Wednesday, November 18, 2026
Wednesday, November 18, 2026
Home Blog Page 1010

Supreme Court ಪತಂಜಲಿ ಜಾಹೀರಾತು ಪ್ರಕರಣ: ಕ್ಷಮಾದಾನಕ್ಕೆ ನಿರಾಕರಿಸಿದ ಸುಪ್ರೀಂ ಪೀಠ

0

Supreme Court ಪತಂಜಲಿ ಆಯುರ್ವೇದದ ಸಹ-ಸಂಸ್ಥಾಪಕ ಬಾಬಾ ರಾಮ್‌ದೇವ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಬಾಲಕೃಷ್ಣ ಅವರು ಕಂಪನಿಯ ತಪ್ಪುದಾರಿಗೆಳೆಯುವ ಜಾಹೀರಾತುಗಳ ಬಗ್ಗೆ ಸರಿಯಾದ ಅಫಿಡವಿಟ್‌ಗಳನ್ನು ಸಲ್ಲಿಸದ ಕ್ರಮವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ.

“ಸುಪ್ರೀಂಕೋರ್ಟ್ ಮಾತ್ರವಲ್ಲ, ಈ ದೇಶದಾದ್ಯಂತ ನ್ಯಾಯಾಲಯಗಳು ನೀಡುವ ಪ್ರತಿಯೊಂದು ಆದೇಶವನ್ನು ಗೌರವಿಸಬೇಕು” ಎಂದು ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದಾರೆ.

ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು ಹಿಂದಿನ ವಿಚಾರಣೆಯ ಸಮಯದಲ್ಲಿ ಉನ್ನತ ನ್ಯಾಯಾಲಯದ ಆದೇಶದ ನಂತರ ಕಳೆದ ತಿಂಗಳು ಪತಂಜಲಿ ಸಲ್ಲಿಸಿದ ಕ್ಷಮೆಯಾಚನೆಯನ್ನು ಸ್ವೀಕರಿಸಲು ನಿರಾಕರಿಸಿತು. ನಿಮ್ಮ ಕ್ಷಮೆಯಾಚನೆಯು ನಮಗೆ ಒಪ್ಪಿತವಾಗಿಲ್ಲ ಎಂದು ನ್ಯಾಯಮೂರ್ತಿ ಕೊಹ್ಲಿ ಹೇಳಿದ್ದಾರೆ.

“ಗಂಭೀರವಾದ ಕಾರ್ಯವು ಅಕ್ಷರ ಮತ್ತು ಆತ್ಮದಲ್ಲಿ ಇರಬೇಕೆಂದು ನೀವು ಖಚಿತಪಡಿಸಿಕೊಳ್ಳಬೇಕು. ಅದನ್ನು ಸ್ವೀಕರಿಸದಿದ್ದಕ್ಕಾಗಿ ನಾವು ವಿಷಾದಿಸುತ್ತೇವೆ ಎಂದು ನಾವು ಹೇಳಬಹುದು. ನಿಮ್ಮ ಕ್ಷಮೆಯಾಚನೆಯು ಈ ನ್ಯಾಯಾಲಯವನ್ನು ಮನವೊಲಿಸುತ್ತಿಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Supreme Court ಇದಾದ ನಂತರ, ರಾಮ್‌ದೇವ್ ಮತ್ತು ಬಾಲಕೃಷ್ಣ ಇಬ್ಬರೂ ನ್ಯಾಯಾಲಯದಲ್ಲಿ ವೈಯಕ್ತಿಕವಾಗಿ ಕ್ಷಮೆಯಾಚಿಸಲು ಸಿದ್ಧರಿದ್ದಾರೆ ಎಂದು ರಾಮ್‌ದೇವ್ ವಕೀಲರು ಹೇಳಿದರು. “ನಾವು ಕ್ಷಮೆಯಾಚಿಸಲು ಬಯಸುತ್ತೇವೆ ಮತ್ತು ನ್ಯಾಯಾಲಯ ಏನು ಹೇಳಿದರೂ ಅದಕ್ಕೆ ಸಿದ್ಧರಿದ್ದೇವೆ” ಎಂದು ಹಿರಿಯ ವಕೀಲ ಬಲ್ಬೀರ್ ಸಿಂಗ್ ನ್ಯಾಯಾಲಯಕ್ಕೆ ಕೈ ಜೋಡಿಸಿ ಕೇಳಿದರು.

ಒಂದು ವಾರದಲ್ಲಿ ತಮ್ಮ ಅಫಿಡವಿಟ್‌ಗಳನ್ನು ಸಲ್ಲಿಸಲು ರಾಮ್‌ದೇವ್ ಮತ್ತು ಬಾಲಕೃಷ್ಣ ಅವರಿಗೆ ಪೀಠವು ಕೊನೆಯ ಅವಕಾಶವನ್ನು ನೀಡಿತು. ಸುಪ್ರೀಂ ಕೋರ್ಟ್ ಕೂಡ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡು ಕ್ರಮ ಕೈಗೊಳ್ಳದ ಕಾರಣ ಅವರು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಹೇಳಿದರು. “ಸರ್ಕಾರವು ತಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಲು ಏಕೆ ನಿರ್ಧರಿಸಿದೆ ಎಂದು ನಾವು ಆಶ್ಚರ್ಯ ಪಡುತ್ತಿದ್ದೇವೆ” ಎಂದು ಪೀಠ ಹೇಳಿತು.

Satyajit Suratkal ಬಿಜೆಪಿಯಲ್ಲಿ ಬಿಲ್ಲವ& ಈಡಿಗರನ್ನು ನಿರ್ಲಕ್ಷಿಸಲಾಗುತ್ತಿದೆ-ಸತ್ಯಜಿತ್ ಸುರತ್ಕಲ್

0

Satyajit Suratkal ಬಿಜೆಪಿಯಲ್ಲಿ ಬ್ರಾಹ್ಮಣ, ಲಿಂಗಾಯಿತ, ಮತ್ತು ಬಂಟರಿಗೆ ಮಾತ್ರ ಮಣೆ ಹಾಕಲಾಗುತ್ತಿದೆ. ಬಿಲ್ಲವರು ಈಡಿಗರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷರಾಗಿರುವ ಹಿಂದುತ್ವವಾದಿ ಮುಖಂಡ ಸತ್ಯಜಿತ್ ಸುರತ್ಕಲ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್‌ನ ಆರ್‌ ಪದ್ಮರಾಜ್‌, ಉಡುಪಿ-ಚಿಕ್ಕಮಗಳೂರಿನಲ್ಲಿ ಬಿಜೆಪಿಯ ಕೋಟಾ ಶ್ರೀನಿವಾಸ್‌ ಪೂಜಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಗೀತಾ ಶಿವರಾಜಕುಮಾರ್‌ ಅವರನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.
ರಾಜ್ಯದಲ್ಲಿ ಒಂದು ಕಾಲದಲ್ಲಿ ಸಮುದಾಯದ ನಾಲ್ಕೈದು ಸಂಸದರಿದ್ದರು, ಆದರೆ ಈಗ ಒಬ್ಬರು ಇಲ್ಲದಂತಾಗಿದ್ದಾರೆ ಎಂದು ಹೇಳಿದ ಅವರು, ಸಮುದಾಯದ ಮುಖಂಡರು ಮತ್ತೆ ಸಂಸದರಾಗುವುದನ್ನು ನೋಡಲು ಉತ್ತಮ ಅವಕಾಶವಿದೆ ಎಂದು ಹೇಳಿದರು.

Satyajit Suratkal ಸಮುದಾಯವು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸದೃಢವಾಗುತ್ತದೆ ಎಂದ ಅವರು, ಶ್ರೀ ನಾರಾಯಣ ಗುರು ವಿಚಾರ ವೇದಿಕೆ ನೇತೃತ್ವದಲ್ಲಿ ಮೂವರು ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಾಗುವುದು ಎಂದರು. ಬಿಲ್ಲವ/ಈಡಿಗ ಮತದಾರರನ್ನು ಹೊಂದಿರುವ ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಕ್ಷೇತ್ರಗಳಲ್ಲಿ ಈ ಬೆಳವಣಿಗೆ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಲಿದೆ.

ಹಿಂದೊಮ್ಮೆ ಹಿಂದುತ್ವದ ಪೋಸ್ಟರ್ ಬಾಯ್ ಎಂದು ಕಣಕ್ಕಿಳಿದಿದ್ದ ಸುರತ್ಕಲ್ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಲಾಗಿತ್ತಾದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಈಗ ಬಿಜೆಪಿ ಇಲ್ಲ. ಬಿಎಲ್‌ಪಿ, ಬಿಎಲ್ ಸಂತೋಷ್ ಪಕ್ಷ ಮತ್ತು ಬಿಎಸ್‌ಪಿ, ಬಿಎಸ್ ಯಡಿಯೂರಪ್ಪ ಪಕ್ಷವಾಗಿ ಮಾರ್ಪಟ್ಟಿದೆ ಎಂದರು. ನಾನು ಬ್ರಾಹ್ಮಣ, ಬಂಟ, ಒಕ್ಕಲಿಗ ಆಗಿದ್ದಿದ್ರೆ ನಿಸ್ಸಂದೇಹವಾಗಿ ಟಿಕೆಟ್ ಸಿಗುತ್ತಿತ್ತು. ಆದರೆ ನಾನು ಶೂದ್ರನಾಗಿ ಹುಟ್ಟಿದ್ದೇನೆ ಅದಕ್ಕೆ ಟಿಕೆಟ್ ನೀಡಿಲ್ಲ ಎಂದರು.

Kimmane Ratnakar ರಾಜ್ಯಕ್ಕೆ ಬಿಜೆಪಿಯ 26 ಸಂಸದರು ನೀಡಿದ ಕೊಡುಗೆ ಏನು?- ಕಿಮ್ಮನೆ ರತ್ನಾಕರ್

0

Kimmane Ratnakar ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರದ ಕೊಳಕು ಮನಸ್ಥಿತಿ ಖಂಡನೀಯ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರ ವಾಷಿಂಗ್ ಮೆಷಿನ್‌ನಲ್ಲಿ ಭ್ರಷ್ಟರಾದವರು ಒಳ ಹೋಗಿ ಬಂದರೆ ಶುದ್ಧ ವ್ಯಕ್ತಿತ್ವದ ಶ್ರೀರಾಮನಂತಾಗುತ್ತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದ ೨೬ ಮಂದಿ ಸಂಸದರು ಕನ್ನಡ, ಇಂಗ್ಲಿಷ್, ಹಿಂದಿ ಕಲಿತಿಲ್ಲವೇ? ರಾಜ್ಯಕ್ಕೆ ಈ ಮಹಾನುಭಾವರು ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿದರು.

ದೇಶ ಎಂದರೆ ಮಣ್ಣು, ಬಾವುಟ, ಧರ್ಮ ಅಂದುಕೊಂಡಿರುವ ಬಿಜೆಪಿಯವರಿಗೆ ಮನುಷ್ಯ ಪ್ರೇಮವಿಲ್ಲ. ಈ ದೇಶದಲ್ಲಿ ಪತ್ರಿಕಾಗೋಷ್ಟಿ ನಡೆಸದ ಮೊದಲ ಪ್ರಧಾನಿ ಎಂದರೆ ನರೇಂದ್ರ ಮೋದಿ. ಇವರ ಪಕ್ಷಕ್ಕೆ ಸೇರಿದವರು ಶ್ರೀ ರಾಮನಂತವರು. ಸೇರದಿದ್ದರೆ ರಾವಣನಂತವರು ಎಂದು ವ್ಯಂಗ್ಯವಾಡಿದರು.
ಸಮಸ್ಯೆಗೆ ಬಾರದ,ಕಷ್ಟಕ್ಕಾಗದ ವಿಶ್ವಗುರು ದೇಶ ಪ್ರೇಮದ ಭಾಷಣ ಮಾಡುತ್ತಾರೆ. ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ವಿತರಣೆ ಮಾಡಿ ಹಣ ಸಂಗ್ರಹಿಸುವ ಕಾನೂನು ತಂದು ಕಾನೂನಿನಲ್ಲಿ ಹೆಸರನ್ನು ಬಹಿರಂಗಗೊಳಿಸದಂತೆ ನಿಯಮ ರೂಪಿಸಿ, ಆಡಳಿತ ಬಿಜೆಪಿ ಪಕ್ಷಕ್ಕೆ ಹೆಚ್ಚು ಹಣ ಸಂಗ್ರಹ ಆಗುವಂತೆ ಮಾಡಿಕೊಂಡರು.

Kimmane Ratnakar ಎಲೆಕ್ಟ್ರೋಲ್ ಬಾಂಡ್ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯಕ್ಕೆ ಈ ದೇಶದ ಮಹಾಜನತೆ ಅಭಿನಂದಿಸಬೇಕು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಆರ್.ಎಂ.ಮಂಜುನಾಥ್ ಗೌಡ, ಉಸ್ತುವಾರಿ ರಮೇಶ್ ಶೆಟ್ಟಿ ಶಂಕರಘಟ್ಟ,ಬ್ಲಾಕ್ ಕಾಂಗ್ರೆಸ್ ಮುಖಂಡರಾದ ಕೆಸ್ತೂರ್ ಮಂಜುನಾಥ್, ಮುಡುಬ ರಾಘವೇಂದ್ರ, ಜಿ.ಎಸ್.ನಾರಾಯಣ್ ರಾವ್,ಹಾರೋಗುಳಿಗೆ ಪಧ್ಮನಾಭ್,ಪ.ಪಂ.ಅಧ್ಯಕ್ಷೆ ಗೀತಾ ರಮೇಶ್,ಸುಷ್ಮ ಸಂಜಯ್,ಸುಮ ಸುಬ್ರಹ್ಮಣ್ಯ, ಅಮರನಾಥ ಶೆಟ್ಟಿ,ಆದರ್ಶ ಹುಂಚದ ಕಟ್ಟೆ,ವಿಲಿಯಂ ಮಾರ್ಟಿಸ್ ಮುಂತಾದವರಿದ್ದರು.

Ayanur Manjunath ನನ್ನ ಬಗ್ಗೆ ಮಾತಾಡ ಬೇಕಾದರೆ ಸರ್ಜಿ ಇನ್ನಷ್ಟೂ ರಾಗಿ ಬೀಸಿ ಬರಲಿ- ಆಯನೂರು

0

Ayanur Manjunath ಡಾ|| ಧನಂಜಯ ಸರ್ಜಿಗೆ ರಾಜಕೀಯ ಇತಿಹಾಸ ಗೊತ್ತಿಲ್ಲ. ಬಿಜೆಪಿಯಲ್ಲಿ ಅವರಿನ್ನೂ ಎಲ್.ಕೆ.ಜಿ. ನಾನು ಬರಗಾಲದಲ್ಲಿ ಬಿತ್ತಿ ಬೆಳೆದುಕೊಂಡು ಬಂದವನು. ಸ್ವಂತಬಲದಲ್ಲಿ ನಾನು ಬೆಳೆದು ಬಂದವನು. ಸರ್ಜಿ ಒಳ್ಳೆಯವರು. ಅವರಿಗೆ ಎಲ್ಲೂ ಮಾನ್ಯತೆ ಸಿಕ್ಕಿಲ್ಲ. ನನ್ನ ಬಗ್ಗೆ ಮಾತನಾಡಬೇಕಾದರೆ ಇನ್ನಷ್ಟು ರಾಗಿ ಬೀಸಿ ಬರಲಿ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾವತಿಯಲ್ಲಿ ಸ್ಪರ್ಧಿಸಿ ಸೋತಿದ್ದೇನೆ. ನೀರಿಲ್ಲದ ಜಾಗದಲ್ಲಿ ನನಗೆ ಜಮೀನು ಕೊಟ್ಟಿದ್ದು, ಸರ್ಜಿ ಬಂದಿದ್ದು ನೀರಾವರಿ ಜಮೀನಿಗೆ. ಡಾ|| ಸರ್ಜಿ ತಿಳಿಯದೆ ಕಾಮೆಂಟ್ಸ್ ಮಾಡಬಾರದು. ನನ್ನ ಬಗ್ಗೆ ಮಾತನಾಡಬೇಕಾದರೆ ಇನ್ನಷ್ಟು ಅರಿತುಕೊಳ್ಳಲಿ ಎಂದರು.
Ayanur Manjunath ಡಾ|| ಸರ್ಜಿಗೆ ಬಿಜೆಪಿ ಅರ್ಥವಾಗಿಲ್ಲ. ನಾನು ಫಲಾನು¨sವಿ ಎಂದಿದ್ದಾರೆ. ೧೯೯೪ ರಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಒಬ್ಬ ಗ್ರಾಪಂ ಸದಸ್ಯನೂ ಇರದ ಸಂದರ್ಭದಲ್ಲಿ ಸ್ಪರ್ಧಿಸಿರುವೆ. ಗೆದ್ದಿರುವೆ. ಲೋಕಸಭಾದಲ್ಲಿ ಬಿಎಸ್ ವೈ, ಆನಂದರಾವ್, ಶಂಕರಮೂರ್ತಿ ಅವರು ಬಂಗಾರಪ್ಪ ವಿರುದ್ಧ ಸೋತಿದ್ದರು. ನಾನು ಮೊದಲ ಬಾರಿಗೆ ೧೯೯೮ ರಲ್ಲಿ ಬಂಗಾರಪ್ಪನವರನ್ನು ಸೋಲಿಸಿ ಗೆದ್ದಿರುವೆ ಎಂದರು.
ಲೋಕಸಭಾ ಚುನಾವಣೆ ಕ್ಷೇತ್ರದಲ್ಲಿ ಗೀತಾ ಗೆದ್ದು ಬರುತ್ತಾರೆ. ನಾಳೆ ಗೀತಾ ಬೈಂದೂರಿನಿAದ ಪ್ರಚಾರ ಆರಂಬಿಸುವರು ಎಂದರು.

Robert Vadra ಲೋಕಸಭಾ ಚುನಾವಣೆ: ಸ್ಪರ್ಧಿಸಲು ಸೋನಿಯ ಅಳಿಯ ರಾಬರ್ಟ್ ವಾದ್ರಾ ಇಂಗಿತ?

0

Robert Vadra ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ಉತ್ತರ ಪ್ರದೇಶದ ಅಮೇಥಿಯಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

ಕ್ಷೇತ್ರದ ಜನರು ಈ ಬಾರಿ ಗಾಂಧಿ ಕುಟುಂಬದ ಯಾರಾದರೂ ತಮ್ಮನ್ನು ಲೋಕಸಭೆಗೆ ಪ್ರತಿನಿಧಿಸಬೇಕೆಂದು ಬಯಸುತ್ತಾರೆ ಎಂದು ಹೇಳಿದ್ದಾರೆ.

Robert Vadra ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶ್ರೀ ವಾದ್ರಾ, ಅಮೇಥಿಯ ಜನರು ತಮ್ಮ ಪ್ರಸ್ತುತ ಸಂಸದೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರೊಂದಿಗೆ ಸಂತೋಷವಾಗಿಲ್ಲ. ರಾಯ್‌ಬರೇಲಿ, ಅಮೇಥಿ, ಸುಲ್ತಾನ್‌ಪುರ, ಜಗದೀಶ್‌ಪುರ ಮುಂತಾದ ಪ್ರದೇಶಗಳಲ್ಲಿ ಗಾಂಧಿ ಕುಟುಂಬವು ಹಲವು ವರ್ಷಗಳಿಂದ ಜನರ ಅಭಿವೃದ್ಧಿಗೆ ಶ್ರಮಿಸಿದೆ ಎಂದು ಅವರು ಹೇಳಿದರು.

SVEEP Committee Shivamogga ಜಿಲ್ಲೆಯಲ್ಲಿ ಹೊಸದಾಗಿ 24000 ಯುವ ಮತದಾರರ ಸೇರ್ಪಡೆ- ಸ್ನೇಹಿಲ್ ಸುಧಾಕರ್ ಲೋಖಂಡೆ

0

SVEEP Committee Shivamogga ಜಿಲ್ಲಾ ಸ್ವೀಪ್ ಸಮಿತಿಯು 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ “ಮರೆಯದೇ ಮತ ಚಲಾಯಿಸಿರಿ, ದೇಶದ ಹೆಮ್ಮೆಯ ಪಾಲುದಾರರಾಗಿರಿ” ಎಂಬ ಧ್ಯೆಯ ವಾಕ್ಯದೊಂದಿಗೆ ನಿರಂತರವಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು, 2023ರ ಆಗಸ್ಟ್ ಮಾಹೆಯಿಂದ 2024 ರ ಜನವರಿ ಮಾಹೆಯವರೆಗೆ ನಡೆದ ಮತದಾರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ಸಂದರ್ಭದಲ್ಲಿ ಸಾಕಷ್ಟು ಪ್ರಚಾರವನ್ನು ಜಿಲ್ಲೆಯಾದ್ಯಂತ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೋಡಿರ್ಂಗ್ಸ್‍ಗಳನ್ನು ಅಳವಡಿಸುವ ಮೂಲಕ ಹಾಗೂ ಕರಪತ್ರಗಳಲ್ಲಿ ಮಾಹಿತಿಯನ್ನು ಮುದ್ರಿಸಿ ನೀಡಲಾಗಿರುತ್ತದೆ. ಅಲ್ಲದೇ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿಯಲ್ಲಿ ಸಿಬ್ಬಂದಿಗಳನ್ನು ಬಳಸಿಕೊಂಡು ಆಯಾ ಬೂತ್‍ನ ಮತಗಟ್ಟೆ ಮಟ್ಟದ ಅಧಿಕಾರಿಗಳ ಸಮನ್ವಯದೊಂದಿಗೆ ಮನೆ ಮನೆ ಭೇಟಿ ನೀಡಿ ಸಮೀಕ್ಷೆಯನ್ನು ನಡೆಸಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವವರನ್ನು ಗುರುತಿಸಿ, ಸೇರ್ಪಡೆ ಮಾಡಲು ಕ್ರಮವಹಿಸಲಾಗಿರುತ್ತದೆ.
ಶಾಲೆ ಕಾಲೇಜು ಹಂತದಲ್ಲಿ ಯುವ ಮತದಾರರರು ಕಡ್ಡಾಯವಾಗಿ ನೋಂದಣಿಯಾಗುವಂತೆ ಕ್ರಮವಹಿಸಲಾಗಿದೆ. ಈ ಎಲ್ಲಾ ಉಪಕ್ರಮಗಳ ಪರಿಣಾಮವಾಗಿ 2024 ರ ಲೋಕಸಭಾ ಚುನಾವಣೆಗೆ 24000 ಯುವ ಮತದಾರರು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುತ್ತಾರೆ. ಅದಲ್ಲದೇ ಈ ಬಾರಿ “ರಾಷ್ಟ್ರೀಯ ಮತದಾರರ ದಿನಾಚರಣೆ”ಯನ್ನು ವಿಶಿಷ್ಟವಾಗಿ ಆಚರಿಸಲಾಗಿದ್ದು, ಯುವ ಮತದಾರರಿಗೆ ಚುನಾವಣಾ ಪ್ರಕ್ರಿಯೆ ಹಾಗೂ ಚುನಾವಣೆಯ ಮಹತ್ವದ ಅರಿವು ಮೂಡಿಸುವ ಸಲುವಾಗಿ ಅನೇಕ ಕಾರ್ಯಕ್ರಮಗಳು ಅಂದರೆ ಕ್ವಿಜ್, ಪ್ರಬಂಧ ಸ್ಪರ್ಧೆ, ಭಿತ್ತಿ ಚಿತ್ರಸ್ಪರ್ಧೆ ಹಾಗೂ ಚಿತ್ರಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಗಿರುತ್ತದೆ. ಯುವ ಮತದಾರರಿಗೆ ಚುನಾವಣೆಯಲ್ಲಿ ಹಾಗೂ ಮತದಾನದಲ್ಲಿ ಆಸಕ್ತಿಯನ್ನು ಮೂಡಿಸಲಾಗಿದೆ.
ಚುನಾವಣೆ ಘೋಷಣೆಯಾದ ನಂತರ ಸ್ವೀಪ್ ಚಟುವಟಿಕೆಯನ್ನು ತೀವ್ರತರಗೊಳಿಸಿದ್ದು, ಕಳೆದ ಲೋಕಸಭೆ ಚುನಾವಣೆಯಲ್ಲಿ ಆಯಾ ವಿಧಾನಸಭೆ ಕ್ಷೇತ್ರವಾರು ಮತದಾನದ ಪ್ರಮಾಣವನ್ನು ಹೋಲಿಸಲಾಗಿ ಶೇ.10 ಕ್ಕಿಂತ ಕಡಿಮೆ ಮತದಾನವಾದಂತಹ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ನಮ್ಮ ಜಿಲ್ಲೆಯಲ್ಲಿ 148 ಮತಗಟ್ಟೆಗಳನ್ನು ಕೇಂದ್ರೀಕರಿಸಿ ಅನೇಕ ಸ್ವೀಪ್ ಚಟುವಟಿಕೆಗಳನ್ನುವ ಹಮ್ಮಿಕೊಳ್ಳಲಾಗಿದೆ. ಏ.09,2024 ರವರೆಗೆ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲು ಹಾಗೂ ಸ್ಥಳಾಂತರವಾಗಲು ಅವಕಾಶವಿರುವುದರಿಂದ ಈ ಬಗ್ಗೆ ಮತಗಟ್ಟೆಗಳ ಹಂತದಲ್ಲಿ ಹೆಚ್ಚಿನ ಪ್ರಚಾರ ನೀಡಲಾಗುತ್ತಿದೆ. ಯಾವೊಬ್ಬ ಅರ್ಹ ಮತದಾರರು ಮತದಾನದಿಂದ ವಂಚಿತರಾಗಬಾರದು ಎಂಬುದು ಜಿಲ್ಲಾ ಸ್ವೀಪ್ ಸಮಿತಿಯ ಮುಖ್ಯ ಧೈಯವಾಗಿರುತ್ತದೆ.
ಅಲ್ಲದೇ ಕಡಿಮೆ ಮತದಾನವಾಗಿರುವ ಮತಗಟ್ಟೆಗಳಲ್ಲಿ ಮತದಾನ ಹೆಚ್ಚಿಸುವುದಕ್ಕಾಗಿ ಕಡಿಮೆ ಮತದಾನಕ್ಕೆ ಕಾರಣಗಳನ್ನು ಗುರುತಿಸಿ ಬೂತ್ ಮಟ್ಟದ ಕಾರ್ಯ ಯೋಜನೆಗಳನ್ನು (Micro Plan) ಸಿದ್ಧಪಡಿಸಿಕೊಳ್ಳಲಾಗಿದೆ. ಕಾರಣಗಳಿಗೆ ಅನುಗುಣವಾಗಿ ಅರಿವು ಮೂಡಿಸುವ ಹಾಗೂ ಪರಿಹಾರಾತ್ಮಕವಾದ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಮತದಾನ ಪ್ರಮಾಣ ಹೆಚ್ಚಿಸಲು ಕ್ರಮವಹಿಸಲಾಗುತ್ತಿದೆ. ಇದಲ್ಲದೇ ಜಾಥಾ ರ್ಯಾಲಿಗಳು, ವಾಕಥಾನ್‍ಗಳು, ಕ್ಯಾಂಡಲ್‍ಮಾರ್ಚ್ ಈ ರೀತಿಯ ಸಮುದಾಯ ಪ್ರೇರೇಪಿತ ಚಟುವಟಿಕೆಗಳನ್ನು ಆಯೋಸುವ ಉದ್ದೇಶವನ್ನು ಸ್ವೀಪ್ ಸಮಿತಿ ಹೊಂದಿರುತ್ತದೆ.
SVEEP Committee Shivamogga ಇದರ ಜೊತೆಗೆ ಹಿರಿಯನಾಗರಿಕರು, ಹಾಗೂ ವಿಶೇಷಚೇತನರಿಗೂ ಸಹ ಮತದಾನ ಪ್ರಕ್ರಿಯೆಯಲ್ಲಿ ಸಹಜವಾಗಿ ಭಾಗವಹಿಸುವ ದೃಷ್ಟಿಯಿಂದ ಅನೇಕ ಉಪಕ್ರಮಗಳನ್ನು ಅಂದರೆ ಮತಗಟ್ಟೆಗಳಲ್ಲಿ ರ್ಯಾಂಪ್, ವೀಲ್ಚೇರ್, ಭೂತಗನ್ನಡಿಗಳು, ಬೈಲ್ ಪತ್ರಿಕೆಗಳನ್ನು ವ್ಯವಸ್ಥೆ ಮಾಡಲಾಗಿದೆ. ನಮ್ಮ ಜಿಲ್ಲೆಯ ವಿಕಲಚೇತನರ ಕಲ್ಯಾಣಾಧಿಕಾರಿಗಳು, ವಿಕಲಚೇತನ ಮತದಾರರಿಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳಾಗಿದ್ದು, ಇವರ ಮೂಲಕ ವಾಕ್ ಮತ್ತು ಶ್ರವಣ ದೋಷವಿರುವ ಮತದಾರರನ್ನು ಗುರುತಿಸಲಾಗುತ್ತಿದ್ದು, ಅಂತಹವರಿಗೆ ಅನುಕೂಲಾಗುವಂತೆ ಸಂಕೇತ ಭಾಷೆ ಬಲ್ಲವರನ್ನು ನಿಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಸಮಾಜದ ದುರ್ಬಲ ವರ್ಗಗಳೆಂದು ಗುರುತಿಸಲ್ಪಟ್ಟ ಬುಡಕಟ್ಟು ಜನಾಂಗಗಳು, ತೃತೀಯ ಲಿಂಗಿಗಳು, ಸೆಕ್ಸ್ ವರ್ಕರ್ಸ್ ಇವರೆಲ್ಲರೂ ಸಹ ಮತದಾನದಿಂದ ವಂಚಿತರಾಗಬಾರದೆಂಬ ಸದುದ್ದೇಶದಿಂದ ಇವರುಗಳು ವಾಸವಾಗಿರುವ ಸ್ಥಳದಲ್ಲಿ ಮತದಾನ ಉತ್ತೇಜಿಸಲು ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ. ಈ ರೀತಿ ಜಿಲ್ಲೆಯ ಎಲ್ಲಾ ಅರ್ಹ ಮತದಾರರು ಮತದಾನದ ದಿನದಂದು ಮತಗಟ್ಟೆಗಳಿಗೆ ಬಂದು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ.

ಮುಖ್ಯ ಚುನಾವಣಾಧಿಕಾರಿಯವರ ಕಛೇರಿಯ ನಿರ್ದೇಶನದಂತೆ ದಿನಾಂಕ:28.04.2024 ರಂದು ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮವನ್ನು ಬೂತ್‍ಮಟ್ಟ, ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಆ ದಿನ ಆಯಾ ಹಂತದ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳು ಆ ವ್ಯಾಪ್ತಿಯ ಮತದಾರರ ಸೇರ್ಪಡೆಗೊಳಿಸಲು ಆ ದಿನ ಹಬ್ಬದ ರೀತಿ ಆಚರಿಸಲಾಗುವುದು.
ಬೇಸಿಗೆಯಲ್ಲಿ ಮತದಾನದ ದಿನಾಂಕ ನಿಗದಿಯಾಗಿರುವುದರಿಂದ Queue Management Planಮತ್ತು Heatwave plan ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ಈ ಬಾರಿ 3 ಕ್ಕಿಂತ ಹೆಚ್ಚು ಬೂತ್‍ಗಳಿರುವ ಸ್ಥಳಗಳಲ್ಲಿ ಮತದಾರರಿಗೆ ಸಹಾಯಕವಾಗುವಂತೆ Voter Assistance Booth ಗಳ ವ್ಯವಸ್ಥೆ ಮಾಡಲಾಗುವುದು. ಮತಗಟ್ಟೆಗೆ ಬರಲು ಆಗದಂತಹ ಅಂಗವಿಕಲರು ಹಾಗೂ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ 12-B ಸಲ್ಲಿಸುವ ಮೂಲಕ ಅಂಚೆ ಮತಪತ್ರದ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿ, ಚುನಾವಣಾ ಆಯೋಗವು ಅವಕಾಶ ನೀಡಿದೆ.
ಜಿಲ್ಲಾ ಸ್ವೀಪ್ ಸಮಿತಿಯ ಧ್ಯೇಯ ಈ ಬಾರಿ ಶತ ಪ್ರತಿಶತ ಮತದಾನ ಮಾಡುವಂತೆ ಮತದಾರರನ್ನು ಮತಗಟ್ಟೆಗಳಿಗೆ ಸೆಳೆಯುವುದಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಮತದಾರರು ಮತಗಟ್ಟೆಗೆ ಬಂದು ತಮ್ಮ ಅಮೂಲ್ಯ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಚುನಾವಣಾ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಸ್ವೀಪ್ ಸಮಿತಿ ಮೂಲಕ ಕೋರಿದೆ.

Aravind Kejriwal ಕೇಜ್ರಿವಾಲ್ ಈಗ ತಿಹಾರ್ ಜೈಲಿಗೆ ಸ್ಥಳಾಂತರ

0

Aravind Kejriwal ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ನಗರದ ನ್ಯಾಯಾಲಯ ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ನಂತರ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು
ತಿಳಿಸಿದ್ದಾರೆ.

ಅಬಕಾರಿ ನೀತಿ ಸಂಬಂಧಿತ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮಾರ್ಚ್ 21 ರಂದು ಕೇಜ್ರಿವಾಲ್ ಅವರನ್ನು ಬಂಧಿಸಿತ್ತು.

Aravind Kejriwal ಸಿಎಂ ಅರವಿಂದ್ ಕೇಜ್ರಿವಾಲ್
ಅಬಕಾರಿ ನೀತಿ ಪ್ರಕರಣ: ದೆಹಲಿ ಸಿಎಂ ಕೇಜ್ರಿವಾಲ್ ಗೆ 15 ದಿನ ನ್ಯಾಯಾಂಗ ಬಂಧನ
ತಿಹಾರ್ ಜೈಲಿಗೆ ಕರೆತರಲಾಗಿದ್ದು, ಜೈಲು ಸಂಖ್ಯೆ 2 ರಲ್ಲಿ ಇರಿಸಲಾಗುವುದು. ವೈದ್ಯಕೀಯ ಪರೀಕ್ಷೆಗಾಗಿ ಅವರನ್ನು ಕರೆದೊಯ್ಯಲಾಗಿದ್ದು, ಅವರನ್ನು ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗುವುದು ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ಪ್ರಕರಣದಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಂಧಿತರಾಗಿದ್ದ ಎಎಪಿ ನಾಯಕ ಸಂಜಯ್ ಸಿಂಗ್ ಅವರನ್ನು ಈ ಹಿಂದೆ ಜೈಲು ಸಂಖ್ಯೆ 2 ರಲ್ಲಿ ಇರಿಸಲಾಗಿತ್ತು ಆದರೆ ಇತ್ತೀಚೆಗೆ ಜೈಲು ಸಂಖ್ಯೆ 5 ಕ್ಕೆ ಸ್ಥಳಾಂತರಿಸಲಾಯಿತು.

ಇನ್ನೂ ಇದೇ ಪ್ರಕರಣದಲ್ಲಿ ಜೈಲಿನಲ್ಲಿರುವ ಕೇಜ್ರಿವಾಲ್ ಅವರ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಜೈಲು ಸಂಖ್ಯೆ 1 ರಲ್ಲಿ ಇರಿಸಲಾಗಿದ್ದು, ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರು ಮಹಿಳಾ ಜೈಲಿನ ಜೈಲು ಸಂಖ್ಯೆ 6 ರಲ್ಲಿದ್ದಾರೆ. ಕೇಜ್ರಿವಾಲ್ ಅವರ ಜಾರಿ ನಿರ್ದೇಶನಾಲಯದ ಕಸ್ಟಡಿ ಅಂತ್ಯಗೊಂಡ ನಂತರ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಸಂಪೂರ್ಣ ಅಸಹಕಾರದಿಂದಾಗಿ ಕೇಜ್ರಿವಾಲ್ ಅವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಇಡಿ ಕೋರಿತ್ತು.

Thirthahalli Police ತುಂಗಾನದಿಯಲ್ಲಿ ಮೂವರು ನೀರುಪಾಲು

0

Thirthahalli Police ತೀರ್ಥಹಳ್ಳಿಯ ಸೇಂಟ್ ಮೇರಿ ಶಾಲೆಯ ಮೂರು ಮಕ್ಕಳು ರಾಮೇಶ್ವರ ದೇವಸ್ಥಾನ ಹಿಂಬಾಗದಲ್ಲಿ ಸ್ನಾನ ಮಾಡಲು ಹೋದಾಗ ನೀರು ಪಾಲಾಗಿದ್ದಾರೆ.

ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಮೆಕಾನಿಕ್ ರಫಿಯ ಮಗ ಸೇರಿ ಎರಡು ಶವಗಳನ್ನು ಮೇಲೆತ್ತಲಾಗಿದೆ. . ಮತ್ತೊಬ್ಬನ ಪತ್ತೆ ಆಗಬೇಕಾಗಿದ್ದು ವಿವರಗಳು ತಿಳಿದು ಬರಬೇಕಿದೆ.

Madhu Bangarappa ಬಿ.ವೈ‌.ರಾಘವೇಂದ್ರಗೆ ಸುಳ್ಳಿನ ಸರದಾರ ಅವಾರ್ಡ್ ಕೊಡಬೇಕು- ಮಧು ಬಂಗಾರಪ್ಪ

0

Madhu Bangarappa ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಮಾದ್ಯಮ ಮಿತ್ರರೊಂದಿಗೆ ಮಾತನಾಡಿದರು.

ಹಠ,ಛಲದಿಂದ ಚುನಾವಣೆ ಮಾಡುತ್ತಿದ್ದೇವೆ.ಗೀತಕ್ಕನನ್ನು ಜನರ ಬಳಿ ಕರೆದುಕೊಂಡು ಹೋಗುತ್ತಿದ್ದೇವೆ .ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದೇವೆ ಎಂದರು.

ಜನ ಉತ್ತಮ ಬೆಂಬಲ ನೀಡುತ್ತಿದ್ದಾರೆ.ವಿರೋಧ ಪಕ್ಷಗಳು ಹಗುರವಾಗಿ ಮಾತನಾಡಬಹುದು.ಅದಕ್ಕೆ ಮತದಾರರು ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.

ಯಾರೇ ಡಮ್ಮಿ ಎನ್ನಲಿ ಅದು ಅವರಿಗೆ ಅನ್ವಯ ಆಗಲ್ಲ.ಗ್ಯಾರಂಟಿ ಯೋಜನೆ ಮೂಲಕ ಹೆಚ್ಚಿನ ಬಹುಮತ ಪಡೆಯುತ್ತೇವೆ.ದೇಶದ ಜನರು ಬಿಜೆಪಿಯನ್ನು ಸೋಲಿಸುತ್ತಾರೆ.
ಸ್ಟಾರ್ ಕ್ಯಾಂಪೇನರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದರು.

ಸಂಸದರಿಗೆ ಜನರ ಬಳಿಗೆ ಹೋಗಲು ಧೈರ್ಯ ಇಲ್ಲ. ರಾಘವೇಂದ್ರ ನೋಡಿ ಅಳಬೇಕೋ,ನಗಬೇಕೋ ಗೊತ್ತಾಗುತ್ತಿಲ್ಲ.ಸಂಸದರಾಗಿ ಏನು ಮಾಡಿದ್ದೀರಾ ಎಂದು ಪ್ರಶ್ನಿಸಿದರು.

Madhu Bangarappa ರಾಘವೇಂದ್ರ ಸುಳ್ಳಿನ ಸರದಾರ.
ಸುಳ್ಳಿನ ಸರದಾರ ಅವಾರ್ಡ್ ಕೊಡಬೇಕು. ಪಂಪ್ ಸೆಟ್ ರಾಜ್ಯದ ಜನರಿಗೆ ಯಾರು ಕೊಟ್ಟಿದ್ದು ಅಂತ ಹೇಳಬೇಕು.
ಸಂಸದ ರಾಘವೇಂದ್ರ ತಮ್ಮದೆ ಸಮಾವೇಶದಲ್ಲಿ ಹೇಳಲಿ ಎಂದರು.

ದೇಶ ಉಳಿದಿರುವುದು ಕಾಂಗ್ರೆಸ್ ನಿಂದ.ಬಿಜೆಪಿ ಅವರು ದೇಶವನ್ನು ಒಡೆದು ಆಳುತ್ತಿದ್ದೀರಾ. ರಾಮ ಜಪವನ್ನೆ ಈಗ ಬಿಜೆಪಿ ಅವರು ಬಿಟ್ಟಿದ್ದಾರೆ.ಶರಾವತಿ ಸಂತ್ರಸ್ತರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್ ಅನ್ನುತ್ತಾರೆ.ಶರಾವತಿ ಸಂತ್ರಸ್ತರಿಗೆ ಜೀವ ಕೊಟ್ಟಿದ್ದು ಕಾಗೋಡು ತಿಮ್ಮಪ್ಪ ಎಂದು ತಿಳಿಸಿದರು.

DC Shivamogga ಮಾಧ್ಯಮಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಗಮನಿಸಲು‌ ಕಣ್ಗಾವಲು ಸಮಿತಿ- ಗುರುದತ್ತ ಹೆಗ್ಗಡೆ

0

DC Shivamogga ಲೋಕಸಭೆ ಸಾರ್ವತ್ರಿಕ ಚುನಾವಣೆ -2024 ರ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲಿ ಪ್ರಸಾರವಾಗುವ ಸುದ್ದಿ ಮತ್ತು ಜಾಹೀರಾತುಗಳು, ಪೇಯ್ಡ್ ನ್ಯೂಸ್ ಮತ್ತಿತರ ವಿಷಯಗಳ ಬಗ್ಗೆ ನಿಗಾ ವಹಿಸಲು ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯು(ಡಿಸ್ಟ್ರಿಕ್ಟ್ ಮೀಡಿಯಾ ಆಂಡ್ ಮಾನಿಟರಿಂಗ್ ಕಮಿಟಿ) ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಭಾರತದ ಸರ್ವೋಚ್ಛ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗ ವಿವಿಧ ಹಂತಗಳಲ್ಲಿ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯನ್ನು ರಚಿಸಿದ್ದು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ರಾಜಕೀಯ ಸ್ವರೂಪದ ಜಾಹಿರಾತುಗಳನ್ನು ಪ್ರಸಾರ ಮಾಡುವ ಮುನ್ನ ಕಡ್ಡಾಯವಾಗಿ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯಿಂದ ಅನುಮೋದನೆ ಪಡೆದುಕೊಳ್ಳಬೇಕಾಗಿದೆ.

ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ ಕಾರ್ಯನಿರ್ವಹಿಸುತ್ತಿದ್ದು, ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹಿರಾತುಗಳು, ಸುದ್ದಿರೂಪದ ಜಾಹಿರಾತುಗಳ ಬಗ್ಗೆ ನಿಗಾ ವಹಿಸಿ ಚುನಾವಣಾಧಿಕಾರಿಗಳಿಗೆ ಹಾಗೂ ವೆಚ್ಚ ವೀಕ್ಷಕರಿಗೆ ದಿನವಹಿ ವರದಿಯನ್ನು ಸಮಿತಿ ನೀಡಲಿದೆ.

ದೂರದರ್ಶನ, ರೇಡಿಯೋ, ಕೇಬಲ್ ಟೆಲಿವಿಷನ್, ಹಾಗೂ ಸುದ್ದಿಪತ್ರಿಕೆಗಳು (ಪತ್ರಿಕಾ ಮಾಧ್ಯಮಗಳು ಆನ್‍ಲೈನ್ ಸಂಚಕೆ ಹೊಂದಿರುವುದರಿಂದ ಅದನ್ನು ವಿದ್ಯುನ್ಮಾನ ಸ್ವರೂಪದ ಜಾಹೀರಾತು ಎಂದು ಪರಿಗಣಿಸಲಾಗುತ್ತದೆ), ಸೋಷಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್ ಮುಂತಾದ ವಿದ್ಯುನ್ಮಾನ ಸ್ವರೂಪದ ಜಾಹಿರಾತುಗಳನ್ನು ಪ್ರಸಾರ ಮಾಡುವ ಮುನ್ನ ಎಂಸಿಎಂಸಿ ವತಿಯಿಂದ ಕಡ್ಡಾಯವಾಗಿ ಅನುಮೋದನೆ ಪಡೆದುಕೊಳ್ಳಬೇಕು.
ಮಾಧ್ಯಮಗಳ ಪ್ರಸಾರದ ಮೇಲೆ ನಿಗಾವಹಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೀಡಿಯಾ ಮಾನಿಟರಿಂಗ್ ಸೆಲ್ ಸ್ಥಾಪಿಸಲಾಗಿದ್ದು, ಇಲ್ಲಿ ಚುನಾವಣಾ ಕರ್ತವ್ಯನಿರತ ಅಧಿಕಾರಿ/ಸಿಬ್ಬಂದಿಗಳು ಎಲ್ಲಾ ಮಾಧ್ಯಮಗಳ ಪ್ರಸಾರ/ಪ್ರಕಟಣೆ ಮೇಲೆ ನಿಗಾವಹಿಸುವರು.

DC Shivamogga ಸೋಷಿಯಲ್ ಮೀಡಿಯಾ ಒಳಗೊಂಡಂತೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ ಮಾಡಲು ಉದ್ದೇಶಿಸಿರುವ ಜಾಹೀರಾತು ವಿಷಯ ಪ್ರಮಾಣೀಕರಣಕ್ಕೆ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ನಿಗಧಿತ ನಮೂನೆಗಳಲ್ಲಿ ಜಿಲ್ಲಾ ಎಂಸಿಎಂಸಿ ಸಮಿತಿಗೆ ಅರ್ಜಿ ಸಲ್ಲಿಸಬೇಕಾಗಿದ್ದು, ಈ ಕುರಿತು ಅನುಮೋದನೆಯನ್ನು ಪಡೆಯಲು ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಭವನ, ಶಿವಮೊಗ್ಗ ಇಲ್ಲಿ ಸಂಪರ್ಕಿಸಬಹುದಾಗಿದೆ.

ಒಂದು ವೇಳೆ ಅನುಮೋದನೆ ಪಡೆಯದೇ ಜಾಹಿರಾತು ಪ್ರಸಾರವಾದಲ್ಲಿ ಅದನ್ನು ಚುನಾವಣಾ ಅಕ್ರಮ ಎಂದು ಪರಿಗಣಿಸಲಾಗುವುದು. ಮಾಧ್ಯಮ ಕಣ್ಗಾವಲು ಸಮಿತಿಯು ಈ ಬಗ್ಗೆ ಅಗತ್ಯ ಕ್ರಮಕ್ಕಾಗಿ ಚುನಾವಣಾಧಿಕಾರಿಗಳಿಗೆ ವರದಿ ಮಾಡುವುದು. ಅಭ್ಯರ್ಥಿಯ ಗಮನಕ್ಕೆ ತಾರದೆ ಬೇರೆಯವರು ಅಭ್ಯರ್ಥಿಯ ಹೆಸರಿನಲ್ಲಿ ಜಾಹಿರಾತು ಪ್ರಕಟಿಸುವಂತಿಲ್ಲ.

ಪತ್ರಿಕೆಗಳಲ್ಲಿ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿ ರೂಪದ ಜಾಹಿರಾತುಗಳ (ಪೇಯ್ಡ್ ನ್ಯೂಸ್) ಬಗ್ಗೆಯೂ ಸಮಿತಿ ಗಮನ ಹರಿಸಲಿದೆ. ಕಾಸಿಗಾಗಿ ಸುದ್ದಿ ಎಂದು ಪರಿಗಣಿಸಲಾಗುವ ಈ ಪ್ರಕರಣಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಾಹಿರಾತು ದರ ಅನ್ವಯಿಸಿ ಅಭ್ಯರ್ಥಿಗಳ ಲೆಕ್ಕಕ್ಕೆ ಸೇರಿಸಲಾಗುತ್ತದೆ.

ಈ ಕಾಸಿಗಾಗಿ ಸುದ್ದಿ ಪ್ರಕಟಿಸಿದ ಮಾಧ್ಯಮಗಳ ಬಗ್ಗೆ ಮುಂದಿನ ಕ್ರಮಕ್ಕಾಗಿ ಮುಖ್ಯ ಚುನಾವಣಾಧಿಕಾರಿಗಳ ಮೂಲಕ ಭಾರತ ಚುನಾವಣಾ ಆಯೋಗಕ್ಕೆ ವರದಿ ಮಾಡಲಾಗುತ್ತದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ತಿಳಿಸಿದ್ದಾರೆ.