Thursday, September 17, 2026
Thursday, September 17, 2026

Scouts-Guides ಗೌರವ ಡಾಕ್ಟರೇಟ್ ಪಡೆದ ಪಿ‌.ಜಿ.ಆರ್.ಸಿಂಧ್ಯಾ ಅವರಿಗೆ ಸನ್ಮಾನ

Date:

Scouts-Guides ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ನಡೆದ ಜಿಲ್ಲಾ ಮಟ್ಟದ ರೋವರ್ಸ್ ಮತ್ತು ರೇಂಜರ್ಸ್ ಶಿಬಿರ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಲಬುರ್ಗಿ ಕೇಂದ್ರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಸ್ಕೌಟ್ಸ್-ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತರಾದ ಶ್ರೀ ಪಿ.ಜಿ.ಆರ್.ಸಿಂದ್ಯ ಹಾಗೂ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಗಜಾನನ ಮನ್ನಿಕೇರಿ ಇರ್ವರನ್ನೂ ಸವದತ್ತಿಯ ಬಿಇಒ ಕಚೇರಿ ಹಾಗೂ ತಾಲೂಕಾ ಸಂಸ್ಥೆಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನವು ದೇಶದ ಮುಖ್ಯ ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳವಾಗಿದ್ದು, ಈ ಕ್ಷೇತ್ರದಲ್ಲಿ ಸ್ಕೌಟ್ಸ್‌-ಗೈಡ್ಸ್ ನ ರೋವರ್ಸ್ ಮತ್ತು ರೇಜರ್ಸ್ ಗಳ ಶಿಬಿರ ಹಮ್ಮಿಕೊಂಡು ಸ್ವಚ್ಛತಾ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದರು. ಸ್ಕೌಟ್ಸ್-ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಗಜಾನನ ಮನ್ನಿಕೇರಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಮಹಿಳೆ ಅಬಲೆಯಲ್ಲ, ಅವಳು ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡಿ ಎಲ್ಲರಿಗೂ ಸ್ಪೂರ್ತಿಯಾಗಿದ್ದಾಳೆ ಎಂದರು. ಸವದತ್ತಿ ಬಿಇಒ ಎ.ಎ.ಖಾಜಿ ಮಾತನಾಡಿ ಮಕ್ಕಳಲ್ಲಿ ಶಿಸ್ತು ಸಂಯಮ ಬೆಳೆಸಲು ಸ್ಕೌಟ್ಸ್‌-ಗೈಡ್ಸ್ ಮಹತ್ವದ ಪಾತ್ರ ವಹಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎರಡೂ ಶೈಕ್ಷಣಿಕ ಜಿಲ್ಲೆಯ ಮಹಿಳಾ ಅಧಿಕಾರಿಗಳಾದ ಶ್ರೀಮತಿ ಲೀಲಾವತಿ ಹಿರೇಮಠ DDPI , ಶ್ರೀಮತಿ ಮಹದೇವಿ ನಾಯಕ BEO ನಿಪ್ಪಾಣಿ, ಶ್ರೀಮತಿ ಪಿ ಬಿ ಪಾಟೀಲ BEO ಹುಕ್ಕೇರಿ, ಶ್ರೀಮತಿ ಉಮಾದೇವಿ ಹಿರೇಮಠ DYPC ಬೆಳಗಾವಿ, ಶ್ರೀಮತಿ ಸುರೇಖಾ ಮಿರ್ಜಿ ಖಾನಾಪುರ PEO, ಶ್ರೀಮತಿ ಸಾಧನಾ ಎಂ ಭದ್ರಿ PEO ಬೆಳಗಾವಿ ಗ್ರಾಮೀಣ, ಶ್ರೀಮತಿ ಜಾಹಿರಾ ಪಟೇಲ್ PEO ಬೆಳಗಾವಿ ನಗರ ಹಾಗೂ ಶ್ರೀ ರೇಣುಕಾ ಎಲ್ಲಮ್ಮ ಟ್ರಸ್ಟ್ ಉಪ ಕಾರ್ಯದರ್ಶಿಗಳಾದ ಶ್ರೀಮತಿ ನಾಗರತ್ನ ಚೋಳನ, ಶ್ರೀಮತಿ ಪಲ್ಲವಿ ನಾಡಕರ್ಣಿ ಜೈನ ಶಿಕ್ಷಣ ಸಂಸ್ಥೆ ಬೆಳಗಾವಿ, ಶ್ರೀಮತಿ ಅಪರ್ಣ ದೇಶಪಾಂಡೆ ಫೀನಿಕ್ಸ್ ಇಂಗ್ಲಿಷ್ ಮಾಧ್ಯಮ ಶಾಲೆ ಹೊಣಗ, ಶ್ರೀಮತಿ ಚೇತನ ಪಾಟೀಲ್ ಕೆಎಲ್ಇ ಇಂಗ್ಲಿಷ್ ಮಾಧ್ಯಮ ಶಾಲೆ ಗೋಕಾಕ್, ಶ್ರೀಮತಿ ಭಾರತಿ ತೂಗಶೆಟ್ಟಿ ಅಡುಗೆ ಸಹಾಯಕರು ಇವರುಗಳನ್ನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ಯವಾಗಿ “ಶ್ರೇಷ್ಠ ಸೇವಾ ಪ್ರಶಸ್ತಿ” ಯನ್ನು ನೀಡಿ, ಗೌರವಿಸಿ ಸತ್ಕರಿಸಲಾಯಿತು.

Scouts-Guides ಶಿಬೀರದಲ್ಲಿ ಬೆಳಗಾವಿ ಜಿಲ್ಲೆಯ ಬೇರೆ ಬೇರೆ ಪದವಿ ಮಹಾವಿದ್ಯಾಲಯಗಳ 300 ರೋವರ್ಸ್ ಮತ್ತು ರೇಂಜರ್ಸ್ ಮಕ್ಕಳು, ನಾಲ್ಕು ದಿನದವರೆಗೆ ಯಲ್ಲಮ್ಮ ದೇವಸ್ಥಾನದ ಪ್ರಾಂಗಣದ ಸ್ವಚ್ಛತೆ ಮತ್ತು ಜಾತ್ರಾ ನಿಮಿತ್ಯ ಎಲ್ಲಮ್ಮ ದೇವಸ್ಥಾನದ ಹುಂಡಿಯ ಹಣ ಎಣಿಕೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಲ್ಲಾ ತಾಲೂಕುಗಳ ಸ್ಕೌಟ್ ಕಾರ್ಯದರ್ಶಿಗಳು ಹಿರಿಯ ದಳ ನಾಯಕರುಗಳು, ಜಿಲ್ಲೆಯ ರೋವರ್ಸ್ ರೆಂಜರ್ಸ್ ವಿದ್ಯಾರ್ಥಿಗಳು ರೋವರ್ ರೇಂಜರ್ ನಾಯಕರುಗಳು ಹಾಗೂ ಸಿ.ಆರ್.ಪಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...