Sunday, April 12, 2026
Sunday, April 12, 2026
Home Blog Page 1244

Kuvempu University ಡಾ.ಅಂಬೇಡ್ಕರ್ ಸರ್ವತೋಮುಖ ಸಮ ಸಮಾಜದ ಕನಸು ಕಂಡವರು- ಪ್ರೊ.ಸಿ.ಗೀತಾ

0

Kuvempu University ಸಂವಿಧಾನಶಿಲ್ಪಿ ಡಾ.‌ ಬಿ.‌ ಆರ್. ಅಂಬೇಡ್ಕರ್ ಅವರು ದಲಿತರ ನಾಯಕ ಮಾತ್ರವಲ್ಲ. ಎಲ್ಲ ಸಮುದಾಯಗಳಿಗೂ ಸಲ್ಲುವ ರಾಷ್ಟ್ರನಾಯಕ. ಸರ್ವರ ಸರ್ವತೋಮುಖ ಅಭಿವೃದ್ಧಿಯ ಮೂಲಕ ಸಮಸಮಾಜ ನಿರ್ಮಾಣವಾಗಬೇಕೆಂಬ ಕನಸ್ಸು ಕಂಡವರು‌ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಪ್ರೊ.‌‌ಸಿ. ಗೀತಾ ಅಭಿಪ್ರಾಯಪಟ್ಟರು.

ಕುವೆಂಪು ವಿವಿಯ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರವು ಶುಕ್ರವಾರ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಅವರ 132ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರ ಬದುಕು ಮತ್ತು ಬರಹ ಅನುಕರಣೀಯ. ಸಂಕೀರ್ಣವಾದ ಸಮಕಾಲೀನ ಕಾಲಘಟ್ಟದಲ್ಲಿ ಅಂಬೇಡ್ಕರ್ ಅವರ ಚಿಂತನೆಗಳು ಸರ್ವರ ಸಾಮರಸ್ಯದ ಬದುಕಿಗೆ ಪ್ರೇರಕ ಶಕ್ತಿ ಎಂದರು.

Kuvempu University ಕುಲಪತಿ ಪ್ರೊ. ಬಿ.ಪಿ.‌ವೀರಭದ್ರಪ್ಪ ಆನ್ ಲೈನ್ ಸಂದೇಶ ನೀಡಿ, ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಸರಳವಾಗಿ ಕಾರ್ಯಕ್ರಮವನ್ನು ಆಚರಿಸಲಾಗಿದ್ದು, ಚುನಾವಣೆಯ ನಂತರ ವಿಶ್ವವಿದ್ಯಾಲಯದ ವತಿಯಿಂದ “ಸಾಮರಸ್ಯ ಭಾರತ: ಬುದ್ಧ ಬಸವ ಅಂಬೇಡ್ಕರ್ ಚಿಂತನೆಗಳು” ಎಂಬ ಕೃತಿಯನ್ನು ಪ್ರಕಟಿಸುವ ಮೂಲಕ ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಿಸಲಾಗುವುದು ಎಂದರು.

ಡಾ.ಬಿ.ಆರ್ ಅಂಬೇಡ್ಕರ್ ಅಧ್ಯಯನದ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಯಾದವ್ ಬೋಡ್ಕೆ, ಪ್ರೊ.ಎಂ.ಬಿ. ತಿಪ್ಪೇಸ್ವಾಮಿ ಡಾ.ಶ್ರೀಶೈಲ, ಡಾ.ದೇವಿದಾಸ, ಡಾ.ಗೋವಿಂದರಾಜ್, ಡಾ. ಅಣ್ಣಯ್ಯ, ಬಸಪ್ಪಭೋವಿ, ಧನಸಿಂಗ್ ನಾಯ್ಕ, ಶಿವಯೋಗಿ ಜೋಗನ್, ಶ್ರೀನಿವಾಸ್ ಮೂರ್ತಿ, ಶೇಖರ್ ಆರ್. ಸಂಪತ್ ಕುಮಾರ್, ಮಂಜುನಾಥಯ್ಯ ಮೊದಲಾದ ಸಂಶೋಧನಾರ್ಥಿಗಳು, ಅಧ್ಯಾಪಕೇತರ ನೌಕರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

BR Ambedkar ಶಿವಮೊಗ್ಗ ದಕ್ಷಿಣ ಬ್ಲಾಕ್ ಕಾಂಗ್ರೆಸ್ ನಿಂದ ಡಾ.ಅಂಬೇಡ್ಕರ್ ಜಯಂತಿ

0

BR Ambedkar ಸಂವಿಧಾನ ಶಿಲ್ಪಿ ಭಾರತರತ್ನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆಯನ್ನು ಪುಷ್ಪಾರ್ಚನೆಯ ಮೂಲಕ ಆಚರಿಸಲಾಯಿತು.

ಶಿವಮೊಗ್ಗ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಮಹಾನಗರ ಪಾಲಿಕೆ ಆವರಣ ದಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.

BR Ambedkar ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ದಕ್ಷಿಣ ಬ್ಲಾಕ್ ಅಧ್ಯಕ್ಷರಾದ ವಿನಯ್ ತಾಂದ್ಲೆ ಕಾರ್ಮಿಕ ಘಟಕ ವಿಭಾಗ ಜಿಲ್ಲಾಧ್ಯಕ್ಷರು ಮಧು ಕುಮಾರ್,ಯುವ ಮುಖಂಡರಾದ ಚಿರಂಜೀವಿ ಬಾಬು, NSUI ರಾಜ್ಯ ಕಾರ್ಯದರ್ಶಿಯಾದ ಬಾಲಾಜಿ ,ಗ್ರಾಮಾಂತರ ವಿಭಾಗದ ಕಾರ್ಮಿಕ ಅಧ್ಯಕ್ಷ ಪುನೀಲ್.ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಪುರಲೆ ಮಂಜು, ಐ ಟಿ ಸೆಲ್ ಮೋಹನ್ .ಐ ಎನ್ ಟಿ ಯು ಸಿ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ವಿನಯ್.ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಪುರಲೆ ಮಂಜು, ಸಂದೀಪ್ ಆಟೋಕ್. ಓಬಿಸಿ ನಗರಧ್ಯಕ್ಷರಾದ ಮೋಹನ್ ಯುವ ಕಾಂಗ್ರೆಸ್ ಮುಖಂಡರುಗಳಾದ ಮಂಜುನಾಥ್.ಭರತ್ .ದರ್ಶನ್. ಮುಂತಾದವರು ಹಾಜರಿದ್ದರು.

Summer Season ಬೇಸಿಗೆಯ ಬೇಗೆ

0

Summer Season ಅಬ್ಬಾ!!ಏನ್ ಬಿಸಿಲು ಮರ್ರೆ. ಬೆಳಿಗ್ಗೆ ಎದ್ದ ಕೂಡಲೇ ತಣ್ಣನೇ ಗಾಳಿಬೀಸುವ ಸಮಯ. ಬಿಸಿ ಬಿಸಿ ತಿಂಡಿ-ಊಟ ತಿನ್ನೋಣ ಅನ್ಕೊಂಡ್ರೆ ಅಲ್ಲೂ ಸಹ ಧಗೆಯಿಂದ ಹೊರಹೊಮ್ಮುವಂತಹ ಹೊಗೆ.

ದೈನಂದಿನ ದಿನ ಚೆನ್ನಾಗಿರ್ಲಿ ಅಂತ ಬಿಸಿ ನೀರು ಸ್ನಾನ ಮಾಡೋಣ ಅನ್ಕೊಂಡ್ರೆ. ರಣ ಹಬೆಯಂತೆ ನೆನಪಾಗುವ ಬಿಸಿಲಿನ ಕಿರಣಾವೃತ.

-ಶಿವಾ!ಎಷ್ಟೇ ತೆಳುವಾದ ವಸ್ತ್ರವನ್ನು ಉಟ್ಟರೂ ಅಸ್ವಸ್ಥರಾಗಿ ಸೊರಗಿಹೋಗುವೆವು. ಹೊರಗೊಂದು ಹೆಜ್ಜೆ ಇಟ್ಟರೆ ಮುಗಿದೇ ಹೋಯಿತು.

ಮುಖದಲ್ಲಿರುವ ಬಣ್ಣ ಮಾಸಿ. ಕಂಠಗಳು ಒಣಗಿ ಗದ್ಗದಗೊಂಡು ಯಾರಿಗ್ ಬೇಕು ಈ ಬಿಸಿಲು ಎಂದು ಶಾಪಹಾಕುವ ಹೊತ್ತಿದು.

ಅಂದುಕೊಂಡಾಗ ತಿನ್ನಲು ಆಗದೆ ಇರುವ ಪಾನಿ -ಪೂರಿಗಳು, ಗೋಬಿ ಪಿಜ್ಜಾ ಬರ್ಗರ್ ಗಳು. ಯಾರಿಗೂ ಹೆದರದ ಹೊತ್ತಿನಲ್ಲಿ ರವಿರಾಯನಿಗೆ ಹೆದರುವಂತಹ ಪರಿಸ್ಥಿತಿ.
ಧಗೆಗೆ ಹೆದರಿ ಹಣ್ಣು -ಹಂಪಲು, ಪಾನೀಯ, ಮಜ್ಜಿಗೆ, ನೀರು ಕುಡಿದು ಬದುಕನ್ನು ಸಾಗಿಸಲೇ ಬೇಕಾದ ಮನಸ್ಥಿತಿ.

Summer Season ಬಿಡಪ್ಪ ಹೋಗ್ಲಿ ಸಂಜೆ ಹೊತ್ತಾಯ್ತು ಅಂತ ತಣ್ಣನೆ ಗಾಳಿ ತಗೋಳೋಕೆ ಹೊರಗ್ ಬಂದ್ರೆ ಆ ಪರಿಸರಕ್ಕೂ ಒಂದಿಷ್ಟು ಕನಿಕರವಿಲ್ಲ ಈ ಮನುಷ್ಯನ ಮೇಲೆ. ಒಂದ್ ಮರ -ಗಿಡನು ಅಲ್ಲಾಡದೆಯೇ
ಸ್ತಬ್ಧವಾಗಿಯೇ ಉಳಿದು ಬಿಟ್ಟಿವೆ. ಅಲ್ಲೂ ಇಲ್ಲ ಒಂದು ಹಿತವಾದ ತಂಗಾಳಿ.

ಆಧುನಿಕರಣದ ಬೆಳವಣಿಗೆಗಾಗಿ ಮಾನವನ ಹಠವೋ. ಅಥವಾ ನಮ್ಮೆಲರ ಮೇಲೆ ನಿಸರ್ಗದ ಒಂದಿಷ್ಟು ಕೋಪವೋ ಕಾಣಸಿಗುತ್ತಿಲ್ಲ.
ರಸ್ತೆ ಮೇಲೆ ನಡೆದುಕೊಂಡು ಹೋಗಬೇಕಾದರೆ ಅನಿರೀಕ್ಷಿತವಾಗಿ ಅದ್ಭುತವಾಗಿ ಸಿಗುವ ಅಲ್ಲೊಂದು ಇಲ್ಲೊಂದು ಮರದ ಕೆಳಗೆ ನೆರಳಿಗಾಗಿ ಹೋದರೆ ಒಂದು ದಿನ.

ಅದೇ ಸ್ಥಳಕ್ಕೆ ಮತ್ತೊಂದು ದಿನ ಹೋದರೆ ಮರ-ಗಿಡಗಳು ಮಾಯವಾಗುತ್ತಿವೆ. ಮುಂದಿನ ಪೀಳಿಗೆಗೆ ಅಪಾಯಕ್ಕೆ ನಾಂದಿಯಾಯಿತು. ಮಕ್ಕಳ ಮೇಲೆ ವೃದ್ಧ ಜೀವಿಗಳ ಮೇಲೆ ಈ ಕಾಲವು ಅತೀ ಹೆಚ್ಚಾಗಿ ತನ್ನ ಪ್ರಭಾವ ಬೀರುತ್ತಿದೆ.
ಗಾಳಿಯ ಆಸರೆಯನ್ನೆ ಮರೆತು ನಮ್ಮ ಜೀವನ ಶೈಲಿಯನ್ನು. ಎಸಿ ಫ್ಯಾನ್ ಎಂಬ ಉಪಕರಣಕ್ಕೆ ಅವಲಂಬಿತವಾಗಿ ಮಾಡುತ್ತಿವೆ.

ನಗರ ಪ್ರದೇಶದಲ್ಲೂ ಸಹ ಹಿಂದಿನ ಕಾಲದ ಸಂಸ್ಕೃತಿಯ ಉಪಹಾರ ಕ್ರಮಗಳನ್ನು ಮರುಕಳಿಸುತ್ತಿವೆ. ಗಂಜಿ ಮಸಾಲಾ ಮಜ್ಜಿಗೆಗಳಂತವುಗಳನ್ನು ಮಾರಾಟದಲ್ಲಿ ಸಹಜವಾಗಿ ದೊರೆಯುತ್ತಿವೆ. ಆಹಾರ ಸಮತೋಲನ ತರಲು ಪ್ರಯತ್ನಿಸುತ್ತಿವೆ.

ಹೌದು-ಮುಂದುವರೆಯುತ್ತಿರವ ದೇಶದಲ್ಲಿರುವ ನಾವು ಸತ್ಪ್ರಜೆಗಳು. ಬೆಳವಣಿಗೆ ಬಯಸುತ್ತಿರುವುದು ನಿಜ. ಆದರೆ ಮುಂದಿನ ಪೀಳಿಗೆಗೆ ಹಾನಿಯಾಗದಂತೆ ನೋಡಿಕೊಳ್ಳುವುದು ಸಹಜ. ಇದರೊಂದಿಗೆ ಪರಿಸರದ ಉಳಿವಿಗಾಗಿ ಕೈ ಜೋಡಿಸಿದರೆ. ಜೇವಿಗಳ ಉಳಿವಿಗೆ ಅತೀ ಸಹಕಾರಿ.
ಕಡಿಮೆಯಾಗುವವು ಅಪಾಯಕಾರಿ.

ಭಾರ್ಗವಿ. ಜಿ. ಆರ್. ಪತ್ರಿಕೋಧ್ಯಮ ವಿದ್ಯಾರ್ಥಿ
ಕಟೀಲ್ ಅಶೋಕ್ ಪೈ ಮೆಮೋರಿಯಲ್ ಕಾಲೇಜ್. ಶಿವಮೊಗ್ಗ. ಪತ್ರಿಕೋಧ್ಯಮ ವಿದ್ಯಾರ್ಥಿ.

Voters Awareness ಪಕ್ಷದಿಂದ ಪಕ್ಷಕ್ಕೆ ಈ ಜಿಗಿದಾಟಕ್ಕೆ ಕೊನೆ ಎಂದು?

0

Voters Awareness ಚುನಾವಣೆ ಎಂದರೆ ಮತದಾರ ಪ್ರಭು ನೆನಪಿಗೆ ಬರುತ್ತಾನೆ.
ಜೊತೆಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಯತ್ನಗಳು ನಡೆಯುತ್ತವೆ. ಹಾಗೆಯೇ ವಿವಿಧ ರಾಜಕೀಯ ಪಕ್ಷಗಳಲ್ಲೂ ಟಿಕೆಟ್ ಆಕಾಂಕ್ಷಿಗಳಿಂದ ತಮಗೆ ಟಿಕೆಟ್ ದೊರೆಯದೇ ಇದ್ದಾಗ ಪಕ್ಷಾಂತರ ಚಟುವಟಿಕೆ ಬಿರುಸಾಗಿ ನಡೆಯಲಾರಂಭಿಸುತ್ತದೆ.

ರಾಜಕೀಯ ಇತಿಹಾಸದಲ್ಲಿ ಇದು ಸಾಮಾನ್ಯ. ಶಿವಮೊಗ್ಗದ ಬಿಜೆಪಿ ಯಲ್ಲಿ ವಿಧಾನ ಪರಿಷತ್ತಿನ ಸದಸ್ಯ ಆಯನೂರು ಮಂಜುನಾಥ್ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ವಿರುದ್ಧ ಗುಡುಗಿ ಸುದ್ದಿ ಮಾಡಿದ್ದಾರೆ.

ಅವರ ಮೇಲೆ ಶಿಸ್ತಿನ ಕ್ರಮಕ್ಕೆ ಜಿಲ್ಲಾ ಬಿಜೆಪಿ ಹೈಕಮಾಂಡ್ ಪತ್ರ ಬರೆದಿದೆಯಂತೆ. ಏನಾದರಾಗಲೀ ತಾವು ಟಿಕೆಟ್ ಆಕಾಂಕ್ಷಿ ಎಂದು ಮಂಜುನಾಥ್ ಘಂಟಾಘೋಷ ಹೇಳಿದ್ದಾರೆ.

ಈ ನಡುವೆ ಸಾಗರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ.ರಾಜನಂದಿನಿ ಅವರು ದಿಢೀರನೆ ಬಿಜೆಪಿ ಸೇರ್ಪಡೆಯಾಗಿರುವುದು ಹಿರಿಯ ಕಾಂಗ್ರೆಸ್ಸಿಗ ಕಾಗೋಡು ತಿಮ್ಮಪ್ಪ ಅವರಿಗೆ ಇರಿಸುಮುರಿಸಾಗಿದೆ.
ಮಗಳೇ ಹಾಗೆ ನಡೆದುಕೊಂಡಿದ್ದಾಳೆ ತಮಗದು ಅನಿರೀಕ್ಷಿತ ಸುದ್ದಿ ಎಂದು ಬೆಚ್ಚಿಬಿದ್ದಂತೆ ಹೇಳಿದ್ದಾರೆ.

Voters Awareness ರಾಜ್ಯ ಕಾಂಗ್ರೆಸ್ ಫ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್ ಅವರು ಡಾ.ರಾಜನಂದಿನಿ ಬಿಜೆಪಿಕಡೆಗೆ ಹೋಗಿದ್ದು ಪಕ್ಷಕ್ಕೆ ಏನೂ ನಷ್ಟವಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಯಾವ ಪಕ್ಷವೇ ಆಗಲಿ ಈ ಪಕ್ಷಾಂತರ ಪರ್ವದ ಬಗ್ಗೆ ಹೇಳುವ ಸಾಮಾನ್ಯ ಮಾತು.
ಇದೇ ರೀತಿ ಜೆಡಿಎಸ್ ದತ್ತ, ಶಿವಲಿಂಗೇಗೌಡ, ಎ.ಟಿ.ರಾಮಸ್ವಾಮಿ ಮುಂತಾದವರನ್ನ ಕಳೆದು ಕೊಂಡು ಸೊರಗುವಂತೆ ಕಂಡಿತ್ತು. ಮತ್ತೆ ದೇವೇಗೌಡರ ಕೌಶಲ ರಾಯಭಾರಿಗಳಿಂದ ದತ್ತ ರನ್ನು ತೆನೆ ಗುರುತಿನಡಿ ಸ್ಪರ್ಧಿಸಲು ಘೋಷಣೆ ಮಾಡಲಾಗಿದೆ.
ಈಗ ಲಕ್ಷ್ಮಣ ಸವದಿ ಅವರೂ ಅಷ್ಟೆ ಪಕ್ಷ ಅವರಿಗೆ ಶಾಸಕ ಸ್ಥಾನವಿಲ್ಲದಾಗ ಉಪಮುಖ್ಯ ಮಂತ್ರಿ ಸ್ಥಾನ ನೀಡಿ ,ಎಂಎಲ್ ಸಿ ಮಾಡಿತ್ತು. ಸಚಿವರೂ ಆಗಿದ್ದರು.

ಆಯನೂರು ಮಂಜುನಾಥ್ ಮತ್ತು ಸವದಿ ಈಗ ಜನರೆದುರು ಒಂದೇ ತಕ್ಕಡಿಯಲ್ಲಿದ್ದಾರೆ ಅನಿಸುತ್ತದೆ. ಇವರೆಲ್ಲರಿಗೂ ಜಾಗೃತ ಮತದಾರ ಪ್ರಭುವೇ ಬುದ್ಧಿ ಕಲಿಸಬೇಕು.

BJP Shivamogga ಜಿಲ್ಲೆಯಲ್ಲಿ ಸಾಕಷ್ಟು ಗಮನಾರ್ಹ ಪ್ರಗತಿ ಕಾರ್ಯಗಳಾಗಿವೆ

0

BJP Shivamogga ಐದು ವರ್ಷಗಳ ಅವಧಿಯಲ್ಲಿ ಗ್ರಾಮಾಂತರ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಹಕಾರಿಯಾಗಲಿದೆ ಎಂದು ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಬಿ.ಅಶೋಕ ನಾಯ್ಕ ಹೇಳಿದರು.

ಶಿವಮೊಗ್ಗ ತಾಲೂಕಿನ ಸಂತೇಕಡೂರಿನಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆ ಹಾಗೂ ವಿವಿಧ ಪಕ್ಷಗಳ ಮುಖಂಡರು ಬಿಜೆಪಿ ಸೇರ್ಪಡೆಗೊಳ್ಳುವ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಸದೃಢವಾಗಿದ್ದು, ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ವಿವಿಧ ಪಕ್ಷದ ಮುಖಂಡರು ಪಕ್ಷಕ್ಕೆ ಬರುತ್ತಿದ್ದಾರೆ. ಇದರಿಂದ ಪಕ್ಷದ ಸಂಘಟನಾ ಶಕ್ತಿ ಹೆಚ್ಚಾಗಿದೆ.

ಅಭಿವೃದ್ಧಿ ಕೆಲಸಗಳನ್ನು ಮನೆ ಮನಗಳಿಗೆ ತಲುಪಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.
ಕ್ಷೇತ್ರ ಪ್ರಭಾರಿ ಎಸ್.ದತ್ತಾತ್ರಿ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ಇರುವ ಕಾರಣ ರಾಜ್ಯ ಪ್ರಗತಿಪಥದಲ್ಲಿ ಮುನ್ನಡೆದಿದೆ. ಮುಂದಿನ ದಿನಗಳಲ್ಲಿಯೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಎಲ್ಲ ಕಾರ್ಯಕರ್ತರು ಸಂಘಟಿತರಾಗಿ ಕೆಲಸ ಮಾಡಬೇಕಿದೆ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕಿದೆ ಎಂದು
ಹೇಳಿದರು.

BJP Shivamogga ಡಬ್ಬಲ್ ಇಂಜಿನ್ ಸರ್ಕಾರದ ಪ್ರಯತ್ನದ ಫಲವಾಗಿ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡಿದೆ. ರೈಲ್ವೇ ಕಾಮಗಾರಿಗಳು ಹಾಗೂ ಸಾರಿಗೆ ಕ್ಷೇತ್ರದಲ್ಲಿ ಮಹತ್ತರ ಕೆಲಸಗಳು ಆಗಿವೆ. ನೀರಾವರಿ ಕ್ಷೇತ್ರದಲ್ಲೂ ಮಹತ್ತರ ಕೆಲಸಗಳು ಆಗಿವೆ. ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ತಿಳಿಸಿದರು.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಕಾರ್ಯಾಲಯ, ಸಂತೇಕಡೂರು, ಹರಮಘಟ್ಟ ಸೇರಿದಂತೆ ವಿವಿಧೆಡೆಗಳಲ್ಲಿ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮಗಳಲ್ಲಿ ಗ್ರಾಮಾಂತರ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ ಪಾಲ್ಗೊಂಡರು.
ಬಿಜೆಪಿ ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿ ಗ್ರಾಮದ ಮುಖಂಡ ಕೃಷ್ಣಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಮಂಡಲ ಅಧ್ಯಕ್ಷ ರತ್ನಾಕರ ಶೆಣೈ, ಪ್ರಧಾನ ಕಾರ್ಯದರ್ಶಿ ಗೋಪಾಲ್, ಮಹಾಶಕ್ತಿ ಕೇಂದ್ರದ ಸುಬ್ಬಣ್ಣ, ಆನಂದ, ತಾಪಂ ಮಾಜಿ ಸದಸ್ಯ ಶ್ರೀಧರ್, ಮುನ್ನಿರತ್ನ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

JCI Shivamogga ಮತದಾನ ನಮ್ಮಹಕ್ಕು ಜಾಗೃತಿ ಕಾರ್ಯಕ್ರಮ

0

JCI Shivamogga ಶಿವಮೊಗ್ಗದ ಶರಾವತಿ ನಗರದಲ್ಲಿ ಮತದಾನ ನಮ್ಮಹಕ್ಕು ಎನ್ನುವ ಶೀರ್ಷಿಕೆಯಡಿ ಜಾಗೃತಿ ಜಾಥ ಮತ್ತು ಮತದಾನ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸುವ ಕಾರ್ಯಕ್ರಮವನ್ನು ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಹಮ್ಮಿಕೊಳ್ಳಲಾಗಿತ್ತು.

JCI Shivamogga ಈ ಸಂದರ್ಭದಲ್ಲಿ ಘಟಕ ಅಧ್ಯಕ್ಷರಾದ ಜೆಸಿ.ಶೋಭಾ ಸತೀಶ್, ಕಾರ್ಯದರ್ಶಿ ಜೆಸಿ.ಸ್ಮಿತಾ ಮೋಹನ್, ಐಪಿಪಿ ಜೆಸಿ.ಸೌಮ್ಯ ಅರಳಪ್ಪ. ಪಿಡಿ. ಜೆಸಿ.ಚಿರಂಜೀವಿ ಬಾಬು ಸೇರಿದಂತೆ ಪೂರ್ವಾಧ್ಯಕ್ಷರುಗಳು ಜೆಸಿಗಳು ಉಪಸ್ಥಿತರಿದ್ದರು.

Tourism Shivamogga ನೇಪಾಳದಿಂದ ಶಿವಮೊಗ್ಗ ಗೋಪಾಳದವರೆಗೆ ಬೈಕ್ ಜಾಥಾ

0

Tourism Shivamogga ಪ್ರವಾಸ ಕೈಗೊಳ್ಳುವುದರಿಂದ ರಾಜ್ಯಗಳ ವೈವಿಧ್ಯಮಯ ಸಂಸ್ಕೃತಿಯ ಪರಿಚಯ ಹಾಗೂ ತಿಳವಳಿಕೆ ಮೂಡುತ್ತದೆ. ವಿವಿಧ ರಾಜ್ಯಗಳ ಜನರ ಜೀವನಶೈಲಿ ತಿಳಿಯುತ್ತದೆ ಎಂದು ಶಿವಮೊಗ್ಗ ಬೈಕ್ ಕ್ಲಬ್ ಅಧ್ಯಕ್ಷ ಸಚ್ಚಿದಾನಂದ ಹೇಳಿದರು.

ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯ ತರುಣೋದಯ ಘಟಕದ ವತಿಯಿಂದ “ನೇಪಾಳ ದಿಂದ ಶಿವಮೊಗ್ಗದ ಗೋಪಾಳ” ದ ವರೆಗೆ ಆಯೋಜಿಸಿರುವ ಬೈಕ್ ರ‍್ಯಾಲಿ ನಡೆಸುತ್ತಿರುವ ಸಾಹಸಿಗರಿಗೆ ಬೀಳ್ಕೋಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈಗಾಗಲೇ ಬೈಕ್ ಮೂಲಕ ಶಿವಮೊಗ್ಗದಿಂದ ಜಮ್ಮು ಕಾಶ್ಮೀರ, ಕನ್ಯಾಕುಮಾರಿ, ಅಸ್ಸಾಂನಿಂದ ಗುಜರಾತ್ ಹೀಗೆ ದೇಶಾದ್ಯಂತ ಸಂಚರಿಸಿದ್ದೇವೆ.
ಇದೀಗ ನೇಪಾಳದಿಂದ ಶಿವಮೊಗ್ಗದವರೆಗೂ ಬೈಕ್ ರ‍್ಯಾಲಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

Tourism Shivamogga ಪ್ರಥಮವಾಗಿ ಅಂತರರಾಷ್ಟ್ರೀಯ ಬೈಕ್ ಸವಾರಿಯ ಮುಂದಾಳತ್ವ ವಹಿಸಿರುವ ಅ.ನಾ.ವಿಜಯೇಂದ್ರ ಮಾತನಾಡಿ, ಅಂತರಾಷ್ಟ್ರೀಯ ರೋಟರಿ ಕ್ಲಬ್, ವಾಣಿಜ್ಯ ಸಂಘ, ಯೂತ್ ಹಾಸ್ಟೆಲ್ಸ್ ಸಹಕಾರ ನೀಡುತ್ತಿದೆ.

ಪ್ರವಾಸೋದ್ಯಮ ಉನ್ನತೀಕರಣಕ್ಕಾಗಿ ಶಿವಮೊಗ್ಗಕ್ಕೆ ಬನ್ನಿ, ಸೇಫ್ ಡ್ರೈವಿಂಗ್, ಮಹಿಳಾ ಸಬಲೀಕರಣ ವಿಚಾರದ ಜಾಗೃತಿ ರ‍್ಯಾಲಿಯಲ್ಲಿ ಮಾಡಲಾಗುತ್ತದೆ ಎಂದು ಹೇಳಿದರು.

ಯೂತ್ ಹಾಸ್ಟೆಲ್ಸ್ ಚರ‍್ಮನ್ ಎಸ್.ಎಸ್.ವಾಗೇಶ್ ಮಾತನಾಡಿ, ಎಲ್ಲ ಹನ್ನೊಂದು ಸವಾರರು ನಮ್ಮ ತರುಣೋದಯ ಘಟಕದ ಅಜೀವ ಸದಸ್ಯರು. ನಮಗೆ ಹೆಮ್ಮೆ ತರುವ ವಿಚಾರ ಎಲ್ಲರ ಪ್ರಯಾಣ ಸುಖಕರವಾಗಿರಲಿ ಎಂದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯರು ಎನ್.ಗೋಪಿನಾಥ್ ಮಾತನಾಡಿ, ಉದ್ದಿಮೆ ದಾರರಿಗೆ ಧೈರ್ಯ ಅತೀ ಮುಖ್ಯ. ಈ ರೀತಿಯ ಸಾಹಸ ಮಾಡುವ ಪ್ರವೃತಿಯವರು ಎಲ್ಲಾ ಸಂದರ್ಭದಲ್ಲಿಯೂ ಎದೆಗುಂದದೆ ಮುನ್ನಡೆಯುತ್ತಾರೆ.

ನಮ್ಮ ವಾಣಿಜ್ಯ ಸಂಘದ 60ನೇ ವರ್ಷದ ಸಂಭ್ರಮ ಆಚರಣೆಯ ಪ್ರಥಮ ಕಾರ್ಯಕ್ರಮವಾಗಿ ಅಂತರರಾಷ್ಟ್ರೀಯ ಸಾಹಸ ಕಾರ್ಯಕ್ರಮಕ್ಕೆ ಉತ್ತೇಜನ ನೀಡುವ ಮೂಲಕ, ಉದ್ದಿಮೆದಾರರು ಸಾಹಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರ ನೀಡುವುದಾಗಿ ತಿಳಿಸಿದರು.

ಪ್ರಮುಖರಾದ ನಾಗರಾಜ್, ಜಿ.ವಿಜಯಕುಮಾರ್, ರಮೇಶ್ ಬಾಬು, ಶ್ರೀಕಾಂತ್, ಗಿಡ್ಡಪ್ಪ, ಮಂಜುನಾಥ್, ಗಿರೀಶ್ ಕಾಮತ್, ವಿಜಯೇಂದ್ರ, ರವೀಂದ್ರ, ವಿನಾಯಕ್ ಬಾಯರಿ, ಮಮತಾ, ಭಾರತಿ, ಪ್ರಕೃತಿ, ನಾಗರಾಜ್ ಮುಂತಾದವರಿದ್ದರು.