Sunday, May 17, 2026
Sunday, May 17, 2026
Home Blog Page 163

L.B. Colleges ಸಾಗರದ ಎಲ್ .ಬಿ‌.ಕಾಲೇಜಿನ ಮುಖ್ಯದ್ವಾರಕ್ಕೆ ಶಿಲಾನ್ಯಾಸ.

0

L.B. Colleges ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ನೆಡೆಸುತ್ತಿರುವ ಲಾಲ್ ಬಹದ್ದೂರ್ ಕಲಾ, ವಿಜ್ಞಾನ ಮತ್ತು ಎಸ್.ಬಿ.ಸೊರಬನ ಶೆಟ್ಟಿ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಈಗ ಪ್ರಸಿದ್ಧ ಶ್ರವಣಬೆಳಗೊಳದ ಜೈನ ಮಠದ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ರವರು ಕಾಲೇಜ್ ನ ಮುಖ್ಯ ದ್ವಾರದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು. ನಂತರ ಗುರು ವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರ್ಶಿರವಚನ ನಿಡಿದರು.
L.B. Colleges ಸಮಾರಂಭದಲ್ಲಿ ಸಾಗರದ ಶಾಸಕರಾದ ಗೋಪಾಲಕೃಷ್ಣ ಬೇಳೂರು,ಎಂ.ಡಿ.ಎಫ್.ಅಧ್ಯಕ್ಷರಾದ ಬಿ.ಅರ್.ಜಯಂತ್, ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಕಾಲೇಜಿ ನ ಮುಖ್ಯಸ್ಥರು, ಉಪನ್ಯಾಸಕರು ವಿದ್ಯಾರ್ಥಿ ಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಕಾರ್ಯಕ್ರಮದ ಕ್ಷಣದ ಪೋಟೊ ಗ್ಯಾಲರಿ

Shimoga News ಮಕ್ಕಳು ಉತ್ಸಾಹದ ಚಿಲುಮೆಗಳು.ಉತ್ತಮ ಊಟ ಆಟ ಪಾಠದೊಂದಿಗೆ ಸಮಾಜದ ಅಭಿವೃದ್ಧಿ- ನ್ಯಾ.ಎಂ.ಎಸ್.ಸಂತೋಷ್

0

Shimoga News ಮಕ್ಕಳು ಉತ್ಸಾಹದ ಚಿಲುಮೆಗಳಾಗಿದ್ದು, ಉತ್ತಮ ಊಟ-ಆಟ-ಪಾಠದೊಂದಿಗೆ ಪ್ರಗತಿ ಹೊಂದಿ ಜೊತೆಗೆ ಇಡೀ ಸಮಾಜವನ್ನು ಅಭಿವೃದ್ದಿಯೆಡೆ ಕೊಂಡೊಯ್ಯಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್. ನುಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡಿ.09 ರಂದು ಕುವೆಂಪು ರಂಗಮAದಿರದಲ್ಲಿ ಏರ್ಪಡಿಸಲಾಗಿದ್ದ ಚಿಗುರು 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಕ್ಕಳ ಉತ್ಸಾಹ-ಹುರುಪು ನೋಡಿದರೆ ನಮಗೆ ಮತ್ತೊಮ್ಮೆ ಬಾಲ್ಯಾವಸ್ಥೆಗೆ ಹೋಗಬೇಕು ಎನ್ನಿಸುತ್ತಿದೆ.
ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಮುಖ್ಯವಾಗಿ ಜೀವಿಸುವ, ರಕ್ಷಣೆಯ, ಭಾಗವಹಿಸುವ ಮತ್ತು ಪ್ರಗತಿ ಹೊಂದುವ ಈ ನಾಲ್ಕು ಹಕ್ಕುಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು. ಹೀಗೆ ಈ ಅಂಶಗಳನ್ನೊಳಗೊAಡು ಮುನ್ನಡೆಯಲು ಮಕ್ಕಳು ಸಮರ್ಪಕ ಆಹಾರ, ದೇಹ ದಣಿಯುವ ಆಟ ಮತ್ತು ಪಾಠದಲ್ಲೂ ಮುಂದಿರಬೇಕು. ಈ ರೀತಿಯಾಗಿ ಮಕ್ಕಳು ತಾವು ಪ್ರಗತಿ ಹೊಂದುವ ಜೊತೆಗೆ ಇಡೀ ಸಮಾಜವನ್ನು ಅಭಿವೃದ್ದಿಯೆಡೆ ಕೊಂಡೊಯ್ಯಬಹುದು ಎಂದರು.
ಇಂದಿನ ಚಿಗುರು ಕಾರ್ಯಕ್ರಮದಲ್ಲಿನ ಸ್ಪರ್ಧೆಗಳು ಆಟ ಅನ್ನುವ ಅಂಶಕ್ಕೆ ಸೇರಿದ್ದು ಸ್ಪರ್ಧಾತ್ಮಕ ಮನೋಭಾವದಿಂದ ಮಕ್ಕಳು ಪಾಲ್ಗೊಳ್ಳಬೇಕು. ಗಮನ ಕೇಂದ್ರೀಕರಿಸಿ ಭಾಗವಹಿಸುವ ಪ್ರತಿ ಸ್ಪರ್ಧಾಳು ವಿಜೇತರಾದಂತೆ ಎಂದ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇಂತಹ ವೇದಿಕೆಯನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿರಿ ಎಂದು ಮಕ್ಕಳಿಗೆ ಕರೆ ನೀಡಿದರು.
Shimoga News ಅಪರ ಜಿಲ್ಲಾಧಿಕಾರಿ ಅಭಿಷೇಕ್.ವಿ ಮಾತನಾಡಿ, ಮಕ್ಕಳು ತಮ್ಮಲ್ಲಿರುವ ವಿವಿಧ ಪ್ರತಿಭೆಗಳನ್ನು ಅನಾವರಣಗೊಳಿಸಲು ಇದೊಂದು ಅತ್ಯುತ್ತಮ ವೇದಿಕೆಯಾಗಿದ್ದು, ಮಕ್ಕಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಹಾಗೂ ರಾಷ್ಟç ಮಟ್ಟದವರೆಗೆ ಗುರುತಿಸಿಕೊಂಡು ಜಿಲ್ಲೆಗೆ ಕೀರ್ತಿ ತರಬೇಕೆಂದು ಹಾರೈಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಮಾತನಾಡಿ ಚಿಗುರು ಕಾರ್ಯಕ್ರಮದಲ್ಲಿ 6 ರಿಂದ 14 ವರ್ಷದೊಳಗಿನ ಮಕ್ಕಳು ಪಾಲ್ಗೊಳ್ಳಬಹುದಾಗಿದ್ದು ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಮತ್ತು ಕರ್ನಾಟಕ ವಾದ್ಯ ಸಂಗೀತ, ಸುಗಮ ಸಂಗೀತ, ಜಾನಪದಗೀತೆ, ಸಮೂಹ ನೃತ್ಯ, ಯಕ್ಷಗಾನ, ಏಕಪಾತ್ರಭಿನಯ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಇಂದಿನ ಚಿಗುರು ಕಾರ್ಯಕ್ರಮದಲ್ಲಿ ಸುಮಾರು 60 ರಿಂದ 70 ಮಕ್ಕಳು ಪಾಲ್ಗೊಂಡಿದ್ದಾರೆAದರು.
ರಂಗಾಯಣದ ಆಡಳಿತಾಧಿಕಾರಿ ಶೈಲಜಾ ಎ ಸಿ, ಶಿವಮೊಗ್ಗ ತಾಲ್ಲೂಕು ಸಿಡಿಪಿಓ ಗಂಗಾಬಾಯಿ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್, ಸ್ಪರ್ಧಾಳುಗಳು, ವಿದ್ಯಾರ್ಥಿಗಳು ಹಾಜರಿದ್ದರು.

YADAV School Of Chess ಆನ್ ಲೈನ್ ಮೂಲಕಹಿಂದುಳಿದ & ಬಡಮಕ್ಕಳಿಗೆಒಂದು ತಿಂಗಳ ಚೆಸ್ ಕ್ರೀಡಾ ತರಬೇತಿ

0

YADAV School Of Chess ರಾಜೇಂದ್ರ ನಗರದಲ್ಲಿರುವ ಪ್ರತಿಷ್ಠಿತ ಯಾದವ ಸ್ಕೂಲ್ ಆಫ್ ಚೆಸ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಮತ್ತು ಬಡ ಮಕ್ಕಳಿಗೆ ಆನ್‌ಲೈನ್ ಮೂಲಕ ಡಿ. ೧೦ರಿಂದ ಜ. ೧೦ರವರೆಗೆ ಒಂದು ತಿಂಗಳ ಕಾಲ ಪ್ರತಿದಿನ ರಾತ್ರಿ ೭ರಿಂದ ೮ಗಂಟೆವರೆಗೆ ತರಬೇತಿ ನೀಡಲಾಗುತ್ತಿದೆ.

YADAV School Of Chess ಮೊದಲು ನೋಂದಾಯಿಸಿದ ಐವತ್ತು ಮಕ್ಕಳಿಗೆ ಮಾತ್ರ ಅವಕಾಶ ವಿದ್ದು, ಆಸಕ್ತ ಪೋಷಕರು ತಮ್ಮ ಮಕ್ಕಳನ್ನು ಸೇರಿಸಬಹುದಾಗಿದೆ. ಇದೊಂದು ಉತ್ತಮ ಅವಕಾಶ ವಾಗಿದ್ದು, ಚೆಸ್ ಕಲಿಯುವುದರಿಂದ ಮಕ್ಕಳಿಗೆ ಓದಲು ಏಕಾಗ್ರತೆ ಸಿಗುತ್ತದೆ. ಜೊತೆಗೆ ಶಿಸ್ತು ಕಲಿಸುತ್ತದೆ ಎಂದು ಅಂತರ ರಾಷ್ಟ್ರೀಯ ತೀರ್ಪುಗಾರ ಮತ್ತು ತರಬೇತುದರ ಪ್ರಾಣೇಶ್ ಯಾದವ್ ಅವರು ತಿಳಿಸಿದ್ದಾರೆ.

ಮಾಹಿತಿಗೆ ಮೊ. 9242401702 ಅಥವಾ 9743819678ರಲ್ಲಿ ಸಂಪರ್ಕಿಸಬಹುದಾಗಿದೆ.

Vallabhbhai Patel ಭ್ರಷ್ಟಾಚಾರವು ದೇಶದ ಆಂತರಿಕ ಶತ್ರು.- ಡಾ.ಹೆಚ್.ಬಿ.ಮಂಜುನಾಥ್

0

ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್ ಸ್ಮರಣೆಯಲ್ಲಿ ಹಿರಿಯ ಪತ್ರಕರ್ತ ಡಾ ಎಚ್ ಬಿ ಮಂಜುನಾಥ-

Vallabhbhai Patel ದಾವಣಗೆರೆ.ಡಿ.8. ಭ್ರಷ್ಟಾಚಾರವು ದೇಶದ ಅತಿ ದೊಡ್ಡ ಆಂತರಿಕ ಶತ್ರುವಾಗಿದ್ದು ಇದರ ನಿರ್ಮೂಲನೆಯು ಸನಾತನರ ಚಿಂತನೆಯೂ ಗಾಂಧೀಜಿ ನಂಬಿದ ಹತ್ತು ತತ್ವಗಳಲ್ಲಿ ಎರಡಾದ ‘ಆಸ್ತೇಯ’, ‘ಅಪರಿಗ್ರಹ’ ಪಾಲನೆಯಿಂದ ಸಾಧ್ಯ ಎಂದು ಹಿರಿಯ ಪತ್ರಕರ್ತ ಡಾ ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.

ಅವರಿಂದು ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗಾಂಧೀಜಿ ಅಧ್ಯಕ್ಷತೆ ವಹಿಸಿದ ಸ್ವಾತಂತ್ರ್ಯ ಚಳುವಳಿಯ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲರ 150ನೇ ಜನ್ಮ ವರ್ಷ ಅಂಗವಾಗಿ ಏರ್ಪಾಡಾಗಿದ್ದ ವಿಶೇಷ ಉಪನ್ಯಾಸ ನೀಡುತ್ತಾ ವಾಮ ಮಾರ್ಗದ ಸಂಪಾದನೆ ಬೇಡ ಎನ್ನುವ ಆಸ್ತೇಯ ಗುಣ ಹಾಗೂ ಸಂಪತ್ತಿನ ದಾಹವಿಲ್ಲದ ಸರಳ ಜೀವನದ ಅಪರಿಗ್ರಹ ಗುಣ ಬಹು ಮುಖ್ಯ ಎಂಬುದನ್ನು ಗಾಂಧೀಜಿ ತಮ್ಮ ಆತ್ಮಕಥನ ಸತ್ಯಾನ್ವೇಷಣೆಯಲ್ಲಿ ಒತ್ತಿ ಹೇಳಿದ್ದು ಇಂದಿನ ಪೀಳಿಗೆಯು ತಾವೆಂದೂ ಲಂಚ ಕೊಡುವುದಿಲ್ಲ ಹಾಗೂ ತೆಗೆದುಕೊಳ್ಳುವುದಿಲ್ಲ ಎಂಬ ಸಂಕಲ್ಪ ಮಾಡಬೇಕಿದೆ ಅದರಂತೆ ನಡೆಯಬೇಕಿದೆ ಎಂದರಲ್ಲದೆ ಗಾಂಧೀಜಿ ಆತ್ಮಕಥನದ ಅನೇಕ ತತ್ವ ವಿಚಾರಗಳನ್ನು ಉದಾಹರಣೆಗಳ ಸಹಿತ ವಿವರಿಸಿದರು.

ಉಕ್ಕಿನ ಮನುಷ್ಯ ಎಂದೇ ಪ್ರಖ್ಯಾತರಾದ ಸರ್ದಾರ್ ವಲ್ಲಭಭಾಯಿ ಪಟೇಲರ ದೂರ ದೃಷ್ಟಿ, ದೃಢಸಂಕಲ್ಪ, ಅಚಲ ನಿಷ್ಠೆ, ರಾಷ್ಟ್ರ ಪ್ರೇಮ, ನಿರ್ದಾಕ್ಷಿಣ್ಯ ಕ್ರಮ ಮುಂತಾದವು ಎಲ್ಲ ಪೀಳಿಗೆಗೂ ಆದರ್ಶವಾಗಬೇಕಿದ್ದು ಸ್ವಾತಂತ್ರ್ಯಾ ನಂತರವೂ ದೇಶದಲ್ಲಿದ್ದ ಸುಮಾರು 562ಕ್ಕೂ ಹೆಚ್ಚು ದೊಡ್ಡ ಚಿಕ್ಕ ಪ್ರಾಂತ್ಯ ಸಂಸ್ಥಾನಗಳನ್ನು ತೆಗೆದು ಅಖಂಡ ಭಾರತವನ್ನು ಒಂದಾಗಿಸಿ ಭಾಷಾವಾರು ಪ್ರಾಂತ್ಯ ರಚನೆ ಮಾಡಿದ ಮಹಾಮುತ್ಸದ್ಧಿ ಪಟೇಲರ ಧೀಶಕ್ತಿ ಅಸಾಮಾನ್ಯವಾದದ್ದು ಎಂದ ಎಚ್.ಬಿ.ಮಂಜುನಾಥ್ ಯುವಜನತೆ ಈ ಗುಣಗಳನ್ನು ರೂಢಿಸಿಕೊಳ್ಳಬೇಕು ಎಂದರು.

Vallabhbhai Patel ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ನಿರ್ದೇಶಕ ಪ್ರೊ. ವೈ ವೃಷಭೇಂದ್ರಪ್ಪನವರು ದೇಶದ ಅಖಂಡತೆ ಸುಭದ್ರತೆ ಉಳಿಸಿಕೊಳ್ಳುವ ಜವಾಬ್ದಾರಿ ಯುವ ಜನತೆಯದಾಗಿದೆ, ದೇಶದ ಮನಸ್ಸುಗಳನ್ನು ಒಡೆಯುವ ಹುನ್ನಾರದ ವಿಚಿತ್ರ ಬುದ್ಧಿಜೀವಿಗಳ ಮಾತಿಗೆ ಯುವ ಜನತೆ ಕಿವಿ ಕೊಡಬಾರದು ಎಂದರು.

ಕಾಲೇಜಿನ ಟೆಕ್ಸ್ಟೈಲ್ ವಿಭಾಗದ ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನಾಡಿದರು. ಕೃಷ್ಣಕುಮಾರ್ ಸ್ವಾಗತ ಕೋರಿದರು. ವಿದ್ಯಾರ್ಥಿನಿಯರಾದ ಸಾಕ್ಷಿ ನಿರೂಪಿಸಿದರೆ ಸುಹಾಸಿನಿ ವಂದನೆ ಸಮರ್ಪಿಸಿದರು. ಪ್ರಬಂಧ ಮುಂತಾದ ಸ್ಪರ್ಧಾ ವಿಜೇತರುಗಳಿಗೆ ಬಹುಮಾನ ಪ್ರಮಾಣ ಪತ್ರ ವಿತರಿಸಲಾಯಿತು.

Shimoga News ಶಿವಮೊಗ್ಗದಲ್ಲಿ ವಿಮಾ ನಿಗಮದ ಉಪ ಕಚೇರಿ ತೆರೆಯಲು ಆಗ್ರಹ

0

Shimoga News ಶಿವಮೊಗ್ಗ ನಗರದಲ್ಲಿ ನೌಕರರ ರಾಜ್ಯ ವಿಮಾ ನಿಗಮದ ಉಪ ಪ್ರಾದೇಶಿಕ ಕಚೇರಿಯ ಕರ್ನಾಟಕ ವಿಭಾಗ ತೆರೆಯುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಆಗ್ರಹಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಇಎಸ್‌ಐಸಿ ಪ್ರಾದೇಶಿಕ ಕಚೇರಿ ಹುಬ್ಬಳ್ಳಿ ಸಂಯುಕ್ತ ಸಹಭಾಗಿತ್ವದಲ್ಲಿ ಸಂಘದ ಶಾಂತಲಾ ಸ್ಪೇರೋಕ್ಯಾಸ್ಟ್ ಸಭಾಂಗಣದಲ್ಲಿ “ಇಎಸ್‌ಐಸಿ ಎಸ್‌ಪಿಆರ್‌ಇಇ 2025 ಕಾರ್ಯಕ್ರಮ” ಯೋಜನೆ ಅಡಿಯಲ್ಲಿ ಆಯೋಜಿಸಿದ್ದ ಸಾಮಾಜಿಕ ಭದ್ರಾತಾ ಸೌಲಭ್ಯ ವಿಸ್ತರಣಾ ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು.

ಪ್ರಸ್ತುತ ನೌಕರರ ರಾಜ್ಯ ವಿಮಾನ ನಿಗಮದ ಹುಬ್ಬಳ್ಳಿ ಕೇಂದ್ರವು ಶಿವಮೊಗ್ಗ, ಭದ್ರಾವತಿ, ದಾವಣಗೆರೆ, ಚಿತ್ರದುರ್ಗ ಮತ್ತು ಹರಿಹರ ಕಚೇರಿ ಕೇಂದ್ರಗಳ ವ್ಯಾಪ್ತಿ ಹೊಂದಿದೆ. ಈ ವ್ಯಾಪ್ತಿ ಪ್ರದೇಶದಲ್ಲಿ 2,80,000 ನೋಂದಾಯಿತ ಕಾರ್ಮಿಕರು ಮತ್ತು 5670 ನೊಂದಾಯಿತ ಮಾಲೀಕರಿದ್ದಾರೆ. ಹುಬ್ಬಳ್ಳಿ ಕೇಂದ್ರವು ಮೇಲ್ಕಂಡ ವ್ಯಾಪ್ತಿ ಪ್ರದೇಶಗಳಿಂದ ಅತ್ಯಂತ ದೂರವಾಗಿದೆ ಎಂದು ತಿಳಿಸಿದರು.

ಕಾರ್ಮಿಕರಿಗೆ ಕೆಲಸ ಕಾರ್ಯಗಳಿಗೆ ಹುಬ್ಬಳ್ಳಿಗೆ ಭೇಟಿ ನೀಡಲು ತುಂಬಾ ಅನಾನುಕೂಲವಾಗಿದೆ. ಆದ್ದರಿಂದ ಶಿವಮೊಗ್ಗ ನಗರಕ್ಕೆ ಉಪ ಪ್ರಾದೇಶಿಕ ಕಚೇರಿ ಮಂಜೂರು ಮಾಡಬೇಕು. ನೌಕರರ ರಾಜ್ಯ ವಿಮಾ ನಿಗಮವು ರಾಗಿಗುಡ್ಡದಲ್ಲಿ 100 ಹಾಸಿಗೆ ಆಸ್ಪತ್ರೆ ಮತ್ತು 32 ಸಿಬ್ಬಂದಿ ವಸತಿಗೃಹ ನಿರ್ಮಾಣ ಕೈಗೆತ್ತಿಕೊಂಡಿದೆ. ಮಾರ್ಚ್ 2026 ರೊಳಗೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

Shimoga News ಮಾಚೇನಹಳ್ಳಿ ಕೈಗಾರಿಕಾ ವಲಯದಲ್ಲಿ ಇಎಸ್‌ಐ ಔಷಧಾಲಯ ಹಾಗೂ ಶಿಕಾರಿಪುರಕ್ಕೆ ನೌಕರರ ರಾಜ್ಯ ವಿಮಾ ನಿಗಮದ ಇಎಸ್‌ಐ ಶಾಖೆ ಮಂಜೂರು ಮಾಡಬೇಕು. ಎಸ್‌ಪಿಆರ್‌ಇಇ 2025 ಕಾರ್ಯಕ್ರಮದ ಬಗ್ಗೆ ಹೆಚ್ಚು ಪ್ರಚಾರ ಕೈಗೊಳ್ಳಬೇಕು. ದಂಡವಿಲ್ಲದೆ ನೋಂದಣಿಗೆ 2026ರ ಮಾರ್ಚ್ ವರೆಗೂ ಅವಕಾಶ ನೀಡಬೇಕು ಎಂದು ತಿಳಿಸಿದರು.

ನೌಕರರ ರಾಜ್ಯ ವಿಮಾ ನಿಗಮ ಹುಬ್ಬಳ್ಳಿ ಉಪ ವಿಭಾಗಿಯ ಕಚೇರಿ ಜಂಟಿ ನಿರ್ದೇಶಕ ರಘುರಾಮನ್ ಮಾತನಾಡಿ, ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಯೋಜನೆ ಎಸ್‌ಪಿಆರ್‌ಇಇ 2025 ಕಾರ್ಯಕ್ರಮ ಎಂದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್ ಮನೋಹರ, ಪ್ರೋಗ್ರಾಂ ಕಮಿಟಿ ಚೇರ್ಮನ್ ಶರತ್, ನಿರ್ದೇಶಕರಾದ ಪಿ.ರುದ್ರೇಶ್, ಎಸ್.ಎಸ್.ಉದಯಕುಮಾರ್, ಬಿ.ಸುರೇಶ್ ಕುಮಾರ್, ಜಿ.ವಿ.ಕಿರಣ್ ಕುಮಾರ್, ಡಾ ಲಕ್ಷ್ಮೀದೇವಿ ಗೋಪಿನಾಥ್, ಮಾಜಿ ಅಧ್ಯಕ್ಷ ಜೆ.ಆರ್.ವಾಸುದೇವ್, ಡಿ.ಎಂ.ಶಂಕರಪ್ಪ, ನೌಕರರ ರಾಜ್ಯ ವಿಮಾ ನಿಗಮದ ಶಿವಮೊಗ್ಗ ಕೇಂದ್ರದ ಮ್ಯಾನೇಜರ್ ಆಶಾದೇವಿ, ಭದ್ರಾವತಿ ಕೇಂದ್ರದ ಮಂಜುಳಾ, ಕಾರ್ಮಿಕ ಇಲಾಖೆ ಅಧಿಕಾರಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಿ ಹಾಜರಿದ್ದರು.

K. S. Eshwarappa ಗುಣಮಟ್ಟದ ಚಹಾ ಸೇವೆಯ ” ಸ್ವಸ್ತಿಕ್ ಚಾಯ್” ಗೆ ಚಾಲನೆ.

0

K. S. Eshwarappa ನಗರದ ರಾಜೇಂದ್ರನಗರ, ಲಕ್ಷ್ಮೀ ಟಾಕೀಸ್ ಹಿಂಭಾಗ ಆಕ್ಸಿಸ್ ಬ್ಯಾಂಕ್ ಹತ್ತಿರ ಸ್ಥಾಪಿತವಾಗಿರುವ ಸ್ವಸ್ತಿಕ್ ಚಾಯ್‌ನ ಹೊಸ ಶಾಖೆಯನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಇಂದು ಬೆಳಿಗ್ಗೆ ಉದ್ಘಾಟನೆಯನ್ನು ನೆರವೇರಿಸಿದರು.
ಹೊಸ ಶಾಖೆಯ ಉದ್ಘಾಟನೆಯೊಂದಿಗೆ ನಗರದಲ್ಲಿ ಗುಣಮಟ್ಟದ ಚಹಾ ಸೇವೆ ಮತ್ತು ಕುಟುಂಬಸ್ನೇಹಿ ವಾತಾವರಣ ಒದಗಿಸುವತ್ತ ಸಂಸ್ಥೆಯ ಬದ್ಧತೆ ಮತ್ತಷ್ಟು ಬಲಪಡಲಿದೆ ಎಂದು ವ್ಯವಸ್ಥಾಪಕ ತಿಳಿಸಿದರು.
K. S. Eshwarappa ಈ ಸಂದರ್ಭದಲ್ಲಿ ಭಾರತೀ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎ. ಶಿವಕುಮಾರ್, ರೇಖಾ ರಂಗನಾಥ್, ಮಾಲೀಕರಾದ ಸುರೇಶ್, ಕಿಶನ್, ನಿತೀನ್ ಸೇರಿದಂತೆ ಕುಟುಂಬದವರು, ಸ್ನೆಹಿತರು ಪಾಲ್ಗೊಂಡು ಶುಭ ಹಾರೈಸಿದರು.

Areca Garden Shimoga ಅತೀ ಕನಿಷ್ಠ ವಿಮೆ ಹಣ ಪರಿಹಾರ. ಸೂಕ್ತ ಪರಿಹಾರಕ್ಕೆ ಹಕ್ಕೋತ್ತಾಯ ಮಾಡಲು ಸಂಘಟನೆಯ ಕರೆ.

0

Areca Garden Shimoga ಅಡಿಕೆ ಬೆಳೆಗಾರ ಇವತ್ತು ಎಲೆ ಚುಕ್ಕೆ, ಕೊಳೆರೋಗ ,ಕಾಡುಪ್ರಾಣಿಗಳ ಹಾವಳಿ ಹೀಗೆ ಎಲ್ಲಾ ರೀತಿಯ ಸಂಕಷ್ಟಗಳಿಂದ ತತ್ತರಿಸಿ ಹೋಗಿದ್ದು ಗಾಯದ ಮೇಲೆ ಬರೆ ಎಳೆದಂತೆ ಅತಿವೃಷ್ಟಿಯಿಂದ ಇರುವ ಫಸಲೂ ಕೂಡ ನಷ್ಟ ಹೊಂದಿದೆ. ಆಪತ್ ಕಾಲಕ್ಕೆ ಆಗಲಿ ಎಂದು ಕಟ್ಟಿದ ಇನ್ಸೂರೆನ್ಸ್ ಹಣವು ಕೂಡ ಇನ್ಸೂರೆನ್ಸ್ ಕಂಪನಿ ಪಾಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅವೈಜ್ಞಾನಿಕ ,ರೈತ ವಿರೋಧಿ ವರದಿಯಿಂದ ಇವತ್ತು ಬೆಳೆಗಾರನಿಗೆ ಹೆಕ್ಟೇರಿಗೆ ಬರಬೇಕಾದ 128,000 /ಮೊತ್ತದ ಬದಲಾಗಿ ಆರು ನೂರು ರೂಗಳು ಕೆಲವೆಡೆ 975 ರೂಗಳು ಹೀಗೆ ಅತಿ ಕನಿಷ್ಠ ಮೊತ್ತದ ಹಣ ಬೆಳೆಗಾರನ ಖಾತೆಗೆ ಜಮೆಯಾಗಿದೆ. . ಹಾಗೂ ಬರುವ ವರ್ಷದ ವಿಮಾ ಪರಿಹಾರಕ್ಕೆ ಇದೇ ಮಾನದಂಡವೇ ಅನ್ವಯಿಸುವುದರಿಂದ ಬರುವ ಸಾಲಿನಲ್ಲಿಯೂ ಬೆಳೆಗಾರನಿಗೆ ಇದೇ ಪರಿಸ್ಥಿತಿ ಬರುವುದು ಖಂಡಿತ .ಕಟ್ಟಿದ ವಿಮೆಗೆ ಪರಿಹಾರದ ಮೊತ್ತವನ್ನ ಪಡೆಯುವುದು ಬೆಳೆಗಾರನ ಆದ್ಯ ಹಕ್ಕು .ಹಾಗಾಗಿ ಇದು ಯಾರ ವಿರುದ್ಧ ಪ್ರತಿಭಟನೆ ಎನ್ನುವುದಕ್ಕಿಂತಲೂ ಹೆಚ್ಚಾಗಿ ನಮ್ಮ ಹಕ್ಕಿಗಾಗಿ ಆಗ್ರಹಿಸುವ ಹಕ್ಕೊತ್ತಾಯದ Areca Garden Shimoga ಸಭೆಯಾಗಿದೆ. ಸಂಕಷ್ಟ ಪರಿಸ್ಥಿತಿಯಲ್ಲೆಲ್ಲಾ ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ಅಡಿಕೆ ಬೆಳೆಗಾರರ ಪರವಾಗಿ ನಿಂತಿದ್ದು ಎಲ್ಲಾ ರೀತಿಯ ಹೋರಾಟಗಳನ್ನು ಮಾಡುತ್ತಾ ಬಂದಿದೆ . ನಾಳೆಯೂ ಕೂಡ ಬೆಳೆಗಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಕ್ಕೊತ್ತಾಯದ ಸಭೆಯನ್ನು ಕರೆಯಲಾಗಿದ್ದು ಪ್ರಾಂತ್ಯದ ಎಲ್ಲಾ ಅಡಿಕೆ ಬೆಳೆಗಾರರೂ ಇಂದು ಮಂಗಳವಾರ ಬೆಳಿಗ್ಗೆ 10:30 ಕ್ಕೆ ಸರಿಯಾಗಿ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿ ಎದುರಿನಲ್ಲಿ ಆಗಮಿಸಿ ಸಭೆ ಸೇರಿ ನ್ಯಾಯಯುತ ಪರಿಹಾರ ಪಡೆಯುವ ಹಕ್ಕಿಗಾಗಿ ಸಂಘದ ಹೋರಾಟದಲ್ಲಿ ಕೈಜೋಡಿಸಬೇಕಾಗಿ ವಿನಂತಿಸುತ್ತಿದ್ದೇವೆ

Department Of Education Shimoga ಶಿವಮೊಗ್ಗದಲ್ಲಿ ಶಾಲಾ ಶಿಕ್ಷರಿಗೆ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳು

0

Department Of Education Shimoga 2025-26ನೇ ಸಾಲಿನ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರುಗಳಿಗೆ ಡಿ. 11 ರಂದು ಬೆಳಗ್ಗೆ 10.00 ರಿಂದ ಬಿ.ಹೆಚ್.ರಸ್ತೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
Department Of Education Shimoga ಭಕ್ತಿಗೀತೆ, ಆಶುಭಾಷಣ, ಪ್ರಬಂಧ ಸ್ಪರ್ಧೆ, ಸ್ಥಳದಲ್ಲೇ ಪಾಠೋಪಕರಣ ತಯಾರಿಕಾ ಸ್ಪರ್ಧೆ, ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ ಹಾಗೂ ಸಾಮಾನ್ಯ ಜ್ಞಾನ ಮತ್ತು ವಿಜ್ಞಾನ ವಿಷಯಗಳ ಕುರಿತು ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಗುತ್ತಿದ್ದು, ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಶಿಕ್ಷಕರು ಭಾಗವಹಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆ) ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Doc Adalat ಡಿಸೆಂಬರ್ 15. ಶಿವಮೊಗ್ಗ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ” ಡಾಕ್ ಅದಾಲತ್”

0

Doc Adalat ಶಿವಮೊಗ್ಗ ಕೋಟೆ ರಸ್ತೆಯಲ್ಲಿರುವ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಡಿ. 15 ರಂದು ಬೆಳಗ್ಗೆ 11.00ಕ್ಕೆ ತ್ರೈಮಾಸಿಕ ಡಾಕ್ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಅಂಚೆ ಇಲಾಖೆಯ ಕುಂದುಕೊರತೆಗಳನ್ನು ಅಥವಾ ಸಲಹೆಗಳಿದ್ದಲ್ಲಿ ಡಿ. 12 ರೊಳಗಾಗಿ ಲಿಖಿತವಾಗಿ ಸಲ್ಲಿಸಿ, ಡಾಕ್ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅಂಚೆ ಅಧೀಕ್ಷಕ ಎಂ. ಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

Red Sandalwood Smuggling ಮಂಡಗದ್ದೆ ಸನಿಹ ಅಕ್ರಮ ಶ್ರೀಗಂಧ ಅರಣ್ಯ ಸಿಬ್ಬಂದಿ ವಶ.ಆರೋಪಿಗಳ ಬಂಧನ.

0

Red Sandalwood Smuggling ಮಂಡಗದ್ದೆ ವಲಯ, ಮಂಡಗದ್ದೆ ಶಾಖೆಯ ಕನಗಳಕೊಪ್ಪ ಗಸ್ತಿನ ರ ಮೇಲಿನ ಪತ್ರುವಳ್ಳಿ ಗ್ರಾಮದ ಸರ್ವೇ ನಂಬರ್ 06 ರಲ್ಲಿ 33.250 Kg ಶ್ರೀಗಂಧವನ್ನು ಸರ್ಕಾರದ ಪರ ವಶಪಡಿಸಿಕೊಂಡು, ಸತೀಶ್ ಬಿನ್ ನಂದಿ ಬಸವ ಕನಗಳಕೊಪ್ಪ ವಾಸಿ ಮತ್ತು ಪ್ರಕಾಶ್ ಬಿನ್ ಶೇಖರ್ ಕನಗಳಕೊಪ್ಪ ವಾಸಿ ಇಬ್ಬರನ್ನು ಬಂಧಿಸಿ ಅರಣ್ಯ ಮೊಕದ್ದಮೆ ಸಂಖ್ಯೆ 35/2025-26 ದಾಖಲಿಸಿರುತ್ತಾರೆ. ಸದರಿ ಕಾರ್ಯಾಚರಣೆಯಲ್ಲಿ ಶ್ರೀ ವಿನಯ ಕುಮಾರ್, ವಲಯ ಅರಣ್ಯಧಿಕಾರಿ, ಶ್ರೀ ಅಮಿತ್ ಉಪ ವಲಯ Red Sandalwood Smuggling ಅರಣ್ಯಧಿಕಾರಿ, ಶ್ರೀ ಸಂತೋಷ್, ಕಿರಣ್ ಕುಮಾರ್ ಮತ್ತು ಮಹದೇವ್ ಗಸ್ತು ಅರಣ್ಯ ಪಾಲಕರು ಮತ್ತು ಶ್ರೀ ಅರುಣ್ ವಾಹನ ಚಾಲಕರ ಭಾಗವಹಿಸಿದ್ದರು.