Friday, June 20, 2025
Friday, June 20, 2025

DVS College ಪ್ರತಿ ಹೊಸ ತಂತ್ರಜ್ಞಾನ ರೂಪಿಸುವಲ್ಲಿ ಗಣಿತದ ಬಳಕೆ ಹೆಚ್ಚು-ರುದ್ರಪ್ಪ ಕೊಳಲೆ

Date:

DVS College ದೈನಂದಿನ ಜೀವನದಲ್ಲಿ ಗಣಿತವು ಅತ್ಯಂತ ಮುಖ್ಯ ಆಗಿದ್ದು, ಪ್ರತಿದಿನದ ಕಾರ್ಯ ಚಟುವಟಿಕೆಗಳಲ್ಲಿಯೂ ಗಣಿತವು ಒಳಗೊಂಡಿರುತ್ತದೆ. ಅಂಕಿ ಸಂಖ್ಯೆ ಹೊರತಾಗಿ ಯೋಚಿಸಲು ಸಾಧ್ಯವಿಲ್ಲ ಎಂದು ದೇಶಿಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಹೇಳಿದರು.

ಶಿವಮೊಗ್ಗ ನಗರದ ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಗಣಿತ ಶಾಸ್ತ್ರ ವಿಭಾಗದ ವತಿಯಿಂದ ಸಿಂಗಾರ ಸಭಾಂಗಣದಲ್ಲಿ ಆಯೋಜಿಸಿದ್ದ “ಗಣಿತವನ್ನು ಕಲಿಯುವುದು ಹೇಗೆ” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಂತ್ರಜ್ಞಾನದ ಯುಗದಲ್ಲಿ ಗಣಿತವು ತುಂಬಾ ಅವಶ್ಯಕತೆ ಇದ್ದು, ಪ್ರತಿ ಹೊಸ ತಂತ್ರಜ್ಞಾನ ರೂಪಿಸುವಲ್ಲಿ ಗಣಿತದ ಬಳಕೆಯು ಹೆಚ್ಚಿರುತ್ತದೆ. ಗಣಿತ ಇಲ್ಲದೇ ಏನು ಮಾಡಲು ಸಾಧ್ಯವಿಲ್ಲ. ಗಣಿತದ ಸಮರ್ಪಕ ಬಳಕೆಯಿಂದ ಹೊಸ ಹೊಸ ಅಪ್ಲಿಕೇಷನ್‌ಗಳನ್ನು ರಚಿಸಲಾಗುತ್ತದೆ ಎಂದು ತಿಳಿಸಿದರು.

ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ ಮಾತನಾಡಿ, ಜ್ಞಾನ ಕಲಿಕೆಯು ಜೀವನದಲ್ಲಿ ಉನ್ನತ ಸಾಧನೆಗಳನ್ನು ಸಾಧಿಸಲು ಪ್ರೇರಣೆ ಒದಗಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ನಿರಂತರ ಕಲಿಕೆಗೆ ಪ್ರಾಮುಖ್ಯತೆ ನೀಡಬೇಕು. ಗಣಿತ ವಿಷಯವು ಎಲ್ಲ ವಿಚಾರಗಳಲ್ಲಿಯೂ ಅಗತ್ಯ ಎಂದು ಅಭಿಪ್ರಾಯಪಟ್ಟರು.

ದೇಶಿಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್ ಮಾತನಾಡಿ, ಗಣಿತ ವಿಷಯ ಅರ್ಥ ಮಾಡಿಕೊಳ್ಳದೇ ಇರುವ ಕಾರಣ ಕಷ್ಟ ಎನಿಸುತ್ತದೆ. ಆದರೆ ಗಣಿತ ವಿಷಯವು ಕಷ್ಟವಲ್ಲ. ಗಣಿತ ಕಲಿಕೆಯು ಕಷ್ಟ ಎನ್ನುವ ಮನೋಭಾವ ಎಂದಿಗೂ ಬೆಳೆಸಿಕೊಳ್ಳಬಾರದು. ಗಣಿತ ಕಲಿಕೆಯು ಸುಲಭ ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.

ಉತ್ತರ ಕಂಪ್ಯೂಟರ್ಸ್ ನಿರ್ದೇಶಕ ಎಂ.ಎಲ್.ಶಿವರಾಮಕೃಷ್ಣ ಶಾಸ್ತ್ರಿ ಮಾತನಾಡಿ, ಗಣಿತ ವಿಷಯದಲ್ಲಿನ ಸರಳ ವಿಚಾರಗಳನ್ನು ಮೊದಲು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಗಣಿತ ವಿಚಾರದ ಅಂಶಗಳನ್ನು ಅರಿತುಕೊಂಡರೆ ಗಣಿತದ ಲೆಕ್ಕಗಳನ್ನು ಸುಲಭವಾಗಿ ಪರಿಹರಿಸಬಹುದಾಗಿದೆ. ಮಹತ್ವ ಹಾಗೂ ಉದ್ದೇಶವನ್ನು ಮೊದಲು ಕಲಿಯಬೇಕು ಎಂದು ತಿಳಿಸಿದರು.

DVS College ಡಿವಿಎಸ್ ಪದವಿಪೂರ್ವ ಸ್ವತಂತ್ರ ಕಾಲೇಜಿನ ಪ್ರಾಚಾರ್ಯ ಎ.ಇ.ರಾಜಶೇಖರ್ ಮಾತನಾಡಿದರು. ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕಿ ಎಂ.ಆರ್.ಸೀತಾಲಕ್ಷ್ಮೀ, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಎನ್.ಕುಮಾರಸ್ವಾಮಿ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಚಂದ್ರು.ಕೆ., ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga District Minority Welfare Department ವಿದ್ಯಾರ್ಥಿನಿಲಯಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ, ಅವಧಿ ವಿಸ್ತರಣೆ

Shivamogga District Minority Welfare Department ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ...

ರಾಜ್ಯ ಮಟ್ಟದ ಅಂಬೆಗಾಲು – 6 ಕಿರು ಚಿತ್ರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಶಿವಮೊಗ್ಗ ನಗರದ ಸಿನಿಮೊಗೆ - ಶಿವಮೊಗ್ಗ ಚಿತ್ರ ಸಮಾಜದ ವತಿಯಿಂದ...

MESCOM ಜೂ.21 ರಂದು ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ತಾಲ್ಲೂಕು, ಕುಂಸಿ ಗ್ರಾಮದ 110/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ...