Thursday, November 19, 2026
Thursday, November 19, 2026
Home Blog Page 1090

Bharatmala Project ಬೆಟ್ಟದಹಳ್ಳಿಯಿಂದ ಶಿವಮೊಗ್ಗ ವರೆಗೆ ಪ್ರಸರಣಗೋಪುರ ಕಾಮಗಾರಿ, ಜಾಗಗಳ ಮಾಲೀಕರಿಗೆ ತಿಳುವಳಿಕೆ ಮಾಹಿತಿ

0

Bharatmala Project ಭಾರತ್ ಮಾಲಾ ಪರಿಯೋಜನೆ ಅಡಿಯಲ್ಲಿ ಎನ್.ಹೆಚ್.206ಕ್ಕೆ ಸಂಬಂಧಿಸಿದಂತೆ ನಾಲ್ಕು ಪಥ ನಿರ್ಮಾಣ ಕಾಮಗಾರಿಯು ಬೆಟ್ಟದಹಳ್ಳಿಯಿಂದ ಶಿವಮೊಗ್ಗದವರೆಗೆ ನಿರ್ವಹಿಸಲು ಈಗಿರುವ 66 ಕೆವಿ., 110 ಕೆವಿ ಹಾಗೂ 220 ಕೆವಿ ಪ್ರಸರಣ ಗೋಪುರಗಳನ್ನು ಸ್ಥಳಾಂತರಿಸಲು/ಮಾರ್ಪಾಡಿಸಲು ಗೋಪುರಗಳ ಜಾಗಕ್ಕೆ ಸಂಬಂಧಿಸಿದ ಭದ್ರಾವತಿ ತಾಲೂಕು ಕಾರೇಹಳ್ಳಿ, ಆನೇಕೊಪ್ಪ, ಬುಳ್ಳಾಪುರ, ಉಜ್ಜನಿಪುರ, ಭಂಡಾರಹಳ್ಳಿ, ಜನ್ನಾಪುರ, ಕಡದಕಟ್ಟೆ ಹಾಗೂ ಜೇಡಿಕಟ್ಟೆ ಪ್ರದೇಶಗಳ ಭೂ ಮಾಲೀಕರು ಈ Bharatmala Project ಯೋಜನೆಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಉಪ ವಿಭಾಗಾಧಿಕಾರಿಗಳು ಹಾಗೂ ಭೂ ಸ್ವಾಧೀನಾಧಿಕಾರಿಗಳು, ಶಿವಮೊಗ್ಗ ವಿಭಾಗ ಇವರ ಕಚೇರಿಗೆ ಈ ಪ್ರಕಟಣೆ ಪ್ರಕಟವಾದ 7 ದಿನಗಳೋಳಗಾಗಿ ಲಿಖಿತವಾಗಿ ಸಲ್ಲಿಸುವಂತೆ ಉಪವಿಭಾಗಾಧಿಕಾರಿಗಳು ಹಾಗೂ ಭೂ ಸ್ವಾಧೀನಾಧಿಕಾರಿಗಳು ತಿಳಿಸಿದ್ದಾರೆ.

H.B.Manjunath ಸಂವಿಧಾನದ ಹಕ್ಕುಗಳ ಪ್ರಾಮುಖ್ಯತೆಯಷ್ಟೇ ಕರ್ತವ್ಯಕ್ಕೂ ಕೊಡಬೇಕು-ಎಚ್.ಬಿ.ಮಂಜುನಾಥ್

0

H.B.Manjunath ಸಂವಿಧಾನದತ್ತ ಹಕ್ಕುಗಳಿಗೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಕರ್ತವ್ಯಗಳಿಗೂ ಕೊಟ್ಟಲ್ಲಿ ಮಾತ್ರ ರಾಷ್ಟ್ರಾಭಿವೃದ್ಧಿ ಸಾಧ್ಯವಿದ್ದು ಕರ್ತವ್ಯ ಪ್ರಜ್ಞೆಯ ಜಾಗೃತಿ ಹಾಗೂ ಅನುಷ್ಠಾನಗಳು ಸುಸಂಸ್ಕೃತಿಯ ಲಕ್ಷಣಗಳು ಎಂದು ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ್ ಹೇಳಿದರು.

ದಾವಣಗೆರೆ ನಗರದ ಸರ್ಕಾರಿ ಮಾಜಿ ಪುರಸಭೆ ಪದವಿಪೂರ್ವ ಕಾಲೇಜಿನ ಕ್ರೀಡಾ ಸಾಂಸ್ಕೃತಿಕ ಎನ್ ಎಸ್ ಎಸ್ ಹಾಗೂ ಇಕೋ ಕ್ಲಬ್ ಚಟುವಟಿಕೆಗಳ ಸಮಾರೋಪ ಭಾಷಣ ಮಾಡುತ್ತಾ ಭಾರತದಲ್ಲಿರುವ ಯುವ ಸಂಪತ್ತಿನ ಅಗಾಧತೆ ಹಾಗೂ ಸಾಮರ್ಥ್ಯದ ಬಗ್ಗೆ ವಿಶ್ವವೇ ಗಮನಿಸುತ್ತಿದ್ದರೂ ನಮ್ಮ ಯುವಕ ಯುವತಿಯರಿಗೆ ಏಕೋ ಸ್ವಸಾಮರ್ಥ್ಯದ ಅರಿವಾಗುತ್ತಿಲ್ಲ, ಬದಲಾಗಿ ಮೊಬೈಲ್ ಘೀಳಿನಲ್ಲಿ ಕೊಚ್ಚಿ ಹೋಗುತ್ತಿದ್ದಾರೆ, ಯಾವುದೇ ಆಧುನಿಕ ತಂತ್ರಜ್ಞಾನ ಸಾಧನ ಸಲಕರಣೆಗಳು ಕೇವಲ ಮನರಂಜನೆಗೆ ಸೀಮಿತವಾದಲ್ಲಿ ಅಪಾಯ, ಬದಲಾಗಿ ವಿಧಾಯಕ ಕಾರ್ಯಗಳಿಗೆ ಬಳಕೆಯಾದಲ್ಲಿ ಮಾತ್ರ ಸಾರ್ಥಕತೆ, ಹೀಗೆ ಬಳಸುವುದೂ ಸುಸಂಸ್ಕೃತಿಯ ಲಕ್ಷಣ, ಐದು ಟ್ರಿಲಿಯನ್ ಡಾಲರ್ ಗಳ ಆರ್ಥಿಕ ಶಕ್ತಿಯಾಗುವಲ್ಲಿ ದಾಪುಗಾಲಿಡುತ್ತಿರುವ ಭಾರತದಲ್ಲಿ ವಿಪುಲ ಅವಕಾಶಗಳಿದ್ದು ಯುವ ಜನತೆ ಧೃತಿಗೆಡಬೇಕಾಗಿಲ್ಲ, ಶೈಕ್ಷಣಿಕ ಸಾಧನೆಗಳೊಂದಿಗೆ ಸಾಮಾನ್ಯ ಜ್ಞಾನವನ್ನೂ ವೃದ್ಧಿಸಿಕೊಂಡು ತಾವು ಬೆಳೆದು ದೇಶವನ್ನು ಬೆಳೆಸಬೇಕಿದೆ ಎಂದರಲ್ಲದೆ ಮುನ್ಸಿಪಲ್ ಹೈಸ್ಕೂಲಿನ ಸ್ಥಾಪನೆ, ಇದರ ಆವರಣದಲ್ಲಿ ನಡೆದ ಸ್ವಾತಂತ್ರ ಹೋರಾಟದ ರೋಚಕ ಘಟನೆ ಮುಂತಾದುವನ್ನು ವಿವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಹಮ್ಮದ್ ಅಯೂಬ್ ಪೈಲ್ವಾನ್ ರವರು ಬಡತನ ಸಹಜ ಆದರೆ ಪೋಷಕರ ತ್ಯಾಗ ಸರ್ಕಾರದ ಶೈಕ್ಷಣಿಕ ಸವಲತ್ತು ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಂಡು ದೇಶದ ಭವಿಷ್ಯವನ್ನೂ ರೂಪಿಸಬೇಕು ಎಂದರು.

H.B.Manjunath ಅರ್ಥಶಾಸ್ತ್ರ ಉಪನ್ಯಾಸಕ ಜಯ್ಯಪ್ಪನವರು ನಿರೂಪಿಸಿದ ಕಾರ್ಯಕ್ರಮದಲ್ಲಿ ವರ್ಷಿತಾ ಪ್ರಾರ್ಥನೆಯನ್ನು ಹಾಡಿದರೆ ಆಂಗ್ಲ ಭಾಷಾ ಉಪನ್ಯಾಸಕ ನೂರ್ ಅಹ್ಮದ್ ಸ್ವಾಗತ ಕೋರಿದರು. ಶಾಲಾ ವರದಿಯನ್ನು ಉಪನ್ಯಾಸಕಿ ಉಮಾದೇವಿ ವಾಚಿಸಿದರು. ಶೇಖ್ ಅಹಮದ್ ಮುಂತಾದ ಶಿಕ್ಷಕ ಶಿಕ್ಷಕಿಯರು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಸಂಜಯ್, ವರ್ಷಿತಾ ಮುಂತಾದವರು ಭಾಗವಹಿಸಿದ್ದು ವಂದನೆಗಳನ್ನು ಉಪನ್ಯಾಸಕಿ ಸುಮಿತ್ರಾರ ಅರ್ಪಿಸಿದರು. ಹೈಸ್ಕೂಲಿನ ಹಳೆಯ ವಿದ್ಯಾರ್ಥಿ ಪತ್ರಿಕಾ ಛಾಯಾಗ್ರಾಹಕ ವಿವೇಕ್ ಬದ್ಧಿ ಸಹಾ ಆಗಮಿಸಿದ್ದರು.

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಪ್ರಸ್ತುತಿಗಳು ನೆರವೇರಿದವು.

Karnataka Working Journalists Association ಖ್ಯಾತ ವ್ಯಂಗ್ಯಚಿತ್ರಗಾರ ದಾವಣಗೆರೆ ಮಂಜುನಾಥ್ ಗೆ ಸನ್ಮಾನ

0

Karnataka Working Journalists Association ಮಾಧ್ಯಮ ಕ್ಷೇತ್ರ ಹಾಗೂ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿನ ಸೇವೆ ಮತ್ತು ಸಾಧನೆಗಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಎಚ್
ಬಿ. ಮಂಜುನಾಥ್ ಅವರಿಗೆ 38ನೇ ರಾಜ್ಯ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Karnataka Working Journalists Association ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ದಾವಣಗೆರೆಯಲ್ಲಿ 03-02-2024 ರಂದು ಪ್ರಶಸ್ತಿ ಪ್ರದಾನ ಮಾಡುವಾಗ ಸಚಿವ ಶ್ರೀ ಎಸ್ ಎಸ್ ಮಲ್ಲಿಕಾರ್ಜುನ್ ಸಹಾ ಜೊತೆಗಿದ್ದರು.

Sumalatha Ambarish ಪ್ರಧಾನಿ ಭೇಟಿಯಿಂದ ಸಾರ್ವಜನಿಕ ಸೇವೆಗೆ ಮತ್ತಷ್ಟು ಸ್ಫೂರ್ತಿ ಸಿಕ್ಕಿದೆ- ಸಂಸದೆ ಸುಮಲತಾ

0

Sumalatha Ambarish ಪ್ರಧಾನಿ ಭೇಟಿಯಿಂದ ಸಾರ್ವಜನಿಕ ಸೇವೆಗೆ ಮತ್ತಷ್ಟು ಸ್ಫೂರ್ತಿ ಸಿಕ್ಕಿದೆ- ಸಂಸದೆ ಸುಮಲತಾ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು, ತಮ್ಮ ನಿರಂತರ ಕಾರ್ಯದೊತ್ತಡದ ನಡುವೆಯೂ ನನಗೆ ಸಮಯ ನೀಡಿದ್ದಕ್ಕಾಗಿ, ಭಾರತ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ
ಸನ್ಮಾನ್ಯ ಶ್ರೀ ನರೇಂದ್ರ ಮೋದಿರವರಿಗೆ ನನ್ನ ಧನ್ಯವಾದಗಳು ಎಂದು ಸುಮಲತಾ ಅಂಬರೀಶ್ ಅವರು ತಿಳಿಸಿದ್ದಾರೆ.

ಶ್ರೀ ನರೇಂದ್ರ ಮೋದಿರವರು ವಿಶ್ವದ ಮಹಾನ್ ನಾಯಕರಾಗಿದ್ದು, ಭಾರತದಂತಹ ಬೃಹತ್ ದೇಶವನ್ನು ಕಳೆದ ಹತ್ತು ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸುತ್ತಾ, ಭಾರತವನ್ನು ಮುಂದುವರೆದ ರಾಷ್ಟ್ರಗಳ ಸಾಲಿಗೆ ಸೇರಿಸಲು ಪಡುತ್ತಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ದೇಶದ ಅಭಿವೃದ್ಧಿ ಹಾಗೂ ದೇಶದ ಭವಿಷ್ಯದ ಬಗ್ಗೆ ನಿಮಗಿರುವ ದೂರದೃಷ್ಟಿಯನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಭಾರತ ದೇಶವು ಇಂದು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಸನ್ಮಾನ್ಯ ಪ್ರಧಾನ ಮಂತ್ರಿಗಳ ಸಮರ್ಥ ನಾಯಕತ್ವವೇ ಕಾರಣ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಈ ಕಾರಣದಿಂದಲೇ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ.
ತಮ್ಮನ್ನು ಭೇಟಿ ಮಾಡಿದ ಸಂಧರ್ಭದಲ್ಲಿ, ತಾವು ನೀಡಿದ ಪ್ರೋತ್ಸಾಹದಾಯಕ ಮಾತುಗಳು, ನಮ್ರತೆ, ಮತ್ತು ಗೌರವಕ್ಕೆ ನಾನು ಕೃತಜ್ಞಳಾಗಿದ್ದೇನೆ. ತಮ್ಮನ್ನು ಭೇಟಿ ಮಾಡಿದ ಆ ಕ್ಷಣಗಳು ನನ್ನನ್ನು ಸಾರ್ವಜನಿಕರ ಸೇವೆಯಲ್ಲಿ ಇನ್ನಷ್ಟು ಉತ್ಸಾಹದಿಂದ ತೊಡಗಿಸಿಕೊಳ್ಳಲು ಸ್ಫೂರ್ತಿಯಾಗಿದ್ದು, ನಿಮ್ಮ ಸಹಕಾರ ಮತ್ತು ಮಾರ್ಗದರ್ಶನಕ್ಕೆ ನಾನು ಹೃದಯಪೂರ್ವಕವಾಗಿ ಆಭಾರಿಯಾಗಿದ್ದೇನೆ ಎಂದಿದ್ದಾರೆ.

Sumalatha Ambarish ಪ್ರಧಾನಿ ಭೇಟಿಯಿಂದ ಸಾರ್ವಜನಿಕ ಸೇವೆಗೆ ಮತ್ತಷ್ಟು ಸ್ಫೂರ್ತಿ ಸಿಕ್ಕಿದೆ- ಸಂಸದೆ ಸುಮಲತಾ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿರುವ ನಿಮಗೆ, ನಮ್ಮ ದೇಶದ ಭವಿಷ್ಯದ ಬಗ್ಗೆ ಇರುವ ಪರಿಕಲ್ಪನೆ ಹಾಗೂ ದೂರದೃಷ್ಟಿ ನಮ್ಮ ದೇಶದ ಎಲ್ಲಾ ಭವಿಷ್ಯದ ಮಹತ್ವಾಕಾಂಕ್ಷಿ ನಾಯಕರಿಗೆ ಮಾದರಿಯಾಗಿದೆ. ಪ್ರಧಾನ ಮಂತ್ರಿಗಳಾಗಿ ಅಚಲವಾದ ಧೃಢತೆಯಿಂದ ಅದ್ಭುತವಾದ ನಾಯಕತ್ವದ ಗುಣಗಳೊಂದಿಗೆ ತಾವು ಸಲ್ಲಿಸಿದ ಅತ್ಯುತ್ತಮ ಸೇವೆ ಮತ್ತು ದೇಶಕ್ಕೆ ನೀಡಿದ ಆಡಳಿತವು ಭಾರತ ದೇಶದ ಇತಿಹಾಸದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ತಿಳಿಸಿದ್ದಾರೆ.

17ನೇ ಲೋಕಸಭೆಯ ಕೊನೆಯ ಅಧಿವೇಶನವು ಮುಕ್ತಾಯದ ಹಂತದಲ್ಲಿದ್ದು, ನಿಮ್ಮ ಅಧಿಕಾರಾವಧಿಯಲ್ಲಿ ಸಂಸತ್ ಸದಸ್ಯೆಯಾಗಿ ಸೇವೆ ಸಲ್ಲಿಸಿರುವುದು ನಿಜಕ್ಕೂ ನನ್ನ ಸೌಭಾಗ್ಯವಾಗಿದೆ.
ಈ ಬಾರಿಯ ತಮ್ಮ ಭೇಟಿ ಸಂಧರ್ಭದಲ್ಲಿ “ಮುಂದಿನ ದಿನಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರೆಸೋಣ” ಎಂಬ ನಿಮ್ಮ ಮಾತುಗಳು ನನಗೆ ಸ್ಪೂರ್ತಿದಾಯಕವಾಗಿದ್ದು, ವಿಶ್ವದ ಹೆಮ್ಮೆಯ ನಾಯಕರಾದ ತಮ್ಮ ಅಮೂಲ್ಯ ಮಾರ್ಗದರ್ಶನದಲ್ಲಿ ಜನರ ಸೇವೆ ಮಾಡಲು ಮತ್ತು ಭಾರತವನ್ನು ಮುಂದುವರೆದ ದೇಶಗಳ ಸಾಲಿನಲ್ಲಿ ನೋಡಲು ನಾನು ಉತ್ಸುಕಳಾಗಿದ್ದೇನೆ.
ಮಂಡ್ಯ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಆಸಕ್ತಿ ವಹಿಸಿ, ಉತ್ತಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಅನುದಾನವನ್ನು ಒದಗಿಸಿದ್ದಕ್ಕಾಗಿ ನನ್ನ ಮಂಡ್ಯ ಲೋಕಸಭಾ ಕ್ಷೇತ್ರದ ಸ್ವಾಭಿಮಾನಿ ಮತದಾರರು, ಕಾರ್ಯಕರ್ತರು, ನನ್ನ ಬೆಂಬಲಿಗರು ಮತ್ತು ಸಮಸ್ತ ಸಾರ್ವಜನಿಕರ ಪರವಾಗಿ, ಭಾರತ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಮುಂದಿನ ಅವಧಿಯಲ್ಲಿಯೂ ಸಹ, ನಮ್ಮ ರಾಜ್ಯ ಮತ್ತು ರಾಷ್ಟ್ರದ ಸೇವೆಯಲ್ಲಿ ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

B.Y.Raghavendra ಸಿಜಿಎಚ್ಎಸ್ ವೆಲ್ ನೆಸ್ ಸೆಂಟರ್ ಪ್ರಾರಂಭಕ್ಕೆ ಕೇಂದ್ರದ ತಾತ್ವಿಕ ಅನುಮೋದನೆ- ಸಂಸದ ರಾಘವೇಂದ್ರ

0

B.Y.Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರಾದ ಶ್ರೀ ಬಿ ವೈ ರಾಘವೇಂದ್ರರವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಮನ್ಸುಕ್ ಮಾಂಡವೀಯ ಇವರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರಿ ನೌಕರರ ಮತ್ತು ನಿವೃತ್ತ ನೌಕರರ ಕುಟುಂಬಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದ ಆರೋಗ್ಯ ಸೇವೆ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಸುಸರ್ಜಿತ ಕ್ಷೇಮ ಕೇಂದ್ರವನ್ನು (Central Government Health Scheme-Wellness Centre) ಕೂಡಲೇ ಆರಂಭಿಸಲು ಕಳೆದ 20.10.2022ರಲ್ಲಿ ಮನವಿ ಸಲ್ಲಿಸಿದ್ದಲ್ಲದೇ ಹಲವು ಬಾರಿ ವೈಯಕ್ತಿಕವಾಗಿ ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದರು.

ಮಾನ್ಯ ಸಂಸದರ ಮನವಿಗೆ ಸ್ಪಂದಿಸಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಸನ್ಮಾನ್ಯ ಶ್ರೀ ಡಾ. ಮನ್ಸುಕ್ ಮಾಂಡವೀಯರವರು ಕಳೆದ ಜನವರಿ 10 ರಂದು ಶಿವಮೊಗ್ಗದಲ್ಲಿ CGHS WELLNESS CENTRE ಸ್ಥಾಪಿಸಲು ಅಗತ್ಯವಿರುವ ಮೂಲಭೂತ ಸೌಕರ್ಯಗಳು ಮತ್ತಿತರೆ ಅಂಶಗಳ ಬಗ್ಗೆ ಕೂಲಂಕುಷವಾಗಿ ಸ್ಥಳಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಬೆಂಗಳೂರಿನ CGHS ನ ಹೆಚ್ಚುವರಿ ನಿರ್ಧೇಶಕರ ನೇತೃತ್ವದ ತಂಡವನ್ನು ರಚಿಸಿ ಕಳುಹಿಸಿಕೊಟ್ಟಿದ್ದರು.

ಅದರನ್ವಯ ಸದರಿ ತಂಡವು ಶಿವಮೊಗ್ಗಕ್ಕೆ ಬಂದಾಗ ಮಾನ್ಯ ಸಂಸದರೊಂದಿಗೆ ಹಲವು ಕಟ್ಟಡಗಳನ್ನು ವೀಕ್ಷಿಸಿ ಅಂತಿಮವಾಗಿ ಶರಾವತಿ ನಗರದಲ್ಲಿರುವ ಹಳೆಯ ಬಿ.ಎಸ್.ಎನ್.ಎಲ್. ಕಟ್ಟಡವನ್ನು ಆಯ್ಕೆ ಮಾಡಿ, ಶಿವಮೊಗ್ಗದಲ್ಲಿ CGHS wellness center ಸ್ಥಾಪನೆ ಮಾಡಲು ಶಿಫಾರಸ್ಸು ಮಾಡಿತ್ತು.ಅದರನ್ವಯ ಇದೀಗ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಸನ್ಮಾನ್ಯ ಶ್ರೀ ಡಾ. ಮನ್ಸುಕ್ ಮಾಂಡವೀಯರವರು ತಮ್ಮ ಪತ್ರ ಸಂಖ್ಯೆ: HFM/FTS/3530801/2024 ದಿನಾಂಕ: 05 ಫೆಬ್ರುವರಿ 2024ರ ಪತ್ರದ ಮೂಲಕ ಮಾನ್ಯ ಸಂಸದ ಶ್ರೀ ಬಿ.ವೈ. ರಾಘವೇಂದ್ರರವರಿಗೆ ಇಡೀ ದೇಶದಲ್ಲಿ ಪ್ರಾರಂಭಿಸಲಾಗುತ್ತಿರುವ 20 ನಗರಗಳ ಪೈಕಿ ವಿಶೇಷವಾಗಿ ಶಿವಮೊಗ್ಗದಲ್ಲಿಯೂ ಸಹ CGHS Wellness Centre ಪ್ರಾರಂಭಿಸಲು ತಾತ್ವಿಕ ಅನುಮೋದನೆಯನ್ನು ನೀಡಿರುವುದಾಗಿ ತಿಳಿಸಿದ್ದಾರೆ.

B.Y.Raghavendra ಇದರಿಂದಾಗಿ ಶಿವಮೊಗ್ಗ ಜಿಲ್ಲೆಯ 7518 ಹಾಗೂ ದಾವಣಗೆರೆ ಜಿಲ್ಲೆಯ 4888, ಚಿತ್ರದುರ್ಗ ಜಿಲ್ಲೆಯ 2079 ನೆರೆ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 14ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಬಿ.ಎಸ್.ಎನ್.ಎಲ್., ಪೋಸ್ಟಲ್, ಇನಕಂಟ್ಯಾಕ್ಸ್, ಪ್ರಾವಿಡೆಂಡ್ ಫಂಡ್, ಸೆಂಟ್ರಲ್ ಎಕ್ಸೈಸ್, ನಿವೃತ್ತ ಅರೆ ಸೇನಾ ಪಡೆ, ಕೇಂದ್ರೀಯ ವಿದ್ಯಾಲಯ, ರಾಷ್ಟ್ರೀಯ ರಕ್ಷಾ ಯೂನಿವರ್ಸಿಟಿ ಮತ್ತಿತರೆ ಕೇಂದ್ರ ಸರ್ಕಾರದ ನೌಕರರು ಹಾಗೂ ನಿವೃತ್ತ ನೌಕರರ ಮತ್ತು ಕುಟುಂಬವರ್ಗದವರುಗಳ ಕ್ಷೇಮಾಭಿವೃದ್ಧಿಯನ್ನು ಕಾಪಾಡಿಕೊಂಡು ಬರಲು ಈ ಒಂದು ಸುಸರ್ಜಿತ ಕ್ಷೇಮ ಕೇಂದ್ರದ (CGHS Wellness Centre) ಅತ್ಯಂತ ಉಪಯುಕ್ತವಾಗಲಿದೆ.

ಹಾಲಿ ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿರುವ ಕ್ಷೇಮ ಕೇಂದ್ರಗಳನ್ನು ಅವಲಂಬಿಸಿದ್ದ ಇವರುಗಳಿಗೆ ಶಿವಮೊಗ್ಗದಲ್ಲಿ ಪ್ರಾರಂಭವಾಗುತ್ತಿರುವ Wellness Center ಗೆ ಒಳಪಡುವ ಅನುಮತಿ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಔಷದೋಪಚಾರಗಳು ಉಚಿತವಾಗಿ ಮತ್ತು ತ್ವರಿತಗತಿಯಲ್ಲಿ ದೊರೆಯುತ್ತದೆ.

ಕೇಂದ್ರ ಸರ್ಕಾರಿ ನೌಕರರು ಮತ್ತು ನಿವೃತ್ತ ನೌಕರರ ಹಲವು ವರ್ಷಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೆರಿಸುತ್ತಿರುವುದಕ್ಕೆ ಸಮಸ್ತ ನೌಕರರು ಮತ್ತು ಅವರುಗಳ ಕುಟುಂಬ ವರ್ಗದವರ ಪರವಾಗಿ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದೀಜಿಯವರಿಗೆ ಮತ್ತು ವಿಶೇಷವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಡಾ. ಮನ್ಸುಕ್ ಮಾಂಡವೀಯರವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

BJP Shivamogga ಶಿವಮೊಗ್ಗದಲ್ಲಿ ಬಿಜೆಪಿಯಿಂದ ಗೋಡೆ ಬರಹಕ್ಕೆ ಚಾಲನೆ

0

BJP Shivamogga ವಿಕಸಿತ ಭಾರತಕ್ಕಾಗಿ ದೇಶಾದ್ಯಂತ ಇಂದಿನಿಂದ 3 ದಿನಗಳ ಕಾಲ ನಡೆಯುತ್ತಿರುವ “ಗ್ರಾಮ ಚಲೋ” ಅಭಿಯಾನದ ಅಂಗವಾಗಿ ಶಿವಮೊಗ್ಗದ ಜಯನಗರದಲ್ಲಿ ಅಂಬೇಡ್ಕರ್ ಶಕ್ತಿ ಕೇಂದ್ರದ , 10ನೇ ವಾರ್ಡ್ ಬೂತ್ ಪದಾಧಿಕಾರಿಗಳೊಂದಿಗೆ ವಿಧಾನ ಪರಿಷತ್ ಶಾಸಕರು ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ ಡಿ ಎಸ್ ಅರುಣ್ ಅವರು ಸಭೆ ನಡೆಸಿದರು.

BJP Shivamogga ಬೂತ್ 71ರಲ್ಲಿ “2024 ಮತ್ತೊಮ್ಮೆ ಬಿಜೆಪಿ” ಗೋಡೆ ಬರಹಕ್ಕೆ ಚಾಲನೆ ನೀಡಿ, ಬೂತ್ ನ ಮನೆಗಳಿಗೆ ತೆರಳಿ ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ ಅವರ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿಯ ಕುರಿತು ತಿಳಿಸಲಾಯಿತು. ಬಿ. ವೈ ರಾಘವೇಂದ್ರ ಅವರ ಯೋಜನೆಗಳ ಕುರಿತಾಗಿ QR ಸ್ಕ್ಯಾನ್ ಮಾಡಿ ವೀಕ್ಷಿಸಲು ತಿಳಿಸಲಾಯಿತು.

ಪಕ್ಷದ ಕಾರ್ಯಕರ್ತರು ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಮೋದಿ ಜೀ ಅವರ ಸರ್ಕಾರದ ಎಲ್ಲಾ ಯೋಜನೆಗಳು, ಸಾಧನೆಗಳು ಹಾಗೂ ಜನಕಲ್ಯಾಣ ಕಾರ್ಯಕ್ರಮಗಳನ್ನು ಮನೆ ಮನೆಗಳಿಗೆ ತಲುಪಿಸಿ ಅಭಿಯಾನವನ್ನು ಯಶಸ್ವಿಗೊಳಿಸೋಣ. ಮಗದೊಮ್ಮೆ ಮೋದಿಜೀ ಅವರನ್ನು ಪ್ರಧಾನಿ ಪಟ್ಟಕ್ಕೇರಿಸುವ ಸಂಕಲ್ಪಕ್ಕೆ ಜೊತೆಯಾಗೋಣ.

ವಾರ್ಡ್ ಅಧ್ಯಕ್ಷರಾದ ಎಸ್ ಪಿ ದಿನೇಶ್, ರಾಜೇಂದ್ರ, ವೆಂಕಟೇಶ್, ಮುರುಗನ್, ಪ್ರಜ್ವಲ್, ಯೋಗೀಶ್, ಗಣೇಶ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

KPCC Kisan Unit ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನಿರಾಶಾದಾಯಕ- ಸಿ.ಎನ್.ಅಕ್ಮಲ್

0

KPCC Kisan Unit ಕೇಂದ್ರ ಸರ್ಕಾರ ಮಂಡಿಸಿದ ಮದ್ಯಂತರ ಬಜೆಟ್ ರೈತರು ಹಾಗೂ ಬೆಳೆ ಗಾರರಿಗೆ ನಿರಾಶದಾಯಕವಾಗಿದ್ದು ಯಾವುದೇ ಸವಲತ್ತನ್ನು ಒದಗಿಸದೇ ಸಂಕಷ್ಟಕ್ಕೆ ದೂಡಿರುವ ಬಜೆಟ್ ಆಗಿದೆ ಎಂದು ಕೆಪಿಸಿಸಿ ಕಿಸಾನ್ ಘಟಕದ ಸಂಚಾಲಕ ಸಿ.ಎನ್.ಅಕ್ಮಲ್ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರ ಎಚ್ಚೆತ್ತುಕೊಳ್ಳಬೇಕು. ಜನರಿಗೆ ಸ್ಪಂದಿಸದ ಸಂಸದರನ್ನು ಲೋಕಸಭೆಯಲ್ಲಿ ಕಳಿಸುವ ಬದಲು ಸಮರ್ಪ ಕವಾಗಿ ಸ್ಪಂದಿಸುವ ಅಭ್ಯರ್ಥಿಯನ್ನು ಆಯ್ಕೆಗೊಳಿಸಲು ಮುಂದಾಗಬೇಕು ಎಂದು ತಿಳಿಸಿದ್ದಾರೆ.

ದೇಶದ ಬೆನ್ನೆಲುಬಾದ ರೈತರ ಸಮಸ್ಯೆಗಳಿಗೆ ಆಲಿಸದ ಕೇಂದ್ರ ಸರ್ಕಾರ ಉದ್ಯಮಿಗಳ ಕೋಟಿಗಟ್ಟಲೇ ಸಾಲ ಮನ್ನಾ ಮಾಡುತ್ತಿದೆ. ಇದರಿಂದ ರೈತರು ಹಾಗೂ ಬೆಳೆಗಾರರಿಗೆ ಕೃಷಿ ಪರಿಕರ ಹಾಗೂ ಬೆಳೆ ನಷ್ಟದ ಪರಿಹಾರವನ್ನು ಒದಗಿಸದೇ ಚೆಲ್ಲಾಟವಾಡುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದು ಕೆಲವೇ ತಿಂಗಳಲ್ಲಿ ಸಂಪೂರ್ಣ ಗ್ಯಾರಂಟಿಯನ್ನು ಘೋ ಷಿಸಿ ನುಡಿದಂತೆ ನಡೆದಿದೆ. ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ರಾಜ್ಯದ ಜನತೆಗೆ ಪೂರೈಸಿ ಜನಮನ್ನಣೆ ಪಡೆ ದುಕೊಂಡಿರುವ ಸಿದ್ದರಾಮಯ್ಯ ನೇತೃತ್ವ ಸರ್ಕಾರ ಹೊಸದೊಂದು ಅಲೆಯನ್ನೇ ಸೃಷ್ಟಿಸಿದೆ ಎಂದಿದ್ದಾರೆ.

KPCC Kisan Unit ಕೇಂದ್ರ ಸರ್ಕಾರದ ಯೋಜನೆಗಳು ಸಾಮಾನ್ಯ ಜನತೆ ಬದುಕಲಾರದ ಸ್ಥಿತಿಗೆ ತಂದೊಡ್ಡಿದೆ. ದಿನಬಳಕೆ ವಸ್ತು ಗಳ ಏರಿಕೆ, ರೈತರ ಕಡೆಗಣನೆ ಸೇರಿದಂತೆ ಅನೇಕ ಸವಲತ್ತುಗಳನ್ನು ಕಸಿದುಕೊಂಡು ಬೀದಿ ಬಿಟ್ಟಂತಾಗಿದೆ ಎಂದ ಅವರು ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿರುವ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಜನಸಾಮಾನ್ಯರ ಪೂರಕವಾಗಿರುವ ರಾಜ್ಯಸರ್ಕಾರ ಹಲವಾರು ಜನಪರ ಯೋಜನೆ ಜಾರಿಗೊಳಿಸಿದೆ. ಇಂ ತಹ ಮಾದರಿ ಸರ್ಕಾರವನ್ನು ರಾಜ್ಯದ ಜನತೆ ಬೆಂಬಲಿಸಿ ಆರ್ಶೀವಾದಿಸುತ್ತಿದೆ. ಹೀಗಾಗಿ ದೇಶದ ಪ್ರತಿ ಪ್ರಜೆಗಳಿಗೂ ಸುಲಲಿತ ಆಡಳಿತ ನೀಡುವ ದೃಷ್ಟಿಯಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ವಿಚಾರದಲ್ಲಿ ಹೆಚ್ಚು ಮುತುವರ್ಜಿ ವಹಿಸಿ ಮತ ಚಲಾಯಿಸಬೇಕು ಎಂದು ಹೇಳಿದ್ದಾರೆ.

Aam Admi Party ಕಾಡಾನೆ ಉಪಟಳ & ಶ್ರೀಗಂಧ ಬೆಳೆರೋಗ ನಿಯಂತ್ರಣಕ್ಕೆ ಮನವಿ

0

Aam Admi Party ಚಿಕ್ಕಮಗಳೂರು ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಕಾಡಾನೆ ಹಾವಳಿ ಹಾಗೂ ಶ್ರೀಗಂಧಕ್ಕೆ ತಗುಲಿರುವ ಸ್ಪೆಂಕ್ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಶೀಘ್ರವೇ ಸಮಸ್ಯೆ ಪರಿಹರಿಸಬೇಕು ಎಂದು ಆಮ್‌ಆದ್ಮಿ ಜಿಲ್ಲಾ ಮಾಧ್ಯಮ ಪ್ರತಿನಿಧಿ ಡಾ. ಕೆ.ಸುಂದರಗೌಡ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂಬಂಧ ಶುಕ್ರವಾರ ಪತ್ರಿಕಾ ಹೇಳಿಕಾ ನೀಡಿರುವ ಅವರು ಕುಂದುಕೊರತೆ ಬಗ್ಗೆ ಸಮಗ್ರವಾಗಿ ಪರಿಶೀ ಲಿಸಿ ನಿಗಧಿಪಡಿಸಲಾದ ಕಾಲಾವಧಿಯಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಲು ಜಿಲ್ಲಾಧಿಕಾರಿ, ಕಾರ್ಯದರ್ಶಿಗಳಿಗೆ ಸೂಚಿ ಸಲಾಗಿದೆ. ಅರ್ಜಿದಾರರ ಸೂಕ್ತ ಮಾಹಿತಿಯನ್ನು ಜನಸ್ಪಂದನ ಪೋರ್ಟಲ್‌ನಲ್ಲಿ ಕಾಲೋಚಿತಗೊಳಿಸಲು ಸಹ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.

ಕಳೆದ ಹಲವಾರು ದಿನಗಳು ಕಾಡಾನೆ ಉಪಟಳದಿಂದ ರೈತರ ಬಹುತೇಕ ಬೆಳೆಗಳು ನಷ್ಟವಾಗಿದೆ. ಹೀಗಾಗಿ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ರೈತರಿಗೆ ಪರಿಹಾರ ಒದಗಿಸುವ ಜೊತೆಗೆ ಪುನರ್ ಜೀವನಕ್ಕೆ ಒತ್ತು ನೀಡುವ ಮುಖಾಂತರ ಇಂತಹ ಸಮಸ್ಯೆಗಳು ಮರುಕಳಿಸದಂತೆ ಇಲಾಖೆಯು ಮುತುವರ್ಜಿ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

Aam Admi Party ನಾಡಿನಲ್ಲಿ ಶ್ರೀಗಂಧ ಮರವು ಅತ್ಯಮೂಲ್ಯವಾಗಿದ್ದು ಸ್ಪೆöÊಕ್ ಕಾಯಿಲೆಯಿಂದ ಮರವು ನಾಶದ ಅಂಚಿನ ಲ್ಲಿರುವ ಕಾರಣ ವೈಜ್ಞಾನಿಕ ಸಂಶೋಧನೆ ನಡೆಸಿ ಸ್ಪೆಂಕ್ ಕಾಯಿಲೆಗೆ ಮದ್ದನ್ನು ಕಂಡುಹಿಡಿಯಬೇಕು. ಅದಲ್ಲದೇ ರೈತರಿಗೆ ಶ್ರೀಗಂಧ ಬೆಳೆಯ ಮಹತ್ವನ್ನು ಸರ್ಕಾರದ ಮುಖಾಂತರ ತಿಳಿಸಿ ಶ್ರೀಗಂಧ ಸಸಿ ಬೆಳೆಸಲು ಉತ್ತೇಜಿಸಬೇಕು ಎಂದು ತಿಳಿಸಿದ್ದಾರೆ.
ನಗರದಲ್ಲಿ ಯುಜಿಡಿ ಅವೈಜ್ಞಾನಿಕ ಕಾಮಗಾರಿಯಿಂದ ಕುಡಿಯುವ ನೀರು ಮಾಲಿನ್ಯವಾಗುವ ಜೊತೆಗೆ ಕೊಳಚೆ ಪ್ರದೇಶಗಳು ನಿರ್ಮಾಣವಾಗಿ ಡೆಂಗ್ಯೂ, ಜ್ವರವು ವ್ಯಾಪಕವಾಗಿ ಹರಡುತ್ತಿದೆ. ನಗರಸಭೆಯು ನಿವಾಸಿಗಳ ಆರೋಗ್ಯ ಮೇಲಿರುವ ಕಾಳಜಿ ಇಂತಹ ಕಾಮಗಾರಿಯಿಂದ ತೋರ್ಪಡಿಸುತ್ತಿದೆ ಎಂದಿದ್ದಾರೆ.
ಕೂಡಲೇ ನಗರಸಭೆಯು ಎಚ್ಚೆತ್ತುಕೊಂಡು ಕೊಳಚೆ ಪ್ರದೇಶ ಹಾಗೂ ನೀರಿನ ಮಾಲಿನ್ಯವನ್ನು ತಡೆಗಟ್ಟ ಬೇಕು. ಜೊತೆಗೆ ನಗರಸಭೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಕಡಿವಾಣ ಹಾಕದಿದ್ದಲ್ಲಿ ಎಎಪಿ ವತಿಯಿಂದ ಕಚೇರಿ ಮುಂಭಾಗದಲ್ಲಿ ಮಾಲಿನ್ಯ ನೀರಿನ ಮುಖಾಂತರ ಬೀದಿನಾಟಕ, ಭ್ರಷ್ಟಾಚಾರ ನಿಲ್ಲಿಸಲು ಪ್ರತಿಭಟನೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಜೊತೆಗೂಡಿ ಸರಣ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Kuvempu University ಪತ್ರಕರ್ತರು ತಂತ್ರಜ್ಞಾನದ ಜೊತೆಜೊತೆಗೆ ಪತ್ರಿಕೋದ್ಯಮದ ಕೌಶಲ್ಯ ಕರಗತ ಮಾಡಕೊಳ್ಳಬೇಕು- ರವಿ.ಎಸ್.ಗೌಡ

0

Kuvempu University ಇತ್ತೀಚೆಗೆ ಸಂವಹನ ತಂತ್ರಜ್ಞಾನದಲ್ಲಿ ವ್ಯಾಪಕವಾದ ಅಭಿವೃದ್ಧಿಗಳಾಗುತ್ತಿವೆ. ಅವುಗಳನ್ನು ಪತ್ರಿಕೋದ್ಯಮದಲ್ಲೂ ಸೂಕ್ತವಾಗಿ ಬಳಸಿಕೊಳ್ಳುವ ಅವಕಾಶವಿದ್ದು, ಪತ್ರಕರ್ತರು ತಂತ್ರಜ್ಞಾನದ ಜೊತೆ ಜೊತೆಗೆ ಪತ್ರಿಕೋದ್ಯಮದ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕೆಂದು ಜೀ ನ್ಯೂಸ್ ಮುಖ್ಯ ಸಂಪಾದಕ ರವಿ ಎಸ್ ಗೌಡ ಅವರು ಹೇಳಿದರು.

ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘ ಜಂಟಿಯಾಗಿ ಆಯೋಜಿಸಿದ್ದ ‘ಸುದ್ದಿವಾಹಿನಿಯಲ್ಲಿ ಇನ್‌ಪುಟ್ ನಿಂದ ಔಟ್‌ಪುಟ್ ಪ್ರಕ್ರಿಯೆ’ಯ ಬಗ್ಗೆ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಪೀಳಿಗೆಗೆ ಯಾವಾಗಲೂ ಧಾವಂತದಲ್ಲಿರುತ್ತದೆ. ಎಲ್ಲವೂ ಶೀಘ್ರವಾಗಿ ಲಭಿಸಬೇಕು ಎಂದು ನಿರೀಕ್ಷಿಸುತ್ತಾರೆ.

ಆದರೆ ಸಾಧನೆಗೆ ಯಾವುದೇ ಅಡ್ಡದಾರಿಗಳು ಇರುವುದಿಲ್ಲ. ಕ್ರಮಬದ್ಧವಾಗಿ ಸಾಧನೆಯ ಒಂದೊಂದೇ ಮೆಟ್ಟಿಲುಗಳನ್ನು ಏರಬೇಕು. ಆಗ ಮಾತ್ರ ಸಾಧನೆಯ ಉತ್ತುಂಗದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವಾಗುತ್ತದೆ.

Kuvempu University ಪತ್ರಿಕೋದ್ಯಮದ ವಿದ್ಯಾರ್ಥಿಗಳು ವೃತ್ತಿರಂಗಕ್ಕೆ ಇಳಿಯುವ ಮೊದಲೇ ಸುದ್ದಿಸಂಸ್ಥೆಗಳ ರಚನೆಯ ಬಗ್ಗೆ ತಿಳಿದುಕೊಂಡಿರಬೇಕು. ಪತ್ರಿಕೋದ್ಯಮದಲ್ಲಿ ತಂತ್ರಜ್ಞಾನಿಕ ಜ್ಞಾನಕ್ಕೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗುತ್ತಿದೆ. ಬರವಣ ಗೆಗೆ ಲೇಖನಿ, ಕಾಗದದ ಅನಿವಾರ್ಯತೆ ಮಾಯವಾಗಿದೆ.
ಕಂಪ್ಯೂಟರ್‌ಗಿಂತ ಒಂದು ಹೆಜ್ಜೆ ಮುಂದೆ ಹೋಗಿ ವರದಿಗಾರರು ತಮ್ಮ ಮೊಬೈಲ್‌ಗಳಲ್ಲೆ ಸುದ್ದಿಗಳನ್ನು ರಚಿಸುತ್ತಿದ್ದಾರೆ. ಮೊಬೈಲ್‌ಗಳನ್ನು ಟೈಪಿಸುವುದಕ್ಕೆ ಅಷ್ಟೆ ಅಲ್ಲದೆ ಧ್ವನಿ ಮೂಲಕ ಟೈಪಿಸುವುದು, ಅನುವಾದ ಮಾಡಿಕೊಳ್ಳಲು, ಮಾಹಿತಿಗಳನ್ನು ಸಂಗ್ರಹಿಸಲು ಹಾಗೂ ಹಂಚಿಕೊಳ್ಳಲು ಬಳಕೆಯಾಗುತ್ತಿದೆ. ಹಲವು ಸುದ್ದಿ ಪೋರ್ಟಲ್‌ಗಳು ಕೂಡ ಮೊಬೈಲ್‌ನಲ್ಲಿಯೇ ನಿರ್ವಹಿಸಲ್ಪಡುತ್ತಿವೆ. ಆದ್ದರಿಂದ ಕಾಲಕಾಲಕ್ಕೆ ವಿದ್ಯಾರ್ಥಿಗಳು ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಆರ್ ಸತ್ಯಪ್ರಕಾಶ್, ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಡಾ. ಸತೀಶ್‌ಕುಮಾರ್, ಡಾ. ವರ್ಗೀಸ್, ಹಿರಿಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷೆ ವಿದ್ಯಾ, ಕಾರ್ಯದರ್ಶಿ ಶರತ್, ಹಿರಿಯ ವರದಿಗಾರ ಜೇಸುದಾಸ್ ಹಾಗೂ ನಿತಿನ್ ಕೈದೋಟ್ಲು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Kateel Ashok Pai Memorial College ಕಟ್ಟಿಮನಿ ಸಾಹಿತ್ಯದಲ್ಲಿ ಸಮಾಜದ ಅಸಮಾನತೆ,ಅಂಕು-ಡೊಂಕು ಅನ್ಯಾಯಗಳ ಪರಿಣಾಮಗಳನ್ನ ಹೊರಚೆಲ್ಲಿದ್ದಾರೆ- ಡಾ.ನಟರಾಜ್ ಹುಳಿಯಾರ್

0

Kateel Ashok Pai Memorial College ಬೆಳಗಾವಿಯ ಬಸವರಾಜ ಕಟ್ಟಿಮನಿ ಪ್ರತಿಷ್ಠಾನ, ಶಿವಮೊಗ್ಗದ ಮಾನಸ ಟ್ರಸ್ಟ್ ನ ಮಾನಸ ಸಾಂಸ್ಕೃತಿಕ ಅಧ್ಯಯನಗಳ ಕೇಂದ್ರ ಹಾಗೂ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಸಾಹಿತ್ಯ ಸಹೃದಯ ವೇದಿಕೆಯ ವತಿಯಿಂದ ‘ಬಸವರಾಜ ಕಟ್ಟಿಮನಿಯವರ ಸಾಹಿತ್ಯದ ಸಮಕಾಲೀನ ಪ್ರಸ್ತುತತೆ’ ಎಂಬ ವಿಷಯದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವು ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ನಡೆಯಿತು.

ಇದರ ಉದ್ಘಾಟನೆಯನ್ನು ಮಾಡಿದ ಪ್ರಸಿದ್ಧ ಸಂಸ್ಕೃತಿ ಚಿಂತಕರಾದ ಡಾ.ನಟರಾಜ್ ಹುಳಿಯಾರ್ ರವರು ಕಟ್ಟಿಮನಿಯವರ ಸಾಹಿತ್ಯದಿಂದಲೇ ನಾನೂ ಲೇಖಕನೊಬ್ಬನು ಚಳುವಳಿಗಳಲ್ಲಿ ಭಾಗವಹಿಸಬೇಕೆಂಬ ಸಂದೇಶವನ್ನು ಪಡೆದೆ ಎಂದರು. ಕಟ್ಟಿಮನಿಯವರು ಒಬ್ಬ ಕಾದಂಬರಿಕಾರರು ಹೌದು ಪತ್ರಿಕೋದ್ಯಮಿಯು ಹೌದು, ಆದ್ದರಿಂದ ಅವರು ತಮ್ಮ ಕಾದಂಬರಿಗಳು ಹಾಗೂ ಲೇಖನಗಳಲ್ಲಿ ಸಮಾಜದ ಅಸಮಾನತೆ, ಅಂಕು – ಡೊಂಕು, ಅನ್ಯಾಯಗಳ ಪರಿಣಾಮಗಳನ್ನು ಹೊರಚೆಲ್ಲಿದರು.

ಕಟ್ಟಿಮನಿಯವರು ಸಮಕಾಲೀನ ಚರಿತ್ರೆಯನ್ನು ಕಾದಂಬರಿಗಳ ಮೂಲಕ ದಾಖಲಿಸಿದರು. ಒಬ್ಬ ಕಾದಂಬರಿಕಾರನಿಗೆ ಪತ್ರಿಕೋದ್ಯಮಿಯಂತೆ ಬರೆಯುವ ತುಡಿತವಿರಬೇಕು, ಪತ್ರಿಕೋದ್ಯಮಿಗೆ ಕಾದಂಬರಿಕಾರರ ತಾಳ್ಮೆಯಿರಬೇಕು. ಕಟ್ಟಿಮನಿಯವರು ಇವೆರಡನ್ನೂ ಒಳಗೊಂಡಂತೆ ಒಬ್ಬ ರಾಜಕೀಯ ಮುತ್ಸದ್ದಿಯಾಗಿದ್ದರು.

Kateel Ashok Pai Memorial College ಆದ್ದರಿಂದ ಅವರ ಕೃತಿಗಳಲ್ಲಿ ‘ನೈತಿಕತೆ’ಯ ಮೌಲ್ಯಗಳು ಪ್ರತಿಫಲಿತವಾಗಿದೆ ಎಂದರು. ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನಾಡಿದ ಪ್ರತಿಷ್ಠಾನದ ಡಾ.ಬಸವರಾಜ ಸಾದರರವರು ಪ್ರತಿಷ್ಠಾನದ ಕಾರ್ಯಕ್ರಮ ಹಾಗೂ ಜವಾಬ್ದಾರಿಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಡಾ.ರಾಜೇಂದ್ರ ಚೆನ್ನಿ, ಡಾ.ಸಂಧ್ಯಾಕಾವೇರಿ, ಕನ್ನಡ ಉಪನ್ಯಾಸಕರಾದ ಶ್ರೀ ಮೋಹನ್ ಕುಮಾರ್ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ.ಮಲ್ಲಿಕಾರ್ಜುನ ಹಿರೇಮಠ್ ವಹಿಸಿದ್ದರು.

ಡಾ.ಮಲ್ಲಿಕಾರ್ಜುನ ಮೇಟಿ, ಡಾ.ಸುಭಾಷ್ ರಾಜಮನೆ, ಡಾ.ಭಾರತಿ ಡಾ. ಸಬಿತಾ ಬನ್ನಾಡಿ, ಡಾ. ಅರುಣ್ ಜೋಳದ ಕೂಡ್ಲಿಗಿರವರು ಕಟ್ಟಿಮನಿಯವರ ಸಾಹಿತ್ಯದ ವಿವಿಧ ವಿಷಯಗಳ ಪ್ರಸ್ತುತತೆಯನ್ನು ವಿವಿಧ ಗೋಷ್ಠಿಗಳಲ್ಲಿ ಪ್ರಸ್ತುತಪಡಿಸಿದರು.

ಈ ಕಾರ್ಯಕ್ರಮದ ಸಮಾರೋಪ ನುಡಿಗಳನ್ನು ಡಾ.ರಾಜೇಂದ್ರ ಚೆನ್ನಿ ನಡೆಸಿಕೊಟ್ಟರು. ಡಾ.ಬಾಳಾಸಾಹೇಬ ಲೋಕಾಪುರ, ಮಾನಸ ಸಂಸ್ಥೆಯ ನಿರ್ದೇಶಕರಾದ ಡಾ.ರಜನಿ ಪೈ ರವರು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಡಾ.ಕೆ.ಆರ್.ದುರ್ಗಾದಾಸ್ ರವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟರು.