Thursday, November 19, 2026
Thursday, November 19, 2026
Home Blog Page 1158

S.N.Chennabasappa ಹುಂಚದಲ್ಲಿ ಉಜ್ವಲಾ ಯೋಜನೆಯಡಿ ಉಚಿತ ಎಲ್ ಪಿ ಜಿ ಸಂಪರ್ಕ, ಗ್ಯಾಸ್ ಸ್ಟೋವ್ ವಿತರಣೆ

0

S.N.Chennabasappa ದೇಶದ ಜನರ ಆರ್ಥಿಕ ಸ್ಥಿತಿ ಸುಧಾರಿಸುವ ಸದುದ್ದೇಶ, ಕೇಂದ್ರ ಸರ್ಕಾರದ 78 ಮಹತ್ವಾಕಾಂಕ್ಷಿ ಯೋಜನೆಗಳನ್ನು ಪ್ರತಿ ಗ್ರಾಮ ಪಂಚಾಯಿತಿಗೆ ತಲುಪಿಸುವ ನಿಟ್ಟಿನಲ್ಲಿ ಹಾಗೂ 2047 ರ ಹೊತ್ತಿಗೆ ಭಾರತ ಆರ್ಥಿಕವಾಗಿ ಸದೃಢವಾಗಬೇಕೆಂಬ ಸಂಕಲ್ಪದೊಂದಿಗೆ ಪ್ರಧಾನಿ ಶ್ರೀನರೇಂದ್ರ ಮೋದಿ ಅವರು ಆರಂಭಿಸಿರುವ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಬೃಹತ್ ಅಭಿಯಾನಕ್ಕೆ ಶಿವಮೊಗ್ಗ ನಗರದ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಇಂದು ಜಿಲ್ಲೆಯ ಹುಂಚ ಗ್ರಾಮದಲ್ಲಿ ಚಾಲನೆ ನೀಡಿ, ಫಲಾನುಭವಿಗಳಿಗೆ ಉಜ್ವಲಾ ಯೋಜನೆಯಡಿ ಉಚಿತ ಎಲ್.ಪಿ.ಜಿ. ಸಂಪರ್ಕ, ಗ್ಯಾಸ್ ಸ್ಟೋವ್ ವಿತರಣೆ ಮಾಡಿದರು.

S.N.Chennabasappa ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯಿತಿಯ ಸದಸ್ಯರು ಸೇರಿದಂತೆ ಹಲವಾರು ಮುಖಂಡರು ಹಾಗೂ ಗ್ರಾಮಸ್ಥರು ‌ಉಪಸ್ಥಿತರಿದ್ದರು.

DIET Shivamogga ಶಿವಮೊಗ್ಗದಲ್ಲಿ ಗಣಿತ ಶಾಸ್ತ್ರ ಕಾರ್ಯಾಗಾರ

0

DIET Shivamogga ಡಯಟ್ ಶಿವಮೊಗ್ಗ ವತಿಯಿಂದ ಶಿಕ್ಷಕರು ಕಲಾಸಮಿಳತ ಗಣಿತ ಕಾರ್ಯಾಗಾರ ಹಾಗೂ ಗಣಿತ ಲ್ಯಾಬ್ ಅಭಿವೃದ್ದಿ ಸಂಬಂಧಿಸಿದ ಬೋಧನ ಕಲಿಕಾ ಸಾಮಾಗ್ರಿಗಳ (ಟಿ.ಎಲ್.ಎಂ) ಸಿದ್ದಪಡಿಸಿದರೊಂದಿಗೆ ರಾಷ್ಟೀಯ ದಿನಾಚರಣೆಯನ್ನು ಅಚರಿಸಲಾಯಿತು.

DIET Shivamogga ಕಾರ್ಯಾಗಾರ ಉದ್ಘಾಟನೆಯಲ್ಲಿ ಉಪನಿರ್ದೇಶಕರು ಬಸವರಾಜು ಬಿ.ಆರ್. ಹಿರಿಯಾ ಉಪನ್ಯಾಸಕರುಗಳಾದ ಪುಷ್ಫ ,ಡಯಾಟ್ ಶಿವಮೊಗ್ಗ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕರುಗಳಾದ ಬಿ.ಎಂ.ರಘು.ರಾಷ್ಟೀಯ ಪದವಿ ಪೂರ್ವ ಕಾಲೇಜು ಪೌಢಶಾಲಾ ವಿಭಾಗ ಹರ್ಷ ಎಸ್.ಕಿರಣ್‌ಕುಮಾರ್ ಉಪಸ್ಥಿತರಿದ್ದರು .

Tiger and Lion Safari Shivamogga ಹುಲಿ ಸಿಂಹ ಧಾಮಕ್ಕೆ ಜನವರಿ 26 ರಜೆ ಇರುವುದಿಲ್ಲ

0

Tiger and Lion Safari Shivamogga ತ್ಯಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಹುಲಿ-ಸಿಂಹಧಾಮದಲ್ಲಿನ ಝೂ ಮತ್ತು ಸಫಾರಿ ವೀಕ್ಷಣೆಯನ್ನು ದಿ: 26-12-2023 ರ ಮಂಗಳವಾರದಂದು ಸಹ ತೆರೆದಿರುತ್ತದೆ.

ಇದರ ಸದುಪಯೋಗವನ್ನು ಪ್ರವಾಸಿಗರು ಪಡೆದುಕೊಳ್ಳಬಹುದೆಂದು ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ

Kannada Sahitya Parishath ಕಸಾಪದ 2023-24 ನೇ ಸಾಲಿನ ಕಾವ,ಜಾಣ & ರತ್ನ ಪರೀಕ್ಷೆ ದಿನಾಂಕ ಪ್ರಕಟ

0

Kannada Sahitya Parishath ಕನ್ನಡ ಸಾಹಿತ್ಯ ಪರಿಷತ್ತಿನ 2023-24ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳು 2024ರ ಜನವರಿ 05, 06ಮತ್ತು 07 ದಿನಾಂಕಗಳಂದು ೩ ದಿನಗಳ ಕಾಲ ರಾಜ್ಯದ 20 ಕೇಂದ್ರಗಳಲ್ಲಿ ನಡೆಯಲಿವೆ.

ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರಗಳನ್ನು ಅಂಚೆ ಮೂಲಕ ಕಳುಹಿಸಲಾಗಿದ್ದು, ಈವರೆಗೂ ಪ್ರವೇಶ ಪತ್ರ ತಲುಪದಿರುವ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು ಇಲ್ಲಿ ವಿಚಾರಿಸಬಹುದಾಗಿದೆ.

Kannada Sahitya Parishath ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-26623584/ 26612991/ 26523867 / 8618296186 ಗಳನ್ನು ಸಂಪರ್ಕಿಸಿ ಅಥವಾ ಅಂತರ್ಜಾಲ ತಾಣದ ಮೂಲಕ ಪಡೆದುಕೊಳ್ಳಬಹುದಾಗಿದೆ ಎಂದು ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮನಿ ನಾಗರಾಜು ತಿಳಿಸಿದ್ದಾರೆ.

Department of Health and Family Welfare ಚಿಕ್ಕಮಗಳೂರಿನಲ್ಲಿ ಜವೇರಿಯಾ ಉಚಿತ ಆಂಬುಲೆನ್ಸ್ ಸೇವೆಗೆ ಚಾಲನೆ

0

Department of Health and Family Welfare ಚಿಕ್ಕಮಗಳೂರು ನಗರದ ಉಪ್ಪಳ್ಳಿ ಸಮೀಪದಲ್ಲಿ ಜವೇರಿಯಾ ಉಚಿತ ಅಂಬುಲೆನ್ಸ್ 24×7 ವಾಹನಗಳ ಸೇವೆಗೆ ಜಾಮೀಯಾ ಮಸೀದಿ ಅಧ್ಯಕ್ಷ ಝಮೀರ್ ಅಹ್ಮದ್ ಅಧಿಕೃತವಾಗಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಝಮೀರ್ ಅಹ್ಮದ್ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ಸೇವೆ ನೀಡುತ್ತಿರುವ ಅಂಬುಲೆನ್ಸ್ ಮಾಲೀಕರ ಕೆಲಸ ಸ್ಮರಣೀಯವಾಗಿದೆ. ಎಲ್ಲಾ ಧರ್ಮದ ಬಡ ಹಾಗೂ ಹಿಂದುಳಿದವರಿಗೂ ನಗರ ವ್ಯಾಪ್ತಿಯಲ್ಲಿ ಉಚಿತವಾಗಿ ಸೇವೆ ನೀಡಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿರುವುದು ಹೆಮ್ಮೆಯ ಸಂಗತಿ ಎಂದರು.

ಅದೇ ರೀತಿಯಲ್ಲಿ ಅಂಬುಲೆನ್ಸ್ ಚಾಲಕರುಗಳು ತುರ್ತು ಸಂದರ್ಭದಲ್ಲಿ ಪ್ರಾಣದಹಂಗು ತೊರೆದು ವಾಹನ ಚಲಾಯಿಸುತ್ತಿರುವುದರಿಂದ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದಿಂದ ಸವಲತ್ತುಗಳನ್ನು ಒದಗಿಸಿದರೆ ಬಹಳಷ್ಟು ಅನುಕೂಲವಾಗಲಿದೆ ಜೊತೆಗೆ ಉಚಿತ ಇನ್ಸೂರೆನ್ಸ್ ಸೇವೆ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

Department of Health and Family Welfare ಕಾಂಗ್ರೆಸ್ ಯುವ ಮುಖಂಡ ಶಹಬುದ್ದೀನ್ ಮಾತನಾಡಿ ದಿನನಿತ್ಯದ ವ್ಯಾಪಾರ ಜೊತೆಗೆ ಅತ್ಯಧಿಕ ತಂತ್ರ ಜ್ಞಾನ ವ್ಯವಸ್ಥೆಯುಳ್ಳ ಎರಡು ಉಚಿತ ಅಂಬುಲೆನ್ಸ್ ವಾಹನಗಳನ್ನು ನೀಡಿರುವುದು ಒಳಿತು. ಆ ನಿಟ್ಟಿನಲ್ಲಿ ಇಂದಿನ ಯುವಪೀಳಿಗೆ ಮಾದಕ ವ್ಯಸನಿಗಳಾಗಿ ಯೌವ್ವಳ ಹಾಳು ಗೆಡುವ ಬದಲು ಇಂತಹ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿ ಸಮಾಜಕ್ಕೆ ಮಾದರಿಯಾಗಿ ಬದುಕಬೇಕು ಎಂದು ತಿಳಿಸಿದರು.

ಅಂಬುಲೆನ್ಸ್ ವಾಹನ ಮಾಲೀಕ ಮಹ್ಮದ್ ಜುನೇದ್ ಮಾತನಾಡಿ ಕಳೆದ ಕೆಲ ವರ್ಷಗಳ ಹಿಂದೆ ತಮ್ಮ ಮಗಳು ಸಮಯಕ್ಕೆ ಅಂಬುಲೆನ್ಸ್ ಸೇವೆ ದೊರೆಯದ ಹಿನ್ನೆಲೆಯಲ್ಲಿ ಮೃತರಾಗಿದ್ದು ಆ ಮಗುವಿನ ಸ್ಮರಣಾರ್ಥ ಜವೇರಿಯಾ ಎಂಬ ಹೆಸರಿನಲ್ಲಿ ನಗರ ವ್ಯಾಪ್ತಿಯಲ್ಲಿ 05 ಕಿ.ಮೀ.ವರೆಗೂ ಉಚಿತ ಸೇವೆ ನೀಡಲಾಗುತ್ತಿದೆ. ಅದಲ್ಲದೇ ತೀರಾ ಕಡುಬಡವರಿಗೆ ಸಂಪೂರ್ಣ ಉಚಿತ ಸೇವೆ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಅಕ್ರಮ್, ತೇಜಸ್‌ಕುಮಾರ್ ಚಾಲಕರಾದ ಅಬ್ರಾಜ್ , ಜುನೇದ್ ಅವರು ಉಪಸ್ಥಿತರಿದ್ದರು.

SP Shivamogga ಮಸರಹಳ್ಳಿ ರೈಲ್ವೆ ಮಾರ್ಗದಲ್ಲಿ ಅಪರಿಚಿತ ಶವ ಪತ್ತೆ- ಪೊಲೀಸ್ ಮಾಹಿತಿ

0

SP Shivamogga ಭದ್ರಾವತಿ – ಮಸರಹಳ್ಳಿ ರೈಲ್ವೆ ಮಾರ್ಗದಲ್ಲಿ ಸುಮಾರು 50 ರಿಂದ 55 ವರ್ಷದ ಅಪರಿಚಿತ ಪುರುಷ ರೈಲಿಗೆ ಸಿಕ್ಕು ಮೃತಪಟ್ಟಿರುತ್ತಾರೆ.

ಈತನ ಚಹರೆ ಸುಮಾರು 5.5 ಅಡಿ ಎತ್ತರ, ಸಾಧಾಕಪ್ಪು ಮೈ ಬಣ್ಣ, ತಲೆಯಲ್ಲಿ 2 ಇಂಚು ಕಪ್ಪು ಕೂದಲು ಬಿಟ್ಟಿದ್ದು, ಅರ್ಧ ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ಗಡ್ಡ, ಮೀಸೆ ಇರುತ್ತದೆ.

ಒಂದು ಕೆಂಪು ಬಣ್ಣದ ಕಪ್ಪು ಚುಕ್ಕೆಯುಳ್ಳ ಸ್ವೇಟರ್, ಒಂದು ಬಿಳಿ ಬಣ್ಣದ ಕಪ್ಪು ಗೆರೆಯುಳ್ಳ ಉದ್ದ ತೋಳಿನ ಶರ್ಟ್, ಸಿಮೆಂಟ್ ಕಲರ್ ಪ್ಯಾಂಟ್, ಒಂದು ಬಣ್ಣದ ಉಡುದಾರ, ಕಪ್ಪು ಬಣ್ಣದ ಚಪ್ಪಲಿಗಳು ಮತ್ತು ಕೆಂಪು, ಬಿಳಿ ಬಣ್ಣದ ಟವೆಲ್ ಧರಿಸಿರುತ್ತಾರೆ.

SP Shivamogga ಮೃತನ ದೇಹವು ಮೆಗ್ಗಾನ್ ಆಸ್ಪತ್ರೆಯ ಶೈತ್ಯಾಗಾರದಲ್ಲಿರುತ್ತದೆ.
ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ದೂ.ಸಂ.08182-222974, 9480802124 ನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ

Mathematician Srinivasa Ramanujam ಗಣಿತದ ವಿಶ್ಲೇಷಣೆಗೆ ರಾಮಾನುಜನ್ ಕೊಡುಗೆ ಅಪೂರ್ವ-ಕೇಶವಮೂರ್ತಿ

0

Mathematician Srinivasa Ramanujam ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜಂ ಜನ್ಮದಿನ ಹಾಗೂ ರಾಷ್ಟ್ರೀ ಯ ಗಣಿತ ದಿನದ ಅಂಗವಾಗಿ ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿಯ ಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿ ಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗಾಗಿ ಗಣಿತ ಮೆಟ್ರಿಕ್ ಮೇಳವನ್ನು ಆಯೋಜಿಸಲಾಗಿತ್ತು.

ಈ ವೇಳೆ ಶಾಲೆಯ ಮುಖ್ಯ ಶಿಕ್ಷಕ ಕೇಶವಮೂರ್ತಿ ಮಾತನಾಡಿ ಬಾಣೂರು ಕ್ಲಸ್ಟರ್ ಬೀರೂರು ವಲಯದ ಸಹಯೋಗದಲ್ಲಿ ಇಂದು ಶಾಲೆಯಲ್ಲಿ ಗಣಿತ ಮೆಟ್ರಿಕ್ ಮೇಳ ಆಯೋಜಿಸಿ ಮಕ್ಕಳಿಗೆ ಗಣಿತ ಸಂಬಂಧಿತ ವ್ಯವಹಾರಿಕ ಜ್ಞಾನವನ್ನು ಮೂಡಿಸುವ ಕಾರ್ಯಕ್ಕೆ ಕೈಹಾಕಲಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಗಣಿತ ದಿನವನ್ನು ಪ್ರತಿ ವರ್ಷ ಡಿ.22ರಂದು ಆಚರಿಸಲಾಗುತ್ತಿದೆ. ಈ ಕ್ಷೇತ್ರಕ್ಕೆ ಗಣನೀಯ ಸೇವೆ ನೀಡಿದ ಗಣಿತತಜ್ಞ ಶ್ರೀನಿವಾಸ್ ರಾಮಾನುಜನ್ ಅವರ ಜನ್ಮದಿನದ ಹಿನ್ನೆಲೆ ಈ ದಿನವನ್ನು ಆಚರಿಸಲಾಗುತ್ತಿದೆ.
ಸಂಖ್ಯಾ ಸಿದ್ದಾಂತ, ಇನ್ಪಿನಿಟಿ ಸಿರೀಸ್, ಗಣಿತದ ವಿಶ್ಲೇಷಣೆಗೆ ಅವರ ಕೊಡುಗೆಗಳು ಪ್ರಮುಖವಾಗಿದೆ ಎಂದರು.

ಮೂಲತಃ ತಮಿಳುನಾಡಿನ ಈರೋಡ್‌ನಲ್ಲಿ ಜನಿಸಿದ ರಾಮಾನುಜನ್ ಅವರು ಬಾಲ್ಯವ್ಯವಸ್ಥೆಯಲ್ಲಿಯೇ ಗಣಿತದ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದರು. ಆರೋಗ್ಯ ಸವಾಲು ಮತ್ತು ಸಾಂಪ್ರದಾಯಿಕ ತರಬೇತಿಯ ಕೊರತೆ ನಡುವೆಯೂ ಈ ಕ್ಷೇತ್ರದಲ್ಲಿ ಅವರು ಛಾಪು ಮೂಡಿಸಿದವರು ಎಂದು ತಿಳಿಸಿದರು.

Mathematician Srinivasa Ramanujam ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಮಮತ ಮಾತನಾಡಿ ಪ್ರತಿ ಮನುಷ್ಯನಿಗೂ ಗಣಿತದ ಲೆಕ್ಕಚಾರ ಅತಿಮು ಖ್ಯವಾಗಿದೆ. ಇದರಿಂದ ಆರ್ಥಿಕವಾಗಿ ಮುಂದುವರೆಯಲು ಸಾಧ್ಯ ಎಂದ ಅವರು ಆ ನಿಟ್ಟಿನಲ್ಲಿ ಗಣಿತ ವಿಷಯದ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ವಹಿಸಿದರೆ ಲೆಕ್ಕಚಾರ ವಿಚಾರದಲ್ಲಿ ಎಂದಿಗೂ ಹಾದಿ ತಪ್ಪುವುದಿಲ್ಲ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಹೆಚ್.ಎಂ.ಜಯಪ್ಪ, ಸದಸ್ಯರುಗಳಾದ ಮಹೇಂದ್ರ, ಕುಮಾರ್, ಗ್ರಾಮಸ್ಥರಾದ ಕಲ್ಮರುಡಪ್ಪ, ಮಹೇಶ್ವರಪ್ಪ, ಚಿದಾನಂದ್, ಮೂರ್ತಿ ಹಾಗೂ ಶಾಲೆಯ ಸಹ ಶಿಕ್ಷಕ ಹಾಲಪ್ಪ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Shivamogga Police ಮುಂಜಾಗ್ರತೆ ಮೂಲಕ ಅಪರಾಧ ತಡೆಗಟ್ಟಬಹುದು- ಅನಿಲ್ ಕುಮಾರ್ ಭೂಮರೆಡ್ಡಿ

0

Shivamogga Police ಸಾರ್ವಜನಿಕರು ಮುಂಜಾಗ್ರತೆ ವಹಿಸುವ ಮೂಲಕ ಮುಂಬರುವ ಅನೇಕ ಅಪರಾಧಗಳನ್ನು ತಡೆಯಬಹುದು. ಆದ್ದರಿಂದ ಯಾರೇ ಅಪರಿಚಿತರೊಂದಿಗೆ ವ್ಯವಹರಿಸುವಾಗ ಒಂದು ಕ್ಷಣ ಯೋಚಿಸಿ ಎಚ್ಚರಿಕೆಯಿಂದ ಇರಬೇಕೆಂದು ಎಎಸ್‍ಪಿ ಅನಿಕುಮಾರ್ ಭೂಮರಡ್ಡಿ ತಿಳಿಸಿದರು.

ಜಿಲ್ಲಾ ಪೊಲೀಸ್ ಮತ್ತು ಜಯನಗರ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಚಾರಣೆ ಅಂಗವಾಗಿ ಡಿ.20 ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಅವಸರವೇ ಅನಾಹುತಕ್ಕೆ ಕಾರಣವಾಗುತ್ತದೆ. ಇತ್ತೀಚೆಗೆ ಸರಗಳ್ಳತನ, ಮನೆಗೆ ಬಂದು ಬಂಗಾರ ಇತರೆ ಬೆಲೆ ಬಾಳುವ ವಸ್ತುವನ್ನು ಪಾಲಿಶ್ ಮಾಡುವುದಾಗಿ ಹೇಳಿ ಬರುವುದು ಸೇರಿದಂತೆ ಅನೇಕ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು.

ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಅಪರಾಧದ ಸ್ವರೂಪ ಕೂಡ ಹೊಸ ಆಯಾಮದಲ್ಲಿ ಬದಲಾಗುತ್ತಿದೆ. ವರ್ಚುವಲ್ ಜಗತ್ತಿನ ಮೂಲಕ ಸೈಬರ್ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿವೆ. ಆದ್ದರಿಂದ ಜನರು ಅತಿ ಎಚ್ಚರಿಕೆಯಿಂದ ಇರಬೇಕು.
ಸಾರ್ವಜನಿಕರು ಒಂದಕ್ಕಿಂತ ಹೆಚ್ಚು ದಿವಸ ಮನೆಗೆ ಬೀಗಹಾಕಿಕೊಂಡು ಹೋಗುವಾಗ ಸ್ಥಳೀಯ ಪೋಲೀಸ್ ಠಾಣೆಗೆ ಮಾಹಿತಿ ನೀಡುವುದು ಹಾಗೂ ಬೆಲೆ ಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್‍ನಲ್ಲಿ ಇಡುವುದು.

ಮನೆಯಿಂದ ಹೊರಗೆ ಹೋಗುವಾಗ ಬಾಗಿಲಿಗೆ ಟಾಪ್‍ಲಾಕ್‍ನ್ನು ಹಾಕುವ ಬದಲು ಇಂಟರ್‍ಲಾಕ್ ಮಾಡುವುದು ಹಾಗೂ ಹಾಲಿನವರಿಗೆ, ಪೇಪರ್ ಹಾಕುವವರಿಗೆ ಮನೆಯಿಂದ ಹೊರಗೆ ಹೋಗುವಾಗ ಪೇಪರ್ ಮತ್ತು ಹಾಲು ಹಾಕದಂತೆ ತಿಳಿಸುವುದು.

ಮನೆಯ ಕಿಟಕಿಯ ಪಕ್ಕದಲ್ಲಿ ಬೆಲೆಬಾಳುವ ವಸ್ತುಗಳನ್ನು ಇಡದಂತೆ ಎಚ್ಚರ ವಹಿಸುವುದು. ಹೆಂಗಸರು ಒಬ್ಬಂಟಿಯಾಗಿ ರಸ್ತೆಯಲ್ಲಿ ಓಡಾಡುವ ಸಮಯದಲ್ಲಿ ಕುತ್ತಿಗೆಯಲ್ಲಿನ ಬಂಗಾರದ ಆಭರಣಗಳು ಹೊರಗೆ ಎದ್ದುಕಾಣದಂತೆ ಮುಂಜಾಗ್ರತೆ ವಹಿಸುವುದು.

ಸಾರ್ವಜನಿಕರು ತಮ್ಮ ದಾಖಲಾತಿ ಹಾಗೂ ಮೊಬೈಲ್ ಇನ್ನಿತರೆ ವಸ್ತುಗಳನ್ನು ಕಳೆದುಕೊಂಡಾಗ ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಕೆಎಸ್‍ಪಿ ಆಪ್ ಡೌನ್‍ಲೋಡ್ ಮಾಡಿಕೊಂಡು ಇ-ಲಾಸ್ಟ್ ಕಂಪ್ಲೇಂಟ್ ರಿಜಿಸ್ಟರ್ ಮಾಡಿಕೊಳ್ಳುವುದು.

ಯಾವುದೇ ತುರ್ತು ಸಮಯದಲ್ಲಿ 112 ನಂಬರ್‍ಗೆ ಕರೆ ಮಾಡುವುದು. ರಸ್ತೆ ಸಂಚಾರದ ಸಮಯದಲ್ಲಿ ರಸ್ತೆ ಹಾಗೂ ಟ್ರಾಫಿಕ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು. ಜಾನುವಾರುಗಳನ್ನು ಸಾಕಿದ್ದಲ್ಲಿ ಅವುಗಳ ರಕ್ಷಣೆಗೆ ಕೊಟ್ಟಿಗೆ ಸುತ್ತ ಬೆಳಕಿನ ಹಾಗೂ ಮನೆಯಲ್ಲಿ ನೋಡಿದರೆ ಕಾಣುವ ಹಾಗೆ ನೋಡಿಕೊಳ್ಳುವುದು.

Shivamogga Police ಸಾಧ್ಯವಾದಷ್ಟು ತಮ್ಮ ಮನೆಗಳಿಗೆ ಹಾಗೂ ಅಂಗಡಿಗಳಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದು.
ಬ್ಯಾಂಕ್ ಅಧಿಕಾರಿ, ಬ್ಯಾಂಕ್ ಮ್ಯಾನೇಜರ್ ಎಂದು ತಿಳಿಸಿ ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ ಎಂದು ಪೋನ್ ಮಾಡಿ.
ಕಾರ್ಡ್ ನಂ/ಸಿವಿವಿ ನಂ/ಓಟಿಪಿ ಅನ್ನು ಪಡೆದು ಮೋಸ ಮಾಡುವವರ ಬಗ್ಗೆ ಎಚ್ಚರ ಇರಲಿ, ಯಾರಿಗೂ ಯಾವುದೇ ಕಾರಣಕ್ಕೂ ಓಟಿಪಿ ಅನ್ನು ನೀಡಬೇಡಿ. ಪ್ಲೇಸ್ಟೋರ್‍ನಲ್ಲಿ ಸಿಗುವ ಆಪ್‍ಗಳೆಲ್ಲ ಅಧಿಕೃತವಲ್ಲ. ನಕಲಿ ಆಪ್‍ಗಳ ಮೂಲಕ ಪಾರ್ಟ್ ಟೈಮ್ ಜಾಬ್ ನೀಡುವುದಾಗಿ, ಆನ್‍ಲೈನ್ ಲೋನ್ ತೆಗೆಯುವುದಾಗಲಿ, ಸೋಲಾರ್/ಎನರ್ಜಿ/ಅಮೇಜಾನ್ ಮುಂತಾದ ಮೋಸದ ಆಪ್ ಬಳಕೆ ಮೂಲಕ ಹಣ ಹೂಡಿಕೆ ಮಾಡಿ ಮೋಸ ಹೋಗಬೆಡಿ.

ಕೌನ್ ಬನೇಗಾ ಕರೋಡ್‍ಪತಿ/ ಬಾರಿ ಮೊತ್ತದ ಲಾಟರಿ/ ದಿನಪತ್ರಿಕೆ/ ಟಿವಿ ಮಾಧ್ಯಮಗಳ ಮೂಲಕ ಜಾಹೀರಾತು ನೀಡಿ ಆಮಿಷಗಳ ಮೂಲಕ ಟ್ರಾನ್ಸ್‍ಪೋರ್ಟ್ ಫೀ ಇತ್ಯಾದಿ ಫೀಗಳೆಂದು ಅವರ ಖಾತೆಗಳಿಗೆ ಹಣ ಹಾಕಿಸಿಕೊಳ್ಳುವ ವಂಚಕರಿಂದ ದೂರವಿರಿ.

ಸಾರ್ವಜನಿಕರು ಸೈಬರ್ ಕ್ರೈಂಗೆ ಸಂಬಂಧಪಟ್ಟ ದೂರುಗಳನ್ನು ಆನ್‍ಲೈನ್ ಮೂಲಕವೂ ದಾಖಲಿಸಬಹುದಾಗಿದ್ದು ವೆಬ್‍ಸೈಟ್ ವಿಳಾಸ : www.cybercrime.gov.in ಮತ್ತು ಜಿಲ್ಲಾ ಪೆÇಲೀಸ್ ಕಂಟ್ರೋಲ್ ರೂಂ ನಂ.112/08182-261413, ಸಿ.ಇ.ಎನ್.ಕ್ರೈಂ ಪೆÇಲೀಸ್ ಠಾಣೆ ನಂ.08182-261426/9480803383 ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

New Bright Future International School ವಿದ್ಯಾರ್ಥಿ ದೆಸೆಯಲ್ಲಿ‌ ಕ್ರೀಡಾಸಕ್ತಿ ಮೈಗೂಡಿಸಿಕೊಳ್ಳಬೇಕು-ಯಶೋಧಾ ಚಂಗಪ್ಪ

0

New Bright Future International School ವಿದ್ಯಾರ್ಥಿದೆಸೆಯಲ್ಲೇ ಮಕ್ಕಳು ಕ್ರೀಡಾಸಕ್ತಿಯನ್ನು ಮೈಗೂಡಿಸಿಕೊಂಡರೆ ರಾಜ್ಯ ಹಾಗೂ ರಾಷ್ಟ್ಟಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ದೇಶದ ಕೀರ್ತಿಯನ್ನು ಗಗನದೆತ್ತರಕ್ಕೆ ಕೊಂಡೊಯ್ಯ ಬಹುದು ಎಂದು ನ್ಯಾಷನಲ್ ಕ್ರೀಡಾಪಟು ಯಶೋಧ ಚಂಗಪ್ಪ ಹೇಳಿದರು.

ಚಿಕ್ಕಮಗಳೂರು ನಗರದ ಕೋಟೆ ಸಮೀಪದ ನ್ಯೂ ಬ್ರೈಟ್ ಪ್ಯೂಚರ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾದಿನ ಕಾರ್ಯಕ್ರಮದಲ್ಲಿ ಶುಕ್ರವಾರ ಪಾಲ್ಗೊಂಡು ಅವರು ಮಾತನಾಡಿದರು.

ಕ್ರೀಡಾಸಕ್ತಿಯಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರತಿ ಮಕ್ಕಳು ದಿನ ನಿತ್ಯದ ಕೆಲವು ಸಮಯಗಳನ್ನು ಕ್ರೀಡಾಚಟುವಟಿಕೆಗಳಿಗೆ ಮೀಸಲಿಡಬೇಕು. ಜೊತೆಗೆ ಉತ್ತಮವಾಗಿ ಅಭ್ಯಾಸಿಸಿದರೆ ಉನ್ನತ ಸಾಧನೆಗೈದು ಜಿಲ್ಲೆಯನ್ನು ಹೆಸರನ್ನು ಉಳಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಶತತ ಪ್ರಯತ್ನದಿಂದ ಕ್ರೀಡಾಲೋಕದಲ್ಲಿ ಪಾಲ್ಗೊಂಡರೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಸ್ಪರ್ಧಿಸಲು ಅವ ಕಾಶ ಲಭಿಸಲಿದ್ದು ಇಂತಹ ಅವಕಾಶಗಳಿಂದ ಮಕ್ಕಳು ವಂಚಿತರಾಗದೇ ಸದ್ಬಳಕೆ ಮಾಡಿಕೊಂಡು ಕ್ರೀಡಾ ಜಗತ್ತಿನಲ್ಲಿ ಮರೆಯಲಾಗದ ಅನುಭವ ಹಾಗೂ ಯಶಸ್ಸು ಗಳಿಸಬಹುದು ಎಂದು ತಿಳಿಸಿದರು.

New Bright Future International School ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಪರಮೇಶ್ವರಪ್ಪ ಮಾತನಾಡಿ ಪಠ್ಯದ ಜೊತೆಗೆ ಕ್ರೀಡಾಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಇದರಿಂದ ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದ ಅವರು ವಿದ್ಯೆ ಸಮಾಜದಲ್ಲಿ ಹೇಗೆ ವ್ಯವಹರಿಸುವುದನ್ನು ತಿಳಿಸಿದರು.

ಕ್ರೀಡೆ ಇಡೀ ಜೀವನವನ್ನು ಆರೋಗ್ಯದಿರಲು ಸೂಚಿಸುತ್ತದೆ ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಪ್ರಾಂಶುಪಾಲೆ ಚಂದ್ರಪ್ರಭ ಮಕ್ಕಳಿಗೆ ಪಠ್ಯದ ಜೊತೆಗೆ ಕ್ರೀಡಾಚಟುವಟಿಕೆ ರೂಪಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಶಾಲೆ ಮಾಡುತ್ತಿದೆ. ಜೊತೆಗೆ ನ್ಯಾಷ ನಲ್ ಕ್ರೀಡಾಪಟುಗಳು ಕರೆಸಿ ತರಬೇತಿ ನೀಡಿ ಶೈಕ್ಷಣಿಕ ಬೆಳವಣಿಗೆಗೆ ಸಹಕರಿಸಲಾಗುತ್ತಿದೆ ಎಂದರು.

ಇದೇ ವೇಳೆ ನಗರ ಸಮೀಪದ ವಿದ್ಯಾರ್ಥಿ ಉತ್ಸವ ಎಂಬುವವರು ರನ್ನಿಂಗ್‌ರೇಸ್‌ನಲ್ಲಿ ರಾಷ್ಟ್ಪಮಟ್ಟಕ್ಕೆ ಆಯ್ಕೆ ಗೊಂಡ ಹಿನ್ನೆಲೆಯಲ್ಲಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನ್ಯಾಷನಲ್ ಕ್ರೀಡಾಪಟು ಛಾರ್ವಿ, ಶಾಲೆಯ ಕಾರ್ಯದರ್ಶಿ ಶ್ರೀನಿವಾಸ್, ಸಂಯೋಜಕ ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು

Kisan Divas ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ನೆನಪಿನ ರೈತರ ದಿನಾಚರಣೆ

0

Kisan Divas ಪ್ರತಿ ವರ್ಷ ಭಾರತದಲ್ಲಿ ಡಿಸೆಂಬರ್ 23 ರಂದು ರೈತರ ದಿನ ಅಥವಾ ಕಿಸಾನ್ ದಿವಸ್ ಅನ್ನು ಆಚರಿಸಲಾಗುತ್ತದೆ. ರೈತರು ದೇಶದ ಆರ್ಥಿಕತೆಯ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ.

ರೈತರ ಪ್ರಾಮುಖ್ಯತೆಯ ಅರಿವು ಮತ್ತು ರಾಷ್ಟ್ರದ ಒಟ್ಟಾರೆ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅವರ ಅಮೂಲ್ಯ ಕೊಡುಗೆಯನ್ನು ಉತ್ತೇಜಿಸುವ ಗುರಿಯನ್ನು ಕಿಸಾನ್ ದಿವಸ್ ಹೊಂದಿದೆ.

ರಾಷ್ಟ್ರೀಯ ರೈತರ ದಿನವು ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ಮಧ್ಯಪ್ರದೇಶ ಸೇರಿದಂತೆ ಭಾರತದ ಕೃಷಿ ಮತ್ತು ಕೃಷಿ ರಾಜ್ಯಗಳಲ್ಲಿ ಜನಪ್ರಿಯವಾಗಿದೆ.

ರಾಷ್ಟ್ರೀಯ ಆರ್ಥಿಕತೆ ಮತ್ತು ಭಾರತದ ನಾಗರಿಕರು ದೇಶದ ಅಭಿವೃದ್ಧಿಯನ್ನು ಉಳಿಸಿಕೊಳ್ಳಲು ರೈತರ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.
ಭಾರತವನ್ನು ಹಳ್ಳಿಗಳು ಮತ್ತು ಕೃಷಿ ಹೆಚ್ಚುವರಿಗಳ ದೇಶ ಎಂದು ಕರೆಯಲಾಗುತ್ತದೆ. ಅಲ್ಲದೆ, ಸುಮಾರು 70% ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಮತ್ತು ದೇಶದ ಬಹುಪಾಲು ಗ್ರಾಮೀಣ ಜನಸಂಖ್ಯೆಯನ್ನು ಹೊಂದಿದ್ದಾರೆ. 2001 ರಲ್ಲಿ , ಹತ್ತನೇ ಸರ್ಕಾರವು ಚೌಧರಿ ಚರಣ್ ಸಿಂಗ್ ಅವರ ಕೃಷಿ ಕ್ಷೇತ್ರ ಮತ್ತು ರೈತರ ಕಲ್ಯಾಣಕ್ಕೆ ಅವರ ಕೊಡುಗೆಯನ್ನು ಗುರುತಿಸಲು ಅವರ ಜನ್ಮದಿನವನ್ನು ಕಿಸಾನ್ ದಿವಸ್ ಎಂದು ಆಚರಿಸಲು ನಿರ್ಧರಿಸಿತು. ಅಂದಿನಿಂದ ಡಿಸೆಂಬರ್ 23 ಅನ್ನು ರಾಷ್ಟ್ರೀಯ ರೈತರ ದಿನವನ್ನಾಗಿ ಆಚರಿಸಲಾಗುತ್ತಿದೆ. ರೈತರ ಪಾತ್ರ ಮತ್ತು ಆರ್ಥಿಕತೆಗೆ ಅವರ ಕೊಡುಗೆಯ ಕುರಿತು ಜನರಿಗೆ ಶಿಕ್ಷಣ ನೀಡಲು ದೇಶಾದ್ಯಂತ ಜಾಗೃತಿ ಅಭಿಯಾನಗಳು ಮತ್ತು ಡ್ರೈವ್‌ಗಳನ್ನು ಆಯೋಜಿಸುವ ಮೂಲಕ ಇದನ್ನು ಸಾಮಾನ್ಯವಾಗಿ ಆಚರಿಸಲಾಗುತ್ತದೆ.

Kisan Divas ಶ್ರೀ ಚೌಧರಿ ಚರಣ್ ಸಿಂಗ್ ಅವರು 1902 ರಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ನೂರ್ಪುರದಲ್ಲಿ ರೈತ ಕುಟುಂಬದಲ್ಲಿ ಜನಿಸಿದರು.

ಕೃಷಿಕ ಕುಟುಂಬದಿಂದ ಬಂದ ಅವರು ಗ್ರಾಮೀಣ ಮತ್ತು ಕೃಷಿ ಅಭಿವೃದ್ಧಿಯ ಪ್ರತಿಪಾದಕರಾಗಿದ್ದರು. ಭಾರತದ ಯೋಜನೆಗಳ ಕೇಂದ್ರದಲ್ಲಿ ಕೃಷಿಯನ್ನು ಇರಿಸಲು ಅವರು ನಿರಂತರ ಪ್ರಯತ್ನಗಳನ್ನು ಮಾಡಿದರು.

ರೈತರ ಸಾಮಾಜಿಕ ಮತ್ತು ಆರ್ಥಿಕ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸುವುದು.
ರೈತರಿಗೆ ಅತ್ಯಂತ ನವೀಕೃತ ಕೃಷಿ ಜ್ಞಾನವನ್ನು ಒದಗಿಸಲು ಪ್ರಯತ್ನಿಸಲಾಗುವುದು ಈ ದಿನದ ಮಹತ್ವವಾಗಿದೆ.