ರಷ್ಯಾ ವಿರುದ್ದ ಮತ್ತಷ್ಟು ಹೊಸ ನಿರ್ಬಂಧಗಳನ್ನು ಅನುಮೋದಿಸಿದೆ ಎಂದು ಯುರೋಪಿಯನ್ ಯೂನಿಯನ್ ಘೋಷಿಸಿದೆ.
27 ರಾಷ್ಟ್ರಗಳ ಇಯು ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಫ್ರಾನ್ಸ್ ನಮ್ಮ ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಸಮಾಲೋಚಿಸಿ, ಉಕ್ರೇನ್ ವಿರುದ್ಧ ಆಕ್ರಮಣ ಖಂಡಿಸಿ ರಷ್ಯಾ ಮೂಲದ ಘಟಕಗಳು, ಉದ್ಯಮಿಗಳು ಮತ್ತು ರಷ್ಯಾದ ಆರ್ಥಿಕತೆಯ ಅನೇಕ ವಲಯಗಳನ್ನು ಗುರಿಯಾಗಿಸುವ ನಿರ್ಬಂಧಗಳ 4ನೇ ಪ್ಯಾಕೇಜ್ ಅನುಮೋದಿಸಿದೆ.
ಫ್ರೆಂಚ್ ಪ್ರೆಸಿಡೆನ್ಸಿ ತನ್ನ ಹೇಳಿಕೆಯಲ್ಲಿ, ವಿಶ್ವ ವ್ಯಾಪಾರ ಸಂಸ್ಥೆಗೆ ರಷ್ಯಾಗೆ ಹೆಚ್ಚು ಒಲವು ಹೊಂದಿರುವ ರಾಷ್ಟ್ರಕ್ಕೂ ಬಿಸಿ ಮುಟ್ಟಿಸಲಾಗಿದೆ. ವಿಶ್ವಸಂಸ್ಥೆ ಪ್ರವೇಶಕ್ಕಾಗಿ ಬೆಲಾರಸ್ ದೇಶದ ಅರ್ಜಿಯನ್ನು ಅಮಾನತುಗೊಳಿಸಲಾಗಿದೆ.
ನಿರ್ಬಂಧಿತ ಕ್ರಮಗಳು ಈಗ ಒಟ್ಟು 862 ವ್ಯಕ್ತಿಗಳು ಮತ್ತು 53 ಘಟಕಗಳಿಗೆ ಅನ್ವಯಿಸುತ್ತವೆ ಎಂದು ಶೃಂಗಸಭೆಯ ಬಳಿಕ ಯುವಿ ಆಯೋಗದ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ತಿಳಿಸಿದ್ದಾರೆ.
ರಷ್ಯಾ ವಿರುದ್ಧ ತೈಲ ಬಹಿಷ್ಕಾರವನ್ನು ಒಪ್ಪಿಕೊಳ್ಳುವ ಪ್ರಯತ್ನಗಳು ಸಂಕೀರ್ಣವಾಗಿವೆ. ಏಕೆಂದರೆ ಜರ್ಮನಿ ಮತ್ತು ಇಟಲಿ ಸೇರಿದಂತೆ ಕೆಲವು ದೇಶಗಳು ಇತರರಿಗಿಂತ ಹೆಚ್ಚು ಅವಲಂಬಿತವಾಗಿವೆ. ಪೋಲೆಂಡ್ ತನ್ನ ತೈಲದ 67 ಪ್ರತಿಶತವನ್ನು ರಷ್ಯಾದಿಂದ ಪಡೆಯುತ್ತದೆ ಆದರೆ ಐರ್ಲೆಂಡ್ ಕೇವಲ 5 ಪ್ರತಿಶತವನ್ನು ಪಡೆಯುತ್ತದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಡಿಸ್ಕೌಂಟ್ ದೊರೆತಲ್ಲಿ ಕಚ್ಛಾತೈಲ ಮತ್ತು ಇತರ ಸರಕುಗಳನ್ನು ಒದಗಿಸಲು ಮುಂದಾಗಿರುವ ರಷ್ಯಾದ ಪ್ರಸ್ತಾವನೆಯನ್ನು ಭಾರತ ಪರಿಶೀಲಿಸಲಿದೆ.
ರೂಪಾಯಿ ಕರೆನ್ಸಿಯಲ್ಲಿ ಹಣಕಾಸು ವರ್ಗಾವಣೆ ನಡೆಸಲೂ ರಷ್ಯಾ ಸಮ್ಮತಿಸಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್ ಮೇಲೆ ದಾಳಿನಡೆಸಿರುವ ರಷ್ಯಾ ವಿರುದ್ಧ ನಿರ್ಬಂಧಗಳನ್ನು ಹೇರಿವೆ. ಹೀಗಾಗಿ ಆರ್ಥಿಕ, ವಾಣಿಜ್ಯ ಬಿಕ್ಕಟ್ಟು ಎದುರಿಸುತ್ತಿರುವ ರಷ್ಯಾ ಭಾರತಕ್ಕೆ ಡಿಸ್ಕೌಂಟ್ ದರದಲ್ಲಿ ಕಚ್ಚಾ ತೈಲ ಸರಬರಾಜು ಮಾಡುವ ಪ್ರಸ್ತಾವ ಮಾಡಿದೆ. ಭಾರತ ತನ್ನ ಅಗತ್ಯದ ಶೇ.80 ಪಾಲನ್ನು ಆಮದು ಮೂಲಕ ಭರಿಸುತ್ತದೆ. ಅದನ್ನು ರಷ್ಯಾದಿಂದ ಇದುವರೆಗೆ ಕೇವಲ ಶೇ.2-3ರಷ್ಟು ಮಾತ್ರ ತನ್ನ ಖರೀದಿಸುತ್ತಿತ್ತು. ಆದರೆ ಜಾಗತಿಕ ಮಟ್ಟದಲ್ಲಿ ದರ ಏರಿಕೆ ಆಗಿರುವುದರಿಂದ ರಷ್ಯಾದಿಂದ ಡಿಸ್ಕೌಂಟ್ ದರದಲ್ಲಿ ಆಮದಿಗೆ ಪರಿಶೀಲನೆ ನಡೆಸಲಾಗುವುದು ಎಂದಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ರಾಜ್ಯದಲ್ಲಿ ಜಾತಿ ಹೆಸರಿನ ಮೇಲೆ ಇರುವ ಗ್ರಾಮಗಳ ಹೆಸರನ್ನು ರದ್ದುಪಡಿಸಿ ಪರ್ಯಾಯ ಹೆಸರನ್ನಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಅಶ್ವಾಸನೆ ನೀಡಿದ್ದಾರೆ.
ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಬಸನಗೌಡ ತುರವಿಹಾಳ್ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯದ ಹಲವೆಡೆ ವಡ್ಡರಹಟ್ಟಿ, ಕುರುಬರ ಹಟ್ಟಿ ಸೇರಿದಂತೆ ನಾನಾ ಬಗೆಯಲ್ಲಿ ಜಾತಿ ಸೂಚಕ ಹೆಸರಲ್ಲಿ ಗ್ರಾಮಗಳನ್ನು ನಾಮಕರಣ ಮಾಡಲಾಗಿದೆ. ಜಾತಿ ಸೂಚಕ ಹೆಸರನ್ನು ತೆಗೆದುಹಾಕಲು ಕ್ರಮ ಜರುಗಿಸಲಾಗುವುದು. ಈಗಾಗಲೇ ಸ್ಮಶಾನಗಳಿಗೆ ಜಾತಿ ಆಧಾರದ ಮೇಲೆ ಇದ್ದ ಹೆಸರನ್ನು ತೆಗೆಯಲಾಗಿದೆ ಎಂದು ಹೇಳಿದರು.
ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಬೇಕು. ಇದು ಒಂದೆರಡು ತಿಂಗಳಲ್ಲಿ ನಡೆಯುವ ಪ್ರಕ್ರಿಯೆಯಲ್ಲ. ಎಷ್ಟೇ ವೇಗವಾಗಿ ಕೆಲಸ ಮಾಡಿದರೂ ಕನಿಷ್ಠ 8-9 ತಿಂಗಳು ಕಾಲಾವಕಾಶ ಬೇಕು ಎಂದರು.
ಬಿಜೆಪಿ ಸದಸ್ಯ ಅಶೋಕ್ ನಾಯಕ್ ಮಾತನಾಡಿ, ಉಪಗ್ರಹಗಳ ಮೂಲಕ ನಕ್ಷೆ ತಯಾರಿಸಿ ಕಂದಾಯ ಗ್ರಾಮಗಳನ್ನು ಗುರುತಿಸಬಹುದು. ಇದಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ ಎಂದು ಸಲಹೆ ನೀಡಿದರು.
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಪಿ.ರಾಜೀವ್, ಕೇಂದ್ರ ಸರ್ಕಾರ ಸ್ವಾಮಿತ್ವ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯನ್ನು ಬಳಸಿಕೊಂಡು ಕಂದಾಯ ಗ್ರಾಮಗಳನ್ನು ಗುರುತಿಸಬಹುದು ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಶೋಕ್, ಸದಸ್ಯರು ನೀಡಿರುವ ಸಲಹೆಗಳನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿನ ಲಂಬಾಣಿ, ಗೊಲ್ಲ, ಬೋವಿ, ನಾಯಕ, ಸೋಲಿಗ ಸೇರಿದಂತೆ ದುರ್ಬಲ ಸಮುದಾಯಗಳ ಜನರ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿದೆ.
ರಾಜ್ಯದಲ್ಲಿ 3,499 ದಾಖಲೆ ರಹಿತ ಜನವಸತಿ ಪ್ರದೇಶಗಳ ಪೈಕಿ 632 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. 1441 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿ ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದೆ. ಇನ್ನುಳಿದವುಗಳಿಗೆ ಕಾಲಾವಕಾಶ ಬೇಕಾಗಿದೆ ಎಂದು ಮಾಹಿತಿ ನೀಡಿದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಸೋಮವಾರ (ಮಾರ್ಚ್ 14) 12 ರಿಂದ 14 ವರ್ಷ ವಯಸ್ಸಿನವರಿಗೆ HB COVID-19 ಲಸಿಕೆಯನ್ನು ಘೋಷಿಸಿದ್ದಾರೆ. ಇದರೊಂದಿಗೆ 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮುನ್ನೆಚ್ಚರಿಕೆ ಡೋಸ್ ಮಾರ್ಚ್ 16 ರಿಂದ ದೇಶಾದ್ಯಂತ ಪ್ರಾರಂಭವಾಗಲಿದೆ ಎಂದು ತಿಳಿಸಿದರು. ಮಕ್ಕಳು ಮತ್ತು ವೃದ್ಧರು, ಪೋಷಕರು ಲಸಿಕೆ ಹಾಕಿಸಿಕೊಳ್ಳುವಂತೆ ಆರೋಗ್ಯ ಸಚಿವರು ಮನವಿ ಮಾಡಿದರು.
ಕೋವಿಡ್-19 ಲಸಿಕೆಗೆ ಮತ್ತು ಮುನ್ನೆಚ್ಚರಿಕೆ ಡೋಸ್ ಗಳಿಗಾಗಿ ನೀವು ಹೇಗೆ ನೋಂದಾಯಿಸಿಕೊಳ್ಳಬಹುದು ಎಂಬ ಮಾಹಿತಿ ಹೀಗಿದೆ.
ಮೊದಲಿಗೆ, ಲಿಂಕ್ ಬಳಸಿ ಕೋ-ವಿನ್ ಪೋರ್ಟಲ್ ಅನ್ನು www.cowin.gov.in
ನಂತರ ಕೋವಿಡ್-19 ಲಸಿಕೆಗೆ ನೋಂದಾಯಿಸಲು ‘ರಿಜಿಸ್ಟರ್/ಸೈನ್ ಇನ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ನೀವು ಈಗಾಗಲೇ ಪೋರ್ಟಲ್ ನಲ್ಲಿ ನೋಂದಾಯಿತ ಸದಸ್ಯರಾಗಿದ್ದರೆ, ಹೊಸ ಖಾತೆಯನ್ನು ರಚಿಸಲು ನಿಮ್ಮ ರುಜುವಾತುಗಳನ್ನು ಬಳಸಿ ಲಾಗ್ ಇನ್ ಮಾಡಿ.
ಮಕ್ಕಳಿಗೆ, ನೀವು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮುಂತಾದ ಕೆಲವು ದಾಖಲೆಗಳನ್ನು ಅಪ್ ಲೋಡ್ ಮಾಡಲು ಕೇಳುತ್ತೀರಿ. ಅವರು ಅದನ್ನು ಹೊಂದಿಲ್ಲದಿದ್ದರೆ ಮಕ್ಕಳು ತಮ್ಮ ಶಾಲಾ ಐಡಿ ಕಾರ್ಡ್ ಗಳನ್ನು ನೋಂದಾಯಿಸಲು ಸಹ ಬಳಸಬಹುದು.
ವಯಸ್ಸಾದವರಿಗೆ ಸಂಬಂಧಿಸಿದಂತೆ, ಅವರ ಅರ್ಹತೆಯು ಕೋ-ವಿನ್ ವ್ಯವಸ್ಥೆಯಲ್ಲಿ ದಾಖಲಿಸಲಾದ 2 ನೇ ಡೋಸ್ ನ ಆಡಳಿತದ ದಿನಾಂಕವನ್ನು ಆಧರಿಸಿರುತ್ತದೆ.
ವೃದ್ಧರ ಪರಿಶೀಲನೆಯನ್ನು ಆಧಾರ್ ಬಳಸಿ ಆದ್ಯತೆಯ ಮೇರೆಗೆ ಮಾಡಲಾಗುತ್ತದೆ.
ಇದಲ್ಲದೆ, ಅವರು ಪಾಸ್ ಪೋರ್ಟ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಎನ್ ಪಿಆರ್ ಅಡಿಯಲ್ಲಿ ಆರ್ ಜಿಐ ನೀಡಿದ ಸ್ಮಾರ್ಟ್ ಕಾರ್ಡ್ ಅಥವಾ ಛಾಯಾಚಿತ್ರದೊಂದಿಗೆ ಪಿಂಚಣಿ ದಾಖಲೆಗಳನ್ನು ಸಹ ಬಳಸಬಹುದು.
ನಂತರ ನಿಮ್ಮ ಸಂಖ್ಯೆಗೆ ಒಟಿಪಿ ಯನ್ನು ಕಳುಹಿಸಲಾಗುತ್ತದೆ. ನೀವು ಪರಿಶೀಲಿಸಬೇಕಾಗುತ್ತದೆ.
ಪರಿಶೀಲನೆಯ ನಂತರ ನೀವು ಸ್ಲಾಟ್ ಅನ್ನು ಬುಕ್ ಮಾಡಬಹುದು. ಅದಕ್ಕಾಗಿ ನಿಮ್ಮ ಸ್ಥಳ, ಪಿನ್‌ಕೋಡ್ ಇತ್ಯಾದಿಗಳನ್ನು ನಮೂದಿಸಿ ಮತ್ತು ಬುಕ್ ಅಪಾಯಿಂಟ್‌ಮೆಂಟ್ ಅನ್ನು ಟ್ಯಾಪ್ ಮಾಡಿ/.
Cowin ಪೋರ್ಟಲ್‌ನಲ್ಲಿ ಒಂದೇ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು 4 ಜನರನ್ನು ನೋಂದಾಯಿಸಿಕೊಳ್ಳಬಹುದು ಎಂಬುದನ್ನು ನೆನಪಿಡಿ.
ಅಲ್ಲದೆ, ನೀವು ಮುನ್ನೆಚ್ಚರಿಕೆಯ ಡೋಸ್‌ಗೆ ಅರ್ಹರಾಗಿದ್ದರೆ, ಅದಕ್ಕೆ ಅಪಾಯಿಂಟ್‌ಮೆಂಟ್ ಬುಕ್ ಮಾಡುವ ಆಯ್ಕೆಯನ್ನು ಸಿಸ್ಟಮ್ ನಿಮಗೆ ತೋರಿಸುತ್ತದೆ. ಕೇಳಿದ ವಿವರಗಳನ್ನು ಭರ್ತಿ ಮಾಡಿ ಮತ್ತು ಅಪಾಯಿಂಟ್ಮೆಂಟ್ ಮಾಡಿ.
ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್‌ನಲ್ಲಿ ವಿವರಗಳನ್ನು ನಿಮಗೆ ಕಳುಹಿಸಲಾಗುತ್ತದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
20ನೇ ದಿನಕ್ಕೆ ಕಾಲಿಟ್ಟಿರುವ ರಷ್ಯಾ ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್ ಗೆ ಆಯುಧಗಳು, ಆಹಾರ ಮತ್ತು ಹಣದ ರೂಪದಲ್ಲಿ ಬೆಂಬಲ ನೀಡುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ತಿಳಿಸಿದ್ದಾರೆ.
ಉಕ್ರೇನಿನ ಮೇಲೆ ರಷ್ಯಾ ದಾಳಿ ತಾರಕಕ್ಕೆ ಏರುತ್ತಿದ್ದು, ಈ ಬಗ್ಗೆ ಅನೇಕ ರಾಷ್ಟ್ರಗಳು ವಿರೋಧವನ್ನು ವ್ಯಕ್ತಪಡಿಸಿವೆ. ಅದರಲ್ಲೂ ಪ್ರಮುಖವಾಗಿ ಅಮೆರಿಕ ಮೊದಲನಿಂದಲೂ ವಿರೋಧವನ್ನು ವ್ಯಕ್ತಪಡಿಸುತ್ತಿದೆ.
ಈ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಂದು ಟ್ವೀಟ್ ಮಾಡಿ, ಉಕ್ರೇನಿನ ಜನರು ಯುದ್ಧದಿಂದ ಹಾನಿಯಾದ ಪ್ರದೇಶಗಳನ್ನು ತೊರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿರಾಶ್ರಿತರನ್ನು ನಾವು ಸ್ವಾಗತಿಸಲು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು.
ರಷ್ಯಾವನ್ನು ಎದುರಿಸಲು ಉಕ್ರೇನ್ನ ಬಳಿ ಸಾಕಷ್ಟು ಶಸ್ತ್ರಗಳಿವೆಯೇ ಎಂಬುದನ್ನು ನಾವು ಖಚಿತ ಪಡಿಸಿಕೊಳ್ಳುತ್ತಿದ್ದೇವೆ. ಜೊತೆಗೆ ಅಲ್ಲಿನ ನಾಗರಿಕರ ಜೀವವನ್ನು ಉಳಿಸಲು ಹಣ ಮತ್ತು ಆಹಾರವನ್ನು ಕಳಿಸುತ್ತೇವೆ. ಅಲ್ಲದೆ ಉಕ್ರೇನ್ ನಾ ನಿರಾಶ್ರಿತರನ್ನು ನಾವು ಮುಕ್ತವಾಗಿ ಸ್ವಾಗತಿಸುತ್ತೇವೆ ಎಂದು ಟ್ವೀಟ್ ಮೂಲಕ ಸಂದೇಶ ರವಾನಿಸಿದ್ದಾರೆ.
ನಿನ್ನೆ ಉಕ್ರೇನ್ ವಿರುದ್ಧ ದಾಳಿ ನಡೆಸುತ್ತಿರುವ ರಷ್ಯಾ ತನ್ನ ಯುದ್ಧವನ್ನು ಮುಂದುವರಿಸಲು ಡ್ರೋನ್ ಗಳು ಸೇರಿದಂತೆ ಮಿಲಿಟರಿ ನೆರವು ನೀಡುವಂತೆ ರಷ್ಯಾ ಚೀನಾವನ್ನು ಕೇಳಿದೆ ಎಂದು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಕರ್ನಾಟಕ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿರುವ ಹೈಕೋರ್ಟ್, ಹಿಜಾಬ್ ಧಾರಣೆ ಇಸ್ಲಾಂ ಧರ್ಮದ ಧಾರ್ಮಿಕ ಅತ್ಯಗತ್ಯ ಆಚರಣೆಯಲ್ಲ ಎಂದು ಮಹತ್ವದ ಆದೇಶವನ್ನು ನೀಡಿದೆ.
ತರಗತಿಗೆ ಹಿಜಾಬ್ ಧರಿಸಿ ಬರದಂತೆ ನಿರ್ಬಂಧಿಸಿರುವ ಕಾಲೇಜಿನ ಕ್ರಮ ಪ್ರಶ್ನಿಸಿ ಹಾಗೂ ಸಮವಸ್ತ್ರ ಸಂಹಿತೆ ಜಾರಿ ಸಂಬಂಧ ಸರ್ಕಾರ ಹೊರಡಿಸಿರುವ ಆದೇಶ ರದ್ದುಕೋರಿ ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ರೇಷಮ್ ಇನ್ನಿತರ ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರು ಸಲ್ಲಿಸಿದ್ದ ಅರ್ಜಿಗಳನ್ನು ಪೂರ್ಣಪೀಠ ವಜಾಗೊಳಿಸಿದೆ.
2022ರ ಜನವರಿ 31 ಮತ್ತು ನಂತರದ ದಿನಗಳಲ್ಲಿ ವಿದ್ಯಾರ್ಥಿನಿಯರು ಸಲ್ಲಿಸಿರುವ 7 ರಿಟ್ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತ್ತು. 11 ದಿನಗಳ ಕಾಲ ವಿಚಾರಣೆ ನಡೆಸಿದ್ದ ಪೀಠ, ಫೆಬ್ರವರಿ 25ರಂದು ತೀರ್ಪು ಕಾಯ್ದಿರಿಸಿರುವುದಾಗಿ ತಿಳಿಸಿತ್ತು.
ಇಂದು ಬೆಳಿಗ್ಗೆ ನ್ಯಾಯಪೀಠ ತೀರ್ಪು ನೀಡಿದೆ. ಪ್ರಕರಣದ ಸ್ಮೂಕ್ಷತೆ ಹಿನ್ನೆಲೆಯಲ್ಲಿ 4 ಪ್ರಶ್ನೆಗಳನ್ನು ರಚಿಸಿಕೊಂಡು ಅವುಗಳಿಗೆ ಉತ್ತರಿಸಲಾಗಿದೆ. ಆದರಂತೆ 4 ಪ್ರಶ್ನೆಗಳಲ್ಲೂ ಸರ್ಕಾರದ ವಾದ ಎತ್ತಿಹಿಡಿದಿದೆ. ಅರ್ಜಿದಾರರ ವಾದಗಳಲ್ಲಿ ಯಾವುದೇ ಮೆರಿಟ್ ಇಲ್ಲ ಎಂದು ವಜಾಗೊಳಿಸಿದೆ.
ಮುಖ್ಯವಾಗಿ ಸಮವಸ್ತ್ರ ಕಡ್ಡಾಯಗೊಳಿಸಿರುವ ಆದೇಶದಿಂದ ಮೂಲಭೂತ ಹಕ್ಕು ಉಲ್ಲಂಘನೆಯಾಗಿಲ್ಲ. ಸಂವಿಧಾನಿಕ ಹಕ್ಕುಗಳ ಮೊಟಕಾಗಿಲ್ಲ. ಅರ್ಜಿದಾರರು ಸರ್ಕಾರದ ನಿಯಮವನ್ನು ಪಾಲಿಸಬೇಕು ಎಂದು ಆದೇಶಿಸಲಾಗಿದೆ.
ಹಿಜಾಬ್ ನಿರ್ಬಂಧಿಸಿದ ನಂತರ ರಾಜ್ಯದಲ್ಲಿ ಸಾಕಷ್ಟು ಪ್ರತಿಭಟನೆ, ಗಲಭೆಗಳು ಉಂಟಾಗಿದ್ದವು. ಪರಿಣಾಮ ಶಾಲಾ-ಕಾಲೇಜುಗಳ ವಾತಾವರಣ ಹದಗೆಟ್ಟಿದ್ದರಿಂದ ನ್ಯಾಯಾಲಯ ಫೆ.10ರಂದು ಪ್ರಕರಣದಲ್ಲಿ ಮಧ್ಯಂತರ ಆದೇಶ ನೀಡಿತ್ತು. ಅರ್ಜಿಗಳನ್ನು ಇತ್ಯರ್ಥಪಡಿಸುವವರೆಗೂ ಸಮವಸ್ತ್ರ ಸಂಹಿತೆ ಜಾರಿ ಮಾಡಿರುವ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಚಿಹ್ನೆ ಹೊಂದಿರುವ ಉಡುಪು ಧರಿಸಿ ಹೋಗಬಾರದು ಎಂದು ಸ್ಪಷ್ಟಪಡಿಸಿತ್ತು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ನಾಳೆ ಶಾಲೆಯಲ್ಲಿ ಸಮವಸ್ತ್ರ ವಿವಾದ ಕುರಿತು ರಾಜ್ಯ ಹೈಕೋರ್ಟ್ ತೀರ್ಪು ನೀಡಲಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮಾರ್ಚ್ 15ರಂದು ಜಿಲ್ಲೆಯ ಎಲ್ಲಾ ಶಾಲೆ-ಕಾಲೇಜುಗಳಿಗೆ ಒಂದು ದಿನದ ಮಟ್ಟಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ತೀರ್ಪಿನ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಸಮವಸ್ತ್ರ ವಿವಾದ ವಿಚಾರವಾಗಿ ಸಾರ್ವಜನಿಕ ಸ್ಥಳಗಳಲ್ಲಿ 5 ಅಥವಾ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಕುಂತಿನ ವಿಚಾರವಾಗಿ ಯಾವುದೇ ರೀತಿಯ ಸಂಭ್ರಮಾಚರಣೆಯ ಅಥವಾ ಪ್ರತಿಭಟನೆಯನ್ನು ನಡೆಸುವಂತಿಲ್ಲ. ಶಾಲಾ ಕಾಲೇಜು ಆವರಣದ 200 ಮೀಟರ್ ವ್ಯಾಪ್ತಿಯಲ್ಲಿ ಶಾಲಾ-ಕಾಲೇಜು ಸಿಬ್ಬಂದಿ, ಆಯಾ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಬೇರೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಗುಂಪುಗೂಡುವುದನ್ನು ನಿರ್ಮಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಹೈಕೋರ್ಟ್ ನೀಡುವ ತೀರ್ಪಿಗೆ ಜನರು ಬದ್ಧರಾಗಿದ್ದು, ಕಾನೂನು ಕಟ್ಟಿಕೊಳ್ಳದೆ ಶಾಂತಿ-ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು. ಯಾವುದೇ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶವಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಮತ್ತೆ ಮಿಂಚಿದ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ತಮ್ಮ ಅರ್ಧ ದಶಕಗಳಿಂದ ಶ್ರೀಲಂಕಾ ತಂಡಕ್ಕೆ ಸೋಲುಣಿಸಿದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಶ್ರೀಲಂಕಾ ಎದುರು ಪಿಂಕ್ ಬಾಲ್ ಟೆಸ್ಟ್ ನಲ್ಲಿ ಭಾರತ ತಂಡವು ಮೊದಲ ಇನಿಂಗ್ಸ್ ನಲ್ಲಿ 143 ರನ್ ಗಳ ಮುನ್ನಡೆ ಗಳಿಸಿತು. ಎರಡನೇ ಇನ್ನಿಂಗ್ಸ್ ನಲ್ಲಿ ಶ್ರೇಯಸ್ ಮತ್ತು ರಿಷಬ್ ಪಂತ್ ಮಿಂಚಿನ ಅರ್ಧಶತಕಗಳ ಬಲದಿಂದ 68.5 ಓವರ್ ಗಳಲ್ಲಿ 9 ವಿಕೆಟ್ ಗಳಿಗೆ 303 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
ಮೊದಲ ಇನಿಂಗ್ಸ್ ನಲ್ಲಿ ಐದು ವಿಕೆಟ್ ಗಳಿಸಿ ಮಿಂಚಿರುವ ಬೂಮ್ರಾ ಎರಡನೇ ಇನ್ನಿಂಗ್ಸ್ ನಲ್ಲಿಯೂ 1 ವಿಕೆಟ್ ಗಳಿಸಿದರು. ಮೊದಲ ದಿನವಾದ ಶನಿವಾರ ಸ್ಪಿನ್ ಬೌಲರ್ ಗಳ ಪಿಚ್ ನಲ್ಲಿ ಎರಡನೇ ದಿನದಾಟದಲ್ಲಿ ಭಾರತದ ಬ್ಯಾಟರ್ ಗಳೂ ಧೈರ್ಯದಿಂದ ಆಡಿದರು.
ಮೊದಲ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ ತಂಡವು 6 ವಿಕೆಟ್ ಗಳಿಗೆ 86 ರನ್ ಗಳಿಸಿತ್ತು. ಆದರೆ ಭಾನುವಾರ ಮಧ್ಯಾಹ್ನದ ಬಿಸಿಲಿನಲ್ಲಿ ಶ್ರೀಲಂಕಾ ತಂಡದ ಉಳಿದ ಬ್ಯಾಟರ್ ಗಳು ಹೆಚ್ಚು ಪ್ರತಿರೋಧ ತೋರಲಿಲ್ಲ. ಕೇವಲ 5.5 ಓವರ್ ಗಳಲ್ಲಿ 23 ಓವರ್ ಗಳನ್ನು ಸೇರಿಸುವಲ್ಲಿ ಮಾತ್ರ ಶ್ರೀಲಂಕಾದ ಬ್ಯಾಟರ್ ಗಳು ಯಶಸ್ವಿಯಾದರು.
ಇದರಿಂದಾಗಿ ಮೊದಲ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ ತಂಡವು 35.5 ಓವರ್ ಗಳಲ್ಲಿ 109 ರನ್ ಗಳಿಸಿತು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಭಾರತದ 6ಮಂದಿ ಬಾಕ್ಸರ್ ಗಳು ಜೋರ್ಡಾನ್ ನ ಅಮ್ಮಾನ್ ನಲ್ಲಿ ನಡೆಯುತ್ತಿರುವ ಏಷಿಯನ್ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ ವಿವಿಧ ವಿಭಾಗಗಳಲ್ಲಿ ನಿನ್ನೆ ಚಿನ್ನದ ಪದಕ ಗಳಿಸಿಕೊಂಡಿದ್ದಾರೆ.
ಹಿಸ್ಸಾರ್ ನ ವಿನಿ ಮಹಿಳೆಯರ 50 ಕೆಜಿ ಫ್ಲೈವೇಟ್ ವಿಭಾಗದ ಫೈನಲ್ ನಲ್ಲಿ ಕಜಕಸ್ತಾನದ ಕರೀನಾ ತೊಕುಬೆ ವಿರುದ್ಧ ಜಯಗಳಿಸಿ ಕೊಂಡಿದ್ದಾರೆ. ಪ್ರಥಮ ಸುತ್ತಿನಲ್ಲಿ ಅಮೋಘ ಆಟವಾಡಿದ ಭಾರತ ಬಾಕ್ಸರ್ ಗೆ ಎರಡನೇ ಸುತ್ತಿನಲ್ಲಿ ಎದುರಾಳಿ ತಿರುಗೇಟು ನೀಡಿದ್ದಾರೆ. ಆದ್ದರಿಂದ ಅಂತಿಮ ಸುತ್ತು ಕುತೂಹಲ ಮೂಡಿಸಿತು. ಭರ್ಜರಿ ಪಂಚ್ ಗಳನ್ನು ಪ್ರದರ್ಶಿಸಿದ ವೈಭವಗಳು ಜಿದ್ದಾಜಿದ್ದಿನ ಹಣಾಹಣಿ ನಡೆಸಿದ್ದಾರೆ. ಜಯ ವಿನಿ ಅವರ ಪಾಲಾಯಿತು.
52 ಕೆಜಿ ವಿಭಾಗದಲ್ಲಿ ಯಕ್ಷಿಕ ಕೆಚ್ಚ ದೆಯ ಆಟದ ಮೂಲಕ ಉಜ್ಬೇಕಿಸ್ತಾನದ ರಖೀಮಾ ಬೆಕ್ನಿಯಜೋವ ಎದುರು ಜಯ ಗಳಿಸಿಕೊಂಡಿದ್ದಾರೆ. ಪಾಣಿಪತ್ ನ ಯಕ್ಷಿಕ ಪ್ರಥಮ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರೂ ಅಂತರ ಚೇತರಿಸಿಕೊಂಡು 4-1 ರಲ್ಲಿ ಜಯ ಗಳಿಸಿದ್ದಾರೆ.
57 ಕೆಜಿ ವಿಭಾಗದಲ್ಲಿ ಜೋರ್ಡಾನ್ ನ ಆಯಾ ಸುವಿಂದೆ ವಿರುದ್ಧ ವಿಧಿ ಗೆಲುವು ಸಾಧಿಸಿದರು. 60 ಕೆಜಿ ವಿಭಾಗದಲ್ಲಿ ಕಳೆದ ಬಾರಿ ಚಾಂಪಿಯನ್ ಆಗಿದ್ದ ನಿಕಿತಾ ಚಾಂದ್ ಕಜಕಸ್ತಾನದ ಉಲ್ದಾನ ತೌಬೆ ಎದುರು ಜಯ ಗಳಿಸಿ ಮತ್ತೊಮ್ಮೆ ಚಿನ್ನ ಪದಕ ಗೆದ್ದುಕೊಂಡಿದ್ದಾರೆ.
ಕೆಜಿ ವಿಭಾಗದ ಚಿನ್ನ ಸೃಷ್ಟಿ ಸಾಠೆ ಅವರ ಪಾಲಾಯಿತು. ಕಜಕಿಸ್ತಾನದ ನುರ್ಸುಲು ಸುಯೆಯನಲಿ ವಿರುದ್ಧ ಜಯ ಸಾಧಿಸಿ ಕೊಂಡಿದ್ದಾರೆ. 75 ಕೆಜಿ ವಿಭಾಗದಲ್ಲಿ ರುದ್ರಿಕಾ 5-0 ಯಿಂದ ಕಜಕಸ್ತಾನದ ಶುಗ್ಲಿಯಾ ನೀಲಿ ಬೆ ಅವರನ್ನು ಮಣಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
3 ದಿನಗಳ ಹಿಂದೆ ಗೆಳತಿಯ ಮನೆಗೆ ಹೋಗಿದ್ದೆ. ಅಲ್ಲಿ ನನ್ನ ಪರಿಚಯಸ್ತ ಸಾವಿತ್ರಿ ಆಂಟಿ ಜೊತೆ ಪಕ್ಕದ ಮನೆಯ ಆಂಟಿಯೊಬ್ಬರು ಮಾತನಾಡುತ್ತಿದ್ದರು. ಅಪರೂಪಕ್ಕೊಮ್ಮೆ ಗೆಳತಿಯರು ಸಿಕ್ಕರೆ ಮಾತಿಗೆ ಏನು ಭಾರವೇ? ಊಟ ತಿಂಡಿ ಮನೆ ಕೆಲಸದ ವಿಷಯ ಮಾತನಾಡುತ್ತಾ, ಮಾತು ಮಕ್ಕಳೆಡೆಗೆ ತಿರುಗಿತು. ಏನ್ರಿ ನಿಮ್ಮ ಮಗ ಕಂಪನಿ ಸೆಕ್ರೆಟರಿ ಆಗಿ ಆಯ್ಕೆಯಾಗಿ ಕೆಲಸಕ್ಕೆ ಸೇರಿದ್ದು ನೆನಪಾಯಿತು. ಮಗನಿಗೆ ಒಳ್ಳೆಯ ಕೆಲಸ ಸಿಕ್ಕಿದೆ. ಸ್ಯಾಲರಿ ಯು ತುಂಬಾ ಚೆನ್ನಾಗಿಯೇ ಬರ್ತಾ ಇದೆ ಏನೋ. ನೀವಂತೂ ಮಸ್ತ್ ಮಜಾ ಮಾಡಬಹುದು ಎಂದರು. ಆಗ ಸಾವಿತ್ರಿ ಆಂಟಿ ಬೇಸರದಿಂದ ಮಗನಿಗೆ ಒಳ್ಳೆಯ ಸಂಬಳ ಬರುತ್ತಿದೆ ನಿಜ. ಆದರೆ ಅವನ ಸಂಸಾರದ್ದೇ ಖರ್ಚು ಜಾಸ್ತಿ ಇರುತ್ತದೆ. ಹಾಗಾಗಿ ನಾವು ಕೇಳೋಕೆ ಹೋಗಲ್ಲ. ಅವನಿಗೆ ಕೊಡಬೇಕು ಎಂದು ಎನಿಸಿದರೂ ಹಲವಾರು ಖರ್ಚುಗಳ ಸರಮಾಲೆ. ಅವನದ್ದು ಅವನಿಗೆ, ನಮ್ಮದು ನಮಗೆ..ಎಂದರು. ಅವರು ಹೇಳಿದ್ದು ನೋಡಿ ಅಯ್ಯೋ ಪಾಪ ಎನಿಸಿತು…
ಸುಮ್ಮನೆ ಯೋಚಿಸಿ ನೋಡಿದರೆ, ಸುಮಾರು ಎಲ್ಲಾ ಮಧ್ಯಮ ವರ್ಗದವರ ಕಥೆ ಇದೇ ಆಗಿರುತ್ತದೆ. ಆರಕ್ಕೆ ಏರದ ಮೂರಕ್ಕಿಳಿಯದ ಸಂಸಾರದಲ್ಲಿ ಜೀವನ ಸಾಗಿಸುತ್ತಾರೆ. ಇರುವ ಒಂದೋ ಎರಡೋ ಮಕ್ಕಳನ್ನು ಪ್ರೀತಿಯಿಂದ ಸಾಕಿ, ಯಾವುದೇ ಕಷ್ಟಕೋಟಲೆಗಳು ಗೊತ್ತಾಗದಂತೆ ಮಾಡುತ್ತಾರೆ. ಮಕ್ಕಳು ಚೆನ್ನಾಗಿ ಬೆಳೆಯಲಿ , ಚೆನ್ನಾಗಿ ಓದಲಿ ಎಂದು ಕಷ್ಟವಾದರೂ ಅವರ ಎಲ್ಲಾ ಅಗತ್ಯತೆಗಳನ್ನು ಪೂರೈಸುತ್ತಾರೆ.
ತಾವು ಹತ್ತು ರೂಪಾಯಿ ಖರ್ಚು ಮಾಡುವಾಗ ಹತ್ತು ಸಲ ಯೋಚಿಸುವವರು ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ. ಪ್ರತಿ ಪೈಸೆ ಪೈಸೆಗೂ ಲೆಕ್ಕಹಾಕಿ ಜೀವನ ಸಾಗಿಸುವ ಪಾಲಕರು ಸಾವಿರಾರು ಮಂದಿ.
10ನೇ ತರಗತಿ ಮುಗಿಯುತ್ತಿದ್ದಂತೆ ತಮ್ಮ ಮಕ್ಕಳನ್ನು ಒಳ್ಳೆಯ ಕಾಲೇಜಿಗೆ ಸೇರಿಸಲು ಹರಸಾಹಸ ಪಡುತ್ತಾರೆ. ಡೊನೇಷನ್ ಸೀಟು ಸಿಕ್ಕರಂತೂ ಮುಗಿಯಿತು . ಯಾವ ಬ್ಯಾಂಕ್ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡುತ್ತೆ ಅಂತ ಕುತ್ತಿಗೆ ಉದ್ದ ಮಾಡಿಕೊಂಡು ಹುಡುಕುತ್ತಾರೆ. ಮಗ ಅಥವಾ ಮಗಳು ಕಾಲೇಜಿಗೆ ಸೇರಿ ಓದು ಮುಗಿಸುವಷ್ಟರಲ್ಲಿ ಪ್ರತಿ ಸೆಮಿಸ್ಟರ್ ಫೀಸ್ ಕಟ್ಟುತ್ತಾ ನಿಟ್ಟುಸಿರು ಬಿಡುತ್ತಾರೆ. ಇನ್ನು ಒಂದೇ ವರ್ಷ,, ಇನ್ನು ಆರೇ ತಿಂಗಳು ಎಂದು ಮಕ್ಕಳು ಕೆಲಸಕ್ಕೆ ಸೇರುವುದನ್ನು ನೋಡಬೇಕು ಎಂಬ ಮಹಾದಾಸೆಯನ್ನು ಮನಸ್ಸಿನಲ್ಲಿಯೇ ಬಚ್ಚಿಡುತ್ತಾರೆ. ಮಗ ಅಥವಾ ಮಗಳು ಓದು ಮುಗಿಸುವಷ್ಟರಲ್ಲಿ ಎಷ್ಟು ಖರ್ಚು ಬರಬಹುದು ಎಂದು ಇದ್ದ ಒಂದೇ ಒಂದು ಚಿನ್ನದ ಸರವನ್ನೂ ಗಿರವಿ ಇಡುತ್ತಾ ಹೇಗ್ಹೇಗೋ ಜೀವನ ನಿಭಾಯಿಸುವವರಿಗೆ ಮಕ್ಕಳಿಗೆ ಒಂದು ನೌಕರಿ ಅಂತ ಆದ ಮೇಲೆ ಸರಿಯಾಗಿ ಉಸಿರಾಡುತ್ತಾರೆ.
ಮಕ್ಕಳಿಗೆ ಕೆಲಸ ಸಿಕ್ಕ ಒಂದೆರಡು ವರ್ಷದ ಸಂಬಳ ಬ್ಯಾಂಕ್ ಲೋನ್ ಕಟ್ಟುವುದಕ್ಕಾಯ್ತು. ಹೆಣ್ಣು ಮಕ್ಕಳಾದರೆ ಬಂಗಾರ, ಒಂದಷ್ಟು ಒಳ್ಳೆದಾಯಿತು. ಗಂಡುಮಕ್ಕಳಿಗೊ ಮುಂದಿನ ಭವಿಷ್ಯದ ಚಿಂತೆ. ಮದುವೆಯಾದರಂತೂ ಮುಗೀತು. ಅಗತ್ಯಕ್ಕೆ ತಕ್ಕಂತೆ ಬೈಕ್, ಫ್ರಿಜ್, ವಾಷಿಂಗ್ ಮಷೀನ್ ಮುಂತಾದ ಸಾಮಾನುಗಳನ್ನು ಖರೀದಿಸುವುದು. ಈಗಿನ ಆಧುನಿಕ ಕಾಲದ ಅವಶ್ಯಕತೆಗಳಂತೂ ಹೆತ್ತವರಿಗಿಂತ ಭಿನ್ನ. ಪ್ರೆಸ್ಟೀಜ್, ಸ್ಟೇಟಸ್, ಲೆವೆಲ್ ಎನ್ನುವ ಜನ. ಮನೆ ಬಾಡಿಗೆಯದಾದರೂ ಎಲ್ಲಾ ವ್ಯವಸ್ಥೆಗಳು ಅಚ್ಚುಕಟ್ಟಾಗಿಯೇ ಇರಬೇಕು. ಒಳ್ಳೆಯ ಕಂಪನಿ ಲ್ಯಾಪ್ಟಾಪ್, ಮೊಬೈಲ್ ,ಬೈಕ್ ಇರಲೇಬೇಕು.
ಕಾರು, ಸ್ವಂತ ಮನೆ ಮಕ್ಕಳಿಗೆ ಒಳ್ಳೆಯ ಕಾಲೇಜಿನಲ್ಲಿ ವಿದ್ಯಾಭ್ಯಾಸ, ಕುಟುಂಬದವರೊಂದಿಗೆ ವಿದೇಶ ಪ್ರವಾಸ, ಇವೆಲ್ಲವೂ ಮುಂದಿನ ಬೇಡಿಕೆಗಳು. ತನ್ನನ್ನು ಆ ಮಟ್ಟಕ್ಕೆ ಬೆಳೆಸುವಲ್ಲಿ ಹೆತ್ತವರು ಪಟ್ಟ ಕಷ್ಟದ ಅರಿವಿದ್ದರೂ ಅವನಿಗೆ ತನ್ನದೇ ಆದ ಏನೇನೋ ಹೊಸ ಹೊಸ ಖರ್ಚುಗಳು. ಮದುವೆ ವಾರ್ಷಿಕೋತ್ಸವ ಕ್ಕೆ ಒಂದು ಪಾರ್ಟಿ, ಮಕ್ಕಳ ಹುಟ್ಟುಹಬ್ಬಕ್ಕೊಂದು ಪಾರ್ಟಿ, ಕೆಲಸದಲ್ಲಿ ಪ್ರಮೋಷನ್ ಸಿಕ್ಕರೆ ಒಂದು ಪಾರ್ಟಿ, ಹೀಗೆ ಖರ್ಚುಗಳ ಸರಮಾಲೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇರುತ್ತದೆ. ಒಟ್ಟಿನಲ್ಲಿ ಪಾಲಕರಿಗೆ ಒಂದಿಷ್ಟು ಕೊಡಬೇಕು. ಏನಾದರೂ ಮಾಡಬೇಕು ಎನ್ನುವ ಕನಸು ಕನಸಾಗಿಯೇ ಉಳಿಯುತ್ತದೆ.
ಹೆತ್ತವರಿಗೆಂದು ಮೊದಲ ಸಂಬಳದಲ್ಲಿ ಶರ್ಟು, ಸೀರೆ ತಂದುಕೊಟ್ಟಿದ್ದೇ ಬಂತು. ಮಗನ ಸಂಸಾರದಷ್ಟೇ ದೊಡ್ಡದು ಅವನ ಖರ್ಚುಗಳು ಎಂದುಕೊಂಡು ಥಳ-ಥಳ ಹೊಳೆಯುವ ಟೈಲ್ಸ್ ನೆಲ, ಪಳಪಳ ಹೊಳೆಯುವ ಕಾರು, ಫ್ರಿಡ್ಜ್ ನೋಡುತ್ತಾ ಆನಂದ ಪಡುತ್ತಾ ತಮ್ಮ ಅದೇ ಲಟೂರಿ ಮನೆಗೆ ಹಿಂದಿರುಗುವವರಿಗೆ ಏನನ್ನೋ ಕಳೆದುಕೊಂಡ ಭಾವ. ಮಗನಿಗೆ ಕೆಲಸ ಸಿಕ್ಕಿದ ತಕ್ಷಣ ಕರಿಮಣಿ ಸರ ಕಟ್ಟಿಕೊಳ್ಳಬೇಕು. ಮನೆಯಾರಿಗಾದರೂ ಒಂದಿಷ್ಟು ಹಣ ಕೇಳಬೇಕು ಎನ್ನುವ ಬಯಕೆಗಳೆಲ್ಲಾ ಮಾತಾಗಿ ಬಾರದೆ, ಗಂಟಲಲ್ಲೇ ಮೌನ ತಾಳುತ್ತವೆ. ಡಿಸ್ಕೌಂಟ್ ದರದಲ್ಲಿ ತೆಗೆದುಕೊಂಡ ಸೀರೆ ಉಡುತ್ತಾ, ಹರಿದ ಚಪ್ಪಲಿಗಳನ್ನು ಹಾಕಿಕೊಂಡು ಕಾಲೆಳೆಯುತ್ತ, ಪೆನ್ಶನ್ ನಲ್ಲಿ ಬಿಪಿ, ಡಯಾಬಿಟಿಸ್ ಮಾತ್ರೆಗಳಿಗೆ ಸಾಕಾಗುತ್ತಾ ಎಂದು ಲೆಕ್ಕಹಾಕುತ್ತಾ , ಎಲ್ಐಸಿ ಹಣದಲ್ಲಿಯೇ ಜೀವನ ಸಾಗಿಸುತ್ತಾ ಬಡತನ, ಕಂಜೂಸಿತನವನ್ನೇ ಅಭ್ಯಾಸ ಮಾಡಿಕೊಂಡು ಬದುಕಿನ ಮುಸ್ಸಂಜೆಯಲ್ಲಿ ಕಳೆಯುವ ಹೆತ್ತವರ ಕಷ್ಟಕ್ಕೆ ಕೊನೆಯಿಲ್ಲವೇ?
ಎಲ್ಲರೂ ಹೀಗೇ ಇರುತ್ತಾರೆ ಎಂದಲ್ಲ. ಕೆಲವು ಅಪವಾದಗಳು ಇರಬಹುದು. ಹಲವಾರು ಪಾಲಕರ ಪರಿಸ್ಥಿತಿ ಹೀಗೆಯೇ ಆಗಿರುತ್ತದೆ. ಇದಕ್ಕೆ ಪರಿಹಾರವೂ ನಮ್ಮಲ್ಲಿಯೇ ಇದೆ. ಮಕ್ಕಳು ತಮಗೆ ಕೆಲಸ ಸಿಕ್ಕ ನಂತರ ಹೆತ್ತವರಿಗಾಗಿಯೇ ತಮ್ಮ ಸಂಬಳದಲ್ಲಿ ಶೇ.ಐದರಷ್ಟೋ, ಹತ್ತರಷ್ಟೋ ತಮ್ಮ ಅನುಕೂಲಕ್ಕೆ ತಕ್ಕಂತೆ ಆ ಹಣವು ನೇರವಾಗಿ ಹೆತ್ತವರ ಬ್ಯಾಂಕ್ ಖಾತೆಗೆ ಜಮಾ ಆಗುವಂತೆ ವ್ಯವಸ್ಥೆ ಮಾಡಬೇಕು.
ಈಗ ಎಲ್ಲರ ಹೆಸರಿನಲ್ಲಿಯೂ ಬ್ಯಾಂಕ್ ಖಾತೆ ಇದ್ದೇ ಇರುತ್ತದೆ. ಮೊದಲಿನಿಂದಲೂ ಈ ವ್ಯವಸ್ಥೆ ಮಾಡಿಕೊಂಡರೆ ಸಮಸ್ಯೆ ಕಡಿಮೆಯಾಗುತ್ತದೆ. ಮಕ್ಕಳಿಗೆ ಸಂಪೂರ್ಣ ಮನಸ್ಸಿರಬೇಕು ಅಷ್ಟೇ. ಹೆಣ್ಣು ಮಕ್ಕಳು ಅಷ್ಟೇ. ನೇರವಾಗಿ ಹೆತ್ತವರ ಖಾತೆಗೆ ದುಡ್ಡು ಹಾಕುತ್ತಾ ಬಂದರೆ, ಮುಂದೆ ಗಂಡನ ಮನೆಗೆ ಹೋದ ನಂತರವೂ ಸಮಸ್ಯೆ ಎದುರಾಗಲಾರವು. ತಮ್ಮ ತುಂಬು ಮನಸ್ಸಿನಿಂದ ಈ ರೀತಿ ವ್ಯವಸ್ಥೆಗೆ ಹೊಂದಿಕೊಂಡು ಬಿಟ್ಟರೆ ಹೆತ್ತವರಿಗೂ ಸಂತೋಷ. ಮಕ್ಕಳೆದುರೂ ಕುಬ್ಜರಾಗಿ ನಿಂತು ಹಣ ಕೇಳುವ ಮುಜುಗರದ ಸಂಗತಿಯೂ ತಪ್ಪಿದಂತಾಗುತ್ತದೆ. 5 ಸಾವಿರೋ 10 ಸಾವಿರೋ ಮಕ್ಕಳಿಂದಲೇ ಬಂದಾಗ ಹೆಚ್ಚುವರಿಗಾಗುವ ಖುಷಿಯನ್ನು ವರ್ಣಿಸಲಾಗದು. ಹೊಟ್ಟೆ ಬಟ್ಟೆ ಕಟ್ಟಿ ಓದಿಸಿದ್ದಕ್ಕೂ ಸಾರ್ಥಕ ಭಾವ. ಹೆತ್ತವರಿಗೆ ಮಕ್ಕಳು ಅಲ್ಪ ಕೊಟ್ಟರೂ ಅದೇ ದೊಡ್ಡದಾಗಿ ಕಾಣುತ್ತದೆ. ಅವರು ಯಾರ ಹಂಗಿಲ್ಲದೆ ಆ ದುಡ್ಡನ್ನು ಬಳಸಬಹುದು ಅಥವಾ ಉಳಿಸಲು ಬಹುದು. ಇದರೊಂದಿಗೆ ಮುಂದೊಂದು ದಿನ ಕುಟುಂಬದ ಕಷ್ಟಕ್ಕೆ ಅವರು ಸಹ ಸಹಾಯ ಮಾಡಬಹುದು. ಇದರಿಂದ ಪೈಸೆ ಪೈಸೆಗೂ ಲೆಕ್ಕ ಹಾಕುತ್ತಾ ಬಡತನಕ್ಕೆ ಜೋತು ಬೀಳುವ ಪ್ರಸಂಗ ತಪ್ಪಿದಂತಾಗುತ್ತದೆ.