Tuesday, November 24, 2026
Tuesday, November 24, 2026

ಪವಿತ್ರ ಹದಿನೆಂಟು ಮೆಟ್ಟಿಲು ಪಡಿಪೂಜೆ ,ಭಜನಾ ಕಾರ್ಯಕ್ರಮ ಮೂಲಕ ಆತ್ಮತೃಪ್ತಿ- ಪಿ.ಹರೀಶ್ ಗುರುಸ್ವಾಮಿ

Date:

ಶ್ರೀ ಅಯ್ಯಪ್ಪ ಸ್ವಾಮಿಯ ಶಕ್ತಿ ಪೂಜೆ ಹಾಗೂ ಪವಿತ್ರ ಹದಿನೆಂಟು ಮೆಟ್ಟಿಲು ಪಡಿ ಪೂಜಾ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.

ಶ್ರೀಮತಿ ರಾಜೇಶ್ವರಿ ಹಾಗೂ ಅವರ ಪತಿ ಶ್ರೀ ಬಾಬು ಡಿ. ಮುರುಗೇಶ್ ಅವರ ಮನೆಯಲ್ಲಿ, ಪುತ್ರ ಅನೂಪ್ ಅವರ ಉಪಸ್ಥಿತಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಶಕ್ತಿ ಪೂಜೆ ಹಾಗೂ ಪವಿತ್ರ ಹದಿನೆಂಟು ಮೆಟ್ಟಿಲು ಪಡಿ ಪೂಜಾ ಕಾರ್ಯಕ್ರಮವನ್ನು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ನೆರವೇರಿಸಲಾಯಿತು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪೂಜ್ಯ ಬಿ. ಪೂಸ್ವಾಮಿ ಗುರುಸ್ವಾಮಿ ಹಾಗೂ ಪಿ. ಹರೀಶ್ ಗುರುಸ್ವಾಮಿ ಅವರು ಭಾಗವಹಿಸಿದ್ದರು. ವಿಶೇಷವಾಗಿ ಪಿ. ಹರೀಶ್ ಗುರುಸ್ವಾಮಿ ಅವರು 45 ವರ್ಷಗಳಿಗೂ ಹೆಚ್ಚು ಕಾಲ ಶಬರಿಮಲೆ ಯಾತ್ರೆ ಕೈಗೊಂಡಿದ್ದು, ನೂರಾರು ಶಿಷ್ಯರನ್ನು ಶಬರಿಮಲೆಗೆ ಕರೆದೊಯ್ದು ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿಸಿರುವುದು ವಿಶೇಷವಾಗಿದೆ.

ಅವರ ಶಿಷ್ಯರಾದ ಶಿವಮೂರ್ತಿ ಸೇರಿದಂತೆ ಸಮಸ್ತ ಅಯ್ಯಪ್ಪ ಸ್ವಾಮಿಗಳು ಹಾಗೂ ಭಜನಾ ಮಂಡಳಿಯ ಪ್ರಮುಖರಾದ ಶ್ರೀ ಗಣೇಶ್ ಮತ್ತು ತಂಡದವರು ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿಯ ಪರವಶತೆಯನ್ನು ಹೆಚ್ಚಿಸಿದರು.

ಶಕ್ತಿ ಪೂಜೆ, ಪವಿತ್ರ ಹದಿನೆಂಟು ಮೆಟ್ಟಿಲು ಪಡಿ ಪೂಜೆ ಹಾಗೂ ಭಜನಾ ಕಾರ್ಯಕ್ರಮದ ಮೂಲಕ ಆತ್ಮತೃಪ್ತಿ ಮತ್ತು ಆಧ್ಯಾತ್ಮಿಕ ಆನಂದ ದೊರೆತಿದೆ ಎಂದು ಪಿ. ಹರೀಶ್ ಗುರುಸ್ವಾಮಿ ಸಂತಸ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಯಾವುದೇ ಕಾರಣಕ್ಕೂ ಕ್ಲಷ್ಟರ್ ಕಿಚನ್ ಕೇಂದ್ರ ಸ್ಥಾಪಿಸುವುದಿಲ್ಲ- ಮಧು ಬಂಗಾರಪ್ಪ

Madhu Bangarappa ರಾಜ್ಯ ಅಕ್ಷರದಾಸೋಹ ಬಿಸಿಯೂಟ ತಯಾರಕರ ಯೂನಿಯನ್‌ನ ಗೌರವಾಧ್ಯಕ್ಷ ಎಸ್....

Klive Special Article ಕುಮಾರ ವ್ಯಾಸ ..ನಾನು ಕಂಡಂತೆ ಲೇ: ಪ್ರಸಾದ್ ಶ್ರೀವತ್ಸ, ದಾವಣಗೆರೆ

“ಕುಮಾರ ವ್ಯಾಸನು ಹಾಡಿದನೆಂದರೆಕಲಿಯುಗ ದ್ವಾಪರವಾಗುವುದುಭಾರತ ಕಣ್ಣಲಿ ಕುಣಿವುದು! ಮೈಯಲಿಮಿಂಚಿನ ಹೊಳೆ ತುಳುಕಾಡುವುದು!“ ಕುಮಾರವ್ಯಾಸನ...