ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಶಿವಮೊಗ್ಗ ಹಾಗೂ ಗಂಗೋತ್ರಿ ಪದವಿ ಪೂರ್ವ ಕಾಲೇಜು, ಶಿವಮೊಗ್ಗ ಇವರ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಶಿವಮೊಗ್ಗ ನಗರದ ಮಠದ ಆವರಣದಲ್ಲಿರುವ ಶ್ರೀ ಆದಿಚುಂಚನಗಿರಿ ಸ್ವತಂತ್ರ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದು ಸತತ ಎರಡನೇ ಬಾರಿ ಸಮಗ್ರ ಪ್ರಶಸ್ತಿಯನ್ನು ಮುಡಿ ಗೇರಿಸಿಕೊಂಡಿದ್ದಾರೆ.
ವಿಜೇತರಾದ ವಿದ್ಯಾರ್ಥಿಗಳನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಶಿವಮೊಗ್ಗ ಶಾಖಾ ಮಠದ ಶ್ರೀ ನಾದ ಮಯಾನಂದನಾಥ ಸ್ವಾಮೀಜಿಯವರು ಅಭಿನಂದಿಸಿದರು.
ಇವರೊಂದಿಗೆ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ವಿಜೇತರಿವರು:
ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಪಿಯುಸಿ ವಿಭಾಗದಿಂದ ಕು. ಸಾನ್ವಿ ಭಾರದ್ವಾಜ್ ಮತ್ತು ಚಿ. ಕೆವಿನ್ ಫ್ರಾನ್ಸಿಸ್ ಡಿಸೋಜ ಪ್ರಥಮ ಸ್ಥಾನ. ದ್ವಿತೀಯ ಪಿಯುಸಿ ವಿಭಾಗದಿಂದ ಕು. ಪಾವನ ಅರವಿಂದ್ ಮತ್ತು ಚಿ. ಮೊಹಮ್ಮದ್ ರಾಹಿಲ್, ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇಂಗ್ಲೀಷ್ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಪಿಯುಸಿ ವಿಭಾಗದಿಂದ ಕು. ಬಿ ಬಿ ಸೂಫಿಯ, ಪ್ರಥಮ ಸ್ಥಾನ, ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಭಾಗದಿಂದ ಚಿ. ತರುಣ್ ಡಿ., ದ್ವಿತೀಯ ಸ್ಥಾನ, ಇಂಗ್ಲೀಷ್ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಪಿಯುಸಿ ವಿಭಾಗದಿಂದ ಕು. ತಿಷಾ ರಾಜ್ಪುರೋಹಿತ್, ಪ್ರಥಮ ಸ್ಥಾನ. ದ್ವಿತೀಯ ಪಿಯುಸಿ ವಿಭಾಗದಿಂದ ಕು. ಶ್ರೀವರ್ಷಿಣ, ಪ್ರಥಮ ಸ್ಥಾನ ಪಡೆದಿದ್ದಾರೆ.
ಏಕ ಪಾತ್ರಾಭಿನಯ ಸ್ಪರ್ಧೆಯಲ್ಲಿ ಪ್ರಥಮ ಪಿಯುಸಿ ವಿಭಾಗದಿಂದ ಕು. ನಿಸರ್ಗ, ದ್ವಿತೀಯ ಸ್ಥಾನ. ದ್ವಿತೀಯ ಪಿಯುಸಿ ವಿಭಾಗದಿಂದ ಕು. ನಂದಿನಿ, ದ್ವಿತೀಯ ಸ್ಥಾನ. ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಪಿಯುಸಿ ವಿಭಾಗದಿಂದ ಕು. ಚಂದನ ಕೆ.ಸಿ., ಪ್ರಥಮ ಸ್ಥಾನ. ಚಿತ್ರಕಲೆ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಭಾಗದಿಂದ ಚಿ. ಪ್ರಜ್ವಲ್ ಹೆಚ್., ದ್ವಿತೀಯ ಸ್ಥಾನ ಗಳಿಸಿದ್ದಾರೆ.
ವಿಜ್ಞಾನ ಮಾದರಿ ತಯಾರಿಕೆಯಲ್ಲಿ ಪ್ರಥಮ ಪಿಯುಸಿ ವಿಭಾಗದಿಂದ ಚಿ. ಹೇಮಂತ್ ಜಿ., ಪ್ರಥಮ ಸ್ಥಾನ. ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಪಿಯುಸಿ ವಿಭಾಗದಿಂದ ಕು. ತನ್ಮಯಿ ಯು., ದ್ವಿತೀಯ ಸ್ಥಾನ. ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ.
ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ಆದಿಚುಂಚನಗಿರಿ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ
Date:
