Monday, August 3, 2026
Monday, August 3, 2026
Home Blog Page 15

Rotary Club of Shivamogga ರೋಟರಿ ಸಹ್ಯಾದ್ರಿ ಮತ್ತು ಮಡಿಲು ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಮತ್ತು ತಯಾರಿ ಬಗ್ಗೆ ಮಾರ್ಗದರ್ಶನ

0

Rotary Club of Shivamogga ರೋಟರಿ ಕ್ಲಬ್ ಶಿವಮೊಗ್ಗ ಸಹ್ಯಾದ್ರಿ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಸೇವಾ ಸಂಘ (ಮಡಿಲು) ಇವರ ಸಹಯೋಗದಲ್ಲಿ ಪಿಳ್ಳಂಗೆರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಎಂಬ ವಿಷಯದ ಬಗ್ಗೆ ಹಾಗೂ ಪರೀಕ್ಷೆ ತಯಾರಿ ಬಗ್ಗೆ ಚಿಂತನ-ಮಂಥನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಜೆ.ಎನ್.ಎನ್.ಸಿ.ಇ. ಎಂ.ಬಿ.ಎ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಅನುರಾಧಾ ಗಿರಿಮಾಜಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಕೆಯ ಬಗ್ಗೆ ವಿಷಯಗಳನ್ನು ಮನನ ಮಾಡಿಕೊಳ್ಳುವ ಬಗ್ಗೆ, ಪರೀಕ್ಷೆಗಳನ್ನು ತಯಾರಿ ಮಾಡಿಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ಮನ ಮುಟ್ಟುವ ಹಾಗೆ ವಿವರವಾಗಿ ತಿಳಿಸಿಕೊಟ್ಟರು. ಈ ಬಗ್ಗೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂದಿತು.

ಪ್ರೊ. ಸಯ್ಯದ್ ಸನಾವುಲ್ಲಾ ಅವರು ಸಹ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಸಹ್ಯಾದ್ರಿಯ ಅಧ್ಯಕ್ಷರಾದ ಹುಲಿರಾಜ್ ಗುಬ್ಬಿ ಅವರು ಸಹ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ರೋಟರಿ ಬಗ್ಗೆ ಸಂಕ್ಷಿಪ್ತ ಮಾಹಿತಿ ಹಾಗೂ ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ಮಾತನಾಡಿದರು.

ಈ ಮಧ್ಯೆ 6ನೇ ತರಗತಿ ಓದುತ್ತಿರುವ ಮಾಸ್ಟರ್ ಸಚಿತ್ ಗುಬ್ಬಿರವರು ಕ್ಯಾಲಿಫೋರ್ನಿಯಾದಿಂದ ಬಂದಿದ್ದು, ಭಾರತೀಯ ಶಿಕ್ಷಣ ಹಾಗೂ ಅಮೆರಿಕಾ ಶಿಕ್ಷಣದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.

Rotary Club of Shivamogga ಈ ಸಮಾರಂಭ ವಿದ್ಯಾರ್ಥಿಗಳಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಡಾ. ಬಿ.ಯು ಕಣ್ಣಪ್ಪನವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಶಾಲೆಯ ಸಹ ಶಿಕ್ಷಕರಾದ ಧರ್ಮಪ್ಪ ಹಾಗೂ ಉಪ ಪ್ರಾಂಶುಪಾಲರಾದ ಶ್ರೀನಿವಾಸ್‌ರವರು ಪ್ರಾಸ್ತವಿಕವಾಗಿ ಶಾಲೆಯ ಕಾರ್ಯಕ್ರಮಗಳ ಬಗ್ಗೆ ಸಭೆಗೆ ತಿಳಿಸಿಕೊಟ್ಟರು. ಸಭೆಗೆ ಆಗಮಿಸಿದ್ದ ಅತಿಥಿಗಳನ್ನು ನಿವೃತ್ತ ಡಿ.ಡಿ.ಪಿ.ಐ. ಸುಮಂಗಳಾ ಕುಚಿನಾಡ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಜೆ.ಎನ್.ಎನ್.ಸಿ.ಇ. ಎಂ.ಬಿ.ಎ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಅನುರಾಧಾ ಗಿರಿಮಾಜಿ ಅವರ ಪರಿಚಯವನ್ನು ರಮಾ ಗುಬ್ಬಿಯವರು ಸಭೆಗೆ ಮಾಡಿಕೊಟ್ಟರು. ಕ್ಲಬ್ ನ ಕಾರ್ಯದರ್ಶಿ ಡಾ. ವೇಣುಗೋಪಾಲ್ ರೆಡ್ಡಿ ಅವರಿಂದ ವಂದನಾರ್ಪಣೆಯೊಂದಿಗೆ ಸಮಾರಂಭ ಮುಕ್ತಾಯವಾಯಿತು. ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಪೆನ್ನು ಮತ್ತು ಸಿಹಿಯನ್ನು ವಿತರಿಸಲಾಯಿತು.

Kuvempu University ಕುವೆಂಪು ವಿವಿಯ ಸ್ನಾತಕೋತ್ತರ ಡಿಪ್ಲೊಮಾ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

0

Kuvempu University ಕುವೆಂಪು ವಿಶ್ವವಿದ್ಯಾಲಯವು 2026-27ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜುಲೈ 31 ರವರೆಗೆ ವಿಸ್ತರಿಸಿದೆ.
ಸ್ನಾತಕ ಪದವಿಯ ರಿಪೀಟರ್ಸ್ ಪರೀಕ್ಷಾ ಫಲಿತಾಂಶಗಳು ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪರೀಕ್ಷಾ ಫಲಿತಾಂಶ ಪ್ರಕಟಣೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕುಲಪತಿಗಳ ಅನುಮೋದನೆ ಪಡೆದು ಅರ್ಜಿ ಸಲ್ಲಿಕೆಯ ವೇಳಾಪಟ್ಟಿಯನ್ನು ಮರು ನಿಗದಿಪಡಿಸಲಾಗಿದೆ.
ಜುಲೈ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ಮೆರಿಟ್ ಪಟ್ಟಿ ಪ್ರಕಟಣೆ: ಆಗಸ್ಟ್ 10,
ಪ್ರವೇಶಾತಿ ಕೌನ್ಸಿಲಿಂಗ್ (ಮೆರಿಟ್ & ವಿಶೇಷ ವರ್ಗ): ಆಗಸ್ಟ್ 13,
ಪ್ರವೇಶಾತಿ ಕೌನ್ಸಿಲಿಂಗ್ (ಮೆರಿಟ್ ಕಮ್ ಪೇಮೆಂಟ್):ಆಗಸ್ಟ್ 14 ಆಗಿರುತ್ತದೆ.
Kuvempu University ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಕುಲಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಹಿತ್ಯ ಕೇವಲ ಜೀವನದ ಪ್ರತಿಬಿಂಬವಲ್ಲ. ಸಮಾಜವನ್ನು ಪ್ರಶ್ನಿಸುವ ಸಾಮರ್ಥ್ಯ ಅನಾವರಣಗೊಳಿಸುವ ಶಕ್ತಿ- ಡಾ.ಟಿ.ಅವಿನಾಶ್

0

ಸಾಗರದ ಎಲ್. ಬಿ. ಮತ್ತು ಎಸ್. ಬಿ. ಎಸ್. ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಸಾಹಿತ್ಯ ವೇದಿಕೆಯ (Literature club ) 2026-27 ನೇ ಶೈಕ್ಷಣಿಕ ಸಾಲಿನ ಚಟುವಟಿಕೆಗಳಿಗೆ ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಚಾರ್ಯರಾದ ಡಾ. ಅವಿನಾಶ್ ಟಿ. ಸೋಮವಾರದಂದು ಜ್ಯೋತಿ ಬೆಳಗಿಸಿ ಚಾಲನೆಯನ್ನು ನೀಡಿದರು. “ಸಾಹಿತ್ಯ ಮತ್ತು ಸಮಾಜ” ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವಿನಾಶ್ ತಮ್ಮ ಉಪನ್ಯಾಸದಲ್ಲಿ ಸಾಹಿತ್ಯವು ಕೇವಲ ಜೀವನದ ಪ್ರತಿಬಿಂಬವಲ್ಲ, ಸಮಾಜವನ್ನು ಪ್ರಶ್ನಿಸುವ ಹಾಗೂ ಅದರ ವಿವಿಧ ಆಯಾಮಗಳನ್ನು ಅನಾವರಣಗೊಳಿಸುವ ಶಕ್ತಿಯಾಗಿದೆ ಎಂದು ಹೇಳಿದರು. ಭಾರತದಂತಹ ಬಹುಸಂಸ್ಕೃತಿಯ ರಾಷ್ಟ್ರದಲ್ಲಿ ದಲಿತ ಸಮಾಜ, ವಸಾಹತುಶಾಹಿ, ವಸಾಹತ್ತೋತ್ತರ ಸಮಾಜ ಸೇರಿದಂತೆ ವಿವಿಧ ಸಾಮಾಜಿಕ ಸನ್ನಿವೇಶಗಳಿವೆ. ವಿದೇಶಗಳಲ್ಲಿ ಶ್ವೇತ-ಕಪ್ಪು ಜನಾಂಗೀಯ ವಿಭಜನೆಗಳಂತಹ ಅನೇಕ ಸಾಮಾಜಿಕ ರಚನೆಗಳನ್ನು ಸಾಹಿತ್ಯವು ಸೂಕ್ಷ್ಮವಾಗಿ ದಾಖಲಿಸುತ್ತದೆ ಎಂದು ಹೇಳಿದನು. ಕುವೆಂಪು ಅವರ “ಮಲೆಗಳಲ್ಲಿ ಮದುಮಗಳು” ಕಾದಂಬರಿಯನ್ನು ಉದಾಹರಿಸಿ, ಒಂದು ಕೃತಿ ಕೇವಲ ಒಂದು ವಿಷಯವನ್ನಲ್ಲ, ಮಲೆನಾಡಿನ ಪ್ರಕೃತಿ, ಸಂಸ್ಕೃತಿ, ಜೀವನ ಪದ್ಧತಿ ಹಾಗೂ ಮಾನವ ಸಂಬಂಧವನ್ನು ಸಮಗ್ರವಾಗಿ ಚಿತ್ರಿಸುತ್ತದೆ ಎಂದು ವಿವರಿಸಿದರು. ಫ್ರೆಂಚ್ ವಿಮರ್ಶಕ ರೊನಾಲ್ಟ್ ಬಾರ್ಥ್ ರವರ ಪ್ರಸಿದ್ಧ “Death of the Author” ಸಿದ್ಧಾಂತವನ್ನು ಉಲ್ಲೇಖಿಸಿ ಕೃತಿ ಪ್ರಕಟವಾದ ನಂತರ ಅದರ ಅರ್ಥವನ್ನು ಲೇಖಕನ ಉದ್ದೇಶದಿಂದ ಮಾತ್ರ ನಿರ್ಧರಿಸಲಾಗುವುದಿಲ್ಲ, ಓದುವರ ವ್ಯಾಖ್ಯಾನವು ಅಷ್ಟೇ ಮುಖ್ಯ ಎಂದು ತಿಳಿಸಿದರು. ದಲಿತ ಸಾಹಿತ್ಯದ ಮಹತ್ವವನ್ನು ವಿವರಿಸುವ ಸಂದರ್ಭದಲ್ಲಿ ಮರಾಠಿ ಆತ್ಮಕಥೆಗಳ ಕುರಿತು ಮಾತನಾಡಿ “I Am a Born Criminal” ಉದಾಹರಣೆಯ ಮೂಲಕ ಸಮಾಜದ ರೂಢಿಗಳು, ಜಾತಿ ವ್ಯವಸ್ಥೆ ಮತ್ತು ಅಸಮಾನತೆಗಳನ್ನು ಸಾಹಿತ್ಯ ಹೇಗೆ ಪ್ರಶ್ನಿಸುತ್ತದೆ ಎಂಬುದನ್ನು ವಿವರಿಸಿದರು. ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳ ಕುರಿತು ಮಾತನಾಡಿದ ಅವರು, ಓದುವರು ತಮ್ಮದೇ ದೃಷ್ಟಿಕೋನದಿಂದ ಕೃತಿಗಳನ್ನು ವಿಶ್ಲೇಷಿಸುತ್ತಾರೆ. ಕೆಲವರು ತೇಜಸ್ವಿಯವರ ಕಾದಂಬರಿಗಳಲ್ಲಿ ಜಾಗತೀಕರಣ (LPG) ದ ಪ್ರಭಾವವನ್ನು ಕಂಡರೂ, ಲೇಖಕರು ಅದನ್ನು ನಿರಾಕರಿಸಿರುವ ಉದಾಹರಣೆಯನ್ನು ನೀಡಿದರು. ಓದುಗನ ಅನುಭವದಿಂದ ಹೊಸ ಅರ್ಥಗಳು ಹುಟ್ಟಿಕೊಳ್ಳುವುದೇ ಸಾಹಿತ್ಯ ವಿಮರ್ಶೆಯ ಮೂಲತತ್ವ ಎಂದು ಹೇಳಿದರು. ವಿಲಿಯಂ ಶೇಕ್ಸಪಿಯರ್ ರವರ “The Merchant of Venice” ನಾಟಕವನ್ನು ಉಲ್ಲೇಖಿಸಿ, ಆಧುನಿಕ ವಿಮರ್ಶಕರು ಯಹೂದಿ – ಕ್ರೈಸ್ತ ಸಂಬಂಧಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನು ಹೊಸ ದೃಷ್ಟಿಕೋನದಲ್ಲಿ ವಿಶ್ಲೇಷಿಸುತ್ತಾರೆ. ಸಾಹಿತ್ಯದ ಅರ್ಥವು ಕಾಲಾನುಗುಣವಾಗಿ ಹೊಸ ವ್ಯಾಖ್ಯಾನಗಳನ್ನು ಪಡೆಯುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಸಾಹಿತ್ಯವನ್ನು ಪ್ರೀತಿಯಿಂದ ಅಧ್ಯಯನ ಮಾಡುವಂತೆ ಕರೆ ನೀಡಿದ ಅವರು, ಇಂಗ್ಲೀಷ್ ಭಾಷೆಯ ಜಾಗತಿಕ ಮಹತ್ವವನ್ನು ವಿವರಿಸಿದರು. ತಾವು ಅದೇ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, “ಈ ಕಾಲೇಜು ನನಗೆ ಬದುಕು ಕೊಟ್ಟಿದೆ. ಈ ಸಂಸ್ಥೆಗೆ ಶ್ರೀಮಂತ ಪರಂಪರೆ ಇದೆ. ಆದ್ದರಿಂದ ಈ ಕಾಲೇಜಿನ ವಿದ್ಯಾರ್ಥಿಗಳಾಗಿರುವುದಕ್ಕೆ ಹೆಮ್ಮೆಪಡಬೇಕು” ಎಂದು ಹೇಳಿದರು. ನಂತರ ನಡೆದ ಸಂವಾದದಲ್ಲಿ “ಸಮಾಜವನ್ನು ಹೇಗೆ ಬದಲಾಯಿಸಬಹುದು?” ಎಂಬ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು “ನಾವು ಕಲಿತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿಂದಿನ ಕಾಲಕ್ಕೆ ಹೋಲಿಸಿದರೆ ಸಮಾಜ ಸಾಕಷ್ಟು ಬದಲಾಗಿದೆ. ಶಿಕ್ಷಣ ಮತ್ತು ಅವಕಾಶಗಳಲ್ಲಿ ಇಂದು ಬಹಳಷ್ಟು ಸಮಾನತೆ ಬಂದಿದೆ. ಸಕಾರಾತ್ಮಕ ಬದಲಾವಣೆಗಳನ್ನು ನಾವು ಸ್ವೀಕರಿಸಬೇಕು” ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀಶ ಎ. ಎಸ್. ರವರು ಆಂಗ್ಲ ಭಾಷಾ ಅಧ್ಯಯನದ ಉಪಯುಕ್ತತೆಯನ್ನು ವಿವರಿಸಿ, ಸಾಹಿತ್ಯದ ಅಧ್ಯಯನದಿಂದ ಭಾಷೆಯ ಮೇಲೆ ಪ್ರಭುತ್ವವನ್ನು ಸಾಧಿಸಲು ಸಾಧ್ಯವೆಂದು ನುಡಿದರು. ಬಿ.ಎ. ಪದವಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಐಚ್ಚಿಕ ವಿಷಯಗಳೆರಡನ್ನು ಹೊಂದಿರುವ ವಿಷಯ ಸಮೂಹದ ಮಹತ್ವವನ್ನು ಅವರು ತಿಳಿಸಿದರು.

ಎಂಡಿಎಫ್ ನ ಕಾರ್ಯದರ್ಶಿ ಡಾ. ಎಚ್. ಎಂ. ಶಿವಕುಮಾರ ರವರು ಮಾತನಾಡಿ ಸಾಹಿತ್ಯದ ಆಸಕ್ತಿಯನ್ನು ಹೆಚ್ಚಿಸಿಕೊಳ್ಳುವಂತೆ ಮತ್ತು ಗ್ರಂಥಾಲಯವನ್ನು ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು. ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಶಾಂತ್ ಮಾಂಡ್ರೆ, ಉಪನ್ಯಾಸಕರಾದ ಡಾ. ಹರ್ಷ ವಿಮನ್, ಅಪರ್ಣ, ಶುಭಾ ಮತ್ತಿತರರು ಇದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ವಿದ್ಯಾರ್ಥಿ ಶಶಿಧರ್ ನಡೆಸಿಕೊಟ್ಟರು ಮತ್ತು ಕ್ಲಬ್ ನ ಅಧ್ಯಕ್ಷರಾದ ಮಹೇಶ ಕಾರ್ಯದರ್ಶಿ ಉಷಾ ಮತ್ತು ಖಜಾಂಚಿ ಸಂಜನಾ ವೇದಿಕೆಯಲ್ಲಿ ಹಾಜರಿದ್ದರು. ಸಾಹಿತ್ಯಾಸಕ್ತ ವಿದ್ಯಾರ್ಥಿಗಳ ಉತ್ತಮ ಸಂವಾದ ಮತ್ತು ಸ್ಪಂದನೆಯೊಂದಿಗೆ ಕಾರ್ಯಕ್ರಮವು ಯಶಸ್ವಿಯಾಯಿತು.

ಮಲಗಿದ್ದ ವ್ಯಕ್ತಿ ಏಳದಿದ್ದರೆ, ಉಸಿರಾಟದಲ್ಲಿ ಏರುಪೇರಾದರೆ ,ಪ್ರಜ್ಞೆ ತಪ್ಪಿದರೆ‌…ತಡಮಾಡದೇ ತಕ್ಷಣ ತಜ್ಞ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿ- ಡಾ.ಹಂಸ

0

ಚಿಕ್ಕಮಗಳೂರಿನ ಕಡೂರಿನ 65 ವರ್ಷದ ಆ ವೃದ್ಧರಿಗೆ ಅಂದು ಎಂದಿನಂತೆಯೇ ಸಾಧಾರಣ ದಿನ. ರಾತ್ರಿ ಊಟ ಮುಗಿಸಿ ಆರಾಮಾಗಿ ನಿದ್ದೆಗೆ ಜಾರಿದ್ದರು.

ಆದರೆ, ಮರುದಿನ ಮುಂಜಾನೆ ಎಷ್ಟೇ ಹೊತ್ತಾದರೂ ಅವರು ಏಳಲಿಲ್ಲ. ಮನೆಯವರು ಎಷ್ಟೇ ಬಲವಂತವಾಗಿ ಎಬ್ಬಿಸಿದರೂ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ; ಕೇವಲ ಅಸ್ಪಷ್ಟ ಶಬ್ದವಷ್ಟೇ ಹೊರಬರುತ್ತಿತ್ತು.

ಇದನ್ನು ಕಂಡು ಗಾಬರಿಯಾದ ಕುಟುಂಬದವರಿಗೆ, ಇದು ಯಾವುದೋ ವಿಷದ ಪರಿಣಾಮವೋ ಅಥವಾ ಬೇರೆ ಕಾಯಿಲೆಯೋ ಎಂಬ ಅನುಮಾನ ಶುರುವಾಯಿತು. ಅವರನ್ನು ಹೇಗಾದರೂ ಮಾಡಿ ಎಬ್ಬಿಸಲೇಬೇಕು ಎಂದು ತಮ್ಮದೇ ಆದ ಪ್ರಯತ್ನಗಳನ್ನು ಮಾಡುತ್ತಾ, ಅತ್ಯಮೂಲ್ಯವಾದ ಸಮಯವನ್ನು ಕಳೆದುಬಿಟ್ಟರು. ಕೊನೆಗೆ ಪರಿಸ್ಥಿತಿ ಕೈಮೀರುತ್ತಿದೆ ಎಂದು ಅರಿವಾಗಿ ಶಿವಮೊಗ್ಗದ ‘ಸಹ್ಯಾದ್ರಿ ನಾರಾಯಣ ಆಸ್ಪತ್ರೆ’ಗೆ ಕರೆತಂದರು.

ಆಸ್ಪತ್ರೆಗೆ ಬಂದ ತಕ್ಷಣ ನರರೋಗ ತಜ್ಞರಾದ ಡಾ. ಹಂಸ ಕೆ.ಎಂ. ಅವರು ತುರ್ತಾಗಿ ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಿದಾಗ ಅಸಲಿ ಸತ್ಯ ಹೊರಬಿತ್ತು. ಆ ವೃದ್ಧರಿಗೆ ‘ಆರ್ಟರಿ ಆಫ್ ಪೆರ್ಚೆರಾನ್ ಇನ್ಫಾರ್ಕ್ಷನ್’ (Artery of Percheron infarction) ಎಂಬ ಸ್ಟ್ರೋಕ್ ಅಥವಾ ಪಾರ್ಶ್ವವಾಯು ಗೆ ಒಳಗಾಗಿದ್ದಾರೆ ಎಂದು ತಿಳಿದು ಬಂತು ! ಇದರಿಂದಾಗಿ ಮೆದುಳಿನ ಎಚ್ಚರಗೊಳಿಸುವ ಪ್ರಮುಖ ವ್ಯವಸ್ಥೆಗೆ ಭಾರೀ ಪೆಟ್ಟು ಬಿದ್ದು, ಅವರು ಪ್ರಜ್ಞಾಹೀನ ಸ್ಥಿತಿಗೆ ಜಾರಿದ್ದರು.

ಸ್ಟ್ರೋಕ್ (ಪಾರ್ಶ್ವವಾಯು) ರೋಗಿಗಳಿಗೆ ಚಿಕಿತ್ಸೆ ನೀಡಲು ಇರುವ ‘ಗೋಲ್ಡನ್ ಅವರ್’ (ನಾಲ್ಕೂವರೆ ಗಂಟೆಗಳ ಅಮೂಲ್ಯ ಸಮಯ) ಮೀರಿಹೋಗಿತ್ತು ಹಾಗೂ ರೋಗಿಯ ಸ್ಥಿತಿ ಗಂಭೀರವಾಗಿದ್ದರಿಂದ, ಉಸಿರಾಟದ ತೊಂದರೆಯಾಗದಿರಲು ತಕ್ಷಣವೇ ಅವರನ್ನು ವೆಂಟಿಲೇಟರ್‌ನಲ್ಲಿರಿಸಿ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಶುರುಮಾಡಲಾಯಿತು. ಅವರು ತಡವಾಗಿ ಬಂದಿದ್ದರಿಂದ, ಮೆದುಳಿನ ಊತ ಕಡಿಮೆ ಮಾಡುವ ಹಾಗೂ ರಕ್ತದೊತ್ತಡ-ಸಕ್ಕರೆ ಕಾಯಿಲೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ಔಷಧಗಳನ್ನು ನೀಡಿ ಅತ್ಯಂತ ಎಚ್ಚರಿಕೆಯಿಂದ ಆರೈಕೆ ಮಾಡಲಾಯಿತು.

ವೈದ್ಯರ ಸತತ ಪ್ರಯತ್ನದಿಂದ ಕೇವಲ 48 ಗಂಟೆಗಳಲ್ಲಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂತು. ವೆಂಟಿಲೇಟರ್‌ ತೆಗೆದುಹಾಕಿ, ಉಸಿರಾಟದ ಮತ್ತು ದೇಹದ ಸಮತೋಲನ ಕಾಯ್ದುಕೊಳ್ಳುವ ವ್ಯಾಯಾಮಗಳನ್ನು ಮಾಡಿಸಲಾಯಿತು. ಆಸ್ಪತ್ರೆಗೆ ಸೇರಿದ ಕೇವಲ ನಾಲ್ಕೇ ದಿನಗಳಲ್ಲಿ ಅವರು ಯಾರ ಸಹಾಯವೂ ಇಲ್ಲದೆ ತಮ್ಮಷ್ಟಕ್ಕೆ ತಾವೇ ನಡೆದಾಡುವಷ್ಟು ಗುಣಮುಖರಾಗಿ ಮನೆಗೆ ಮರಳಿದರು!

ಗಾಢ ನಿದ್ರೆಯಂತೆ ಕಾಡುವ ಈ ಸ್ಟ್ರೋಕ್ ಪತ್ತೆಹಚ್ಚುವುದು ಕಷ್ಟವೇಕೆ?

ಸಾಮಾನ್ಯವಾಗಿ ನಮ್ಮ ಮೆದುಳಿಗೆ ರಕ್ತ ಪೂರೈಸಲು ಎರಡು ಪ್ರತ್ಯೇಕ ರಕ್ತನಾಳಗಳಿರುತ್ತವೆ. ಆದರೆ ಶೇ. 4 ರಿಂದ 12 ರಷ್ಟು ಜನರಲ್ಲಿ ಮಾತ್ರ ಎರಡೂ ಕಡೆಗೆ ರಕ್ತ ಪೂರೈಸಲು ಒಂದೇ ಒಂದು ರಕ್ತನಾಳವಿರುತ್ತದೆ. ಆ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿ ಕಟ್ಟಿಕೊಂಡಾಗ (ಬ್ಲಾಕ್ ಆದಾಗ), ಮೆದುಳಿನ ಎರಡೂ ಭಾಗಗಳಿಗೆ ರಕ್ತ ಪೂರೈಕೆ ಒಮ್ಮೇಲೆ ನಿಂತುಹೋಗಿ, ಮನುಷ್ಯ ಹಠಾತ್ತನೆ ದೀರ್ಘ ನಿದ್ದೆಗೆ ಅಥವಾ ಕೋಮಾ ಸ್ಥಿತಿಗೆ ಜಾರುತ್ತಾನೆ ಎಂದು ಡಾ. ಹಂಸ ವಿವರಿಸಿದರು.

ಸಾಮಾನ್ಯ ಸ್ಟ್ರೋಕ್‌ನಂತೆ ಇದರಲ್ಲಿ ಮುಖ ಸೊಟ್ಟಗಾಗುವುದು, ಕೈಕಾಲು ಸ್ವಾಧೀನ ಕಳೆದುಕೊಳ್ಳುವುದು ಅಥವಾ ಮಾತು ತೊದಲುವ ಯಾವುದೇ ಲಕ್ಷಣಗಳಿರುವುದಿಲ್ಲ. ಹಾಗಾಗಿಯೇ, ಇದನ್ನು ಪತ್ತೆಹಚ್ಚುವುದು ಸವಾಲು. ಮನೆಯವರು ಇದನ್ನು ‘ಅತಿಯಾದ ಆಯಾಸದ ನಿದ್ದೆ’ ಎಂದೋ ಅಥವಾ ಬೇರೆಯದ್ದೇ ಸಮಸ್ಯೆ ಎಂದೋ ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆಯೇ ಹೆಚ್ಚು.

“ಮಲಗಿದ ವ್ಯಕ್ತಿಯನ್ನು ಎಬ್ಬಿಸಿದಾಗ ಏಳದಿದ್ದರೆ ಮತ್ತು ಅದರ ಜೊತೆಗೆ ಉಸಿರಾಟದಲ್ಲಿ ಏರುಪೇರು, ಬಾಯಲ್ಲಿ ಜೊಲ್ಲು ಸುರಿಯುವುದು ಅಥವಾ ಪ್ರಜ್ಞೆ ತಪ್ಪಿದಂತೆ ಕಂಡುಬಂದರೆ, ದಯವಿಟ್ಟು ನಿರ್ಲಕ್ಷ್ಯ ಮಾಡಬೇಡಿ. ಅದನ್ನು ತುರ್ತು ವೈದ್ಯಕೀಯ ಪರಿಸ್ಥಿತಿ ಎಂದು ಪರಿಗಣಿಸಿ, ತಕ್ಷಣವೇ ಆಸ್ಪತ್ರೆಗೆ ಕರೆತನ್ನಿ. ಸರಿಯಾದ ಸಮಯಕ್ಕೆ ಸಿಗುವ ಚಿಕಿತ್ಸೆ ಎಂತಹ ಅಪರೂಪದ ಸ್ಟ್ರೋಕ್‌ನಿಂದಲೂ ವ್ಯಕ್ತಿಯನ್ನು ಪಾರುಮಾಡಬಲ್ಲದು” ಎನ್ನುತ್ತಾರೆ ಡಾ. ಹಂಸ.

ಪ್ರತಿಯೋರ್ವ ವಿದ್ಯಾರ್ಥಿ‌ಯೂ ಒಂದು ಸಸಿ ನೆಟ್ಟು ಪೋಷಿಸಬೇಕು- ಎಂ‌.ಶಿವರಾಮ್

0

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ಹಾಗೂ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್, ಸುಳೇಬೈಲು ಇವರ ಸಂಯುಕ್ತ ಆಶ್ರಯದಲ್ಲಿ ಪರಿಸರ ಮಾಹಿತಿ ಶಿಬಿರ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಉಪನಿರ್ದೇಶಕರ ಕಚೇರಿ, ಶಿವಮೊಗ್ಗದ ದೈಹಿಕ ಶಿಕ್ಷಣಾಧಿಕಾರಿಗಳಾದ ಪ್ರಕಾಶ್ ಹಾಗೂ ವಿಷಯ ಪರಿವೀಕ್ಷಕರಾದ ನಬಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಪರಿಸರ ಸಂರಕ್ಷಣೆ, ವೃಕ್ಷಾರೋಪಣೆಯ ಮಹತ್ವ ಮತ್ತು ವಿದ್ಯಾರ್ಥಿಗಳು ಪ್ರಕೃತಿ ಸಂರಕ್ಷಣೆಯಲ್ಲಿ ವಹಿಸಬೇಕಾದ ಪಾತ್ರದ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಎಂ. ಶಿವರಾಂ ವಹಿಸಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಒಂದು ಸಸಿಯನ್ನು ನೆಟ್ಟು ಅದನ್ನು ಪೋಷಿಸುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಪಲ್ಲವಿ, ಕೃಷಿ ಮೇಲ್ವಿಚಾರಕರಾದ ಸತೀಶ್ ಹಾಗೂ ಯೋಜನೆಯ ಸಿಬ್ಬಂದಿ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾಧರ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ರಾಜಕುಮಾರ ಶಿಕ್ಷಕರು ವಂದನಾರ್ಪಣೆ ಸಲ್ಲಿಸಿದರು. ರವಿಕುಮಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಶಿಲೀಂಧ್ರನಾಶಕ ಖರೀದಿಸಿದ ಅರ್ಹ ಕೃಷಿಕರು ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದು

0

2026-27 ನೇ ಸಾಲಿನ ‘ರಾಷ್ಟ್ರೀಯ ತೋಟಗಾರಿಕೆ ಮಿಷನ್’ ಯೋಜನೆಯಡಿ ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕಾಗಿ ವಿವಿಧ ಶಿಲೀಂಧ್ರನಾಶಕ ಔಷಧಿಗಳನ್ನು ಖರೀದಿಸಿದ ಜಿಲ್ಲೆಯ ರೈತರಿಂದ ತೋಟಗಾರಿಕೆ ಇಲಾಖೆಯು ಅರ್ಜಿಗಳನ್ನು ಆಹ್ವಾನಿಸಿದೆ.

ಮಾರ್ಗಸೂಚಿಯನುಸಾರ, ರೈತರು 1 ಎಕರೆಗೆ ಕನಿಷ್ಠ ರೂ.2,000 ಮೌಲ್ಯದ ಶಿಲೀಂಧ್ರನಾಶಕವನ್ನು ಖರೀದಿಸಬಹುದಾಗಿದ್ದು, ಖರೀದಿ ವೆಚ್ಚಕ್ಕೆ ಶೇ. 30 ರಂತೆ ಪ್ರತಿ ಎಕರೆಗೆ ಗರಿಷ್ಠ ರೂ.600 ಸಹಾಯಧನ ಸಿಗಲಿದೆ. ಪ್ರತಿಯೊಬ್ಬ ಫಲಾನುಭವಿಯು ಗರಿಷ್ಠ 5 ಎಕರೆವರೆಗೆ (ಕನಿಷ್ಠ ರೂ.10,000 ಮೌಲ್ಯದ ಶಿಲೀಂಧ್ರನಾಶಕ ಖರೀದಿ) ಶೇ. 30 ರಷ್ಟು ಅಂದರೆ ಗರಿಷ್ಠ ರೂ.3,000 ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.

ಈ ಸಹಾಯಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಯೋಜನೆಯ ಲಾಭ ಪಡೆಯಲು ಇಚ್ಛಿಸುವ ರೈತರು ತಾಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ಈ ಕೆಳಗಿನ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು:

ಪಹಣಿ, ಆಧಾರ್ ಕಾರ್ಡ್,
ಜಿಎಸ್ ಟಿ ಬಿಲ್ (ಖರೀದಿಸಿದ ಔಷಧಿಯ ಬಿಲ್)
ಜಾತಿ ಪ್ರಮಾಣ ಪತ್ರ (ಎಸ್ ಸಿ/ ಎಸ್ ಟಿ ರೈತರಿಗೆ ಮಾತ್ರ).
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ -08182-279415/ 9980009438, ಭದ್ರಾವತಿ-08282-295029/9108252536, ಶಿಕಾರಿಪುರ-08187-223544/ 8310662972, ಸೊರಬ – 08184-295112 /9663634388, ಸಾಗರ-08183-295124/ 9900046121, ಹೊಸನಗರ – 08185-295364/ 9591695327, ತೀರ್ಥಹಳ್ಳಿ-08181-228151/ 9108280642 ಗಳನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಪ್ರೋಸೆಸ್ ಜಾರಿಕಾರ/ಜವಾನರ ಹುದ್ದೆಗಳಿಗೆ ಭರ್ತಿಗಾಗಿ ಅರ್ಜಿ ಆಹ್ವಾನ

0

ಶಿವಮೊಗ್ಗ ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿಯಿರುವ 06 ಪ್ರೋಸೆಸ್ ಜಾರಿಕಾರ ಹಾಗೂ 56 ಜವಾನ ಹುದ್ದೆಗಳನ್ನು ನೇರ ನೇಮಕಾರಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಆಸಕ್ತರು https://shivamogga.dcourts.gov.in/notice-category/recruitments ಮೂಲಕ ಆ.24 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ಜಿ.ಎ.ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ DISTRICT COURT SHIVAMOGGA ವೆಬ್‌ಸೈಟ್ ಹಾಗೂ ದೂ.ಸಂ.:08182-270321 ನ್ನು ಸಂಪರ್ಕಿಸುವುದು.

ಕರ್ನಾಟಕ ಸಂಘದಲ್ಲಿ ದೇವುಡು ಕೃತಿ “ಮಹಾದರ್ಶನ”- ಡಾ.ವಿ.ಬಿ.ಆರತಿ ಅವರಿಂದ ಅವಲೋಕನ

0

ಹಸೂಡಿ ವೆಂಕಟಶಾಸ್ತ್ರಿ ಸಾಹಿತ್ಯ ಭವನದಲ್ಲಿ ಜುಲೈ 24, 2026ರ ಶುಕ್ರವಾರ ಸಂಜೆ 5.30ಕ್ಕೆ ತಿಂಗಳ ಅತಿಥಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತ್ರಿ ವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ವಿದುಷಿ, ಲೇಖಕಿ, ವಾಗ್ಮೀನಿ ಹಾಗೂ ವಿಭು ಅಕಾಡೆಮಿ, ಬೆಂಗಳೂರು ಸಂಸ್ಥೆಯ ಮುಖ್ಯಸ್ಥರಾದ ಡಾ. ಆರತಿ ವಿ.ಬಿ. ಅವರು ‘ದೇವುಡು ನರಸಿಂಹಶಾಸ್ತ್ರಿ ಅವರ “ಮಹಾದರ್ಶನ”: ಒಂದು ಅವಲೋಕನ’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.

ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

FIFA World Cup Trophy ಹದಿನಾರು ವರ್ಷಗಳ ನಂತರ ಹಿರಿಹಂಬಲ ಈಡೇರಿಸಿಕೊಂಡ”ಸ್ಪೈನ್”:ಮುಡಿಗೇರಿದ ‘ಫೀಫಾ’ ಕಿರೀಟ

0

FIFA World Cup Trophy ಕ್ರೀಡೆಯಲ್ಲಿ ಯಾರೂ ನಂಬರ್ ಒನ್ ಆಗಲೀಗ ಸಾಧ್ಯವಿಲ್ಲ.
ಏಕೆಂದರೆ ಎಲ್ಲಾ ದೇಶಗಳಲ್ಲೂ ಪ್ರತಿಭಾನ್ವಿತ ಕ್ರೀಡಾತಾರೆಗಳಿವೆ.
2010 ರಲ್ಲಿ ಕಾಲ್ಚೆಂಡು ಪಂದ್ಯದ ವಿಶ್ವಕಪ್ ಹೆಗಲೇರಿಸಿದ್ದ ಸ್ಪೈನ್ ಮತ್ತೆ ಬರ ನೀಗಿಸಿಕೊಂಡಿತು. ಪ್ರಬಲ ಪ್ರತಿಸ್ಪರ್ಧಿ
ಅರ್ಜೆಂಟಿನಾ ಎದುರು
ನಡೆದ ಈ ಅಂತಿಮ ಪಂದ್ಯ ಬಹಳಷ್ಟು ಭವಿಷ್ಯಕಾರರು ಅರ್ಜೆಂಟಿನಾಕ್ಕೆ ವಿಶ್ವಕಪ್ ಎಂಬ ಮಟ್ಟಿಗೆ ತಮ್ಮ ಅನಿಸಿಕೆ
ಹರಿಯಬಿಟ್ಟಿದ್ದರು.
ಆದರೆ ಆದದ್ದೇ ಬೇರೆ.
ಕುತೂಹಲ ಕೆರಳಿಸಿದ್ದ
ಅಂತಿಮ ಯುದ್ಧದಲ್ಲಿ
ಕೇವಲ 1-0 ಗೋಲಿನ ಅಂತರದಲ್ಲಿ ಸ್ಪೈನ್ ತಂಡದ ವಿಜಯದೊಂದಿಗೆ
ತೆರೆಬಿತ್ತು.
ಸ್ಪೈನ್ ದೇಶದ ತುಂಬಾ ಹರ್ಷೋಲ್ಲಾಸ. ಕ್ರೀಡಾಪ್ರಿಯರು ರಸ್ತೆಗಳಲ್ಲಿ ಕುಣಿದು ಕುಪ್ಪಳಿಸಿದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.

ವಿಶ್ವಕಪ್ ಪ್ರಶದ್ತಿಯ ನಗದು ಮೌಲ್ಯ ಭಾರತೀಯ ರೂ.ಗಳಲ್ಲಿ ₹ 480 ಕೋಟಿಗೂ ಮಿಕ್ಕಿದೆ
ಅಂದರೆ ಆಟಗಾರರ ಪಾಲಿಗೆ ‘ಲಕ್ ‘ಲಕ್ಷ್ಮಿ ಅಪಾರ ಲೆಕ್ಕದಲ್ಲಿ ಒಲಿದಿದ್ದಾಳೆ.

ಬಹಳ ನಿರಾಸೆ ಆಗಿರುವುದೆಂದರೆ ‘ಮೆಸ್ಸಿ’ ಗೆ.
ಕಾಲ್ಚೆಂಡಿನ ಕ್ರೀಡಾ
ಇತಿಹಾಸದಲ್ಲಿ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದು “ಲಿಯೋನೆಲ್ ಮೆಸ್ಸಿ” ಗುರುತಿಸಲ್ಪಟ್ಟಿದ್ದಾರೆ.

FIFA World Cup Trophy ತಮ್ಮ ವೃತ್ತಿಪರ ವೃತ್ತಿಜೀವನದುದ್ದಕ್ಕೂ ಗೆದ್ದ ವೈಯಕ್ತಿಕ ಪ್ರಶಸ್ತಿಗಳಿಗಾಗಿ ಹಲವಾರು ದಾಖಲೆಗಳನ್ನು ಹೊಂದಿದ್ದಾರೆ ,

ಇದರಲ್ಲಿ ಎಂಟು ಬ್ಯಾಲನ್ಸ್ ಡಿ’ಓರ್ ,
ಆರು ಬಾರಿ ಯುರೋಪಿಯನ್ ಗೋಲ್ಡನ್ ಶೂಗಳು‌ ಲಭಿಸಿವೆ. ಮತ್ತು ಎಂಟು ಬಾರಿ ಫೀಫಾ ವತಿಯಿಂದ ವಿಶ್ವದ ಅತ್ಯುತ್ತಮ ಆಟಗಾರ ಎಂದು ಹೆಸರಿಸಲ್ಪಟ್ಟಿದ್ದಾರೆ .

ಇಷ್ಟೆಲ್ಲಾ ಖ್ಯಾತಿಯ ನಡುವೆ 2022 ರಲ್ಲಿ‌ಅರ್ಜೆಂಟಿನಾಗೆ ವಿಶ್ವಕಪ್ ಗೆದ್ದುಕೊಟ್ಟ ಧೀರ ಎಂಬ ಹೆಗ್ಗಳಿಕಯೂ ಆತನಿಗಿದೆ.

ಏನೇ ಆಗಲಿ‌ ಆಟ ಆಟವೇ…

Rotary Club of Shivamogga ತುಂಗಾನದಿಗೆ ಸೇರುವ ನೀರಿನ ಚಾನಲ್ ಗಳಲ್ಲಿ ಕೊಳಚೆ ತಪ್ಪಿಸುವ ಬಗ್ಗೆಶಾಸಕ ಚೆನ್ನಿ ನೇತೃತ್ವದಲ್ಲಿ ದೀರ್ಘ ಚರ್ಚೆ

0

Rotary Club of Shivamogga ರೋಟರಿ ಕ್ಲಬ್ ಶಿವಮೊಗ್ಗ ಸಹ್ಯಾದ್ರಿ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಸೇವಾ ಸಂಘ (ಮಡಿಲು) ಇವರ ಸಹಯೋಗದಲ್ಲಿ ಪಿಳ್ಳಂಗೆರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಎಂಬ ವಿಷಯದ ಬಗ್ಗೆ ಹಾಗೂ ಪರೀಕ್ಷೆ ತಯಾರಿ ಬಗ್ಗೆ ಚಿಂತನ-ಮಂಥನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಜೆ.ಎನ್.ಎನ್.ಸಿ.ಇ. ಎಂ.ಬಿ.ಎ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಅನುರಾಧಾ ಗಿರಿಮಾಜಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಕೆಯ ಬಗ್ಗೆ ವಿಷಯಗಳನ್ನು ಮನನ ಮಾಡಿಕೊಳ್ಳುವ ಬಗ್ಗೆ, ಪರೀಕ್ಷೆಗಳನ್ನು ತಯಾರಿ ಮಾಡಿಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ಮನ ಮುಟ್ಟುವ ಹಾಗೆ ವಿವರವಾಗಿ ತಿಳಿಸಿಕೊಟ್ಟರು. ಈ ಬಗ್ಗೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂದಿತು.

ಪ್ರೊ. ಸಯ್ಯದ್ ಸನಾವುಲ್ಲಾ ಅವರು ಸಹ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಸಹ್ಯಾದ್ರಿಯ ಅಧ್ಯಕ್ಷರಾದ ಹುಲಿರಾಜ್ ಗುಬ್ಬಿ ಅವರು ಸಹ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ರೋಟರಿ ಬಗ್ಗೆ ಸಂಕ್ಷಿಪ್ತ ಮಾಹಿತಿ ಹಾಗೂ ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ಮಾತನಾಡಿದರು.

ಈ ಮಧ್ಯೆ 6ನೇ ತರಗತಿ ಓದುತ್ತಿರುವ ಮಾಸ್ಟರ್ ಸಚಿತ್ ಗುಬ್ಬಿರವರು ಕ್ಯಾಲಿಫೋರ್ನಿಯಾದಿಂದ ಬಂದಿದ್ದು, ಭಾರತೀಯ ಶಿಕ್ಷಣ ಹಾಗೂ ಅಮೆರಿಕಾ ಶಿಕ್ಷಣದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.

Rotary Club of Shivamogga ಈ ಸಮಾರಂಭ ವಿದ್ಯಾರ್ಥಿಗಳಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಡಾ. ಬಿ.ಯು ಕಣ್ಣಪ್ಪನವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಶಾಲೆಯ ಸಹ ಶಿಕ್ಷಕರಾದ ಧರ್ಮಪ್ಪ ಹಾಗೂ ಉಪ ಪ್ರಾಂಶುಪಾಲರಾದ ಶ್ರೀನಿವಾಸ್‌ರವರು ಪ್ರಾಸ್ತವಿಕವಾಗಿ ಶಾಲೆಯ ಕಾರ್ಯಕ್ರಮಗಳ ಬಗ್ಗೆ ಸಭೆಗೆ ತಿಳಿಸಿಕೊಟ್ಟರು. ಸಭೆಗೆ ಆಗಮಿಸಿದ್ದ ಅತಿಥಿಗಳನ್ನು ನಿವೃತ್ತ ಡಿ.ಡಿ.ಪಿ.ಐ. ಸುಮಂಗಳಾ ಕುಚಿನಾಡ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಜೆ.ಎನ್.ಎನ್.ಸಿ.ಇ. ಎಂ.ಬಿ.ಎ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಅನುರಾಧಾ ಗಿರಿಮಾಜಿ ಅವರ ಪರಿಚಯವನ್ನು ರಮಾ ಗುಬ್ಬಿಯವರು ಸಭೆಗೆ ಮಾಡಿಕೊಟ್ಟರು. ಕ್ಲಬ್ ನ ಕಾರ್ಯದರ್ಶಿ ಡಾ. ವೇಣುಗೋಪಾಲ್ ರೆಡ್ಡಿ ಅವರಿಂದ ವಂದನಾರ್ಪಣೆಯೊಂದಿಗೆ ಸಮಾರಂಭ ಮುಕ್ತಾಯವಾಯಿತು. ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಪೆನ್ನು ಮತ್ತು ಸಿಹಿಯನ್ನು ವಿತರಿಸಲಾಯಿತು.