂಶೋಧಕರು ಭಾರತಕ್ಕೆ ಭೇಟಿ ನೀಡಿ ಅಲ್ಲಿನ ಉದ್ಯೋಗಿಗಳ ಜತೆ ಮಾತುಕತೆ ನಡೆಸಿದ್ದರು. ಭಾರತದಲ್ಲಿ ಸುಳ್ಳುಸುದ್ದಿ ಹರಡುವುದನ್ನು ತಡೆಯಲು ಕಠಿಣವಾದ ನಿಯಮಗಳ ಅಗತ್ಯವಿದೆ. ಅವುಗಳನ್ನು ಕಾರ್ಯರೂಪಕ್ಕೆ ತರಬೇಕು ಎಂಬುದು ಅಲ್ಲಿನ ಉದ್ಯೋಗಗಳ ಅಭಿಪ್ರಾಯವಾಗಿತ್ತು ಎಂಬುದನ್ನು ‘ಇಂಡಿಯನ್ ಎಲೆಕ್ಷನ್ “ಕೇಸ್ ಸ್ಟಡಿ” ವರದಿಯಲ್ಲಿ ಫೇಸ್ ಬುಕ್ ದಾಖಲಿಸಿದೆ.
ಕೆಲವು ಗುಂಪುಗಳು ಅದರಲ್ಲೂ ಪ್ರಧಾನವಾಗಿ ಬಹಳಷ್ಟು ಗ್ರೂಪ್ ಗಳು ಮುಸ್ಲಿಂ ವಿರೋಧಿ ಭಾವನೆಯನ್ನು ಕೆರಳಿಸುವ ಪೋಸ್ಟ್ ಗಳನ್ನು ಮಾಡುತ್ತಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನಕಲಿ ಗ್ರೂಪ್ ಗಳನ್ನ ಸೃಷ್ಟಿಸಿ ಸಾಮಾಜಿಕರ ಭಾವನೆ ಕೆರಳುವಂಥ ಪೋಸ್ಟ್ ಗಳನ್ನ ಹಾಕುವ ಪ್ರಯತ್ನಗಳ ಬಗ್ಗೆಯೂ ಈ ವರದಿ
ಅಧ್ಯಯನ ಮಾಡಿದೆ.
ಈ ವರದಿಯನ್ನ ನೋಡಿದರೆ ಸಾಮಾಜಿಕ ಜಾಲತಾಣಗಳಲ್ಲಿ ಅಸಲಿ ಅಥವಾ ನಕಲಿ ಗ್ರೂಪ್ ಯಾವುದು ಎಂದು
ಜಾಲಗಾರರಿಗೆ ಗೊಂದಲವಾಗುವುದಂತೂ ಖಂಡಿತ

ವಿಶ್ವ ವಿಜ್ಞಾನಿ ಪಟ್ಟಿಗೆ ಡಾ.ಕುಮಾರಸ್ವಾಮಿ – ಡಾ. ಗಿರೀಶ್

0

ಅಮೆರಿಕದ ಪ್ರತಿಷ್ಠಿತ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ ಹೊರಡಿಸಿರುವ ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿವಿಯ ಡಾ. ಕುಮಾರಸ್ವಾಮಿ ಮತ್ತು ಡಾ. ಗಿರೀಶ್ ಸ್ಥಾನ ಪಡೆದಿದ್ದಾರೆ.
ಎಲ್ಸೇವಿಯರ್ ಸಂಸ್ಥೆಯ ಸಹಯೋಗದೊಂದಿಗೆ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ ಜೆರೋಯಿನ್ ಬಾಸ್, ಕೆವಿನ್ ಬೇಯಾಕ್ ಮತ್ತು ಜಾನ್ ಪಿ.ಎ. ಇವೊನ್ನಿಡಿಸ್ ಅವರನ್ನೊಳಗೊಂಡ ಸಂಶೋಧನಾ ತಂಡವು ಸಿದ್ಧಪಡಿಸಿರುವ ವಿಶ್ವದ ಟಾಪ್ ಶೇಕಡಾ 2 ವಿಜ್ಞಾನಿಗಳ ಅಂಕಿಅಂಶಗಳನ್ನು ಅಕ್ಟೋಬರ್ 19ರಂದು ಬಿಡುಗಡೆಯಾಗಿದ್ದು ಅಂತರ್ಜಾಲದಲ್ಲಿ ಮುಕ್ತವಾಗಿ ಲಭ್ಯವಿದೆ ಎಂದು ಕುವೆಂಪು ವಿವಿ ತಿಳಿಸಿದೆ.

ಸಂಶೋಧನಾ ತಂಡವು ವಿಶ್ವದ ಸಂಶೋಧಕರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡ ಸಂಶೋಧನಾ ಪ್ರಕಟಣೆಗಳು, ಸಂಶೋಧನಾ ಉಲ್ಲೇಖಗಳು, ಸಹಲೇಖನಗಳು, ಹೆಚ್-ಇಂಡೆಕ್ಸ್ ಸೇರಿದಂತೆ ಹಲವು ಸಂಯೋಜಿತ ಮಾನದಂಡಗಳನ್ನು ಬಳಸಿ ಜಾಗತಿಕವಾಗಿ ಅತ್ಯುತ್ತಮ ಒಂದು ಲಕ್ಷ ವಿಜ್ಞಾನಿಗಳನ್ನು ಗುರುತಿಸಿ ದತ್ತಾಂಶವನ್ನು ಪ್ರಕಟಿಸಿದ್ದಾರೆ. ಪಟ್ಟಿಯು 22 ವಿಜ್ಞಾನ ವಿಷಯಗಳು ಮತ್ತು 176 ಉಪವಿಜ್ಞಾನ ವಿಷಯಗಳನ್ನು ವಿಂಗಡಿಸಿ ರಚಿಸಿರುವುದಾಗಿದ್ದು, ವೃತ್ತಿಜೀವಮಾನ ಸಾಧಕರು ಮತ್ತು 2021ನೇ ಸಾಲಿನ ಸಾಧಕರು ಎಂಬ ಎರಡು ವಿಭಾಗಗಳನ್ನು ಒಳಗೊಂಡಿದೆ.

2021ರ ಸಾಲಿನ ಉತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿ 54804ನೇ ಸ್ಥಾನವನ್ನು ಪಡೆದಿರುವ ವಿವಿಯ ಗಣಿತವಿಜ್ಞಾನ ಸಹಪ್ರಾಧ್ಯಾಪಕ ಡಾ. ಬಿ.ಜೆ. ಗಿರೀಶ್ ಇಂಜಿನಿಯರಿಂಗ್, ಅನ್ವಯಿಕ ಭೌತಶಾಸ್ತ್ರ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್‌ ವಿಷಯಗಳ ಕುರಿತ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಇನ್ನು ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಬಿ. ಇ. ಕುಮಾರಸ್ವಾಮಿ 165713ನೇ ಸ್ಥಾನದಲ್ಲಿದ್ದಾರೆ.

ಈ ವರ್ಷದ ಪಟ್ಟಿಯಲ್ಲಿ ಭಾರತದ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಸುಮಾರು 2042 ವಿಜ್ಞಾನಿಗಳು ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ 1900 ವಿಜ್ಞಾನಿಗಳು ಸ್ಥಾನ ಪಡೆದಿದ್ದರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISc.) 114 ವಿಜ್ಞಾನಿಗಳು ಈ ಪಟ್ಟಿಯಲ್ಲಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ವಿವಿಯ ಸಂಶೋಧನಾ ಸಾಧನೆಗೆ ಪೂರಕವಾದ ಕಾರ್ಯ ಮಾಡುತ್ತಿರುವ ಈ ಇಬ್ಬರು ಪ್ರಾಧ್ಯಾಪಕರ ಸಾಧನೆಯು ಕುವೆಂಪು ವಿವಿಗೆ ಹೆಮ್ಮೆ ತಂದಿದೆ ಎಂದು ವಿವಿಯ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಮತ್ತು ಕುಲಸಚಿವೆ ಜಿ. ಅನುರಾಧ ಅವರು ಅಭಿನಂದಿಸಿದ್ದಾರೆ.

ಅಡಿಕೆ ಕೃಷಿಕ, ಮಳೆಗೆ ಹೈರಾಣ

0

ಗಾಳಿ, ಗುಡುಗು-ಸಿಡಿಲು, ಮಳೆಯಿಂದಾಗಿ ಮಲೆನಾಡಿನ ಅಡಿಕೆ ಬೆಳೆಗಾರರು ಹೈರಾಣಾಗಿದ್ದಾರೆ. ಅಕ್ಟೋಬರ್ ತಿಂಗಳ ಅಂತ್ಯ ಸಮೀಪಿಸಿದರು ಕಡಿಮೆಯಾಗದ ಕಾರಣ ಮಲೆನಾಡು ಭಾಗದ ಅಡಕೆ ಮತ್ತು ಭತ್ತದ ಬೆಳೆಗಳ ಹಾನಿಉಂಟಾಗಿದೆ.


ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಅಧಿಕವಾಗಿದ್ದರು ಅಡಕೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಇಲ್ಲದಂತಾಗಿದೆ. ಅಕಾಲಿಕ ಮಳೆಯಿಂದಾಗಿ ಅಡಕೆ ಕೊಯ್ಲು ಮಾಡಲು ಆಗದ ಕಾರಣ ಅಡಕೆ ಹಣ್ಣಾಗಿ ಉದುರ ತೊಡಗಿದೆ. ಅಲ್ಲದೆ ಅಡಿಕೆ ಕೊಳೆರೋಗ ಕಾಣಿಸಿಕೊಂಡಿದ್ದು ರೈತರಿಗೆ ದಿಕ್ಕೆ ತೋಚದಂತಾಗಿದೆ.
ವಾಡಿಕೆಗಿಂತ ಈ ಬಾರಿ ಅಕ್ಟೋಬರ್ 22 ರವರೆಗೆ ಜಿಲ್ಲೆಯಾದ್ಯಂತ ಅಧಿಕ ಮಳೆಯಾಗಿದು. ಅಂಕಿಅಂಶಗಳ ಪ್ರಕಾರ ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ಶೇಕಡಾ 42ರಷ್ಟು ಮಳೆಯಾದರೆ, ಶಿವಮೊಗ್ಗ ಶೇಕಡ 84, ಸೊರಬ ಶೇಕಡ 114, ತೀರ್ಥಹಳ್ಳಿ ಶೇಕಡ 84, ಶಿಕಾರಿಪುರ ಶೇಕಡಾ 157, ಭದ್ರಾವತಿ ಶೇಕಡ 141 ರಷ್ಟು ಅಧಿಕ ಮಳೆಯಾಗಿದೆ.
ಅಕಾಲಿಕ ಮಳೆ ಅಡಕೆ ಬೆಳೆಗಾರರಿಗೆ ಶಾಪವಾಗಿ ಪರಿಣಮಿಸಿದೆ ಬಯಲುಸೀಮೆ ಪ್ರದೇಶದಲ್ಲಿ ಈಗಾಗಲೇ ಅಡಿಕೆ ಕೊಯ್ಲು ಮುಗಿದು ಮಾರುಕಟ್ಟೆಗೆ ಅಡಿಕೆ ಬಂದಿದೆ. ಆದರೆ ಮಲೆನಾಡ ರೈತರು ಇನ್ನೂ ಕೊಳೆ ಔಷಧಿ ಸಿಂಪರಣೆ ಮಾಡುವ ಪರಿಸ್ಥಿತಿ ಬಂದಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅಡಕೆ ಬೆಳೆಗಾರರಿಗೆ ಬೆಳೆನಷ್ಟ ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಮ್ಯಾಮ್ ಕೋಸ್ ನಿರ್ದೇಶಕ ಕೆ.ವಿ. ಕೃಷ್ಣಮೂರ್ತಿ ತಿಳಿಸಿದ್ದಾರೆ.

ಕಾರಂತ ಮತ್ತು ಶಂಭಾಜೋಶಿ ಸ್ಮರಣ ಪ್ರಶಸ್ತಿ ಪ್ರದಾನ

0

ಶಿವಮೊಗ್ಗದ ಕರ್ನಾಟಕ ಸಂಘ ಭವನದಲ್ಲಿ ಸಂಶೋಧಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಹಾಗೂ ಡಾ.ಎನ್.ಎಸ್ ಲೀಲಾ ಅವರಿಗೆ ಕರ್ನಾಟಕ ಸಂಘದಿಂದ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ, ವಿಜಯನಗರ ಸಾಮ್ರಾಜ್ಯ, ಹಂಪಿಯನ್ನು ಹಾಳು ಮಾಡಿದವರು ಮುಸ್ಲಿಮರು ಎಂಬ ತಪ್ಪು ಕಲ್ಪನೆ ಎಲ್ಲೆಡೆ ಬಿತ್ತರವಾಗಿದೆ. ಆದರೆ, ಹಿಂದೂಗಳ ನಡುವಿನ ಪರಸ್ಪರ ಧ್ವೇಷದಿಂದ ಹಂಪಿ, ಹಾಳು ಬೀಳಲು ಕಾರಣ ಎಂದು ಸಂಶೋಧಕ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಮಾತನಾಡಿದರು.

“ಆಡು ಮುಟ್ಟದ ಸೊಪ್ಪಿಲ್ಲ,ಕಾರಂತರು ಮೆಟ್ಟದ ಜ್ಞಾನ ಕ್ಷೇತ್ರಗಳಿಲ್ಲ”. ಸ್ಥಾನ,ಮಾನ,ಧನದಾಹದ ಈ ಕಾಲದಲ್ಲಿ ಶಿವರಾಮ ಕಾರಂತರ ರ ತಿಳುವಳಿಕೆಗೂ, ನಮ್ಮ ತಿಳುವಳಿಕೆಗೂ ಅಜಗಜಾಂತರವಿದೆ. ಶಿವರಾಮ ಕಾರಂತರು ಮತ್ತು ಶಂಭಾ ಜೋಶಿ ಅವರ ಜೋಡಿ, ದೇಶ ವಿದೇಶಗಳನ್ನು ಸುತ್ತಿ,ಅನೇಕ ಕೋಶಗಳನ್ನು ಓದಿ ಸಂಗ್ರಹಿಸಿಕೊಂಡು. ಆ ಸಾರವನ್ನು ತಮ್ಮ ಲೇಖನದ ಮೂಲಕ ಉಣಬಡಿಸಿದ ಸಾಧನೆ ಕಾರಂತರದ್ದು ಎಂದು ಡಾ. ಶಿವರಾಮ ಕಾರಂತ ಪ್ರಶಸ್ತಿ ಸ್ವೀಕರಿಸಿದ ವಿಜ್ಞಾನ ಬರಹಗಾರ್ತಿ,ನಿವೃತ್ತ ಪ್ರಾಧ್ಯಾಪಕಿ ಡಾ.ಎನ್ ಎಸ್ ಲೀಲಾ ಅವರು ತಿಳಿಸಿದರು.

ದೇವಾಲಯ ನಾಶ ಇಸ್ಕಾನ್ ಪ್ರತಿಭಟನೆ

0

ಜಗತ್ತಿನಾದ್ಯಂತ ಇಸ್ಕಾನ್ ಅನುಯಾಯಿಗಳು ದೇಶದಲ್ಲಿ ಹಿಂದೂ ದೇವಸ್ಥಾನಗಳ ಮೇಲೆ ದಾಳಿ ಮತ್ತು ಇಬ್ಬರು ಇಸ್ಕಾನ್ ಅನುಯಾಯಿಗಳ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಿದರು. ಭಾರತ ಸೇರಿ ವಿಶ್ವದ 150 ದೇಶಗಳಲ್ಲಿ ಇರುವ 700 ಇಸ್ಕಾನ್ ಮಂದಿರಗಳ ಭಕ್ತರು ಪ್ರತಿಭಟನೆ ನಡೆಸಿದರು. ಹನ್ನೆರಡು ಗಂಟೆಗಳ ಕಾಲ ಇಸ್ಕಾನ್ ಮಂದಿರಗಳಲ್ಲಿ ಅಖಂಡ ಭಜನೆ ನಡೆಸಲಾಯಿತು.
ಬಾಂಗ್ಲಾದೇಶದಲ್ಲಿ ಹಿಂದೂ ದೇವಸ್ಥಾನಗಳು, ಮನೆ ಅಂಗಡಿಗಳ ಮೇಲೆ ನಡೆಸಿರುವ ಸರಣಿ ದಾಳಿ ಹಾಗೂ ಇಸ್ಕಾನ್ ಅನುಯಾಯಿಗಳ ಹತ್ಯೆಯಿಂದಾಗಿ ಹಿಂದುಗಳು ಆಘಾತ ಗೊಂಡಿದ್ದು, ಬಾಂಗ್ಲಾದೇಶದ ಹಿಂದುಗಳ ಜೊತೆ ನಾವು ನಿಲ್ಲುತ್ತೇವೆ ಎಂದು ಇಸ್ಕಾನ್ ವಕ್ತಾರ ಬಿಮಲ್ ಕೃಷ್ಣದಾಸ ತಿಳಿಸಿದರು.

ಭಾರತಕ್ಕೆ ಚುರುಕು ಮುಟ್ಟಿಸಿದ ಪಾಕ್

0

ಅಕ್ಟೋಬರ್ 24 ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ನಡೆದಿದೆ. ಭಾರತ ತಂಡದ ವಿರುದ್ಧ ಪಾಕಿಸ್ತಾನ ತಂಡವು ಭರ್ಜರಿ ಜಯ ಸಾಧಿಸಿದೆ.
ದುಬೈ ನಲ್ಲಿ ನಡೆದ ಪಂದ್ಯದಲ್ಲಿ ಪಾಕ್ ತಂಡವು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಭಾರತ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು.
151ರನ್ ಗಳನ್ನ ಗುರಿಯನ್ನಿಟ್ಟುಕೊಂಡು ಆಟ ಆರಂಭಿಸಿದ ಪಾಕಿಸ್ತಾನವು ಭಾರಿ ಜಯ ಗಳಿಸಿತು.

ಭಾರತ ತಂಡದ ಒಟ್ಟು ಜವಾಬ್ಧಾರಿ ವಹಿಸಿಕೊಂಡಿದ್ದ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನ ತೋರಿದರು.
4 ನೇ ವಿಕೆಟ್ ಹಂತಕ್ಕೆ ಕಾಲಿಟ್ಟ ಆಟ ಆಡಿದ ಅವರು 52 ರನ್ ಗಳಿಸಿದರು. ಅರ್ಧಶತಕದೊಂದಿಗೆ ಹೋರಾಟ ಮಾಡಿ ರನ್ ರೇಟ್ ಅನ್ನು ಹೆಚ್ಚಿಸಿದರು. ಇವರೊಟ್ಟಿಗೆ ರಿಷಭ್ ಅತ್ಯಂತ ಚುರುಕಾಗಿ ಸಿಕ್ಸರ್ ಮೂಲಕ ರನ್ ಗಳಿಸಿ ಭರವಸೆ ಮೂಡಿಸಿದರು. ಭಾರತ ತಂಡ ಆರಂಭದಲ್ಲಿಯೇ 3 ವಿಕೆಟ್ ಕಳೆದುಕೊಂಡು ಬಹಳಷ್ಟು ಪ್ರಯಾಸ ಪಡಬೇಕಾಯಿತು .
ಪಾಕ್ ಅತ್ಯಂತ ಬಿರುಸಾಗಿಯೇ ಇನ್ನಿಂಗ್ಸ್ ಆರಂಭಿಸಿತು. ಒಂದೇ ಒಂದು ವಿಕೆಟ್ ಕೂಡ ಗಳಿಸಲು ನಮ್ಮ ಬೌಲರ್ ಗಳು ಸಾಧ್ಯವಾಗಲಿಲ್ಲ.
ನಿರಾಯಾಸವಾಗಿ ಪಾಕ್ ತಂಡವು 10 ವಿಕೆಟ್ ಗಳಿಂದ ವಿರಾಟ್ ಕೊಹ್ಲಿ ಬಳಗವನ್ನ ಸೋಲಿಸಿತು.

ಆರಂಭದಲ್ಲಿಯೇ 3 ವಿಕೆಟ್ ಕಳೆದುಕೊಂಡಿದ್ದು, ಭಾರತ ತಂಡದ ಹಿನ್ನೆಡೆಗೆ ಪ್ರಮುಖ ಕಾರಣ. ಗೆಲ್ಲುವ ಯೋಜನೆಯನ್ನು ಜಾರಿಗೆ ತರುವಲ್ಲಿ ಇಡೀ ತಂಡ ಸಫಲವಾಗಲಿಲ್ಲ. ಇವತ್ತಿನ ಪಂದ್ಯದಲ್ಲಿ ಭಾರತಕ್ಕಿಂತಲೂ ಎದುರಾಳಿ ಪಾಕ್ ತಂಡವು ಚೆನ್ನಾಗಿ ಆಡಿದೆ. ಮೊಟ್ಟ ಮೊದಲ ಬಾರಿಗೆ ಟಿ – 20 ವಿಶ್ವಕಪ್ ಟೂರ್ನಿಯಲ್ಲಿ ಬದ್ಧ ಎದುರಾಳಿ ತಂಡದ ವಿರುದ್ಧ ಸೋತಿದ್ದೇವೆ. ಭಾರತ ತಂಡದ ಆಟಗಾರರಲ್ಲಿ ಮತ್ತು ಅಭಿಮಾನಿಗಳಲ್ಲಿ ಬಹಳಷ್ಟು ನಿರಾಸೆ ಮೂಡಿದೆ.
ಇದು ಟೂರ್ನಿಯ ಮೊದಲ ಪಂದ್ಯವಷ್ಟೇ ಇನ್ನೂ ಬಹಳಷ್ಟು ಪಂದ್ಯಗಳಿವೆ ಆ ಪಂದ್ಯಗಳಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿ ಚೆನ್ನಾಗಿ ಆಡುತ್ತೇವೆ ಎಂದು ಪಂದ್ಯದ ನಂತರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದರು.
ಪಾಕಿಸ್ತಾನದ ತಂಡದಲ್ಲಿ ಮೊದಲ ಜೋತೆಯಾಟದಲ್ಲಿ ಬ್ಯಾಟಿಂಗ್ ಆಟ ಆಡಿದ ಬಾಬರ್ ಆಜಂ ಮತ್ತು ಮೊಹಮ್ಮದ್ ರಿಜ್ವಾನ್ ರವರ ಭರ್ಜರಿ ಪ್ರದರ್ಶನದೊಂದಿಗೆ ಬಾಬರ್ ಔಟಾಗದೆ 68 ರನ್ ಮತ್ತು ರಿಜ್ವಾನ್ ಔಟಾಗದೆ 78 ರನ್ ಗಳ ಮೂಲಕ ಗೆಲುವು ಸದಿಸಿ 10 ವಿಕೆಟ್ ಗಳಿಂದ ಭಾರತ ತಂಡವನ್ನು ಸೋಲಿಸಿದರು..

ಅಡಿಕೆ ತೋಟಕ್ಕೆ ಭೇಟಿ

0

ಇತ್ತೀಚಿನ ದಿನಗಳಲ್ಲಿ ಮಲೆನಾಡಿನಾದ್ಯಂತ ಅಡಿಕೆ ಬೆಳೆಗೆ ಗರಿ ಚುಕ್ಕಿ ರೋಗ ಬಾಧಿಸುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇದನ್ನು ಗಮನಿಸಿದ ಮಾನ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನಗರದ ಹೋಬಳಿಯ ಅಡಿಕೆ ಬೆಳೆಗೆ ತಗುಲಿರುವ ಗರಿ ಚುಕ್ಕಿ ರೋಗದ ಕುರಿತು, ನಗರ ಹೋಬಳಿ ಚಕ್ರಾನಗರದ ರೈತರೊಬ್ಬರ ತೋಟಕ್ಕೆ ಅಧಿಕಾರಿಗಳೊಂದಿಗೆ ತೆರಳಿ ಸಮಸ್ಯೆ ಕುರಿತು ಚರ್ಚಿಸಿ ರೈತರಿಗೆ ದೈರ್ಯ ತುಂಬಿದರು.

ಮನ ಸೆಳೆಯುವ ಸುಂದರ, ಸೇವಂತಿಗೆ

0

ತಾಳಗುಪ್ಪ: ಕವಿಗಳು ಹೂವನ್ನು ವರ್ಣಿಸಿ ಹಲವಾರು ಕವಿತೆ ರಚಿಸಿದ್ದಾರೆ. ಗುಲಾಬಿ, ಮಲ್ಲಿಗೆ, ಸಂಪಿಗೆ ಹೀಗೆ ಎಲ್ಲಾ ಹೂವುಗಳೂ ಕವಿತೆಗಳಾಗಿವೆ, ಹಾಡುಗಳಲ್ಲಿ ತಮ್ಮ ಸ್ಥಾನ ಪಡೆದುಕೊಂಡಿದೆ. ಅವುಗಳಲ್ಲಿ ಸೇವಂತಿಯೂ ಒಂದು. ಮಲೆನಾಡಿನ ಗೃಹಣಿಯರ ಕೈ ಸೇವೆಯಲ್ಲಿ ಸಿಕ್ಕ ಸೇವಂತಿಗೆ ಸುಂದರವಾಗಿ ಬೆಳೆಯುತ್ತಿದೆ. ತಾಳಗುಪ್ಪ ಸಮೀಪದ ಹಳ್ಳಿಗಳಾದ ಗೋಟಗಾರು, ಅರೆಹದ್ದ, ತಲವಾಟ ಮುಂತಾದ ಮಹಿಳೆಯರು ಏಪ್ರಿಲ್ ತಿಂಗಳಿನಿಂದ ಮನೆಯ ಸುತ್ತಮುತ್ತ ಸೇವಂತಿಗೆ ಗಿಡದ ಆರೈಕೆ ಮಾಡುತ್ತಾರೆ. ಅಕ್ಟೋಬರ್ ತಿಂಗಳಿನಲ್ಲಿ ಇವು ಹೂ ಬಿಟ್ಟು ಎಲ್ಲರ ಮನ ತಣಿಸುತ್ತದೆ. ಕಾರದಕಡ್ಡಿ, ಮುದ್ದೆಬಿಳಿ, ಹೊಸಬಾಳೆ ಸೇವಂತಿಗೆ, ಡೆಲ್ಲಿ ಸೇವಂತಿಗೆ,ತೊಗರುಮಡ್ಡಿ,ಬೆಂಕಿ‌ಕಡ್ಡಿ, ಹೀಗೆ ಗ್ರಾಮೀಣ ಸೊಗಡಿನ ಹೆಸರುಳ್ಳ ಸೇವಂತಿಗೆ ಹೆಸರಿನ ಮೂಲಕವೂ ಮುದ ನೀಡುತ್ತವೆ. ಇಲ್ಲಿನ ಮಹಿಳೆಯರು ಮಾರಟಕ್ಕಾಗಿ ಈ ಕೆಲಸ ಮಾಡದೆ ಕೇವಲ ನೋಡುಗರ ಕಣ್ಣಿಗೆ ಮುದ ನೀಡಲಷ್ಟೆ ಸೇವಂತಿಗೆ ಕೃಷಿಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಪೋಟೋ: ಕವಿತಾ ಆರ್ ,ಕಡವಿನಮನೆ, ಗೃಹಿಣಿ ವರದಿ ಕೃಪೆ – ಆರ್. ಶರ್ಮಾ ತಲವಾಟ

ಕ್ರಿಕೆಟ್ ನಲ್ಲಿ ಕಣ್ಬಿಟ್ಟ ಹಸುಳೆ: ನಮೀಬಿಯ

0

ಟಿ – 20 ಟೂರ್ನಿಯ ಎ ಗುಂಪಿನ ಪಂದ್ಯಾವಳಿಯಲ್ಲಿ ಐರ್ಲೆಂಡ್ ಮತ್ತು ನಮಿಬಿಯಾ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಐರ್ಲೆಂಡ್ ತಂಡದ ವಿರುದ್ಧ ನಮಿಬಿಯಾ ತಂಡವು ಭರ್ಜರಿ ಜಯಗಳಿಸಿದೆ. ಶಾರ್ಜಾ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಕ್ರಿಕೆಟ್ ಶಿಶು ನಮಿಬಿಯಾ ತಂಡವು ಆಲ್-ರೌಂಡರ್ ಪ್ರದರ್ಶನದೊಂದಿಗೆ ಆಟವಾಡಿ ಇದೇ ಮೊದಲ ಬಾರಿಗೆ ‘ಎ ‘ ಗುಂಪಿನ ತಂಡವಾಗಿ 12 ರ ಹಂತಕ್ಕೆ ಕಾಲಿಟ್ಟಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಐರ್ಲೆಂಡ್ ತಂಡವು 20 ಓವರ್ ಗಳಲ್ಲಿ 8 ವಿಕೆಟ್ ಗೆ 125 ರನ್ ಗಳಿಸಿತು. 125 ರನ್ ಗಳ ಗುರಿಯನ್ನು ಬೆನ್ನತ್ತಿ ಆಟವಾಡಿದ ನಮಿಬಿಯಾ ತಂಡವು 18.3 ಓವರ್ ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿ ಭರ್ಜರಿ ಗೆಲುವು ಸಾಧಿಸಿದೆ. ಐರ್ಲೆಂಡ್ ತಂಡ ಗಳಿಸಿದ ರನ್ ಗಳನ್ನ ಬೆನ್ನತ್ತಿದ ನಮಿಬಿಯಾ ಆರಂಭಿಕ ಜೋಡಿಯು 25 ರನ್ ಗಳಿಸಿತು. 6 ಓವರ್ ಐರ್ಲೆಂಡ್ ನ ಕರ್ಟಿಸ್ ಕ್ಯಾಂಪರ್ ರವರು ವಿಕೆಟ್ ಪಡೆಯುವ ಮೂಲಕ ಈ ಜೊತೆಯಾಟವನ್ನು ಮುರಿದರು.ಐರ್ಲೆಂಡ್ ತಂಡದ ನಾಯಕ ಗೆರಾರ್ಡ್ ಯರಸ್ಮಸ್ ಅವರು 49 ಎಸೆತಕ್ಕೆ ಅಜೇಯ 53 ರನ್ ಗಳ ಮೂಲಕ ಅರ್ಧಶತಕ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಯರಸ್ಮಸ್ ಮತ್ತು ಗ್ರೀನ್ ಜೊತೆಗೂಡಿ 48 ರನ್ ಕಲೆ ಹಾಕಿದರು ಗ್ರೀನ್ ಔಟಾದ ಬಳಿಕ ಫೀಲ್ಡಿಗೆ ಬಂದ ವೀಸ್ ಬ್ಯಾಟಿಂಗ್ ನಲ್ಲಿ ಮಿಂಚಿದರು. ಒಟ್ಟಾರೆ ಕ್ರಿಕೆಟ್ ಶಿಶುವಾದ ನಮಿಬಿಯಾ ತಂಡವು ರೋಚಕ ಗೆಲುವಿನೊಂದಿಗೆ ಇತಿಹಾಸ ಸೃಷ್ಟಿಸಿದೆ.