Klive Special Article ಭಾರತೀಯ ಸಂವಿಧಾನ ದಿನ: ಪ್ರಜಾಪ್ರಭುತ್ವದ ಆತ್ಮವನ್ನು ಸ್ಮರಿಸುವ ಸುದಿನ (ನವೆಂಬರ್ 26 ರಾಷ್ಟ್ರೀಯ ಸಂವಿಧಾನ ದಿನದ ಪ್ರಯುಕ್ತ ಪ್ರಸ್ತುತ ಮಾಹಿತಿ)●
● ಪ್ರಸ್ತಾವನೆ:- ಇಡೀ ವಿಶ್ವಕ್ಕೆ ಮಾದರಿಯಾಗುವಂತ ಹಾಗೂ ಸರ್ವ ಸಮಾನತೆ ಸಾರಿರುವ ನಮ್ಮ ಸಂವಿಧಾನ ಪ್ರಜಾಪ್ರಭುತ್ವ ಬಾನೆತ್ತರಕ್ಕೆ,ಬೆಳಗುವಂತೆ ಮಾಡಿದ ಸುದಿನ ಇದು. ಭಾರತದ ಇತಿಹಾಸದಲ್ಲಿ ನವೆಂಬರ್ 26 ಅತ್ಯಂತ ಮಹತ್ವದ ದಿನವಾಗಿದೆ. ಏಕೆಂದರೆ 1949ರ ನವೆಂಬರ್ 26ರಂದು ನಮ್ಮ ದೇಶದ ಸಂವಿಧಾನವನ್ನು ಸಂವಿಧಾನ ರಚನಾ ಸಭೆಯು ಅಂಗೀಕರಿಸಿತು. ಈ ಐತಿಹಾಸಿಕ ದಿನದ ನೆನಪಿಗಾಗಿ ಪ್ರತಿವರ್ಷ ನವೆಂಬರ್ 26 ರಂದು ಭಾರತದಲ್ಲಿ ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ. ಭಾರತೀಯ ಸಂವಿಧಾನವು ಕೇವಲ ಕಾನೂನುಗಳ ಪುಸ್ತಕವಲ್ಲ. ಅದು ಕೋಟ್ಯಂತರ ಭಾರತೀಯರ ಆಶಯ, ಹಕ್ಕು, ಸ್ವಾತಂತ್ರ್ಯ, ಸಮಾನತೆ ಮತ್ತು ಘನತೆಯ ಪ್ರತೀಕವಾಗಿದೆ.
● ಸಂವಿಧಾನ ರಚನೆಯ ಐತಿಹಾಸಿಕ ಹಿನ್ನೆಲೆ:- ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ಮುನ್ನವೇ ದೇಶಕ್ಕೆ ಸ್ವತಂತ್ರ ಸಂವಿಧಾನದ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ 1946 ರ ಡಿಸೆಂಬರ್ 9ರಂದು ಸಂವಿಧಾನ ರಚನಾ ಸಭೆಯ ಮೊದಲ ಸಭೆ ನಡೆಯಿತು. ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿ ಡಾ.ರಾಜೇಂದ್ರ ಪ್ರಸಾದ್ ಕಾರ್ಯನಿರ್ವಹಿಸಿದರು. ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ಡಾ.ಬಿ.ಆರ್. ಅಂಬೇಡ್ಕರ್ ಮಹತ್ವದ ಜವಾಬ್ದಾರಿ ನಿರ್ವಹಿಸಿದರು. ಭಾರತೀಯ ಸಂವಿಧಾನ ರಚನೆಗೆ ಒಟ್ಟು 2 ವರ್ಷ, 11 ತಿಂಗಳು ಮತ್ತು 18 ದಿನಗಳು ಬೇಕಾದವು. ಅನೇಕ ಚರ್ಚೆಗಳು, ವಿಚಾರ ವಿನಿಮಯಗಳು ಮತ್ತು ತಿದ್ದುಪಡಿಗಳ ನಂತರ ಸಂವಿಧಾನ ಸಿದ್ಧವಾಯಿತು. 1949ರ ನವೆಂಬರ್ 26 ರಂದು ಸಂವಿಧಾನ ಅಂಗೀಕಾರಗೊಂಡಿತು. 1950ರ ಜನವರಿ 26ರಂದು ಅದು ಸಂಪೂರ್ಣವಾಗಿ ಜಾರಿಗೆ ಬಂದಿತು. ಅಂದಿನಿಂದ ಭಾರತವು ಗಣರಾಜ್ಯವಾಯಿತು.
● ಭಾರತ ಸಂವಿಧಾನದ ಕುರಿತು ಕೆಲವು ಪ್ರಮುಖ ಸಂಗತಿಗಳು:-
- ಬ್ರಿಟನ್, ಐರ್ಲ್ಯಾಂಡ್, ಜಪಾನ್, ಯುಎಸ್ಎ, ದಕ್ಷಿಣ ಆಫ್ರಿಕಾ, ಜರ್ಮನಿ, ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಗಳ ಸಂವಿಧಾನದ ಕೆಲವು ಅಂಶಗಳನ್ನು ಎರವಲು ಪಡೆದಿದೆ.
- 2 ವರ್ಷ 11 ತಿಂಗಳು, 17 ದಿನಗಳ ಅವಧಿಯಲ್ಲಿ ರಚಿಸಿದ ಸಂವಿಧಾನ ನಮ್ಮದಾಗಿದೆ.
- ಭಾರತ ಸಂವಿಧಾನ ಅತಿದೊಡ್ಡ ಕೈಬರವಣಿಗೆಯ ಡಾಕ್ಯುಮೆಂಟ್ ಹೊಂದಿರುವ ಸಂವಿಧಾನವಾಗಿದ್ದು, ಇಂಗ್ಲಿಷ್ನಲ್ಲಿ ಒಟ್ಟು 1,17,369 ಪದಗಳನ್ನು ಹೊಂದಿದೆ.
- ಕೈ ಬರವಣಿಗೆಯಲ್ಲಿ ಬರೆದ ಮೂಲ ಸಂವಿಧಾನ ಪುಸ್ತಕವನ್ನು ಸಂಸತ್ತಿನ ಗ್ರಂಥಾಲಯದಲ್ಲಿ ಹೀಲಿಯಂ ನಿಂದ ಕೂಡಿದ ಕೇಸ್ನಲ್ಲಿ ಸುರಕ್ಷಿತವಾಗಿ ಇಡಲಾಗಿದೆ.
- ಸಂವಿಧಾನ ಅಂಗೀಕಾರದ ನಂತರ ಗಣರಾಜ್ಯ ದೇಶದ ಮೊದಲ ರಾಷ್ಟ್ರಪತಿಯಾಗಿ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿತ್ತು.
- ಸಂವಿಧಾನ ಅಂಗೀಕಾರವಾದ ದಿನ 26 ನವೆಂಬರ್ 1949
- ಸಂವಿಧಾನದ ಕೊನೆಯ ಸಭೆ ನಡೆದ ದಿನ 24 ಜನೆವರಿ 1950
- ಸಂವಿಧಾನ ಜಾರಿಗೆ ಬಂದ ವರ್ಷ 26 ಜನವರಿ 1950
- ರಾಷ್ಟ್ರ ಧ್ವಜ ಅಳವಡಿಸಿಕೊಂಡ ದಿನಾಂಕ 22 ಜುಲೈ 1947
- ರಾಷ್ಟ್ರ ಚಿಹ್ನೆ ಹಾಗೂ ಲಾಂಛನ ಅಳವಡಿಸಿಕೊಂಡ ದಿನ 26 ಜನೆವರಿ 1950
- ಮೂಲ ಸಂವಿಧಾನದಲ್ಲಿ ಭಾಗಗಳ ಸಂಖ್ಯೆ 22 ಭಾಗಗಳು
- ಪ್ರಸ್ತುತ ಭಾರತದ ಸಂವಿಧಾನದಲ್ಲಿ 25 ಭಾಗಗಳಿವೆ.
- ಮೂಲ ಸಂವಿಧಾನದಲ್ಲಿ ಅನುಸೂಚಿಗಳ ಸಂಖ್ಯೆ 08
- ಪ್ರಸ್ತುತ ಸಂವಿಧಾನದಲ್ಲಿರುವ ಅನುಸೂಚಿಗಳ ಸಂಖ್ಯೆ 12
- ಮೂಲ ಸಂವಿಧಾನದಲ್ಲಿರುವ ಕಲಂಗಳ ಸಂಖ್ಯೆ 395
- ಪ್ರಸ್ತುತ ಭಾರತದ ಸಂವಿಧಾನದ ಕಲಂಗಳ ಸಂಖ್ಯೆ 471 ಕ್ಕಿಂತ ಹೆಚ್ಚು
- ಪ್ರಪಂಚದ ಅತ್ಯಂತ ದೊಡ್ಡ ಸಂವಿಧಾನ ಯುಗೊಸ್ಲಾವಿಯ
- ಪ್ರಪಂಚದ ಅತ್ಯಂತ ದೊಡ್ಡ ರಾಷ್ಟ್ರೀಯ ಸಂವಿಧಾನ ಭಾರತ ಸಂವಿಧಾನ
- ಪ್ರಪಂಚದ ಅತ್ಯಂತ ಹಳೆಯ ಸಂವಿಧಾನ ಸ್ಯಾನೊ ಪ್ರಾನ್ಸಿಸ್ಕೊ ಸಂವಿಧಾನ (1600)
- ಪ್ರಪಂಚದಲ್ಲಿ ಮೊದಲ ಮೂಲಭೂತ ಹಕ್ಕು ಅಥವಾ ಮ್ಯಾಗ್ನಾಕಾರ್ಟ್ ನೀಡಿದ ದೇಶ ಇಂಗ್ಲೆಂಡ್
- ಭಾರತದ ಪಂಚಾಂಗವನ್ನು ಅಭಿವೃದ್ಧಿ ಪಡಿಸಿದವರು ಮೇಘಾನಂದ ಸಹ ಇದನ್ನು 1957 ರಲ್ಲಿ ಅಳವಡಿಸಿಕೊಂಡಿದೆ.
- ಸಂವಿಧಾನದ ಮೊದಲ ತಿದ್ದುಪಡಿ :& ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಾದದ್ದು 18 ಜೂನ್ 1951
- ಪರಪಂಚದ ಅತ್ಯಂತ ಚಿಕ್ಕ ಸಂವಿಧಾನ ಅಮೆರಿಕಾ (7 ಕಲಂಗಳನ್ನು ಹೊಂದಿದೆ)
- ಪ್ರಪಂಚದ ಅತ್ಯಂತ ದೊಡ್ಡ ರಾಜ್ಯ ಸಂವಿಧಾನ ಆಲ್ಬಮಾ ಸಂವಿಧಾನ
- ಭಾರತ ಸಂವಿಧಾನದ ಆತ್ಮ ಮತ್ತು ಹೃದಯ ಎಂದು 32 ನೇ ವಿಧಿಯಲ್ಲಿ ಇದಕ್ಕೆ ರೀತಿಯಾಗಿ ಕರೆದವರು ಡಾ.ಬಿ.ಆರ್.ಅಂಬೇಡ್ಕರ್
- ಭಾರತವು ಕಾಮನ್ ವೆಲ್ತ್ ಒಕ್ಕೂಟಕ್ಕೆ ಸೇರಿದ ವರ್ಷ 1947 ಅಗಸ್ಟ್ 15
- ಭಾರತದ ಮಿನಿ ಸಂವಿಧಾನ, ಚಿಕ್ಕ ಸಂವಿಧಾನ ಹಾಗೂ ಇಂದಿರಾಗಾಂಧಿ ಸಂವಿಧಾನ ಎಂದು 42 ನೇ ತಿದ್ದುಪಡಿಗೆ ಕರೆಯಲಾಗುತ್ತದೆ.
- ಸಂವಿಧಾನ ರಚನೆಗೆ ತಗುಲಿದ ವೆಚ್ಚ ಆರು ಕೋಟಿ ನಲ್ವತ್ತು ಲಕ್ಷ ರೂ
- ಭಾರತ ಸಂವಿಧಾನದ ಪೂರ್ವಪೀಠಿಕೆಯನ್ನು ಅಮೇರಿಕಾ ಸಂವಿಧಾನದಿಂದ ಎರವಲು ಪಡೆಯಲಾಗಿದೆ.
- ಪೂರ್ವಪೀಠಿಕೆಯನ್ನು ಸಂವಿಧಾನದ ಜಾತಕ ಎಂದು ಕರೆದ ರಾಜಕೀಯ ತಜ್ಞ ಕೆ ಎಮ್ ಮುನ್ಷಿ
- ಪೂರ್ವಪೀಠಿಕೆಯನ್ನು ಸೊಗಸಾದ ಕಾವ್ಯ, ಸುಂದರ ಒಡವೆ ಇದ್ದಂತೆ ಎಂದು ಹೇಳಿದವರು ಭಾರ್ಗವದಾಸ್ ಠಾಕೂರ್
- 1960 ರಲ್ಲಿ ಸಂವಿಧಾನ ಪೂರ್ವ ಪೀಠಿಕೆ ಸಂವಿಧಾನ ಭಾಗವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು
ಆದರೆ ಕೇಶವಾನಂದ ವಿ/ಎಸ್ ಕೇರಳ ಪ್ರಕರಣದಲ್ಲಿ ಪೂರ್ವಪೀಠಿಕೆ ಸಂವಿಧಾನದ ಭಾಗವೆಂದು ತೀರ್ಪು ನೀಡಿತು. - 1995 ರ ಎಲ್ ಐ ಸಿ ಪ್ರಕರಣದಲ್ಲಿ ಪೂರ್ವಪೀಠಿಕೆವು ಸಂವಿಧಾನದ ಅವಿಭಾಜ್ಯ ಅಂಗವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು.
- ಪೂರ್ವಪೀಠಿಕೆಯನ್ನು ಇಲ್ಲಿತನಕ ಕೇವಲ ಒಂದು ಬಾರಿ ಮಾತ್ರ ತಿದ್ದುಪಡಿ ಮಾಡಲಾಗಿದೆ.
- 1976 ರಲ್ಲಿ 42 ನೇ ತಿದ್ದುಪಡಿ ಮೂಲಕ ಪೂರ್ವ ಪೀಠಿಕೆಗೆ “ಸಮಾಜವಾದಿ,ಜಾತ್ಯಾತೀತ, ಸಮಗ್ರತೆ ಎಂಬ ಮೂರು ಪದಗಳನ್ನು ಸೇರ್ಪಡೆ ಮಾಡಲಾಯಿತು.
- ಪೂರ್ವಪೀಠಿಕೆಯ ಪಿತಮಹ ಪಂಡಿತ್ ಜವಾಹರಲಾಲ್ ನೆಹರು
- ಸಂವಿಧಾನ ಪೂರ್ವಪೀಠಿಕೆ ಅಂಗೀಕಾರವಾದ ದಿನಾಂಕ 1949 ಅಕ್ಟೋಬರ್ 17
- ಸಂವಿಧಾನದ ಮೂಲ ಪ್ರತಿಯನ್ನು ಹೀಲಿಯಂ ಅನಿಲ ತುಂಬಿದ ಪೆಟ್ಟಿಗೆಯಲ್ಲಿ ಸಂರಕ್ಷಣೆ ಮಾಡಲಾಗುತ್ತದೆ.
- ಭಾರತದ ಸಂವಿಧಾನವನ್ನು ಹಿಂದಿ ಮತ್ತು ಇಂಗ್ಲೀಷ ಭಾಷೆಯಲ್ಲಿ ಬರೆಯಲಾಗಿದೆ.
- ಸಂವಿಧಾನವನ್ನು ಕೈ ಬರಹದಲ್ಲಿ ಬರೆದವರು- ಪ್ರೇಮ್ ಬಿಹಾರಿ ನಾರಾಯಣ
- ಸಂವಿಧಾನದ ಪುಸ್ತಕದಲ್ಲಿ ಚಿತ್ರಗಳನ್ನು ಬಿಡಿಸಿದವರು- ನಂದನ್ ಲಾಲ್ ಬೋಸ್.
- ಭಾರತೀಯ ಸಂವಿಧಾನವು ವಿಶ್ವದ ಅತ್ಯಂತ ವಿಸ್ತೃತ ಲಿಖಿತ ರಾಷ್ಟ್ರೀಯ ಸಂವಿಧಾನಗಳಲ್ಲಿ ಒಂದಾಗಿದೆ.
- ಸಂವಿಧಾನ ರಚನೆಗೆ ಸುಮಾರು ಮೂರು ವರ್ಷಗಳ ಕಾಲ ನಿರಂತರ ಚರ್ಚೆ ಮತ್ತು ಪರಿಶ್ರಮ ನಡೆದಿದೆ.
- ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಭಾರತೀಯ ಸಂವಿಧಾನದ ಶಿಲ್ಪಿ ಎಂದು ಗೌರವಿಸಲಾಗುತ್ತದೆ.
- ಮೂಲ ಸಂವಿಧಾನದ ಇಂಗ್ಲಿಷ್ ಮತ್ತು ಹಿಂದಿ ಪ್ರತಿಗಳನ್ನು ಕೈಬರಹದಲ್ಲಿ ಸುಂದರವಾಗಿ ಬರೆಯಲಾಗಿದೆ. ಇಂಗ್ಲಿಷ್ ಪ್ರತಿಯನ್ನು ಪ್ರೇಮ್ ಬಿಹಾರಿ ನಾರಾಯಣ್ ರೈಜಾದಾ ಅವರು ಬರೆದಿದ್ದಾರೆ.
- ಮೂಲ ಸಂವಿಧಾನದ ಪುಟಗಳನ್ನು ಶಾಂತಿನಿಕೇತನದ ಕಲಾವಿದರಾದ ನಂದಲಾಲ್ ಬೋಸ್ ಮತ್ತು ಅವರ ತಂಡದವರು ಸುಂದರ ಚಿತ್ರಗಳಿಂದ ಅಲಂಕರಿಸಿದ್ದಾರೆ.
- ಸಂವಿಧಾನದ ಮೂಲ ಪ್ರತಿಯನ್ನು ವಿಶೇಷವಾಗಿ ಸಂರಕ್ಷಿಸಲಾಗಿದ್ದು, ಸಂಸತ್ತಿನ ಗ್ರಂಥಾಲಯದಲ್ಲಿ ಹೀಲಿಯಂ ತುಂಬಿದ ವಿಶೇಷ ಪೆಟ್ಟಿಗೆಗಳಲ್ಲಿ ಇಡಲಾಗಿದೆ.
- ಸಂವಿಧಾನದ ಪ್ರಸ್ತಾವನೆಯು ಭಾರತದ ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಪ್ರತಿಬಿಂಬಿಸುತ್ತದೆ.
- ಸಂವಿಧಾನದ ಮೂಲ ಪ್ರತಿಯಲ್ಲಿ 395 ವಿಧಿಗಳು, 22 ಭಾಗಗಳು ಮತ್ತು 8 ಅನುಸೂಚಿಗಳಿದ್ದವು.
● ಸಂವಿಧಾನದ ಪ್ರಸ್ತಾವನೆಯ ಮಹತ್ವ:-
○ ಭಾರತೀಯ ಸಂವಿಧಾನದ ಪ್ರಸ್ತಾವನೆಯು ನಮ್ಮ ದೇಶದ ಆಡಳಿತದ ಮೂಲ ತತ್ವಗಳನ್ನು ಸಾರುತ್ತದೆ.
○ ಭಾರತವು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿದೆ ಎಂದು ಪ್ರಸ್ತಾವನೆ ಘೋಷಿಸುತ್ತದೆ.
○ ಇದು ಪ್ರತಿಯೊಬ್ಬ ನಾಗರಿಕನಿಗೂ ಕೆಳಗಿನ ಮೌಲ್ಯಗಳನ್ನು ಭರವಸೆ ನೀಡುತ್ತದೆ.
- ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ.
- ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಆರಾಧನೆಯ ಸ್ವಾತಂತ್ರ್ಯ.
- ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ.
- ವ್ಯಕ್ತಿಯ ಘನತೆ ಹಾಗೂ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವ ಭ್ರಾತೃತ್ವ.
● ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ:-ಭಾರತೀಯ ಸಂವಿಧಾನದ ರಚನೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ಸಮಾಜದಲ್ಲಿ ಶೋಷಣೆ, ಅಸಮಾನತೆ ಮತ್ತು ಜಾತಿ ತಾರತಮ್ಯವನ್ನು ಎದುರಿಸಿದ ಅವರು ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳು ದೊರೆಯಬೇಕೆಂದು ಶ್ರಮಿಸಿದರು. ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸಾಮಾಜಿಕ ಪರಿವರ್ತನೆಗೆ ಕರೆ ನೀಡಿದ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಪ್ರತಿಯೊಬ್ಬ ಭಾರತೀಯನಿಗೂ ಘನತೆಯಿಂದ ಬದುಕುವ ಅವಕಾಶ ಕಲ್ಪಿಸುವ ಆಶಯವನ್ನು ಬಲಪಡಿಸಿದರು.
● ಸಂವಿಧಾನ ನಮಗೆ ನೀಡಿರುವ ಪ್ರಮುಖ ಹಕ್ಕುಗಳು:-
- ಸಮಾನತೆಯ ಹಕ್ಕು.
- ಸ್ವಾತಂತ್ರ್ಯದ ಹಕ್ಕು.
- ಶೋಷಣೆಯ ವಿರುದ್ಧದ ಹಕ್ಕು.
- ಧಾರ್ಮಿಕ ಸ್ವಾತಂತ್ರ್ಯದ ಹಕ್ಕು.
- ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು.
- ಸಂವಿಧಾನಾತ್ಮಕ ಪರಿಹಾರಗಳ ಹಕ್ಕು.
● ನಮ್ಮ ಕರ್ತವ್ಯವೇನು?:-
- ಸಂವಿಧಾನವನ್ನು ಗೌರವಿಸಬೇಕು.
- ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಗೌರವ ನೀಡಬೇಕು.
- ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಬೇಕು.
- ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು.
- ಸಾರ್ವಜನಿಕ ಆಸ್ತಿಯನ್ನು ಸಂರಕ್ಷಿಸಬೇಕು.
- ಪರಿಸರವನ್ನು ರಕ್ಷಿಸಬೇಕು.
- ಪ್ರತಿಯೊಬ್ಬರ ಧರ್ಮ, ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು.
Klive Special Article ಇಂದಿನ ಸಮಾಜದಲ್ಲಿ ಸಂವಿಧಾನದ ಪ್ರಸ್ತುತತೆ ಅವಲೋಕನ:- ಇಂದಿನ ಆಧುನಿಕ ಭಾರತದಲ್ಲಿ ತಂತ್ರಜ್ಞಾನ, ವಿಜ್ಞಾನ, ಶಿಕ್ಷಣ ಮತ್ತು ಆರ್ಥಿಕ ಕ್ಷೇತ್ರಗಳು ವೇಗವಾಗಿ ಬೆಳೆಯುತ್ತಿವೆ. ಆದರೆ ಜಾತಿ ತಾರತಮ್ಯ, ಅಸ್ಪೃಶ್ಯತೆ, ಧಾರ್ಮಿಕ ಅಸಹಿಷ್ಣುತೆ, ಲಿಂಗ ತಾರತಮ್ಯ, ಭ್ರಷ್ಟಾಚಾರ ಮತ್ತು ಸಾಮಾಜಿಕ ಅಸಮಾನತೆಗಳು ಇನ್ನೂ ನಮ್ಮ ಸಮಾಜದ ಸವಾಲುಗಳಾಗಿವೆ. ಇಂತಹ ಸಂದರ್ಭದಲ್ಲಿ ಸಂವಿಧಾನದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಶಾಲೆಗಳಲ್ಲಿ ಮಕ್ಕಳಿಗೆ ಸಂವಿಧಾನದ ಮಹತ್ವ ತಿಳಿಸುವುದು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವುದು, ಮಹಿಳೆಯರಿಗೆ ಸಮಾನ ಅವಕಾಶ ನೀಡುವುದು, ದುರ್ಬಲ ವರ್ಗಗಳ ಹಕ್ಕುಗಳನ್ನು ಗೌರವಿಸುವುದು ಹಾಗೂ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
● ಉಪಸಂಹಾರ:- ಭಾರತೀಯ ಸಂವಿಧಾನವು ಪ್ರತಿಯೊಬ್ಬ ಭಾರತೀಯನ ಬದುಕಿಗೆ ಬೆಳಕನ್ನು ನೀಡುವ ದಾರಿದೀಪವಾಗಿದೆ. ನಮ್ಮ ದೇಶದ ಶಕ್ತಿ ಅದರ ವೈವಿಧ್ಯತೆಯಲ್ಲಿದೆ; ಆ ವೈವಿಧ್ಯತೆಯನ್ನು ಒಗ್ಗೂಡಿಸುವ ಶಕ್ತಿ ನಮ್ಮ ಸಂವಿಧಾನದಲ್ಲಿದೆ. ಸಂವಿಧಾನವನ್ನು ಕೇವಲ ಪುಸ್ತಕದಲ್ಲಿ ಓದುವುದಕ್ಕೆ ಸೀಮಿತಗೊಳಿಸದೆ, ಅದರ ಮೌಲ್ಯಗಳನ್ನು ನಮ್ಮ ನಡವಳಿಕೆಯಲ್ಲಿ ಅಳವಡಿಸಿಕೊಳ್ಳಬೇಕು. ಜಾತಿ, ಧರ್ಮ, ಭಾಷೆ, ಪ್ರದೇಶಗಳ ಭೇದಭಾವವನ್ನು ಮರೆತು ಮಾನವೀಯತೆ ಮತ್ತು ಸಹೋದರತ್ವದಿಂದ ಬದುಕಿದಾಗ ಮಾತ್ರ ಸಂವಿಧಾನದ ಆಶಯಗಳು ಸಾರ್ಥಕವಾಗುತ್ತವೆ. ಸಂವಿಧಾನ ಉಳಿದರೆ ಪ್ರಜಾಪ್ರಭುತ್ವ ಉಳಿಯುತ್ತದೆ. ಪ್ರಜಾಪ್ರಭುತ್ವ ಉಳಿದರೆ ದೇಶದ ಸ್ವಾತಂತ್ರ್ಯ ಮತ್ತು ಸಮಾನತೆ ಉಳಿಯುತ್ತದೆ. ಬನ್ನಿ, ಸಂವಿಧಾನದ ಆಶಯಗಳನ್ನು ಗೌರವಿಸೋಣ, ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನೂ ಪಾಲಿಸೋಣ, ಬಲಿಷ್ಠ ಮತ್ತು ಸಮಾನತೆಯ ಭಾರತವನ್ನು ನಿರ್ಮಿಸೋಣ.
○○○○○○○○○○○○
ಎನ್.ಎನ್.ಕಬ್ಬೂರ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ.
ಶಿಕ್ಷಕರು ಮತ್ತು ಬರಹಗಾರರು.
mutturaj.kabbur@gmail.com
ಸವದತ್ತಿ.
