Friday, February 27, 2026
Friday, February 27, 2026
Home Blog Page 1614

ಕಲ್ಲಿದ್ದಲು ಕೊರತೆಯಿಲ್ಲ, ಪೂರೈಕೆಯಲ್ಲಿ ತಡ-ಸಚಿವ ಜೋಷಿ

0

ದೇಶಾದ್ಯಂತ ಬೇಸಿಗೆ ತಾಪ ಏರುತ್ತಿರುವ ಬೆನ್ನಲ್ಲೇ ವಿದ್ಯುತ್ ಬೇಡಿಕೆಯೂ ಹೆಚ್ಚಾಗಿದೆ. ಈ ನಡುವೆ, ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಕೊರತೆ ಗೋಚರಿಸಿದೆ. ಹೀಗಾಗಿ ಕೆಲವು ರಾಜ್ಯಗಳಲ್ಲಿ ಪವರ್ ಕಟ್ ಶುರುವಾಗಿದೆ.

ಸೆಂಟ್ರಲ್ ಇಲೆಕ್ಟ್ರಿಸಿಟಿ ಅಥಾರಿಟಿ ಆಫ್ ಇಂಡಿಯಾದ ಇತ್ತೀಚಿನ ಕಲ್ಲಿದ್ದಲು ದೈನಿಕ ವರದಿ ಪ್ರಕಾರ, ದೇಶದ 150 ಉಷ್ಣ ವಿದ್ಯುತ್ ಸ್ಥಾವರಗಳ ಪೈಕಿ ಸ್ಥಳೀಯ ಕಲ್ಲಿದ್ದಲು ಬಳಸುವ 81 ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಗಂಭೀರ ಸ್ಥಿತಿಯಲ್ಲಿದೆ ಎನ್ನಲಾಗುತ್ತಿದೆ.

ಇದೇ ರೀತಿ, 54 ಖಾಸಗಿ ಉಷ್ಣ ವಿದ್ಯುತ್ ಸ್ಥಾವರಗಳ ಪೈಕಿ 28ರಲ್ಲಿ ಪರಿಸ್ಥಿತಿ ಹದಗೆಟ್ಟಿದೆ ಎಂದು ತಿಳಿದುಬಂದಿದೆ.

ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಕಲ್ಲಿದ್ದಲು ಕೊರತೆ ವಿಚಾರವಾಗಿ ಕೇಂದ್ರ ಸರ್ಕಾರ ಕಳವಳ ತೋಡಿಕೊಂಡಿದೆ. ಇತ್ತೀಚೆಗೆ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್)ನಲ್ಲಿ 72.5 ದಶಲಕ್ಷ ಟನ್ ಕಲ್ಲಿದ್ದಲು ದಾಸ್ತಾನಿದೆ. ಆದಾಗ್ಯೂ, ಕಲ್ಲಿದ್ದಲು ಸಚಿವಾಲಯದ ಅಧಿಕಾರಿಗಳು ಕಲ್ಲಿದ್ದಲು ಕೊರತೆ ಇರುವುದನ್ನು ಅಲ್ಲಗಳೆಯಲಾಗದು ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿರುವ ವಿದ್ಯುತ್ ಸ್ಥಾವರದಲ್ಲಿ ಕೇವಲ ಏಳು ದಿನಕ್ಕೆ, ಹರಿಯಾಣದಲ್ಲಿ 8 ದಿನಕ್ಕೆ, ರಾಜಸ್ಥಾನದಲ್ಲಿ 17 ದಿನಗಳಿಗೆ ಆಗುವಷ್ಟು ಮಾತ್ರವೇ ಕಲ್ಲಿದ್ದಲು ದಾಸ್ತಾನು ಇದೆ. ನಿಯಮ ಪ್ರಕಾರ ಪ್ರತಿ ವಿದ್ಯುತ್ ಸ್ಥಾವರದಲ್ಲಿ 26 ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ದಾಸ್ತಾನು ಇರಿಸಿಕೊಳ್ಳಬೇಕು. ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಜಾರ್ಖಂಡ್, ಛತ್ತೀಸ್​ಗಢಗಳಲ್ಲಿ ಕೂಡ ಪರಿಸ್ಥಿತಿ ಚೆನ್ನಾಗಿಲ್ಲ ಎನ್ನಲಾಗುತ್ತಿದೆ.

ವಿದ್ಯುತ್ ಬೇಡಿಕೆಯು ಏಪ್ರಿಲ್ 19ಕ್ಕೆ 1,88,014 ಮೆಗಾವಾಟ್ ತಲುಪಿದೆ. ಕೊರತೆ ಪ್ರಮಾಣ ಗರಿಷ್ಠ 4,469 ಮೆಗಾವಾಟ್​ನಲ್ಲಿದೆ. ಗರಿಷ್ಠ ಬೇಡಿಕೆ 2021ರ ಜುಲೈನಲ್ಲಿ ದಾಖಲಾಗಿದ್ದು, 2,0,570 ಮೆಗಾ ವಾಟ್ ವಿದ್ಯುತ್ ಬೇಡಿಕೆ ಅಂದು ಇತ್ತು.

ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿದ್ದರಿಂದ ಸಹಜವೇ ಕಲ್ಲಿದ್ದಲು ಬೇಡಿಕೆ ಹೆಚ್ಚಿದೆ. ಪೂರೈಕೆಯಲ್ಲಿ ತಡವಾಗುತ್ತಿದೆ ಹೊರತು, ಕೊರತೆ ಇಲ್ಲ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಶೇ.43 ಕಲ್ಲಿದ್ದಲು ಉತ್ಪಾದನೆ ಹೆಚ್ಚಾಗಿದ್ದು, ಸುಮಾರು 21 ಮಿಲಿಯನ್ ಟನ್ ದೇಶದಲ್ಲಿ ದಾಸ್ತಾನಿದೆ. ಪ್ರತಿದಿನ 3.10 ಬಿಲಿಯನ್ ಯೂನಿಟ್ ವಿದ್ಯುತ್ ಬೇಡಿಕೆ ಇದ್ದದ್ದು ಈಗ 3.40 ಬಿಲಿಯನ್ ಯೂನಿಟ್​ಗೆ ಏರಿಕೆಯಾಗಿದೆ. ಕೋಲ್ ಇಂಡಿಯಾದಲ್ಲಿ 72 ಮಿಲಿಯನ್ ಟನ್, ತೆಲಂಗಾಣದ ಸಿಂಗ್ರೇನಿಯಾ, ಕ್ಯಾಪ್ಟಲ್, ವಾಸರಿ ಹೀಗೆ ಹಲವು ಗಣಿಗಳಲ್ಲಿ ಸಾಕಷ್ಟು ಕಲ್ಲಿದ್ದಲು ಸಂಗ್ರಹವಿದೆ. ರಾಜ್ಯಕ್ಕೆ ದೂರದ ಪ್ರದೇಶದಿಂದ ಕಲ್ಲಿದ್ದಲು ಬರುವುದರಿಂದ ಸಾಗಣೆ ತಡವಾಗುತ್ತಿದೆ.

ಬೇಡಿಕೆಯಷ್ಟು ಸರಬರಾಜು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಕಾಡುವುದಕ್ಕೆ 2021-22ರಲ್ಲಿ ಆಮದು ಪ್ರಮಾಣ ಕಡಿಮೆ ಮಾಡಿರುವುದೇ ಮುಖ್ಯ ಕಾರಣ. 2022ನೇ ಹಣಕಾಸು ವರ್ಷದಲ್ಲಿ ಭಾರತ 25 ದಶಲಕ್ಷ ಟನ್ ಕಲ್ಲಿದ್ದಲನ್ನು ಮಾತ್ರ ಆಮದು ಮಾಡಿಕೊಂಡಿದೆ. ಹಿಂದಿನ ವರ್ಷದ ಆಮದು ಪ್ರಮಾಣಕ್ಕೆ ಹೋಲಿಸಿದರೆ ಇದು ಶೇಕಡ 50 ಮಾತ್ರ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಾಕ್-ಚೀನಾ ಆರ್ಥಿಕ ಕಾರಿಡಾರ್ ರದ್ದು- ಶಹಬಾಜ್

0

ಪಾಕಿಸ್ತಾನದ ನೂತನ ಪ್ರಧಾನಿ ಶಾಹಬಾಝ್ ಷರೀಫ್ ನೇತೃತ್ವದ ಸರ್ಕಾರವು ಚೀನಾ ಬೆಂಬಲಿತ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ರದ್ದುಗೊಳಿಸಲು ಮುಂದಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಯೋಜನೆ ಸಚಿವ ಅಹಸಾನ್ ಇಕ್ಬಾಲ್ ಅವರು, ಇದು ಅನಾವಶ್ಯಕವಾದ ಸಂಸ್ಥೆಯಾಗಿದೆ. ಸಂಪನ್ಮೂಲಗಳು ವ್ಯರ್ಥವಾಗಿದೆ.
ಅಲ್ಲದೆ ಮಹತ್ವಾಕಾಂಕ್ಷೆಯ ಪ್ರಾಂತೀಯ ಸಂಪರ್ಕ ಕಾರ್ಯಕ್ರಮದ ತ್ವರಿತ ಜಾರಿಗೆ ಅಡ್ಡಿಯಾಗಿದೆ. ಹೀಗಾಗಿ ಈ ಯೋಜನೆಯನ್ನು ರದ್ದುಗೊಳಿಸುವ ಪ್ರಕ್ರಿಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಸಿಪಿಇಸಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಹೆಚ್ಚಿನ ವೇಗ ಮತ್ತು ಅಭಿವೃದ್ಧಿಗೆ ಹೊಸ ಹಾದಿ ಸೇರಿದಂತೆ ಪ್ರಾಂತೀಯ ಮತ್ತು ಜಾಗತಿಕ ಸಂಪರ್ಕದ ನಿಟ್ಟಿನಲ್ಲಿ 2019ರಲ್ಲಿ ಸುಗ್ರಿವಾಜ್ಞೆ ಮೂಲಕ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್(ಸಿಪಿಇಸಿ) ಪ್ರಾಧಿಕಾರವನ್ನು ಸ್ಥಾಪಿಸಲಾಗಿತ್ತು.

ಉಕ್ರೇನಿಯರಿಗೆ ಅಮೆರಿಕದಲ್ಲಿ ಆಶ್ರಯ ಮತ್ತು ಮಿಲಿಟರಿ ಉಪಕರಣ ನೆರವು

0

ಉಕ್ರೇನ್‌ನ ಮೇಲೆ ದಾಳಿ ಮುಂದುವರಿಸಿರುವ ರಷ್ಯಾ ಪಡೆಗಳಿಗೆ, ಮರಿಯುಪೋಲ್‌ನಲ್ಲಿ ಉಕ್ರೇನಿಯರಿಗೆ ಭದ್ರಕೋಟೆಯಂತಾಗಿರುವ ಸ್ಟೀಲ್‌ ಸ್ಥಾವರದ ಮೇಲೆ ದಾಳಿ ನಡೆಸಬೇಡಿ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.

ಮರಿಯುಪೋಲ್‌ನಲ್ಲಿ ಇನ್ನೂ ಸಾವಿರಾರು ಯೋಧರು ಹೋರಾಟ ನಡೆಸುತ್ತಿದ್ದಾರೆ ಎಂದು ರಷ್ಯಾದ ರಕ್ಷಣ ಸಚಿವರು ಹೇಳಿದ ಅನಂತರ ಪುಟಿನ್‌ ಈ ಆದೇಶ ಮಾಡಿದ್ದಾರೆ.

ಉಕ್ರೇನ್‌ ಸಹಾಯಕ್ಕೆ ನಿಂತಿರುವ ಅಮೆ ರಿಕ, 1 ಲಕ್ಷ ಉಕ್ರೇನಿಯರಿಗೆ ದೇಶದಲ್ಲಿ ವಾಸಕ್ಕೆ ಅವಕಾಶ ಮಾಡಿಕೊಡುವುದಾಗಿ ಗುರುವಾರ ತಿಳಿಸಿದೆ. ಅದರ ಜತೆ ಉಕ್ರೇನ್‌ಗೆ 800 ಮಿಲಿಯನ್‌ ಡಾಲರ್‌(60 ಸಾವಿರ ಕೋಟಿ ರೂ.) ಮೌಲ್ಯದ ಯುದ್ದೋಪಕರಣ ಕೊಡುವುದಾಗಿ ಹೇಳಿದೆ.

ಮತ್ತೂಂದೆಡೆ, ಕೀವ್‌ನ ಶವಾಗಾರಗಳಲ್ಲಿ 1,020 ಉಕ್ರೇನಿಯರ ಶವಗಳು ಬಿದ್ದಿವೆ ಎಂದು ಅಲ್ಲಿನ ಸರಕಾರ ತಿಳಿಸಿದೆ. ಅಜೋವಸ್ತಲ್‌ದಲ್ಲಿ ರಷ್ಯಾ ಪಡೆಯ ದಾಳಿಗೆ ಸಿಲುಕಿ ಗಾಯಾಳುಗಳಾಗಿರುವವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅನುಕೂಲ ಮಾಡಿಕೊಡಬೇಕೆಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಇದೇ ವೇಳೆ ಸ್ಪೇನ್‌ ಮತ್ತು ಡೆನ್‌ಮಾರ್ಕ್‌ನ ಪ್ರಧಾನಮಂತ್ರಿ ಕೀವ್‌ಗೆ ಬಂದಿದ್ದು, ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಖಾರ್ಕಿವ್‌ನಲ್ಲಿ ರಷ್ಯಾ 15 ಶೆಲ್‌ ದಾಳಿ ನಡೆಸಿದ್ದು, ಐವರು ಗಾಯಾಳುಗಳಾಗಿರುವುದಾಗಿ ಅಲ್ಲಿನ ಮೇಯರ್‌ ತಿಳಿಸಿದ್ದಾರೆ.

ಮುಗ್ಗರಿಸುತ್ತಲಿರುವ ಮುಂಬೈ, ಚನ್ನೈ ಎದುರು ಸೋಲು

0

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ತಾನು ಇನ್ನೂ ಗ್ರೇಟ್ ಫಿನಿಷರ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೋಲಿನತ್ತ ಬಹುತೇಕ ಮುಖಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಊಹಿಸಲಾರದ ರೀತಿಯಲ್ಲಿ ಧೋನಿ ಗೆಲ್ಲಿಸಿದ್ದಾರೆ.

ಈ ಮೂಲಕ ತನ್ನ ಬ್ಯಾಟಿಂಗ್ ಸಾಮರ್ಥ್ಯವನ್ನು ಮಾಹಿ ಮತ್ತೊಮ್ಮೆ ಪ್ರದರ್ಶಿಸಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ ನೀಡಿದ್ದ 156 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮುಗ್ಗರಿಸುತ್ತಾ ಸಾಗಿತ್ತು. ಆದರೆ ಅಂಬಾಟಿ ರಾಯಿಡು ರಾಬಿನ್ ಉತ್ತಪ್ಪ ಹೋರಾಟ ಸಿಎಸ್‌ಕೆಯನ್ನು ಪಂದ್ಯದಲ್ಲಿ ಮುಂದುವರಿಯುವಂತೆ ಮಾಡಿತ್ತು. ಆದರೆ ಅಂತಿಮ ಹಂತದಲ್ಲಿ ಎಂಎಸ್ ಧೋನಿ ಹಾಗೂ ಡ್ವೇಯ್ನ್ ಪ್ರಿಟೋರಿಯಸ್ ಹೋರಾಟ ತಂಡಕ್ಕೆ ಗೆಲುವಿನ ಸಾಧ್ಯತೆಯನ್ನು ತೆರೆದಿಟ್ಟಿತ್ತು.

ಇನ್ನು 156 ರನ್‌ಗಳ ಸವಾಲಿನ ಗುರಿ ಸ್ವೀಕರಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭ ಕೂಡ ಮುಂಬೈ ಇಂಡಿಯನ್ಸ್ ತಂಡಕ್ಕಿಂತ ಭಿನ್ನವಾಗಿರಲಿಲ್ಲ. ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಹಾಗೂ ಮಿಚೆಲ್ ಸ್ಯಾಂಟ್ನರ್ ವಿಕೆಟ್‌ಅನ್ನು ಶೀಘ್ರವಾಗಿ ಕಳೆದುಕೊಂಡಿತು. ಆದರೆ ನಂತರ ರಾಬಿನ್ ಉತ್ತಪ್ಪ ಹಾಗೂ ಅಂಬಾಟಿ ರಾಯುಡು ಅವರಿಂದು ಉತ್ತಮ ಪ್ರದರ್ಶನ ಬಂದಿತು. ಆದರೆ ನಂತರ ಬಂದ ನಾಯಕ ರವೀಂದ್ರ ಜಡೇಜಾ ಹಾಗೂ ಶಿವಂ ದುಬೆಯಿಂದ ಉತ್ತಮ ಮೊತ್ತ ಬರಲಿಲ್ಲ.

ಇನ್ನು ಅಂತಿಮ ಹಂತದಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಹಾಗೂ ಡ್ವೇಯ್ನ್ ಪ್ರಿಟೋರಿಯಸ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಪ್ರಿಟೋರಿಯಸ್ ಅಂತಿಮ ಓವರ್‌ನ ಮೊದಲ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಆದರೆ ಉಳಿದ ಐದು ಎಸೆತಗಳಲ್ಲಿ ಎಂಎಸ್ ಧೋನಿ ಅಬ್ಬರದ ಪ್ರದರ್ಶನ ನೀಡಿದ್ದು ತಂಡಕ್ಕೆ ಅಗತ್ಯವಿದ್ದ 17 ರನ್‌ಗಳನ್ನು ಗಳಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ತನ್ನ ಬ್ಯಾಟಿಂಗ್ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಅಂತಿಮ ಓವರ್‌ನಲ್ಲಿ ಎಂಎಸ್ ಧೋನಿ ಗೆಲುವಿಗೆ ಅಗತ್ಯವಿದ್ದ 17 ರನ್‌ಗಳನ್ನು ಕಲೆ ಹಾಕಿವ ಮೂಲಕ ಮುಂಬೈ ಇಂಡಿಯನ್ಸ್‌ಗೆ ಟೂರ್ನಿಯಲ್ಲಿ ಸತತ 7ನೇ ಬಾರಿಗೆ ಸೋಲಿನ ರುಚಿ ತೋರಿಸಿದ್ದಾರೆ.

ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‌ನಲ್ಲಿ ಮೊದಲ ಏಳು ಪಂದ್ಯಗಳಲ್ಲಿ ಎಲ್ಲಾ ಪಂದ್ಯಗಳನ್ನು ಸೋತ ಏಕೈಕ ತಂಡವಾಗಿದೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡದ ಅಗ್ರ ಕ್ರಮಾಂಕ ಹೀನಾಯ ಪ್ರದರ್ಶನ ನೀಡಿತು. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಇಬ್ಬರೂ ಶೂನ್ಯ ಸುತ್ತಿ ಮೊದಲ ಓವರ್‌ನಲ್ಲಿಯೇ ಪೆವಿಲಿಯನ್ ಸೇರಿಕೊಂಡರು.

ನಂತರ ಬಂದ ಡೆವಾಲ್ಡ್ ಬ್ರೆವಿಸ್ ಕೂಡ ನಾಲ್ಕು ರನ್‌ಗಳಿಗೆ ಔಟಾಗಿ ಹೊರನಡೆದರು. ಆದರೆ ಮುಂಬೈ ಇಮಡಿಯನ್ಸ್ ತಂಡದ ಮಧ್ಯಮ ಕ್ರಮಾಂಕ ಈ ಪಂದ್ಯದಲ್ಲಿ ತಂಡಕ್ಕೆ ಬಲ ತುಂಬುವಲ್ಲಿ ಯಶಸ್ವಿಯಾಯಿತು.

ಸೂರ್ಯಕುಮಾರ್ ಯಾದವ್, ತಿಲಕ್ ವರ್ಮ, ಹೃತಿಕ್ ಶೊಕೀನ್ ಹಾಗೂ ಅಂತಿಮ ಹಂತದಲ್ಲಿ ಜೈದೇವ್ ಉನಾದ್ಕಟ್ ಅವರ ಮಹತ್ವದ ಕೊಡುಗೆಯ ಕಾರಣದಿಂದಾಗಿ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 155 ರನ್‌ಗಳಿಸುವಲ್ಲಿ ಯಶಸ್ವಿಯಾಯಿತು.

ಭೂಮಿ ಪ್ರೇಮಿಗಳಾಗೋಣ

0

ಭೂಮಿ ದಿನ ಏಪ್ರಿಲ್ 22 ರಂದು ವಿಶ್ವಾದ್ಯಂತ ಆಚರಿಸಲಾಗುವ ವಾರ್ಷಿಕ ಭೂ ದಿನಾಚರಣೆಯಾಗಿದೆ.

ಪರಿಸರ ರಕ್ಷಣೆ ಬೆಂಬಲವನ್ನು ವಿವಿಧ ಪ್ರದರ್ಶನಗಳ ಮೂಲಕ ನಡೆಸಲಾಗುತ್ತದೆ. 1970 ರಲ್ಲಿ ಮೊದಲ ಭೂಮಿ ದಿನ ಆಚರಿಸಲಾಯಿತು.

193 ರಾಷ್ಟ್ರಗಳಲ್ಲಿ ಈ ದಿನ ಆಚರಿಸಲಾಗುತ್ತದೆ. ಇದನ್ನು ಭೂಮಿ ದಿನ ನೆಟ್ವರ್ಕ್ ಜಾಗತಿಕವಾಗಿ ಸಂಬಂಧ ಹೊಂದಿವೆ. 1990ರ ಹೊತ್ತಿನಲ್ಲಿ ಒಂದು ಪರಿಸರ ಆಂದೋಲನವಾಗಿ ರೂಪುಗೊಂಡ ಭೂ ದಿನಾಚರಣೆಯನ್ನು ಇಂದು ಬಹುತೇಕ ರಾಷ್ಟ್ರಗಳಲ್ಲಿ ಪರಿಸರ ಪರ ಚಿಂತನೆಯನ್ನು ಬಿತ್ತುವ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದೆ.

ಈ ವಿಶೇಷ ದಿನದಂದು, ಮಿತಿಮೀರಿದ ಜನಸಂಖ್ಯೆ, ಜೀವವೈವಿಧ್ಯತೆಯ ನಷ್ಟ, ಓಝೋನ್ ಪದರದ ಸವಕಳಿ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಸೇರಿದಂತೆ ಹಲವು ಪರಿಸರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು, ಜವಾಬ್ದಾರಿಯಿಂದ ವರ್ತಿಸಲು ಈ ದಿನವನ್ನು ಮೀಸಲಿಡಲಾಗಿದೆ.

ಪ್ರತಿ ವರ್ಷವೂ ಭೂ ದಿನಾಚರಣೆಯನ್ನು ಒಂದೊಂದು ಉದ್ದೇಶವನ್ನಿಟ್ಟುಕೊಂಡು ಆಚರಿಸಲಾಗುತ್ತದೆ. ಅಂದಿನಿಂದ ಮುಂದಿನ ಭೂ ದಿನಾಚರಣೆಯ ತನಕ ಅದರ ಉದ್ದೇಶವನ್ನು ಜನರಿಗೆ ತಲುಪಿಸಿ, ಜಾಗೃತಿ ಮೂಡಿಸಲಾಗುತ್ತದೆ. ಅಂತೆಯೇ ಈ ಬಾರಿಯ ವಿಶ್ವ ಭೂ ದಿನಾಚರಣೆಯನ್ನು ‘ಭೂಮಿಯನ್ನು ಪುನರ್​ ನಿರ್ಮಿಸೋಣ’ ಎಂಬ ಸದುದ್ದೇಶದೊಂದಿಗೆ ಆಚರಿಸಲಾಗುತ್ತಿದೆ.

ವಿಶ್ವ ಭೂ ದಿನಾಚರಣೆ ಎನ್ನುವುದು ಯಾವುದೋ ಒಂದು ಸಂಸ್ಥೆಗೆ ಮೀಸಲಾದ ದಿನಾಚರಣೆಯಲ್ಲ. ಈ ಭೂಮಿಯನ್ನು ಹಾಳುಗೆಡವಲು ಪ್ರತ್ಯಕ್ಷ ಅಥವಾ ಪರೋಕ್ಷ ಕಾರಣವಾಗಿರುವ ಪ್ರತಿ ಮನುಷ್ಯನೂ ಇದರ ಮಹತ್ವವನ್ನು ಅರಿತು ತನ್ನನ್ನು ತಾನು ತಿದ್ದಿಕೊಂಡು ಮುನ್ನಡೆಯಲು ಈ ದಿನಾಚರಣೆ ಒಂದು ಮಾರ್ಗ.

ನಮ್ಮ ಸುತ್ತಮುತ್ತಲೂ ಭೂಮಿಗೆ ಮಾರಕವಾಗುವಂತಹ ಅದೆಷ್ಟೋ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಅದನ್ನು ನಿಲ್ಲಿಸಲು ಪ್ರಯತ್ನಿಸಿ, ಅದರಲ್ಲಿ ತೊಡಗಿಸಿಕೊಂಡವರಲ್ಲಿ ತಿಳುವಳಿಕೆ ಮೂಡಿಸಿದರೆ ಅದು ಕೂಡಾ ನಾವು ಮಾಡಬಹುದಾದ ಅತ್ಯುತ್ತಮ ಕಾರ್ಯ.

ಅಲ್ಲದೇ ಪ್ರಸ್ತುತ ಸಂದರ್ಭದಲ್ಲಿ ಭೂಮಂಡಲಕ್ಕೆ ಮಾರಕವಾಗಿರುವ ಅಂಶಗಳತ್ತ ಗಮನಹರಿಸಿ ಅದನ್ನು ಎಲ್ಲರಿಗೂ ತಲುಪಿಸುವ ಕೆಲಸವನ್ನೂ ಕೈಗೊಂಡು ವರ್ಷಪೂರ್ತಿ ವಿಶ್ವ ಭೂ ದಿನಾಚರಣೆಯ ಉದ್ದೇಶವನ್ನು ಸಾಕಾರಗೊಳಿಸುವತ್ತ ಹೆಜ್ಜೆ ಹಾಕಬಹುದು. ಭೂಮಿಯು ತನ್ನಲ್ಲೇ ತಾನು ಒಂದು ಅದ್ಭುತ, ವಿಸ್ಮಯ… ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹಲವಾರು ಜೀವಸಂಕುಲಗಳನ್ನು ತನ್ನೊಳಗೆ ಇಟ್ಟುಕೊಂಡು ಕಾಪಾಡುತ್ತಿದೆ.
ಭೂಮಿಯನ್ನು ಕಾಪಾಡುವ ಹಾಗೂ ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿದೆ.

ಇಬ್ಬರ ಜಗಳವಲ್ಲ, ಮೂವರ ಜಗಳ

0

ಈಗ ಆಮ್ ಆದ್ಮಿ ದೇಶದಾದ್ಯಂತ ಸಂಚಲನವೆಬ್ಬಿಸುತ್ತಿದೆ.
ದೆಹಲಿಯಲ್ಲಿನ ಸರ್ಕಾರದ ಚಟುವಟಿಕೆಯನ್ನ ಸಮುದಾಯ ಗಮನಿಸುತ್ತಾ ಬಂದಿತು. ಹತ್ತಿರದ ಪಂಜಾಬ್ ಮೇಲೆ ಪರಿಣಾಮ ಬೀರಿತು. ಇವೆಲ್ಲ ಸಡನ್ ಆಗಿ ಘಟಿಸಿದ ಸಂಗತಿಗಳಲ್ಲ. ಒಂದೆರಡು
ಅವಧಿ ನೋಡಿ ಜನ ಮನಸ್ಸಿಗೆ ತೆಗೆದುಕೊಂಡರು.

ಇತ್ತೀಚೆಗೆ ನಡೆದ ಲಖಿಂಪುರ – ಖೇರಿ ಹಗರಣದಲ್ಲಿ ಕೃಷಿಕರ
ಮನಸ್ಸು ಕೆಡಿಸಿಕೊಂಡರು.
ಆದರೆ ಅದೇ ಕೇಂದ್ರದ ಆಡಳಿತಾರೂಢ ಪಕ್ಷಕ್ಕೆ ಮುಳುವಾಯಿತು. ಆರೋಪಿ ಸಚಿವ ಪುತ್ರನ ವಿಚಾರಣೆಯಲ್ಲಿ
ಮೀನಮೇಷ ಎಣಿಸಿದ ಫಲಿತಾಂಶ ಆಪ್ ಪಕ್ಷಕ್ಕೆ ಅವಕಾಶ ಬಾಚಿಕೊಂಡಿತು.

ಸಾಮಾನ್ಯವಾಗಿ ಆಪ್ ಪಕ್ಷದ
ವಿಚಾರಗಳು ರೂಢಿಗತ ರಾಜಕಾರಣಿಗಳಿಗೆ ಅಪಥ್ಯವಾಗಿದೆ. ಹೊಸ ಪೀಳಿಗೆಯ ಮತ್ತು ರಾಜಕೀಯ ತುಡಿತವುಳ್ಳ ಉನ್ನತ ಅಧಿಕಾರಿಗಳನ್ನ ಆಪ್ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.

ಪ್ರಸ್ತುತ ರಾಜ್ಯದಲ್ಲಿ ಆಪ್ ನಡೆಸಿದ ಕಾರ್ಯಾಚರಣೆಯನ್ನ
ಲಘುವಾಗಿ ಪರಿಗಣಿಸುವಂತಿಲ್ಲ.
ಪೋಲಿಸ್ ಉನ್ನತ ಅಧಿಕಾರಿ
ಪಕ್ಷದ ಟೋಪಿ ಧರಿಸಿದರು.
ಈಗ ರಾಜ್ಯದ ರೈತರ ಸಂಘಟನೆಯ ಒಂದು ಬಣವೇ
ಆಪ್ ಸೇರಿದೆ.

ಈಗ ನಡೆಯುತ್ತಿರುವ ಕಾಂಗ್ರೆಸ್
ಬಿಜೆಪಿ ಘರ್ಷಣೆಯಲ್ಲಿ ಹೊಸ ಆಶಯ ಯಾವುದೂ ಉದ್ಭವಿಸುತ್ತಿಲ್ಲ. ಶೇಕಡ ಭ್ರಷ್ಟಾಚಾರ ಲೆಕ್ಕಾಚಾರದ
ಕೆಸರೆರೆಚಾಟ ಪರಸ್ಪರ ನಡೆಯುತ್ತಿದೆ. ಯಾರು ಶುದ್ಧರು
ಎಂಬುದನ್ನ ಜನತೆ ನಿರ್ಣಯಿಸುವುದಕ್ಕೂ ಬಿಡುತ್ತಿಲ್ಲ.
ಇನ್ನೇನು ಒಂದು ವರ್ಷ ಬಾಕಿ ಇದೆ. ದೇಶದ ಹತ್ತು ರಾಜ್ಯಗಳ ವಿಧಾನ ಸಭಾ ಚುನಾವಣೆ ಬಿಸಿ
ಏರಲಾರಂಭಿಸಿದೆ.
ಯಾರು ಅಸಲಿ ಯಾರು ನಕಲಿ
ಈ ಗುದ್ದಾಟ ನಡೆಯುತ್ತಿದೆ.
ಎಲ್ಲರಿಗೂ ಗೊತ್ತಿರುವ ಗಾದೆ
ಇಬ್ಬರ ಜಗಳ ಮೂರನೇಯವನಿಗೆ ಲಾಭ.
ಆದರೆ ರಾಜ್ಯದಲ್ಲಿ ನಡೆದಿರೋದು ಮೂವರ ಜಗಳ. ಕುಟುಂಬ ರಾಜಕಾರಣ ಎಲ್ಲಾ ಪಕ್ಷದಲ್ಲಿದೆ.ನಮ್ಮಲ್ಲಿ ಒಂದೇ ಅಲ್ವಲ್ಲ? ಎಂಬ ತರ್ಕದ ಚಾಟಿ ಬೀಸಿ ಎದುರಾಳಿಗಳನ್ನ ಸುಮ್ಮನಾಗಿಸಿದ ಪಕ್ಷವೂ ಈಗ
ಅಧಿಕಾರಕ್ಕೆ ಹವಣಿಸುತ್ತಿದೆ.
ಸಂಘಟನೆಯಲ್ಲಿ ಬಿಜೇಪಿಯೊಂದೆ ಈವರೆಗೆ ಸಾಫಲ್ಯ ಪಡೆದಿದೆ. ಆದೃ ಮಿಕ್ಕರಡು ಪಕ್ಷಗಳೂ ಈಗ ಅದೇ ನೀತಿ ಅನುಸರಿಸಲು ಹೆಣಗಾಡುತ್ತಿವೆ. ಎಷ್ಟರಮಟ್ಟಿಗೆ
ಫಲ ಸಿಗುವುದೋ ಕುತೂಹಲದ ವಿಷಯವಾಗಿದೆ.

ಈಗ ಕಾಂಗ್ರೆಸ್- ಬಿಜೇಪಿ- ಜೆಡಿಎಸ್ ತಿಕ್ಕಾಟದಲ್ಲಿ ಆಪ್ ಲಾಭಮಾಡಿಕೊಳ್ಳುತ್ತದೆ ಎಂಬುದು ಪರಿಣಿತರ ಅಂಬೋಣ.
ಯಾರೇ ಬರಲಿ ಜನ ಸ್ಪಂದನ
ಜನಕಲ್ಯಾಣ ಜನಪ್ರಗತಿಯ
ಆಡಳಿತ ಕೊಡಬೇಕು.

ಈಗ ಹೊಸತೊಂದು ವಿಶೇಷ
ತೀವ್ರ ಪ್ರಚಾರ ಪಡೆದಿದೆ.
ಚುನಾವಣಾ ತಂತ್ರಗಾರರ‌ನ್ನ ಆಯಾ ಪಕ್ಷಗಳು ನೇಮಿಸಿಕೊಳ್ಳುವುದು. ಅಂತೂ
ಯೋಜನೆಗಳು ಕಾರ್ಯಕ್ರಮಗಳು ಇತ್ಯಾದಿಗಳ ಮೂಲಕ ಜನಮನ ಗೆಲ್ಲುವುದು
ಸಂಪ್ರದಾಯ.ಈಗ ತಂತ್ರಗಾರರ
ತಲೆ ಉಪಯೋಗಿಸುವ ದಿನಗಳು ಬಂದಿವೆ.
ಮೂವರ ಜಗಳ ನಾಕನೇಯವನಿಗೆ ಲಾಭ
ಆಗುತ್ತದೆಯೋ ಗೊತ್ತಿಲ್ಲ.

ಕಾದು ನೋಡೋಣ..

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಇಲ್ಹಾನ್ ಒಮರ್ ಭೇಟಿ ಭಾರತ ಖಂಡನೆ

0

ಅಮೆರಿಕದ ಕಾಂಗ್ರೆಸ್‌ ಸದಸ್ಯೆ ಇಲ್ಹಾನ್‌ ಒಮರ್‌ ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿರುವುದನ್ನು ಖಂಡಿಸಿರುವ ಭಾರತ, ಇದು ಒಮರ್‌ ಅವರ ಸಂಕುಚಿತ ಮನಸ್ಸಿನ ರಾಜಕಾರಣವನ್ನು ತೋರಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಕಿಡಿ ಕಾರಿದರು.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಗ್ಚಿ, ನಮ್ಮ ದೇಶದಿಂದ ಪಾಕಿಸ್ತಾನ ಅಕ್ರಮವಾಗಿ ವಶಪಡಿಸಿಕೊಂಡಿರುವ ಪಿಒಕೆಗೆ ಒಮರ್‌ ಭೇಟಿ ನೀಡಿದ್ದಾರೆ.

ಒಬ್ಬ ರಾಜಕಾರಣಿ ಇಂತಹ ಸಂಕುಚಿತ ಮನಸ್ಸನ್ನು ರೂಢಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆಂದರೆ, ಅದು ಅವರ ಇಷ್ಟ ಎಂದರು.

‘ಆದರೆ, ಒಮರ್‌ ನಮ್ಮ ದೇಶದ ಪ್ರಾದೇಶಿಕ ಸಮಗ್ರತೆ ಹಾಗೂ ಸಾರ್ವಭೌಮತ್ವಕ್ಕೆ ಅಗೌರವ ತೋರಿಸುವುದನ್ನು ನಾವು ಖಂಡಿಸುತ್ತೇವೆ ಎಂದು ಬಾಗ್ಚಿ ತಿಳಿಸಿದರು.

ಮಿಲಿಟರಿ ಮತ್ತು ಆರ್ಥಿಕ ನೆರವು ನೀಡಿ- ಝೆಲೆನ್ಸ್ಕಿ

0

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಸ್ಪೇನ್‌ ಪ್ರಧಾನಿ ಪೆಡ್ರೊ ಸಂಖೇಜ್ ಮತ್ತು ಡೆನ್ಮಾರ್ಕ್‌ ಪ್ರಧಾನಿ ಮೆಟ್ಟೆ ಫ್ರೆಡೆರಿಕ್‌ಸೆನ್‌ ಅವರೊಂದಿಗೆ ಮಾತುಕತೆ ನಡೆಸಿ, ನೆರವು ನೀಡುವಂತೆ ಮನವಿ ಮಾಡಿದ್ದಾರೆ.

ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ನಡೆದ ಸಭೆಯಲ್ಲಿ, ಉಕ್ರೇನ್‌ ರಕ್ಷಣಾ ಸಾಮರ್ಥ್ಯ ವೃದ್ಧಿ, ಯುರೋಪಿಯನ್‌ ಒಕ್ಕೂಟಕ್ಕೆ ಉಕ್ರೇನ್‌ ಏಕೀಕರಣವನ್ನು ಬೆಂಬಲಿಸುವುದು ಮತ್ತು ಯುದ್ಧದ ಬಳಿಕ ಚೇತರಿಕೆ ಹೇಗೆ ಎಂಬ ವಿಚಾರವಾಗಿ ಮಾತುಕತೆ ನಡೆಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಉಕ್ರೇನ್‌ನ ಅಗತ್ಯತೆಗಳು ಏನು ಎಂಬುದನ್ನು ನಮ್ಮ ಅತಿಥಿಗಳಿಗೆ ವಿವರಿಸಿದ್ದೇವೆ. ಅವರಿಂದ ದೊರೆಯುವ ಸಕಾಲದ ನೆರವಿಗಾಗಿ ಕಾಯುತ್ತಿದ್ದೇವೆ’ ಎಂದೂ ಉಕ್ರೇನ್‌ ಅಧ್ಯಕ್ಷರು ಹೇಳಿದ್ದಾರೆ.

ಸಭೆಯ ಬಳಿಕ ಮಾತನಾಡಿರುವ ಝೆಲನ್‌ಸ್ಕಿ, ಸ್ಪೇನ್‌ ಮತ್ತು ಡೆನ್ಮಾರ್ಕ್‌ ದೇಶಗಳ ಮಿಲಿಟರಿ ಮತ್ತು ಆರ್ಥಿಕ ನೆರವನ್ನು ಉಕ್ರೇನ್ ಎದುರು ನೋಡುತ್ತಿದೆ ಎಂದು ತಿಳಿಸಿದ್ದಾರೆ.

ಡೆನ್ಮಾರ್ಕ್‌ ಮತ್ತು ಸ್ಪೇನ್‌ ನಾಯಕರು ಕೀವ್‌ಗೆ ಆಗಮಿಸಿದ್ದರು.

ದೇಶದ ಸಮಗ್ರತೆ, ಏಕತೆ ಮುಖ್ಯ-ಪ್ರಧಾನಿ ಮೋದಿ

0

ಯಾವತ್ತೂ ನಾವು ಭಾರತದ ಏಕತೆ ಹಾಗೂ ಸಮಗ್ರತೆಯ ಜೊತೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದು ನಮ್ಮ ಹಾಗೂ ಪ್ರತಿಯೊಬ್ಬ ನಾಗರಿಕ ಸೇವಾ ಅಧಿಕಾರಿಯ ಪ್ರಥಮ ಹಾಗೂ ಅತ್ಯುನ್ನತ ಜವಾಬ್ದಾರಿಯಾಗಿದೆ ಎಂದು ನರೇಂದ್ರ ಮೋದಿಯವರು ತಿಳಿಸಿದರು.

ರಾಷ್ಟ್ರ ರಾಜಧಾನಿ ಸೇರಿದಂತೆ ಕೆಲ ರಾಜ್ಯಗಳಲ್ಲಿ ನಡೆಯುತ್ತಿರುವ ಮತೀಯ ಘರ್ಷಣೆಗಳ ಬಗ್ಗೆ ಇದೇ ಮೊದಲ ಬಾರಿ ಪರೋಕ್ಷವಾಗಿ ಪ್ರಸ್ತಾಪಿಸಿರುವ ಅವರು,ಯಾವುದೇ ಕಾರಣಕ್ಕೂ ದೇಶದ ಸಮಗ್ರತೆ ಹಾಗೂ ಏಕತೆಯ ಜೊತೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

ನಾಗರಿಕ ಸೇವೆಗಳ ದಿನಾಚರಣೆಯಲ್ಲಿ ಮಾತನಾಡಿದ ಪ್ರಧಾನಿ, ‘ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಸಮಾನತೆ, ಜಾಗತೀಕರಣ ಹಾಗೂ ಏಕತೆ ಎಂಬ ಮೂರು ಸವಾಲುಗಳು ಇಂದು ನಮ್ಮ ಮುಂದಿವೆ.

ಸ್ವಾತಂತ್ರ್ಯ ದೊರೆತ 100ನೇ ವರ್ಷ ಭಾರತ ಹೇಗಿರಬೇಕು ಎಂಬ ದೂರದೃಷ್ಟಿಯನ್ನು ನಾವು ಎಲ್ಲರೊಂದಿಗೆ ಹಂಚಿಕೊಳ್ಳಬೇಕು. ದೇಶದ ಪ್ರತಿಯೊಂದು ಜಿಲ್ಲೆಯೂ ಮುಂದಿನ 25 ವರ್ಷಗಳಿಗೆ ಗುರಿ ನಿಗದಿಪಡಿಸಿಕೊಂಡು ಅದನ್ನು ಸಾಧಿಸುವತ್ತ ಶ್ರಮಿಸಬೇಕು ಎಂದರು.

ರಾಜ್ಯ ಲಲಿತ ಕಲಾ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಕಟ

0

ಕರ್ನಾಟಕ ಲಲಿತಕಲಾ ಅಕಾಡೆಮಿಯು ಪ್ರತೀ ವರ್ಷ 3 ಕಲಾವಿದರಿಗೆ ನೀಡುವ ವಾರ್ಷಿಕ ಗೌರವ ಪ್ರಶಸ್ತಿಯನ್ನು ಈ ಬಾರಿ 6 ಕಲಾವಿದರಿಗೆ ನೀಡಲಾಗುತ್ತದೆ ಎಂದು ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಮಹೇಂದ್ರ ತಿಳಿಸಿದ್ದಾರೆ.

ಲಲಿತಕಲಾ ಅಕಾಡೆಮಿ ಸಭಾಂಗಣದಲ್ಲಿ ಮಾತನಾಡಿದ ಅವರು, ಚಿತ್ರಕಲಾ ಕ್ಷೇತ್ರದದಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲಾಸಾಧನೆ ಮಾಡಿರುವ, ಕೊಡವ ಸಂಸ್ಕೃತಿ ಪ್ರತಿನಿಧಿಸುತ್ತಿರುವ ಮಡಿಕೇರಿಯ ಸ್ಮಿತಾ ಕಾರಿಯಪ್ಪ ಸಹಿತ 6 ಮಂದಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು 50,000 ರೂ. ನಗದು , ಪ್ರಮಾಣ ಪತ್ರವನ್ನು ಹೊಂದಿದೆ ಎಂದು ತಿಳಿಸಿದರು.
ವಾರ್ಷಿಕ ಕಲಾ ಬಹುಮಾನ ಸ್ಪರ್ಧೆಗೆ ಬಂದ ಕಲಾಕೃತಿಯಲ್ಲಿ 85 ಕಲಾಕೃತಿಯನ್ನು ಆಯ್ಕೆ ಮಾಡಲಾಗಿದೆ.

ಅದರಲ್ಲಿ ಉತ್ತಮ 10 ಕಲಾಕೃತಿಗಳನ್ನು ಆಯ್ಕೆಯಾಗಿದೆ. ಈ ಪ್ರಶಸ್ತಿಯು 25,000 ರೂ. ನಗದು ಹಾಗೂ ಪ್ರಮಾಣ ಪತ್ರವನ್ನು ಹೊಂದಿದೆ ಎಂದರು.

50ನೇ ವಾರ್ಷಿಕ ಕಲಾ ಪ್ರದರ್ಶನ ಸುವರ್ಣ ಸಂದರ್ಭದ ನೆನಪಿಗೆ ವಿಶೇಷ ಮನ್ನಣೆ ನೀಡಿ ಐವರ ಕಲಾಕೃತಿಗೆ ಮೆಚ್ಚುಗೆ ಪ್ರಶಸ್ತಿ ಲಭಿಸಿದೆ. ಕಲಾವಿದರಿಗೆ ಸ್ಮರಣಿಕೆ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದರು.