Thursday, November 19, 2026
Thursday, November 19, 2026
Home Blog Page 1089

B. Y. Raghavendra ಶಿವಮೊಗ್ಗ ಕ್ಷೇತ್ರದ ಸಂಸದ ರಾಘವೇಂದ್ರ ಅವರ ರಿಪೋರ್ಟ್ ಕಾರ್ಡ್ ವಿತರಣೆ

0

B. Y. Raghavendra ಭಾರತೀಯ ಜನತಾ ಪಾರ್ಟಿಯ “ಗಾವ್ ಚಲೋ” ಅಭಿಯಾನದ ಕರೆಯಂತೆ ಇಂದು ಶಿವಮೊಗ್ಗ ನಗರದ 8ನೇ ವಾರ್ಡ್ ನ ಮತಗಟ್ಟೆ ಸಂಖ್ಯೆ 47 ರಲ್ಲಿ ಬೂತ್ ಸಮಿತಿ ಸಭೆ, ಫಲಾನುಭವಿಗಳ ಭೇಟಿ, ಮತದಾರರ ಮನೆಗಳಿಗೆ ಭೇಟಿ ನೀಡಿ ನರೇಂದ್ರ ಮೋದಿ ಸರ್ಕಾರದ ಅಭಿವೃದ್ಧಿಗಳು, ಶ್ರೀ ಬಿ ವೈ ರಾಘವೇಂದ್ರ ಅವರು ಶಿವಮೊಗ್ಗ ಜಿಲ್ಲೆಗೆ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿ, ಸಾಧನೆಗಳ ಕರಪತ್ರವನ್ನು ಬಿಜೆಪಿ ಪ್ರಕೋಷ್ಟಗಳ ರಾಜ್ಯ ಸಂಯೋಜಕರಾದ ಎಸ್. ದತ್ತಾತ್ರಿ ಅವರು ವಿತರಿಸಿದರು.

ಹಾಗೂ ಶಿವಮೊಗ್ಗ ಸಂಸದರಾದ ಬಿ.ವೈ ರಾಘವೇಂದ್ರ ಇವರ ಸಾಮಾಜಿಕ ಜಾಲತಾಣಕ್ಕೆ ಲಿಂಕ್ ಆಗುವ ಸ್ಕ್ಯಾನ್ ಕೋಡನ್ನು ಡೌನ್ಲೋಡ್ ಮಾಡಿಸಿದರು.

B. Y. Raghavendra ಈ ಸಂದರ್ಭದಲ್ಲಿ 8ನೇ ವಾರ್ಡ್ ಅಧ್ಯಕ್ಷರಾದ ಶೇಖರ್ ಹಾಗೂ 47ನೇ ಬೂತ್ ಅಧ್ಯಕ್ಷರಾದ ಶ್ರೀ ಕಾರ್ತಿಕ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

M. B. Patil ಹಸಿರು ಇಂಧನ ಉತ್ಪಾದನೆ ಸಂಬಂಧ ಅರ್ಹ ಸಂಸ್ಥೆಗಳ ಜೊತೆ ಸಮಾಲೋಚನೆ

0

M. B. Patil ಇಂಧನ ಇಲಾಖೆ ಸಚಿವರಾದ ಶ್ರೀ. ಕೆ.ಜೆ.ಜಾರ್ಜ್
ಹಾಗೂ ಎಂ. ಬಿ .ಪಾಟೀಲ್ ಅವರು ‘ಕರ್ನಾಟಕಕ್ಕೆ ಹಸಿರು ಹೈಡ್ರೋಜನ್ ನೀತಿ’ಯ ಕುರಿತು ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದರು.

ಹಸಿರು ಇಂಧನ ಉತ್ಪಾದನೆ ಸಂಬಂಧ ಅರ್ಹ ಉತ್ಪಾದಕ ಸಂಸ್ಥೆಗಳ ಜೊತೆ ಚರ್ಚಿಸಲು ಕೈಗಾರಿಕೆ ಮತ್ತು ಇಂಧನ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಜಂಟಿ ಸಮಿತಿ ರಚಿಸಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಯಿತು.

M. B. Patil ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಶ್ರೀ. ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪಂಕಜ್ ಕುಮಾರ್ ಪಾಂಡೆ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಸೆಲ್ವಕುಮಾರ್, ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

H D Thammaiah ಪ್ರಸಕ್ತ ಸಾಲಿನಲ್ಲಿ ಶಾಸಕರು ತಂದಿರುವ ಅನುದಾನ,ಅಭಿವೃದ್ಧಿಕಾರ್ಯಗಳ ಮಾಹಿತಿ ನೀಡಲು ಚಿಕ್ಕಮಗಳೂರು ಬಿಜೆಪಿ ಒತ್ತಾಯ

0

H D Thammaiah ಚಿಕ್ಕಮಗಳೂರು, ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯನವರು ಪ್ರಸಕ್ತ ಸಾಲಿನಲ್ಲಿ ತಂದಿರುವ ಅನುದಾನ ಹಾಗೂ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳ ಬಗ್ಗೆ ಸಂಪೂರ್ಣ ವಿವರ ಒದಗಿಸಿಕೊಡಬೇಕು ಎಂ ದು ಬಿಜೆಪಿ ಚಿಕ್ಕಮಗಳೂರು ನಗರ ಘಟಕದ ಮುಖಂಡರುಗಳು ಶನಿವಾರ ಶಾಸಕರ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿ ಒತ್ತಾ ಯಿಸಿದರು.

ಈ ಕುರಿತು ಮಾತನಾಡಿದ ನಗರಸಭಾ ಮಾಜಿ ಅಧ್ಯಕ್ಷ ಪುಷ್ಪರಾಜ್ ಕ್ಷೇತ್ರದ ಅಭಿವೃಧ್ದಿಯ ಮಾಹಿತಿ ಒದಗಿ ಸಬೇಕಾಗಿರುವುದು ಶಾಸಕರ ಕರ್ತವ್ಯವಾಗಿದ್ದು ಪ್ರಶ್ನಿಸುವ ಹಕ್ಕು ಮತದಾರರಿಗಿದೆ. ಆ ಹಿನ್ನೆಲೆಯಲ್ಲಿ ಮತದಾರರ ಧ್ವನಿಯಾಗಿ ಮನವಿ ಸಲ್ಲಿಸುವ ಮುಖಾಂತರ ಕ್ಷೇತ್ರದ ಅಭಿವೃಧ್ದಿ ಕಾಮಗಾರಿಗಳ ವಿವರ ನೀಡಬೇಕೆಂದು ಹೇಳಿ ದರು.

ಚಿಕ್ಕಮಗಳೂರಿನ ಶಾಸಕರು ವರ್ಷ ಪೂರೈಸುವ ಹೊಸ್ತಿನಲ್ಲಿದ್ದು ಕ್ಷೇತ್ರಕ್ಕೆ ಸಂಬoಧಿಸಿದ ಯಾವುದೇ ಅಭಿ ವೃದ್ದಿ ಕಾರ್ಯವಾಗಲೀ ಆರಂಭವಾಗಿಲ್ಲ. ಆ ಕಾರಣದಿಂದ ಪತ್ರದ ಮುಖೇನ ಶಾಸಕರು ಕ್ಷೇತ್ರಕ್ಕೆ ತಂದ ಹಾಗೂ ಇದುವರೆಗೂ ಬಿಡುಗಡೆಯಾಗಿರುವ ಅನುದಾನ ಅಥವಾ ಬಿಡುಗಡೆಗೊಂಡಿದ್ದರೆ ಕೈಗೊಂಡ ಅಭಿವೃದ್ದಿ ಕಾರ್ಯ ಗಳು ಏನೆಂಬುದನ್ನು ತಿಳಿಸಬೇಕಿದೆ ಎಂದು ಪ್ರಶ್ನಿಸಿದರು.

ಬರದ ಛಾಯೆಯಲ್ಲಿ ಸಿಲುಕಿ ನಲುಗುತ್ತಿರುವ ರೈತರಿಗೆ ಸರ್ಕಾರದಿಂದ ಬಿಡುಗಡೆಗೊಂಡ ಪರಿಹಾರ, ನಿರು ದ್ಯೋಗ ನಿರ್ಮೂಲನೆಗೆ ಸೃಷ್ಟಿಸಲಾಗಿರುವ ಉದ್ಯೋಗಗಳ ವಿವರ, ಶೈಕ್ಷಣ ಕ ಅಭಿವೃದ್ದಿಯಲ್ಲಿ ಕೈಗೊಂಡ ಕ್ರಮ ಗಳು, ಬಡಜನರ ಕೈಗೆ ಎಟಕುವ ಉತ್ತಮ ದರ್ಜೆಯ ಆರೋಗ್ಯ ಸೇವೆ ಒದಗಿಸಲು ರೂಪಿಸಿರುವ ಹೊಸ ಯೋಜ ನೆಗಳ ಮಾಹಿತಿ ಕೊಡಬೇಕೆಂದು ಒತ್ತಾಯಿಸಿದರು.

ಬಿಜೆಪಿ ನಗರಾಧ್ಯಕ್ಷ ಮಧುಕುಮಾರ್ ರಾಜ್ ಅರಸ್ ಮಾತನಾಡಿ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಪರಿಪೂರ್ಣಗೊಳಿಸಲು ಕೈಗೊಂಡ ಕಾಮಗಾರಿ, ಮೋದಿ ಸರ್ಕಾರ ನೀಡುತ್ತಿರುವ ಅನ್ನ ಭಾಗ್ಯದ 5 ಕೆಜಿ ಅಕ್ಕಿ ಹೊರತುಪಡಿಸಿ ರಾಜ್ಯದಲ್ಲಿ ವಿತರಿಸುತ್ತಿರುವ ಅಕ್ಕಿ ವಿವರ, ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಕಾಲೇಜು ಕಾಮಗಾರಿಗೆ ನೀವು ಶಾಸಕರಾಗಿ ಸರ್ಕಾರದಿಂದ ಎಷ್ಟು ಅನುದಾನ ಬಿಡುಗಡೆಗೊಳಿಸಲಾಗಿದೆ ಎಂಬು ದನ್ನು ತಿಳಿಸಬೇಕಿದೆ ಎಂದರು.

ಒಟ್ಟಾರೆ ಸಾರ್ವಜನಿಕರ ಹಿತದೃಷ್ಟಿ ಹಾಗೂ ಕ್ಷೇತ್ರದ ಸರ್ವಾಂಗೀಣ ಅಭಿವೃಧ್ದಿಯ ದೃಷ್ಟಿಯಿಂದ ಕ್ಷೇತ್ರಕ್ಕೆ ತಂದಿರುವ ಅನುದಾನದ ವಿವರವನ್ನು ಆಧಾರ ಸಹಿತ ಒದಗಿಸಿಕೊಡಬೇಕು ಎಂದು ತಿಳಿಸಿದರು.

H D Thammaiah ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ನರೇಂದ್ರ, ಹಿರಿಯ ಮುಖಂಡರುಗಳಾದ ಸಿ.ಎಚ್.ಲೋಕೇಶ್, ಬಿ.ರಾಜಪ್ಪ, ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಜಿಲ್ಲಾ ಮಹಿಳಾ ಮೋ ರ್ಚಾ ಅಧ್ಯಕ್ಷೆ ಜಸಂತ ಅನಿಲ್ ಕುಮಾರ್, ಎಸ್ಸಿ ಘಟಕದ ನಗರಾಧ್ಯಕ್ಷ ಕೇಶವ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್ ಕಬೀರ್, ಮಾಜಿ ನಗರಸಭೆ ಉಪಾಧ್ಯಕ್ಷ ಸುಧೀರ್, ಸದಸ್ಯ ಶ್ರೀಧರ್ ಉರಾಳ್, ಅಂಕಿತಾ ಅನಿಶ್, ಬ್ಯಾಟರಿ ಮಂಜುನಾಥ್, ನರಸಿಂಹಮೂರ್ತಿ, ಪ್ರದೀಪ್ ಉಪಸ್ಥಿತರಿದ್ದರು.

K. J. George ಚಿಕ್ಕಮಗಳೂರು ಕಾಂಗ್ರೆಸ್ ಭವನ ಕಟ್ಟಡ ಕಾಮಗಾರಿಗೆ ಸಚಿವ ಜಾರ್ಜ್ ಅವರಿಂದ ಚಾಲನೆ

0

K. J. George ಚಿಕ್ಕಮಗಳೂರು, ನಗರದ ಕುವೆಂಪು ಕಲಾಮಂದಿರ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮೂರು ಅಂತಸ್ತಿನ ಕಾಂಗ್ರೆಸ್ ಪಕ್ಷದ ನೂತನ ಭವನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರು ಪೂಜೆ ನೆರವೇರಿಸುವ ಮುಖಾಂತರ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದರು.

ಈ ಕುರಿತು ಮಾತನಾಡಿದ ಕಟ್ಟಡ ಸಮಿತಿ ಅಧ್ಯಕ್ಷ ಡಾ. ಡಿ.ಎಲ್.ವಿಜಯ್‌ಕುಮಾರ್ ನೂತನ ಭವನವು ಅಂದಾಜು ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು ತ್ವರಿತವಾಗಿ ಕಟ್ಟಡ ಪೂರ್ಣಗೊಳಿಸಲು ತೀರ್ಮಾನ ಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

K. J. George ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದೆ ಪಕ್ಷದ ನೂತನ ಭವನಕ್ಕೆ ಗುದ್ದಲಿಪೂಜೆ ನೆರವೇರಿಸಿದ್ದು ಇದೀಗ ಸಚಿವರ ನೇತೃತ್ವದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಪಕ್ಷದಲ್ಲೂ ಹಲವು ಮುಖಂಡರ ನೇತೃತ್ವದಲ್ಲಿ ಕಟ್ಟಡ ಸಮಿತಿ ಸ್ಥಾಪಿಸಿ ಭವನ ನಿರ್ಮಾಣದಲ್ಲಿ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕ ಹೆಚ್.ಡಿ.ತಮ್ಮಯ್ಯ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಡಾ. ಅಂಶುಮoತ್, ಕಟ್ಟಡ ಸಮಿತಿಯ ಖಜಾಂಚಿ ಕೆ.ಎಸ್.ಶಾಂತೇಗೌಡ, ಸಂಚಾಲಕ ಎಂ.ಸಿ.ಶಿವಾನoದಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಪಕ್ಷದ ಮುಖಂಡರುಗಳಾದ ಗಾಯತ್ರಿ ಶಾಂತೇಗೌಡ, ಕೆ.ಮಹಮ್ಮದ್, ನಯಾಜ್, ಕೆ.ವಿ. ಮಂಜುನಾಥ್, ಅನ್ಸರ್ ಆಲಿ ಮತ್ತಿತರರು ಹಾಜರಿದ್ದರು.

Kyasanur Forest Disease ಮಂಗನ ಕಾಯಿಲೆಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಚಿಕಿತ್ಸೆ ಉಚಿತ- ದಿನೇಶ್ ಗುಂಡೂರಾವ್

0

Kyasanur Forest Disease ಮಳೆಗಾಲ ಆರಂಭ ಮತ್ತು ಅಂತ್ಯದಲ್ಲಿ ಮಂಗನ ಕಾಯಿಲೆ ಹೆಚ್ಚಳವಾಗುತ್ತದೆ. ಮಾರ್ಚ್ ವರೆಗೆ ಜನ ಬಹಳ ಎಚ್ಚರಿಕೆಯಿಂದ ಇರಬೇಕು. ಲಕ್ಷಣಗಳು ಬಂದ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Kyasanur Forest Disease ಮಂಗನ ಕಾಯಿಲೆಗೆ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತವಾಗಿ ಚಿಕಿತ್ಸೆ ನೀಡಲು ಈಗಾಗಲೇ ಸೂಚಿಸಲಾಗಿದೆ. ಅಲ್ಲದೇ ಕೆ.ಎಫ್.ಡಿ ಪಾಸಿಟಿವ್ ಬಂದವರನ್ನ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Madhu Bangarappa ಉನ್ನತ ಶಿಕ್ಷಣ ಪಡೆಯುವ ಮಕ್ಕಳಿಗೆ ಸರ್ಕಾರದಿಂದಲೇ ಕಲಿಕಾ ತರಬೇತಿ- ಸಚಿವ ಮಧು ಬಂಗಾರಪ್ಪ

0

Madhu Bangarappa ಮಕ್ಕಳ ಭವಿಷ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಶೈಕ್ಷಣಿಕ ಸಾಲಿನಿಂದಲೇ ಅನ್ವಯಗೊಳ್ಳುವಂತೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ.ಮತ್ತು ಉನ್ನತ ಶಿಕ್ಷಣ ಹಾಗೂ ಪ್ರವೇಶ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿಶೇಷ ಕಲಿಕಾ ತರಗತಿಗಳನ್ನು ಸರ್ಕಾರದ ವತಿಯಿಂದಲೇ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಹೇಳಿದರು.

Madhu Bangarappa ಅವರು ಇಂದು ತೀರ್ಥಹಳ್ಳಿಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ತೀರ್ಥಹಳ್ಳಿ, ಪಟ್ಟಣ ಪಂಚಾಯಿತಿ ತೀರ್ಥಹಳ್ಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈ (ಕ್ರಾಶ್ ಕೋರ್ಸ್) ವಿಶೇಷ ತರಬೇತಿ ತರಗತಿಗಳಿಂದಾಗಿ ಜನಸಾಮಾನ್ಯ ಕುಟುಂಬದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂ¯ವಾಗಲಿದೆ ಅಲ್ಲದೆ ಅವರ ಕುಟುಂಬದ ಮುಖ್ಯಸ್ಥರಿಗೆ ಆರ್ಥಿಕವಾಗಿ ಸಹಕಾರಿಯಾಗಲಿದೆ ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆದವರ ಫಲಾನುಭವಿಗಳ ಸಮಾವೇಶ ಮಾತ್ರವಲ್ಲ, ಇದು ಸೌಲಭ್ಯ ವಂಚಿತರಿಗೆ ಸೌಲಭ್ಯ ಒದಗಿಸುವಲ್ಲಿಯೂ ಈ ವೇದಿಕೆ ನಿರ್ಮಾಣಗೊಂಡಿದ್ದು, ಸೌಲಭ್ಯ ವಂಚಿತ ಫಲಾನುಭವಿಗಳು ಸಂಬಂಧಿಸಿದ ಇಲಾಖಾ ಅಧಿಕಾರಿಗಳನ್ನು ಇಲ್ಲಿಯೇ ಸಂಪರ್ಕಿಸಿ, ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಸಮಸ್ಯೆಗಳು ಎದುರಾದಲ್ಲಿ ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ. ಈಗಾಗಲೇ ಸೌಲಭ್ಯ ಪಡೆದ ಫಲಾನುಭವಿಗಳು ಪಕ್ಷಾತೀತವಾಗಿ ಅರ್ಹರನ್ನು ಗುರುತಿಸಿ ಸೌಲಭ್ಯ ದೊರೆಕಿಸಿಕೊಡಲು ಮುಂದಾಗಬೇಕೆಂದು ಅವರು ಮನವಿ ಮಾಡಿದರು.

ಸರ್ಕಾರವು ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ನಿಗಧಿಪಡಿಸಿದ ಕಾಲಮಿತಿಯೊಳಗಾಗಿ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ, ನುಡಿದಂತೆ ನಡೆದು, ಮುಂದೆ ಸಾಗುತ್ತಿದೆ. ಮುಂದೆಯೂ ಈ ಯೋಜನೆಗಳು ಜಾರಿಯಲ್ಲಿರಲಿವೆ ಎಂದ ಅವರು, ಪ್ರಸಕ್ತ ಸರ್ಕಾರವು ಪ್ರತಿ ಮನೆಯ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿದ್ದು, ಜನರ ನೋವು-ನಲಿವುಗಳಿಗೆ ದ್ವನಿಯಾಗಲಿದೆ. ಅಲ್ಲದೇ ನೆರವಿಗೆ ಧಾವಿಸಲಿದೆ ಎಂದರು.

ಮಾಜಿ ಮುಖ್ಯಮಂತ್ರಿಗಳಾಗಿದ್ದ ದಿ. ಎಸ್.ಬಂಗಾರಪ್ಪ ಅವರ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ್ದ ರೈತರ ಹೊಲಗಳಿಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆ ದಶಕಗಳ ನಂತರವೂ ಜಾರಿಯಲ್ಲಿರುವುದು ಹರ್ಷದ ಸಂಗತಿಯಾಗಿದೆ. ಅವರ ಮಾರ್ಗದರ್ಶನದಲ್ಲಿಯೇ ನಾವೂ ಕೂಡ ಆಡಳಿತ ನಡೆಸಲು ಮುಂದಾಗಿದ್ದೇವೆ. ವಿಶೇಷವಾಗಿ ಅಂದಿನ ಪ್ರಣಾಳಿಕೆ ಸಮಿತಿಯ ಸದಸ್ಯನಾಗಿದ್ದೆ. ಪ್ರಣಾಳಿಕೆ ಇಂದು ಅನುಷ್ಠಾನಗೊಂಡಿದೆ ಎಂಬ ಹೆಮ್ಮೆ ನನಗಿದೆ ಎಂದರು.

ರಾಜ್ಯದ ಪ್ರತಿ ಮನೆಮನೆಗಳಿಗೆ ಉಚಿತ ಬೆಳಕು ನೀಡಿದ ಕೀರ್ತಿ ನಮ್ಮದು. ಯುವನಿಧಿ ಯೋಜನೆಯಡಿ ಯುವಕರು ತಮ್ಮ ಭವಿಷ್ಯದ ಬದುಕನ್ನು ರೂಪಿಸಿಕೊಳ್ಳುವಲ್ಲಿ ಸರ್ಕಾರ ನೀಡುವ ಸಹಾಯಧನ ಉಪಯುಕ್ತವಾಗಿರುವುದು ನಿರುದ್ಯೋಗಿಗಳಾಗಿ ವಿದ್ಯಾವಂತರ ಎಲ್ಲರ ಮುಖದಲ್ಲಿ ಮಂದಹಾಸ ಮೂಡಿಸಿರುವುದನ್ನು ಕಾಣಬಹುದಾಗಿದೆ ಎಂದರು.

ಈ ಎಲ್ಲಾ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ ಹೃದಯ ತುಂಬಿ ಬರುತ್ತದೆ. ಹೆಮ್ಮೆ ಎನಿಸುತ್ತದೆ. ವಹಿಸಿಕೊಂಡ ಖಾತೆ ಸವಾಲಿನದ್ದಾಗಿದ್ದರೂ ಅದನ್ನು ಜಾಗ್ರತೆಯಾಗಿ ನಿರ್ವಹಿಸುವ ಭರವಸೆಯಿಂದ ಹಿರಿಯರು ವಹಿಸಿದ ಅಧಿಕಾರವನ್ನು ಸದುಪಯೋಗಪಡಿಸಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.

ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಮಕ್ಕಳಿಗೆ ಸಮವಸ್ತ್ರ, ಶೂ, ಪಠ್ಯಪುಸ್ತಕ, ಮೊಟ್ಟೆ, ಬಾಳೆಹಣ್ಣು, ಚುಕ್ಕಿ, ಹಾಲು ಜೊತೆಗೆ ಪೌಷ್ಠಿಕ ಆಹಾರ ರಾಗಿ ಮಾಲ್ಟ್‍ನ್ನು ನೀಡಲು ಕ್ರಮವಹಿಸಲಾಗುತ್ತಿದೆ ಎಂದ ಅವರು, ಎಸ್.ಎಸ್.ಎಲ್.ಸಿ ಮತ್ತು ಪಿ.ಯು. ಅನುತ್ತೀರ್ಣ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ಶಿಕ್ಷಣ ಪಡೆದು ಮುಂದುವರೆಯಲು ಅನುಕೂಲವಾಗುವಂತೆ ಮೂರು ಬಾರಿ ಪೂರಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದರಿಂದಾಗಿ ಪ್ರಸಕ್ತ ಸಾಲಿನಲ್ಲಿ ಶಾಲೆಯಿಂದ ಹೊರಗುಳಿಯುತ್ತಿದ್ದ ಸುಮಾರು 40,000ಮಕ್ಕಳು ಶಿಕ್ಷಣದ ಮುಖ್ಯವಾಹಿನಿಯಲ್ಲಿ ಮುಂದುವರೆಯುತ್ತಿದ್ದಾರೆ ಎಂದರು.

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಮತ್ತು ನೀರನ್ನು ಒದಗಿಸಲು ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಈ ಅವಧಿಯಲ್ಲಿ ಅಲ್ಲಿನ ಶಿಕ್ಷಕರು ಮಕ್ಕಳಿಗೆ ವಿಶೇಷ ಕಲಿಕಾ ತರಗತಿಗಳನ್ನು ಮಾಡುವಂತೆ ಮನವಿ ಮಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ನೇಮಕವಾಗಿರುವ ಶಿಕ್ಷಕರೆಲ್ಲರೂ ಪ್ರತಿಭಾವಂತರೇ ಇರುವುದು ಮಕ್ಕಳ ಕಲಿಕೆಗೆ ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿಯೇ ಮೊದಲ ಬಾರಿಗೆ ಜನಸಾಮಾನ್ಯರಿಗೆ ಅನುಕೂಲವಾಗುವಂತೆ, ಅವರ ಆಶೋತ್ತರಗಳಿಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿರುವುದು ವಿಶೇಷವಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಗ್ಯಾರಂಟಿ ಯೋಜನೆಗಳ ಮಾಹಿತಿ ಒದಗಿಸುವುದರ ಜೊತೆಗೆ, ಸೌಲಭ್ಯ ವಂಚಿತರನ್ನು ಗುರುತಿಸಿ, ಸೌಲಭ್ಯ ಒದಗಿಸುವುದಾಗಿದೆ. ಈಗಾಗಲೇ ಜಿಲ್ಲೆಯ ಲಕ್ಷಾಂತರ ಜನ ವಿವಿಧ ಗ್ಯಾರಂಟಿ ಯೋಜನೆಗಳ ಲಾಭ ಪಡೆದಿರುವುದು ಪ್ರತ್ಯಕ್ಷವಾಗಿ ಕಾಣಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಗೀತಾ ರಮೇಶ್, ಉಪಾಧ್ಯಕ್ಷ ರಹಮತ್‍ಉಲ್ಲಾ ಅಸಾದಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಕಾರ್ಮಿಕ ಅಧಿಕಾರಿ ಶ್ರೀಮತಿ ಸುಮಾ, ಉದ್ಯೋಗಾಧಿಕಾರಿ ಖಲಂದರ್‍ಖಾನ್, ತಾ.ಕಾರ್ಯನಿರ್ವಹಣಾಧಿಕಾರಿ, ತಹಶೀಲ್ದಾರರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಇದೇ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ಅರ್ಹ ಫಲಾನುಭವಿಗಳಿಗೆ ಲ್ಯಾಪ್‍ಟಾಪ್ ವಿತರಿಸಲಾಯಿತು.

ಹಸಿದ ಒಡಲಿಗೆ ಅನ್ನ ನೀಡುವ ಸರ್ಕಾರದ ಅನ್ನಭಾಗ್ಯ ಯೋಜನೆ ಬಡಜನರ ಪಾಲಿಗೆ ಸಂಜೀವಿನಿಯಾಗಿದೆ. –ಕಲಾವತಿ,, ಗೃಹಣಿ, ತೀರ್ಥಹಳ್ಳಿ.

ಉದರ ನಿಮಿತ್ತ ಕೆಲಸಕ್ಕಾಗಿ ಊರಿಂದೂರಿಗೆ ಓಡಾಡುತ್ತಿದ್ದ ನನಗೆ ಸರ್ಕಾರದ ಶಕ್ತಿ ಯೋಜನೆಯ ಅನುಷ್ಟಾನದಿಂದಾಗಿ ಪ್ರತಿ ಮಾಹೆ ರೂ.2,000/-ಗಳ ಉಳಿತಾಯವಾಗುತ್ತಿದೆ. ಸರ್ಕಾರಕ್ಕೆ ಅಭಿನಂದನೆಗಳು.   _ ಖಾಸಗಿ ಕಂಪನಿಯ ಉದ್ಯೋಗಿ, ತೀರ್ಥಹಳ್ಳಿ.

ಉದ್ಯೋಗರಹಿತ ಮನೆಯೊಡತಿಗೆ ಗೃಹ ನಿರ್ವಹಣೆ ಮಾಡುವಲ್ಲಿ ಗೃಹಲಕ್ಷ್ಮೀ ಯೋಜನೆಯಿಂದಾಗಿ ರೂ.2,000/- ದೊರೆಯುತ್ತಿದೆ. ಸಹಸ್ರಾರು ಸಂಖ್ಯೆಯ ಅನಾಥೆಯರಿಗೆ, ವಿಧವೆಯರಿಗೆ ಅನುಕೂಲವಾಗಿದೆ. _ ಫಾತಿಮಾ, ತೀರ್ಥಹಳ್ಳಿ.

ಗೃಹಜ್ಯೋತಿ ಯೋಜನೆಯ ಅನುಷ್ಠಾನದಿಂದಾಗಿ ಸಾಮಾನ್ಯ ಕುಟುಂಬದವರು ವಿದ್ಯುತ್ ಶುಲ್ಕ ಪಾವತಿಸುವುದರಿಂದ ಶಾಶ್ವತ ವಿನಾಯಿತಿ ಪಡೆಯುವಂತಾಗಿದೆ. ಇದರಿಂದ ಜೀವನ ನಿರ್ವಹಣೆಗೆ ಸಹಕಾರಿಯಾಗಿದೆ. -ಶ್ರೀಮತಿ ನಳಿನಾ, ಗೃಹಣಿ, ತೀರ್ಥಹಳ್ಳಿ.

World Pulses Day ಸದೃಢ ಆರೋಗ್ಯಕ್ಕೆ ದ್ವಿದಳ ಧಾನ್ಯ

0

World Pulses Day ಪ್ರತಿ ವರ್ಷ ಫೆ.10ರಂದು ವಿಶ್ವ ದ್ವಿದಳ ಧಾನ್ಯಗಳ ದಿನವನ್ನಾಗಿ ಆಚರಿಸಲಾಗುತ್ತದೆ. ನಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಬೇಳೆಕಾಳುಗಳು ಮತ್ತು ಧಾನ್ಯಗಳು ಬಹಳ ಸಹಾಯ ಮಾಡುತ್ತವೆ.

ಬೇಳೆಕಾಳುಗಳ ಮಹತ್ವದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಉದ್ದೇಶದಿಂದ 2018ರಲ್ಲಿ ಫೆಬ್ರವರಿ 10 ಅನ್ನು ವಿಶ್ವ ದ್ವಿದಳ ಧಾನ್ಯಗಳ ದಿನವೆಂದು ಘೋಷಿಸಲಾಯಿತು.

ದ್ವಿದಳ ಧಾನ್ಯಗಳು ಹಲವಾರು ದೇಶಗಳ ಪ್ರಧಾನ ಆಹಾರದಲ್ಲಿ ಸ್ಥಾನ ಪಡೆದಿದೆ. ಇದು ಹೆಚ್ಚಿನ ಪೌಷ್ಟಿಕಾಂಶದ ಮಟ್ಟವನ್ನು ಹೊಂದಿದೆ ಮತ್ತು ನಮ್ಮ ದೈನಂದಿನ ಆಹಾರದ ಭಾಗವಾಗಿದೆ.

ದ್ವಿದಳ ಧಾನ್ಯಗಳು ಆಹಾರಕ್ಕಾಗಿ ಬೆಳೆಸಲಾದ ದ್ವಿದಳ ಸಸ್ಯಗಳ ಖಾದ್ಯ ಬೀಜಗಳಾಗಿವೆ. ಒಣಗಿದ ಬೀನ್ಸ್, ಮಸೂರ ಮತ್ತು ಬಟಾಣಿಗಳು ಸಾಮಾನ್ಯವಾಗಿ ತಿಳಿದಿರುವ ಮತ್ತು ಸೇವಿಸುವ ಬೇಳೆಕಾಳುಗಳಾಗಿವೆ.

World Pulses Day ಬಡತನ, ಆಹಾರ ಸರಪಳಿ ಭದ್ರತೆ, ಹದಗೆಟ್ಟ ಆರೋಗ್ಯ ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಗುರುತಿಸುವಲ್ಲಿ ಬೇಳೆಕಾಳುಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

ದ್ವಿದಳ ಧಾನ್ಯಗಳು ಪರಿಸರ ಪ್ರಯೋಜನಗಳಿಗೆ ಕೊಡುಗೆ ನೀಡುತ್ತವೆ. ದ್ವಿದಳ ಧಾನ್ಯಗಳ ಸಾರಜನಕ-ಫಿಕ್ಸಿಂಗ್ ಗುಣಲಕ್ಷಣಗಳು ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತದೆ, ಇದು ಕೃಷಿಭೂಮಿಯ ಉತ್ಪಾದಕತೆ ಮತ್ತು ಫಲವತ್ತತೆಯನ್ನು ಹೆಚ್ಚಿಸುತ್ತದೆ.
ಬೇಳೆಕಾಳುಗಳು ಮತ್ತು ಕಾಳುಗಳು (ಮಸೂರ, ಬಟಾಣಿ, ಕಡಲೆ, ಬೀನ್ಸ್, ಸೋಯಾಬೀನ್ ಮತ್ತು ಕಡಲೆಕಾಯಿಗಳು.) ಆರೋಗ್ಯ ನಿರ್ವಹಣೆ ಮತ್ತು ಒಟ್ಟಾರೆ ಸುಧಾರಣೆಯಲ್ಲಿ ಸಮಾನವಾದ ಪ್ರಮುಖ ಪಾತ್ರವನ್ನು ವಹಿಸುತ್ತವೆ.

Madhu Bangarappa ಕೋಟೆಗಂಗೂರಿನಲ್ಲಿ ಗ್ರಾಮ ಪಂಚಾಯತ್ ಕಟ್ಟಡ ಉದ್ಘಾಟನೆ

0

Madhu Bangarappa ಶಿವಮೊಗ್ಗ ತಾಲೂಕಿನ, ಕೋಟೆಗಂಗೂರು ಗ್ರಾಮ ಪಂಚಾಯತಿಯ ನೂತನ ನಿರ್ಮಾಣದ ಭವ್ಯ ಕಟ್ಟಡದ ಉದ್ಘಾಟನಾ ಸಮಾರಂಭ ನಾಳೆ ಬೆಳಿಗ್ಗೆ 11 ಗಂಟೆಗೆ ಪಂಚಾಯಿತಿ ಆವರಣದಲ್ಲಿ ನಡೆಯಲಿದೆ ಎಂದು ಗ್ರಾಪಂ ಅಧ್ಯಕ್ಷ ಡಾ.ಡಿ ಬಿ ವಿಜಯಕುಮಾರ್ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್. ಬಂಗಾರಪ್ಪ ಹಾಗೂ ಸಚಿವರಾದ ಪ್ರಿಯಾಂಕ ಖರ್ಗೆ, ಡಿ ಸುಧಾಕರ್ ಅವರ ಗೌರವ ಉಪಸ್ಥಿತಿಯಲ್ಲಿ ಕಟ್ಟಡವನ್ನು ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾ ಎಸ್ ಪೂರ್ಯಾನಾಯ್ಕ್ ಉದ್ಘಾಟಿಸಲಿದ್ದಾರೆ.

Madhu Bangarappa ಸಂಸದ ಬಿ. ವೈ. ರಾಘವೇಂದ್ರ ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಬಿ.ಕೆ. ಸಂಗಮೇಶ್ವರ್, ಗೋಪಾಲಕೃಷ್ಣ ಬೇಳೂರು, ಶಾಸಕರಾದ ಬೋಜೇ ಗೌಡ, ಎಸ್. ರುದ್ರೇಗೌಡ, ಭಾರತಿ ಶೆಟ್ಟಿ, ಡಿ.ಎಸ್. ಅರುಣ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಾರೆ ಎಂದರು.

ಕಾರ್ಯಕ್ರಮಕ್ಕೆ ಸರ್ವರನ್ನು ಕೋಟೆಗಂಗೂರು ಗ್ರಾಮ ಪಂಚಾಯತಿ ಅಧ್ಯಕ್ಷ ವಿಜಯಕುಮಾರ್, ಉಪಾಧ್ಯಕ್ಷರಾದ ರೇಖಾ ಬಾಯಿ, ಪಿಡಿಓ ಶಿವಕುಮಾರ್, ಕಾರ್ಯದರ್ಶಿ ಸೀತಾನಾಯ್ಕ್ ಹಾಗೂ ಸದಸ್ಯರು ಸ್ವಾಗತಿಸಿದ್ದಾರೆ

National Students Union of India ಅವಹೇಳನಕಾರಿ ಹೇಳಿಕೆ ನೀಡಿದ ಈಶ್ವರಪ್ಪನವರನ್ನು ಬಂಧಿಸಲು ಎನ್ ಎಸ್ ಯುಐ ಆಗ್ರಹ

0

National Students’ Union of India ಶಿವಮೊಗ್ಗ ಜಿಲ್ಲಾ NSUI ವತಿಯಿಂದ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಅಧಿಕಾರ ಕಳೆದುಕೊಂಡು ಅಸ್ವಸ್ಥರಾಗಿ ರಾಮನಗರ ಸಂಸದರಾದ ಡಿ ಕೆ ಸುರೇಶ್ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಅವೇಳನಕಾರಿ ಹೇಳಿಕೆ ಕೊಟ್ಟಿರುವ ಈಶ್ವರಪ್ಪ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡಲಾಯಿತು.

National Students’ Union of India ಈ ಪ್ರತಿಭಟನೆಯಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ರಮೇಶ್ ಹೆಗಡೆ, PLD ಬ್ಯಾಂಕ್ ಉಪಾಧ್ಯಕ್ಷರಾದ ವಿಜಯ್ ಕುಮಾರ್ , ಕಾಂಗ್ರೆಸ್ ಮುಖಂಡರಾದ ರಂಗೇ ಗೌಡ. ಪ್ರಭಾಕರ.ಸುಡುರು ಶಿವು, ಅರುಣ್ ನಾಯ್ಡು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್, ಯುವ ಕಾಂಗ್ರೆಸ್ ಮುಖಂಡ ಮಧುಸೂದನ್, ಶಿವು ಮಲಗೊಪ್ಪ ಜಿಲ್ಲಾಧ್ಯಕ್ಷ ವಿಜಯಕುಮಾರ್ ಗ್ರಾಮಾಂತರ ಅಧ್ಯಕ್ಷ ಹರ್ಷಿತ್ ಗೌಡ, ಕಾರ್ಯಧ್ಯಕ್ಷ ರವಿ ಕಾಟಿಕೆರೆ , ಇನ್ನೂ ನೂರಾರು NSUI ಕಾರ್ಯಕರ್ತರು ಭಾಗಿಯಾಗಿದ್ದರು.

S.N.Chenna Basappa ಕಾಯಕ ಶರಣರು ತಮ್ಮ ನಿಷ್ಠೆಯಿಂದ ಸಮಾಜಕ್ಕೆ ಶಕ್ತಿ ತುಂಬಿದ್ದಾರೆ- ಶಾಸಕ ಚನ್ನಬಸಪ್ಪ

0

S.N.Chenna Basappa ಇಡೀ ಜಗತ್ತಿಗೆ ಕಾಯಕದ ಮಹತ್ವ ಮತ್ತು ಸದ್ವಿಚಾರಗಳನ್ನು ಸಾರಿದ ಶಕ್ತಿಗಳು ನಮ್ಮ ಕಾಯಕ ಶರಣರು ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಕಾಯಕ ಶರಣರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮದು ಶ್ರೇಷ್ಟ ಪರಂಪರೆ ಹೊಂದಿರುವ ದೇಶ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಾಡು. ಎಲ್ಲರೂ ನಮ್ಮವರು ಎನ್ನುವ ದೇಶವಿದ್ದರೆ ಅದು ನಮ್ಮ ಭಾರತ ದೇಶ. ವಸುದೈವ ಕುಟುಂಬಕಂ ಪರಿಕಲ್ಪನೆಯಡಿ ಸಮಾಜವನ್ನು ಕಟ್ಟಿ ಬದುಕುತ್ತಿದ್ದೇವೆ.

ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಾದಾರ ದೂಳಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಇವರೆಲ್ಲ ವೈಚಾರಿಕ ನೆಲಗಟ್ಟಿಗೆ ಸಂಬಂಧಿಸಿದ ಕಾಯಕ ಶರಣರು. ಇವರು ತಮ್ಮ ಕಾಯಕನಿಷ್ಟೆಯಿಂದ ಸಮಾಜಕ್ಕೆ ಶಕ್ತಿ ತುಂಬಿದ್ದಾರೆ. ಸಮಾನತೆಯನ್ನು ಸಾರಿದ್ದಾರೆ. ಈ ಐದು ಜನರ ಒಂದೇ ಸಮಷ್ಟಿಯ ನಡವಳಿಕೆಯ ಪರಿಣಾಮ ಒಂದೇ ದಿನ ಜಯಂತಿಯನ್ನು ಆಚರಿಸಲಾಗುತ್ತಿದೆ. ಐದು ಜನರದ್ದು ಒಂದೇ ದಿನ ಜಯಂತಿ ಆಚರಣೆಯಾಗುತ್ತಿರುವುದು ಅತ್ಯಂತ ವಿಶೇಷ ಮತ್ತು ನಮ್ಮಲ್ಲಿ ಮಾತ್ರ ಸಾಧ್ಯವಿರಬಹುದು. ಇವರೆಲ್ಲ ಕಾಯಕದ ಮಹತ್ವ ಮತ್ತು ಒಳ್ಳೆಯ ವಿಚಾರಗಳನ್ನು ಜಗತ್ತಿಗೆ ಸಾರಲು ಪ್ರೇರಕ ಶಕ್ತಿಗಳು. ಪ್ರಸ್ತುತ ಹೊರದೇಶದವರು ನಮ್ಮನ್ನು ಅಧ್ಯಯನ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಇಂತಹ ಶ್ರೇಷ್ಟ ವಿಚಾರವಂತರು ಎಂದು ಅಭಿಪ್ರಾಯಪಟ್ಟರು.

ಸಹ್ಯಾದ್ರಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಎನ್. ಮಹಾದೇವಸ್ವಾಮಿ ಮಾತನಾಡಿ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಾದಾರ ದೂಳಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿಯವರು ತಮ್ಮ ಕಾಯಕದ ಮೂಲಕ ಜಗದ್ವಿಖ್ಯಾತರಾದವರು. ಶಿಸ್ತು, ಬದ್ದತೆಯಿಂದ ತಮ್ಮ ಕಾಯಕ ನಡೆಸಿಕೊಂಡು ಇತರರಿಗೆ ಮಾದರಿಯಾದವರು.

ಕ್ರಿ.ಪೂ. 6ನೇ ಶತಮಾನದಿಂದ ಭಾರತದಲ್ಲಿ ಬೌದ್ದ, ಜೈನ ಧರ್ಮಗಳ ಆರಂಭವಾಯಿತು. ಆನಂತರದ ರಾಜಕೀಯ, ಸಾಮಾಜಿಕ, ಸಾಂಸ್ಕøತಿಕ ಪಲ್ಲಟಗಳ ನಡುವೆ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯದಲ್ಲಿ, ಸಮ ಸಮಾಜವನ್ನು ಕಟ್ಟುವಲ್ಲಿ ಬಸವಣ್ಣ ಮತ್ತು ಕಾಯಕ ಶರಣರು ನಿರತರಾಗಿ, ಸಮಾಜಕ್ಕೆ ಅನನ್ಯ ಕೊಡುಗೆಗಳನ್ನು, ವಚನ ಸಾಹಿತ್ಯವನ್ನು ನೀಡಿದರು.

S.N.Chenna Basappa ಬಹು ವಿಸ್ತೃತ ಭಾರತ ದೇಶದ ಹಿನ್ನೆಲೆಯಲ್ಲಿ ಕಾಯಕ ಶರಣರು ತಮ್ಮದೇ ಆದ ವೃತ್ತಿ, ವಚನ ಸಾಹಿತ್ಯದ ಮೂಲಕ ಸಮ ಸಮಾಜವನ್ನು ಕಟ್ಟಲು ಮುಂದಾದರು. ಡೋಹರ ಕಕ್ಕಯ್ಯನವರು ಚರ್ಮ ಹದ ಮಾಡಿ ಹೊಳಪು ನೀಡುವ ಕಾರ್ಯದಲ್ಲಿ ತೊಡಗಿದ್ದು ನಾವೆಲ್ಲ ಒಂದೇ ಎಂಬ ಭಾವನೆಗಳನ್ನು ಒಡಮೂಡಿಸುವಲ್ಲಿ ಶ್ರಮಿಸಿದರು.

ಚರ್ಮ ಹದಗಾರಿಕೆ ಜಗತ್ತಿನ ಆರಂಭದ, ಪ್ರಾಚೀನವಾದ ಒಂದು ವೃತ್ತಿ. ಆದರೆ ನಮ್ಮ ದೇಶದಲ್ಲಿ ಅದು ಕೆಳಜಾತಿಯವರ ಕೆಲಸವೆಂದು, ಚಿನ್ನ ಬೆಳ್ಳಿ ಕೆಲಸ ಮಾಡುವವರು ವಿಶ್ವಕರ್ಮರೆಂದು ವರ್ಗೀಕರಣವಾಗಿದ್ದು ನೋವಿನ ಸಂಗತಿ. ಆದರೆ ಅಖಂಡ ಭಾರತದ ಪ್ರಪ್ರಥಮ ವೃತ್ತಿ ಆರಂಭಿಸಿದವರು ನಾವು ಎಂಬ ಹೆಮ್ಮೆ ನಮಗೆ ಇರಬೇಕು.

ಮಾದಾರ ಚೆನ್ನಯ್ಯನವರು ಕೂಡ ಚರ್ಮ ಹದ ಮಾಡುವ ಕಾಯಕದಲ್ಲಿ ತೊಡಗಿದ್ದು ನಡೆ ನುಡಿ ಸಮನಾಗಿರಬೇಕೆಂದು ಪ್ರತಿಪಾದಿಸಿದರು. ಮಾದಾರ ಧೂಳಯ್ಯನವರು ಸಂಸ್ಕøತಿ ಪಂಡಿತರಾಗಿ ಹೊರಹೊಮ್ಮಿದ್ದರು. ಉರಿಲಿಂಗ ಪೆದ್ದಿಯವರು ಉರಿಲಿಂಗ ದೇವರ ಧೀಕ್ಷೆ ಪಡೆಯಲು ಗುರುವನ್ನು ಒಲಿಸಿಕೊಳ್ಳುತ್ತಾರೆ. ಸಮಗಾರ ಹರಳಯ್ಯನವರು ತಾವು ಮತ್ತು ತಮ್ಮ ಪತ್ನಿ ತೊಡೆಯ ಚರ್ಮದಿಂದ ಪಾದರಕ್ಷೆಗಳನ್ನು ಮಾಡಿ ಬಸವಣ್ಣವರಿಗೆ ಅರ್ಪಿಸಿ ಶರಣರಾಗುತ್ತಾರೆ.

ಈ ಎಲ್ಲ ಕಾಯಕ ಶರಣರ ತತ್ವ ಸಿದ್ದಾಂತಗಳು ಸಮಾನತೆ, ಸೌಹಾರ್ಧತೆ. ನಮ್ಮ ಸಂವಿಧಾನದ ಪೀಠಿಕೆ ಓದಿದರೆ ಇವರೆಲ್ಲರ ಸಾರ ತಿಳಿಯುತ್ತದೆ. ಇವರನ್ನೆಲ್ಲ ಅರ್ಥ ಮಾಡಿಕೊಂಡು, ಆ ನಿಟ್ಟಿನಲ್ಲಿ ನಡೆದರೆ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದರು.

ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ ಮಾತನಾಡಿ, ನಮ್ಮ ನೆಲದ ಮಹಾನ್ ವ್ಯಕ್ತಿಗಳ ತತ್ವ ಸಿದ್ದಾಂತಗಳನ್ನು ನಾವು ತಿಳಿದು, ಅದನ್ನು ಅಳವಡಿಸಿಕೊಂಡು ನಾಡಿನ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಬೇಕೆಂಬ ಕಳಕಳಿಯಿಂದ ಸರ್ಕಾರ ಜಯಂತಿಗಳನ್ನು ಆಚರಿಸುತ್ತಿದ್ದು, ನಾವು ಅವರ ತತ್ವಗಳನ್ನು ಅಳವಡಿಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸೋಣ ಎಂದು ಕರೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಸ್ವಾಗತಿಸಿದರು. ಜಿಲ್ಲಾ ಸಮಗಾರ ಹರಳಯ್ಯ ಸಮಾಜದ ಅಧ್ಯಕ್ಷ ಚಂದ್ರಶೇಖರ್ ಖಾನ್‍ಪೇಟ್, ಕಾರ್ಯದರ್ಶಿಗಳಾದ ಪರುಶುರಾಮ ಸಾಬೋಜಿ, ನಾಗರಾಜ ಗಾಮನಗಟ್ಟಿ, ಮಂಜುನಾಥ ಮಾನೆ, ಖಜಾಂಚಿ ಶಂಕರ್, ಡಿಡಿಎಸ್(ಅಂಬೇಡ್ಕರ್‍ವಾದ) ಜಿಲ್ಲಾಧ್ಯಕ್ಷ ಹಾಲೇಶಪ್ಪ, ಹರೀಶ್ ನಾನಕೆ, ರಾಮಚಂದ್ರ ಕೊಪ್ಪಳ್, ಗಂಗಾಧರ್, ವಿಜಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.