Rotary Club ಕ್ರೀಡಾ ಸಂಭ್ರಮ–26 ಕ್ರೀಡಾಕೂಟದಲ್ಲಿ ರೋಟರಿ ಕ್ಲಬ್ ರಿವರ್ ಸೈಡ್ ಹಾಗೂ ರೋಟರಿ ರಿವರ್ ಸೈಡ್ ಇನ್ನರ್ ವೀಲ್ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿ ವಲಯ ಮಟ್ಟದ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ.
ರೋಟರಿ ಕ್ಲಬ್ ರಿವರ್ಸೈಡ್ ಅಧ್ಯಕ್ಷರಾದ ರೋ. ರವಿ ಮೂಡುಬಾಗಿಲು ಹಾಗೂ ರೋಟರಿ ರಿವರ್ ಸೈಡ್ ಇನ್ನರ್ ವೀಲ್ ಅಧ್ಯಕ್ಷರಾದ ರೂಪಾ ರವಿ ಅವರ ನೇತೃತ್ವದಲ್ಲಿ ಎರಡೂ ಸಂಸ್ಥೆಗಳ ಸದಸ್ಯರು ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ವಿವಿಧ ಆಟೋಟಗಳಲ್ಲಿ ತಮ್ಮ ಕ್ರೀಡಾ ಪ್ರತಿಭೆ, ಸಂಘಟನಾ ಸಾಮರ್ಥ್ಯ, ಒಗ್ಗಟ್ಟು ಹಾಗೂ ತಂಡದ ಮನೋಭಾವವನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು.
ಎಲ್ಲಾ ಸ್ಪರ್ಧೆಗಳಲ್ಲೂ ಉತ್ತಮ ಪ್ರದರ್ಶನ ನೀಡಿ ರೋಟರಿ ಜಿಲ್ಲೆ 3182 ರ ವಲಯ 10ರ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವುದು ಕ್ಲಬ್ನ ಸದಸ್ಯರಲ್ಲಿ ಸಂಭ್ರಮ ಮತ್ತು ಹೆಮ್ಮೆಯನ್ನು ಮೂಡಿಸಿದೆ.
Rotary Club ಅಮೋಘ ಪ್ರದರ್ಶನ ನೀಡಿ ವಲಯ ಮಟ್ಟದ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ತಂಡವು ಡಿ.12 ರಂದು ಕಾರ್ಕಳದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.
ಈ ಸಾಧನೆಗೆ ಕಾರಣರಾದ ಎರಡೂ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರನ್ನು ರೋಟರಿ ವಲಯದ ಗಣ್ಯರು ಮತ್ತು ಹಿತೈಷಿಗಳು ಅಭಿನಂದಿಸಿದ್ದಾರೆ.
