Monday, April 13, 2026
Monday, April 13, 2026
Home Blog Page 1225

Information Book On Cars ಕಾರುಗಳ ಕುರಿತ ಸಮಗ್ರ ಮಾಹಿತಿ ಪುಸ್ತಕ ಬಿಡುಗಡೆ

0

Information Book On Cars ಶಿವಮೊಗ್ಗ ನಗರದ ವಿನೋಬ ನಗರ ನಿವಾಸಿ ವೀರೇಶ್ ರವರು ಬರೆದಿರುವ ಕಾರ್ ಗಳ ಬಗ್ಗೆ ತಿಳಿಯಬೇಕಾದ ಮಾಹಿತಿಗಳು ಪುಸ್ತಕವನ್ನು ಇತ್ತೀಚೆಗೆ ವಿನೋಬ ನಗರದ ವಿಧಾತ್ರಿ ಭವನದಲ್ಲಿ ಆಯೋಜಿಸಿದ್ದ ಕಾರ‍್ಯಕ್ರಮ ದಲ್ಲಿ ಬಿಡುಗಡೆ ಮಾಡಿದರು.

ಪತ್ರಕರ್ತ ರಾಮಚಂದ್ರ ಗುಣಾರಿ ರವರು ಪುಸ್ತಕವನ್ನು ಬಿಡುಗಡೆ ಮಾಡಿದರು. ಲೇಖಕರಾದ ವೀರೇಶ್ ಬಿ., ಡಿಎಸ್‌ಡಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕಿ ಶಿಲ್ಪರಾಣಿ ಪಿ.ಎಸ್. ಉಪಸ್ಥಿತರಿದ್ದರು.

ಪುಸ್ತಕದಲ್ಲಿ ವಿಶೇಷ ಮಾಹಿತಿ : ಈ ಪುಸ್ತಕವು ಕಾರ್‌ಗಳ ವಿನ್ಯಾಸಗಳ ಹಾಗೂ ಕಾರ್‌ಗಳಲ್ಲಿ ಅಳವಡಿಸುರುವ ತಂತ್ರಜ್ಞಾನಗಳ ಬಗೆಗಳನ್ನು ಎಲ್ಲಾ ಜನ ಸಾಮಾನ್ಯ ವರ್ಗದವರಿಗೂ ತಿಳಿಸುವ ಒಂದು ಪ್ರಯತ್ನವಾಗಿದೆ. ಅಷ್ಟೇ ಅಲ್ಲದೇ ಆ ತಂತ್ರಜ್ಞಾನಗಳ ಅವಶ್ಯಕತೆ ಹಾಗೂ ಉಪಯೋಗಗಳ ಅರಿವು ಮೂಡಿಸುವುದು ಈ ಪುಸ್ತಕದ ಮೂಲ ಉದ್ದೇಶವಾಗಿದೆ.

Information Book On Cars ಗ್ರಾಹಕರು ತಮಗೆ ಇಷ್ಟವಾದ ಕಾರ್ ನ ಮಾಡೆಲ್ ನ್ನು ಸ್ಪರ್ಧಾತ್ಮಕ ಮಾಡೆಲ್ ಜೊತೆಗೆ ತುಲನೆ ಮಾಡಬೇಕಾದರೆಬರೀ ಕಾರ್ ಬೆಲೆಯೊಂದೇ ಅಲ್ಲದೆ ಯಾವ್ಯಾವ ಅಂಶಗಳನ್ನು ಪರಿಗಣಿಸಬೇಕು. ಎಂಬ ಅಂಶಗಳ ಕುರಿತಾಗಿ ಸವಿಸ್ತಾರವಾಗಿ ತಿಳಿಸಲು ಈ ಪುಸ್ತಕವು ಅನುವು ಮಾಡಿ ಕೊಡುತ್ತದೆ. ಉದಾಹರಣೆಗೆ ಎಬಿಎಸ್ ಮತ್ತು ಇಬಿಡಿ ಎಂಬ ಸುರಕ್ಷಾ ವೈಶಿಷ್ಟ್ಯ, ಈ ವೈಶಿಷ್ಟ್ಯಗಳು ನನಗೆ ಹಾಗೂ ನನ್ನ ಕುಟುಂಬಕ್ಕೆ ಹೇಗೆ ಸಹಕಾರಿದೆ ಎಂಬಿತ್ಯಾದಿ ಅಂಶಗಳನ್ನು ಬೇರೆ ಕಾರ್‌ಗಳ ಜೊತೆಗೆ ತುಲನೆ ಮಾಡಿ ಯಾವ ಕಾರ್ ಖರೀದಿಸಿದರೆ ಉತ್ತಮ ಎಂಬ ನಿರ್ಧಾರಕ್ಕೆ ಬರಲು ಖಂಡಿತವಾಗಿಯೂ ಈ ಪುಸ್ತಕವು ಅನುಕೂಲ ಮಾಡಿಕೊಡುವಲ್ಲಿ ಯಶಸ್ವಿಯಾಗುತ್ತದೆ ಎಂದು ವೀರೇಶ್ ತಿಳಿಸಿದ್ದಾರೆ.

ಮಾಹಿತಿಗೆ ಹಾಗೂ ಈ ಪುಸ್ತಕವನ್ನು ಖರೀದಿಸಲಿಚ್ಚಿಸು ವವರು ಮೊ. 9538981688 ಅನ್ನು ಸಂಪರ್ಕಿಸಲು ವೀರೇಶ್ ಕೋರಿದ್ದಾರೆ.

Bhagirath Jayanti ಭಗೀರಥ ಮಹಾನ್ ತಪಸ್ವಿ

0

Bhagirath Jayanti ರಾಜ್ಯ ಭಗೀರಥ ಜಯಂತಿ ಉಪ್ಪಾರ ಸಮಾಜದ ಕುಲ ಗುರುಗಳು, ಮೂಲ ತಪಸ್ವಿ ಋಷಿಗಳಾದಂತಹ ಶ್ರೀ ಶ್ರೀ ಭಗೀರಥ ಮಹರ್ಷಿಗಳ ಜಯಂತಿಯನ್ನು ಶಿವಮೊಗ್ಗ ಜಿಲ್ಲಾ ಉಪ್ಪಾರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯಿಂದ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್.ಸಿ.ಯೋಗೇಶ್ ಅವರು ಮಾತನಾಡಿ, ನಿರಂತರ ತಪಸ್ಸಿನಿಂದ ದೇವಗಂಗೆ ಭೂಮಿಗಿಳಿಸಿದ ಮಹಾನ್ ತಪಸ್ವಿ ಭಗೀರಥ ವಂಶಸ್ಥರು. ಪುಣ್ಯಾತ್ಮರು ಇಂದೂ ಕೂಡ ಉಪ್ಪಾರ ಸಮಾಜದವರು ಬಹಳ ಸ್ವಾಭಿಮಾನಿಗಳಾಗಿ ಬದುಕುತ್ತಿದ್ದು, ನಿಜವಾದ ಶ್ರಮಿಕರು. ಅವರ ಸೇವೆ ಸ್ಮರಣೀಯವಾದದ್ದು ಈಶ್ವರನ ಪತ್ನಿಯಾದ ದೇವಗಂಗೆಯನ್ನೇ ಭೂಮಿಗೆ ಇಳಿದಂತಹ ಮಹಾನ್ ತಪಸ್ವಿಯ ಜನ್ಮ ಭೂಮಿಯಲ್ಲಿ ನಾವು ಹುಟ್ಟಿ ಪುನೀತರಾಗಿದ್ದೇವೆ. ಈ ಪುಣ್ಯ ಮಹಾಪುರುಷರ ಪುಣ್ಯಾದ ದಿನ. ಭಗಿರಥ ಜಯಂತಿಯ ದಿನಾಚರಣೆಯನ್ನು ಸರ್ಕಾರಿ ಎಲ್ಲಾ ಕಚೇರಿಗಳನ್ನು ಕೂಡ ಆಚರಿಸುವ ಭಾಗ್ಯವನ್ನು ತಂದುಕೊಟ್ಟದ್ದು ಸನ್ಮಾನ್ಯ ಶ್ರೀ ಮಾಜಿ ಮುಖ್ಯಮಂತ್ರಿಗಳಂತ ಸಿದ್ದರಾಮಯ್ಯನವರು ಅವರಿಗೆ ಧನ್ಯವಾದಗಳು ಹೇಳಿದರು.

Bhagirath Jayanti ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಟ್ಟಿಗೆ ಸೇರಿ ಮಹಾಪುರುಷನ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸುವ ದಿನಗಳು ಬಹಳ ಉಳಿದಿಲ್ಲ ಎಂದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಉಪ್ಪರ ಸಂಘದ ಅಧ್ಯಕ್ಷರಾದ.ಎಸ್ . ಟಿ ಹಾಲಪ್ಪ, ಪ್ರಧಾನ ಕಾರ್ಯದರ್ಶಿ ಕೆ.. ದೇವೇಂದ್ರಪ್ಪ, ಖಜಾಂಚಿ ಕಂಕರಿ ನಾಗರಾಜ್ ,ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಂಎಸ್ ಶಿವಕುಮಾರ್, ರಾಘವೇಂದ್ರ ಆರ್, ಉಪ್ಪಾರ ಸಮಾಜ ಮುಖಂಡರಾದ ಪ್ರಸನ್ನ ಕುಮಾರ್.,ಮುರಳಿ ಸಣ್ಣಕ್ಕಿ, ಎಸ್ ಕೆ ಭಾಸ್ಕರ್.. ಹಾಗೂ ಜನಪರ ನಾಯಕ ವೈ. ಹೆಚ್. ನಾಗರಾಜ್ ಅವರು ಶಿವಮೊಗ್ಗ ಜಿಲ್ಲಾಧ್ಯಕ್ಷರು ಎನ್. ಮಾಲತೇಶ್ ಕರ್ನಾಟಕ ರಾಜ್ಯ ಪತ್ರಿಕ ವಿಕಾರ ಒಕ್ಕೂಟ ಹಾಗೂ ಉಪ್ಪಾರ್ ಅಣ್ಣಪ್ಪ ಭಾಗವಹಿಸಿದ್ದರು. ಶಿವಮೊಗ್ಗ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಉಮೇಶ್ ರವರು ಸರ್ವರನ್ನು ಸ್ವಾಗತಿಸಿದರು.

BJP Karnakata ಬಿಜೆಪಿ ಅಭ್ಯರ್ಥಿಗಳಲ್ಲಿ 8 ಮಹಿಳೆ ಮತ್ತು 52 ಹೊಸಮುಖಗಳು

0

BJP Karnakata ಭಾರತದ ಆಡಳಿತ ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಕ್ಷ 224 ಸದಸ್ಯ ಬಲದೊಂದಿಗೆ ಕರ್ನಾಟಕ ವಿಧಾನಸಭೆಗೆ ಚುನಾವಣೆಗೆ 222 ಅಭ್ಯರ್ಥಿಗಳನ್ನು ಘೋಷಿಸಿದೆ.

ಕರ್ನಾಟಕ ಚುನಾವಣೆ 2023: ಬಿಜೆಪಿ ಅಭ್ಯರ್ಥಿಗಳು ಮತ್ತು ಕ್ಷೇತ್ರಗಳ ಪಟ್ಟಿ ಹೀಗಿದೆ:
ಬಿಜೆಪಿಯ ಮೊದಲ ಪಟ್ಟಿಯಲ್ಲಿ 8 ಮಹಿಳಾ ಅಭ್ಯರ್ಥಿಗಳು, 52 ಹೊಸ ಮುಖಗಳಿದ್ದಾರೆ.

ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸ್ಪರ್ಧಿಸಲಿದ್ದಾರೆ.

ಮಂಗಳವಾರ 189 ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, 52 ಹೊಸ ಮುಖಗಳು ಮತ್ತು ಎಂಟು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇದೇ ವೇಳೆ ಮಾಜಿ ಸಿಎಂ ಬಿ. ಎಸ್.ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರು ತಮ್ಮ ತಂದೆಯ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

BJP Karnakata ಕರ್ನಾಟಕ ಚುನಾವಣೆಗೆ ಬಿಜೆಪಿ 23 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ:
ಏಪ್ರಿಲ್ ತಿಂಗಳ ಆರಂಭದಲ್ಲಿ, ಮೇ 10 ರಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ 23 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿತು.

224 ಸ್ಥಾನಗಳ ವಿಧಾನಸಭೆಯಲ್ಲಿ ಬಹುಮತ ಗಳಿಸುವ ಮೂಲಕ ದಕ್ಷಿಣ ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವ ಗುರಿಯನ್ನು ಪಕ್ಷ ಹೊಂದಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಆರು ಬಾರಿ ಶಾಸಕರಾಗಿದ್ದ ಜಗದೀಶ್ ಶೆಟ್ಟರ್ ಅವರಿಗೆ ಪಟ್ಟಿಯಲ್ಲಿ ಸ್ಥಾನ ಸಿಗದಿರುವುದು ಕಾಂಗ್ರೆಸ್ ಪಕ್ಷ ಸೇರಲು ಬುನಾದಿಯಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ 10 ಅಭ್ಯರ್ಥಿಗಳ 3ನೇ ಪಟ್ಟಿ ಪ್ರಕಟಿಸಲಾಗಿದೆ

ಬಿಜೆಪಿ ಪಕ್ಷ ಸೋಮವಾರ ಇನ್ನೂ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರನ್ನು ಕಣಕ್ಕಿಳಿಸಿದೆ.

ಹೆಬ್ಬಾಳದಿಂದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಪುತ್ರ ಕಟ್ಟಾ ಜಗದೀಶ್ ಅವರನ್ನು ಪಕ್ಷ ಕಣಕ್ಕಿಳಿಸಿದೆ.

ಮಹದೇವಪುರ ಕ್ಷೇತ್ರಕ್ಕೆ ಮಾಜಿ ಸಚಿವ, ಶಾಸಕ ಅರವಿಂದ ಲಿಂಬಾವಳಿ ಅವರ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ಟಿಕೆಟ್ ಪಡೆದಿದ್ದಾರೆ

Assembly Election Sagara ರಾಜ್ಯ ವಿಧಾನ ಸಭಾ ಚುನಾವಣೆ-2023 ಸಾಗರ ವಿಧಾನ ಸಭಾ ಕ್ಷೇತ್ರಕಿರು ಮಾಹಿತಿ

0

Assembly Election Sagara ಮತ್ತೊಮ್ಮೆ ಚುನಾವಣಾ ಯುದ್ಧಕ್ಕೆ ಸಾಗರ ಕ್ಷೇತ್ರ ಸಿದ್ಧವಾಗಿದೆ. ಸಾಗರ ಕ್ಷೇತ್ರ ಕರ್ನಾಟಕ ರಾಜ್ಯದ 224ರಲ್ಲಿ ಒಂದಾಗಿದೆ.

ಕಳೆದ ಬಾರಿ 2018ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷ ಗೆಲುವನ್ನು ಸಾಧಿಸಿತ್ತು.

2018ರಲ್ಲಿ ಸಾಗರ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಹರತಾಳು ಹಾಲಪ್ಪ ಅವರು ಸ್ಪರ್ಧಿಸಿದ್ದರು. ಇವರ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಕಾಗೋಡು ತಿಮ್ಮಪ್ಪ ಅವರು ಸ್ಪರ್ಧಿಸಿದ್ದರು.

ಇವರಿಬ್ಬರ ನಡುವೆ 8039 ಮತಗಳ ಅಂತರದಲ್ಲಿ ಹರತಾಳು ಹಾಲಪ್ಪ ಅವರು ಗೆಲುವನ್ನು ಸಾಧಿಸಿದ್ದರು.

2018ರಲ್ಲಿ ಸಾಗರ ವಿಧಾನಸಭೆ ಚುನಾವಣೆಯ ಫಲಿತಾಂಶ ಹೇಗಿತ್ತು ಎಂಬುದರ ವಿವರ ಇಲ್ಲಿದೆ…

2018ರ ಸಾಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಬಿಜೆಪಿ ಅಭ್ಯರ್ಥಿಯಾಗಿ ಹರತಾಳು ಹಾಲಪ್ಪ ಅವರು ಒಟ್ಟು ಮತಗಳು 78,475 ಗಳಿಸಿದ್ದರು.

Assembly Election Sagara ಕಾಂಗ್ರೆಸ್ ಅಭ್ಯರ್ಥಿ ಕಾಗೋಡು ತಿಮ್ಮಪ್ಪ ಅವರು 70,436 ಮತಗಳನ್ನು ಗಳಿಸಿದ್ದರು.

ಜೆಡಿಎಸ್ ಅಭ್ಯರ್ಥಿಯಾಗಿ ಗಿರೀಶ್ ಗೌಡ ಅವರು ಸ್ಪರ್ಧಿಸಿದ್ದರು. ಇವರು 2,100 ಮತಗಳನ್ನು ಗಳಿಸಿದ್ದರು.

2018ರಲ್ಲಿ ಸಾಗರ ಕ್ಷೇತ್ರದ ಒಟ್ಟು ಮತಗಳು 1,93,797. ಇದರಲ್ಲಿ ಒಟ್ಟು ಪುರುಷರ ಮತಗಳು 96,633. ಒಟ್ಟು ಮಹಿಳೆಯರ ಮತಗಳು 97,162. ತೃತಿಯ ಲಿಂಗಿ ಮತದಾರರ ಸಂಖ್ಯೆ 2. ಒಟ್ಟು ನೋಟ ಓಟುಗಳು 1,511.

2023ರಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಹರತಾಳು ಹಾಲಪ್ಪ ಅವರು ಸ್ಪರ್ಧಿಸಿದ್ದಾರೆ.

ಇವರ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಅಭ್ಯರ್ಥಿಯಾದ ಕಾಗೋಡು ತಿಮ್ಮಪ್ಪ ಅವರು ಸ್ಪರ್ಧಿಸಿದ್ದಾರೆ. ಸಾಗರ ಕ್ಷೇತ್ರದ ಒಟ್ಟು ಮತಗಟ್ಟೆಗಳು 264.

ಸಾಗರ ಕ್ಷೇತ್ರದಲ್ಲಿ 99,401 ಪುರುಷ, 1,01,326 ಮಹಿಳಾ, ಒಂದು ತೃತೀಯ ಲಿಂಗಿ ಸೇರಿದಂತೆ ಒಟ್ಟು 2,00,728 ಮತದಾರರು ಇದ್ದಾರೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಯಾರ ಕೈ ಸೇರುತ್ತದೆ ಎಂದು ಕಾದು ನೋಡಬೇಕಿದೆ…

Cyber Security ಏಪ್ರಿಲ್ 29 ರಂದು ಸೈಬರ್ ಜಾಗೃತಿ ಕಾರ್ಯಕ್ರಮ

0

Cyber Security ಸೈಬರ್ ಸುರಕ್ಷತೆ ಹಾಗೂ ಹಣಕಾಸಿನ ವ್ಯವಹಾರದಲ್ಲಿ
ಆಗುವ ಹ್ಯಾಕಿಂಗ್ ತೊಂದರೆ ಕುರಿತು ಜಾಗೃತಿ ಮೂಡಿಸುವ
ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು
ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಏಪ್ರಿಲ್ 29ರ ಬೆಳಗ್ಗೆ 10:00ಕ್ಕೆ
ಹಮ್ಮಿಕೊಳ್ಳಲಾಗಿದೆ.

ಸೈಬರ್ ಜಾಗೃತಿ ಕಾರ್ಯಕ್ರಮವನ್ನು ನಿವೃತ್ತ ಪ್ರೊಫೆಸರ್
ಡಾ. ವೀರಮಂಜು ಉದ್ಘಾಟಿಸುವರು. ನಂತರ ವಿಶೇಷ ಉಪನ್ಯಾಸ
ಕಾರ್ಯಕ್ರಮಗಳಿದ್ದು, ಡಾ. ವೀರಮಂಜು ಅವರು ಇಂಟರ್‌ನೆಟ್
ವಿಷಯಗಳ ಕುರಿತು ತಿಳವಳಿಕೆ ನೀಡಲಿದ್ದಾರೆ. ಮಹೇಶ್ ವಸ್ತದ್
ಅವರು ಹ್ಯಾಕಿಂಗ್ ವಿಷಯಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ
ವಿಶೇಷ ಉಪನ್ಯಾಸ ನೀಡಲಿದ್ದಾರೆ.

Cyber Security ಸೈಬರ್ ಅಪರಾಧ ಹಾಗೂ ಹ್ಯಾಕಿಂಗ್ ಸಮಸ್ಯೆ ಹೆಚ್ಚುತ್ತಿರುವ ಕಾಲ
ಇದಾಗಿದ್ದು, ಜಾಗೃತಿ ಮತ್ತು ತಿಳವಳಿಕೆ ಮುಖ್ಯ. ಶಿವಮೊಗ್ಗ
ಜಿಲ್ಲೆಯ ಆಸಕ್ತರು ಸೈಬರ್ ಜಾಗೃತಿ ಕಾರ್ಯಕ್ರಮದಲ್ಲಿ ಹೆಚ್ಚಿನ
ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಭಾಗವಹಿಸುವರರು
ಲ್ಯಾಪ್‌ಟಾಪ್ ತರುವುದು ಒಳ್ಳೆಯದು. ಪ್ರಾತ್ಯಕ್ಷಿಕೆ ಜಾಗೃತಿಗೆ
ಅನುಕೂಲವಾಗಲಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು
ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್
ತಿಳಿಸಿದ್ದಾರೆ.

Department of Minority Welfare ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ‌ ಆಹ್ವಾನ

0

Department of Minority Welfare ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ 6ನೇ ತರಗತಿಗೆ ಉಚಿತ ಪ್ರವೇಶಾತಿಗಾಗಿ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್, ಪಾರ್ಸಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಅಭ್ಯರ್ಥಿಯು 08 ರಿಂದ 13 ವಯೋಮಾನದವರಾಗಿರದ್ದು, 5ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ವಿದ್ಯಾರ್ಥಿಯ ಇತ್ತಿಚಿನ ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹಿಂದಿನ ತರಗತಿಯ ಅಂಕಪಟ್ಟಿ, ಶಾಲಾ ಘೋಷಣಾ ಪ್ರಮಾಣ ಪತ್ರದೊಂದಿಗೆ ಆಯಾ ಶಾಲೆಯಲ್ಲಿ ಅರ್ಜಿ ಸಲ್ಲಿಸುವುದು.
ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಶೇ.25% ರಷ್ಟು ದಾಖಲಾತಿ, ಇತರೆ ಸಮುದಾಯದ ಮಕ್ಕಳಿಗೆ ಶೇ.25% ರಷ್ಟು ದಾಖಲಾತಿಗಾಗಿ ಹಾಗೂ ಬಾಲಕಿಯರಿಗಾಗಿ ಶೇ.50% ಸ್ಥಾನಗಳನ್ನು ಮೀಸಲಿರಿಸಲಾಗಿದ್ದು, ನುರಿತ ಅನುಭವಿ ಶಿಕ್ಷಕರಿಂದ ಆಂಗ್ಲ ಮಾಧ್ಯಮದಲ್ಲಿ ಭೋಧನೆ, ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ನೊಟ್ ಪುಸ್ತಕ ಲೇಖನ ಸಾಮಗ್ರಿಗಳು, ಶಾಲಾ ಬ್ಯಾಗ್, ಎರಡು ಜೊತೆ ಉಚಿತ ಸಮವಸ್ತç, ಎರಡು ಜೊತೆ ಶೂ ಮತ್ತು ಸಾಕ್ಸ್, ಉಚಿತ ಬಿಸಿ ಊಟನ ವ್ಯವಸ್ಥೆ, ಉಚಿತ ಕಂಪ್ಯೂಟರ್ ತರಬೇತಿ, ಸ್ಮಾರ್ಟ್ ಕ್ಲಾಸ್, ಸ್ಪೋಕನ್ ಇಂಗ್ಲಿಷ್ ಕ್ಲಾಸ್ ಸೌಲಭ್ಯ, ಸುಸಜ್ಜಿತ ಪ್ರಯೋಗಾಲಯ ಮತ್ತು ಗ್ರಂಥಾಲಯ, ವಿದ್ಯಾರ್ಥಿಗಳ ದೈಹಿಕ ವಿಕಾಸಕ್ಕಾಗಿ ಕ್ರೀಡಾ ಚಟುವಟಿಕೆ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಸೌಲಭ್ಯಗಳು ನೀಡಲಾಗುವುದು.

Department of Minority Welfare ಮೌಲಾನಾ ಅಜಾದ್ ಮಾದರಿ ಶಾಲೆ ಲಷ್ಕರ್ ಮೊಹಲ್ಲಾ, ಶಿವಮೊಗ್ಗ-7676621339, ಮೌಲಾನಾ ಅಜಾದ್ ಮಾದರಿಶಾಲೆ ಬಸವೇಶ್ವರ ಸರ್ಕಲ್ ಓಲ್ಡ್ ಟೌನ್, ಭದ್ರಾವತಿ-9844081633, ಮೌಲಾನಾ ಅಜಾದ್ ಮಾದರಿ ಶಾಲೆ ಗುರುಭವನ್ ಹತ್ತಿರ, ಶಿಕಾರಿಪುರ-9886657635, ಮೌಲಾನಾ ಅಜಾದ್ ಮಾದರಿ ಶಾಲೆ ಮಟದಗದ್ದೆ, ಶಿರಾಳಕೊಪ್ಪ-9986254703,ಮೌಲಾನಾ ಅಜಾದ್ ಮಾದರಿ ಶಾಲೆ ಪ್ರೈವೇಟ್ ಬಸ್ ಸ್ಟಾಂಡ್ ಹತ್ತಿರ, ಸೊರಬ- 9743031530, ಮೌಲಾನಾ ಅಜಾದ್ ಮಾದರಿ ಶಾಲೆ ಗಾಂಧಿನಗರ, ಸಾಗರ- 9449946429, ಈ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳು ದಿ: 18/05/2023ರೊಳಗಾಗಿ ಅರ್ಜಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

ಉಚಿತವಾಗಿ ಅರ್ಜಿ ಪಡೆಯಲು ಹಾಗೂ ಮಾಹಿತಿಗಾಗಿ ಜಿಲ್ಲಾ ಮಾಹಿತಿ ಕೇಂದ್ರ 1ನೇ ಮಹಡಿ, ಸತ್ಯಶ್ರೀ ಆರ್ಕೆಡ್, 5ನೇ ಪ್ಯಾರಲಾಲ್ ರಸ್ತೆ, ದುರ್ಗಿಗುಡಿ ಶಿವಮೊಗ್ಗ-7676888388 ತಾಲ್ಲೂಕು ಮಾಹಿತಿ ಕೇಂದ್ರ ಇಂದಿರನಗರ, ಸೇಂಟ್ ಮೇರೀಸ್ ಸ್ಕೂಲ್ ಹತ್ತಿರ ತೀರ್ಥಹಳ್ಳಿ-886192835, ತಾಲ್ಲೂಕು ಮಾಹಿತಿ ಕೇಂದ್ರ ತಾಲ್ಲೂಕು ಪಂಚಾಯತ್ ಹತ್ತಿರ ಭದ್ರಾವತಿ-9538853680 ತಾಲ್ಲೂಕು ಮಾಹಿತಿ ಕೇಂದ್ರ ದೇವರಾಜ್ ಅರಸ್ ಭವನ್ ಮರುರ್ ರಸ್ತೆ ಸೊರಬ-9513815513, ತಾಲ್ಲೂಕು ಮಾಹಿತಿ ಕೇಂದ್ರ ತಾಲ್ಲೂಕು ಪಂಚಾಯತ್ 2ನೇ ಮಹಡಿ ಶಿಕಾರಿಪುರ- 7829136724 ತಾಲ್ಲೂಕು ಮಾಹಿತಿ ಕೇಂದ್ರ ತಾಲ್ಲೂಕು ಕಛೇರಿ ಹಳೆ ಡಿ.ಸಿ ಕಛೇರಿ ಹೊಸನಗರ-9008447029,ತಾಲ್ಲೂಕು ಮಾಹಿತಿ ಕೇಂದ್ರ ಇಂದಿರನಗರ ಹತ್ತಿರ ಎಸ್,ಎನ್ ನಗರ್ ಸಾಗರ-7338222902 ಗಳನ್ನು ಸಂಪರ್ಕಿಸುವುದು.
ಹೆಚ್ಚಿನ ಮಾಹಿತಿಗಾಗಿ, ಜಿಲ್ಲಾ ಅಧಿಕಾರಿಗಳ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಶಿವಮೊಗ್ಗ. 1ನೇ ಮಹಡಿ, ಸತ್ಯಶ್ರೀ ಆರ್ಕೆಡ್, 05ನೇ ಪ್ಯಾರಲಾಲ್ ರಸ್ತೆ, ದುರ್ಗಿಗುಡಿ ದೂರವಾಣ :(08182) 220206, ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳು, ಶಿವಮೊಗ್ಗ ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳು, ಸಾಗರ 7795315517/ 7760822213/ 9900132234 ಸಂಪರ್ಕಿಸುವುದು.

Rotary Organization ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿ ಸೇವಾವಕಾಶ ಮಾಹಿತಿ ಹಾಗೂ ತರಬೇತಿ

0

Rotary Organization ಕೌಶಲ್ಯ ಅಭಿವೃದ್ಧಿ ಹಾಗೂ ವೃತ್ತಿ ಸೇವಾ ಅವಕಾಶಗಳ ಬಗ್ಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡಲು ರೋಟರಿ ಕ್ಲಬ್ ಶಿವಮೊಗ್ಗ ಮಿಡ್ ಟೌನ್ ಸಂಸ್ಥೆ ಹಾಗೂ ಕ್ಯಾಲೈಟೆಕ್ಸ್ ಇಂಡಿಯಾ ಮುಂದಾಗಿದೆ.

ತರಬೇತಿಗೆ ಪ್ರವೇಶ ಪರೀಕ್ಷೆಗಳನ್ನು 30-04-2023ರಂದು ಭಾನುವಾರ 100 ಅಡಿ ರಸ್ತೆಯಲ್ಲಿರುವ ರೋಟರಿ ರಕ್ತನಿಧಿ ಸಭಾಂಗಣದಲ್ಲಿ ಬೆಳಗ್ಗೆ 10.30 ಕ್ಕೆ ನಡೆಸಲಾಗುತ್ತದೆ.

ರೋಟರಿ ಸಂಸ್ಥೆಯ ಮಾರ್ಗದರ್ಶನ ಹಾಗೂ ಅಂತರಾಷ್ಟ್ರೀಯ ರೋಟರಿ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಅವಕಾಶಗಳಲ್ಲಿ ವಂಚಿತರಾದ ಹಾಗೂ ಆರ್ಥಿಕವಾಗಿ ಹಿಂದುಳಿದ ಪಿಯು ನಂತರ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗದೇ ತಮ್ಮ ಆಶೋತ್ತರಗಳನ್ನು ಪೂರೈಸಲಾಗದೇ ಉಳಿದಂತಹ ಯುವಕ, ಯುವತಿಯರ ಪಾಲಿಗೆ ಬೆಳಕಾಗುವ ನೂತನ ಪರಿಕಲ್ಪನೆ ಸಿದ್ಧಪಡಿಸಲಾಗಿದೆ.

ಕ್ಯಾಲೈಟೆಕ್ಸ್ ಇಂಡಿಯಾ ಸಂಸ್ಥೆ ಕೌಶಲ್ಯ ಅಭಿವೃದ್ಧಿ ಕಾರ್ಯ ಚಟುವಟಿಕೆಗಳನ್ನು ಹಲವು ಹಂತಗಳಲ್ಲಿ ಪರಿಚಯಿಸುತ್ತಿದೆ. ಮೊದಲನೆಯ ಹಂತದಲ್ಲಿ ಕಾರ್ಪೋರೇಟ್ ಕಂಪನಿಗಳಲ್ಲಿ ವ್ಯವಹರಿಸಲು ಆತ್ಯವಶ್ಯಕವಾದ ಆಂಗ್ಲಭಾಷೆ ಮಾತನಾಡುವ ಹಾಗೂ ಬರವಣಿಗೆಯನ್ನು ಯಶಸ್ವಿಯಾಗಿ ಕೈಗತ ಮಾಡುವುದು.

Rotary Organization ಎರಡನೆಯ ಹಂತದಲ್ಲಿ ಶಿಭಿರಾರ್ಥಿಗಳು ಕಂಪ್ಯೂಟರ್ ವಿಜ್ಞಾನದ ಮೂಲೋದ್ಧೇಶ ಪ್ರಾಥಮಿಕ ಮಾಹಿತಿ, ಸಾಪ್ಟವೇರ್‌ಗಳ ಪರಿಚಯ. ಮೂರನೆಯ ಹಂತದಲ್ಲಿ ಕಾರ್ಯಕ್ರಮ ನಿರೂಪಣೆ, ಪರೀಕ್ಷೆ ಹಾಗೂ ಕಂಪ್ಯೂಟರ್ ಹಾಡ್ವೇðರ್‌ಗಳ ಮಾಹಿತಿ ಕಮ್ಯೂನಿಕೇಷನ್ ತರಬೇತಿ. ಕೊನೆಯ ಹಂತದಲ್ಲಿ ಶಿಬಿರಾರ್ಥಿಗಳ ಅಮೂಲಾಗ್ರ ತರಬೇತಿಯ ನಿರ್ವಹಣೆ ಹಾಗೂ ಮಾನದಂಡದ ಬಗ್ಗೆ ಸರ್ಟಿಫಿಕೇಷನ್ ನೀಡುವುದು.

ಅತ್ಯುತ್ತಮ ಮಾನದಂಡದ ಅರ್ಹತೆ ಪಡೆದ ಶಿಬಿರಾರ್ಥಿಗಳಿಗೆ ಕ್ಯಾಲೆಟಕ್ಸ್ ಕಂಪನಿಯಲ್ಲಿ ವಾರ್ಷಿಕ 3,00,000 ರೂ. ಸಂಬಳದ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತದೆ.

ತರಬೇತಿ ಅವಧಿಯಲ್ಲಿ (3 ಮತ್ತು 4ನೇ ಹಂತ) ಶಿಬಿರಾರ್ಥಿಗಳಿಗೆ 5,000 ರೂ. ಸ್ಟೈಫಂಡ್ ನೀಡಲಾಗುತ್ತದೆ. ತರಬೇತಿಯ ಅನುಭವದ ಆಧಾರದಲ್ಲಿ ಬೇರೆ ಬೇರೆ ಸಾಫ್ಟ್ವೇರ್ ಕಂಪನಿಗಳಲ್ಲಿ ವಿಪುಲ ಅವಕಾಶಗಳಿವೆ.

ಶಿಬಿರಕ್ಕೆ ಅರ್ಹರಾದ ವಿದ್ಯಾರ್ಥಿಗಳನ್ನ ಪರಿಚಯಿಸಿ ಪ್ರತಿಯೊಂದು ಬ್ಯಾಚ್‌ಗೆ 30 ಅರ್ಹರಿಗೆ ಅವಕಾಶ ನೀಡಲಾಗುತ್ತದೆ. ತರಬೇತಿಗೆ ಪ್ರವೇಶ ಪರೀಕ್ಷೆಗಳನ್ನು 30-04-2023ರ ಭಾನುವಾರ 100 ಅಡಿ ರಸ್ತೆಯಲ್ಲಿರುವ ರೋಟರಿ ರಕ್ತನಿಧಿ ಸಭಾಂಗಣದಲ್ಲಿ ಬೆಳಗ್ಗೆ 10-30 ಕ್ಕೆ ನಡೆಸಲಾಗುತ್ತದೆ.

ಪರೀಕ್ಷೆಯಲ್ಲಿ ಶಿಬಿರಾರ್ಥಿಗಳ ಬುದ್ಧಿಶಕ್ತಿ, ಗ್ರಹಣಶಕ್ತಿ, ಐಕ್ಯೂ ಮತ್ತು ಇಕ್ಯೂ ಪರೀಕ್ಷೆ ನಡೆಸಲಾಗುತ್ತದೆ. ಆಸಕ್ತ ಶಿಬಿರಾರ್ಥಿಗಳು ಪಿ.ಯು ಅಂಕಪಟ್ಟಿ, , ಬಿ.ಪಿ.ಎಲ್. ಕಾರ್ಡ್, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮಾಹಿತಿ ತರಬೇಕು ಎಂದು ರೋಟರಿ ಶಿವಮೊಗ್ಗ ಮಿಡ್ ಟೌನ್ ಅಧ್ಯಕ್ಷೆ ವೀಣಾ ಸುರೇಶ್ ತಿಳಿಸಿದ್ದಾರೆ. ಮಾಹಿತಿಗೆ ಮೊಬೈಲ್ ಸಂಖ್ಯೆ 7829738412 ಸಂಪರ್ಕಿಸಬಹುದಾಗಿದೆ.

BJP Karnataka ಬಿಜೆಪಿ ಬದಲಿಸಿ ಕಾಂಗ್ರೆಸ್ ಪಕ್ಷ ಗೆಲ್ಲಿಸಿ-ಗಾಯತ್ರಿ ಶಾಂತೇಗೌಡ

0

BJP Karnataka ಕ್ಷೇತ್ರದಲ್ಲಿ ಯಾವುದೇ ಗುರುತರವಾದ ಅಭಿವೃದ್ದಿ ಕಾಮಗಾರಿಗಳು ನಡೆದಿಲ್ಲ. ಕೇವಲ ವೈಯಕ್ತಿಕವಾಗಿ ಸ್ಥಳೀಯ ಜನಪ್ರತಿನಿಧಿಗಳು ಲಾಭ ಮಾಡಿಕೊಳ್ಳುತ್ತಿದ್ದು ಇದು ಬದಲಾಗ ಬೇಕಾದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲಿದರೆ ಮಾತ್ರ ಸಾಧ್ಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಹೇಳಿದರು.

ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಬಡಾವಣೆಯ ವಕೀಲ ಪ್ರಕಾಶ್ ಅವರ ಸ್ವಗೃಹದಲ್ಲಿ ನಡೆದ ಸವಿತಾ ಸಮಾಜದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚನಾ ಸಭೆಯಲ್ಲಿ ಅವರು ಮಾತನಾಡಿ ಕಾಂಗ್ರೆಸ್ ಅಧಿಕಾರದ ಸಮಯದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಕೆಲಸಗಳಾಗಿವೆ. ಅವುಗಳನ್ನು ಇದೀಗ ತಮ್ಮದೆಂದು ಹೇಳಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ದೂರಿದರು.

ಜನತೆಯು ದಿನನಿತ್ಯದ ಆಹಾರ ಪದ್ಧತಿಯಲ್ಲಿ ಒಂದೇ ರುಚಿಯನ್ನು ಸವಿದರೆ ಅಲ್ಲಗೆಳೆಯುತ್ತೇವೆ. ಆದರೆ ಸುಮಾರು ನಾಲ್ಕು ಅವಧಿಯಿಂದ ಒಂದೇ ವ್ಯಕ್ತಿಯೇ ಆಡಳಿತ ಮಾಡುತ್ತಿರುವುದು ಎಷ್ಟು ಸರಿ ಎಂದ ಅವರು ನಿತ್ಯದ ಆಹಾರದ ರುಚಿ ಬದಲಿಸಿದಂತೆ ಮತದಾನದ ವಿಷಯದಲ್ಲೂ ಬಿಜೆಪಿಯನ್ನು ಬದಲಿಸಿ, ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿ ಉತ್ತಮ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

BJP Karnataka ಇದೀಗ ಕ್ಷೇತ್ರದಲ್ಲಿ ಬಹುತೇಕ ಸಣ್ಣ ಸಮಾಜದಿಂದ ಹಿಡಿದು ದೊಡ್ಡ ಸಮಾಜದವರೆಗೂ ಕಾಂಗ್ರೆಸ್ ಪಕ್ಷದ ಪರ ಅಲೆ ಆರಂಭವಾಗಿದೆ. ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಶೇ.100ರಷ್ಟು ಕಾಂಗ್ರೆಸ್ ಅಧಿಕಾರ ಚುಕ್ಕಾಣ ಹಿಡಿ ಯುವುದು ಶತಸಿದ್ಧ. ನಂತರ ದಿನಗಳಲ್ಲಿ ಎಲ್ಲಾ ಸಮುದಾಯವನ್ನು ಸೂಕ್ತ ರೀತಿಯಲ್ಲಿ ಗೌರವಿಸುವ ಕೆಲಸವಾಗ ಲಿದ್ದು. ಇದಕ್ಕೆ ತಮ್ಮಗಳ ಸಹಕಾರ ಅತ್ಯವಶ್ಯ ಎಂದು ತಿಳಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ.ತಮ್ಮಯ್ಯ ಮಾತನಾಡಿ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಜನತೆ ಅಭಿವೃದ್ದಿ ಹಾಗೂ ಶಾಶ್ವತ ಕಾಮಗಾರಿ ಕಾಣದೇ ತತ್ತರಿಸಿ ಹೋಗಿದ್ದು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ದ ಚುಕ್ಕಾಣ ಹಿಡಿಯುವ ಮೂಲಕ ಕ್ಷೇತ್ರ ಹಾಗೂ ಜಿಲ್ಲೆಯನ್ನು ಅಭಿವೃದ್ಧಿಪಥದತ್ತ ಸಾಗಿಸಲಿದೆ ಎಂದರು.

ಅದೇ ರೀತಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಸವಿತಾ ಸಮಾ ಜವು ಬೆಂಬಲಿಸಿ ಗೆಲುವಿಗೆ ಪೂರಕವಾದಲ್ಲಿ ಮುಂದಿನ ದಿನಗಳಲ್ಲಿ ಸಮಾಜದ ಏಳಿಗೆಗೆ ಪ್ರಾಮಾಣ ಕವಾಗಿ ದುಡಿ ಯುವ ಜೊತೆಗೆ ಸಮಾಜದ ಯಾವುದೇ ಸಮಸ್ಯೆಗಳು ಎದುರಾದಲ್ಲಿ ಜೊತೆಗಿರುವ ಭರವಸೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಸವಿತಾ ಸಮಾಜದ ಗೌರವ ಅಧ್ಯಕ್ಷ ವೆಂಕಟೇಶ್, ಕಾರ್ಯಕಾರಿ ಮಂಡಳಿ ಸದಸ್ಯ ಬಾಲಕೃಷ್ಣ, ಕಾನೂನು ಸಲಹೆಗಾರ ಎಸ್.ಪ್ರಕಾಶ್, ಮಾಜಿ ಅಧ್ಯಕ್ಷ ಎನ್.ಸತೀಶ್, ಕಾರ್ಯದರ್ಶಿ ಚಂದ್ರ ಶೇಖರ್, ಮುಖಂಡರುಗಳಾದ ನಾಗರಾಜ್, ಶೇಷಾದ್ರಿ, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

SVEEP Committee Sagara ಸಾಗರದಲ್ಲಿ ಸ್ವೀಪ್ ಸಮಿತಿ ಏರ್ಪಡಿಸಿದ್ದಸಮಾರಂಭದಲ್ಲಿ ಮತದಾರರಿಂದ ಪ್ರತಿಜ್ಞಾವಿಧಿ ಸ್ವೀಕಾರ

0

SVEEP Committee Sagara 18 ವರ್ಷ ತುಂಬಿದ ಎಲ್ಲಾ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಬೆಂಬಲಿಸಬೇಕು ಹಾಗೂ ಸಂವಿಧಾನ ಕಲ್ಪಿಸಿಕೊಟ್ಟ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಾಗರ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ನಾಗೇಶ್ ಎನ್ ಬ್ಯಾಲಾಳ್ ತಿಳಿಸಿದರು.

ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ಸಾಗರ ವತಿಯಿಂದ ದಿ: 25-04-2023 ರಂದು ಆಯೋಜಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಡ್ಡಾಯವಾಗಿ ಎಲ್ಲ ಅರ್ಹರು ಮತದಾನ ಮಾಡುವಂತೆ ಕೋರಿದ ಅವರು ನೆರಿದ್ದ ಸಾರ್ವಜನಿಕರು, ಅಧಿಕಾರಿ, ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

SVEEP Committee Sagara ಜಿಲ್ಲಾ ಸ್ವೀಪ್ ಸಮಿತಿ ಉಪ ನೋಡಲ್ ಅಧಿಕಾರಿ ನವೀದ್ ಅಹ್ಮದ್ ಪರ್ವೀಜ್ ಮಾತನಾಡಿ, ಸಾರ್ವಜನಿಕರು ಸಿ-ವಿಜಿಲ್ ಆ್ಯಪ್ ಬಳಸುವ ಮೂಲಕ ಚುನಾವಣಾ ಅಕ್ರಮಗಳನ್ನು ತಡೆಯುವಲ್ಲಿ ಕೈಜೋಡಿಸಬಹುದು. ಏಪ್ರಿಲ್ 11 ರವರೆಗೆ ಪರಿಷ್ಕರಣೆ ಆಗಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಲು ವಿಹೆಚ್‍ಎ ಆ್ಯಪ್ ಬಳಸಬಹುದು. ಈ ಬಾರಿ ಆಯೋಗವು ವಿಶೇಷ ಚೇತನರು ಮತ್ತು 80 ವರ್ಷ ಮೇಲ್ಪಟ್ಟ ಮತದಾರರಿಗೆ ಪೋಸ್ಟಲ್ ಬ್ಯಾಲಟ್ ಮೂಲಕ ಮತ ಚಲಾಯಿಸಲು ಅವಕಾಶ ಕಲ್ಪಿಸಿದ್ದು ಚುನಾವಣೆ ಕುರಿತು ಹೆಚ್ಚಿನ ಯಾವುದೇ ಮಾಹಿತಿಗೆ ವೆಬ್‍ಸೈಟ್ ನೋಡಬಹುದು ಎಂದರು.

ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ, ರಂಗೋಲಿ ಸ್ಪರ್ಧೆ ಹಾಗೂ ಜಾಥಾ, ಮಾನವ ಸರಪಳಿ ರಚಿಸುವ ಮೂಲಕ ಮತದಾನ ಜಾಗೃತಿ ಘೋಷಣೆಗಳನ್ನು ಕೂಗುವ ಮೂಲಕ ಮತದಾರರ ಜಾಗೃತಿ ಹಬ್ಬದಂತೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಚಂದ್ರಪ್ಪ ಸಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಸಂತೋಷ, ಕ್ಷೇತ್ರ ಶಿಕ್ಷಣಾಧಿಕಾರಿ ನಿಂಗಪ್ಪ, ಇತರೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ಸ್ವಸಹಾಯ ಸಂಘದ ಮಹಿಳೆಯರು ಪಾಲ್ಗೊಂಡಿದ್ದರು

BJP Karnataka ಹಾರನಹಳ್ಳಿಯಲ್ಲಿ ಬಿಜೆಪಿ ರೋಡ್ ಶೋ

0

BJP Karnataka ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾರನಹಳ್ಳಿಯಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕ ನಾಯ್ಕ ಅವರು ಚುನಾವಣಾ ಪ್ರಚಾರ, ರೋಡ್ ಶೋ ಹಾಗೂ ಮನೆ ಮನೆಗಳಿಗೆ ತೆರಳಿ ಪ್ರಚಾರ ನಡೆಸಿದರು. ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ದೇಶ ಶ್ರೇಷ್ಠ ಮಾರ್ಗದಲ್ಲಿ ಮುನ್ನಡೆದಿದೆ. ಧರ್ಮ ರಕ್ಷಣೆ ಮತ್ತು ದೇಶದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಪಕ್ಷ ಬಿಜೆಪಿ. ಬಿಜೆಪಿ ನೇತೃತ್ವದ ಸರ್ಕಾರವನ್ನು ಮತ್ತೊಮ್ಮೆ ಆಡಳಿತಕ್ಕೆ ತರಬೇಕು.

ಗ್ರಾಮಾಂತರ ಕ್ಷೇತ್ರದಲ್ಲಿ ಕೆ.ಬಿ.ಅಶೋಕ ನಾಯ್ಕ ಅವರನ್ನು ಮತ್ತೊಮ್ಮೆ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಚುನಾವಣಾ ಉಸ್ತುವಾರಿ ಕುಲದೀಪ್ ಸಿಂಗ್ ಕುಮಾರ ಹೇಳಿದರು.

ಹಾರನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ರೋಡ್ ಶೋ ಸಂದರ್ಭದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಪಕ್ಷದ ಮುಖಂಡರು ಮಾತನಾಡಿದರು. ನಂತರ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕ ನಾಯ್ಕ್ ಮಾತನಾಡಿ, ಐದು ವರ್ಷಗಳಲ್ಲಿ ಹಿಂದಿನ ಅವಧಿಗಳಲ್ಲಿ ಆಗದಷ್ಟು ಅಭಿವೃದ್ಧಿ ಕೆಲಸಗಳನ್ನು ನಡೆಸಲಾಗಿದೆ.
ಅಭಿವೃದ್ಧಿ ಎಂದರೆ ಬಿಜೆಪಿ, ಬಿಜೆಪಿಯೇ ಭರವಸೆ ಎಂದು ತಿಳಿಸಿದರು.

BJP Karnataka ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಗ್ರಾಮಾಂತರ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ಹೆಚ್ಚಿನ ಅನುದಾನವನ್ನು ಕ್ಷೇತ್ರಕ್ಕೆ ನೀಡಿದ್ದಾರೆ. ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಅವರ ನೆರವಿನಿಂದಲೂ ಕೋಟ್ಯಾಂತರ ರೂ. ಅನುದಾನ ಗ್ರಾಮಾಂತರ ಕ್ಷೇತ್ರಕ್ಕೆ ಲಭಿಸಿದೆ.

ಅಭಿವೃದ್ಧಿ ಪರ್ವ ನಿರಂತರವಾಗಿ ಮುಂದುವರೆಯಲು ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಹೆಚ್ಚಿನ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ರೋಡ್ ಶೋಗೂ ಮುನ್ನ ಚೌಕಿ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಗದ್ದುಗೆಗೆ ಭೇಟಿ ನೀಡಿದರು. ನಂತರ ಹಾರನಹಳ್ಳಿ ಶ್ರೀ ರಾಮಲಿಂಗೇಶ್ವರ ಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೋಡ್ ಶೋಗೆ ಚಾಲನೆ ನೀಡಲಾಯಿತು.

ಶಿವಮೊಗ್ಗ ಗ್ರಾಮಾಂತರ ಪ್ರವಾಸಿ ಪ್ರಭಾರಿ ಮುಖೇಶ್ ಸಿಂಗ್ ಕೋಲಿ, ಕ್ಷೇತ್ರ ಪ್ರಭಾರಿ ಎಸ್.ದತ್ತಾತ್ರಿ, ಮಂಡಲ ಅಧ್ಯಕ್ಷ ರತ್ನಾಕರ ಶೆಣೈ, ಚುನಾವಣಾ ಸಮಿತಿ ಸಂಚಾಲಕ ಸಿಂಗನಹಳ್ಳಿ ಸುರೇಶ್, ಶಿವಮೊಗ್ಗ ಗ್ರಾಮಾಂತರ ಅಭ್ಯರ್ಥಿ ಪ್ರಮುಖ್ ವೀರೂಪಾಕ್ಷಪ್ಪ, ಸ್ವರೂಪ್, ಜಗದೀಶ್, ತಮ್ಮಡಿಹಳ್ಳಿ ನಾಗರಾಜ್, ಸೌಮ್ಯ, ಹಾರನಹಳ್ಳಿ ಮಹಾಶಕ್ತಿ ಕೇಂದ್ರದ ರಮೇಶ್, ಕಿರಣ್, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.