ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವು ಈಡಿಗ, ಬಂಧಾರಿ, ಬೆಲ್ಲದ್, ಬಿಲ್ಲವ, ಪೂಜಾರಿ, ದೀವರ, ಹಾಲಕ್ಷತ್ರೀಯ, ದೇಶ ಭಂಡಾರಿ, ದೇವರ, ದೇವರ ಮಕ್ಕಳು/ದೀವರ ಮಕ್ಕಳು, ಈಡಿಗ, ಎಳಿಗ, ಎಳವ, ಗಾಮಲ್ಲ, ಗೌಂಡ್ಲ, ಹಳೇ ಪೈಕ್‌ರು, ಇಲ್ಲಾವನ್, ಕಲಾಲ್, ಮಲಯಾಳಿ ಬಿಲ್ಲವ, ನಾಡರ್, ನಾಮಧಾರಿ, ಥಿಯಾನ್/ ಥಿಯ್ಯ, ಇಳಿಗ, ಗೊಂಡ್ಲ, ತಿಯಾನ್/ಥಯ್ಯಾನ್ ಸಮುದಾಯದ ಜನರ ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಆಸಕ್ತರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಅರಿವು-ಶೈಕ್ಷಣಿಕ ಸಾಲ ಯೋಜನೆ ಹಾಗೂ ಸ್ವಾವಲಂಭಿ ಸಾರಥಿ ಯೋಜನೆಗಳಿಗೆ ಆಸಕ್ತರು ಸೇವಾಸಿಂಧು https://sevaone.karanatak.gov.in ಮುಖಾಂತರ ಗ್ರಾಮ ಒನ್, ಶಿವಮೊಗ್ಗ ಒನ್ ಹಾಗೂ ಕರ್ನಾಟಕ ಒನ್ ಪೋರ್ಟಲ್‌ಗಳಲ್ಲಿ ಡಿ. 13 ರೊಳಗಾಗಿ ಅರ್ಜಿ ಸಲ್ಲಿಸುವುದು.
ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ https://dbcdc.karnataka.gov.in ಅಥವಾ ಜಿಲ್ಲಾ ವ್ಯವಸ್ಥಾಪಕರು ಕಚೇರಿ, ಡಿ. ದೇವರಾಜ ಅರಸು ಭವನ, ಬಾಲರಾಜ್ ಅರಸು ರಸ್ತೆ, ಕೆ.ಇ.ಬಿ. ಸರ್ಕಲ್ ಹತ್ತಿರ, ದೂ.ಸಂ.:08182-229634 ನ್ನು ಸಂಪರ್ಕಿಸಬಹುದೆಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿರುತ್ತಾರೆ.
ಶ್ರೀನಾರಾಯಣಗುರು ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಡಿ ಆನ್ ಲೈನ್ ಅರ್ಜಿ ಆಹ್ವಾನ
Date:
