Saturday, November 28, 2026
Saturday, November 28, 2026

ಅಕ್ರಮ ಗೋ ಸಾಗಾಣೆ: ಹೊಸನಗರ ಪೊಲೀಸರಿಂದ ಪ್ರಕರಣ ದಾಖಲು

Date:

ಸೂಕ್ತ ಕ್ರಯಪತ್ರವಿಲ್ಲದೆ ಹೊಸನಗರದಿಂದ ಆಂಧ್ರಪ್ರದೇಶದ ಪುಟ್ಟಪರ್ತಿಗೆ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಹೊಸನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನ ಆರ್‌ಎಂವಿ 2ನೇ ಹಂತ, ಡಾಲರ್ಸ್ ಕಾಲೋನಿ 3ನೇ ಕ್ರಾಸ್‌ನ ನಿವಾಸಿ ಡಾ. ರವೀಂದ್ರ ಸುಬ್ಬಣ್ಣ ಅವರು ಗೋವುಗಳನ್ನು ಖರೀದಿಸುತ್ತಿದ್ದರು ಎಂದು ತಿಳಿದುಬಂದಿದೆ.

ಹೊಸನಗರ ತಾಲೂಕಿನ ಎಂ. ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಕೊಪ್ಪದಿಂದ ಗೋವುಗಳ ಮಾಲೀಕ ರಾಧಾಕೃಷ್ಣ ಉಡುಪ ಅವರು ಗೋವುಗಳನ್ನು ನೀಡಿದ್ದು, ಸುರೇಶ್ ಎಂಬುವವರು ವಾಹನ ಚಾಲನೆ ಮಾಡುತ್ತಿದ್ದರು ಎನ್ನಲಾಗಿದೆ.

KA-02 AG-2847 ನೋಂದಣಿ ಸಂಖ್ಯೆಯ ಏಚರ್ ಕ್ಯಾಂಟರ್ ವಾಹನದಲ್ಲಿ ಒಟ್ಟು 10 ಗೋವುಗಳು ಹಾಗೂ 10 ಕರುಗಳನ್ನು ಸಾಗಿಸಲಾಗುತ್ತಿತ್ತು. ಸೂಕ್ತ ಕ್ರಯಪತ್ರವಿಲ್ಲದೆ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೊಸನಗರ ಪಿಎಸ್‌ಐ ಸಂತೋಷ್ ಬಾಗೋಜಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗೋವುಗಳ ಸಾಗಣೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಆರೋಪಗಳ ಕುರಿತು ಪೊಲೀಸ್ ಪರಿಶೀಲನೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಆಹಾರ ತಯಾರಿಕೆ: ಸಂಸ್ಕರಣೆ ಮತ್ತು ವಿತರಣೆಯಲ್ಲಿ ಸೂಕ್ತ ಸುರಕ್ಷತಾ ಕ್ರಮ ಅಳವಡಿಕೆ ಕಡ್ಡಾಯ- ಡಾ.ಎಚ್.ಪಿ.ಎಸ್.ಮೈತ್ರಿ

Rotary Club Shivamogga ಸುರಕ್ಷಿತ ಆಹಾರ ಪ್ರತಿಯೊಬ್ಬ ಗ್ರಾಹಕನ ಹಕ್ಕಾಗಿದ್ದು, ಆಹಾರದಿಂದ...

D.K. Shivakumar ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲ ಶಾಲೆಗಳಲ್ಲೂ ಸಂವಿಧಾನ ಪಾಠ ಅಳವಡಿಕೆ- ಡಿ.ಕೆ.ಶಿವಕುಮಾರ್.

D.K. Shivakumar ಸಂವಿಧಾನ ಎನ್ನುವುದು ಕೇವಲ ಪುಸ್ತಕವಲ್ಲ, ಅದು ಪ್ರತಿಯೊಬ್ಬ ಭಾರತೀಯನ...

U. T. Khader ಆಶಾ ಕಾರ್ಯಕರ್ತೆಯರ ನ್ಯಾಯಬದ್ಧ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧ- ಆರೋಗ್ಯ ಸಚಿವ ಯು.ಟಿ.ಖಾದರ್

U. T. Khader ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಹಾಗೂ ವೇತನ ಹೆಚ್ಚಳದ...