Monday, February 23, 2026
Monday, February 23, 2026
Home Blog Page 1648

ಇಮ್ರಾನ್ ಪದಚ್ಯುತಿ ಶೀಘ್ರವೇ ಶೆಹಬಾಜ್ ಪಾಕ್ ಪ್ರಧಾನಿ?

0

ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಇಮ್ರಾನ್ ಖಾನ್ ಈಗ ಬಹುಮತವನ್ನು ಕಳೆದುಕೊಂಡಿದ್ದಾರೆ.
ಆದ್ದರಿಂದ ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಶೀಘ್ರದಲ್ಲೇ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಹೇಳಿದ್ದಾರೆ.

ಮುಂದಿನ ಕೆಲವು ದಿನಗಳಲ್ಲಿ ನಡೆಯಲಿರುವ ವಿಶ್ವಾಸ ಮತದ ಮುನ್ನ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಭುಟ್ಟೋ, ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್-ಪಾಕಿಸ್ತಾನ ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಿದ್ದಕ್ಕೆ ಮತ್ತು ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಅಲ್ಲದೇ ಗುರುವಾರವೇ ಮತದಾನ ನಡೆಯಬೇಕು ಎಂದರು.

ಇಮ್ರಾನ್ ಖಾನ್ ಅವರ ಪ್ರಮುಖ ಸಂಸದೀಯ ಮಿತ್ರ, MQMನ ನಾಯಕ, ಖಾಲಿದ್ ಮಕ್ಬೂಲ್ ಸಿದ್ದಿಕಿ ಅವರು ಎರಡು ಪಕ್ಷಗಳ ನಡುವಿನ ಲಿಖಿತ ಒಪ್ಪಂದದ ನಂತರ ಖಾನ್ ಅವರನ್ನು ಪದಚ್ಯುತಗೊಳಿಸಲು ತಮ್ಮ ಪಕ್ಷವನ್ನು ಸೇರುತ್ತಿದ್ದಾರೆ ಎಂದು ಘೋಷಿಸಿದರು.

ಗಗನಯಾತ್ರಿಗಳಲ್ಲಿ ಸಮರ ದ್ವೇಷ ಮೀರಿದ ಸಾಮರಸ್ಯ

0

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಈಗಾಗಲೇ ರಷ್ಯಾ ಹಾಗೂ ಯುನೈಟೆಡ್ ಸ್ಟೇಟ್ಸ್ ನಡುವಿನ ಜಿದ್ದಿಗೆ ಕಾರಣವಾಗಿದೆ.

ಇದರ ಮಧ್ಯೆ ಬುಧವಾರ ನಾಸಾದ ಗಗನಯಾತ್ರಿ ಮಾರ್ಕ್ ವಂಡೇ ಹೇ ತಮ್ಮ ಇಬ್ಬರು ರಷ್ಯನ್ ಸಹಪಾಠಿಗಳೊಂದಿಗೆ ಬಾಹ್ಯಾಕಾಶದಿಂದ ಭೂಮಿಗೆ ಇಳಿದಿದ್ದಾರೆ.
ಕಳೆದ 355 ದಿನಗಳಿಂದ ಬಾಹ್ಯಾಕಾಶದಲ್ಲಿ ಸಂಚರಿಸಿದ ನಾಸಾದ ಗಗನಯಾತ್ರಿ ಮಾರ್ಕ್ ವಂಡೆ ಹೇ ಬುಧವಾರ ಕಝಾಕಿಸ್ತಾನ್‌ನಲ್ಲಿ ತಮ್ಮಿಬ್ಬರು ರಷ್ಯಾದ ಸಹವರ್ತಿಗಳೊಂದಿಗೆ ಭೂಮಿಗೆ ಮರಳಿದ್ದಾರೆ.

ವಂಡೆ ಹೇ ಮತ್ತು ಅವರ ರಷ್ಯಾದ ಸಿಬ್ಬಂದಿಗಳಾದ ಆಂಟನ್ ಶ್ಕಾಪ್ಲೆರೋವ್ ಮತ್ತು ಪಯೋಟರ್ ಡುಬ್ರೊವ್ ಅವರು ರಷ್ಯಾದ ಬಾಹ್ಯಾಕಾಶ ನೌಕೆಯಲ್ಲಿ ಒಟ್ಟಿಗೆ ಹಾರಿದ್ದು, ರಷ್ಯಾದ ವಿಮಾನ ನಿಯಂತ್ರಕರಿಂದಲೇ ಮಾರ್ಗದರ್ಶನವನ್ನೂ ಪಡೆದುಕೊಂಡಿದ್ದರು.

ಲ್ಯಾಂಡಿಂಗ್ ಸೈಟ್‌ನಲ್ಲಿ, ವಂದೇ ಹೇ ಅವರನ್ನು ನಾಸಾ ಮತ್ತು ರಷ್ಯಾದ ಸಿಬ್ಬಂದಿ ಪಡೆ ಭೇಟಿಯಾಯಿತು. ಉಕ್ರೇನ್‌ನ ರಷ್ಯಾದ ಆಕ್ರಮಣ ಮತ್ತು ಮಾಸ್ಕೋ ಹಾಗೂ ಪಶ್ಚಿಮದ ರಾಷ್ಟ್ರಗಳ ನಡುವೆ ಉಂಟಾದ ಉದ್ವಿಗ್ನತೆಯ ಹೊರತಾಗಿಯೂ ಎರಡು ಬಾಹ್ಯಾಕಾಶ ಸಂಸ್ಥೆಗಳ ನಡುವಿನ ನಿಕಟ ಸಹಯೋಗ ಮುಂದುವರಿದಿದೆ.

ಬಾಹ್ಯಾಕಾಶದಿಂದ ಭೂಮಿಗೆ ಇಳಿದ ನಾಸಾದ ಗಗನಯಾತ್ರಿ ವಂದೇ ಹೇ ಅವರನ್ನು ನಾಸಾದ ವಿಮಾನ ತಂತ್ರಜ್ಞರು, ಸಾರ್ವಜನಿಕ ವ್ಯವಹಾರಗಳ ಅಧಿಕಾರಿಗಳು ಮತ್ತು ಗಗನಯಾತ್ರಿಗಳ ಕಚೇರಿ ಸಿಬ್ಬಂದಿ ಮತ್ತು ಬಾಹ್ಯಾಕಾಶ ನಿಲ್ದಾಣದ ನಿರ್ವಹಣೆಯ ಪ್ರತಿನಿಧಿಗಳು ಭವ್ಯವಾಗಿ ಸ್ವಾಗತಿಸಿದರು. ರಷ್ಯಾದ ಸೋಯುಜ್ ಬಾಹ್ಯಾಕಾಶ ನೌಕೆಯಲ್ಲಿ ಹಿಂದಿರುಗುವ ಅಮೆರಿಕನ್ ಗಗನಯಾತ್ರಿಗಳನ್ನು ಸ್ವಾಗತಿಸುವ ವಿಶಿಷ್ಟ ಪ್ರಕ್ರಿಯೆಯಿಂದ ಯಾವುದೇ ವಿಷಯಾಂತರ ಇರಬಾರದು ಎಂದು ನಾಸಾ ವಕ್ತಾರ ಗ್ಯಾರಿ ಜೋರ್ಡಾನ್ ಹೇಳಿದ್ದಾರೆ.

ಆರಂಭಿಕ ವೈದ್ಯಕೀಯ ತಪಾಸಣೆಯ ನಂತರ, ಗಗನಯಾತ್ರಿಗಳು ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವ ಮೊದಲು ಟೆಂಟ್‌ಗಳಲ್ಲಿ ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆಯುತ್ತಾರೆ. ಅಲ್ಲಿ ವಂದೇ ಹೇ ಮತ್ತು ಅವರ NASA ಸಹೋದ್ಯೋಗಿಗಳು ಗಲ್ಫ್‌ಸ್ಟ್ರೀಮ್ ಜೆಟ್‌ನಲ್ಲಿ ಹೋಗಿ ಟೇಕ್ ಆಫ್ ಆಗುತ್ತಾರೆ. ಕಝಾಕಿಸ್ತಾನ್‌ನಲ್ಲಿ ಲ್ಯಾಂಡ್ ಆದ ಸುಮಾರು 24 ಗಂಟೆಗಳ ನಂತರ, ವಂದೇ ಹೇ ಹೂಸ್ಟನ್‌ಗೆ ಹಿಂತಿರುಗಿದರು.

ಇಲ್ನೋಡಿ ಇವತ್ತು ಇಡ್ಲಿ ದಿನ

0

ಈಗೀಗ ಎಲ್ಲರಿಗೂ ,ಎಲ್ಲವಕ್ಕೂ ಒಂದು ದಿನವನ್ನ ಆಚರಿಸುವ ರೂಢಿ ಬಂದಿದೆ. ಏನಿಲ್ಲ ಅಂದರೂ ಆವತ್ತೊಂದು ದಿನ ಅವರ,ಅದರ ಬಗ್ಗೆ ಒಂದಿಷ್ಟು
ಹೊತ್ತು ಮಾತಾಡುವುದು . ಒಂದು ಸಮಾರಂಭ ಏರ್ಪಡಿಸುವುದು ಸರ್ವೇಸಾಮಾನ್ಯ ಸಂಗತಿ.
ನಮ್ಮ ನಿಮ್ಮ ಗಮನ ಈಗ ಹೊರಳಬೇಕಾದದ್ದು ನಮಗೆಲ್ಲಾ ಪ್ರೀಯವಾದ ತಿಂಡಿ ಪದಾರ್ಥ ಇಡ್ಲಿ ಬಗ್ಗೆ.

2015 ರಲ್ಲಿ ಚೆನೈನ ಬಾಣಸಿಗ ಎನಿಯವನ್ ಎಂಬ ಮಹಾನುಭಾವ ಈ ಇಡ್ಲಿಗೆ ಒಂದು ದಿನ ಇರಲಿ ಎಂದು ಆಚರಣೆ ಶುರುಮಾಡಿದನಂತೆ.ಆತ ಸಾಮಾನ್ಯ ಅಂದುಕೋ ಬೇಡಿ.ಇಡ್ಲಿಯ ವೆರೈಟಿಯಲ್ಲೇ ಸು 1328  ತರಹ ಇಡ್ಲಿ ಬೇಯಿಸಿ ತೋರಿಸಿದ ಭೂಪ.

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ,ನಾಲಗೆ ಪ್ರಿಯ ತಿಂಡಿ ಅಂದರೆ
ಇಡ್ಲಿ ಸಾಂಬಾರ್. ಎಂತಹ ಆರೋಗ್ಯದ ತೊಂದರೆ ಇರಲಿ ಸಾಮಾನ್ಯವಾಗಿ ವೈದ್ಯರು ಸೂಚಿಸುವುದು ಇಡ್ಲಿ ತಿನ್ನಿ ಪರವಾಗಿಲ್ಲ.ಏಕೆಂದರೆ ಎಣ್ಣೆ, ಬೆಣ್ಣೆ ರಹಿತ
ಕೇವಲ ಆವಿಯಲ್ಲೇ ಬೇಯುತ್ತದೆ. ಅದರ ಮೃದುತ್ವ ಮಧುರತೆ ತಿನ್ನುವವರೇ ಹೇಳಬೇಕು.
ಬಗೆಬಗೆಯ ಇಡ್ಲಿ ಮಾಡುವ ಕಲಾವಂತ ಬಾಣಸಿಗರೂ ಈಗ ಎಲ್ಲ ಕ್ಯಾಂಟೀನ್ ,ರೆಸ್ಟುರಾ ಗಳಲ್ಲಿ ಸಿಗುತ್ತಾರೆ. ಯಾರೇ ಆಗಿರಲಿ ಸ್ವಯಂ ಉದ್ಯೋಗದ ಕ್ಯಾಂಟೀನ್ ತೆರೆದರೆ ಅಲ್ಲಿ ಇಡ್ಲಿ ಬಿಟ್ಟು ಬೇರೆ ಏನೂ ಆರಂಭದಲ್ಲಿ ಮಾಡುವುದಿಲ್ಲ. ಇಡ್ಲಿ ಸಾಂಬಾರ್ ತಯಾರಿಸಿದರೇ ಮಾತ್ರ ಗಿರಾಕಿಗಳು
ಬರುವುದು. ಈ ದೃಶ್ಯ  ನಮ್ಮಲ್ಲಿ ಸಾಮಾನ್ಯ.

ಏನೇ ಆಗಲಿ ಇಡ್ಲಿಗೆ ಅಂತ ಒಂದು ದಿನ ಆಚರಣೆಗೆ ಮೀಸಲಿಟ್ಟರಲ್ಲ 
ಆ ಮಹಾಶಯ ಎನಿಯವನ್ ಗೆ ನಮೋನಮಃ.

ಹುಂಚ ತಂಬಾಕು ಮುಕ್ತ ಗ್ರಾಮವೆಂದು ಘೋಷಿಸಲು ಕ್ಷಣಗಣನೆ- ಡಾ.ಸೆಲ್ವಮಣಿ

0

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ನಿರ್ಬಂಧಿತ ಪ್ರದೇಶ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರಂತರ ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಸೂಚನೆ ನೀಡಿದರು.

ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು. ಕಳೆದ ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಕೋಟ್ಪಾ ಕಾಯ್ದೆ ಉಲ್ಲಂಘನೆಯ 582 ಪ್ರಕರಣಗಳಲ್ಲಿ 64460 ರೂ. ದಂಡ ವಸೂಲು ಮಾಡಲಾಗಿದೆ.

ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕು ಹೊರತುಪಡಿಸಿ ಬೇರೆ ತಾಲೂಕುಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ದಾಳಿಗಳನ್ನು ಹೆಚ್ಚಿಸಬೇಕು. ತಾಲೂಕು ಮಟ್ಟದ ಸಮಿತಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕು. ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಮಾತ್ರವಲ್ಲದೆ ನಗರ ಸ್ಥಳೀಯ ಸಂಸ್ಥೆಗಳು ಈ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು ಎಂದು ಹೇಳಿದರು.

ಶಾಲಾ ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ತಂಬಾಕು ಉತ್ಪನ್ನಗಳ ಮಾರಾಟ ಮಾಡಲು ಅವಕಾಶ ನೀಡಬಾರದು. ತಂಬಾಕು ಉತ್ಪನ್ನಗಳ ಕುರಿತಾಗಿ ಪ್ರತ್ಯಕ್ಷ ಅಥವಾ ಪರೋಕ್ಷ ಜಾಹೀರಾತಿಗೆ ಅವಕಾಶ ನೀಡಬಾರದು. ಶಾಲಾ ಕಾಲೇಜುಗಳ ಆವರಣದಲ್ಲಿ ರಾತ್ರಿ ವೇಳೆ ಧೂಮಪಾನ ಅಥವಾ ಮದ್ಯಪಾನ ಮಾಡುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಪ್ರಕರಣಗಳನ್ನು ದಾಖಲಿಸಲು ಈಗಾಗಲೇ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ತಂಬಾಕು ವ್ಯಸನ ಮುಕ್ತ ಕೇಂದ್ರ ಪ್ರಸ್ತುತ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಸಾಲಿನಲ್ಲಿ ಕೇವಲ 3908 ಮಂದಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಮನೋ ಚೈತನ್ಯ ಕಾರ್ಯಕ್ರಮದಡಿಯಲ್ಲಿ ಎಲ್ಲಾ ತಾಲೂಕುಗಳಲ್ಲಿ ಸಹ ತಂಬಾಕು ವ್ಯಸನ ಮುಕ್ತ ಕೌನ್ಸಿಲಿಂಗ್ ವ್ಯವಸ್ಥೆ ಮಾಡಬೇಕು. ತಂಬಾಕು ಚಟದಿಂದ ಮುಕ್ತರಾದರೆ ಬೇರೆ ವ್ಯಸನಗಳಿಗೆ ಬಲಿಯಾಗುವ ಸಾಧ್ಯತೆ ಕಡಿಮೆ ಎಂದು ಅವರು ಅಭಿಯಪ್ರಾಯಪಟ್ಟರು.

ಹೊಸನಗರ ತಾಲೂಕಿನ ಹುಂಚ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಇದೇ ಮಾದರಿಯಲ್ಲಿ ಜಿಲ್ಲೆಯಲ್ಲಿ ಇನ್ನಷ್ಟು ಗ್ರಾಮಗಳನ್ನು ತಂಬಾಕು ಮುಕ್ತ ಮಾಡಲು ಕ್ರಮ ವಹಿಸಬೇಕು ಎಂದರು.

ರೇಬಿಸ್ ಲಸಿಕೆ ಕಡ್ಡಾಯವಾಗಿ ಹಾಕಿ: ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ರೇಬಿಸ್‌ಗೆ ಇಬ್ಬರು ಬಲಿಯಾಗಿರುವುದು ಕಳವಳಕಾರಿ. ಜಿಲ್ಲೆಯಲ್ಲಿ ಪ್ರತಿಯೊಂದು ಸಾಕಿದ ನಾಯಿಗೆ ಲಸಿಕೆಯನ್ನು ಕಡ್ಡಾಯವಾಗಿ ಹಾಕಬೇಕು. ಪಶುವೈದ್ಯಕೀಯ ಇಲಾಖೆ ಈ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು. ಬೀದಿನಾಯಿಗಳನ್ನು ನಿಯಂತ್ರಣ ಮಾಡುವ ಕುರಿತು ಸ್ಥಳೀಯ ಸಂಸ್ಥೆಗಳು ಸೂಕ್ತ ಕ್ರಮ ಜರುಗಿಸಬೇಕು ಎಂದರು.

ಪ್ರತಿಯೊಂದು ಆಸ್ಪತ್ರೆಯಲ್ಲಿ ರೇಬಿಸ್ ವ್ಯಾಕ್ಸಿನ್ ಲಭ್ಯತೆಯನ್ನು ಖಾತ್ರಿಪಡಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ, ಆರ್‌ಸಿಎಚ್ ಅಧಿಕಾರಿ ಡಾ. ನಾಗರಾಜ ನಾಯಕ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯ ರೈತರಿಗೆ ಖುಷಿ ಸುದ್ದಿ, 72 ತಾಸಿನಲ್ಲಿ ಮನೆಗೆ ಪಹಣಿ ರವಾನೆ

0

ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದೆ.

ಕರೆ ಮಾಡಿದ 72 ತಾಸಿನಲ್ಲಿ ರೈತರ ಮನೆ ಬಾಗಿಲಿಗೆ ಪಹಣಿ ರವಾನೆ ಮಾಡುವ ಕಾರ್ಯಕ್ರಮ ಜಾರಿಗೆ ಬರಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಸದನದಲ್ಲಿ ಬಿಜೆಪಿಯ ಪಿ.ಎ. ಮುನಿರಾಜು ಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಂದಾಯ ಇಲಾಖೆ ಶೀಘ್ರದಲ್ಲಿ ಆರಂಭಿಸಲಿರುವ ಸಹಾಯವಾಣಿಗೆ ಕರೆ ಮಾಡಿದ 72 ಗಂಟೆಯೊಳಗಾಗಿ ಪಿಂಚಣಿದಾರರಿಗೆ ಮಂಜೂರಾತಿ ಪತ್ರ ತಲುಪಿಸುವ ಯೋಜನೆ ಜಾರಿ ತರಲಾಗುವುದು ಎಂದರು.

ಇದಕ್ಕಾಗಿ ಹೊಸ ಸಾಫ್ಟ್ ವೇರ್ ಕೂಡ ರೂಪಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಕೇಂದ್ರ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ

0

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ (Pensioners) ಭರ್ಜರಿ ಸುದ್ದಿ.
ಮಾರ್ಚ್ 30 ರಂದು, ಡಿಎ (Dearness allowance Hike) 3% ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಹೊಸ ಹಣಕಾಸು ವರ್ಷ ಆರಂಭಕ್ಕೂ ಮುನ್ನ ಉದ್ಯೋಗಿಗಳ ಡಿಎ ಶೇ.31ರಿಂದ ಶೇ.34ಕ್ಕೆ ಏರಿಕೆಯಾಗಿದೆ.
AICPI-IWನ ಡಿಸೆಂಬರ್ ಡೇಟಾ ಬಂದ ನಂತರ ನೌಕರರು 3% ಡಿಎ ಹೆಚ್ಚಳದ (DA Hike) ಘೋಷಣೆಯ ನಿರೀಕ್ಷೆಮಾಡುತ್ತಿದ್ದರುಇಂದಿನ ಸಚಿವ ಸಂಪುಟ ಸಭೆಯಲ್ಲಿ ಶೇ.3 ರಷ್ಟು ಡಿಎ ಹೆಚ್ಚಿಸಿ ಘೋಷಣೆ ಮಾಡಲಾಗಿದೆ. ನೌಕರರ ಮಾರ್ಚ್ ತಿಂಗಳ ವೇತನದೊಂದಿಗೆ ಹೊಸ ಡಿಎ ಖಾತೆಗೆ ಜಮಾ ಆಗಲಿದೆ
ಎಂದು ಬಲ್ಲಮೂಲ ಗಳು ತಿಳಿಸಿವೆ.

ಕೆಳದಿ ಇತಿಹಾಸ ಬಗ್ಗೆ ಅವಜ್ಞೆ ಬೇಡ. ನಮ್ಮ ಇತಿಹಾಸದ ಬಗ್ಗೆ ಹೆಮ್ಮಯಿರಲಿ- ಕೆಳದಿ ಗುಂಡಾಜೊಯಿಸ್

0

ಶಿವಮೊಗ್ಗ ಪೌರಾಣಿಕ,ಐತಿಹಾಸಿಕವಾಗಿ ಪ್ರಸಿದ್ಧ ಪ್ರದೇಶ.
ಕಲೆ ಸಾಹಿತ್ಯ ಸಾಮಾಜಿಕ ಸಾಂಸ್ಕೃತಿಕ ಕ್ಷೇತ್ರದಲ್ಲೂ ಕೂಡ ದೇಶದೆಲ್ಲರ ಗಮನ ಸೆಳೆದ ಜಿಲ್ಲೆ.
ಸಾಹಿತ್ಯದ ಹಬ್ಬವೆಂದರೆ ಇಲ್ಲಿ ಸಾಮಾನ್ಯವೆ.
ಒಂದಲ್ಲ ಒಂದು ಸಂಕಿರಣ,ಉಪನ್ಯಾಸ,ಗೋಷ್ಠಿಗಳು ಜರುಗುತ್ತಲೇ ಇರುತ್ತವೆ.

ಈ ಬಾರಿಯ ವಿಶೇಷವೆಂದರೆ
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ
ಆಯೋಜಿಸಿರುವ
16 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ.
ಹಿರಿಯ ಇತಿಹಾಸ ತಜ್ಞ ಡಾ.ಕೆಳದಿ ಗುಂಡಾ ಜೊಯಿಸ್ ಅವರು ಸಮ್ಮೇಳನದ ಸರ್ವಾಧ್ಯಕ್ಷರು.
ಮಾರ್ಚಿ 30 ರಂದು ಸಮ್ಮೇಳನದ ಉದ್ಘಾಟನಾ ಸಮಾರಂಭ.

ಬೆಳಿಗ್ಗೆ ಅಲಂಕೃತ ವಾಹನದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು.
ವಿವಿಧ ಜಾನಪದ ಕಲಾತಂಡಗಳಿಂದ ರಾಜಬೀದಿಗಳಲ್ಲಿ
ಹಬ್ಬದ ಸಡಗರವಿತ್ತು.
ಪ್ರಮುಖವಾಗಿ ಡೊಳ್ಳುಕುಣಿತ ಈ ಮೆರವಣಿಗೆಗೆ ರಂಗು ತಂದಿತ್ತು.

ಸಮ್ಮೇಳನದ ಅಧ್ಯಕ್ಷ ರಿಂದ ಗೋಪಾಳದ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕ ವಿತರಿಸುವ ಮೂಲಕ ಮೆರವಣಿಗೆ ಆರಂಭವಾಯಿತು.

ಮೆರವಣಿಗೆಯು ಶಾಂತವೇರಿ ಗೋಪಾಲಗೌಡ ಮಹಾದ್ವಾರದ ಮೂಲಕ ಡಾ.ಜಿ.ಎಸ್ ಶಿವರುದ್ರಪ್ಪ ಸಾಹಿತ್ಯ ಸಭಾಂಗಣದೊಳಗೆ ಪ್ರವೇಶಿಸಿತು.

ಸುಶ್ರಾವ್ಯ ನಾಡಗೀತೆಯ ಗಾಯನದೊಂದಿಗೆ ಸಮ್ಮೇಳನ ಆರಂಭವಾಯಿತು.
ಜಿಲ್ಲಾ ಕ.ಸಾ.ಪ ಸಮಿತಿ ಕಾರ್ಯದರ್ಶಿಗಳಾದ ಎಸ್ .ಶಿವಮೂರ್ತಿ ಅವರು ಎಲ್ಲರಿಗೂ ಸ್ವಾಗತ ಕೋರಿದರು.
ಶಿವಮೊಗ್ಗ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಿ.ಮಂಜುನಾಥ್ ಆಶಯ ಭಾಷಣ ಮಾಡಿದರು.
ನಂತರ ಡಾ. ಕೆಳದಿ ಗುಂಡಾ ಜೊಯಿಸ್ ಅವರು ಜ್ಯೋತಿ ಬೆಳಗುವ ಮೂಲಕ ಸಮ್ಮೇಳನ ಉದ್ಘಾಟಿಸಿದರು.

ನಿಕಟಪೂರ್ವ ೧೫ ನೇ ಸಮ್ಮೇಳನದ ಅಧ್ಯಕ್ಷೆ
ಡಾ.ವಿಜಯಾದೇವಿ ಅವರು ಇಂದಿನ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಕೆಳದಿ ಗುಂಡಾಜೊಯಿಸ್ ಅವರಿಗೆ ಕನ್ನಡ ಬಾವುಟ ನೀಡಿ
ಅಧಿಕಾರ ಹಸ್ತಾಂತರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಶಿವಮೊಗ್ಗ ಇದರ ಅಧ್ಯಕ್ಷರಾದ ಶ್ರೀ ಡಿ.ಮಂಜುನಾಥ್ ಅವರು ಮಾತನಾಡಿ, ಕನ್ನಡಕ್ಕೆ ಕನ್ನಡಿಗನೇ ಹಿತಶತ್ರುಗಳು. ಅದನ್ನು ಎಲ್ಲಾ ಸಂದರ್ಭದಲ್ಲೂ ನೋಡುತ್ತಿದ್ದೇವೆ. ನಮಗೆ ನಮ್ಮ ಭಾಷೆಯ ಬಗ್ಗೆ ವಿಶ್ವಾಸವಿಲ್ಲದೆ ಇರುವುದು, ಭಾಷೆಯ ಪ್ರತಿಭೆಗಳನ್ನು ನಾವು ಗೌರವಿಸದೆ ಇರುವುದು, ಅಥವಾ ಗುರುತಿಸದೇ ಇರುವುದು. ನಮ್ಮೊಳಗೆ ಕೀಳರಿಮೆ ಎಂಬ ಭಾವನೆ ಇದೆ. ನಾವು ಒಂದು ರೀತಿಯ ವಿಶ್ವಾಸವಿಲ್ಲದ ವಾತಾವರಣದಲ್ಲಿ ನಾವು ದಿನಗಳನ್ನು ಕಳೆಯುತ್ತಿದ್ದೇವೆ. ಪರಿಸ್ಥಿತಿಯನ್ನು ನೋಡಿದಂತಹ ಸಂದರ್ಭಗಳಲ್ಲಿ ಭಾಷೆ ಉಳಿಯುತ್ತಾ? ಎನ್ನುವ ಪ್ರಶ್ನೆಗಳು ಎದುರಾಗುವುದು ಸಹಜ. ಇವತ್ತು ನಾವು ಯಾವ ರೀತಿಯ ಭಾಷೆಗಳನ್ನು ಬಳಸುತ್ತಿದ್ದೇವೆ? ಮನಸ್ಸುಗಳನ್ನು ಕೂಡಿಸುವಂತೆ ಭಾಷೆ ಇವತ್ತು ನಮಗೆ ಅಗತ್ಯವಿದೆ. ನಮ್ಮನ್ನು ಆಳುವ ವಿಧಾನಸಭೆ, ಲೋಕಸಭೆಯಲ್ಲಿ ಚುನಾಯಿತ ಕುಳಿತುಕೊಳ್ಳುವ ಇದೆಲ್ಲಾ ಸಭೆಯಲ್ಲಿ ಅಲ್ಲಿ ಆಡುವ ಮಾತು ಮಾಧ್ಯಮದಲ್ಲಿ ನೋಡಿದಾಗ, ಇವರು ಮನಸ್ಸುಗಳು ಕಟ್ಟುವ ಕೆಲಸ ಮಾಡುತ್ತಿದ್ದಾರಾ? ಅಥವಾ ಯಾವ ಕೆಲಸ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಭವಿಷ್ಯವನ್ನು ಕಟ್ಟುವ ಜಾಗೃತ ಮನಸ್ಸುಗಳಿಗೆ ಕಾಡಬಹುದು ಎಂದು ಹೇಳಿದರು.

ನಾವು ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕಾಗಿದೆ. ಮತ್ತು ವಿಶ್ವಾಸವನ್ನು ಬೆಳೆಸುವ ಕೆಲಸ ಮಾಡಬೇಕಾಗಿದೆ. ನಾವು ಹೊಸ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಶಿಕ್ಷಣ ಎನ್ನುವುದು ವ್ಯಾಪಾರೀಕರಣವಾಗಿದೆ. ನಮ್ಮ ಮಕ್ಕಳನ್ನು ಪ್ರತಿಷ್ಠಿತ ಜಾಗಗಳಿಗೆ ಸೇರಿಸುವ ಆತುರದಲ್ಲಿದ್ದೇವೆ. ಇಂಗ್ಲಿಷ್ ಮಾಧ್ಯಮ ನಮ್ಮ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇಂಗ್ಲಿಷ್ ಮಾಧ್ಯಮದ ತೀರ್ಮಾನಕ್ಕೆ ಬಂದಿದ್ದೇವೆ. ಅಂತಹ ಶಾಲೆಗಳಿಗೆ ಎಷ್ಟೇ ಹಣವಾದರೂ ಆ ಶಾಲೆಗಳಿಗೆ ಸೇರಿಸುತ್ತೇವೆ. ಆದರೆ ಆ ಮಕ್ಕಳ ಪರಿಸ್ಥಿತಿಯನ್ನು ಮನೆಯಿಂದ ಹೊರ ಬಂದು ನೋಡಬೇಕು ಎಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.

ನಮಗೆ ಮನಸ್ಸುಗಳನ್ನು ಒಡೆಯುವ ಭಾಷೆ ಬೇಕಾಗಿಲ್ಲ. ಮನಸ್ಸುಗಳನ್ನು ಕಟ್ಟುವ ಭಾಷೆ ಬೇಕಾಗಿದೆ. ಕನ್ನಡ ಭಾಷೆ ಅತ್ಯಂತ ಸರಳ ಹಾಗೂ ಸುಮಧುರ. ಬಹಳ ಬೇಗ ನಮ್ಮೆದುರು ಇರುವ ವ್ಯಕ್ತಿ ಹೇಳಿದ್ದನ್ನು ಅರ್ಥ ಅರ್ಥಮಾಡಿಕೊಳ್ಳಬಹುದಾದ ಭಾಷೆಯಾಗಿದೆ ಎಂದು ಮಂಜುನಾಥ ಅವರು ತಮ್ಮ ಆಶಯದ ಮಾತುಗಳನ್ನು ಆಡಿದರು.

ಕೆಳದಿ ಗುಂಡಾಜೋಯಿಸ್ ಅವರು ಅಧ್ಯಕ್ಷ ಪೀಠದಿಂದ ಮಾತನಾಡುತ್ತಾ,
ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನನ್ನಾಗಿ ನನ್ನನ್ನು ಆಯ್ಕೆ ಮಾಡಿರುವುದಕ್ಕಾಗಿ ಇದು ಕೆಳದಿ ಇತಿಹಾಸ ಸಂಸ್ಕೃತಿಗೆ ಸಂದ ಗೌರವವೆಂದು ಪರಿಗಣಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ನಂತರ ಅವರು ಮುಂದುವರಿದು ಮಾತನಾಡುತ್ತಾ,
ಶಿವಮೊಗ್ಗ ಜಿಲ್ಲೆಯನ್ನು ಕೆಳದಿ ಇತಿಹಾಸ ಸಂಸ್ಕೃತಿ ದೇಶ-ವಿದೇಶಗಳಿಗೆ ಖ್ಯಾತಿ ತರಲು ಸಾಮರ್ಥ್ಯತೆ ಹೊಂದಿದೆ. ಜಪಾನ್, ಜರ್ಮನಿ, ಇಟಲಿ, ಲಂಡನ್ ಮೊದಲುಗೊಂಡು ದೇಶ-ವಿದೇಶದ ವಿದ್ವಾಂಸರು ಬೇರೆಬೇರೆ ವಿಶ್ವವಿದ್ಯಾಲಯಗಳಲ್ಲಿ ಕೆಳದಿ ಇತಿಹಾಸವನ್ನು ಆಧರಿಸಿ ಮಹಾಪ್ರಬಂಧ ಸಾದರಪಡಿಸಿದೆ. ಇದು ಕನ್ನಡಿಗರಿಗೆ ಅರಿವಿಲ್ಲ. ಇದುವರೆಗೂ 35ಕ್ಕೂ ಅಧಿಕ ಪಿಹೆಚ್ ಡಿ ಪದವಿ ಘೋಷಿಸಲಾಗಿದೆ. ಅದರಲ್ಲಿ ಕೇವಲ ಇಬ್ಬರ ಮಹಾಪ್ರಬಂಧಗಳು ಕನ್ನಡದಲ್ಲಿ ಪ್ರಕಟವಾಗಿವೆ. ಇಟಲಿ ಮ್ಯೂಸಿಯಂನಲ್ಲಿ ಡೆಲ್ಲ ವಲ್ಲೆಯು ರಚಿಸಿದ ಕೆಳದಿ ಇತಿಹಾಸ ಇಟಲಿ ಭಾಷೆಯಲ್ಲಿ ಹಸ್ತಪತ್ರಿಯಲ್ಲಿದೆ. 15- 16 ನೇ ಶತಮಾನದಲ್ಲಿ ಸುಮಾರು 10 ಜನ ವಿದೇಶಿ ಪ್ರವಾಸಿಗಳು ಈ ಜಿಲ್ಲೆಗೆ ಭೇಟಿ ಇತ್ತು ರಚಿಸಿದ ಪ್ರವಾಸಿ ಕಥನಗಳು ಪ್ರಕಟವಾಗಬೇಕಿದೆ ಎಂದು ಕೆಳದಿ ಗುಂಡಾಜೋಯಿಸ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಸ್ವಾತಂತ್ರ್ಯನಂತರದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ಕಡಿದಾಳ್ ಮಂಜಪ್ಪ, ಕಬಟೂರು ಬಂಗಾರಪ್ಪ, ಜೆ. ಹೆಚ್. ಪಟೇಲ್, ಬಿ.ಎಸ್. ಯಡಿಯೂರಪ್ಪನವರು ಹೀಗೆ ನಾಲ್ವರು ಶಿವಮೊಗ್ಗ ಜಿಲ್ಲೆಯವರು ಎಂಬುದು ಹೆಮ್ಮೆಯ ವಿಷಯ. ಇವರುಗಳು ಈ ಜಿಲ್ಲೆಯ ಅಭಿವೃದ್ಧಿಗೆ ಪ್ರಯತ್ನ ಮಾಡಿದ್ದಾರೆ. ಶ್ರೀ ಬದೀ ನಾರಾಯಣ್ ಅಯ್ಯಂಗಾರ್, ಕೆ.ಜಿ.ಒಡೆಯರ್, ಕಾಗೋಡು ತಿಮ್ಮಪ್ಪ, ಹರತಾಳ ಹಾಲಪ್ಪ, ಗೋಪಾಲಗೌಡರು, ಶಂಕರಮೂರ್ತಿ, ಆರಗ ಜ್ಞಾನೇಂದ್ರ, ಇನ್ನು ಮುಂತಾದವರು ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಗುಂಡಾಜೋಯಿಸ್ ಅವರು ಸ್ವಾತಂತ್ರ್ಯನಂತರದಲ್ಲಿ ಶಿವಮೊಗ್ಗ ಜಿಲ್ಲೆಯ ಕೊಡುಗೆಗಳನ್ನು ವಿವರಿಸಿದರು.

ಜನಪದ ವಾಗ್ಮಿ, ಲಘು ವಿಷಯಗಳನ್ನು ಜನರಿಗೆ ಮುಟ್ಟಿಸುವಂತಹ ಮಾತುಗಾರ ರಾದ ಪ್ರೊ. ಕೃಷ್ಣೇಗೌಡರು ಮಾತನಾಡುತ್ತಾ, ನಮ್ಮ ಭಾಷೆಯನ್ನು ನಾವುಪ್ರೀತಿಸಬೇಕು. ನಮ್ಮ ಹಿರಿಯರು ಅದನ್ನು ನಮಗೆ ಬಳುವಳಿಯಾಗಿ ನೀಡಿದ್ದಾರೆ. ಕನ್ನಡಕ್ಕಿಂತ ಇಂಗ್ಲಿಷ್ ಭಾಷೆಗೆ ಯಾವ ಕ್ರಮವೂ ಇಲ್ಲ. ಭಾಷೆ ಮಾತನಾಡುವವರಿಗೆ ಒಂದು ಗೌರವವಿದೆ. ಅದು ಒಂದು ಸಣ್ಣ ಭಾಷೆ. ದ್ವೀಪದ ಭಾಷೆಯಾಗಿದೆ. ಆ ಭಾಷೆಯನ್ನು ಇವತ್ತು ಪ್ರಪಂಚದಾದ್ಯಂತ ಬಳಸುತ್ತಿದ್ದಾರೆ. ಕನ್ನಡ ಕೂಡ ಒಂದು ದೊಡ್ಡ ಭಾಷೆ. ಜನರು ಇದನ್ನು ಅದ್ಭುತವಾಗಿ ಬಳಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಮಾ ದಿಲೀಪ್, ರಾಷ್ಟ್ರೀಯ ಶಿಕ್ಷಣ ಸಮಿತಿ, ಪಿಆರ್ ಓ ಸಿ.ಎಂ.
ನೃಪತುಂಗ, ಜಿಲ್ಲಾ ಕೋಶಾಧ್ಯಕ್ಷರು ಎನ್ ನವೀನ್ ಕುಮಾರ್ ಇನ್ನು ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ಯುದ್ಧ ಕಾರ್ಯಾಚರಣೆ ಕಡಿತಗೊಳಿಸದ ರಷ್ಯಉಕ್ರೇನ್ ಆತಂಕ

0

ದಕ್ಷಿಣ ಉಕ್ರೇನ್‌ನ ಮೈಕೊಲೈವ್‌ ಸರ್ಕಾರಿ ಪ್ರಧಾನ ಕಚೇರಿ ಕಟ್ಟಡದ ಮೇಲೆ ರಷ್ಯಾ ಪಡೆಗಳು ಮಂಗಳವಾರ ನಡೆಸಿದ್ದ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.ಇದರೊಂದಿಗೆ 33 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

9 ಮಹಡಿ ಕಟ್ಟಡದ ಮೇಲೆ ದಾಳಿ ನಡೆದಿತ್ತು. ಕಟ್ಟಡವು ಸಂಪೂರ್ಣವಾಗಿ ಧ್ವಂಸಗೊಂಡಿದೆ. 12 ಮಂದಿಯ ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಈ ದಾಳಿಯನ್ನು ಖಂಡಿಸಿದ್ದಾರೆ.
‘ಮೈಕೊಲೈವ್‌ ಜನರಿಂದ ರಷ್ಯಾಕ್ಕೆ ಯಾವುದೇ ಬೆದರಿಕೆ ಇಲ್ಲ. ಕಾರಣವಿಲ್ಲದೆ ಉಕ್ರೇನ್ ಜನರ ಮೇಲೆ ರಷ್ಯಾ ಪಡೆಗಳು ದಾಳಿ ನಡೆಸುತ್ತಿವೆ’ ಎಂದು ಅವರು ಆರೋಪಿಸಿದ್ದಾರೆ.

ಯುದ್ಧ ಕೊನೆಗೊಳಿಸುವ ಉದ್ದೇಶದಿಂದ ಮಾತುಕತೆಗಳಲ್ಲಿ ಪರಸ್ಪರ ನಂಬಿಕೆ ಹೆಚ್ಚಿಸಲು ಉಕ್ರೇನ್‌ ರಾಜಧಾನಿ ಕೀವ್‌ ಮತ್ತು ಇನ್ನೊಂದು ಪ್ರಮುಖ ನಗರ ಚೆರ್ನಿವ್‌ ಬಳಿ ಸೇನಾ ಕಾರ್ಯಾಚರಣೆಗಳನ್ನು ನಿಯಮಿತವಾಗಿ ಕಡಿತಗೊಳಿಸಲು ಮಾಸ್ಕೊ ನಿರ್ಧರಿಸಿದೆ ಎಂದು ರಷ್ಯಾದ ರಕ್ಷಣಾ ಉಪ ಸಚಿವ ಅಲೆಕ್ಸಾಂಡರ್‌ ಫೊಮಿನ್‌ ಹೇಳಿದ್ದರು.
ಅದೇ ದಿನ ಮೈಕೊಲೈವ್‌ ಮೇಲೆ ದಾಳಿ ನಡೆದಿದೆ.

ಟಿಪ್ಪು ಸಂಗತಿ ಬಗ್ಗೆ ಪಠ್ಯಪುಸ್ತಕ ಪರಿಷ್ಕರಣಾ ವರದಿಪರಿಶೀಲನೆ-ಸಚಿವ ನಾಗೇಶ್

0

ಟಿಪ್ಪು ಸುಲ್ತಾನ್‌ ಕುರಿತು ಶಾಲಾ ಪಠ್ಯದಲ್ಲಿ ಇರುವ ಸತ್ಯವಲ್ಲದ ಹಾಗೂ ಅನಗತ್ಯವಾದ ಕೆಲ ವಿಚಾರಗಳನ್ನು ಕೈಬಿಡುವ ಬಗ್ಗೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಪರಿಶೀಲನೆ ನಡೆಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ತಿಳಿಸಿದ್ದಾರೆ.

ಶಾಲಾ ಪಠ್ಯದಲ್ಲಿ ಟಿಪ್ಪು ಸುಲ್ತಾನ್‌ ಅವರನ್ನು ವೈಭವೀಕರಿಸಲಾಗಿದೆ. ಅದನ್ನು ತೆಗೆದು ಹಾಕಿ, ಟಿಪ್ಪು ಕುರಿತಾದ ವಾಸ್ತವಗಳನ್ನು ತಿಳಿಸಬೇಕು ಎಂಬ ಚರ್ಚೆ ಶುರುವಾಗಿದೆ.
ಪಠ್ಯ ಪುಸ್ತಕ ಪರಿಶೀಲನೆ ಸಮಿತಿ ಈ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಶೀಘ್ರದಲ್ಲಿ ಈ ಕುರಿತಾಗಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮಧ್ಯೆ, ಶಾಲಾ ಪಠ್ಯದಲ್ಲಿ ಟಿಪ್ಪು ಸುಲ್ತಾನ್‌ಗಿರುವ ‘ಮೈಸೂರು ಹುಲಿ’ ಎಂಬ ಬಿರುದನ್ನು ಕೈಬಿಡಬೇಕು ಎಂಬುದು ಸೇರಿದಂತೆ ಟಿಪ್ಪುವನ್ನು ವೈಭವೀಕರಿಸಿರುವ ಕೆಲ ಅಂಶಗಳನ್ನು ತೆಗೆದುಹಾಕಲು ಪಠ್ಯ ಪರಿಷ್ಕರಣೆ ಸಮಿತಿ ಸರ್ಕಾರಕ್ಕೆ ತನ್ನ ವರದಿಯಲ್ಲಿ ಈಗಾಗಲೇ ಶಿಫಾರಸು ಮಾಡಿದೆ.

ಬಡವರ ಸಬಲೀಕರಣ ಬಡತನದ ವಿರುದ್ಧ ಹೋರಾಟಕ್ಕೆ ಧೈರ್ಯ-ಪ್ರಧಾನಿ

0

ಗ್ರಾಮೀಣ ಬಡವರಿಗೆ ಮನೆ ಒದಗಿಸುವ ಅಭಿಯಾನವು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಬದ್ಧತೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ ರಾಜ್ಯದಲ್ಲಿ ನಿರ್ಮಿಸಲಾದ ಮಧ್ಯಪ್ರದೇಶದ 5 ಲಕ್ಷ 21 ಸಾವಿರ ಮನೆಗಳ ವಾಸ್ತವ ‘ಗೃಹ ಪ್ರವೇಶ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಫಲಾನುಭವಿಗಳನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು.

ಬಡವರು ಸಬಲೀಕರಣಗೊಂಡರೆ ಬಡತನದ ವಿರುದ್ಧ ಹೋರಾಡುವ ಧೈರ್ಯ ಬರುತ್ತದೆ. ಸರ್ಕಾರ ಮತ್ತು ಬಡವರ ಪ್ರಯತ್ನಗಳು ಒಟ್ಟಿಗೆ ಸೇರಿದಾಗ ಬಡತನ ಹೋಗಲಾಡಿಸಬಹುದು ಎಂದು ಅವರು ಹೇಳಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗ್ರಾಮಗಳಲ್ಲಿ ನಿರ್ಮಿಸಲಾದ ಈ 5 ಲಕ್ಷದ 21 ಸಾವಿರ ಮನೆಗಳು ಕೇವಲ ಮನೆಗಳಲ್ಲ. ದೇಶದ ಬಡವರು ಸಬಲರಾಗುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಡವರಿಗೆ ಪಕ್ಕಾ ಮನೆ ನೀಡುವ ಅಭಿಯಾನ ಕೇವಲ ಸರಕಾರದ ಯೋಜನೆಯಾಗದೆ ಗ್ರಾಮಸ್ಥರಲ್ಲಿ ಹಾಗೂ ಬಡವರಲ್ಲಿ ನಂಬಿಕೆ ಮೂಡಿಸುವ ಬದ್ಧತೆಯಾಗಿದೆ ಎಂದರು.

ಬಡತನದ ಸಂಕೋಲೆಯಿಂದ ಹೊರ ಬರಲು ಬಡವರನ್ನು ಪ್ರೋತ್ಸಾಹಿಸಲು ಇದು ಮೊದಲ ಹೆಜ್ಜೆಯಾಗಿದೆ ಎಂದರು.
ದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಮನೆಗಳಲ್ಲಿ ಮಹಿಳೆಯರು ಸುಮಾರು ಎರಡು ಕೋಟಿ ಮನೆಗಳ ಮಾಲೀಕತ್ವವನ್ನು ಹೊಂದಿದ್ದಾರೆ. ಈ ಮಾಲೀಕತ್ವವು ಮನೆಯ ಇತರ ಆರ್ಥಿಕ ನಿರ್ಧಾರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಬಲಪಡಿಸಿದೆ ಎಂದರು.

ಸರ್ಕಾರ ಪ್ರತಿ ಮನೆಗೂ ಕುಡಿಯುವ ನೀರು ಒದಗಿಸಲು ಮುಂದಾಗಿದೆ. ಈ ಯೋಜನೆಯಡಿ ಕಳೆದ ಎರಡೂವರೆ ವರ್ಷಗಳಲ್ಲಿ ದೇಶಾದ್ಯಂತ 6 ಕೋಟಿಗೂ ಹೆಚ್ಚು ಕುಟುಂಬಗಳು ಶುದ್ಧ ಕುಡಿಯುವ ನೀರಿನ ಸಂಪರ್ಕ ಪಡೆದಿವೆ.

ಕೊರೊನಾ ಸಂದರ್ಭದಲ್ಲಿ ಸರ್ಕಾರ ಬಡವರಿಗೆ ಉಚಿತ ಪಡಿತರಕ್ಕಾಗಿ 2 ಲಕ್ಷ 60 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದು, ಮುಂದಿನ 6 ತಿಂಗಳಲ್ಲಿ 80 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು ಎಂದು ಹೇಳಿದರು.