Tuesday, March 10, 2026
Tuesday, March 10, 2026
Home Blog Page 1522

ಮಹಿಳೆಯರಿಗೆ ಸ್ವ ಉದ್ಯೋಗ ಆರಂಭಿಸಲು ಅರ್ಜಿ ಆಹ್ವಾನ

0

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿನಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವ-ಉದ್ಯೋಗ ಹಮ್ಮಿಕೊಳ್ಳಲು ಉದ್ಯೋಗಿನಿ, ಕಿರುಸಾಲ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಅರ್ಹ ಮಹಿಳೆಯರು ಮತ್ತು ಸ್ತ್ರೀಶಕ್ತಿ ಗುಂಪುಗಳಿಗೆ ಬ್ಯಾಂಕ್ ಸಾಲ ಹಾಗೂ ನಿಗಮದ ಸಹಾಯಧನದೊಂದಿಗೆ ಸೌಲಭ್ಯ ನೀಡಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.

2022-23 ನೇ ಸಾಲಿನಲ್ಲಿ ಉದ್ಯೋಗಿನಿ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವ-ಉದ್ಯೋಗ ಹಮ್ಮಿಕೊಳ್ಳಲು ಉದ್ಯೋಗಿನಿ ಯೋಜನೆಯಡಿ ವಿವಿಧ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಪಡೆದು ಕೃಷಿ, ಹಾಗೂ ಕೃಷಿಯೇತರ ಚಟುವಟಿಕೆಗಳ(ಹಂದಿ ಸಾಕಾಣಿಕೆ, ಆಡು ಸಾಕಾಣಿಕೆ, ಕೋಳಿ ಸಾಕಾಣಿಕೆ, ನರ್ಸರಿ, ಬ್ಯೂಟಿಪಾರ್ಲರ್, ಟೈಲರಿಂಗ್, ವ್ಯಾಪಾರ, ಮತ್ತಿತರ) ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಲು 18 ರಿಂದ 55 ವರ್ಷ ವಯೋಮಿತಿಗೆ ಒಳಪಟ್ಟು ಬಡತನ ರೇಖೆಯ ಒಳಪಡುವ ಪಡಿತರ ಚೀಟಿ ಹೊಂದಿದ ಮಹಿಳೆಯರಿಗೆ ಅವಕಾಶವಿದೆ.

18 ರಿಂದ 55 ವರ್ಷದೊಳಗಿನ ಮಹಿಳೆಯರಿಗೆ ಆಧ್ಯತೆ ನೀಡಲಾಗುವುದು. ಪರಿಶಿಷ್ಟ ಜಾತಿ/ ಪಂಗಡದ ಮಹಿಳೆಯರಿಗೆ ಘಟಕ ವೆಚ್ಚ 1 ಲಕ್ಷ ರೂ.ನಿಂದ 3 ಲಕ್ಷ ರೂ. ಹಾಗೂ ಶೇ.50 ಸಹಾಯಧನ ನೀಡಲಾಗುವುದು ಮತ್ತು ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂ.ಮೀರಬಾರದು.

ಜಾತಿ ಪ್ರಮಾಣ ಪತ್ರ, ಆದಾಯ ದೃಡೀಕರಣ ಪತ್ರ, ಚುನಾವಣಾ ಗುರುತಿನ ಚೀಟಿ. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಬಿಪಿಎಲ್ ಕಾರ್ಡ್, ಪಾಸ್ ಪೋರ್ಟ್ ಸೈಜ್ ಪೋಟೋ ಇರಬೇಕು.

ಕಿರುಸಾಲ ಯೋಜನೆಯಡಿ ಸ್ತ್ರೀಶಕ್ತಿ, ಸ್ವ-ಸಹಾಯ ಗುಂಪಿನ (ಇತರೆ ವರ್ಗ) ಸದಸ್ಯರುಗಳಿಗೆ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರತಿ ಗುಂಪಿಗೆ 2 ಲಕ್ಷ ರೂ. ಬಡ್ಡಿ ರಹಿತ ಸಾಲವನ್ನಾಗಿ ನೀಡಲಾಗುವುದು.

ಪದವಿ ಗಳಿಕೆ ಜೀವನದ ಸಾಧನೆಯ ಆರಂಭ ಆದರೆ ಕೊನೆಯಲ್ಲ

0

ಪದವಿಯಿಂದ ಜ್ಞಾನ ಪಡೆಯಬಹುದು ಆದರೆ ಕೌಶಲ್ಯ ಬೇಕೆಂದರೆ ಪ್ರಾಯೋಗಿಕಾನುಭವ ಅವಶ್ಯ, ಆದ್ದರಿಂದಲೇ ನೂತನ ಶಿಕ್ಷಣ ನೀತಿಯು ಕೌಶಲ್ಯಕ್ಕೆ ಮಹತ್ವ ಕೊಟ್ಟಿದೆ ಎಂದು ಅಂತರರಾಷ್ಟ್ರೀಯ ವ್ವಕ್ತಿತ್ವಾಭಿವೃಧ್ಧಿ ತರಬೇತುದಾರ ಆರ್.ಎ.ಚೇತನ್ ರಾಮ್ ಅಭಿಪ್ರಾಯಪಟ್ಟರು.

ದಾವಣಗೆರೆಯ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್ ನ ಬಿಸಿಎ ಮತ್ತು ಬಿಕಾಂ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಸಕಾರಾತ್ಮಕ ಬದಲಾವಣೆಯು ನಿರಂತರವಾಗಿರಬೇಕು, ಇದೇ ನಿಜವಾದ ಪರಿವರ್ತನೆ, ಜ್ಞಾನವೇ ಶಕ್ತಿಯಾದರೂ ಪರಿವರ್ತನೆಗೆ ಕೌಶಲ್ಯವೂ ಅತ್ಯವಶ್ಯ, ಪದವಿ ಗಳಿಕೆಯು ಜೀವನದ ಸಾಧನೆಯ ಕೊನೆಯಲ್ಲ, ಇದು ಆರಂಭದ ಆರಂಭವಷ್ಟೇ ಎಂದರು. ನಾವೂ ಬದುಕ ಬೇಕು ಉಳಿದವರಿಗೂ ಬದುಕಲು ಬಿಡಬೇಕು, ನಾವಷ್ಟೇ ಸಂತೋಷವಾಗಿದ್ದರೆ ಸಾಲದು, ಇತರರೂ ಸಂತೋಷವಾಗಿರುವಂತೆ ಮಾಡಬೇಕು ಎಂದರು.

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಚೇರ್ಮನ್ ಅಥಣಿ ಎಸ್. ವೀರಣ್ಣನವರು ಮಾತನಾಡಿ ನೈಜತೆಯ ಅನುಭವದೊಂದಿಗೆ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡರೆ ಮಾತ್ರ ಭವಿಷ್ಯದಲ್ಲಿ ಅವಕಾಶಗಳ ಲಭ್ಯತೆ ಸಾಧ್ಯ ಎಂದರು.

ಪ್ರಾಂಶುಪಾಲ ಡಾ.ಬಿ.ವೀರಪ್ಪನವರು ಪ್ರಾಸ್ತಾವಿಕ ಮಾತುಗಳನ್ನಾಡಿ ದರು. ಫ್ರೊ.ಡಿ.ಎಂ.ಸ್ವಾತಿ ಸ್ವಾಗತ ಕೋರಿದರು. ಫ್ರೊ.ಕೆ.ಎಸ್.ಮುನವಳ್ಳಿ ಮಠ್ ಹಾಗೂ ಫ್ರೊ.ಕೆ.ಸಿಧ್ಧಲಿಂಗಯ್ಯಸಿಧ್ಧಲಿಂಗಪ್ಪ ಮುಖ್ಯಅತಿಥಿಗಳ ಪರಿಚಯ ಮಾಡಿದರು.

ಫ್ರೊ.ಕೆ.ವೈ.ವೀರೇಂದ್ರ ಪ್ರತಿಜ್ಞಾವಿಧಿ ಬೋ ಧಿಸಿದರು. ದರ್ಶನ್,ಅನುಷಾ,ಅಭಿಷೇಕ್ ಮತ್ತು ನಯನಾ ನಿರೂಪಿಸಿದರೆ ಪ್ರಾರ್ಥನೆಯನ್ನು ಸಂಧ್ಯಾ ಮತ್ತು ಸಂಗಡಿಗರು ಹಾಡಿದರು. ವಂದನೆಗಳನ್ನು ಫ್ರೊ.ಎಲ್.ಎನ್.ಚೇತನಾ ಅರ್ಪಿಸಿದರು. ಎಂಬಿಎ ನಿರ್ದೇಶಕ ಡಾ.ಸ್ವಾಮಿ ತ್ರಿಭುವನಾನಂದ ಮುಂತಾದವರು ಉಪಸ್ಥಿತರಿದ್ದರು.

ವರದಿ ಹಾಗೂ ಚಿತ್ರ : ಎಚ್.ಬಿ.ಮಂಜುನಾಥ.ದಾವಣಗೆರೆ

ಸಾರ್ವಜನಿಕ ಶಿಕ್ಷಣ ಇನ್ನು ಸಾಕ್ಷರತಾ ಇಲಾಖೆಯಾಗಿ ಮರುನಾಮಕರಣ

0

ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಹೆಸರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂದು ಮರು ನಾಮಕರಣ ಮಾಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂದು ಮರು ನಾಮಕರಣ ಮಾಡಲಾಗಿದೆ ಎಂದು ಹೇಳಿದ್ದಾರೆ.

12ನೇ ತರಗತಿವರೆಗಿನ ಶಿಕ್ಷಣವು ಶಾಲಾ ಶಿಕ್ಷಣ ವ್ಯಾಪ್ತಿಗೆ ಒಳಪಡುತ್ತದೆ ಎಂಬ ಅಂಶವನ್ನು ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ತಿಳಿಸಿರುವ ಹಿನ್ನೆಲೆ ಮರುನಾಮಕರಣ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂದು ಮರು ನಾಮಕರಣ ಮಾಡಲಾಗಿದೆ.

12ನೇ ತರಗತಿ ವರೆಗಿನ ಶಿಕ್ಷಣವು ಶಾಲಾ ಶಿಕ್ಷಣ ವ್ಯಾಪ್ತಿಗೆ ಒಳಪಡುತ್ತದೆ ಎಂಬ ಅಂಶವನ್ನು
ರಾಷ್ಟ್ರೀಯ ಶಿಕ್ಷಣ ನೀತಿ 2020 ರಲ್ಲಿ ತಿಳಿಸಿರುವ ಹಿನ್ನೆಲೆಯಲ್ಲಿ ಮರುನಾಮಕರಣ ಮಾಡಲಾಗಿದೆ.

ವಾಯುಪಡೆಯಲ್ಲಿ ಅಗ್ನಿಪಥ ನೇಮಕಾತಿಪ್ರಕ್ರಿಯೆ ಆರಂಭ

0

ಭಾರತೀಯ ವಾಯುಪಡೆಯು ಕೇಂದ್ರ ಸರ್ಕಾರದ ಹೊಸ ಯೋಜನೆ ‘ಅಗ್ನಿಪಥ’ ಅಡಿಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ.

ಜೂನ್‌ 24ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಜುಲೈ 5ರ ವರೆಗೆ ಅರ್ಜಿಸಲ್ಲಿಸಬಹುದಾಗಿದೆ.
ಜುಲೈ 24ರಂದು ಆನ್‌ಲೈನ್‌ ಮೂಲಕ ಪರೀಕ್ಷೆ ನಡೆಯಲಿದೆ ಎಂದು ಪ್ರಕಟಣೆ ಹೊರಡಿಸಿದೆ.

ಆನ್‌ಲೈನ್‌ ಟೆಸ್ಟ್‌, ದೈಹಿಕ್ಷ ಕ್ಷಮತೆ ಪರೀಕ್ಷೆ (ಪಿಇಟಿ), ಹೊಂದಾಣಿಕೆ ಮಟ್ಟದ ಎರಡು ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
‘1999ರ ಡಿಸೆಂಬರ್‌ 29 ಹಾಗೂ 2005ರ ಜೂನ್‌ 29ರ ನಡುವೆ ಜನಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅಭ್ಯರ್ಥಿಯು ಒಂದು ವೇಳೆ ಆಯ್ಕೆ ಪ್ರಕ್ರಿಯೆಯ ಎಲ್ಲ ಹಂತಗಳನ್ನೂ ಪೂರ್ಣಗೊಳಿಸಿದರೆ, ದಾಖಲು ಮಾಡಿದ ದಿನಕ್ಕೆ ಗರಿಷ್ಠ ವಯೋಮಿತಿ 23 ವರ್ಷ ಇರಬೇಕು ಎಂದು ಐಎಎಫ್‌ ಪ್ರಕಟಣೆಯಲ್ಲಿ ತಿಳಿಸಿದೆ.

1950ರ ವಾಯುಪಡೆ ಕಾಯ್ದೆ ಅಡಿಯಲ್ಲಿ ಅಗ್ನಿವೀರರನ್ನು ನಾಲ್ಕು ವರ್ಷಗಳ ಅವಧಿಗೆ ದಾಖಲಿಸಿಕೊಳ್ಳಲಾಗುತ್ತದೆ. ಅಗ್ನಿವೀರರಿಗೆ ವಾಯುಪಡೆಯಲ್ಲಿ ಸದ್ಯ ಇರುವ ಶ್ರೇಣಿಗಳಿಗಿಂತ ವಿಭಿನ್ನವಾದ ಶ್ರೇಣಿ ನೀಡಲಾಗುತ್ತದೆ. ನಾಲ್ಕು ವರ್ಷಗಳ ನಿಗದಿತ ಒಪ್ಪಂದದ ಅವಧಿಯನ್ನು ಮೀರಿ, ವಾಯುಪಡೆಯು ಅಗ್ನಿವೀರರನ್ನು ಮುಂದುವರಿಸುವುದಿಲ್ಲ’ ಎಂದೂ ಸ್ಪಷ್ಟಪಡಿಸಿದೆ.

‘ಅಗ್ನಿಪಥ’ ಯೋಜನೆಯನ್ನು ಜೂನ್‌ 14ರಂದು ಪ್ರಕಟಿಸಿದ್ದ ಕೇಂದ್ರ ಸರ್ಕಾರ, ಹದಿನೇಳೂವರೆ ವರ್ಷದಿಂದ 21 ವರ್ಷದೊಳಗಿನವರು ನೇಮಕಾತಿಗೆ ಅರ್ಹರು ಎಂದು ಹೇಳಿತ್ತು. ಆದರೆ, ಯೋಜನೆಗೆ ಪ್ರತಿಭಟನೆಗಳು ವ್ಯಕ್ತವಾದ ಬೆನ್ನಲ್ಲೇ, ಗರಿಷ್ಠ ವಯೋಮಿತಿಯನ್ನು ಪರಿಷ್ಕರಿಸಿ 23 ವರ್ಷಕ್ಕೆ ಹೆಚ್ಚಿಸಿತ್ತು.

ಕೇಂದ್ರ ವಾಣಿಜ್ಯ ಸಚಿವಾಲಯದಲ್ಲಿ 65 ಹುದ್ದೆಗಳ ಭರ್ತಿ

0

ಕೇಂದ್ರ ವಾಣಿಜ್ಯ ಸಚಿವಾಲಯದಲ್ಲ 65 ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಯಂಗ್ ಪ್ರೊಫೆಷನಲ್ ಅಸೋಸಿಯೇಟ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪದವಿ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಮೂಲಕ ಕೇಂದ್ರ ಸರ್ಕಾರದ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ಪಡೆಯಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 13 ಆಗಿದೆ.

ಕೇಂದ್ರ ವಾಣಿಜ್ಯ ಸಚಿವಾಲಯದಿಂದ ಆಹ್ವಾನಿಸಲಾದ ಈ ಹುದ್ದೆಗಳು ಗುತ್ತಿಗೆ ಆಧಾರಿತವಾಗಿದೆ. ಈ ಹುದ್ದೆ ನೇಮಕಾತಿ, ಅರ್ಜಿ ಸಲ್ಲಿಕೆ ಮತ್ತು ಆಯ್ಕೆ ಪ್ರಕ್ರಿಯೆ ಸೇರಿದಂತೆ ಇನ್ನಿತರ ಮಾಹಿತಿ ಈ ಕೆಳಗಿನಂತಿದೆ.

ಸಂಸ್ಥೆಯ ಹೆಸರು: ವಾಣಿಜ್ಯ ಸಚಿವಾಲಯ (ವಾಣಿಜ್ಯ ಸಚಿವಾಲಯ)

ಹುದ್ದೆಯ ಹೆಸರು: ಯಂಗ್ ಪ್ರೊಫೆಷನಲ್, ಅಸೋಸಿಯೇಟ್
ಹುದ್ದೆಗಳ ಸಂಖ್ಯೆ: 65
ಉದ್ಯೋಗ ಸ್ಥಳ: ಅಖಿಲ ಭಾರತ
ಸಂಬಳ: 60000-330000 ರೂ.

ವಾಣಿಜ್ಯ ಸಚಿವಾಲಯದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಬಿಟೆಕ್​​, ಎಲ್​ಎಲ್​ಎಂ ಸ್ನಾತಕೋತ್ತರ ಪದವಿ, ಜೊತೆಗೆ ಎಂಬಿಎ ಪೂರ್ಣಗೊಳಿಸಿರಬೇಕು.

ಸತತ ಇನ್ನು ತ್ರೈಮಾಸಿಕಗಳವರೆಗೆ ಹಣದುಬ್ಬರ ಇಳಿತ

0

ದೇಶದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಸತತ ಮೂರು ತ್ರೈಮಾಸಿಕಗಳಲ್ಲಿ ಶೇಕಡ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರುವ ಸಾಧ್ಯತೆ ಇದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಡೆಪ್ಯುಟಿ ಗವರ್ನರ್ ಮೈಕೆಲ್‌ ಪಾತ್ರಾ ಹೇಳಿದ್ದಾರೆ.

ಹಣದುಬ್ಬರ ಪ್ರಮಾಣವು ಸತತ ಮೂರು ತ್ರೈಮಾಸಿಕಗಳವರೆಗೆ ಗರಿಷ್ಠ ಮಿತಿಗಿಂತ ಹೆಚ್ಚಿದ್ದರೆ, ಆರ್‌ಬಿಐ ಕೇಂದ್ರ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಬೇಕು ಎಂದು ಕಾಯ್ದೆ ಹೇಳುತ್ತದೆ. ಹಣದುಬ್ಬರವನ್ನು ನಿಯಂತ್ರಿಸಲು ಏಕೆ ಆಗಲಿಲ್ಲ ಎಂಬುದನ್ನು ಆರ್‌ಬಿಐ ಆ ವರದಿಯಲ್ಲಿ ಹೇಳಬೇಕಾಗುತ್ತದೆ. ಹಣದುಬ್ಬರವು ಸತತ ಮೂರು
ತ್ರೈಮಾಸಿಕಗಳವರೆಗೆ ಗರಿಷ್ಠ ಮಿತಿಗಿಂತ ಹೆಚ್ಚಿರುವ ಸಾಧ್ಯತೆ ಜಾಸ್ತಿ ಇದೆ’ ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಏಪ್ರಿಲ್‌ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 7.79ಕ್ಕೆ ತಲುಪಿತ್ತು. ಮೇ ತಿಂಗಳಿನಲ್ಲಿ ಅದು ತುಸು ಕಡಿಮೆ ಆಯಿತು. ಸತತ ಐದು ತಿಂಗಳುಗಳಿಂದ ಹಣದುಬ್ಬರವು ಶೇ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿದೆ.
ಜಾಗತಿಕ ಮಟ್ಟದಲ್ಲಿ ಹಣದ ಹರಿವಿನ ಮೇಲೆ ಕೈಗೊಂಡಿರುವ ಬಿಗಿ ಕ್ರಮಗಳಿಗೆ ಹೋಲಿಸಿದರೆ, ಆರ್‌ಬಿಐ ಇನ್ನು ಮುಂದೆ ಕೈಗೊಳ್ಳಲಿರುವ ಕ್ರಮಗಳು ಹೆಚ್ಚು ಸೌಮ್ಯವಾಗಿರಲಿವೆ ಎಂದು ಪಾತ್ರಾ ಅವರು ಅಭೌಪ್ರಾಯ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಹಣದುಬ್ಬರವು ರೂಪಾಯಿ ಮೌಲ್ಯದ ಮೇಲೆ ಕೂಡ ಕೆಟ್ಟ ಪರಿಣಾಮ ಬೀರಿದೆ. ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ನಾವು ನಮ್ಮ ಭಾಷೆಯ ಜೊತೆಗೆ ಅನ್ಯ ಭಾಷೆಯನ್ನೂ ಗೌರವಿಸುತ್ತೇವೆ-ನ್ಯಾ.ರಮಣ

0

ಅಮೆರಿಕದ ತೆಲುಗು ಸಮುದಾಯವು ನ್ಯೂಜೆರ್ಸಿಯಲ್ಲಿ ಆಯೋಜಿಸಿದ್ದ ‘ಮೀಟ್ ಅಂಡ್ ಗ್ರೀಟ್’ ಕಾರ್ಯಕ್ರಮದಲ್ಲಿ ಸಿಜೆಐ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ಶಿವಮಾಲಾ ದಂಪತಿ ಭಾಗವಹಿಸಿದ್ದರು.
ತೆಲುಗು ಜನರಲ್ಲಿ ಒಬ್ಬನಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ. ತೆಲುಗು ತಾಯಿಯ ಮುದ್ದು ಮಕ್ಕಳನ್ನು ಭೇಟಿ ಮಾಡುತ್ತಿರುವುದಕ್ಕೆ ಸಂತಸವಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದರು.

ಅಮೆರಿಕದಲ್ಲಿ ಸುಮಾರು 7 ಲಕ್ಷ ತೆಲುಗರಿದ್ದಾರೆ. ಕೆಲವು ಹಂತಗಳಲ್ಲಿ ಹಲವು ಪರೀಕ್ಷೆಗಳನ್ನು ಎದುರಿಸಿ ಮುನ್ನಡೆಯುತ್ತಿದ್ದಾರೆ. ಮಾತೃಭೂಮಿ ಮತ್ತು ಸ್ವಂತ ಜನರನ್ನು ತೊರೆದು ಇಲ್ಲೇ ನೆಲೆಸಿದ್ದಾರೆ. ಸಂಸ್ಕಾರದಿಂದ ಜೀವನ ನಡೆಸುತ್ತಿದ್ದಾರೆ. ನಿಮ್ಮ ಬದ್ಧತೆಯನ್ನು ನೋಡಿದರೆ ತೆಲುಗು ರಾಷ್ಟ್ರದ ಭವಿಷ್ಯ ಸುಭದ್ರವಾಗಿದೆ ಎಂದು ನಂಬಿದ್ದೇನೆ. ತಮ್ಮ ಊರು ಮತ್ತು ಮಣ್ಣಿನ ವಾಸನೆಯನ್ನು ನೆನಪಿಟ್ಟುಕೊಳ್ಳಬೇಕು ಎಂದು ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದರು.

ತೆಲುಗು ಕೇವಲ ಭಾಷೆಯಲ್ಲ. ಅದೊಂದು ಜೀವನ ವಿಧಾನ ಮತ್ತು ನಾಗರಿಕತೆ. ನಾವು ನಮ್ಮ ಭಾಷೆಯ ಜೊತೆಗೆ ಅನ್ಯ ಭಾಷೆಯನ್ನೂ ಗೌರವಿಸುತ್ತೇವೆ. ತಾಯ್ನಾಡು ಭಾಷೆಯ ಮಾಧುರ್ಯವನ್ನು ಅನುಭವಿಸಬೇಕು. ಮನೆಯಲ್ಲಿ ಮಾತನಾಡುವಾಗ ಮಾತೃಭಾಷೆಯಲ್ಲಿಯೇ ಮಾತನಾಡಬೇಕು. ನಮ್ಮ ಭಾಷೆ, ಸಂಸ್ಕೃತಿಯನ್ನು ಮರೆತರೆ ಅಳಿವಿನಂಚಿನತ್ತ ಸಾಗುವ ಅಪಾಯವಿದೆ. ತೆಲುಗು ಭಾಷಾ ಚಳವಳಿಯ ದುಃಸ್ಥಿತಿಯಿಂದ ಬೇಸರವಾಗಿದೆ ಎಂದರು.

ಮಾತೃಭಾಷೆಯಲ್ಲಿ ಉದ್ಯೋಗಗಳು ಬರುತ್ತವೆ ಎಂಬುದು ಮಿಥ್ಯೆ. ಮಾತೃಭಾಷೆಯಲ್ಲಿಯೇ ಓದಿ ಈ ಮಟ್ಟಕ್ಕೆ ಬಂದಿರುವುದನ್ನು ಮರೆಯಬಾರದು ಎಂದು ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದರು.

ದೇಶದಲ್ಲಿ ಕೊರೋನ ಸೋಂಕುಕೊಂಚ ಇಳಿಕೆ

0

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಇಂದು ಕೊಂಚ ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 15,940 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 15,940 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ.

ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿನಿಂದ 20 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 5,24,974 ಕ್ಕೆ ಏರಿಕೆಯಾಗಿದೆ.

ಕೊರೋನಾ ಸೋಂಕು ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 15,940 ಹೊಸ ಪ್ರಕರಣಗಳು ಮತ್ತು 20 ಸಾವುಗಳು ವರದಿಯಾಗಿವೆ.

ಒಂದೇ ಅವಧಿಯಲ್ಲಿ ಎರಡು ಪದವಿ ಅವಕಾಶ-ಪ್ರೊ.ವಿದ್ಯಾಶಂಕರ್

0

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು, ಯುವಕರನ್ನು ಉನ್ನತ ಶಿಕ್ಷಣದತ್ತ ಸೆಳೆಯಲು ಮುಂದಾಗಿದೆ. ಅಂದರೆ ವಿದ್ಯಾರ್ಥಿಗಳಿಗೆ ದ್ವಿಪದವಿಗೆ ಅವಕಾಶ ನೀಡಿದೆ. ಯುಜಿಸಿ ನಿಯಮಾವಳಿ ಅನ್ವಯ ಇದೇ ಮೊದಲ ಬಾರಿಗೆ ಏಕಕಾಲಕ್ಕೆ ಎರಡು ಪದವಿ ಪಡೆಯುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಲಾಗಿದೆ.

ಪ್ರಸ್ತುತ ವರ್ಷ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಅವರು ತಿಳಿಸಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಮುಕ್ತ ವಿವಿಯಲ್ಲಿ ವಿದ್ಯಾರ್ಥಿಗಳು ಯಾವುದೇ ಪದವಿ ಅಧ್ಯಯನ ಮಾಡುವ ಜೊತೆಗೆ ಮತ್ತೊಂದು ಪಡೆಯುವುದು ಪಡೆಯಲು ಅನುಕೂಲ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.

ಬಿಎ, ಬಿಕಾಂ, ಬಿಎಸ್ಸಿ ಪದವಿಯನ್ನು ಪ್ರತ್ಯೇಕವಾಗಿ ವ್ಯಾಸಂಗ ಮಾಡುತ್ತಿರುವವರು ಇದರೊಂದಿಗೆ ಮತ್ತೊಂದು ಪದವಿಯನ್ನು ಕೂಡ ಅಧ್ಯಯನ ಮಾಡಬಹುದು. ಅಲ್ಲದೇ, ಯಾವುದೇ ಸ್ನಾತಕೋತ್ತರ ಪದವಿ ಪಡೆಯುತ್ತಿರುವವರು ಮತ್ತೊಂದು ಸ್ನಾತಕೋತ್ತರ ಪದವಿಯನ್ನು ಕೂಡ ಪಡೆಯಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೋಮು ಸೌಹಾರ್ದತೆ ಕಳಿಕಳಿಯಿಂದ ಸೀಎಂ ಗೆ ಪತ್ರ ಬರೆದ ಸಾಹಿತಿ ಕಲಾವಿದರು

0

ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಬಂದಿದೆ. ಸಾರ್ವಜನಿಕ ಶಾಂತಿಯ ತೋಟವನ್ನು ಮರುಸ್ಥಾಪನೆ ಮಾಡಬೇಕಿದೆ ಎಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಸಾಹಿತಿಗಳು, ಚಿಂತಕರು ಸಿನಿ ಕ್ಷೇತ್ರದವರು ಹಾಗೂ ಎಡಪಂಥೀಯರು ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಚಲನ ಚಿತ್ರ ನಿರ್ದೇಶಕ ಬಿ.ಸುರೇಶ್, ಸಾಹಿತಿ ವೈದೇಹಿ, ಗಿರೀಶ್ ಕಾಸರವಳ್ಳಿ, ಗಾಯಕಿ ಎಂಡಿ ಪಲ್ಲವಿ, ವಸುಂಧರ ಭೂಪತಿ, ನಾಗೇಶ್ ಹೆಗ್ಡೆ ಸೇರಿದಂತೆ ವಿವಿಧ ಕ್ಷೇತ್ರಗಳ 75 ಮಂದಿ ಪತ್ರ ಬರೆದಿದ್ದಾರೆ.

ನಾವು ಕರ್ನಾಟಕದಲ್ಲಿ ನೆಲೆಸಿರುವ ವಿವಿಧ ಕ್ಷೇತ್ರ ಮತ್ತು ವೃತ್ತಿಗಳಿಗೆ ಸೇರಿದ ಸಾರ್ವಜನಿಕ ಕಳಕಳಿಯುಳ್ಳ ನಾಗರಿಕರಾಗಿದ್ದೇವೆ. ಶಾಂತಿ, ಸಹಬಾಳ್ವೆ, ವೈವಿದ್ಯತೆ, ಬಹುತ್ವಕ್ಕೆ ಹೆಸರಾಗಿದ್ದ ಈ ನಾಡಿನಲ್ಲಿ ಇವುಗಳನ್ನೆಲ್ಲ ನಾಶಗೊಳಿಸುವಂತಹ ಇತ್ತೀಚಿನ ಬೆಳವಣಿಗೆಗಳನ್ನು ನೋಡಿ ಲಕ್ಷಾಂತರ ನಾಗರಿಕರಂತೆ ನಾವೂ ಸಹ ತೀವ್ರವಾಗಿ ವ್ಯಾಕುಲಗೊಂಡಿದ್ದೇವೆ. ಇಂತಹ ತಪ್ಪು ನಡೆಗಳನ್ನು ಸರಿಪಡಿಸಲು ಈಗಲೂ ಅವಕಾಶವಿದ್ದು ಅದಕ್ಕೆ ಅಗತ್ಯವಾದ ಸಲಹೆಗಳನ್ನು ಸರ್ಕಾರಕ್ಕೆ ನೀಡುವುದು ನಾಗರಿಕರಾದ ನಮ್ಮ ಕರ್ತವ್ಯವೆಂದು ಭಾವಿಸಿ ಈ ಪತ್ರವನ್ನು ತಮಗೆ ಸಲ್ಲಿಸುತ್ತಿದ್ದೇವೆ ಎಂದು ಪತ್ರದಲ್ಲಿ ಕರ್ನಾಟಕದ ಹಿರಿಯ ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗೆ ನಡೆದ ‘ಬಸವ ಜಯಂತಿ – 2022’ ಸಂದರ್ಭದಲ್ಲಿ ಬಸವಣ್ಣನವರ ಕನಸಿನ ಸಮಾನತೆಯ ಸೌಹಾರ್ದಯುತ ಸಮಾಜವನ್ನು ಕಟ್ಟುವುದು ನಮ್ಮ ಗುರಿ ಎಂದು ಸರ್ಕಾರದ ಜಾಹಿರಾತಿನಲ್ಲಿ ಪ್ರಕಟಿಸಲಾಗಿದೆ. ಸಾಮಾಜಿಕ ಸೌಹಾರ್ದತೆ, ಬ್ರಾತೃತ್ವ, ಏಕತೆ ಮತ್ತು ಅಂತಃಕರಣಕ್ಕೆ ಬಸವಣ್ಣನವರು ಒತ್ತು ನೀಡಿದ್ದರು ಎನ್ನುವ ನಮ್ಮ ಪ್ರಧಾನ ಮಂತ್ರಿಯವರ ಮಾತುಗಳನ್ನು ಸಹ ಇದರ ಜೊತೆ ಉದ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಸರ್ಕಾರವು ಪವಿತ್ರ ರಂಜಾನ್ ಈದ್ ಉಲ್ ಫಿತರ್ ಹಬ್ಬವನ್ನು ಬಸವ ಜಯಂತಿಯಂತೆಯೇ ಆಚರಿಸಿ ಸತತವಾಗಿ ಕೋಮು ದ್ವೇಷಿಗಳ ದಾಳಿಗೆ ತುತ್ತಾಗುತ್ತಿರುವ ಮುಸ್ಲಿಂ ನಾಗರಿಕರನ್ನು ಉದ್ದೇಶಿಸಿ ಅವರ ರಕ್ಷಣೆ ಮತ್ತು ಸುರಕ್ಷತೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರೆ ಅದು ಮತ್ತಷ್ಟು ಹೃದಯ ಸ್ಪರ್ಶಿಯಾಗುತ್ತಿತ್ತು.

ಶಾಂತಿ ಸೌಹಾರ್ದತೆ ಮತ್ತು ನ್ಯಾಯದಾನ ನೀಡುವ ಹೊಣೆಗಾರಿಕೆಯನ್ನು ಕರ್ನಾಟಕ ಸರ್ಕಾರವು ನಿರ್ವಹಿಸುತ್ತದೆ ಎನ್ನುವ ನಂಬಿಕೆಯಿಂದ ನಾವು ಮುಖ್ಯಮಂತ್ರಿಗಳಲ್ಲಿ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವ ಮೂಲಕ ಎಲ್ಲ ನಾಗರಿಕರ ಸೌಖ್ಯ ಮತ್ತು ವಿಶ್ವಾಸವನ್ನು ಪುನರ್ ಪ್ರತಿಷ್ಠಾಪಿಸಬೇಕೆಂದು ಮನವಿ ಮಾಡಿ ಕೊಳ್ಳುತ್ತೇವೆ ಎಂದಿದ್ದಾರೆ.

ಕರ್ನಾಟಕದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಬಗ್ಗೆ ಕಾಳಜಿ ಹಾಗೂ ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ತುರ್ತಾಗಿ ಮರುಸ್ಥಾಪಿಸುವುದರ ವಿಷಯದ ಬಗ್ಗೆ ಬರೆಯಲಾಗಿದೆ.