Friday, February 27, 2026
Friday, February 27, 2026
Home Blog Page 1604

ಹಾಲಿನ ದರ ಲೀಟರ್ ಗೆ ₹ 50 ನಿರ್ಧರಿಸಲು ಮನವಿ

0

ಕರ್ನಾಟಕ ಪ್ರಾಂತ ರೈತ ಸಂಘವು ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಹಾಲು ಉತ್ಪಾದಕರ ಸಮಾವೇಶದಲ್ಲಿ ರೈತರಿಂದ ಖರೀದಿಸುವ ಒಂದು ಲೀಟರ್ ಹಾಲಿನ ದರವನ್ನು ₹ 50ಕ್ಕೆ ಹೆಚ್ಚಿಸಬೇಕು. ಉತ್ಪಾದಕರಿಗೆ ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಲಾಯಿತು.

ಸಮಾವೇಶ ಉದ್ಘಾಟಿಸಿದ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ನಾಯಕ ಹಾಗೂ ಕೇರಳದ ಮಾಜಿ ಶಾಸಕ ಕೃಷ್ಣಪ್ರಸಾದ್ ಮಾತನಾಡಿ,

ರಾಜ್ಯದಲ್ಲಿ 29 ಲಕ್ಷ ರೈತ ಕುಟುಂಬಗಳು ಹೈನುಗಾರಿಕೆ ಮೇಲೆ ಅವಲಂಬಿತವಾಗಿವೆ. 14 ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಸಣ್ಣ ಮತ್ತು ಮಧ್ಯಮ ವರ್ಗಗಳ ಕುಟುಂಬಗಳು ತಮ್ಮ ಜೀವನಕ್ಕಾಗಿ ಹೈನುಗಾರಿಕೆಯನ್ನು ಅವಲಂಬಿಸಿವೆ. ಆದರೆ, ಒಂದು ಲೀಟರ್ ಹಾಲಿನ ಉತ್ಪಾದನೆಗೆ ರೈತರಿಗೆ ₹ 35 ವೆಚ್ಚ ತಗಲುತ್ತಿದೆ. ಸರ್ಕಾರದ ಸಬ್ಸಿಡಿ ಸೇರಿದಂತೆ ಲೀಟರ್ ಹಾಲಿಗೆ ₹ 33 ದೊರೆಯುತ್ತಿದೆ. ಹೈನುಗಾರರು ನಷ್ಟದಲ್ಲಿ ಇದ್ದಾರೆ ಎಂದು ಹೇಳಿದರು.

ರೈತರು ತಮ್ಮ ಬದುಕಿನ ಆಧಾರಕ್ಕೆ ಪೆಟ್ಟು ಬಿದ್ದಾಗ ಸಂಘಟಿತರಾಗಬೇಕು. ಜೀವನದ ಪ್ರಶ್ನೆಗಳು ಬಂದಾಗ ಒಂದೆಡೆ ಸೇರಿ ಹೋರಾಟ ನಡೆಸಬೇಕು ಎಂದು ಹೇಳಿದರು.
ಈಗ ರೈತರು ನೆಮ್ಮದಿಯಾಗಿದ್ದಾರಾ? ಅವರ ಕುಟುಂಬ ನೆಮ್ಮದಿ ಆಗಿದೆಯಾ? ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರೆಯುತ್ತಿದೆಯಾ? ಎನ್ನುವ ಪ್ರಶ್ನೆಗಳನ್ನು ನಾವು ಹಾಕಿಕೊಳ್ಳಬೇಕಾಗಿದೆ. ಕೇಂದ್ರದಲ್ಲಿ ಜವಾಹರ್ ಲಾಲ್ ನೆಹರೂ ಅವರಿಂದ ಹಿಡಿದು ಇಂದಿನ ನರೇಂದ್ರ ಮೋದಿಯವರೆಗಿನ ಆಡಳಿತದಲ್ಲಿ ಹಲವು ಸರ್ಕಾರಗಳು ಬಂದವು. ಆದರೆ, ಕೆಲವೇ ರಾಜ್ಯಗಳಲ್ಲಿ ಮಾತ್ರ ಭೂ ಸುಧಾರಣಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಯಿತು ಎಂದು ಹೇಳಿದರು.

ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಮಾತನಾಡಿ, ಕೋಚಿಮುಲ್‌ನಲ್ಲಿ ಈಗ ನಿತ್ಯ 9 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಸರ್ಕಾರ ಸಬ್ಸಿಡಿ ಸೇರಿ ಒಂದು ಲೀಟರ್ ಹಾಲಿಗೆ ₹ 33 ನೀಡಲಾಗುತ್ತಿದೆ. ಇದು ರೈತರಿಗೆ ನೀಡುತ್ತಿರುವ ಕಡಿಮೆ ಹಣವಾಗಿದೆ ಎಂದು ಹೇಳಿದರು.
ಹಾಲನ್ನು ಗ್ರಾಹಕರಿಗೆ ಮಾರಾಟ ಮಾಡುವ ಬೆಲೆಯನ್ನು ಹೆಚ್ಚಿಸಬೇಕು. ಆ ಅಧಿಕಾರ ಒಕ್ಕೂಟಗಳಿಗೆ ಮತ್ತು ಕೆಎಂಎಫ್‌ಗೆ ಇಲ್ಲ. ಕೆಎಂಎಫ್ ಅಧ್ಯಕ್ಷರೇ ಲೀಟರ್ ಹಾಲಿನ ಬೆಲೆಯನ್ನು ₹ 3 ಹೆಚ್ಚಿಸಿ ಎಂದು ಸರ್ಕಾರಕ್ಕೆ ಕೋರಿದ್ದಾರೆ.

ಸ್ವಾಮಿನಾಥನ್ ವರದಿ ಪ್ರಕಾರ ಉತ್ಪಾದನಾ ವೆಚ್ಚವನ್ನು ಕಳೆದು ಅದರ ಅದರ ಮೇಲೆ ಶೇ 50ರಷ್ಟು ಲಾಭ ಸೇರಿಸಿ ರೈತರ ಉತ್ಪನ್ನಗಳಿಗೆ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ. ಈ ಪ್ರಕಾರ ರಾಜ್ಯದಲ್ಲಿ ಲೀಟರ್ ಹಾಲಿನ ಬೆಲೆ ₹ 50 ಆಗಬೇಕು ಎಂದು ಆಗ್ರಹಿಸಿದರು.
ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಿಸಲು ರೈತರು ಒಗ್ಗೂಡಿ ಹೋರಾಡಬೇಕು. ಹಾಲಿನ ಉತ್ಪಾದನಾ ವೆಚ್ಚವನ್ನು ತಗ್ಗಿಸುವ ದೃಷ್ಟಿಯಿಂದ ಸರ್ಕಾರ ಹೈನುಗಾರರಿಗೆ ಸಬ್ಸಿಡಿ ನೀಡಬೇಕು ಎಂದು
ಒತ್ತಾಯಿಸಿದರು.

ಕೋಚಿಮುಲ್ ನಿರ್ದೇಶಕರಾದ ಭರಣಿ ವೆಂಕಟೇಶ್, ಆದಿನಾರಾಯಣ ರೆಡ್ಡಿ, ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜು, ಉಪಾಧ್ಯಕ್ಷ ಮಂಜುನಾಥ ರೆಡ್ಡಿ, ಜಿಲ್ಲಾ ಅಧ್ಯಕ್ಷ ಬಿ.ಎನ್. ಮುನಿಕೃಷ್ಣಪ್ಪ, ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಿನಾರಾಯಣರೆಡ್ಡಿ, ಕೆ.ಆರ್. ದೇಸಾಯಿ, ಯಶವಂತ್, ನವೀನ್, ಸೂರ್ಯನಾರಾಯಣ್ ಉಪಸ್ಥಿತರಿದ್ದರು.

ಮಾನವೀಯ ದೃಷ್ಟಿಯನ್ನ ಸರ್ಕಾರ ಈಗ ಹೊಂದಬೇಕಿದೆ

0

ಕೆಲ ವರ್ಷಗಳಿಂದ ಸರ್ಕಾರಿ ನಿವಾಸಗಳಲ್ಲಿ ವಾಸವಾಗಿದ್ದ 90 ವರ್ಷ ವಯಸ್ಸಿನ ಪದ್ಮಶ್ರೀ ಪುರಸ್ಕೃತ ಒಡಿಸ್ಸಿ ನೃತ್ಯಗಾರ ಗುರು ಮಾಯಾಧರ್ ರಾವತ್ ಅವರನ್ನು ಕೇಂದ್ರ ಸರ್ಕಾರ ಮನೆಯಿಂದ ಹೊರಹಾಕಿದೆ.

ಕಲಾವಿದರಿಗೆ ಕೆಲ ವರ್ಷಗಳ ಹಿಂದೆ ಸರ್ಕಾರಿ ವಸತಿಗಳನ್ನು ಮಂಜೂರು ಮಾಡಲಾಗಿತ್ತು. ಆದರೆ ಮಂಜೂರಾತಿಯನ್ನು 2014ರಲ್ಲಿ ರದ್ದುಗೊಳಿಸಲಾಯಿತು. ಪರಿಣಾಮವಾಗಿ ಎಲ್ಲರೂ ವಸತಿಗಳನ್ನು ಖಾಲಿ ಮಾಡಬೇಕು ಎಂದು ನೋಟಿಸ್‌ ನೀಡಲಾಯಿತು. 90 ವರ್ಷ ವಯಸ್ಸಿನ ಒಡಿಸ್ಸಿ ನೃತ್ಯಗಾರ ರಾವುತ್‌ ಅವರನ್ನು ವಸತಿಯಿಂದ ಹೊರಹಾಕಿದ ನಂತರ ಉಳಿದ ಕಲಾವಿದರಿಗೂ ನೋಟಿಸ್‌ ನೀಡಲಾಗಿದೆ. ಮೇ 2ರೊಳಗೆ ನಿವಾಸ ಖಾಲಿ ಮಾಡುವಂತೆ ಅವರಿಗೆ ಗಡುವು ನೀಡಲಾಗಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಹಲವು ಬಾರಿ ನೋಟಿಸ್‌ ಕೊಟ್ಟರೂ 28 ಕಲಾವಿದರ ಪೈಕಿ ಸುಮಾರು ಎಂಟು ಮಂದಿ ಇನ್ನೂ ತಮ್ಮ ಸರ್ಕಾರಿ ವಸತಿಗಳನ್ನು ಖಾಲಿ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಈ ಎಂಟು ಕಲಾವಿದರು ತಮ್ಮ ವಸತಿಗಳನ್ನು ಖಾಲಿ ಮಾಡುವ ಪ್ರಕ್ರಿಯೆಯಲ್ಲಿದ್ದಾರೆ.
ಮೇ 2 ರೊಳಗೆ ನಿವಾಸ ಖಾಲಿ ಮಾಡುವುದಾಗಿ ಲಿಖಿತವಾಗಿ ಭರವಸೆ ನೀಡಿದ್ದು, ಅಲ್ಲಿಯವರೆಗೆ ಕಾಲಾವಕಾಶ ನೀಡಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ.

ಇವರಂತೆಯೇ ಸರ್ಕಾರಿ ವಸತಿಗಳಲ್ಲಿ ವಾಸವಾಗಿದ್ದ ಎಂಟು ಮಂದಿ ಪ್ರಖ್ಯಾತ ಕಲಾವಿದರಿಗೆ ಮನೆ ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ನೋಟಿಸ್‌ ನೀಡಲಾಗಿದೆ.
ಫೆಬ್ರವರಿಯೊಳಗೆ ಆದೇಶ ಪಾಲನೆಯಾಗದಿದ್ದಲ್ಲಿ ಕಲಾವಿದರ ವಿಚಾರವಾಗಿ ಮುಕ್ತ ಕ್ರಮಕೈಗೊಳ್ಳಲು ಕೇಂದ್ರಕ್ಕೆ ಅಧಿಕಾರವಿದೆ ಎಂದು ದೆಹಲಿ ಹೈಕೋರ್ಟ್‌ ಸ್ಪಷ್ಟಪಡಿಸಿತ್ತು.

ತಿಂಗಳಿಗೆ 20,000 ರೂ.ಗಿಂತ ಕಡಿಮೆ ಗಳಿಸುವ 40 ಕಲಾವಿದರಿಗೆ ಸಂಸ್ಕೃತಿ ಸಚಿವಾಲಯದ ಶಿಫಾರಸಿನ ಮೇರೆಗೆ ಜನರಲ್‌ ಪೂಲ್‌ ವಸತಿ ಸೌಕರ್ಯ ವಿಶೇಷ ಕೋಟಾದಡಿ ವಸತಿ ಮಂಜೂರು ಮಾಡಲಾಗಿತ್ತು. ವಸತಿ ಖಾಲಿ ಮಾಡಲು ಕೇಂದ್ರವು 2020 ರ ಡಿಸೆಂಬರ್ 31ಕ್ಕೆ ಗಡುವನ್ನು ನೀಡಿತ್ತು. ಆದರೆ ಅರ್ಜಿಗಳನ್ನು ಸಲ್ಲಿಸಿದ ನಂತರ ಹೈಕೋರ್ಟ್, ಕೇಂದ್ರದ ನೋಟಿಸ್‌ಗೆ ತಡೆ ನೀಡಿತ್ತು.

ತೀರ್ಥಹಳ್ಳಿ ಕಾಲೇಜಿಗೆ ಕುವೆಂಪು ವಿವಿ 4 ರ‍್ಯಾಂಕ್

0

ತೀರ್ಥಹಳ್ಳಿ ಪಟ್ಟಣದ ತುಂಗಾ ಕಾಲೇಜು ಕುವೆಂಪು ವಿವಿ ಮಟ್ಟದಲ್ಲಿ ಅಮೋಘ ಸಾಧನೆ ಮಾಡಿದೆ. ಪ್ರಥಮ ರ‍್ಯಾಂಕ್ ಜೊತೆಗೆ ಒಟ್ಟು 4 ರ‍್ಯಾಂಕ್ ತುಂಗಾ ಮಹಾವಿದ್ಯಾಲಯ ಪಡೆದಿದೆ. ಜೊತೆಗೆ ಎಲ್ಲಾ 16 ವಿದ್ಯಾರ್ಥಿಗಳು ಮೊದಲ ಶ್ರೇಣಿಯೊಂದಿಗೆ ಪಾಸಾಗಿದ್ದಾರೆ.

ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ಗಾಯತ್ರಿ ಕೆ. ಎ ಮೊದಲ ರ‍್ಯಾಂಕ್ ಸುನೈನಾ ಕೆ. ಮತ್ತು ಜ್ಯೋತಿ ಪ್ರಭು 6ನೇ ರ‍್ಯಾಂಕ್ ಹಾಗೂ ಅನ್ವಿತಾ ಬಿ.ಜೆ 7 ನೇ ರ‍್ಯಾಂಕ್ ಪಡೆದು ತಾಲೂಕಿನ ಜನರ ಅಭಿನಂದನೆಗೆ ಪಾತ್ರರಾಗಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯದ 2021ರ ಎಂ.ಕಾಂ ಅಂತಿಮ ಪದವಿ ಪರೀಕ್ಷೆ ಫಲಿತಾಂಶದಲ್ಲಿ ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದ ಪ್ರತಿಷ್ಠಿತ ಮೊದಲ ರ‍್ಯಾಂಕ್ ಸಹಿತ ಒಟ್ಟು ನಾಲ್ಕು ರ‍್ಯಾಂಕ್ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದೆ.

ಈ ಮೂಲಕ ತುಂಗಾ ಕಾಲೇಜು ವಿ. ವಿ ಮಟ್ಟದಲ್ಲಿ ಅತಿಹೆಚ್ಚು ಶ್ರೇಣಿ ಪಡೆದ ಖಾಸಗಿ ಅನುದಾನಿತ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ.

ಈ ಸಾಧನೆಗೆ ಪಾತ್ರರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ಪರಿಣಾಮಕಾರಿ ಬೋಧನೆಯೊಂದಿಗೆ ಮಾರ್ಗದರ್ಶಿಸಿದ ವಿಭಾಗದ ಸಮರ್ಥ ಪ್ರಾಧ್ಯಾಪಕ ವೃಂದವನ್ನು ಹಾಗೂ ಸಹಕರಿಸಿದ ಪ್ರಾಂಶುಪಾಲರು, ಅಧ್ಯಾಪಕ ಸಿಬ್ಬಂದಿ ವರ್ಗದವರನ್ನು ಹಾಗೂ ಪ್ರೋತ್ಸಾಹಿಸಿದ ಪೋಷಕ ವೃಂದವನ್ನು ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿದೆ.

ಮೋದೀಜಿ ಅವರ ಕಾಶ್ಮೀರ ಭೇಟಿ ಬಗ್ಗೆ ಟೀಕಿಸಲು ಪಾಕ್ ಗೆ ಹಕ್ಕಿಲ್ಲ

0

ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದರ ಬಗ್ಗೆ ಹೇಳಿಕೆ ನೀಡಿದ ಪಾಕಿಸ್ತಾನದ ಪ್ರಧಾನಿಯನ್ನು ಭಾರತ ತರಾಟೆಗೆ ತೆಗೆದುಕೊಂಡಿದೆ.

ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಇಸ್ಲಾಮಾಬಾದ್ ಗೆ ಯಾವುದೇ ಸ್ಥಾನವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದು, ಪ್ರಧಾನಿ ಮೋದಿ ಅವರಿಗೆ ದೊರೆತ ಸ್ವಾಗತ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ಬದಲಾವಣೆಗಳು ಪಾಕಿಸ್ತಾನದ ಯಾವುದೇ ಟೀಕೆ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳಾಗಿವೆ ಎಂದು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರ ಬಗ್ಗೆ ಪಾಕಿಸ್ತಾನ ಟೀಕಿಸಿತ್ತು.
ಪಾಕಿಸ್ತಾನ ಪ್ರಧಾನಿ ಇದೊಂದು ಸ್ಥಳೀಯ ಭೇಟಿ ಎಂದು ಹೇಳಿದ್ದು, ಅವರನ್ನು ಭಾರತ ತರಾಟೆಗೆ ತೆಗೆದುಕೊಂಡಿದೆ.

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಪ್ರಧಾನಿ ಭೇಟಿಯನ್ನು ಸ್ಥಳೀಯ ಭೇಟಿ ಎಂದು ಟೀಕಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅರಿಂದಮ್ ಬಾಗ್ಚಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಏನಾಗುತ್ತದೆ ಎಂಬುದರ ಕುರಿತು ಮಾತನಾಡಲು ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ. ಪ್ರಧಾನಿ ಮೋದಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಸಂದರ್ಭದಲ್ಲಿ ದೊರೆತ ಸ್ವಾಗತ ಮತ್ತು ಅವರು ಉದ್ಘಾಟಿಸಿದ ಅಭಿವೃದ್ಧಿ ಯೋಜನೆಗಳು, ಅಲ್ಲಿ ಆಗಿರುವ ಬದಲಾವಣೆಗಳು ಯಾವುದೇ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳಾಗುತ್ತವೆ ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ನೀಡಲು ಸದಾ ಸಿದ್ಧ- ಮಾಯಣ್ಣಗೌಡ

0

ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸಲು ಸದಾಕಾಲ ಸಿದ್ಧರಿರುವುದಾಗಿ ಮಹಾನಗರಪಾಲಿಕೆ ಆಯುಕ್ತ ಕೆ. ಮಾಯಣ್ಣ ಗೌಡ ಅವರು ಭರವಸೆ ನೀಡಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ನಗರದ ಮೂಲಭೂತ ಸೌಕರ್ಯಗಳು ಹಾಗೂ ಕುಂದು ಕೊರತೆಗಳ ಕುರಿತು ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗೋಪಿನಾಥ್ ಗಿರಿಮಾಜಿಯವರ ಕಾಮಗಾರಿಗಳ ಪರಿಸ್ಥಿತಿಯ ಬಗ್ಗೆ ಕೇಳಿದ ಪ್ರಶ್ನೆಗೆ
ಸಾಗರ ರಸ್ತೆ ಕೈಗಾರಿಕಾ ವಲಯದ ಅಧ್ಯಕ್ಷ ಉಮೇಶ್ ಕೇಳಿದ ಪ್ರಶ್ನೆಗಳಿಗೆ ಸಾಗರ ರಸ್ತೆ ಕೈಗಾರಿಕಾ ವಲಯದ ಮೂಲಭೂತ ಸೌಕರ್ಯ ಕುಂದುಕೊರತೆಗಳ ಬಗ್ಗೆ ಈಗಾಗಲೇ ನನ್ನ ಗಮನಕ್ಕೆ ಬಂದಿದೆ . ಕಸವಿಲೇವಾರಿಗೆ ವಾಹನಗಳ ಕೊರತೆಯಿದ್ದು , ಕಸ ವಿಲೇವಾರಿ ಬಗ್ಗೆ ಈಗಾಗಲೇ ಕ್ರಮ ವಹಿಸುವುದಾಗಿ ಭೂಮಿ ತೆರಿಗೆ ವಿಚಾರವಾಗಿ ಸದ್ಯದಲ್ಲೇ ಸರ್ಕಾರಿ ಆದೇಶ ಗೆಜೆಟ್ ನಲ್ಲಿ ಪ್ರಕಟವಾಗಲಿದೆ ಎಂದರು.

ಸಣ್ಣ ಕೈಗಾರಿಕಾ ನಿಯಮದ ಉಪಾಧ್ಯಕ್ಷ ದತ್ತಾತ್ರಿ ಎಲ್ಲೋ ಕೈಗಾರಿಕಾ ಪ್ರದೇಶಗಳನ್ನು ಒಂದು ಪ್ರತ್ಯೇಕ ವಾರ್ಡ್ ಆಗಿ ಪರಿಗಣಿಸಿದಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಹರಿಸಲು ಅನುಕೂಲವಾಗುತ್ತದೆ ಎಂದು ಸೂಚಿಸಿದರು.

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹಲವಾರು ದೂರುಗಳು ಬಂದಿದ್ದು, ಇದು ಪ್ರತೀಕವಾಗಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗೆ ಸಂಬಂಧಿಸಿದ್ದು, ಅದು ಅವೈಜ್ಞಾನಿಕವಾಗಿರುವುದಾಗಿ ದೂರುಗಳು ಬಂದಿದ್ದು, ಸದರಿ ಇಲಾಖೆಯಿಂದ ಸಾರ್ವಜನಿಕ ಪ್ರಕಟಣೆ ಸದ್ಯದಲ್ಲೇ ಹೊರೆ ಬೀಳಲಿದೆ ಎಂದರು.ರಾಜೇಂದ್ರ ಪ್ರಸಾದ್ ನಗರದಲ್ಲಿ ವಿಮಾನಯಾನ ಆರಂಭದ ಬಳಿಕ ಶಿವಮೊಗ್ಗ ನಗರ ಬಿ ದರ್ಜೆಯ ಸಿಟಿ ಯಾಗುತ್ತಿರುವುದರಿಂದ ತೆರಿಗೆಗಳು ಹೆಚ್ಚಿನ ವಾಗುತ್ತವೆ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಇದರಿಂದ ಯಾವುದೇ ಅಧಿಕವಾದ ಮೌಲ್ಯವರ್ಧಿತ ತೆರಿಗೆಗಳ ಹೆಚ್ಚಳವಾಗುವುದಿಲ್ಲ. ಆದರೆ ನೌಕರರ ಪ್ರಯಾಣ ಭತ್ಯೆ, ತುಟ್ಟಿ ಭತ್ಯೆಗಳು ಹೆಚ್ಚಾಗುವುದಾಗಿ ತಿಳಿಸಿದರು.

ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಅವರು ಮಾತನಾಡಿ, ಆಯುಕ್ತರು ಅನೇಕ ದೇಶಗಳನ್ನು ಸುತ್ತಾಡಿ ಜ್ಞಾನವನ್ನು ಪಡೆದುಕೊಂಡ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ಈ ಮೂಲಕ ಉತ್ತಮ ರೀತಿಯಲ್ಲಿ ಸಾರ್ವಜನಿಕರಿಗೆ ಹೊರೆಯಾಗದೆ ತೊಂದರೆಯಾಗದಂತೆ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಶಿವಮೊಗ್ಗವನ್ನು ಸುಂದರ ಸ್ವಚ್ಛ ನಗರವನ್ನಾಗಿಸುವ ಮನಸ್ಸನ್ನು ಹೊಂದಿದ್ದಾರೆ ಎಂದರು..

ಕಾರ್ಯಕ್ರಮದಲ್ಲಿ ಸಹಕಾರ್ಯದರ್ಶಿ ಜಿ. ವಿಜಯ್ ಕುಮಾರ್, ಬಿ.ಆರ್. ಸಂತೋಷ್, ಕಾರ್ಯದರ್ಶಿ ವಸಂತ, ನಿಕಟಪೂರ್ವ ಅಧ್ಯಕ್ಷ ಜೆ.ಆರ್. ವಾಸುದೇವ, ಮೂಲಭೂತ ಸೌಕರ್ಯ ಹಾಗೂ ಕುಂದುಕೊರತೆಗಳ ಸಮಿತಿಯ ಚೇರ್ಮನ್ ಕೆ.ಎಸ್. ಸುಕುಮಾರ್, ಹಾಗೂ ಸಂಯೋಜಿತ ಸಂಘಗಳ ಪದಾಧಿಕಾರಿಗಳು, ಮಹಾನಗರ ಪಾಲಿಕೆಯ ಇಂಜಿನಿಯರ್ ಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಬಿಜೆಪಿಯೇತರ ರಾಜ್ಯಗಳಲ್ಲಿ ಇಂಧನ ಬೆಲೆ ಇಳಿಸಲು ಪ್ರಧಾನಿ ಮನವಿ

0

ಕೊರೋನಾ ಸವಾಲು ಇನ್ನೂ ಮುಗಿದಿಲ್ಲ. ಶಾಲೆ ಆರಂಭದ ಸಮಯದಲ್ಲಿ ಕೊರೋನಾ 4ನೇ ಅಲೆಯ ಭೀತಿ ಇದೆ.
ಓಮಿಕ್ರಾನ್ ಉಪತಳಿ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು. ಆರಂಭಿಕ ಹಂತದಲ್ಲೇ ಸೋಂಕು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ದೇಶದ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುಂಜಾಗ್ರತೆ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದರು. ಅಷ್ಟೇ ಅಲ್ಲ ದೇಶದಲ್ಲಿರುವ ಬಿಜೆಪಿಯೇತರ ರಾಜ್ಯಗಳಲ್ಲಿ ಪೆಟ್ರೋಲ್​, ಡಿಸೇಲ್​ ದರ ಕಡಿಮೆ ಮಾಡಿ ಎಂದು ಮನವಿ ನೀಡಿದ್ದಾರೆ.

ದೇಶದಲ್ಲಿ ಕೊರೋನಾ 4ನೇ ಅಲೆ ಆತಂಕ ಹಿನ್ನೆಲೆ ಬುಧವಾರ ಬೆಳಗ್ಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್​ ಸಭೆ ನಡೆಸಿದ ಪ್ರಧಾನಿ, ನಂತರ ಮಾತನಾಡಿದರು. ಈಗಾಗಲೇ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಎಲ್ಲರಿಗೂ ಕೊರೋನಾ 2 ಲಸಿಕೆ ನೀಡಲಾಗಿದೆ. ಬೂಸ್ಟರ್​​ ಡೋಸ್​ ನೀಡಲಾಗುತ್ತಿದೆ. 6-12 ವರ್ಷದ ಮಕ್ಕಳಿಗೂ ಕೊರೋನಾ ಸಲಿಕೆ ಹಾಕಲು ಅನುಮತಿ ಸಿಕ್ಕಿದೆ. ಎಲ್ಲ ಮಕ್ಕಳಿಗೂ ಆದಷ್ಟು ಬೇಗ ಲಸಿಕೆ ವಿತರಣೆ ಮಾಡಲಾಗುತ್ತದೆ. ಈಗಾಗಲೇ ಹಲವು ಶಾಲೆಗಳು ಆರಂಭವಾಗಿವೆ. ಇಂತಹ ಸಂದರ್ಭದಲ್ಲಿ ಕೊರೋನಾ 4ನೇ ಅಲೆ ಪೋಷಕರಲ್ಲಿ ಸಹಜವಾಗಿ ಆತಂಕ ಹುಟ್ಟಿಸಿದೆ. ಕೊರೋನಾದಿಂದ ಬಚಾವ್​ ಆಗಲು ಲಸಿಕೆ ಅತ್ಯಗತ್ಯ. ದೇಶದ ಅಭಿವೃದ್ಧಿ ಜೊತೆಗೆ ಕೊರೋನಾ ಸೋಂಕು ನಿಯಂತ್ರಿಸುವ ಕೆಲಸದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರತವಾಗಿವೆ. ಸಾರ್ವಜನಿಕರ ಹಿತದೃಷ್ಟಿಯ ನಿಟ್ಟಿನಲ್ಲಿ ಕಾರ್ಯ ಭರದಿಂದ ಸಾಗಿದೆ ಎಂದರು.

ಕೊರೋನಾ ಸಂದರ್ಭದಲ್ಲಿ ಜನರಿಗೆ ಹೊರೆಯಾಗುತ್ತೆ. ಗುವಾಹಟಿಯಲ್ಲಿ 1 ಲೀಟರ್​ ಪೆಟ್ರೋಲ್​ ಬೆಲೆ 103 ರೂ. ಇದೆ. ಆದರೆ ಮುಂಬೈನಲ್ಲಿ 120 ರೂಪಾಯಿ ಇದೆ. ಎಲ್ಲೆಲ್ಲಿ ಬೆಲೆ ಹೆಚ್ಚಳ ಇದೆಯೋ ಸುಂಕ ಕಡಿಮೆ ಮಾಡಿ ಎಂದು ಮನವಿ ಮಾಡಿದ ಪ್ರಧಾನಿ ಅವರು, ಕೊರೋನಾ ಸಂಕಷ್ಟ ಕಾಲದಲ್ಲಿ ಜನರಿಗೆ ಹೊರೆ ಆಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಹಿಂದೆ ಸುಂಕ ಕಡಿಮೆ ಮಾಡುವಂತೆ ಕೇಂದ್ರದಿಂದ ಸೂಚನೆ ನೀಡಲಾಗಿತ್ತು. ಆದರೆ, ಬಿಜೆಪಿಯೇತರ ಕೆಲ ರಾಜ್ಯಗಳಲ್ಲಿ ಇಳಿಕೆ ಮಾಡಿಲ್ಲ. ಕರ್ನಾಟಕ ಮತ್ತು ಗುಜರಾತ್​ನಲ್ಲಿ ಕಳೆದ ನವೆಂಬರ್​ನಲ್ಲಿ ಇಳಿಕೆ ಮಾಡಲಾಗಿತ್ತು. ಈ ವಿಚಾರದಲ್ಲಿ ಎರಡೂ ರಾಜ್ಯಗಳು ಮಾದರಿ ಎಂದು ಪ್ರಧಾನಿ ಹೇಳಿದರು.

ಜಾನುವಾರಿಗೇನು ಗೊತ್ತು ಜನನಾಯಕರ ಗುರುತು

0

ಒಂದು ನಿಮಿಷದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಮಾತನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಹಾಗೆ ಒಂದು ನಿಮಿಷದಲ್ಲಿ ಆಗುವ ಅನಾಹುತಗಳನ್ನು ಕೂಡ ತಪ್ಪಿಸುವ ಅದೇಷ್ಟೋ ಪ್ರಸಂಗಗಳನ್ನು ನೋಡಿರುತ್ತೇವೆ. ಅದೇ ರೀತಿ ಇಲ್ಲೊಂದು ಅಪಾಯವನ್ನು ತಪ್ಪಿಸುವ ಘಟನೆ ನಡೆದಿದೆ.

ಸಾಮಾನ್ಯವಾಗಿ ಪ್ರಾಣಿಗಳನ್ನು ಕಂಡರೆ ಅವುಗಳನ್ನು ಮುದ್ದಿಸುವುದು ಮನುಷ್ಯನ ಸಹಜ ಗುಣ. ಅದೇ ರೀತಿ ರೈತರು ಯಾವುದೇ ಕೃಷಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬೇಕಾದರೆ, ಮೊದಲು ಗೋವುಗಳಿಗೆ ಪೂಜೆ ಸಲ್ಲಿಸುತ್ತಾರೆ. ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬೂದಿಹಾಳ ಪಿರಾಪುರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲು ವಿಜಯಪುರ ತಾಲೂಕಿನ ಕೊಡಗನೂರು ಗ್ರಾಮದಲ್ಲಿ ಮಂಗಳವಾರ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಆಕಸ್ಮಿಕ ಘಟನೆಯೊಂದು ನಡೆದಿದೆ. ಅದೇನು ಅಂತ ಯೋಚಿಸುತ್ತಿದ್ದೀರಾ. ಮನುಷ್ಯರಿಗೆ ಬುದ್ಧಿ ಇರುತ್ತೆ, ಯಾವ ವ್ಯಕ್ತಿಗಳು ಯಾವ ಸ್ಥಾನದಲ್ಲಿದ್ದಾರೆ ಎಂದು ತಿಳಿದಿರುತ್ತದೆ. ಆದರೆ ಪ್ರಾಣಿಗಳಿಗೆ ಈ ವಿಚಾರ ತಿಳಿದಿತ್ತೆ? ಪ್ರಾಣಿ ಪ್ರೀತಿಯಿಂದ ಮುಖ್ಯಮಂತ್ರಿಗಳು ಗೋವಿಗೆ ಮುತ್ತಿಡಲು ಹೋದಾಗ, ಗೋವು ಗಾಬರಿಗೊಂಡು ತನ್ನ ಕೋಡಿನಿಂದ ಇರಿಯಲು ಮುಂದಾಗಿರುವ ಘಟನೆ ನಡೆದಿದೆ. ಈ ವಿಚಾರ ಎಲ್ಲೆಡೆ ವೈರಲ್ ಆಗಿದೆ.

ನಿಜಾಂಶ ವೇನು ಎಂದರೆ ನೆರೆದಿರುವ ಸಾವಿರಾರು ಮಂದಿಯನ್ನು ನೋಡಿ ಗೋವು ಗಾಬರಿಗೊಂಡಿದೆ. ಆದ್ದರಿಂದ ಆಕಸ್ಮಿಕ ಘಟನೆ ನಡೆದಿದೆ. ಗೋವು ತನ್ನ ಕೋಡಿನಿಂದ ತಿವಿಯಲು ಮುಂದಾದಾಗ ಅಲ್ಲಿರುವ ರೈತರು ಆಗುವ ಅಪಾಯವನ್ನು ತಪ್ಪಿಸಿದ್ದಾರೆ. ಕ್ಷಣಾರ್ಧದಲ್ಲಿ ಆಗುವ ಅಪಾಯದಿಂದ ಮುಖ್ಯಮಂತ್ರಿ ಗಳು ಪಾರಾಗಿದ್ದಾರೆ.

ಹೀಗೆ ಅನೇಕ ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಲೇ ಇರುತ್ತದೆ. ಒಂದು ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.

ಎಚ್ ಆರ್ ಎಂಎಸ್ ಪದ್ಧತಿ ರದ್ದು ಪಡಿಸಲು ಪ್ರತಿಭಟನೆ

0

ರಾಜ್ಯ ಸರ್ಕಾರ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಕಳೆದ ಜನವರಿ ತಿಂಗಳಿನಿಂದ ಜಾರಿಗೆ ತಂದಿರುವ ಎಚ್‌ಆರ್‌ಎಂಎಸ್ ವೇತನ ಪಾವತಿ ಪದ್ಧತಿಯನ್ನು ರದ್ಧುಪಡಿಸಬೇಕೆಂದು ಒತ್ತಾಯಿಸಿ ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕೇತರ ನೌಕರರು ಗುರುವಾರ ವಿಶ್ವವಿದ್ಯಾಲಯದ ಆಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು.

ಮಧ್ಯಾಹ್ನ ಊಟದ ವೇಳೆಯಲ್ಲಿ ಅಧ್ಯಾಪಕೇತರ ನೌಕರರ ಸಂಘದ ಪದಾಧಿಕಾರಿಗಳು ಮತ್ತು ನೌಕರರು ಪ್ರತಿಭಟನೆ ನಡೆಸಿ ಕುಲಸಚಿವೆ ಜಿ. ಅನುರಾಧ ಅವರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕುಲಸಚಿವೆ ಜಿ. ಅನುರಾಧ ಮಾತನಾಡಿ, ಎಚ್‌ಆರ್‌ಎಂಎಸ್ ವೇತನ ಪಾವತಿ ಪದ್ಧತಿಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿ ತಿಂಗಳ ಆರಂಭದಲ್ಲಿಯೇ ವೇತನ ಪಾವತಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ಆಡಳಿತವು ನಿರಂತರ ಪ್ರಯತ್ನ ನಡೆಸುತ್ತಿದ್ದು, ಸಂಘದ ಮನವಿಯನ್ನು ಸರ್ಕಾರಕ್ಕೆ ತಲುಪಿಸಲಾಗುವುದು ಎಂದರು.

ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಸಿಬ್ಬಂದಿಯ ವೇತನ ಪಾವತಿಗೆ ಎಚ್‌ಆರ್‌ಎಂಎಸ್ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದ್ದು, ಪ್ರತಿ ತಿಂಗಳೂ ವೇತನ ಪಾವತಿಯಲ್ಲಿ ವಿಳಂಬವಾಗುತ್ತಿದೆ. ಇದರಿಂದಾಗಿ ನೌಕರರ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ದುಸ್ತರವಾಗುತ್ತಿದೆ.

ಇದಲ್ಲದೆ ಬ್ಯಾಂಕ್‌ಗಳಲ್ಲಿ ವೇತನಾಧಾರಿತ ಸಾಲಸೌಲಭ್ಯ ಪಡೆದಿದ್ದು, ನಿಗದಿತ ಸಮಯಕ್ಕೆ ಕಂತು ಪಾವತಿಯಾಗದೆ ಸಾಲದ ಹೊರೆ ಹೆಚ್ಚಾಗುತ್ತಿದೆ ಎಂದು ಸಂಘ ಪತ್ರದಲ್ಲಿ ಅರಿಕೆ ಮಾಡಿಕೊಂಡಿದೆ.

ಎಚ್‌ಆರ್‌ಎಂಎಸ್ ಪದ್ಧತಿ ವಿಶ್ವವಿದ್ಯಾಲಯದ ಸ್ವಾಯತ್ತತೆಯನ್ನು ಕಸಿದುಕೊಳ್ಳುತ್ತಿದೆ. ಇದು ವಿಶ್ವವಿದ್ಯಾಲಯ ಸ್ಥಾಪನೆಯ ಮೂಲ ಉದ್ದೇಶಕ್ಕೆ ಧಕ್ಕೆ ತರುತ್ತಿರುವುದಲ್ಲದೆ, ಶೈಕ್ಷಣ ಚಟುವಟಿಕೆಗಳಿಗೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಆದ್ದರಿಂದ ವಿವಿಗಳಲ್ಲಿ ಹೊಸದಾಗಿ ಜಾರಿಗೆ ತಂದಿರುವ ಎಚ್‌ಆರ್‌ಎಂಎಸ್ ವೇತನ ಪಾವತಿ ಪದ್ಧತಿಯನ್ನು ರದ್ಧುಪಡಿಸುವಂತೆ ಮನವಿ ಮಾಡಿಕೊಂಡಿದೆ.

ಸಂಘದ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಅಬ್ದುಲ್ ಅಲಿ ಮತ್ತಿತರ ಪದಾಧಿಕಾರಿಗಳು, ಅಧ್ಯಾಪಕೇತರ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರವು ಇಂಧನದ ತೆರಿಗೆ ಇಳಿಸಲಿ ಬಳಿಕ ನಾವೂ ಇಳಿಸುತ್ತೇವೆ- ಉದ್ಧವ್

0

ರಾಜ್ಯ ಸರ್ಕಾರ ಇಂಧನ ಬೆಲೆ ಏರಿಕೆಗೆ ಜವಾಬ್ದಾರಿ ಅಲ್ಲ. ನೀವು ಕೇಂದ್ರದಲ್ಲಿ ಮಾಡಿರುವ ತಪ್ಪಿಗೆ ನಮ್ಮನ್ನು ದೂಷಿಸಬೇಡಿ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ.

ಕೇಂದ್ರ ಸರ್ಕಾರ ಹೆಚ್ಚಿನ ತೆರಿಗೆ ಹಾಕಿಕೊಂಡು ಇದೀಗ ರಾಜ್ಯ ಸರ್ಕಾರಗಳ ಮೇಲೆ ಬೆರಳು ತೊರಿಸುತ್ತಿದೆ. ಮೊದಲು ಕೇಂದ್ರ ಇಂಧನಗಳ ತೆರಿಗೆಯನ್ನು ಇನ್ನಷ್ಟು ಕಡಿತಗೊಳಿಸಲಿ ಆ ಬಳಿಕ ರಾಜ್ಯಗಳಲ್ಲೂ ಕಡಿತಗೊಳಿಸಬಹುದು. ಮಹಾರಾಷ್ಟ್ರ 15% ಜಿಎಸ್‍ಟಿ ತೆರಿಗೆ ಸಂಗ್ರಹದ ಮೂಲಕ ಅತಿ ಹೆಚ್ಚಿನ ತೆರಿಗೆ ಸಂಗ್ರಹಿಸುವ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಮಾಹಿತಿ ಹಂಚಿಕೊಂಡರು.

ಇಂಧನಗಳ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು
ಕಡಿತಗೊಳಿಸುವಂತೆ ನರೇಂದ್ರ ಮೋದಿ ಬಿಜೆಪಿಯೇತರ ರಾಜ್ಯಗಳಿಗೆ ಮನವಿ ಮಾಡಿದ್ದರು.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಉದ್ಧವ್ ಠಾಕ್ರೆ, ಮುಂಬೈನಲ್ಲಿ ಡೀಸೆಲ್ ಲೀ. 24.38 ರೂ. ಕೇಂದ್ರ ತೆರಿಗೆ ಮತ್ತು 22.37 ರೂ. ರಾಜ್ಯ ತೆರಿಗೆ. ಪೆಟ್ರೋಲ್ 31.58 ರೂ.
ಕೇಂದ್ರ ಮತ್ತು 32.55 ರೂ. ರಾಜ್ಯ ತೆರಿಗೆ. ಇದರಿಂದಾಗಿ ರಾಜ್ಯದಲ್ಲಿ ಇಂಧನ ದರ ಏರಿಕೆ ಕಂಡಿದೆ. ನಾವು ರಾಜ್ಯದಲ್ಲಿ ಈಗಾಗಲೇ ನ್ಯಾಚುರಲ್ ಗ್ಯಾಸ್ ಮೇಲಿನ ತೆರಿಗೆ ವಿನಾಯಿತಿ ನೀಡಿದ್ದೇವೆ ಎಂದರು.

ಸನ್ ರೈಸರ್ಸ್ ವಿರುದ್ಧ ಟೈಟನ್ಸ್ ಜಯಭೇರಿ

0

ಗುಜರಾತ್ ವಿರುದ್ಧ ಹೈದರಾಬಾದ್ ಗೆ ಐದು ವಿಕೆಟ್ ಗಳ ಸೋಲು. ಸನ್ ರೈಸರ್ಸ್ ಓಟಕ್ಕೆ ಬ್ರೇಕ್ ಹಾಕಿದ ಟೈಟನ್ಸ್ ಪಡೆಕೊನೆ ಓವರ್ ನಲ್ಲಿ ಗೆಲ್ಲಲು ಗುಜರಾತ್ ಟೈಟನ್ಸ್ ಗೆ 22 ರನ್ ಗಳ ಅವಶ್ಯಕತೆ ಇತ್ತು. ಆದರೆ ನಾಲ್ಕು ಸಿಕ್ಸರ್ ಸಮೇತ 25ರಂದು ಬಾರಿಸಿ, ಸನ್ ರೈಸಸ್ ಹೈದರಾಬಾದ್ ವಿರುದ್ಧ ರೋಚಕ ಗೆಲುವು ಪಡೆಯಿತು. ಈ ಮೂಲಕ ಇದುವರೆಗೆ ಆಡಿರುವ ಎಂಟು ಪಂದ್ಯಗಳಲ್ಲಿ ಹೇಳು ಗೆಲುವು ದಾಖಲಿಸಿ ಒಟ್ಟಾರೆ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನ ಪಡೆಯಿತು.


ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ 15ನೇ ಆವೃತ್ತಿಯ 40ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದ್ರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಗುಜರಾತ್ ತಂಡ 20 ಅವರುಗಳು ಮುಕ್ತಾಯಗೊಂಡಾಗ 5 ವಿಕೆಟ್ ನಷ್ಟಕ್ಕೆ 199 ಬಾರಿಸಿ ಜಯಶಾಲಿಯಾಯಿತು. ರಾಹುಲ್ ತೆವತಿಯಾ( 40 ರನ್, 21 ಎಸೆತ, 4 ಫೋರ್, ಎರಡು ಸಿಕ್ಸರ್) ಹಾಗೂ ರಶೀದ್ ಖಾನ್ (31ರನ್, 11 ಎಸೆತ, 4 ಸಿಕ್ಸರ್) ಕೊನೆ 24 ಎಸೆತಗಳಲ್ಲಿ 59 ರನ್ ಬಾರಿಸುವ ಮೂಲಕ ಗೆಲುವಿನ ರೂವಾರಿ ಯಾದರು. ಅದಕ್ಕೂ ಮೊದಲು ವೃದ್ಧಿಮಾನ್ ಸಹ 68 ರನ್ ಬಾರಿಸಿ ಹೋರಾಟಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು.

ಮತ್ತೊಮ್ಮೆ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ, 25 ರನ್ ಗಳಿಗೆ 5 ವಿಕೆಟ್ ಕಬಳಿಸಿದ ಎಸ್ ಆರ್ ಎಚ್ ನ ಅಮ್ರನ್ ಮಲಿಕ್ ಹೋರಾಟ ವ್ಯರ್ಥವಾಯಿತು. ಇದರೊಂದಿಗೆ ಎಸ್ ಆರ್ ಎಚ್ ನ ಸತತ 5 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಬಿತ್ತು.
ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ವೇನೋ ದೊರೆಯಲಿಲ್ಲ. ನಾಯಕ ಕೇನ್ ವಿಲಿಯಮ್ಸನ್ 5 ರನ್ ಗಳಿಸಿ ಟೈಟನ್ಸ್ ವೇಗಿ ಮೊಹಮ್ಮದ್ ಶಮಿ ಎಸೆತಕ್ಕೆ ಕ್ಲೀನ್ ಬೋಲ್ಡ್ ಆಗಿ ಪೆವಿಲಿಯನ್ ಗೆ ತೆರಳುವ ಮೂಲಕ ನಿರಾಸೆ ಕಂಡರು.

ಬಳಿಕ ಕ್ರೀಸ ಗೆ ಬಂದ ರಾಹುಲ್ ತ್ರಿಪಾಠಿ ಆರ್ಭಟಿಸುವ ಸುಳಿವು ನೀಡಿದ್ದೇನೆ ನಿಜ, ಆದರೆ, 10 ಎಸೆತಗಳಲ್ಲಿ 16 ರನ್ ಬಾರಿಸಿ ಮೊಹಮ್ಮದ್ ಶಮಿಯ ಎಸೆತಕ್ಕೆ ಎಲ್ಬಿಡಬ್ಲ್ಯು ಆಗಿ ಮರಳಿದರು. 44 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡ ಹೈದರಾಬಾದ್ ತಂಡ ಬಾರಿ ಕುಸಿತದ ಆತಂಕ ಕಾಡತೊಡಗಿತು. ಆದರೆ ಕ್ರೀಸ್ ನ ಮತ್ತೊಂದು ಬದಿಯಲ್ಲಿ ಅಭಿಷೇಕ್ ಶರ್ಮಾ ರನ್ ಗಳಿಕೆ ಗೆ ಒತ್ತುಕೊಟ್ಟರು. ಅವರಿಗೆ 4ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಮಕ್ರಮ್ ರಿಂದ ಉತ್ತಮ ಸಾಥ್ ದೊರೆಯಿತು. ಈ ಜೋಡಿ 4ನೇ ವಿಕೆಟ್ ಗೆ 96 ರನ್ ಗಳ ಜೊತೆಯಾಟ ಆಡಿ ತಂಡಗಳಿಗೆ ವೇಗ ಕಡಿಮೆಯಾಗದಂತೆ ನೋಡಿಕೊಂಡರು. ಆದರೆ, ಅಷ್ಟರಲ್ಲಿ ಜೋಸೆಫ್ ಎಸೆತದಲ್ಲಿ ಅಭಿಷೇಕ್ ಶರ್ಮಾ ಬೌಲ್ಡ್ ಆದರೆ, ಯಶ್ ದಯಾಳ್ ಎಸೆತದಲ್ಲಿ ಮಿಲ್ಲರ್ ಗೆ ಕ್ಯಾಚ್ ಕೊಟ್ಟು ಮಾರ್ಕಮ್ ವಾಪಸಾದರು.